Untitled Document
Sign Up | Login    
Dynamic website and Portals
  

Related News

ಆಧಾರ್ ಮಾಹಿತಿ ನೀಡದಿದ್ದಲ್ಲಿ ಎಲ್‌ಪಿಜಿ ಸಬ್ಸಿಡಿ ಸ್ಥಗಿತ

ಜೂನ್‌ 30 ರೊಳಗೆ ಆಧಾರ್‌ ಮಾಹಿತಿ ಸಲ್ಲಿಸುವಂತೆ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಈಗಾಗಲೇ ಗಡುವು ನೀಡಿತ್ತು. ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆಯನ್ನೂ ಮಾಡಲಾಗಿತ್ತು. ಅಲ್ಲಿಯವರೆಗೂ ಆಧಾರ್‌ ಮಾಹಿತಿ ನೀಡದಿದ್ದರೆ ಅಂದರೆ ಸೆಪ್ಟಂಬರ್ ಅಂತ್ಯದೊಳಗೆ ಗ್ರಾಹಕರು ಆಧಾರ್...

ಇಂದು ಕರ್ನಾಟಕ ಬಂದ್

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮ, ಕೆಎಸ್ಆರ್ಟಿಸಿ, ಬಿಎಂಟಿಸಿ, ಬೆಂಗಳೂರಿನ ಮಾಲ್, ಆಟೋ, ಟ್ಯಾಕ್ಸಿ...

ಅಮರನಾಥ ಯಾತ್ರೆ ಮತ್ತೆ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗಲಭೆ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಮೂರನೇ ಬಾರಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಹಾಗೂ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಖಾಝಿಗುಂಡ್ ಬಳಿ ಪ್ರತಿಭಟನಕಾರರು ಇಬ್ಬರನ್ನು ಹತ್ಯೆ ಮಾಡಿದ ಪರಿಣಾಮ ಯಾತ್ರೆಯನ್ನು ಪುನಃ ಮೊಟಕುಗೊಳಿಸಲಾಯಿತು. ಹಿಜ್ಬುಲ್ ಮುಜಾಹಿದಿನ್...

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಗಲಭೆ: ಅಮರನಾಥ್ ಯಾತ್ರೆ ಮತ್ತೆ ಸ್ಥಗಿತ

ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯಿಂದಾಗಿ ಉಂಟಾಗಿರುವ ಗಲಭೆ ವಾತಾವರಣ ಇನ್ನೂ ಅಮರನಾಥ್ ಯಾತ್ರೆ ಮತ್ತೊಮ್ಮೆ ಸ್ಥಗಿತಗೊಂಡಿದೆ. ಅನಂತ್ ನಾಗ್ ಜಿಲ್ಲೆಯಲ್ಲಿ ಹೊಸದೊಂದು ಗಲಭೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಎರಡನೇ ಬಾರಿ ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ...

ಉತ್ತರ ಭಾರತದ ಹಲವೆಡೆಗಳಲ್ಲಿ ಮತ್ತೆ ಭೂಕಂಪ

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8ರಷ್ಟು ದಾಖಲಾಗಿದೆ. ದೆಹಲಿ, ಕೋಲ್ಕತಾ, ಗುವಾಹಟಿ, ನೋಯ್ಡಾ, ಡೆಹ್ರಾಡೂನ್, ಅರುಣಾಚಲ ಪ್ರದೇಶ, ಮೆಘಾಲಯ ಹಾಗೂ ಗುರುಗ್ರಾಮ್ ಸೇರಿದಂತೆ ಹಲವು ಕಡೆ...

ಭಾರತ-ಪಾಕ್ ನಡುವಿನ ಶಾಂತಿ ಮಾತುಕತೆ ಸ್ಥಗಿತ: ಅಬ್ದುಲ್‌ ಬಾಸಿತ್

ಪಠಾಣ್‌ ಕೋಟ್‌ ದಾಳಿ ಕುರಿತು ಪರಿಶೀಲನೆ ನಡೆಸಲು ತನ್ನ ತನಿಖಾ ತಂಡವನ್ನು ಭಾರತಕ್ಕೆ ಕಳುಹಿಸಿದ್ದ ಪಾಕ್‌ ಈಗ ಭಾರತದೊಂದಿಗಿನ ಶಾಂತಿ ಮಾತುಕತೆಯನ್ನೇ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. ಅಲ್ಲದೆ, ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವ ಬಗ್ಗೆ ಒಪ್ಪಂದವೇನೂ ಆಗಿಲ್ಲ ಎಂದು ಹೇಳಿದೆ. ಈ ಮೂಲಕ...

ಸಾರಿಗೆ ಮುಷ್ಕರ: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015'ನ್ನು ವಿರೋಧಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಮತ್ತು ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಸಾರಿಗೆ ವಾಹನಗಳ...

ನೇಪಾಳ ಭೂಕಂಪ: ವಾಯುಪಡೆಯಿಂದ 500ಕ್ಕೂ ಹೆಚ್ಚು ಭಾರತೀಯರ ರಕ್ಷಣೆ

ಭೀಕರ ಭೂಪಂಕಕ್ಕೆ ನಲುಗಿ ಹೋಗಿರುವ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಸಿಲುಕಿಕೊಂಡಿದ್ದ 68 ಮಂದಿ ಕನ್ನಡಿಗರೂ ಸೇರಿದಂತೆ 500ಕ್ಕೂ ಹೆಚ್ಚು ಭಾರತೀಯನ್ನು ರಕ್ಷಿಸಿ ಭಾರತಕ್ಕೆ ವಾಪಾಸು ಕರೆತರುವಲ್ಲಿ ಭಾರತೀಯ ವಾಯುಪಡೆ ಯಶಸ್ವಿವಾಗಿವೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಿಳಿದಿರುವ ವಾಯುಪಡೆಯ 4 ವಿಮಾನಗಳಲ್ಲಿ ಶನಿವಾರ...

ಎರಡು ದಿನ ನಗರದ ಬಹುತೇಕ ಕಡೆ ನೀರಿಲ್ಲ

ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾವೇರಿ 1,2 ಹಾಗೂ 3ನೇ ಹಂತದ ಯೋಜನೆಗಳ ನಿರ್ವಹಣೆಗಾಗಿ ಜಲಮಂಡಳಿಯು ನೀರಿನ ಪೂರೈಕೆ ಸ್ಥಗಿತಗೊಳಿಸಲಿದ್ದು, ಪರಿಣಾಮ ಏಪ್ರಿಲ್‌ 9 ಹಾಗೂ 10ರಂದು ನಗರದ ಬಹುತೇಕ ಕಡೆಗಳಲ್ಲಿ ನೀರು ಪೂರೈಕೆ ಇರುವುದಿಲ್ಲ. ಏಪ್ರಿಲ್‌ 9ರಂದು ಜಲಮಂಡಳಿ ಕಾವೇರಿ ವಿಭಾಗದಿಂದ...

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಂದ್: ಬಸ್ ಸಂಚಾರ ಸ್ಥಗಿತ

ಕಾವೇರಿ ನದಿಗೆ ಅಡ್ಡಲಾಗಿ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟೆ ವಿರೋಧಿಸಿ ರೈತಪರ ಸಂಘಟನೆಗಳು ತಮಿಳುನಾಡು ಬಂದ್‌ ಗೆ ಕರೆ ಕೊಟ್ಟಿವೆ. ಮೇಕೇದಾಟು ಯೋಜನೆ ವಿರೋಧಿಸಿ ಕರೆನೀಡಲಾಗಿರುವ ತಮಿಳುನಾಡು ಬಂದ್ ಹಿನ್ನಲೆಯಲ್ಲಿ ಉಭಯ ರಾಜ್ಯಗಳ ನಡುವಿನ...

ಶ್ರೀಮಂತರಿಗೆ ಅಡುಗೆ ಅನಿಲ ಸಬ್ಸಿಡಿ ಸ್ಥಗಿತ

ಶ್ರೀಮಂತರಿಗೆ ಸಿಗುವ ಅಡುಗೆ ಅನಿಲ ಸಬ್ಸಿಡಿಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಸರ್ಕಾರದ ಬೊಕ್ಕಸ ಭರ್ತಿಮಾಡಲು ಮುಂದಾಗಿದೆ. ಸಬ್ಸಿಡಿ ಪಡೆಯಲು ಇರುವ ಮಾನದಂಡವನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡುವ ಸಾಧ್ಯತೆ ಇದ್ದು, ಫೆ.28ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ವಿತ್ತ...

ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತ: ಪ್ರಯಾಣಿಕರ ಪರದಾಟ

ಡಿ.17ರ ಬೆಳಿಗ್ಗೆಯಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿದ್ದು ವಿಮಾನಕ್ಕಾಗಿ ಕಾದುಕುಳಿತ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿರುವುದಕ್ಕೆ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಕಾರಣ ಎಂದು ತಿಳಿದುಬಂದಿದೆ. ಇದರಿಂದಾಗಿ ಸ್ಪೈಸ್...

ಸರ್ಕಾರದಿಂದ ಮಾಧ್ಯಮದ ಮೇಲೆ ದೌರ್ಜನ್ಯ: ಸಿ.ಎಂ ಭೇಟಿ ಮಾಡಲು ಮುಂದಾದ ಸಂಪಾದಕರು

ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್‌ಗಳ ಪ್ರಸಾರವನ್ನು ಕಳೆದ 17 ಗಂಟೆಗಳಿಂದ ಸ್ಧಗಿತಗೊಳಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾರ್ಯನಿರತ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ....

ಹ್ಯೂಂಡೈ ಕಂಪನಿಯ ಸ್ಯಾಂಟ್ರೋ ಕಾರು ಉತ್ಪಾದನೆ ತಿಂಗಳಾಂತ್ಯಕ್ಕೆ ಸ್ಥಗಿತ

ಕಾರು ಕಂಪನಿಗಳ ದಿಗ್ಗಜ ಕೊರಿಯಾ ಮೂಲದ ಹ್ಯುಂಡೈ ಕಂಪನಿಯ ತನ್ನ ಪ್ರಸಿದ್ಧ ಕಾರುಗಳಲ್ಲಿ ಒಂದಾದ ಸ್ಯಾಂಟ್ರೊ ಕಾರಿನ ಉತ್ಪಾದನೆಯನ್ನು ಶೀಘ್ರವೇ ಸ್ಥಗಿತಗೊಳಿಸಲಿದೆ. ಕಂಪನಿಯ ಅತಿ ಹೆಚ್ಚು ಯಶಸ್ವಿ ಕಾರು ಎನಿಸಿದ್ದ ಸ್ಯಾಂಟ್ರೋ ನವೆಂಬರ್ ತಿಂಗಳ ಕೊನೆಯಲ್ಲಿ ತೆರೆ ಮರೆಗೆ ಸರಿಯಲಿರುವುದು ಖಚಿತವಾಗಿದೆ....

ಚಂದ್ರಬಾಬು ನಾಯ್ಡು ದುರಹಂಕಾರದಿಂದ ವರ್ತಿಸುತ್ತಿದ್ದಾರೆ: ಕೆಸಿಆರ್

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದ್ದಾರೆ. ಹೈದ್ರಾಬಾದ್ ನಲ್ಲಿ ನಡೆದ ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಆವರು, ಶ್ರೀಶೈಲಂ ಜಲ ವಿದ್ಯುತ್ ಯೋಜನೆ ಸ್ಥಗಿತ ಹಿನ್ನಲೆಯಲ್ಲಿ ಚಂದ್ರಬಾಬು ನಾಯ್ಡು ಅವರ ವಿರುದ್ಧ...

ಆಂಧ್ರಪ್ರದೇಶ, ಒಡಿಶಾದಲ್ಲಿ ಹುಡ್ ಹುಡ್ ಚಂಡಮಾರುತದ ಅಬ್ಬರ

ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯಲ್ಲಿ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದ್ದು, ಈಗಾಗಲೇ ತನ್ನ ಅವಾಂತರ ಆರಂಭಿಸಿದೆ. ಉಭಯ ರಾಜ್ಯಗಳಲ್ಲೂ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದೆ. ಆಂಧ್ರದ ವಿಶಾಖಪಟ್ಟಂ ಗೆ ಮಧ್ಯಾಹ್ನದ ಹೊತ್ತಿಗೆ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ಆಂಧ್ರದಿಂದ 70...

ಲೋಡ್ ಶೆಡ್ಡಿಂಗ್ ಜಾರಿಗೆ ನಿರ್ಧಾರ: ಡಿ.ಕೆ.ಶಿವಕುಮಾರ್

ರಾಜ್ಯದ ಜನೆತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದೆ. ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಈಗಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಗೆ ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಶೇ.25ರಷ್ಟು ವಿದ್ಯುತ್...

ಆಂಧ್ರಕ್ಕೆ ಅಪ್ಪಳಿಸಲಿದೆ ಹುಡ್ ಹುಡ್ ಚಂಡಮಾರುತ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹುಡ್ ಹುಡ್ ಚಂಡಮಾರುತ ದೇಶದ ಪೂರ್ವ ಕರಾವಳಿಗೆ ಹತ್ತಿರವಾಗುತ್ತಿದ್ದು, ಆಂದ್ರಪ್ರದೇಶದ ಕರಾವಳಿ ಮೂಲಕ ಹಾದುಹೋಗಲಿದೆ. ಆಂಧ್ರದ ವಿಶಾಖಪಟ್ಟಣಂ ಸಮೀಪದ ಕರಾವಳಿ ಮೇಲೆ ಹುಡ್ ಹುಡ್ ಚಂಡಮಾರುತ ತೀವ್ರ ಸ್ವರೂಪದಲ್ಲಿ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.12ರ...

ಮಂಡೂರಿನಲ್ಲಿ ಡಿಸೆಂಬರ್ ಮುನ್ನವೇ ಕಸ ವಿಲೇವಾರಿ ಸ್ಥಗಿತ

ರಾಜ್ಯದ ರಾಜಧಾನಿಯ ಕಸವನ್ನು ಮಂಡೂರಿನಲ್ಲಿ ವಿಲೇವಾರಿ ಮಾಡುವುದನ್ನು ಡಿಸೆಂಬರ್ ಮುನ್ನವೇ ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳೊಂದಿಗೆ ನಗರದ ಕಸ ವಿಲೇವಾರಿ ಕ್ರಮಗಳ ಕುರಿತಂತೆ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗ್ರಾಮಸ್ಥರಿಗೆ ನೀಡಿದ ವಾಗ್ದಾನದಂತೆ ಮಾತ್ರವಲ್ಲದೆ, ನಿಗದಿಪಡಿಸಿದ...

ಮೆಟ್ರೋ ಸಂಚಾರ ಸ್ಥಗಿತ

ಸೆ.21ರಿಂದ ಯಶವಂತಪುರ-ಪೀಣ್ಯ ಕೈಗಾರಿಕಾ ಪ್ರದೇಶಗಳವರೆಗೆ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಪಿಣ್ಯ ಕೈಗಾರಿಕಾ ಪ್ರದೇಶ ಹಾಗೂ ಜಾಲಹಳ್ಳಿ ನಿಲ್ದಾಣಗಳ ನಡುವೆ ವಿದ್ಯುತ್ ಸಂಪರ್ಕ ಜಾಲ ಅಳವಡಿಕೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೆ.21ರಿಂದ ಸೆ.25ರವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಮಂತ್ರಿ ಸ್ಕ್ವೇರ್ ಬಳಿಯ...

ಮುಷ್ಕರ ಹಿನ್ನಲೆ: ಆ.30ರಿಂದ ನಂದಿನಿ ಹಾಲು ಸ್ಥಗಿತ

ಆ.30ರಿಂದ ನಂದಿನಿ ಹಾಲು ಸರಬರಾಜು ಸ್ಥಗಿತಗೊಳ್ಳಲಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಂದಿನಿ ಹಾಲು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿರುವ ಹಿನ್ನಲೆಯಲ್ಲಿ ನಂದಿನಿ ಹಾಲು ಸರಬರಾಜು ಸ್ಥಗಿತಗೊಳ್ಳಲಿದೆ. ಸಂಘದ ಸದಸ್ಯರು ಈ ಹಿಂದೆ ಹಲವುಬಾರಿ ತಮ್ಮ ಬೇಡಿಕೆಗಳನ್ನು ಕರ್ನಾಟಕ...

ತೆಲಂಗಾಣ ಮನೆ ಮನೆ ಸಮೀಕ್ಷೆ: ಅಡ್ಡಿಪಡಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಆ.19ರಂದು ತೆಲಂಗಾಣ ಸರ್ಕಾರ ಮನೆ ಮನೆ ಸಮೀಕ್ಷೆ ನಡೆಸಲಿದೆ. ಈ ಹಿನ್ನಲೆಯಲ್ಲಿ ಇಡೀ ರಾಜ್ಯದಲ್ಲಿ ಬಂದ್ ಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರವೇ ಸಾರ್ವತ್ರಿಕ ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಖಾಸಗಿ ಕಂಪನಿಗಳು ಕೂಡ ಮುಚ್ಚಲಿವೆ. ಮನೆ ಮನೆ ಸಮೀಕ್ಷೆಗೆ ವಿರೋಧ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited