Untitled Document
Sign Up | Login    
Dynamic website and Portals
  

Related News

ಕಾಶ್ಮೀರದಲ್ಲಿ ಲಾರಿ ಚಾಲಕರಿಗೆ ಭಾರತ್ ಮಾತಾ ಕೀ ಜೈ ಘೋಷಣೆಗೆ ಶಿವ ಸೇನೆ ಒತ್ತಾಯ

ಕಾಶ್ಮೀರ ಮುಸಲ್ಮಾನರು ಅಮರನಾಥ್ ಯಾತ್ರಿಕರಿಗೆ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ, ಶಿವ ಸೇನಾ ಕಾರ್ಯಕರ್ತರು, ಜಮ್ಮು ಮತ್ತು ಕಾಶ್ಮೀರ ಕಡೆಗೆ ಹೋಗುತ್ತಿದ್ದ ಲಾರಿಗಳನ್ನು ತಡೆದು ಕಾಶ್ಮೀರಿ ಮುಸ್ಲೀಂ ಚಾಲಕರಿಗೆ ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಹೇಳುವಂತೆ ಒತ್ತಾಯಿಸುತ್ತಿದ್ದಾರೆ. ಪಂಜಾಬ್ ಘಟಕದ ಶಿವ ಸೇನಾ...

ಜುಲೈ 5 ರಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ

ಜುಲೈ 5ರಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ರಾಷ್ಟ್ರಗಳ ಭೇಟಿಯನ್ನು ಆರಂಭಿಸಲಿದ್ದು ಅದಕ್ಕೆ ಮುನ್ನ ಅಂದರೆ ಜುಲೈ 5ರಂದು ಬೆಳಿಗ್ಗೆ 11ಗಂಟೆಗೆ...

ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಹತ್ಯೆಗೆ ಲಷ್ಕರ್ ಸಂಚು ರೂಪಿಸಿತ್ತುಃ ಡೇವಿಡ್ ಹೆಡ್ಲಿ

ಪಾಕ್‌ ಮೂಲದ ಉಗ್ರ ಸಂಘಟನೆ ಲಷ್ಕರ ಎ ತೊಯ್ಯಬಾ ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಹತ್ಯೆಗೈಯುವ ಪ್ರಯತ್ನ ಮಾಡಿತ್ತು, ಆದರೆ ಆ ದುಷ್ಕರ್ಮಿಯನ್ನು ಬಂಧಿಸಲಾಯಿತು ಎಂದು ಉಗ್ರ ಡೇವಿಡ್ ಹೆಡ್ಲಿ ಗುರುವಾರ ತಿಳಿಸಿದ್ದಾನೆ. ಠಾಕ್ರೆ ಹತ್ಯೆ ಯತ್ನದ ಬಗ್ಗೆ ನನಗೆ ನೇರ...

ಕದನ ವಿರಾಮ ಉಲ್ಲಂಘಿಸಿ ಪಾಕ್‌ ಗೆ ಪಾಠ ಕಲಿಸಬೇಕು: ಶಿವಸೇನೆ

ಜಮ್ಮು-ಕಾಶ್ಮೀರ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎನ್‌.ಡಿ.ಎ ಮಿತ್ರಪಕ್ಷ ಶಿವಸೇನೆ, ಅವರಿಗೆ ತಕ್ಕ ಪಾಠ ಕಲಿಸಲು ಭಾರತವೂ ಕದನ ವಿರಾಮ ಉಲ್ಲಂಘಿಸಿ ಆ ದೇಶದೊಳಕ್ಕೆ ಪ್ರವೇಶಿಸಬೇಕು ಎಂದು ಹೇಳಿದೆ. 2013ರಲ್ಲಿ ಪಾಕ್ ಸೈನಿಕರು...

ನೂರು ರಾಹುಲ್ ಗಾಂಧಿಗಳೂ ಪ್ರಧಾನಿ ಮೋದಿಗೆ ಸಮನಲ್ಲ: ಶಿವಸೇನೆ

ನೂರು ಜನ ರಾಹುಲ್ ಗಾಂಧಿಗಳೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಲಾರರು ಎಂದು ಶಿವಸೇನೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಟೀಕಾಪ್ರಹಾರ ನಡೆಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿಯವರ ಛರಿಸ್ಮಾದ ಮುಂದೆ ರಾಹುಲ್ ಗಾಂಧಿ ಏನೇನೂ...

ಮಂಗೋಲಿಯಾಕ್ಕೆ ಮೋದಿ ಆರ್ಥಿಕ ನೆರವು: ಶಿವಸೇನೆ ಕಿಡಿ

ಪ್ರಧಾನಿ ನರೇಂದ್ರ ಮೋದಿ ದೇಶದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಮಂಗೋಲಿಯಾಕ್ಕೆ 1 ಬಿಲಿಯನ್ ಡಾಲರ್ ನೆರವು ಘೋಷಿದ್ದಾರೆ ಎಂದು ಮಿತ್ರಪಕ್ಷವಾದ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿ ವಿದೇಶ ಪ್ರವಾಸದ ಬಗ್ಗೆ ನೇರ ವಾಗ್ದಾಳಿ ನಡೆಸಿದೆ. ಹಾಗಾಗಿ ಮಹಾರಾಷ್ಟ್ರಕ್ಕಿಂತ ಮಂಗೋಲಿಯಾ ಅದೃಷ್ಟಶಾಲಿ...

ಚೀನಾ ಎದುರಿಗೆ ಅಪ್ಪಿಕೊಳ್ಳುತ್ತೆ, ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತೆ:ಶಿವಸೇನೆ

ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿರುವುದಕ್ಕೆ ಎನ್.ಡಿ.ಎ ಮೈತ್ರಿಕೂಟದ ಶಿವಸೇನೆ ಅಸಮಾಧಾನವ್ಯಕ್ತಪಡಿಸಿದ್ದು, ಚೀನಾ ಎದುರಿಗೆ ಅಪ್ಪಿಕೊಳ್ಳುತ್ತೆ, ಆದರೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತೆ. ಇದು ಚೀನಾದ ನೀತಿ ಎಂದು ಕಿಡಿಕಾರಿದೆ. ಚೀನಾದ ನಡವಳಿಕೆ ಈಗಾಗಲೇ ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ...

ರಾಹುಲ್ ಗಾಂಧಿಯ ಕಿಸಾನ್ ಪಾದಯಾತ್ರೆ ವಿರುದ್ಧ ಶಿವಸೇನೆ ವಾಗ್ದಾಳಿ

'ಕಿಸಾನ್ ಪಾದಯಾತ್ರೆ' ಹಮ್ಮಿಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಅಧಿಕಾರ ಕಳೆದುಕೊಂಡ ನಂತರ ರೈತರ ಪರ ಪಾದಯಾತ್ರೆ ನಡೆಸುವ ಬದಲು ಅಧಿಕಾರದಲ್ಲಿರಬೇಕಾದರೆ, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು ಎಂದು ರಾಹುಲ್ ಗಾಂಧಿಗೆ ಶಿವಸೇನೆ ಹೇಳಿದೆ. ಇದೇ ವೇಳೆ...

ಮಹಾರಾಷ್ಟ್ರದಲ್ಲಿ ಪಾಕ್ ಧ್ವಜ ಹಾರಿಸಲು ಎಐಎಂಐಎಂ ಸಂಚು: ಶಿವಸೇನೆ

'ಕಾಶ್ಮೀರ'ದಲ್ಲಿ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜ ಹಾರಿಸಿದ್ದ ಬೆನ್ನಲ್ಲೇ ಓವೈಸಿ ಸಹೋದರರ ವಿರುದ್ಧ ಶಿವಸೇನೆ ಗಂಭೀರ ಆರೋಪ ಮಾಡಿದೆ. ಮಹಾರಾಷ್ಟ್ರದಲ್ಲೂ ಓವೈಸಿ ಸಹೋದರರು, ಪಾಕಿಸ್ತಾನದ ಧ್ವಜಾರೋಹಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ. ಶಿವಸೇನೆ ಮುಖವಾಣಿ, ಸಾಮ್ನಾದಲ್ಲಿ ಓವೈಸಿ ಸಹೋದರರ ವಿರುದ್ಧ ವಾಗ್ದಾಳಿ...

ಮುಸ್ಲಿಂ, ಕ್ರೈಸ್ತರಿಗೆ ಕುಟುಂಬ ಯೋಜನೆ ಕಡ್ಡಾಯ ಮಾಡಿ: ಶಿವಸೇನೆ

ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಹಿಂದೂ ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಹಾಗಾಗಿ ಅಲ್ಪಸಂಖ್ಯಾತರಿಗೆ ಕುಟುಂಬ ಯೋಜನೆ ಪದ್ಧತಿ ಅಗತ್ಯವಾಗಿ ಬೇಕಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ. ಏತನ್ಮಧ್ಯೆ ಸಾಧ್ವಿ ದೇವಾ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ರಿಗೆ ಬಲವಂತವಾಗಿ...

ಬಿಜೆಪಿ ನಕಲಿ ರಾಮಭಕ್ತರ ಪಕ್ಷ: ಶಿವಸೇನೆ

ಬಿಜೆಪಿ ನಕಲಿ ರಾಮ ಭಕ್ತರ ಪಕ್ಷವಾಗಿದೆ ಎಂದು ಆರೋಪ ಮಾಡಿರುವ ಶಿವಸೇನೆಯು 2017ರಲ್ಲಿ ನಡೆಯವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎಲ್ಲ 403 ಸ್ಥಾನಗಳಿಗೂ ತಾನು ಸ್ಫರ್ಧಿಸುವುದಾಗಿ ಹೇಳಿದೆ. ಕಾನ್ಪುರದ ಕಿದ್ವಾಯಿ ನಗರದಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಸೇನೆಯ ಉತ್ತರ...

ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದು: ಮಹಾ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

'ಮಹಾರಾಷ್ಟ್ರ'ದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದುಗೊಳಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರಿ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತಿದ್ದ ಶೇ.5ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಮುಸ್ಲಿಮ್ ಮೀಸಲಾತಿ ರದ್ದುಗೊಳಿಸಿರುವುದರ...

ಭಾರತದ ಮುಸ್ಲಿಮರಿಗೆ ವಿಶೇಷ ಸ್ಥಾನಮಾನ ಬೇಕಾದರೆ ಪಾಕಿಸ್ತಾನಕ್ಕೆ ತೆರಳಲಿ: ಶಿವಸೇನೆ

ಭಾರತದಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ ವಿಶೇಷ ಸ್ಥಾನಮಾನ ಬೇಕಾದರೆ ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಶಿವಸೇನೆ ಹೇಳಿದೆ. ಭಾರತದಿಂದ ಮುಸ್ಲಿಮರಿಗೇನಾದರೂ ಬೇಕಾದರೆ ಅವರು ಮೊದಲು ಭಾರತವನ್ನು ತಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳಲಿ ಅಂತೆಯೇ ವಂದೇ ಮಾತರಂ ನ ಒಪ್ಪಿಕೊಳ್ಳಲಿ, ಅವರು ತಮ್ಮ...

ನಾಗ್ಪುರದಲ್ಲಿ ಓವೈಸಿ ರ್ಯಾಲಿ ರದ್ದುಗೊಳಿಸಲು ಬಿಜೆಪಿ, ಶಿವಸೇನೆ ಒತ್ತಾಯ

ಫೆ.28ರಂದು ನಾಗ್ಪುರದಲ್ಲಿ ನಡೆಯಲಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ರ್ಯಾಲಿಗೆ ಅನುಮತಿ ನೀಡಬಾರದು ಎಂದು ಬಿಜೆಪಿ ಹಾಗೂ ಶಿವಸೇನೆ ಒತ್ತಾಯಿಸಿವೆ. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆಯಲಿರುವ ಅಸಾವುದ್ದೀನ್ ಓವೈಸಿಯ ಮೊದಲ ರ್ಯಾಲಿ ಇದಾಗಿದ್ದು, ಓವೈಸಿಯ ಪ್ರಥಮ ರ್ಯಾಲಿಗೆ ಬಿಜೆಪಿ, ಶಿವಸೇನೆಯಿಂದ ತೀವ್ರ ವೀರೊಧ...

ತೆರೇಸಾ ಕುರಿತು ಭಾಗವತ್ ಹೇಳಿಕೆಗೆ ಶಿವಸೇನೆ ಸಮರ್ಥನೆ

ನೊಬಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಸೇವೆಯ ಹಿಂದೆ ಮತಾಂತರ ಹುನ್ನಾರವಿತ್ತು ಎಂಬ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ ವಿವಾದಾತ್ಮಕ ಹೇಳಿಕೆಯನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಭಾರತಕ್ಕೆ ಬಂದ ಎಲ್ಲಾ ಮಿಷನರಿಗಳ ಉದ್ದೇಶ ಮತಾಂತರವೇ...

ಮಹಾ ನೂತನ ಸರ್ಕಾರದಿಂದ ಏನು ಬದಲಾವಣೆಯಾಗಿದೆ ತಿಳಿಸಿ: ಶಿವಸೇನೆ

ಮಹಾರಾಷ್ಟ್ರದ ನೂತನ ಸರ್ಕಾರದಿಂದ ಏನು ಬದಲಾವಣೆಯಾಗಿದೆ? ಈ ಬಗ್ಗೆ ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ ಎಂದು ಎನ್ ಡಿಎ ಮೈತ್ರಿಕೂಟದ ಶಿವಸೇನೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತನ್ನದೇ ಮೈತ್ರಿಕೂಟದ ಫಡ್ನವೀಸ್...

ಫೆ.17 ರಂದು ಬಿಜೆಪಿ-ಶಿವಸೇನೆ ಭೇಟಿ

ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳ ಸಂಬಂಧ ಬಿಗಡಾಯಿಸುತ್ತಿದ್ದರೂ ಉಭಯ ಪಕ್ಷಗಳ ಸಮನ್ವಯ ಸಮಿತಿ ಸಭೆ ಫೆಬ್ರವರಿ 17ರಂದು ನಡೆಯಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯದ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಮತ್ತು ಸಹಕಾರಿ ಸಚಿವ...

ಅಸಾವುದ್ದೀನ್ ಒವೈಸಿಗೆ ನಿರ್ಬಂಧ ಹೇರಿದ ಪುಣೆ ಪೊಲೀಸರ ಕ್ರಮ ಸ್ವಾಗತಿಸಿದ ಶಿವಸೇನೆ

'ಮುಸ್ಲಿಂ ಮೀಸಲಾತಿ' ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪುಣೆ ಪೊಲೀಸರು ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌(ಎಂಐಎಂ) ಸಂಘಟನೆ ಮುಖಂಡ ಅಸಾವುದ್ದೀನ್ ಒವೈಸಿಗೆ ನಿರ್ಬಂಧ ಹೇರಿದ್ದಾರೆ. ಪುಣೆ ಪೊಲೀಸರ ಈ ಕ್ರಮವನ್ನು ಶಿವಸೇನೆ ಸ್ವಾಗತಿಸಿದೆ. ಅಸಾವುದ್ದೀನ್ ಒವೈಸಿ ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಹಿನ್ನೆಲೆಯಲ್ಲಿ ಮುಸ್ಲಿಂ...

ದಾವೂದ್ ನನ್ನು ಹಿಡಿಯಲು ಲಾಡನ್ ಹತ್ಯೆ ಮಾದರಿ ಕಾರ್ಯಾಚರಣೆ ನಡೆಸಿ: ಶಿವಸೇನೆ

'ತಾಲೀಬಾನ್' ಉಗ್ರ ಒಸಾಮ ಬಿನ್ ಲಾಡೆನ್ ನನ್ನು ಹತ್ಯೆ ಮಾಡಲು ಅಮೆರಿಕಾ ನಡೆಸಿದ ಕಾರ್ಯಾಚರಣೆ ಮಾದರಿಯಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಸೆರೆ ಹಿಡಿಯಲು ಭಾರತ ಸರ್ಕಾರವೂ ಕಾರ್ಯಾಚರಣೆ ನಡೆಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಪಾಕಿಸ್ತಾನದ ಖ್ಯಾತ ಉದ್ಯಮಿಯ ಪುತ್ರನೊಂದಿಗೆ...

ಶಿವಸೇನೆ ಬಿಜೆಪಿ ಸರ್ಕಾರ ಸೇರಿರುವುದನ್ನು ವಿರೋಧಿಸಿ ಪಿಐಎಲ್

'ಮಹಾರಾಷ್ಟ್ರ'ದಲ್ಲಿ ಬಿಜೆಪಿ ಸರ್ಕಾರದೊಂದಿಗೆ ಶಿವಸೇನೆ ಸೇರ್ಪಡೆಗೊಂಡ ಬೆನ್ನಲ್ಲೇ, ಈ ಬೆಳವಣಿಗೆಯನ್ನು ವಿರೋಧಿಸಿ ಮುಂಬೈ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಪಮತದ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭದಲ್ಲಿ ಶಿವಸೇನೆ ಸರ್ಕಾರದ ವಿರುದ್ಧ ಮತ ಚಲಾಯಿಸಿತ್ತು....

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್ 5ರಂದು ನಡೆಯಲಿದೆ. ಬಿಜೆಪಿ ಹಾಗೂ ಶಿವಸೇನೆ ನಡುವೆ ಇದ್ದ ಬಿಕ್ಕಟ್ಟು ಬಗೆಹರಿದ ಬೆನ್ನಲ್ಲೇ ಫಡ್ನವೀಸ್ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಸಮಾರಂಭವು ಮಹಾರಾಷ್ಟ್ರದ ರಾಜಭವನದಲ್ಲಿ ಸಂಜೆ 4 ಗಂಟೆಗೆ...

ಮಹಾ ಮರು ಮೈತ್ರಿ: ಶಿವಸೇನೆಯ 12 ಶಾಸಕರಿಗೆ ಫಡ್ನವೀಸ್ ಸಂಪುಟದಲ್ಲಿ ಸ್ಥಾನ

'ಮಹಾರಾಷ್ಟ್ರ' ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಪುಟಕ್ಕೆ ಶಿವಸೇನೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು 12 ಶಿವಸೇನೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಿವಸೇನೆ ಬಿಜೆಪಿ ಸಚಿವ ಸಂಪುಟ ಸೇರುವುದರ ಬಗ್ಗೆ ಡಿ.1ರಂದು ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆ ಮುಖಂಡ...

ಬಿಜೆಪಿ ಸರ್ಕಾರ ಸೇರುವುದಕ್ಕೆ ಶಿವಸೇನೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ

'ಮಹಾರಾಷ್ಟ್ರ' ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಶಿವಸೇನೆಯೊಂದಿಗಿನ ಮಾತುಕತೆ ಮುಕ್ತಾಯಗೊಂಡಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಡಿ.1ರಂದು ಮುಂಬೈನಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹಾಗೂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಅಧಿಕಾರ ಹಂಚಿಕೆ ಸಂಬಂಧ...

ಶಿವಸೇನೆ ಮನವೊಲಿಕೆಗೆ ಮುಂದಾದ ಬಿಜೆಪಿ ನಾಯಕರು

'ದೇವೇಂದ್ರ ಫಡ್ನವೀಸ್' ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶಿವಸೇನೆಯನ್ನು ಸೇರಿಸಿಕೊಳ್ಳುವ ಸಂಬಂಧ ಬಿಜೆಪಿ ನಾಯಕರು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ನಾಯಕರಾದ ದೇವೇಂದ್ರ ಪ್ರಧಾನ್, ಚಂದ್ರಕಾಂತ್ ಪಾಟೀಲ್ ಅವರು ಶಿವಸೇನೆ ಯೊಂದಿಗೆ ಮಾತುಕತೆ ನಡೆಸಿ ದೇವೇಂದ್ರ ಫಡ್ನವೀಸ್ ಸರ್ಕಾರವನ್ನು...

ಮಹಾ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ: ಶರದ್ ಪವಾರ್

ಮಹಾರಾಷ್ಟ್ರದ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ತಮ್ಮ ಪಕ್ಷಕ್ಕೆ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಮುಂಬೈ ನಲ್ಲಿ ಕಳೆದ 2 ದಿನಗಳಿಂದ ನಡೆಯುತ್ತಿದ್ದ ಎನ್.ಸಿ.ಪಿ ಪಕ್ಷದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶರ್ದ್ ಪವಾರ್ ಮಧ್ಯಂತರ ಚುನಾವಣೆ ಬಗ್ಗೆ ನೀಡಿದ್ದ ಹೇಳಿಕೆಯನ್ನು...

ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಡುವುದಿಲ್ಲ:ಪವಾರ್ ಗೆ ಶಿವಸೇನೆ ತಿರುಗೇಟು

'ಮಹಾರಾಷ್ಟ್ರ'ದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಎನ್.ಸಿ.ಪಿ ಮುಖಂಡ ಶರದ್ ಪವಾರ್ ನೀಡಿರುವ ಹೇಳಿಕೆಗೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ. ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಎನ್.ಸಿ.ಪಿ ಮುಖಂಡ ಶರದ್ ಪವಾರ್ ಅವರು...

ಶಿವಸೇನೆ-ಬಿಜೆಪಿ ಮರು ಮೈತ್ರಿಗೆ ಮೋಹನ್ ಭಾಗವತ್ ಮಧ್ಯಸ್ಥಿಕೆ

'ಮಹಾರಾಷ್ಟ್ರ' ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿದ್ದ ಶಿವಸೇನೆ, ಮತ್ತೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಶಿವಸೇನೆ ಹಾಗೂ ಬಿಜೆಪಿ ಮೈತ್ರಿಗೆ ಮೋಹನ್ ಭಾಗವತ್ ಸಂಧಾನ ನಡೆಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ ಎಂದು ಹೇಳಲಾಗಿದೆ. ಶಿವಸೇನೆ...

ವಿಶ್ವಾಸ ಮತದಲ್ಲಿ ಬಿಜೆಪಿಗೆ ಎನ್.ಸಿ.ಪಿ ಬೆಂಬಲ: ಪಕ್ಷದ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

'ಮಹಾರಾಷ್ಟ್ರ'ದಲ್ಲಿ, ದೇವೇಂದ್ರ ಫಡ್ನವೀಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತ ಸಾಬೀತು ಪಡಿಸಿರುವ ಬಗ್ಗೆ ಉದ್ಭವಿಸಿರುವ ಅಸಮಾಧಾನ ಮುಂದುವರೆದಿದ್ದು, ಬಿಜೆಪಿಯ ಕೆಲ ಮುಖಂಡರು ಪಕ್ಷದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಶ್ವಾಸ ಮತ ಸಾಬೀತು ಸಂದರ್ಭದಲ್ಲಿ ಭ್ರಷ್ಟಚಾರದಲ್ಲೇ ಮುಳುಗಿದ್ದ...

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಅಗ್ನಿಪರೀಕ್ಷೆ

ಕೆಲ ದಿನಗಳ ಹಿಂದೆ ದೇವೇಂದ್ರ ಫ‌ಡ್ನವೀಸ್‌ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ನ.12 ಅಗ್ನಿಪರೀಕ್ಷೆ ನಡೆಯಲಿದೆ. ಮುಖ್ಯಮಂತ್ರಿ ಫಡ್ನವೀಸ್ ವಿಶ್ವಾಸಮತ ಯಾಚಿಸಬೇಕಿದೆ. ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದ್ದು, ನಾವು ವಿಪಕ್ಷ ಸ್ಥಾನದಲ್ಲಿ ಆಸೀನರಾಗುವುದಾಗಿ ಶಿವಸೇನೆ ಮುಖ್ಯಸ್ಥ...

ಸಂಜೆ 5:30ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಿರುವ ಪ್ರಧಾನಿ ಮೋದಿ

'ಕೇಂದ್ರ ಸಚಿವ ಸಂಪುಟ ವಿಸ್ತರಣೆ'ಯ ನಂತರ ಪ್ರಥಮ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನ.10ರಂದು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಸಂಜೆ 5:30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಸರ್ಕಾರದ ಉನ್ನತ ಮೂಕಗಳು ತಿಳಿಸಿವೆ. ನ.9ರಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು,...

ಮಹಾರಾಷ್ಟ್ರ ವಿಧಾನಸಭಾ ಅಧಿವೇಶನ: ವಿಪಕ್ಷ ಸ್ಥಾನದಲ್ಲಿ ಶಿವಸೇನೆ ಆಸೀನ

ನ.10ರಿಂದ ಆರಂಭವಾಗಿರುವ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಶಿವಸೇನೆ ವಿಪಕ್ಷ ಸ್ಥಾನ ಅಲಂಕರಿಸಿದೆ. ಬೆಳಗ್ಗೆ 11 ಘಂಟೆಗೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೂ ಮೊದಲು, ರಾಜಭವನದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್, ಹಿರಿಯ ಶಾಸಕ ಜೀವ...

ಕೇಂದ್ರ ಸಚಿವರ ಪ್ರಮಾಣ ವಚನ ಸಮಾರಂಭ ಬಹಿಷ್ಕರಿಸಿದ ಶಿವಸೇನೆ

ಕೇಂದ್ರ ಸಚಿವ ಸಂಪುಟದಲ್ಲಿ ಅನಿಲ್ ದೇಸಾಯಿಯವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದೆ. ಶಿವಸೇನೆ ಸಂಸದ ಅನಿಲ್ ದೇಸಾಯಿಯವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡುವಂತೆ ಉದ್ಧವ್ ಠಾಕ್ರೆ ಒತ್ತಾಯಿಸಿದ್ದರು....

ರಾಜೀವ್ ಪ್ರತಾಪ್ ರೂಡಿಗೆ ಸ್ವತಂತ್ರ ಖಾತೆ

ಕೇಂದ್ರ ಎನ್.ಡಿ.ಎ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾರ್ಯಗಳು ಆರಂಭವಾಗಿದ್ದು, ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಅವರಿಗೆ ಸ್ವತಂತ್ರ ಖಾತೆ (ರಾಜ್ಯ ಸಚಿವ) ಸ್ಥಾನ ನೀಡುವುದು ಖಚಿತವಾಗಿದೆ. ರೂಡಿ ಅವರು ಬಿಹಾರದ ಸರನ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಕೇಂದ್ರದಲ್ಲಿ...

ಕೇಂದ್ರ ಸಂಪುಟದಲ್ಲಿ ಶಿವಸೇನೆಗೆ ಎರಡು ಸ್ಥಾನ

ನ.9ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಮಿತ್ರಪಕ್ಷ ಶಿವಸೇನೆಗೆ ಎರಡು ಸ್ಥಾನಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಪ್ರಧಾನಿ ಮೋದಿ ನಿರ್ಧಾರಕ್ಕೆ ಶಿವಸೇನೆ ತನ್ನ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಆದರೆ ಈ ಎರಡೂ ಸ್ಥಾನಗಳು ಸಂಪುಟ ದರ್ಜೆಯವೇ ಅಥವಾ...

ಜನರನ್ನು ಲಘುವಾಗಿ ಪರಿಗಣಿಸಬೇಡಿ: 'ಮಹಾ'ಬಿಜೆಪಿ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಮತ್ತೆ ಬಿಕ್ಕಟ್ಟು ಉಂಟಾಗಿದೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಗೆ ಶಿವಸೇನೆ ಎಚ್ಚರಿಕೆ ನೀಡಿದ್ದು ರಾಜ್ಯದ ಜನತೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಹೇಳಿದೆ. ಸಾಮ್ನಾ ಸಂಪಾದಕೀಯದ ಮೂಲಕ ಬಿಜೆಪಿ...

ಮಹಾರಾಷ್ಟ್ರದ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪದಗ್ರಹಣ

'ಮಹಾರಾಷ್ಟ್ರ'ದ 27ನೇ ಹಾಗೂ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿ ದೇವೇಂದ್ರ ಗಂಗಾಧರ್ ರಾವ್ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅ.31ರಂದು ಮುಂಬೈನ ಪ್ರಸಿದ್ಧ ವಾಂಖೆಡೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಭವ್ಯ ಕಾರ್ಯಕ್ರಮದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ....

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ: ಶಿವಸೇನೆಯಿಂದ ಮತ್ತೊಂದು ಸುತ್ತಿನ ಸಭೆ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಆಯ್ಕೆಯಾಗುತ್ತಿದ್ದಂತೆಯೇ ಶಿವಸೇನೆ ಸರ್ಕಾರ ರಚನೆಯಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆಂತರಿಕ ಚರ್ಚೆ ಆರಂಭಿಸಿದ್ದು, ಈ ಕುರಿತು ಅ.30ರಂದು ನಿರ್ಧಾರ ಕೈಗೊಳ್ಳಲಿದೆ. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಹಲವು ಸುತ್ತಿನ ಮಾತುಕತೆ ಈಗಾಗಲೇ ನಡೆದಿದೆಯಾದರೂ...

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಲು ಶಿವಸೇನೆ ಸಿದ್ಧ

ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧ ಎಂದಿರುವ ಶಿವಸೇನೆ, ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿರುವ ಉದ್ಧವ್ ಠಾಕ್ರೆ, ಮಹಾರಾಷ್ಟ್ರದಲ್ಲಿನ ಬಿಜೆಪಿ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ...

121ಕ್ಕೆ ಇಳಿದ 'ಮಹಾ' ಬಿಜೆಪಿ ಶಾಸಕರ ಸಂಖ್ಯೆ!

ಇತ್ತೀಚೆಗಷ್ಟೇ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಡ್ಖೇಡ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಗೋವಿಂದ್ ರಾಥೋಡ್ ನಿಧನರಾಗಿದ್ದಾರೆ. ಓರ್ವ ಶಾಸಕನನ್ನು ಕಳೆದುಕೊಂಡಿರುವ ಬಿಜೆಪಿಯ ಸಂಖ್ಯಾಬಲ 121ಕ್ಕೆ ಇಳಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ರಚನೆ ಮಾಡಲಿದ್ದು ಶಾಸಕಾಂಗ ಪಕ್ಷದ ನೂತನ...

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ: ಬಿಜೆಪಿ-ಆರ್.ಎಸ್.ಎಸ್ ನಾಯಕರ ಚರ್ಚೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸಿದ್ದು, ಈ ಸಂಬಂಧ ಬಿಜೆಪಿ ನಾಯಕರು ಅರ್.ಎಸ್.ಎಸ್ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಮಹಾರಾಷ್ಟ್ರ ಚುನಾವಣೆ ವೇಳೆ 25 ವರ್ಷಗಳ ಮೈತ್ರಿ ಕಡಿದುಕೊಂಡು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಹಾಗೂ ಶಿವಸೇನೆ ಮತ್ತೆ...

ಮಹಾ ಸಿ.ಎಂ ರೇಸ್ ನಲ್ಲಿ ಇನ್ನೂ ಚಾಲ್ತಿಯಲ್ಲಿರುವ ಫಡ್ನವೀಸ್ ಹೆಸರು

'ಮಹಾರಾಷ್ಟ್ರ'ದಲ್ಲಿ ಸರ್ಕಾರ ರಚನೆ ಬಗ್ಗೆ ಶಿವಸೇನೆ ಹಾಗೂ ಬಿಜೆಪಿಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಆರಂಭವಾಗುವ ಸೂಚನೆ ದೊರೆತಿದೆ. ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಯುತ್ತಿರುವ ಜೊತೆಜೊತೆಗೇ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಪ್ರಾರಂಭವಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಿ.ಎಂ ಹುದ್ದೆ ರೇಸ್ ನಲ್ಲಿ...

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬ

ಮಹರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಇನ್ನಷ್ಟು ವಿಳಂಬವಾಗಿದೆ. ದೀಪಾವಳಿ ಮುಗಿದ ಬಳಿಕ ಸಿಎಂ ಅಭ್ಯರ್ಥಿ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ದೀಪಾವಳಿ ಹಿನ್ನಲೆಯಲ್ಲಿ ಶಾಸಕರು ತಮ್ಮ ತಮ್ಮ ಊರುಗಳಿಗೆ ತೆರಳಿರುವುದರಿಂದ ಹಬ್ಬದ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ...

ಮಹಾರಾಷ್ಟ್ರದಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್

'ಮಹಾರಾಷ್ಟ್ರ'ದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಜೆಪಿ, ತೆರೆ ಮರೆಯಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸುವ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಬಿಜೆಪಿಗೆ ಎನ್.ಸಿ.ಪಿ, ಶಿವಸೇನೆ ಬೆಂಬಲ ನೀಡಲು ಸಿದ್ಧವಿದ್ದರೂ ಏಕಾಂಗಿಯಾಗಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಹೈಕಮಾಂಡ್...

ಎನ್ ಸಿಪಿ ವಿರುದ್ಧ ಶಿವಸೇನೆ ವಾಗ್ದಾಳಿ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿರುವ ಎನ್ ಸಿಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಮುಂದಾಗಿರುವ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಅವಕಾಶವಾದಿ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಟೀಕಿಸಿದ್ದಾರೆ. ಮಹಾರಾಷ್ಟ್ರದಲ್ಲಿ...

ಮಹಾರಾಷ್ಟ್ರದಲ್ಲಿ ಅತಂತ್ರ ವಿಧಾನಸಭೆ: ಮೈತ್ರಿ ಬಗ್ಗೆ ಇಂದು ನಿರ್ಧಾರ

ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಅತಂತ್ರ ವಿಧಾನಸಭೆ ರಚನೆಯಾಗಿದೆ. ಸರ್ಕಾರ ರಚನೆಗೆ ಬಿಜೆಪಿ, ಶಿವಸೇನೆ ಜತೆ ಮರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅ.20ರಂದು ನಿರ್ಧಾರವಾಗಲಿದೆ. ಸರ್ಕಾರ ರಚನೆಗೆ 23 ಸ್ಥಾನಗಳ ಕೊರತೆ ಎದುರಿಸುತ್ತಿರುವ ಬಿಜೆಪಿ ಶಿವಸೇನೆಯತ್ತ ದೃಷ್ಟಿ ಹರಿಸಿದೆ. ಈ ನಡುವೆ...

ಮಹಾರಾಷ್ಟ್ರ ಫಲಿತಾಂಶ ಜನತೆಗೆ ತೃಪ್ತಿ ತಂದಿದೆಯೇ: ಉದ್ಧವ್ ಪ್ರಶ್ನೆ

ಬಿಜೆಪಿಯಿಂದ ಪ್ರಸ್ತಾವನೆ ಬಂದರೆ ಮಾತ್ರ ಮೈತ್ರಿ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ನಾವು ಸಿಂಹದಂತೆ ಏಕಾಂಗಿಯಾಗಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ. ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿಕೆ ನೀಡಿರುವ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ...

'ಮಹಾ' ಸರ್ಕಾರ ರಚೆನೆ: ಬಿಜೆಪಿಗೆ ಬೆಂಬಲ ನೀಡಲು ಶಿವಸೇನೆ ಒಪ್ಪಿಗೆ?

'ಮಹಾರಾಷ್ಟ್ರ'ದಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಶಿವಸೇನೆ ಒಪ್ಪಿಗೆ ಸೂಚಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರ ರಚನೆ ಸಂಬಂಧ ಬಿಜೆಪಿ ನಾಯಕರು ಶಿವಸೇನೆ ನಾಯಕರೊಂದಿಗೆ ಸಭೆ ನಡೆಸಿದ್ದು ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಉಭಯ ನಾಯಕರೂ ಒಪ್ಪಿಗೆ...

ಮಹರಾಷ್ಟ್ರ-ಹರ್ಯಾಣದಲ್ಲಿ ಮತ ಎಣಿಕೆ ಆರಂಭ: ಬಿಜೆಪಿ ಮುನ್ನಡೆ

ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಬೆಳಿಗ್ಗೆ 8ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನ 11ಗಂಟೆ ವೇಳೆಗೆ ಚಿತ್ರಣ ಹೊರ ಬೀಳಲಿದೆ. ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ...

ಶಿವಸೇನೆ ನಮ್ಮ ರಾಜಕೀಯ ವಿರೋಧಿಯಲ್ಲ: ದೇವೇಂದ್ರ ಫಡ್ನವಿಸ್

ಮಹಾರಾಷ್ಟ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆಯಾದರೂ ಸ್ಪಷ್ಟ ಬಹುತ ಸಿಗದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್, ಶಿವಸೇನೆ ನಮ್ಮ ರಾಜಕೀಯ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಎನ್ ಸಿಪಿ ಪಕ್ಷಗಳ 15 ವರ್ಷಗಳ ದುರಾಡಳಿತಕ್ಕೆ...

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮರು ಮೈತ್ರಿ ಸಾಧ್ಯತೆ

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಮರು ಮೈತ್ರಿ ನಡೆಯುವ ಸಾಧ್ಯತೆಯಿದ್ದು, ಸಂಜೆ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 113 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇನ್ನೂ 45-50 ಸ್ಥಾನಗಳಲ್ಲಿ ಹಿನ್ನಡೆಯಲ್ಲಿದೆ. ಹೀಗಾಗಿ ಸಂಪೂರ್ಣ ಮತ ಎಣಿಕೆ ವೇಳೆ ಬಿಜೆಪಿಗೆ...

ಮಹಾರಾಷ್ಟ್ರ-ಹರ್ಯಾಣದಲ್ಲಿ ಬಿಜೆಪಿ ಜಯಭೇರಿ

ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 123 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಿವಸೇನೆ 62, ಕಾಂಗ್ರೆಸ್ 42, ಎನ್ ಸಿಪಿ 40, ಎಂ ಎನ್ ಎಸ್ 2...

ದೇವೇಂದ್ರ ಫಡ್ನವೀಸ್ ಮುಂದಿನ 'ಮಹಾ' ಸಿ.ಎಂ?

'ಮಹಾರಾಷ್ಟ್ರ' ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನು 24ಗಂಟೆಗಳಷ್ಟೇ ಬಾಕಿ ಇದೆ. ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆಯತ್ತ ಎಲ್ಲರ ಗಮನ ನೆಟ್ಟಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುಮತ ಪಡೆದು ಸರ್ಕಾರ ರಚಿಸಲು ಅರ್ಹತೆ ಪಡೆಯುವ ಏಕೈಕ ಪಕ್ಷವಾಗಿ ಬಿಜೆಪಿ...

ಪ್ರಧಾನಿ ಮೋದಿ ವಿರುದ್ಧ ಶಿವಸೇನೆ ವಾಗ್ದಾಳಿ

ಲೋಕಸಭಾ ಚುನಾವಣೆ ವೇಳೆ ಶಿವಸೇನೆ ಬಿಜೆಪಿಗೆ ಬೆಂಬಲ ನೀಡದಿದ್ದರೆ ನರೇಂದ್ರ ಮೋದಿ ಇರಲಿ, ಅವರ ಅಪ್ಪ ದಾಮೋದರದಾಸ್ ಕೂಡ ಬಹುಮತಗಳಿಸಲು ಸಾಧ್ಯವಿರಲಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ...

ಚುನಾವಣೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಬಹುಮತ

ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ-ಹರ್ಯಾಣ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿಯೇ ಮುಂದಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿಯೂ ಬಿಜೆಪಿಯೇ ಉಭಯ ರಾಜ್ಯಗಳಲ್ಲೂ ಅಧಿಕಾರಕ್ಕೆ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಟೈಮ್ಸ್ ನೌ- ಸಿಓಟರ್, ಚಾಣಕ್ಯ, ಎಬಿಪಿ ನೀಲ್ಸನ್ ಸಂಸ್ಥೆಗಳು...

ಮೋದಿ ಪ್ರಧಾನಿ ಹುದ್ದೆಗೆ ಧಕ್ಕೆ ತರುತ್ತಿದ್ದಾರೆ: ಶರದ್ ಪವಾರ್

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆಯೇ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಮೂಲಕ ನರೇಂದ್ರ ಮೋದಿ, ಪ್ರಧಾನಿ ಹುದ್ದೆಗಿರುವ ಗೌರವ ಹಾಳು ಮಾಡುತ್ತಿದ್ದಾರೆ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಹುದ್ದೆ...

ಪ್ರಧಾನಿಗೆ ದೇಶದ ಭದ್ರತೆಗಿಂತ ಚುನಾವಣಾ ಪ್ರಚಾರವೇ ಹೆಚ್ಚಾಗಿದೆ- ಖರ್ಗೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ದೇಶಗಳು ಭಾರತದ ಮೇಲೆ ನಿರಂತರವಾಗಿ ಅತಿಕ್ರಮಣ ಮಾಡುತ್ತಿದ್ದರೂ ಪ್ರಧಾನಿ ಸುಮ್ಮನಿದ್ದಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ...

ಮಹಾರಾಷ್ಟ್ರದ ಬದಲು ಗಡಿ ಸಮಸ್ಯೆಗಳತ್ತ ಗಮನ ಹರಿಸಿ- ಪ್ರಧಾನಿಗೆ ಶಿವಸೇನೆ ಸಲಹೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಿವಸೇನೆ, ಮೊದಲು ಪಾಕಿಸ್ತಾನದಿಂದ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆ ಬಗ್ಗೆ ಗಮನ ಹರಿಸಿ ನಂತರ ಮಹಾರಾಷ್ಟ್ರದ ಬಗ್ಗೆ ಗಮನ ಹರಿಸಬಹುದು ಎಂದು ಹೇಳಿದೆ. ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ...

ಪ್ರಧಾನಿ ತಮ್ಮ ಕೆಲಸ ಬಿಟ್ಟು ಮಹಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ-ಶಿವಸೇನೆ ಆಕ್ರೋಶ

'ಬಿಜೆಪಿ' ವಿರುದ್ಧ ಶಿವಸೇನೆ ವಾಗ್ದಾಳಿ ಮುಂದುವರೆಸಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಸರಣಿ ಪ್ರಚಾರ ಕೈಗೊಂಡಿರುವುದನ್ನು ಟೀಕಿಸಿರುವ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿನ ಕೆಲಸ ಬಿಟ್ಟು ಮಹಾರಾಷ್ಟ್ರಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದೆ....

ಮೈತ್ರಿ ಮುರಿದಾಗ ಬಾಳ ಠಾಕ್ರೆ ನೆನಪಾಗಲಿಲ್ಲವೇ: ಶಿವಸೇನೆ ಪ್ರಶ್ನೆ

ಬಾಳ ಠಾಕ್ರೆ ಬಗ್ಗೆ ನನಗೆ ಅಪಾರ ಗೌರವವಿದೆ ಹೀಗಾಗಿ ಶಿವಸೇನೆ ವಿರುದ್ಧ ಮಾತನಾಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಾಳ ಠಾಕ್ರೆ ಮೇಲಿನ ವೈಯಕ್ತಿಕ...

ಬಾಳ ಠಾಕ್ರೆ ಮೇಲಿನ ಗೌರವದಿಂದ ಶಿವಸೇನೆ ವಿರುದ್ಧ ಮಾತನಾಡಲ್ಲ: ಮೋದಿ

ಶಿವಸೇನೆ ಸಂಸ್ಥಾಪಕ ಬಾಳ ಠಾಕ್ರೆ ಮೇಲಿನ ಗೌರವದಿಂದಾಗಿ ಶಿವಸೇನೆ ವಿರುದ್ಧ ಮಾತನಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾಂಗ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಶಿವಸೇನೆ ವಿರುದ್ಧ ಯಾಕೆ ಮಾತನಾಡುವುದಿಲ್ಲ...

ಶ್ರೀರಾಮಸೇನೆ ನಿಷೇಧಿಸಿದರೆ ರಕ್ತಪಾತವಾಗುತ್ತದೆ: ಮುತಾಲಿಕ್ ಎಚ್ಚರಿಕೆ

ಶ್ರೀರಾಮಸೇನೆ ಕಾನೂನು ಬದ್ಧ ಸಂಘಟನೆ, ನಿಷೇಧ ಮಾಡಿದರೆ ರಕ್ತಪಾತ ನಡೆಯುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆ ನಿಷೇಧ ಮಾಡಿದರೆ ರಕ್ತಪಾತ ನಡೆಯುತ್ತದೆ. ಇದಕ್ಕೆ ನಾನು ಹೊಣೆಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊಣೆಯೆಂದು ಗುಡುಗಿದರು. ನಾನು ಎಂದಿಗೂ ಭಾಷೆ,...

ಬಿಜೆಪಿ-ಶಿವಸೇನೆ ಮೈತ್ರಿ ಮುಂದುವರಿದರೆ ಸಂತೋಷ: ಅಡ್ವಾಣಿ

ಬಿಜೆಪಿ-ಶಿವಸೇನೆ ನಡುವಿನ 25 ವರ್ಷಗಳ ಸುದೀರ್ಘ ಮೈತ್ರಿ ಮುರಿದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಉಭಯ ಪಕ್ಷಗಳ ಮೈತ್ರಿ ಮುಂದುವರಿದರೆ ಸಂತೋಷ ಎಂದು ತಿಳಿಸಿದ್ದಾರೆ. ಅಹಮದಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯೊಂದಿಗಿನ ಬಿಜೆಪಿ ಮೈತ್ರಿ ಸುದೀರ್ಘವಾದದ್ದು. ಅಂತಹ...

ಬಿಜೆಪಿ-ಶಿವಸೇನೆ ಮೈತ್ರಿ ಮುರಿಯಲು ಎನ್ ಸಿಪಿ ಕಾರಣ: ರಾಜ್ ಠಾಕ್ರೆ

ಬಿಜೆಪಿ-ಶಿವಸೇನೆ ನಡುವಣ ಸುದೀರ್ಘ 25 ವರ್ಷಗಳ ಮೈತ್ರಿ ಮುರಿಯಲು ಎನ್ ಸಿಪಿ ಮುಖಂಡ ಶರದ್ ಪವಾರ್ ಕಾರಣ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ. ಪ್ಪಶ್ಚಿಮ ಮುಂಬೈನಲ್ಲಿ ಮಾತನಾಡಿದ ಅವರು, ಶಿವಸೇನೆಯೊಂದಿಗಿನ ಮೈತ್ರಿ ಮುರಿದರೆ ಎನ್...

ಅಪ್ರಬುದ್ಧ ಎಂಬ ಹೇಳಿಕೆ ನೀಡಿದ ಬಿಜೆಪಿಗೆ ತಿರುಗೇಟು ನೀಡಿದ ಆದಿತ್ಯ ಠಾಕ್ರೆ

'ಮಹಾರಾಷ್ಟ್ರ'ದಲ್ಲಿ ಬಿಜೆಪಿ-ಶಿವಸೇನೆ ನಡುವಿನ 25 ವರ್ಷಗಳ ಸುದೀರ್ಘ ಮೈತ್ರಿ ಮುರಿದುಬಿದ್ದಿರುವುದಕ್ಕೆ ಶಿವಸೇನೆ ಯುವ ಮುಖಂಡ ಆದಿತ್ಯ ಠಾಕ್ರೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಶಿವಸೇನಾ ಯುವ ನಾಯಕ, 25ವರ್ಷಗಳ ಹಳೆಯ ಮೈತ್ರಿ ಮುರಿದುಬೀಳುತ್ತದೆ ಎಂದು...

'ಮಹಾ' ಚುನಾವಣೋತ್ತರ ಮೈತ್ರಿ ಬಗ್ಗೆ ಸುಳಿವು ನೀಡಿದ ಕೇಂದ್ರ ಸಚಿವ ಕಲ್ ರಾಜ್ ಮಿಶ್ರಾ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಗ್ಗೆ ಕೇಂದ್ರ ಸಚಿವ ಕಲ್ ರಾಜ್ ಮಿಶ್ರಾ ಪ್ರತಿಕ್ರಿಯಿಸಿದ್ದು ಮಹಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ. ಆದರೂ ಶಿವಸೇನೆಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ...

ಮೋದಿ ಸಚಿವ ಸಂಪುಟ ತೊರೆಯುವುದಿಲ್ಲ- ಶಿವಸೇನೆ ಮುಖಂಡ ಅನಂತ್ ಗೀತೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧಿಸಿದಂತೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಂಪುಟ ತೊರೆಯುವುದಿಲ್ಲ ಎಂದು ಶಿವಸೇನೆ ಮುಖಂಡ, ಕೇಂದ್ರ ಸಚಿವ ಅನಂತ್ ಗೀತೆ ಸ್ಪಷ್ಟಪಡಿಸಿದ್ದಾರೆ. ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯವಿರಬಹುದು ಆದರೆ ಎಂದಿಗೂ ಶಿವಸೇನೆ...

ಕೇಂದ್ರ ಸಚಿವ ಅನಂತ ಗೀತೆ ರಾಜೀನಾಮೆಗೆ ನಿರ್ಧಾರ

ಬಿಜೆಪಿ ಜತೆಗಿನ 25 ವರ್ಷಗಳ ಮೈತ್ರಿ ಮುರಿದುಬಿದ್ದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್.ಡಿ.ಎ ಕೂಟದಿಂದ ನಿರ್ಗಮಿಸಲು ಶಿವಸೇನೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಶಿವಸೇನೆಯ ಏಕೈಕ ಸಂಸದ ಅನಂತ ಗೀತೆ ಮಂತ್ರಿ ಸ್ಥಾನಕ್ಕೆ...

ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮಹಾರಾಷ್ಟ್ರದಲ್ಲಿ 25 ವರ್ಷಗಳ ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಅಂತ್ಯಗೊಂಡ ಬೆನ್ನಲ್ಲೇ ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕರು ಮಹಾರಾಷ್ಟ್ರದ ವೈರಿಗಳು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಬಿಜೆಪಿ-ಶಿವಸೇನೆಯ ಸುದೀರ್ಘ ಮೈತ್ರಿ ಮುಂದುವರೆಯಬೇಕು ಎಂಬುದು ಮೈತ್ರಿಕೂಟದ ಇತರ...

ಬಿಜೆಪಿ-ಶಿವಸೇನೆ ಮಹಾ ಮೈತ್ರಿ ಅಂತ್ಯ

ಮಹಾರಾಷ್ಟ್ರದಲ್ಲಿ ಕಳೆದ 25ವರ್ಷಗಳಿಂದ ಅಭಾದಿತವಾಗಿ ಮುಂದುವರೆದುಕೊಂಡು ಬಂದಿದ್ದ ಬಿಜೆಪಿ-ಶಿವಸೇನೆ ಮೈತ್ರಿ ಬಹುತೇಕ ಅಂತ್ಯವಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ಕ್ಷಣಗಳವರೆಗೂ ನಡೆದ ಉಭಯ ಪಕ್ಷಗಳ ನಡುವಿನ ಮಾತುಕತೆ...

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಪಟ್ಟು ಸಡಿಲಿಸಿದ ಬಿಜೆಪಿ-ಶಿವಸೇನೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಸೀಟು ಹಂಚಿಕೆ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದೆಯಾದರೂ ಬಿಜೆಪಿ ಹಾಗೂ ಶಿವಸೇನೆ ಎರಡೂ ಪಕ್ಷಗಳು ಕೊಂಚ ತಮ್ಮ ಪಟ್ಟು ಸಡಿಲಿಸಿವೆ. ಬಿಜೆಪಿ ಮೊದಲಿನ 135 ಸ್ಥಾನದ ಪಟ್ಟು ಸಡಿಲಿಸಿ 130 ಸ್ಥಾನಕ್ಕೆ ಬೇಡಿಕೆಯಿಟ್ಟಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್...

ಬಿಜೆಪಿ-ಶಿವಸೇನೆ ನಡುವೆ ಬಗೆಹರಿದ ಸೀಟು ಹಂಚಿಕೆ ಬಿಕ್ಕಟ್ಟು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ನಡುವಿನ ಸೀಟು ಹಂಚಿಕೆ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಉಭಯ ಪಕ್ಷಗಳ ನಾಯಕರು ನಡೆಸಿದ ಮಾತುಕತೆ ಸಫಲವಾಗಿದೆ. ಬಿಜೆಪಿ-ಶಿವಸೇನೆ ನಾಯಕರ ನಡುವೆ ನಡೆದ ಮಹತ್ವದ ಮಾತುಕತೆಯಲ್ಲಿ ಮೈತ್ರಿ ಮುಂದುವರೆಸಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ನಿರ್ಧರಿಸಲಾಗಿದೆ. 288 ವಿಧಾನಸಭಾ...

ಮಹಾರಾಷ್ಟ್ರ ಚುನಾವಣೆ-ಮುಂದುವರೆದ ಮೈತ್ರಿ ಬಿಕ್ಕಟ್ಟು: ಇಂದು ನಿರ್ಧಾರ

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಬಿಕ್ಕಟ್ಟು ಇನ್ನೂ ಮುಂದುವರೆದಿದ್ದು, ಸೆ.22ರಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಅ.15ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 119 ಸ್ಥಾನ ಬಿಟ್ಟುಕೊಡುವುದಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಕೊನೆ...

ಸೀಟು ಹಂಚಿಕೆ ಬಗ್ಗೆ ಅಮಿತ್ ಶಾರಿಂದ ಕರೆ ಬಂದಿಲ್ಲ: ಉದ್ಧವ್ ಠಾಕ್ರೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ನಡುವಿನ ಸೀಟು ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ. ಸೀಟು ಹಂಚಿಕೆ ವಿಚಾರದಲ್ಲಿ ಪಟ್ಟು ಸಡಿಲಿಸಿ, ಮೈತ್ರಿ ಉಳಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮನವಿ ಮಾಡಿದ್ದಾರೆ ಎಂಬ ಸುದ್ಧಿಯನ್ನು ಉದ್ಧವ್ ಠಾಕ್ರೆ ನಿರಾಕರಿಸಿದ್ದಾರೆ. ಸೀಟು ಹಂಚಿಕೆ ಗೊಂದಲಕ್ಕೆ...

ಮಹಾ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟ: ಮುಂದುವರೆದ ಸೀಟು ಹಂಚಿಕೆ ಬಿಕ್ಕಟ್ಟು

ಅ.15ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ. ನಾಮಪತ್ರ ಸಲ್ಲಿಸಲು ಸೆ.27 ಕೊನೆ ದಿನವಾಗಿದೆ. ಅ.1 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಅ.19ರಂದು ಫಲಿತಾಂಶ ಘೋಷಣೆಯಾಗಲಿದೆ. ಹಾಲಿ ವಿಧಾನಸಭೆಯ ಅವಧಿ ನ.8ರಂದು ಮುಗಿಯಲಿದೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 29...

ಮಹಾರಾಷ್ಟ್ರ ಚುನಾವಣೆ: ಬಿಜೆಪಿಗೆ ಉದ್ಧವ್ ಠಾಕ್ರೆ ಪ್ರಬಲ ಸಂದೇಶ

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರೆದಿದೆ. ಈ ನಡುವೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ. ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ಶಿವಸೇನೆ ಮಹತ್ವದ ಸಭೆ ನಡೆಯುತ್ತಿದ್ದು, ಈ ವೇಳೆ...

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಮಾತುಕತೆಗೆ ಒಪ್ಪಿದ ಬಿಜೆಪಿ-ಶಿವಸೇನೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶೀವಸೇನೆ ನಡುವಿನ ಸೀಟು ಹಂಚಿಕೆ ವಿವಾದ ಇತ್ಯರ್ಥಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ. ಉಭಯ ಬಣಗಳು ತಮ್ಮ ನಿಲುವಿನಲ್ಲಿ ಸಡಿಲಿಕೆ ಮಾಡಿಕೊಂಡು ಮೈತ್ರಿ ಮುಂದುವರೆಸುವ ಒಲವು ತೋರಿದ್ದಾರೆ. ಬಿಜೆಪಿ-ಶಿವಸೇನೆ ನಾಯಕರು ಈಗಾಗಲೇ ಸಭೆ ನಡೆಸಿದ್ದು, ಸೀಟು ಹಂಚಿಕೆ ಮಾತುಕತೆ ನಡೆಸಿದ್ದಾರೆ. ತನ್ನ...

ಬಿಜೆಪಿ-ಶಿವಸೇನೆ ಮೈತ್ರಿ ಮುರಿದಲ್ಲಿ ಪ್ಲಾನ್ ಬಿಗೆ ಸಿದ್ಧತೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆಯ ಮೈತ್ರಿ ಭಂಗವಾಗುವ ಸಾಧ್ಯತೆಯಿದ್ದು, ಒಂದು ವೇಳೆ ಉಭಯ ಪಕ್ಷಗಳ ನ್ನಡುವೆ ಮೈತ್ರಿ ಮುರಿದುಬಿದ್ದರೆ ಪ್ಲಾನ್ ಬಿ ಯೊಂದಿಗೆ ಚುನಾವಣೆ ಎದುರಿಸಲು ಸಜ್ಜಾಗಿವೆ. ಸ್ಥಾನ ಹೊಂದಾಣಿಕೆ ಹಾಗೂ ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಬಿಜೆಪಿ ಮತ್ತು ಶಿವಸೇನೆಯ...

ಉಪಚುನಾವಣೆ ಫಲಿತಾಂಶ: ಶಿವಸೇನೆಯಿಂದ ಬಿಜೆಪಿಗೆ ನೀತಿ ಪಾಠ

ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ನಲ್ಲಿ ನಡೆದ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ದೊರೆತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಡಿ.ಎ ಮೈತ್ರಿ ಪಕ್ಷ ಶಿವಸೇನೆ,ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು ಎಂದು ಎಚ್ಚರಿಸಿದೆ. ಮುಂಬೈ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಸನಿಹದಲ್ಲೇ...

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ-ಶಿವಸೇನೆ ನಡುವೆ ಜಟಾಪಟಿ

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದ್ದು, ಗೊಂದಲಗಳಿಗೆ ಕಾರಣವಾಗಿದೆ. ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ, 155ಕ್ಕಿಂತಲೂ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಲು...

ಗಡಿಯಲ್ಲಿ ತೀವ್ರಗೊಂಡ ಪಾಕ್ ದಾಳಿ: ಪಾಕ್ ವಿರುದ್ಧ ಯುದ್ಧಕ್ಕೆ ಶಿವಸೇನೆ ಆಗ್ರಹ

ಜಮ್ಮು-ಕಾಶೀರದ ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿರುವ ಪಾಕ್ ಸೇನೆ, ತನ್ನ ಕೃತ್ಯ ಮುಂದುವರೆಸುವ ಮೂಲಕ ಭಾರತವನ್ನು ಇನ್ನಷ್ಟು ಕೆಣಕುವ ಯತ್ನ ನಡೆಸಿದೆ. ಕಳೆದ 15ದಿನಗಳಲ್ಲಿ ಪಾಕಿಸ್ತಾನ 21ಬಾರಿ ಕದನ ವಿರಾಮ ಉಲ್ಲಂಘನೆಮಾಡಿದೆ. ಆಗಸ್ಟ್ ತಿಂಗಳೊಂದರಲ್ಲೇ 23ಬಾರಿ, ಜು.16ರಿಂದ...

ರಂಜಾನ್ ವ್ರತಭಂಗ ಪ್ರಕರಣ: ಸಂಸದರ ವಿರುದ್ಧದ ಪಿ.ಐ.ಎಲ್‌ ವಜಾ

'ರಂಜಾನ್' ಉಪವಾಸದಲ್ಲಿದ್ದ ಕ್ಯಾಟರಿಂಗ್ ಮೇಲ್ವಿಚಾರಕನಿಗೆ ಚಪಾತಿ ತಿನ್ನಿಸಲೆತ್ನಿಸಿದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಆ.22ರಂದು ವಜಾಗೊಳಿಸಿದೆ. ಬಲವಂತವಾಗಿ ಚಪಾತಿ ತಿನ್ನಿಸಲೆತ್ನಿಸುವ ಮೂಲಕ ಮಹಾರಾಷ್ಟ್ರ ಸದನದ ಮುಸ್ಲಿಂ ಸಿಬ್ಬಂದಿ ಉಪವಾಸಕ್ಕೆ ಅಡ್ಡಿಪಡಿಸಿದ್ದ 11 ಶಿವಸೇನೆ ಸಂಸದರನ್ನು ಅನರ್ಹಗೊಳಿಸಲು ಲೋಕಸಭೆ ಹಾಗೂ ರಾಜ್ಯಸಭಾಧ್ಯಕ್ಷರಿಗೆ ನಿರ್ದೇಶಿಸಬೇಕೆಂದು ಕೋರಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited