Untitled Document
Sign Up | Login    
Dynamic website and Portals
  

Related News

ಬೆಂಗಳೂರಿನಲ್ಲಿ ದೇಶ ವಿರೋಧಿ ಘೋಷಣೆ

ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನಿಂದ ನಡೆದ ಕಾಶ್ಮೀರ ಸಂಘರ್ಷ ಕುರಿತಾದ ಕಾರ್ಯಾಗಾರದಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನು...

ಇಂದು ಕರ್ನಾಟಕ ಬಂದ್

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮ, ಕೆಎಸ್ಆರ್ಟಿಸಿ, ಬಿಎಂಟಿಸಿ, ಬೆಂಗಳೂರಿನ ಮಾಲ್, ಆಟೋ, ಟ್ಯಾಕ್ಸಿ...

ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವಕ್ಕೆ ಚೀನಾ ವಿರೋಧ ಮುಂದುವರಿಕೆ

ಸಿಯೋಲ್​ನಲ್ಲಿ ನಡೆಯುತ್ತಿರುವ 48 ದೇಶಗಳ ಪರಮಾಣು ಸರಬರಾಜುದಾರರ ಸಮೂಹ (ಎನ್‌ಎಸ್‌ಜಿ) ಸೇರ್ಪಡೆಗೆ ಭಾರತ ಶತಾಯಗತಾಯ ಯತ್ನಿಸಿದ್ದರೂ ಚೀನಾ ವಿರೋಧ ಮುಂದುವರೆದಿದ್ದು, ಭಾರತಕ್ಕೆ ಸದಸ್ಯತ್ವ ನೀಡಿಕೆ ಕುರಿತ ಚರ್ಚೆ ಇಂದಿಗೆ ಮುಂದೂಡಲಾಗಿದೆ. ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಎನ್‌ಎಸ್‌ಜಿ ಸಭೆಗೆ ಪೂರಕವಾಗಿ ಭಾರತದ ವಿಚಾರದಲ್ಲಿ ಗುರುವಾರ...

ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ವಿಚಾರ: ಯಾವುದೇ ನಿರ್ಧಾರ ಕೈಗೊಳ್ಳದೇ ಸಭೆ ಮುಕ್ತಾಯ

ಸಿಯೋಲ್ ​ನಲ್ಲಿ ನಡೆದ ಪರಮಾಣು ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ಸಭೆಯು ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೇ ಮುಕ್ತಾಯಗೊಂಡಿದೆ. ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಅಂತಿಮ ದಿನವಾದ ಶುಕ್ರವಾರವೂ ಚೀನಾ ಸೇರಿದಂತೆ 10 ರಾಷ್ಟ್ರಗಳು ಭಾರತದ ಎನ್ ಎಸ್ ಜಿ...

ಎನ್​ಎಸ್​ಜಿ ಸದಸ್ಯತ್ವಕ್ಕೆ ಭಾರತ ಸೇರ್ಪಡೆಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಯೆನ್ನಾ ಸಭೆ ವಿಫಲ

ಎನ್​ಎಸ್​ಜಿ ಸದಸ್ಯತ್ವಕ್ಕೆ ಭಾರತ ಸಲ್ಲಿಸಿರುವ ಅರ್ಜಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಯೆನ್ನಾದಲ್ಲಿ ನಡೆದ ಸಭೆ ವಿಫಲವಾಗಿದೆ. ಜೂನ್ 20ರಂದು ಸಿಯೋಲ್​ನಲ್ಲಿ ನಡೆಯಲಿರುವ 48 ರಾಷ್ಟ್ರಗಳ ಪರಮಾಣು ಕ್ಲಬ್ ಸಭೆ ಭಾರತದ ಅರ್ಜಿಯನ್ನು ಪರಿಶೀಲನೆಗೆ ಎತ್ತಿಕೊಳ್ಳುವ ನಿರೀಕ್ಷೆ ಇದೆ. ಪರಮಾಣು ಪೂರೈಕೆದಾರರ ಒಕ್ಕೂಟ ಸದಸ್ಯತ್ವಕ್ಕೆ...

ರಾಜ್ಯ ಸಭೆಗೆ ಅವಿರೋಧ ಆಯ್ಕೆ

ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಅವಿರೋಧವಾಗಿ...

ಬಿಸಿಸಿಐ ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಆಯ್ಕೆ

ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ ನಡೆದ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ 1963ರ ಬಳಿಕ ಬಿಸಿಸಿಐ ಅಧ್ಯಕ್ಷ ಹುದ್ದೆಗೇರುತ್ತಿರುವ ಅತಿ ಕಿರಿಯ ವ್ಯಕ್ತಿ...

ಸಂಸದರ ವೇತನ ಶೇ.100ರಷ್ಟು ಹೆಚ್ಚಳ: ಪ್ರಧಾನಿ ಮೋದಿ ವಿರೋಧ

ಸಂಸದರು ತಮ್ಮ ವೇತನವನ್ನು ಶೇ.100ರಷ್ಟು ಹೆಚ್ಚಿಸಿಕೊಳ್ಳುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಸದರ ಮಾಸಿಕ ವೇತನ ಶೇ.100ರಷ್ಟು ಹೆಚ್ಚಿಸುವ ಸಂಸದೀಯ ಮಂಡಳಿಯ ಶಿಫಾರಸು ಇದೀಗ ಪ್ರಧಾನಿ ಮೋದಿ ಅವರ ಅನುಮೋದನೆಗೆ ಕಾಯುತ್ತಿದೆ. ಸಂಸದರು ತಮ್ಮ...

ಸಂಸತ್ತಿನಲ್ಲಿ ಪ್ರತಿಪಕ್ಷಗಳ ಬೆವರಿಳಿಸಿದ ಸ್ಮೃತಿ ಇರಾನಿ

ಬುಧವಾರ ಲೋಕಸಭೆಯಲ್ಲಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಜೆ ಎನ್ ಯು ವಿವಾದದ ಕುರಿತು ಖಡಕ್ ಉತ್ತರ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಜೆ ಎನ್ ಯು ಅಧಿಕಾರಿಗಳೇ ಹೇಳಿದ್ದಾರೆ ಎಂದು...

ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಪುನರಾಯ್ಕೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ, ಅಮಿತ್‌ ಶಾ ಅವರನ್ನು ಎರಡನೇ ಬಾರಿಗೆ ಭಾನುವಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಮಿತ್‌ ಶಾ ಅವರ ಅವಧಿ ಶನಿವಾರಕ್ಕೆ ಮುಕ್ತಾಯಗೊಂಡಿದ್ದು, ಭಾನುವಾರ ಅವರು ಮತ್ತೆ 3 ವರ್ಷಗಳ ಅವಧಿಗೆ ಪುನರಾಯ್ಕೆ ಮಾಡಲಾಗಿದೆ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಮಿತ್...

ರಾಷ್ಟ್ರ ವಿರೋಧಿ ಕಾಂಗ್ರೆಸ್ ಐಎಸ್ಐ ಜೊತೆ ಸಂಬಂಧ ಹೊಂದಿದೆ ಎಂದು ಸುಖ್ಬೀರ್ ಸಿಂಗ್ ಆರೋಪ

ಕಾಂಗ್ರೆಸ್ ಪಕ್ಷವನ್ನು ದೇಶ ವಿರೋಧಿ ಎಂದು ಆರೋಪಿಸಿರುವ ಪಂಜಾಬ್ ನ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್, ರಾಜಕೀಯಕ್ಕಾಗಿ ಪಾಕೀಸ್ತಾನದ ಐಎಸ್ಐ ಜೊತೆ ನಂಟು ಹೊಂದಿರುವ ಉಗ್ರಗಾಮಿ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊೞುತ್ತಿದೆ ಎಂದು ಆರೋಪ ಮಾಡಿದ್ದಾರೆ. 80 ರ ದಶಕದಲ್ಲಿ ಪಂಜಾಬ್ ನಲ್ಲಿ ಏನಾಯಿತೆಂದು...

ಬಿಸಿಸಿಐ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ

ಶಶಾಂಕ್ ಮನೋಹರ್ ಭಾನುವಾರ ಬಿಸಿಸಿಐನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 58ರ ಶಶಾಂಕ್ ಮನೋಹರ್ ಎರಡನೇ ಬಾರಿಗೆ ಬಿಸಿಸಿಐ ನ ಅಧ್ಯಕ್ಷ ಹುದ್ದೆ ಅಲಂಕರಿಸಿದಂತಾಗಿದೆ. ಜಗಮೋಹನ್ ದಾಲ್ಮಿಯಾ ಅವರು ನಿಧನ ದಿಂದ ತೆರವಾಗಿದ್ದ ಬಿಸಿಸಿಐಯ ಅಧ್ಯಕ್ಷ ಹುದ್ದೆಗೆ ಭಾನುವಾರ ನಡೆದ ಭಾರತೀಯ ಕ್ರಿಕೆಟ್...

ಸಿಖ್ ವಿರೋಧಿ ದಂಗೆ ಪ್ರಕರಣ: ಟೈಟ್ಲರ್ ವಿರುದ್ಧ ಎಫ್.ಐ.ಆರ್ ಇಲ್ಲ-ಸಿಬಿಐ

1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಮೇಲೆ ಪ್ರಭಾವ ಹಾಗೂ ಹಣ ದುರುಪಯೋಗ ಆರೋಪಡಿಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ವಿರುದ್ಧ ಮತ್ತೆ ಹೊಸ ಎಫ್.ಐ.ಆರ್ ದಾಖಲಿಸುವುದಿಲ್ಲ ಎಂದು ಸಿಬಿಐ ದೆಹಲಿ ಕೋರ್ಟ್ ಗೆ ತಿಳಿಸಿದೆ. ಈ ಪ್ರಕರಣದಲ್ಲಿ...

ನಿಮ್ಮ ಧರ್ಮ ಯೋಗಕ್ಕೆ ಬೆದರುವಂತಿದ್ದರೆ ಅಂತಹ ಧರ್ಮದಿಂದ ಹೊರ ಬನ್ನಿ: ರಾಮ್ ದೇವ್

ನಿಮ್ಮ ಧರ್ಮ ಯೋಗದಿಂದ ಬೆದರಿಸಲ್ಪಡುವಷ್ಟು ದುರ್ಬಲವಾಗಿದ್ದರೆ ನೀವು ಆ ಧರ್ಮವನ್ನು ಬಿಟ್ಟು ಬಿಡಿ ಎಂದು ಯೋಗ ಗುರು ಬಾಬಾ ರಾಮ್‌ ದೇವ್‌ ವ್ಯಂಗ್ಯವಾಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಮುನ್ನಾ ದಿನ ಋಷಿಕೇಷದ ಪಾರಮಾರ್ಥ ಆಶ್ರಮದಲ್ಲಿ ಮಾತನಾಡಿದ ರಾಮ್‌ ದೇವ್‌, ಯೋಗವನ್ನು ಧರ್ಮದೊಂದಿಗೆ...

ಲಲಿತ್ ಗೇಟ್: ವಿವಾದ ಶಮನಕ್ಕೆ ಪ್ರಧಾನಿ ಮೋದಿ ಜೊತೆ ಅಮಿತ್ ಷಾ ಮಾತುಕತೆ

’ಲಲಿತ್​ ಗೇಟ್’ ಹಗರಣ ದಿನಕ್ಕೊಂದು ರೂಪ ಪಡೆಯುತ್ತಿರುವುದು ಆಡಳಿತಾರೂಢ ಎನ್.ಡಿ.ಎ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಣಿಯಲು ಈ ಅವಕಾಶವನ್ನು ಯಥೇಚ್ಛವಾಗಿ ಬಳಸುತ್ತಿರುವ ಪ್ರತಿಪಕ್ಷಗಳು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ...

ಭವಿಷ್ಯದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಹೇರಿಕೆ ತಳ್ಳಿಹಾಕಲಾಗದು: ಅಡ್ವಾಣಿ

ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಹೇರಿಕೆಯನ್ನು ತಳ್ಳಿಹಾಕಲಾಗುದು ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. 1975, ಜೂ.25 ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಈ ನಿಟ್ಟಿನಲ್ಲಿ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಹಳೆ ನೆನಪುಗಳನ್ನು ಮೆಲುಕುಹಾಕುತ್ತಾ...

ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿಗೆ ಗೃಹ ಬಂಧನ

ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿಯನ್ನು ಶನಿವಾರ ಗೃಹ ಬಂಧನದಲ್ಲಿ ಇರಿಸಲಾಗಿದೆ. ಜೂನ್ 14ರ ಭಾರತ ವಿರೋಧಿ ಸಭೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಿಲಾನಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮೂಲಗಳು ಹೇಳಿವೆ. ಭಾರತ ವಿರೋಧಿ,...

ಸಿಖ್ ವಿರೋಧಿ ಗಲಭೆ: ಟೈಟ್ಲರ್ ವಿರುದ್ಧ ಕ್ರಮದ ಬಗ್ಗೆ ಸಿಬಿಐ ವರದಿ ಕೇಳಿದ ಕೋರ್ಟ್

1984ರ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಸಾಕ್ಷಿ ಮೇಲೆ ಪ್ರಭಾವ ಬೀರಿದ್ದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ದೆಹಲಿ ಕೋರ್ಟ್ ಸಿಬಿಐಗೆ ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದ ಸಿಬಿಐಯನ್ನು...

ಕೇರಳದ ಪುರಾತನ ಮಸೀದಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬ ಹೇಳಿಕೆಯನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರಮೋದಿ ಮುಂದಾಗಿದ್ದಾರೆ. ಜುಲೈ ಅಥವಾ ಆಗಸ್ಟ್‌ ನಲ್ಲಿ ಕೇರಳಕ್ಕೆ ಆಗಮಿಸಲಿರುವ ಅವರು, ಶತಮಾನಗಳಷ್ಟು ಹಳೆಯದಾದ ವಿಶ್ವ ಪ್ರಸಿದ್ಧ ಚಾರ್ಮನ್ ಜುಮ್ಮಾ ಮಸೀದಿಗೆ ಭೇಟಿ ನೀಡಲಿದ್ದಾರೆ. ಕೇರಳ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ...

ನಕ್ಸಲರಿಂದ 250 ಗ್ರಾಮಸ್ಥರ ಬಿಡುಗಡೆ

ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ನಕ್ಸಲರು ಅಪಹರಿಸಿದ್ದ ಗ್ರಾಮಸ್ಥರನ್ನು ರಾತ್ರಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಕ್ಸಲರ ಭದ್ರಕೋಟೆಯಾಗಿರುವ ಛತ್ತೀಸ್‌ ಗಢದ ದಾಂತೇವಾಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಬೆನ್ನಲ್ಲಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ 250 ಗ್ರಾಮಸ್ಥರನ್ನು...

ಉಗ್ರರಿಂದ ಗಣರಾಜ್ಯೋತ್ಸವ ಮಾದರಿ ಮಿಲಿಟರಿ ಪರೇಡ್‌

ಐಸಿಸ್‌ ಉಗ್ರರ ವಿರೋಧಿಗಳಾಗಿ ಗುರುತಿಸಿಕೊಂಡಿರುವ ಜೈಶ್‌ ಅಲ್‌ ಇಸ್ಲಾಮ್‌ ಉಗ್ರರು ದಮಾಸ್ಕಸ್‌ನಲ್ಲಿ ಗಣರಾಜ್ಯೋತ್ಸವದ ಮಾದರಿಯಲ್ಲಿ ಮಿಲಿಟರಿ ಪರೇಡ್‌ ನಡೆಸಿದ್ದಾರೆ. ಟ್ಯಾಂಕರ್‌ ಗಳೊಂದಿಗೆ 1,700 ಉಗ್ರರು ಸರತಿ ಸಾಲಿನಲ್ಲಿ ಕವಾಯತಿನಲ್ಲಿ ಪಾಲ್ಗೊಂಡಿರುವ ವಿಡಿಯೋ ಅನ್ನು ಸಂಘಟನೆ ಬಿಡುಗಡೆಗೊಳಿಸಿದೆ. ಮುಸುಕು ಧರಿಸಿದ್ದ ವಿಶೇಷ ಪಡೆ...

ಸಾರಿಗೆ ಮುಷ್ಕರ: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015'ನ್ನು ವಿರೋಧಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಮತ್ತು ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಸಾರಿಗೆ ವಾಹನಗಳ...

ರಾಜಕೀಯದಲ್ಲಿ ನನ್ನನ್ನು ವಿಲನ್‌ ನಂತೆ ಚಿತ್ರಿಸಿದರು: ದೇವೇಗೌಡ

ರಾಜಕೀಯವಾಗಿ ತಮ್ಮಷ್ಟು ಪೆಟ್ಟು ತಿಂದ ರಾಜಕಾರಣಿ ಮತ್ತೂಬ್ಬರಿರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಹೇಳಿದ್ದಾರೆ. ಅಲ್ಲದೆ, ರಾಜಕೀಯದಲ್ಲಿ ತಮ್ಮನ್ನು ವಿಲನ್‌ ಆಗಿಯೇ ಹೆಚ್ಚು ಚಿತ್ರಿಸಲಾಯಿತು ಎಂದು ಕಿಡಿಕಾರಿದ್ದಾರೆ. ಹಾಸನದಲ್ಲಿ ನಡೆದ ಪತ್ರಕರ್ತರ 32ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,...

ತಮಿಳುನಾಡಿನಲ್ಲೂ ಕೋಕಾ ಕೋಲಾ ಕಂಪನಿಗೆ ಪರವಾನಗಿ ರದ್ದು

11 ವರ್ಷಗಳ ಹಿಂದೆ ಕೇರಳದಿಂದ ಹೊರದಬ್ಬಲ್ಪಟ್ಟಿದ್ದ ವಿಶ್ವದ ಅತಿದೊಡ್ಡ ತಂಪು ಪಾನೀಯ ಉತ್ಪಾದನಾ ಕಂಪನಿ ಕೋಕಾ ಕೋಲಾಕ್ಕೆ ಇದೀಗ ನೆರೆಯ ತಮಿಳುನಾಡು ಸರ್ಕಾರ ಕೂಡಾ ಗೇಟ್‌ ಪಾಸ್‌ ನೀಡಿದೆ. ಈರೋಡ್‌ ಜಿಲ್ಲೆಯ ಪೆರುಂದುರೈನಲ್ಲಿ ಕಂಪನಿಗೆ ನೀಡಿದ್ದ ಪರವಾನಗಿಯನ್ನು ತಮಿಳುನಾಡು ಸರ್ಕಾರ ರದ್ದುಪಡಿಸಿದೆ....

ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಗೆ ಆಪ್ ನಿಂದ ಶೋಕಾಸ್ ನೋಟಿಸ್

ಭಿನ್ನಮತೀಯ ನಾಯಕರಾದ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆಮ್ ಆದ್ಮಿ ಪಕ್ಷ ಇಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಯಾದವ್, ಭೂಷಣ್, ಆನಂದ್ ಕುಮಾರ್ ಮತ್ತು ಅಜಿತ್ ಝಾ...

ಕಾಶ್ಮೀರ ಪ್ರತ್ಯೇಕತಾವಾದಿ ಮಸರತ್ ಆಲಂ ಬಂಧನ

'ಕಾಶ್ಮೀರ'ದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಪ್ರತ್ಯೇಕತಾವಾದಿ ನಾಯಕ ಮಸ್ರತ್ ಆಲಂ ನನ್ನು ಪೊಲೀಸರು ಬಂಧಿಸಿದ್ದಾರೆ. ಏ.16ರಂದು ರಾತ್ರಿ ಶ್ರೀನಗರದ ಜೈಂದಾರ್ ಏರಿಯಾದಲ್ಲಿ ಮಸರತ್ ಆಲಂ ಹಾಗೂ ಸಯೀದ್ ಅಲಿ ಗಿಲಾನಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಏ.17ರಂದು ಬೆಳಿಗ್ಗೆ ಮಸರತ್ ಆಲಂ...

ರಾಹುಲ್‌ ಗಾಂಧಿ ಏ.15ರಂದು ಆಗಮಿಸುವ ನಿರೀಕ್ಷೆ

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ನಿಗೂಢ ನಾಪತ್ತೆಯ ವಿಚಾರ ಇನ್ನು ಮುಂದುವರೆದಿದೆ. ಏಪ್ರಿಲ್‌ 13ರಂದು ರಾಹುಲ್‌ ಮರಳಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತಾದರೂ ಅದೀಗ ಏಪ್ರಿಲ್‌ 15ಕ್ಕೆ ಮುಂದೆ ಹೋಗಿದೆ. ಏಪ್ರಿಲ್‌ 15ರಂದು ಅಥವಾ ಏ.19ರೊಳಗೆ ಯಾವುದೇ ದಿನ ರಾಹುಲ್‌ ಆಗಮಿಸಬಹುದು....

ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಸದಸ್ಯರಿಗೆ ಕಾಂಗ್ರೆಸ್ ತಾಕೀತು

ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವುದನ್ನು ವಿರೋಧಿಸುತ್ತಿರುವ ಕೆಲವು ನಾಯಕರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿ ಪಕ್ಷದ ನಾಯಕತ್ವದ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ನೀಡಿದೆ. ಬದಲಾವಣೆ ಜೀವನದ ನಿಯಮ. ಹಾಗೆಯೆ ಸಂಸ್ಥೆ ಕೂಡ ಬದಲಾಗುತ್ತದೆ ಹಾಗು ಕ್ರಮವಾಗಿ ಬೆಳವಣಿಗೆಯಾಗುತ್ತದೆ....

ಅರವಿಂದ್ ಕೇಜ್ರಿವಾಲ್ ಓರ್ವ ಹೇಡಿ: ದೇವನೂರು ಮಹಾದೇವ

ತೀವ್ರ ಬಂಡಾಯದ ಬಿಸಿಯನ್ನು ಎದುರಿಸುತ್ತಿರುವ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ಪಕ್ಷದ ಸದಸ್ಯರು ಮಾತ್ರವಲ್ಲದೇ ಪ್ರಗತಿಪರ ಸಾಹಿತಿಗಳೂ ತಿರುಗಿಬಿದ್ದಿದ್ದಾರೆ. ಪ್ರಸ್ತುತ ಇರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾದ ಪಕ್ಷ ಅಸ್ಥಿತ್ವಕ್ಕೆ ಬರಬೇಕೆಂಬ ಅಭಿಪ್ರಾಯ ಹೊಂದಿದ್ದ ಸಾಹಿತಿ ದೇವನೂರು ಮಹಾದೇವ ಅವರೂ...

26/11 ಮುಂಬೈ ದಾಳಿ ರೂವಾರಿ ಲಖ್ವಿ ಬಿಡುಗಡೆ

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಭಾರತದ ತೀವ್ರ ವಿರೋಧದ ನಡುವೆಯೂ ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಕೋರ್ಟ್ ಆದೇಶದಂತೆ ಹತ್ತು ಲಕ್ಷ ರೂಪಾಯಿಗಳ ಎರಡು ಬಾಂಡ್ ಅನ್ನು ಲಖ್ವಿ ನೀಡಿದ್ದು,...

ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್ ಶಿಪ್ ನಿರ್ಮಾಣ ಅಸಾಧ್ಯ: ಜಮ್ಮು-ಕಾಶ್ಮೀರ ಸಿ.ಎಂ

'ಕಾಶ್ಮೀರಿ ಪಂಡಿತ'ರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪ್ರತ್ಯೇಕತಾವಾದಿಗಳ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಉಲ್ಟಾ ಹೊಡೆದಿದ್ದಾರೆ. ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಫ್ತಿ ಮೊಹಮದ್ ಸಯೀದ್, ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್ ಶಿಪ್ ನಿರ್ಮಾಣ...

ಗಿರಿರಾಜ್‌ ಸಿಂಗ್‌ ಅತ್ಯಾಚಾರಿಗಿಂತ ಕೀಳು: ಲೆಸ್ಲಿ ಉಡ್ವಿನ್‌

ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರ ವರ್ಣಭೇದ ಹೇಳಿಕೆ ವಿರುದ್ಧ ದೇಶದ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, "ಗಿರಿರಾಜ್‌ ಸಿಂಗ್‌ ಅತ್ಯಾಚಾರಿಗಿಂತ ಕೀಳು' ಎಂದು ವಿವಾದಿತ ನಿರ್ಭಯಾ ಸಾಕ್ಷ್ಯಚಿತ್ರ ನಿರ್ದೇಶಕಿ ಲೆಸ್ಲಿ ಉಡ್ವಿನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಸಾಕ್ಷ್ಯಚಿತ್ರ ಅತ್ಯಾಚಾರಿಗಳಿಗೆ ಉತ್ತೇಜನ ನೀಡುವಂತಿದೆ...

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಂದ್: ಬಸ್ ಸಂಚಾರ ಸ್ಥಗಿತ

ಕಾವೇರಿ ನದಿಗೆ ಅಡ್ಡಲಾಗಿ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟೆ ವಿರೋಧಿಸಿ ರೈತಪರ ಸಂಘಟನೆಗಳು ತಮಿಳುನಾಡು ಬಂದ್‌ ಗೆ ಕರೆ ಕೊಟ್ಟಿವೆ. ಮೇಕೇದಾಟು ಯೋಜನೆ ವಿರೋಧಿಸಿ ಕರೆನೀಡಲಾಗಿರುವ ತಮಿಳುನಾಡು ಬಂದ್ ಹಿನ್ನಲೆಯಲ್ಲಿ ಉಭಯ ರಾಜ್ಯಗಳ ನಡುವಿನ...

ಆಮ್ ಆದ್ಮಿ ಪಕ್ಷದ ಮಾಜಿ ಶಾಸಕ ರಾಜೇಶ್ ಗರ್ಗ್ ಉಚ್ಛಾಟನೆ

'ಆಮ್ ಆದ್ಮಿ ಪಕ್ಷ'ದಿಂದ ಮಾಜಿ ಶಾಸಕ ರಾಜೇಶ್ ಗರ್ಗ್ ನನ್ನು ಉಚ್ಛಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾರಣ ಆಪ್ ಪಕ್ಷ ಈ ಕ್ರಮ ಕೈಗೊಂಡಿದೆ. ನವದೆಹಲಿಯ ರೋಹಿಣಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜೇಶ್ ಗರ್ಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

ಭೂಸ್ವಾಧೀನ ಕಾಯ್ದೆ ವಿರುದ್ಧ ನಿತೀಶ್‌ ಕುಮಾರ್ ಉಪವಾಸ ಧರಣಿ

ಕೇಂದ್ರ ಎನ್‌.ಡಿ.ಎ ಸರ್ಕಾರದ ಭೂಸ್ವಾಧೀನ ಕಾಯ್ದೆ ಮಸೂದೆ ವಿರೋಧಿಸಿ ಸಂಯುಕ್ತ ಜನತಾದಳ (ಜೆಡಿಯು) ಕಾರ್ಯಕರ್ತರು ಬಿಹಾರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಒಂದು ದಿನ ಉಪವಾಸ ಧರಣಿ ನಡೆಸಿದ್ದಾರೆ. ಜೆಡಿಯುದ ಎಲ್ಲ ಶಾಸಕರು, ಕಾರ್ಯಕರ್ತರು, ಸಂಸದರು ಕೂಡ 12...

ಉಗ್ರ ಲಖ್ವಿ ಬಿಡುಗಡೆಗೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ

'ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್ ಉಗ್ರ ಝಾಕಿ-ಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆ ಮಾಡಿ, ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಪಾಕಿಸ್ತಾನದ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದು, ತಕ್ಷಣವೇ ಲಖ್ವಿಯನ್ನು ಬಿಡುಗಡೆ ಮಾಡುವಂತೆ ಇಸ್ಲಾಮಾಬಾದ್ ನ ಮುಖ್ಯ ನ್ಯಾಯಮೂರ್ತಿ...

ಡಿಫೆನ್ಸ್‌ ವಕೀಲರಿಗೆ ಬಾರ್ ಕೌನ್ಸಿಲ್‌ ಶೋಕಾಸ್‌ ನೋಟಿಸ್ ಜಾರಿ

ದೆಹಲಿ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಇಬ್ಬರು ವಕೀಲರಿಗೆ ಬಾರ್ ಕೌನ್ಸಿಲ್‌ ಆಫ್ ಇಂಡಿಯಾ ಶೋಕಾಸ್‌ ನೊಟೀಸ್‌ ಜಾರಿ ಮಾಡಿದೆ. ಬಿಬಿಸಿ ಪ್ರಸಾರಮಾಡಿರುವ ಇಂಡಿಯಾಸ್‌ ಡಾಟರ್ ಸಾಕ್ಷ್ಯಚಿತ್ರದಲ್ಲಿ...

ಜಗಮೋಹನ್‌ ದಾಲ್ಮಿಯಾಗೆ ಬಿಸಿಸಿಐ ಅಧ್ಯಕ್ಷ ಹುದ್ದೆ: ಅವಿರೋಧ ಆಯ್ಕೆ ಸಾಧ್ಯತೆ

ತೀರ್ವ ಕುತೂಹಲ ಕೆರಳಿಸಿರುವ ಬಿಸಿಸಿಐ ಚುನಾವಣೆ ಸೋಮವಾರ ನಡೆಯಲಿದ್ದು ಅಧ್ಯಕ್ಷರಾಗಿ ಜಗಮೋಹನ್‌ ದಾಲ್ಮಿಯಾ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹುದ್ದೆ ಮೇಲೆ ಕಣ್ಣಿಟ್ಟು ಕೋರ್ಟ್‌ನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್‌ ಕಣದಿಂದ ಹಿಂದೆ ಸರಿದು ದಾಲ್ಮಿಯಾರನ್ನು ಬೆಂಬಲಿಸಿದರು. ಹೀಗಾಗಿ...

ಬಿಸಿಸಿಐ ಅಧ್ಯಕ್ಷರಾಗಿ ಜಗಮೋಹನ್‌ ದಾಲ್ಮಿಯ ಅವಿರೋಧವಾಗಿ ಆಯ್ಕೆ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಸಿಸಿಐ ಚುನಾವಣೆಯಲ್ಲಿ ಜಗಮೋಹನ್‌ ದಾಲ್ಮಿಯ ಬಿಸಿಸಿಐನ ಪೂರ್ಣಕಾಲಿಕ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪದಚ್ಯುತ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಸ್ಪರ್ಧಿಸದೇ ಇದ್ದುದರಿಂದ ಅವರಪರ ದಾಲ್ಮಿಯ ನಾಮಪತ್ರ ಸಲ್ಲಿಸಿದ್ದರು. ದಾಲ್ಮೀಯ ಅವರಿಗೆ ಎದುರಾಳಿಯಾಗಿ...

ಜಮ್ಮು-ಕಾಶ್ಮೀರ ವಿಧಾನಪರಿಷತ್ ಗೆ ಬಿಜೆಪಿ, ಪಿಡಿಪಿಯ 5 ಸದಸ್ಯರ ಅವಿರೋಧ ಆಯ್ಕೆ

'ಜಮ್ಮು-ಕಾಶ್ಮೀರ' ವಿಧನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಿಡಿಪಿಯ 5ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿಯ ಇಬ್ಬರು ಸದಸ್ಯರು ಹಾಗೂ ಪಿಡಿಪಿಯ ಮೂವರು ಸದಸ್ಯರು ವಿಧಾನಪರಿಷತ್ ಗೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಹಮದ್ ರಂಜಾನ್ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ...

ಮಠಗಳನ್ನು ನಿಯಂತ್ರಿಸುವ ಮಸೂದೆಗೆ ಸಿ.ಎಂ, ಸಚಿವರಿಂದಲೇ ವಿರೋಧ

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮಠಗಳನ್ನು ಸರ್ಕಾರಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾಯ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಂದ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ ಬಗ್ಗೆ ಡಿ.23ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಂದಲೇ...

ಬಿಜೆಪಿಗೆ ಮತ ನೀಡಿ, ಕೆಲಸಗಳನ್ನು ಪೂರ್ಣಗೊಳಿಸುವಂತೆ ಕಟ್ಟಾಜ್ಞೆ ಮಾಡಿ: ಮೋದಿ

ದೆಹಲಿಯಲ್ಲಿರುವ ತಮ್ಮ ನೇತೃತ್ವದ ಎನ್.ಡಿ.ಎ ಸರ್ಕಾರ ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡುವ ಸರ್ಕಾರ, ಕಳೆದ 6ತಿಂಗಳಿನಿಂದ ಎನ್.ಡಿ.ಎ ಸರ್ಕಾರ ಜನ್-ಧನ್ ಯೋಜನೆ ಸೇರಿದಂತೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಜಾರ್ಖಂಡ್‌ ನಲ್ಲಿ ಡಿ.9ರಂದು...

ಯೋಜನಾ ಆಯೋಗ ರದ್ದು ಬೇಡಃ ಸಿದ್ದರಾಮಯ್ಯ

ಕಳೆದ 64 ವರ್ಷಗಳಿಂದಿರುವ ಯೋಜನಾ ಆಯೋಗವನ್ನು ರದ್ದು ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಯೋಜನಾ ಆಯೋಗದಿಂದ ಸಾಕಷ್ಟು...

ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ ತೊಲಗಬೇಕು: ಪ್ರಧಾನಿ ಮೋದಿ

ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತೊಲಗಿಸಿ, ಪೊಲೀಸರ ಮೇಲಿನ ತಪ್ಪು ಭಾವನೆಯನ್ನ್ನು ಹೋಗಲಾಡಿಸಬೇಕು ಎಂದುಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಸ್ಸಾಂನಲ್ಲಿ ಹಮ್ಮಿಕೊಂಡಿದ್ದ 49ನೇ ಡಿಜಿಪಿ ಹಾಗೂ ಐಜಿಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಪೊಲೀಸರ ಕರ್ತವ್ಯ, ತ್ಯಾಗ, ಬಲಿದಾನಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದಲ್ಲಿ...

ಗೋರೂರಿನಲ್ಲಿ ಕಸ ವಿಲೇವಾರಿಗೆ ಗ್ರಾಮಸ್ಥರ ವಿರೋಧ

ಗೋರೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರ ಪ್ರತಿಭಟನೆ ಬುಗಿಲೆದ್ದಿದೆ. ಕಸವಿಲೇವಾರಿ ಘಟಕ ಸ್ಥಾಪನೆಗಾಗಿ ರಾಮನಗರ ಜಿಲ್ಲೆ ಗೋರೂರು ಗ್ರಾಮದಲ್ಲಿ ಸರ್ವೆ ಕಾರ್ಯ ಆರಂಭವಾಗಿದ್ದು, ಗ್ರಾಮಸ್ಥರ ವಿರೋಧದ ನಡುವೆಯೂ ಸರ್ವೆ ಕಾರ್ಯ ಮುಕ್ತಾಯವಾಗಿದೆ. ಸರ್ವೆ ಕಾರ್ಯಕ್ಕೆ...

ಚೀನಾದಿಂದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ

ಭಾರತದ ತೀವ್ರ ವಿರೋಧದ ನಡುವೆಯೂ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಿದ್ದು, ಅಣೆಕಟ್ಟು ಪೂರ್ಣಗೊಂಡಿದೆ ಎಂದು ಘೋಷಿಸಿದೆ. ಟಿಬೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಜಲವಿದ್ಯುತ್ ಅಣೆಕಟ್ಟು ಪೂರ್ಣಗೊಂಡಿದ್ದು, ಅಣೆಕಟ್ಟಿಗೆ ಯಾರ್ಲಾಂಗ್ ಜಂಗ್ಬೋ ಎಂದು ಹೆಸರಿಡಲಾಗಿದೆ. ಚೀನಾ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಭಾರತ ಮತ್ತು...

ಮಹಾರಾಷ್ಟ್ರ ಫಲಿತಾಂಶ ಜನತೆಗೆ ತೃಪ್ತಿ ತಂದಿದೆಯೇ: ಉದ್ಧವ್ ಪ್ರಶ್ನೆ

ಬಿಜೆಪಿಯಿಂದ ಪ್ರಸ್ತಾವನೆ ಬಂದರೆ ಮಾತ್ರ ಮೈತ್ರಿ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ನಾವು ಸಿಂಹದಂತೆ ಏಕಾಂಗಿಯಾಗಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ. ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿಕೆ ನೀಡಿರುವ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ...

ಶಿವಸೇನೆ ನಮ್ಮ ರಾಜಕೀಯ ವಿರೋಧಿಯಲ್ಲ: ದೇವೇಂದ್ರ ಫಡ್ನವಿಸ್

ಮಹಾರಾಷ್ಟ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆಯಾದರೂ ಸ್ಪಷ್ಟ ಬಹುತ ಸಿಗದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್, ಶಿವಸೇನೆ ನಮ್ಮ ರಾಜಕೀಯ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಎನ್ ಸಿಪಿ ಪಕ್ಷಗಳ 15 ವರ್ಷಗಳ ದುರಾಡಳಿತಕ್ಕೆ...

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ- ನವಾಜ್ ಷರೀಫ್ ಸ್ಪಷ್ಟನೆ

ಆಡಳಿತ ವಿರೋಧಿ ಪ್ರತಿಭಟನೆ ಎದುರಿಸುತ್ತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸೆ.2ರಂದು ಪಾಕಿಸ್ತಾನದ ರಾಜಕೀಯ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ್ದು ರಾಜೀನಾಮೆಯನ್ನೂ ಕೊಡುವುದಿಲ್ಲ, ರಜೆ ಮೇಲೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಸಂವಿಧಾನದ ನಿಯಮವಿದ್ದು ಅದನ್ನು ಮೀರಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾ...

ರಾಷ್ಟ್ರವಿರೋಧಿ ಹೇಳಿಕೆ: ತೆಲಂಗಾಣ ಸಿ.ಎಂ ಕೆ.ಸಿ.ಆರ್ ಪುತ್ರಿ ವಿರುದ್ಧ ಪ್ರಕರಣ ದಾಖಲು

'ರಾಷ್ಟ್ರ ವಿರೋಧಿ ಹೇಳಿಕೆ' ನೀಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರಿ, ಸಂಸದೆ ಕವಿತಾ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ವಾತಂತ್ರ್ಯಾನಂತರ ಹೈದ್ರಾಬಾದನ್ನು ಬಲವಂತವಾಗಿ ಭಾರತದೊಂದೊಗೆ ವಿಲೀನ ಮಾಡಲಾಗಿದೆ ಎಂದು ಚಂದ್ರಶೇಖರ ರಾವ್ ಪುತ್ರಿ ಕವಿತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಷ್ಟೇ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited