Untitled Document
Sign Up | Login    
Dynamic website and Portals
  

Related News

ಟ್ರಕ್ ಮತ್ತು ಕಾರು ಡಿಕ್ಕಿ: ರಾಮನಗರದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವು

ಟ್ರಕ್​ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಿಡದಿ ಸಮೀಪದ ಕೆಂಪನಹಳ್ಳಿಯಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಮೊದಲು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ...

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

ನಮ್ಮ ವ್ಯಕ್ತಿತ್ವ ವಿಕಸನ ಹಾಗೂ ದೇಹದ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿರ್ವಹಣೆಯ ಸರಿಯಾದ ಮಾರ್ಗವೇ ಧರ್ಮ. ಧರ್ಮ ಮಾರ್ಗದಲ್ಲಿ ನಡೆಯಲು ಆರೋಗ್ಯವು ಸುಸ್ಥಿತಿಯಲ್ಲಿರಬೇಕು. ಶರೀರದ ಅಂಗಗಳಿಗೆ ಸರಿಯಾಗಿ ವ್ಯಾಯಾಮ ಮತ್ತು ಮನಸ್ಸಿಗೆ ಏಕಾಗ್ರತೆಯ ಅಭ್ಯಾಸ ದೊರೆತಾಗ ಯೋಗದಿಂದ ಆರೋಗ್ಯ...

ಪರಸ್ಪರ ಸಹಕಾರ ದೊರೆತಾಗ ಸಾಧನೆ ಸಾಧ್ಯಃ ಡಾ ದಾಮ್ಲೆ

ಅಜ್ಞಾನ, ಭಯ, ಸಂದೇಹ, ಅನುಮಾನಗಳನ್ನು ಬಿಟ್ಟು ಜ್ಞಾನ ಸಂಗ್ರಹದಲ್ಲಿ ನಾವು ನಿರಂತರವಾಗಿ ತೊಡಗಿಕೊಳ್ಳಬೇಕು. ಕಲಿತ ವಿಷಯಗಳನ್ನು ಜ್ಞಾನವಾಗಿಸಿಕೊಳ್ಳಬೇಕು. ಪರಸ್ಪರ ಸಹಕಾರ ಮತ್ತು ಸ್ವಪ್ರಯತ್ನ ಇದ್ದಾಗ ಸಾಧನೆ ಸಾಧ್ಯ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಅವರು...

ಸಪ್ತಗಿರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿದ 12 ಅಡಿ ಉದ್ದದ ಬೈಕ್

ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಧುನಿಕ ಮೋಟಾರ್ ಬೈಕ್ ಸಿದ್ಧಪಡಿಸಿದ್ದಪಡಿಸಿದ್ದು, ಅದರ ವಿಶೇಷ ಲಕ್ಷಣಗಳು ಆಟೊಮೊಬೈಲ್ ಎಂಜಿನಿಯರಿಂಗ್ ಕ್ಷೇತ್ರದ ಪರಿಣಿತರನ್ನೇ ಬೆರಗುಗೊಳಿಸಿದೆ. ಅತ್ಯಂತ ಹೆಚ್ಚು ಟಾರ್ಕ್ ಹೊಂದಿರಿವ ಈ ಬೈಕ್, ಹೆಚ್ಚಿನ ವೇಗವನ್ನು ದೃಷ್ಟಿಯಲ್ಲಿರಿಸಿಕೊಂಡು ದಕ್ಷತೆಯಿಂದ ರೂಪಿಸಲಾಗಿದೆ. ಆಟೋಮೊಬೈಲ್...

ಸತತ 5ನೇ ಬಾರಿಗೆ ಚಾಂಪಿಯನ್‌ಗಳಾದ ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳು

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಪ್ರಿಲ್ 11 ಹಾಗೂ 12 ರಂದು ನಡೆದ 'ನವಮಾಧ್ಯಮ' ಕುರಿತಾದ ಎರಡು ದಿನಗಳ ರಾಷ್ಟ್ರಮಟ್ಟದ ಸೆಮಿನಾರ್ ಹಾಗೂ ರಾಜ್ಯಮಟ್ಟದ 'ರೈನ್‌ಬೋ' ಮಾಧ್ಯಮೋತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು 5 ನೇ ಬಾರಿಗೆ ಸಮಗ್ರ...

ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಮರುಪರೀಕ್ಷೆ ಮಾರ್ಚ್ 31 ಕ್ಕೆ

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ವಿಷಯದ ಮರುಪರೀಕ್ಷೆ, ಮಾ. 29ರ ಬದಲು ಮಾ. 31ರಂದು ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಒತ್ತಾಯಕ್ಕೆ ಸರ್ಕಾರ ಮಣಿದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ವಿಧಾನ ಪರಿಷತ್‌ ಉಪಸಭಾಪತಿ...

ರಾಘವೇಶ್ವರ ಶ್ರೀಗಳಿಂದ ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣೆ

ಕೆಲವರಲ್ಲಿ ಪ್ರತಿಭೆಗಳಿರತ್ತೆ, ಆದರೆ ಸಾಧನೆ ಮಾಡಲು ಹಣವಿರಲ್ಲ. ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ವಿದ್ಯಾನಿಧಿಯ ಕಲ್ಪನೆ ಮಾಡಲಾಗಿದೆ ಎಂದು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ನುಡಿದರು. ಅವರು ಭಾನುವಾರ, ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ 'ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ...

ಭಾನುವಾರ ಶ್ರೀ ರಾಮಚಂದ್ರಾಪುರ ಮಠದಿಂದ ಹಿಂದುಳಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಮಾರ್ಚ್ 20, 2016 ಭಾನುವಾರದಂದು ಮಧ್ಯಾಹ್ನ 12.30 ಗಂಟೆಗೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಠ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪ್ರಕಟಣೆ...

ಭಾರತೀಯ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರುಃ ಡೊನಾಲ್ಡ್ ಟ್ರಂಪ್

ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೊರಗಟ್ಟಬೇಕಾಗಿಲ್ಲ, ಅವರಂತ ಬುದ್ಧಿವಂತರು ಅಮೆರಿಕಕ್ಕೆ ಅವರು ಯಾವತ್ತೂ ಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಟ್ರಂಪ್‌ ವಲಸೆ ನೀತಿಯನ್ನು ಸರಿಪಡಿಸುವ ಇಂಗಿತವನ್ನು...

ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ

ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ. ಬ್ಯೂಟಿಫುಲ್ ಚಿತ್ರ ಈ ಹಿನ್ನೆಲೆಯಲ್ಲಿ ಕೊಂಚ ಮುಂದುವರಿದು ಪೂರ್ಣಪ್ರಮಾಣದ ಚಲನಚಿತ್ರವೊಂದರ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿರುವ ಅಷ್ಟೂ ಹಾಡುಗಳು ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ ಎಂದು ಉದ್ಯಮಿ ಪೂರಣ್ ವರ್ಮ ಹೇಳಿದರು....

ಸ್ನೇಹ ಶಾಲೆಗೆ ಇನ್ಫೋಸಿಸ್‌ನಿಂದ ಕಂಪ್ಯೂಟರ್ ಕೊಡುಗೆ

ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಕಲಿಕೆಗೆ ಬಹಳ ಮಹತ್ವವಿದೆ. ಆದ್ದರಿಂದ ಇನ್ಫೋಸಿಸ್‌ ಸಂಸ್ಥೆಯು ಶಾಲೆಗಳಿಗೆ ಕಂಪ್ಯೂಟರ್‌ಗಳ ಕೊಡುಗೆ ನೀಡುತ್ತಿದೆ. ನಾವು ಕಂಪ್ಯೂಟರನ್ನು ಸದುದ್ದೇಶಕ್ಕೂ ಬಳಸಬಹುದು ಅಥವಾ ದುರುಪಯೋಗಿಸಲೂ ಸಾಧ್ಯ. ಆದರೆ ಅದರ ಸದ್ಬಳಕೆ ಮಾಡುವ ಜಾಣ್ಮೆ ನಮ್ಮಲ್ಲಿರಬೇಕು ಎಂಬುದಾಗಿ ಸಂಸ್ಥೆಯ ಸೀನಿಯರ್ ಪ್ರೊಜೆಕ್ಟ್...

ಪರಿಸರದ ಜೊತೆಗೆ ಕಲಿಕೆ ಅರ್ಥಪೂರ್ಣವಾದುದುಃ ಸುರೇಶ್ ಕುಮಾರ್

ಪರಿಸರ ಹಾಗೂ ಮಕ್ಕಳ ನಡುವಿನ ಗೆಳೆತನದ ಕಲಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಒಂದು ಶಾಲೆಯೆಂದರೆ ಹೀಗೂ ಇರಬಹುದೇ! ಎಂಬ ಅಚ್ಚರಿ ಸ್ನೇಹ ಶಾಲೆಯನ್ನು ನೋಡಿದಾಗ ಉಂಟಾಗುತ್ತದೆ. ಈ ರಾಜ್ಯ ಇಡೀ ಸುತ್ತಿರುವ ನನಗೆ ಸ್ನೇಹ ಶಾಲೆಯಂತಹ ಶಾಲೆ ಇನ್ನೊಂದು ಕಂಡಿಲ್ಲ....

ರೋಹಿತ್ ಆತ್ಮಹತ್ಯೆ ದಲಿತ, ದಲಿತೇತರರ ವಿಚಾರವಲ್ಲಃ ಸಚಿವೆ ಸ್ಮೃತಿ ಇರಾನಿ

ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಕುರಿತು ಬುಧವಾರ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು, ರೋಹಿತ್ ಆತ್ಮಹತ್ಯೆ ದಲಿತ, ದಲಿತೇರರ ವಿಚಾರವಲ್ಲ. ಕೆಲವರಿಂದ ಈ ವಿಚಾರದಲ್ಲಿ ರಾಜಕೀಯ ಮಾಡುವ ಯತ್ನ...

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಇತ್ತೀಚಿಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯೂ ಜರುಗಿತು. ಅಧ್ಯಕ್ಷರಾಗಿ ಕು| ಕೃತಿಕಾ ಮದುವೆಗದ್ದೆ, ಉಪಾಧ್ಯಕ್ಷರಾಗಿ ಚಿನ್ಮಯ್, ಕಾರ್ಯದರ್ಶಿಯಾಗಿ ಆದಿತ್ಯಕೇಶವ ಕೆ ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ...

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲ್ ಬೆದರಿಕೆ

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲೆ ಬಂದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇ-ಮೇಲ್ ಅನ್ನು ಪರೀಕ್ಷಿಸಿ, ಕಳುಹಿಸಿದವರ ಮೂಲವನ್ನು ಇನ್ನೂ ಕಂಡು ಹಿಡಿಯಬೇಕಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ಸುತ್ತಮುತ್ತ ಕಟ್ಟೆಚ್ಚರ...

ದೇವರಾಜ ಅರಸು ಜನ್ಮ ಶತಮಾನೋತ್ಸವ ಅದ್ಧೂರಿ ಆಚರಣೆಗೆ ಸರ್ಕಾರ ನಿರ್ಧಾರ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವವನ್ನು ಅದ್ಧೂರಿಯಾಗಿ ವರ್ಷಪೂರ್ತಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ, ಆ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅರಸು ಶತಮಾನೋತ್ಸವ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನ್ಮ ಶತಮಾನೋತ್ಸವದ ಆಚರಣೆ...

ಮಂಗಳೂರಿನಲ್ಲಿ ಭಯಾನಕ ಅಂಟು ರೋಗ ಪತ್ತೆ: ವಿದ್ಯಾರ್ಥಿಗಳ ಪ್ರತಿಭಟನೆ

ಮಂಗಳೂರಿನಲ್ಲಿ 'ಎಂಆರ್‌ಎಸ್‌ಎ'(Methicillin-resistant Staphylococcus aureus ) ಎಂಬ ಭಯಾನಕ ಅಂಟುರೋಗ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ಯಾಕ್ಟಿರಿಯಾದಿಂದ ಗಾಳಿಯ ಮೂಲಕ ಹರಡುವ 'ಎಂಆರ್‌ಎಸ್‌ಎ' ಕಾಯಿಲೆ ಮಂಗಳೂರಿನ ಬಲ್ಮಠದಲ್ಲಿರುವ ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್ ಕಾಲೇಜ್‌ನ 120 ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಯೂರೋಪಿಯನ್ ರಾಷ್ಟ್ರಗಳಲ್ಲಿ ಕಂಡುಬರುವ ಈ ಭಯಾನಕ...

ದೇಶದಲ್ಲಿ ಗುಣಮಟ್ಟದ ಶಿಕ್ಷಕರ ಕೊರತೆಯಿದೆ: ಪ್ರಣಬ್ ಮುಖರ್ಜಿ

ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟವಿರುವ ಶಿಕ್ಷಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆ ಇದ್ದು, ಇದು ನಮ್ಮ ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಒಂದು ವಾರಗಳ ಕಾಲ ನಡೆಯುತ್ತಿರುವ ಇನ್ ರೆಸಿಡೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ...

ಪಿಯುಸಿ ತರಗತಿಗಳು ಆರಂಭ: ಪಠ್ಯಕ್ರಮದ ಬಗ್ಗೆ ಇನ್ನೂ ಬಗೆಹರಿಯದ ಗೊಂದಲ

ಪಿಯುಸಿ ತರಗತಿಗಳು ಆರಂಭವಾಗಿದ್ದರೂ ಪಠ್ಯಕ್ರಮದ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಾಜ್ಯಾದ್ಯಂತ 2015-16ನೇ ಸಾಲಿನ ದ್ವಿತೀಯ ಪಿಯು ಜೂ.1ರಿಂದ ಹಾಗೂ ಪ್ರಥಮ ಪಿಯು ತರಗತಿಗಳು ಜೂ.15ರಿಂದ ಆರಂಭವಾಗಲಿವೆ. ಆದರೆ ವಿಜ್ನಾನ ವಿಭಾಗದ ವಿದ್ಯಾರ್ಥಿಗಳಿಗೆ ಯಾವ ಪಠ್ಯಕ್ರಮ ಅಳವಡಿಸಬೇಕೆಂಬ ಬಗ್ಗೆ ಪದವಿ ಪೂರ್ವ...

ಸಿಇಟಿ 2015 ಫಲಿತಾಂಶ ಪ್ರಕಟ

2015-16ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಮೇ 12, 13ರಂದು ನಡೆದಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸಿಇಟಿ ಫಲಿತಾಂಶ ಪ್ರಕಟಿಸಿದರು. ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್ ವಿಭಾಗದ ಸಿಇಟಿ...

ಸ್ಮೃತಿ ಇರಾನಿ-ರಾಹುಲ್ ಗಾಂಧಿ ಟ್ವಿಟರ್ ವಾರ್

ಐಐಟಿ-ಮದ್ರಾಸಿನ ವಿದ್ಯಾರ್ಥಿ ಸಂಘಟನೆ ನಿಷೇಧ ವಿಚಾರ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್‌ ನಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದು, ’ಮೋದಿ...

ಐಐಟಿ ವಿದ್ಯಾರ್ಥಿ ಸಂಘಟನೆ ನಿಷೇಧ: ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ಆರೋಪದ ಹಿನ್ನೆಲೆಯಲ್ಲಿ ಮದ್ರಾಸ್ ಐಐಟಿ ಕಾಲೇಜು ವಿದ್ಯಾರ್ಥಿ ಸಂಘಟನೆ, 'ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್' ಅನ್ನು ನಿಷೇಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ...

ವೃತ್ತಿ ಶಿಕ್ಷಣ ಕೋರ್ಸ್ ದುಬಾರಿ: ವಿದ್ಯಾರ್ಥಿಗಳಿಗೆ ಸಂಕಷ್ಟ

ಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನಿಂದ ವೃತ್ತಿ ಶಿಕ್ಷಣ ಕೋರ್ಸ್ ಗಳಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ನಡೆದ ಚರ್ಚೆ ಬಳಿಕ ಪ್ರೆಅವೇಶ ಶುಲ್ಕ ಹೆಚ್ಚಳ ಮಾಡಲು...

ಪಿಯು ಫಲಿತಾಂಶ ಗೊಂದಲ: ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಿಮ್ಮನೆ

ವಿದ್ಯಾರ್ಥಿಗಳಿಗೆ ವರುಷ, ಪಿಯು ಬೋರ್ಡ್ ಗೆ ನಿಮಿಷ.. ವಿದ್ಯಾರ್ಥಿಗಳು ವರ್ಷವಿಡೀ ನಡೆಸಿದ ಪ್ರಯತ್ನಗಳಿಗೆ ಪಿಯು ಮಂಡಳಿ ನೀರೆರೆದಿದ್ದು, ಅವರ ಭವಿಷ್ಯಗಳ ಮೇಲೆಯೇ ಆಟವಾಡುತ್ತಿದೆ. ದ್ವಿತೀಯ ಪಿಯು ಮೌಲ್ಯಮಾಪನದಲ್ಲಿ ಉಂಟಾಗಿರುವ ತಪ್ಪುಗಳ ವಿರುದ್ಧ ಕಳೆದ ಕೆಲವು ದಿನಗಳಿಂದ ಹೋರಾಡುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಇನ್ನಷ್ಟು ತೀವ್ರತೆ...

ದ್ವಿತೀಯ ಪಿಯು ಫಲಿತಾಂಶ ಗೊಂದಲ: ರೊಚ್ಚಿಗೆದ್ದ ವಿದ್ಯಾರ್ಥಿಗಳು

ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟಣೆಯಲ್ಲಿ ಭಾರೀ ಪ್ರಮಾಣದ ಗೊಂದಲ, ಎಡವಟ್ಟುಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಆತಂಕಕ್ಕೀಡಾಗಿದ್ದು, ಕಂಗಾಲಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 18ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಒಂದೊಂದು ವೆಬ್ ಸೈಟ್ ನಲ್ಲಿ ಒಂದೊಂದು ರೀತಿಯ ಫಲಿತಾಂಶ...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

2015ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ದ್ವಿತೀಯ, ಉತ್ತರ ಕನ್ನಡ ತೃತೀಯ ಹಾಗೂ ಗದಗ ಕೊನೆಯ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಶೇ.93.09ರಷ್ಟು, ಉಡುಪಿ ಶೇ. 92.32, ಉತ್ತರ...

ಫೇಸ್ ಬುಕ್ ನಲ್ಲಿ ಧರ್ಮ ನಿಂದನೆ: ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

'ಸಾಮಾಜಿಕ ಜಾಲತಾಣ'ದಲ್ಲಿ ಧರ್ಮ ನಿಂದನೆ ಮಾಡಿದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಅಮಿಶ್ ಕಾಟೆ ಎಂಬ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ, ಗೋಧ್ರಾ ಘಟನೆ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಫೇಸ್ ಬುಕ್ ನಲ್ಲಿ ಕಮೆಂಟಿಸಿದ್ದಕ್ಕಾಗಿ ಪೊಲೀಸರು ಆತನನ್ನು...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ತೆರಳುತ್ತಿದ್ದ 14 ಯುವಕರ ಬಂಧನ

ಪ್ರಮುಖ ಬೆಳವಣಿಗೆಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐ.ಎಸ್.ಐ.ಎಸ್)ಯನ್ನು ಸೇರಲು ತೆರಳುತ್ತಿದ್ದ 14 ಮಂದಿ ಯುವಕರನ್ನ ಹೈದ್ರಾಬಾದ್ ಪೊಲೀಸರು ತಡೆದಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ 14 ಮಂದಿ ಯುವಕರನ್ನು ಹೈದ್ರಾಬಾದ್ ನ ವಿಮಾನ ನಿಲ್ದಾಣದಲ್ಲಿ...

ಐಸಿಸ್ ಸೇರಿದ್ದ ಹೈದರಾಬಾದ್ ಯುವಕ ಸಿರಿಯಾದಲ್ಲಿ ಬಲಿ

ಐಸಿಸ್ ಉಗ್ರಗಾಮಿ ಸಂಘಟನೆ ಸೇರಿದ್ದ ಹೈದರಾಬಾದ್ ನ ಇಂಜಿನಿಯರಿಂಗ್ ವಿದ್ಯಾರ್ಥಿ, ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ಮಾಹಿತಿ ತಿಳಿಸಿವೆ. ಸಾವನ್ನಪ್ಪಿರುವ ವಿದ್ಯಾರ್ಥಿ 25ವರ್ಷದ ಹನೀಫ್ ವಾಸೀಂ ಎಂದು ತಿಳಿದುಬಂದಿದೆ. 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ....

ಇಂದಿನಿಂದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಆರಂಭ

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಸೋಮವಾರ ಆರಂಭವಾಗಿದೆ. ಪ್ರಸಕ್ತ ಸಾಲಿಗೆ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 3,038 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ರಾಜ್ಯದ 13,693 ಪ್ರೌಢ ಶಾಲೆಗಳ 4,52,634 ಬಾಲಕರು ಮತ್ತು 4,03,804 ಬಾಲಕಿಯರು ಸೇರಿ ಒಟ್ಟು 8,56,638 ವಿದ್ಯಾರ್ಥಿಗಳು...

ಬಿಜೆಪಿ ಸದಸ್ಯತ್ವ ಪಡೆಯದ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲ

ರಾಷ್ಟ್ರೀಯ ಶಾಲೆಗಳಲ್ಲಿ ಒಂದಾಗಿರುವದೆಹಲಿಯ ರಾನ್‌ ಇಂಟರ್ ನ್ಯಾಶನಲ್‌ ಸ್ಕೂಲ್‌, ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಅಧಿಕೃತವಾಗಿಯೇ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಶಿಕ್ಷಕ ಸಿಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಕೇಳಿಕೊಂಡಿದೆ. ಇದೇನೂ ಒತ್ತಾಯದ ಸದಸ್ಯತ್ವ ಅಭಿಯಾನವಲ್ಲ; ಯಾರೂ ಕೂಡ ಸ್ವ ಇಚ್ಛೆಯಿಂದ ಬಿಜೆಪಿಯನ್ನು...

ಭಾರತ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ: ಕ್ಷಮೆ ಕೋರಿದ ಜರ್ಮನ್ ವಿವಿ ಪ್ರಾಧ್ಯಾಪಕಿ

'ಭಾರತ' ರೇಪಿಸ್ಟ್ ಗಳ ರಾಷ್ಟ್ರ ಎಂಬ ಕಾರಣ ನೀಡಿ ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ್ದ ಜರ್ಮನಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರನ್ನು ಭಾರತದಲ್ಲಿರುವ ಜರ್ಮನಿ ರಾಯಭಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಲೈಪ್ಜಿಗ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ಜರ್ಮನಿಯ ರಾಯಭಾರಿ ಮೈಕೆಲ್ ಸ್ಟೀನರ್, ಮಿತಿಮೀರಿದ ಸಾಮಾನ್ಯೀಕರಣವನ್ನು ಅನುಸರಿಸುವ...

ಭಾರತೀಯ ವಿದ್ಯಾರ್ಥಿಗೆ ಜರ್ಮನ್ ವಿವಿಯಲ್ಲಿ ಪ್ರವೇಶ ನಿರಾಕರಣೆ!

ಭಾರತದ ರೇಪ್ ಕಲ್ಚರ್ ನ್ನೇ ಕಾರಣವಾಗಿಟ್ಟುಕೊಂಡು ಜರ್ಮನಿಯ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ಲೈಪ್ಜಿಗ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯಲು ಭಾರತೀಯ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವವಿದ್ಯಾನಿಲಯದ ಮುಖ್ಯಸ್ಥರು, ಭಾರತದಲ್ಲಿರುವ ಅತ್ಯಾಚಾರ ಸಂಸ್ಕೃತಿಯ ಕಾರಣ ನೀಡಿ ವಜಾಗೊಳಿಸಿದ್ದಾರೆ. ತಮ್ಮ ಬಳಿ...

ಕೆಂಪಾಪುರ ಜಂಕ್ಷನ್ ಬಳಿ ಭೀಕರ ರಸ್ತೆ ಅಪಘಾತ: ಸ್ಕೈವಾಕ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

'ನೀರಿನ ಟ್ಯಾಂಕರ್' ಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯನ್ನು ಖಂಡಿಸಿ ಹೆಬ್ಬಾಳದಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಂಪಾಪುರ ಜಂಕ್ಷನ್ ಬಳಿಯ ದೇವನಹಳ್ಳಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿ ವಾಹನಗಳು ಅತಿ ವೇಗವಾಗಿ ಚಲಿಸುತ್ತವೆ, ಪರಿಣಾಮ, ಅತಿ...

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ವಿದ್ಯಾರ್ಥಿಗಳಿಗೆ ಮೋದಿ ಕರೆ

ಪರೀಕ್ಷಾ ಸಮಯ ಹತ್ತಿರ ಬರುತ್ತಿರುವಂತೆ ವಿದ್ಯಾರ್ಥಿಗಳಲ್ಲಿ ಹುರುಪು ತುಂಬಿದ ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಮನ್‌ ಕೀ ಬಾತ್‌'ನಲ್ಲಿ ಕರೆ ನೀಡಿದ್ದಾರೆ. ಪ್ರಮುಖವಾಗಿ ಸ್ಪರ್ಧಾತ್ಮಕ, ಮಂಡಳಿ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂಜೆ ರೇಡಿಯೋ ಭಾಷಣ ಮಾಡಿದ ಪ್ರಧಾನಿ ಮೋದಿ,...

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗೆ ಪ್ರಧಾನಿ ಮೋದಿ ಖಂಡನೆ

'ಪಾಕಿಸ್ತಾನ'ದಲ್ಲಿ ವಿದ್ಯಾರ್ಥಿಗಳ ಹತ್ಯೆ ಮಾಡಿರುವ ತಾಲೀಬಾನ್ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು ಮಾತಿನಲ್ಲಿ ವರ್ಣಿಸಲಾಗದ ಕ್ರೂರತೆ ಎಂದಿದ್ದಾರೆ. ಪಾಕ್ ನ ಸೈನಿಕ ಶಾಲೆಯ ಮೇಲೆ ಉಗ್ರರ ದಾಳಿ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮೋದಿ, ವಿದ್ಯಾರ್ಥಿಗಳ ಸಾವಿಗೆ ಸಂತಾಪ...

ಗ್ರಂಥಾಲಯದಲ್ಲಿ ವಿದ್ಯಾರ್ಥಿನಿಯರಿಗೆ ನಿರ್ಬಂಧ ಹೇರಿದ ಅಲಿಘರ್ ಮುಸ್ಲಿಂ ವಿವಿ

ವಿದ್ಯಾರ್ಥಿಗಳನ್ನು ಓದಿನಿಂದ ಚಿತ್ತವಿಕ್ಷೇಪಗೊಳಿಸುವ ಹೊಸ ವಸ್ತುವೊಂದನ್ನು ಪ್ರಸಿದ್ಧ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಕಂಡು ಹಿಡಿದಿದೆ! ಹೌದು, ಅಲೀಘರ್ ಮುಸ್ಲಿಂ ವಿವಿ ಪ್ರಕಾರ, ವಿದ್ಯಾರ್ಥಿನಿಯರು ಯುವಕರನ್ನು ದಿಕ್ಕು ತಪ್ಪಿಸುತ್ತಾರಂತೆ! ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳಿಗೆ ಮೌಲಾನ ಆಜಾದ್ ಗ್ರಂಥಾಲಯವನ್ನು ಬಳಸುವುದಕ್ಕೆ ಅಲೀಘರ್ ಮುಸ್ಲಿಂ ವಿವಿ...

ನಾನು ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ: ಪ್ರಧಾನಿ ಮೋದಿ

ನಾನು ಎಂದಿಗೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ,ಪ್ರಶಸ್ತಿಗಳನ್ನೂ ಪಡೆದಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಏಮ್ಸ್ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಪದಕ ಪ್ರದಾನ ಮಾಡಿದ ಪ್ರಧಾನಿ ಮೋದಿ, ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ನಾನು ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ, ಯಾವುದೇ ಪ್ರಶಸ್ತಿಗಳನ್ನು ಗಳಿಸಿರಲಿಲ್ಲ...

ಜನಾಂಗೀಯ ಹಲ್ಲೆಗೆ ಕಿರಣ್ ರಿಜ್ಜು ಖಂಡನೆ

ಗುರ್ ಗಾಂವ್ ನಲ್ಲಿ ಇಬ್ಬರು ನಾಗಾಲ್ಯಾಂಡ್ ವ್ಯಕ್ತಿಗಳ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಜನಾಂಗೀಯ ಹಲ್ಲೆ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈಶಾನ್ಯ ರಾಜ್ಯದ ವಿದ್ಯಾರ್ಥಿಗಳನ್ನು ಭೇಟಿಯಾದ ಕಿರಣ್ ರಿಜ್ಜು, ಜನಾಂಗೀಯ ಹಲ್ಲೆಯನ್ನು...

ಸುಳ್ಯದ ಸ್ನೇಹಶಾಲೆಯಲ್ಲಿ ‘ಮಾಮ್’ ಮಂಗಳನ ಕಕ್ಷೆಯಲ್ಲಿ ನಿಲ್ಲಿಸಿದ ಸಂಭ್ರಮ

ಭಾರತದ ವಿಜ್ಞಾನಿಗಳು ಮಾಡಿರುವ ಅಭೂತಪೂರ್ವ, ಸಾಧನೆಯ ಫಲವಾಗಿ 24 -09-2014 ರಂದು ಮಂಗಳ ಗ್ರಹಕ್ಕೆ ‘ಮಾಮ್ ನೌಕೆ’ ( Mars Orbitary Mission) ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಯಲ್ಲಿ ನಿಲ್ಲಿಸಿರುವುದು ಒಂದು ಐತಿಹಾಸಿಕ ಯಶಸ್ಸು. ಇದನ್ನು ಭಾರತೀಯರೆಲ್ಲರೂ ಸಂಭ್ರಮದಿಂದ ಆಚರಿಸುವುದು...

ಪ್ರಸಕ್ತ ಸಾಲಿನಲ್ಲಿ 16 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ: ಕಿಮ್ಮನೆ ರತ್ನಾಕರ

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 16 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖಾ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಇಲಾಖೆಯಲ್ಲಿ ಸುಮಾರು 28 ಸಾವಿರ ಹುದ್ದೆಗಳು ಬಾಕಿ ಇದ್ದು ಸಧ್ಯ...

ಸರ್ಕಾರಿ ಉರ್ದು ಶಾಲೆಗೆ ಇಸ್ಕಾನ್ ನಿಂದ ಬಿಸಿಯೂಟ ಪೂರೈಕೆಗೆ ತಡೆ

'ಡಿ.ಜೆ ಹಳ್ಳಿ'ಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಬಿಸಿಯೂಟ ಸೇವನೆಯಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಒಂದು ವಾರಗಳ ಕಾಲ ಇಸ್ಕಾನ್ ಸಂಸ್ಥೆಯಿಂದ ಬಿಸಿಯೂಟ ಪೂರೈಕೆಯನ್ನು ತಡೆಹಿಡಿಯಲಾಗಿದೆ. ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಸೀನ್ ಸೆ.22ರಂದು ಡಿ.ಜೆ ಸರ್ಕಾರಿ ಉರ್ದು ಶಾಲೆಗೆ ಭೇಟಿ...

ಬಿಸಿಯೂಟ ಸೇವಿಸಿ 150ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ

'ಬಿಸಿಯೂಟ' ತಯಾರಿಕೆಯಲ್ಲಿ ಬೇಜವಾಬ್ದಾರಿತನ ಮತ್ತೊಮ್ಮೆ ಸಾಬೀತಾಗಿದ್ದು, ಬಿಸಿಯೂಟ ಸೇವಿಸಿದ್ದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬೆಂಗಳೂರಿನ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿ.ಜೆ.ಹಳ್ಳಿಯ ಮೋದಿ ರಸ್ತೆಯಲ್ಲಿರುವ ಉರ್ದು ಶಾಲೆಯ...

ಜೆ.ಎನ್.ಯು ವಿವಿ ಚುನಾವಣೆ: ನಾಲ್ಕೂ ಸ್ಥಾನಗಳಲ್ಲಿ ಜಯಗಳಿಸಿದ ಎಬಿವಿಪಿ

ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಲ್ಲಾ 4 ಸ್ಥಾನಗಳಲ್ಲೂ ಎಬಿವಿಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಸೆ.12ರಂದು ಜೆ.ಎನ್.ಯು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎಲ್ಲಾ ವಿಭಾಗಗಳಲ್ಲೂ ಎಬಿವಿಪಿ...

ಶಿಕ್ಷಕರ ದಿನಾಚರಣೆ: ವಿದ್ಯಾರ್ಥಿಗಳನ್ನು ಮೋಡಿ ಮಾಡಿದ ಮೋದಿ ಮಾಸ್ತರ್!

ಕಠಿಣ ಪರಿಶ್ರಮ ಪಟ್ಟರೆ ಯಾವುದೇ ಕನಸು ನನಸಾಗದೇ ಇರಲು ಸಾಧ್ಯವಿಲ್ಲ, ಓರ್ವ ವಿದ್ಯಾರ್ಥಿಗೆ ಅಪಾರ ಕನಸಿರಬೇಕು, ಕಠಿಣ ಪರಿಶ್ರಮದಿಂದ ಕನಸುಗಳನ್ನು ನನಸಾಗಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆ.5ರಂದು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಮಾಣಿಕ್ ಶಾ ಆಡಿಟೋರಿಯಂ...

ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳು, ಶಿಕ್ಷಕರ ಜತೆ ಪ್ರಧಾನಿ ಸಂವಾದ

ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಅತ್ಯುತ್ತಮ ಶಿಕ್ಷಕರ ಆಯ್ಕೆಯಲ್ಲಿ ಸ್ವತ: ಪ್ರಧಾನಿ ಮೋದಿಯವರೇ ಆಸಕ್ತಿಹೊಂದಿದ್ದು, ಶಿಕ್ಷಕರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited