Untitled Document
Sign Up | Login    
Dynamic website and Portals
  

Related News

ಕರ್ತವ್ಯ ನಿರತ ರಾಜ್ಯದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ರಾಜಗೋಪಾಲ ನಗರದ ನಿವಾಸಿ ನರೇಂದ್ರ ಎಂಬ ಯೋಧನೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿ...

ಜಮ್ಮು-ಕಾಶ್ಮೀರ: ಯೋಧನ ಮನೆ ಮೇಲೆ ದಾಳಿ ನಡೆಸಿ ಬಿಎಸ್ ಎಫ್ ಯೋಧನನ್ನು ಹತ್ಯೆಗೈದ ಉಗ್ರರು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬಿಎಸ್ಎಫ್ ಯೋಧರೊಬ್ಬರ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬಿಎಸ್ ಎಫ್ ಯೋಧ ಸಾವನ್ನಪ್ಪಿದ್ದು, ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂದಿದ್ದಾರೆ. ಬಂಡಿಪೋರ ಜಿಲ್ಲೆಯ ಹಜಿನ್ ಟೌನ್ ನಲ್ಲಿರುವ ಯೋಧನ ಮನೆಗೆ ಕಳೆದ...

ಬಾರಾಮುಲ್ಲಾ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಓರ್ವ ಯೋಧ ಹುತಾತ್ಮ

ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಹಿನ್ನಲೆಯಲ್ಲಿ ಈ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಉಗ್ರರ ಗುಂಪು ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಓರ್ವ ಯೋಧ...

ಉರಿ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಹುತಾತ್ಮರಾದ 17 ಯೋಧರು

ಜಮ್ಮು-ಕಾಶ್ಮೀರದ ಸೇನಾ ಮುಖ್ಯ ಕಛೇರಿಯ ಮೇಲೆ ಉಗ್ರರು ದಾಳಿ ನಡೆಸಿದ್ದು, 17 ಯೋಧರು ಹುತಾತ್ಮರಾಗಿದ್ದು, 12 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಾರಾಮುಲಾ ಪ್ರದೇಶದ ಉರಿ ಸೆಕ್ಟರ್ ನಲ್ಲಿರುವ ಸೇನಾ ಮುಖ್ಯ ಕಛೇರಿ ಬಳಿ ಉಗ್ರರು ಬೆಳಗಿನ ಜಾವ 5:30 ರ...

ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ

ರಕ್ಷಾ ಬಂಧನ ಹಿನ್ನಲೆಯಲ್ಲಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗೆ ತೆರಳಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜಮ್ಮು-ಕಾಶ್ಮೀರದ ಸಿಯಾಚಿನ್ ಔಟ್ ಪೊಸ್ಟ್ ಗೆ ವಾಯು ಪಡೆಯ ವಿಶೇಷ...

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಗಡಿ ಭದ್ರತಾ ಪಡೆ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಕೆಲ ದಿನಗಳಿಂದ ಉಗ್ರರ ಒಳ ನುಸುಳುವಿಕೆ ಹೆಚ್ಚಾಗಿದ್ದು, ಗಡಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಉಗ್ರರ ವಿರುದ್ಧ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲು ಸೈನಿಕರು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ...

ಬಿಎಸ್​ಎಫ್ ಯೋಧರಿಂದ ಲಷ್ಕರ್ ಸಂಘಟನೆಯ ಕಮಾಂಡರ್ ಬಂಧನ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ​ನನ್ನು ಬಂಧಿಸಿದ್ದಾರೆ. ಇಲ್ಲಿನ ಸೋಗಮ್ ಪ್ರಾಂತ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಬು ಉಕಾಶ್ ಉರ್ಫ್ ಹಂಜುಲ್ಲಾ ಎಂಬಾತನನ್ನು ಬಿಎಸ್​ಎಫ್ ಪಡೆ ಬಂಧಿಸಿ, ವಿಚಾರಣೆಗೊಳಪಡಿಸಿವೆ. ಪಾಕಿಸ್ತಾನ ಮೂಲದ...

ಭಾರತ-ಪಾಕ್ ಗಡಿಯಲ್ಲಿ ನಾಲ್ವರು ಉಗ್ರರ ಹತ್ಯೆ

ಭಾರತ-ಪಾಕಿಸ್ತಾನದ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ತಾಂಗ್‌ಧಾರ್‌ ಸೆಕ್ಟರ್‌ನಲ್ಲಿ ಒಳನುಸುಳುತ್ತಿದ್ದ ನಾಲ್ವರು ಉಗ್ರರನ್ನು ಬಿಎಸ್ ಎಫ್ ಯೋಧರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಗಾಯಗೊಂಡ ಬಗ್ಗೆ ವರದಿಯಾಗಿದೆ. ಕಳೆದ ಮೂರು ದಿನಗಳಲ್ಲಿ...

ಬಿಎಸ್ ಎಫ್ ಯೋಧರಿಂದ ಪಾಕ್ ನ ಇಬ್ಬರು ಸ್ಮಗ್ಲರ್ ಗಳ ಹತ್ಯೆ

ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ, ಮಾದಕದ್ರವ್ಯ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರು ವ್ಯಕ್ತಿಗಳನ್ನು ಬಿಎಸ್ ಎಫ್ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪಾಕಿಸ್ತಾನ ದಿಂದ ಪಂಜಾಬ್‌ ನ ಫಾಕಿಜಾ ಗಡಿಯಲ್ಲಿ ಬೆಳಗಿನ ಜಾವ ಭಾರತಕ್ಕೆ ನುಸುಳತ್ನೆಸಿದ ಮೂರು ಸ್ಮಗ್ಲರ್ ಗಳ ಪೈಕಿ ಇಬ್ಬರನ್ನು ಬಿಎಸ್​ಎಫ್...

ಸೇನಾ ಶಸ್ತ್ರಾಸ್ತ್ರ ಡಿಪೋದಲ್ಲಿ ಅಗ್ನಿ ದುರಂತ: 20 ಯೋಧರು ಸಜೀವ ದಹನ

ದೇಶದ ಅತಿ ದೊಡ್ಡ ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಅಧಿಕಾರಿಗಳು ಹಾಗೂ 18 ಮಂದಿ ಯೋಧರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ ಮಹಾರಾಷ್ಟ್ರದ ಪುಲಗಾಂವ್ ಸಮೀಪದ ವಾರ್ಧಾದಲ್ಲಿರುವ ಕೇಂದ್ರ ಶಸ್ತ್ರಾಸ್ತ್ರ ಡಿಪೋ(ಸಿಎಡಿ)ದಲ್ಲಿ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.ಅಗ್ನಿ...

ರಾಮ ಮಂದಿರ-ಬಾಬ್ರಿ ಮಸೀದಿ ವಿವಾದ: ಶಾಂತಿ ಮಾತುಕತೆ ನಡೆಸಿದ ಹಿಂದೂ-ಮುಸ್ಲಿಂ ಮುಖಂಡರು

ಅಯೋಧ್ಯಾ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಹಿಂದೂ-ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ಉಭಯ ಸಮುದಾಯದ ಮುಖಂಡರುಗಳಾದ ಅಖಿಲ ಭಾರತ ಅಖಾರ ಪರಿಷದ್​ನ ನೂತನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹಾಗೂ ಹಿರಿಯ ಮುಸ್ಲಿಮ್...

ರಾಮ ಮಂದಿರ ನಿರ್ಮಾಣ: ವಿಶ್ವ ಹಿಂದು ಪರಿಷತ್ ನಿಂದ ಡಿಸೆಂಬರ್‌ 31ರ ವರೆಗೆ ಗಡುವು

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ವಿಶ್ವ ಹಿಂದು ಪರಿಷತ್‌, ಕೇಂದ್ರ ಸರ್ಕಾರಕ್ಕೆ ಅವಧಿ ನೀಡಿದ್ದು, ಡಿಸೆಂಬರ್‌ 31ರ ಗಡುವನ್ನು ವಿಧಿಸಿದೆ. ಉಜ್ಜಯಿನಿಯ ಮಹಾಕಾಂಭಮೇಳದಲ್ಲಿ ನೆರೆದ ಸಂತರು ಹಾಗೂ ಯುವಕರನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ ನ ಪ್ರಧಾನ ಕಾರ್ಯದರ್ಶಿ...

ಸಿಯಾಚಿನ್ ಹಿಮಪಾತದಲ್ಲಿ 10 ಯೋಧರು ನಾಪತ್ತೆ

ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾದ ಹಿನ್ನಲೆಯಲ್ಲಿ 10 ಯೋಧರು ನಾಪತ್ತೆಯಾಗಿರುವುದಾಗಿ ಬುಧವಾರ ವರದಿಯಾಗಿದೆ. ಭಾರತ -ಪಾಕಿಸ್ತಾನ ಗಡಿ ಪ್ರದೇಶದ ಸಿಯಾಚಿನ್‌ನ ಉತ್ತರ ಪ್ರಾಂತ್ಯದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಹಿಮಪಾತದಡಿಯಲ್ಲಿ ಸಿಲುಕಿರುವ ಯೋಧರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಮದ್ರಾಸ್‌ ರೆಜಿಮೆಂಟ್‌ಗೆ...

ಅಯೋಧ್ಯೆ ಪೈಗಂಬರ್‌ ಜನ್ಮಭೂಮಿಯಲ್ಲ, ಶ್ರೀ ರಾಮನ ಜನ್ಮಭೂಮಿಃ ರಾಮ್ ದೇವ್

ಅಯೋಧ್ಯೆ ಪ್ರವಾದಿ ಮಹಮದ್‌ ಪೈಗಂಬರ್‌ ಅವರ ಜನ್ಮಭೂಮಿಯಲ್ಲ ಎಂದು ಹಿಂದೂ ಮತ್ತು ಮುಸ್ಲಿಂರಿಗೆ ಗೊತ್ತಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. ಶ್ರೀರಾಮ ನಮ್ಮ ಹೆಮ್ಮೆ. ಆಯೋಧ್ಯೆ ರಾಮನ ಜನ್ಮಭೂಮಿಯೇ ಹೊರತು ಪ್ರವಾದಿ ಪೈಗಂಬರ್‌ ಅವರ ಜನ್ಮ ಭೂಮಿಯಲ್ಲ ಎಂದು...

ವಿಶ್ವಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ನಿಧನ

ವಿಶ್ವಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಮಂಗಳವಾರ ನಿಧನರಾಗಿದ್ದಾರೆ. ಕಳೆದ ಒಂದು ವಾರದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿಂಘಾಲ್ ಅವರನ್ನು ಗುರಗಾಂವ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಶೋಕ್ ಸಿಂಘಾಲ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಬಲಗಡೆಯ ಕೆಳಗಿನ ಲೋಬ್ ನ್ಯುಮೋನಿಯಾದ ಚಿಕಿತ್ಸೆ...

ಉಗ್ರರ ದಾಳಿಗೆ ನಾಲ್ವರು ಭಾರತೀಯ ಯೋಧರು ಬಲಿ

ಜಮ್ಮು-ಕಾಶ್ಮೀರದ ಕುಪ್ವಾರಾ ದಲ್ಲಿ ಉಗ್ರವಾದಿಗಳು ಮತ್ತು ಗಡಿ ಭದ್ರತಾ ದಳದ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸೋಮವಾರ 4 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಓರ್ವ ಉಗ್ರ ಹತನಾಗಿದ್ದಾನೆ. ಹಂದ್ವಾರಾದಲ್ಲಿನ ಹಾಫ‌ೂರ್ದಾ ಅರಣ್ಯ ಪ್ರದೇಶದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಮಾಹಿತಿ ಪಡೆದ...

ಏಕ ಶ್ರೇಣಿ-ಏಕ ಪಿಂಚಣಿ ಯೋಜನೆ: ಸರಕಾರದಿಂದ ಇಂದು ಘೋಷಣೆ ನಿರೀಕ್ಷೆ

ನಿವೃತ್ತ ಯೋಧರು ದಶಕಗಳಿಂದ ಒತ್ತಾಯಿಸುತ್ತಿದ್ದ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಶನಿವಾರ ಘೋಷಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ನಿವೃತ್ತ ಯೋಧರ ಬೇಡಿಕೆಯಂತೆ ಸರಕಾರ ಈ ಯೋಜನೆಯನ್ನು ಜುಲೈ 1, 2014ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲು...

ಏಕ ಶ್ರೇಣಿ-ಏಕ ಪಿಂಚಣಿ ಯೋಜನೆ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಶನಿವಾರ ಮಾಜಿ ಸೈನಿಕರಿಗೆ ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ, ಮನೋಹರ ಪಾರಿಕ್ಕರ್ ಅವರು ಈ ವಿಷಯ ತಿಳಿಸಿದರು. ಪಾರಿಕ್ಕರ್ ಅವರ ಘೋಷಣೆಯ ಮುಖ್ಯಾಂಶಗಳುಃ *...

ಏಕ ಶ್ರೇಣಿ ಏಕ ಪಿಂಚಣಿಯ ವಾರ್ಷಿಕ ಪರಿಷ್ಕರಣೆ ಸಾಧ್ಯವಿಲ್ಲ: ಅರುಣ್ ಜೇಟ್ಳಿ

ನಿವೃತ್ತ ಯೋಧರ ಬಹುವರ್ಷಗಳ ಬೇಡಿಕೆಯಾದ, 'ಏಕ ಶ್ರೇಣಿ ಏಕ ಪಿಂಚಣಿ'ಯನ್ನು ಜಾರಿಗೆ ತರಲು ಸರಕಾರ ಬದ್ಧವಾಗಿದೆ. ಆದರೆ ಪಿಂಚಣಿಯನ್ನು ಪ್ರತಿವರ್ಷ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಳಿ ಹೇಳಿದ್ದಾರೆ. ಸರಕಾರ ಸೇವೆಯಿಂದ 35-38 ವಯಸ್ಸಿನಲ್ಲೇ ನಿವೃತ್ತರಾಗುವ ಯೋಧರ...

ಅಯೋಧ್ಯಾ ರಾಮ ಜನ್ಮಭೂಮಿ ಯಾತ್ರಾರ್ಥಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಿ: ಸುಪ್ರೀಂ

ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ ಸ್ಥಳಕ್ಕೆ ಆಗಮಿಸುವ ಯಾತ್ರಿಗಳಿಗೆ ಸಾಧ್ಯವಾದಷ್ಟು ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಆದೇಶ ನೀಡಿದೆ. ಏನಾದರೂ ಮಾಡೋಣ, ಸಾಧ್ಯವಾದರೆ ಸ್ಥಳದ ದುರಸ್ತಿ ಮಾಡಿ ಮತ್ತು ಅಲ್ಲಿನ ಪ್ರವಾಸಿಗರಿಗೆ...

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ, ಜಮ್ಮು ಕಾಶ್ಮೀರದ ಪೋಂಚ್​ ಜಿಲ್ಲೆಯ ಗಡಿಯಲ್ಲಿ ಶುಕ್ರವಾರ ಬೆಳಗಿನ ಜಾವ ಗುಂಡಿನ ಮಳೆಗೈದಿದೆ. ಬೆಳಗಿನ ಜಾವ ಸುಮಾರು 3:30 ಕ್ಕೆ ಪೋಂಚ್​ನ ಸೌಜಿಯಾನ ಗಡಿಪ್ರದೇಶದಲ್ಲಿ ಪ್ರಾರಂಭವಾರ ಗುಂಡಿನ ಚಕಮಕಿ ಇವರೆಗೂ ಮುಂದುವರಿದಿದೆ. ಪಾಕಿಸ್ತಾನದ...

ಜಮ್ಮು ಕಾಶ್ಮೀರ ಉಗ್ರರ ದಾಳಿಯಲ್ಲಿ ಇಬ್ಬರು ಬಿ ಎಸ್ ಎಫ್ ಯೋಧರ ಬಲಿ

ಜಮ್ಮು ಕಾಶ್ಮೀರದಲ್ಲಿ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ಬುಧವಾರ ಬಿ ಎಸ್ ಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಯೋಧರು ಮೃತರಾಗಿದ್ದು, ಐದು ಜನ ಯೊಧರು ಗಾಯಗೊಂಡಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ನಡೆದ ದಾಳಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆ...

ಜಮ್ಮುವಿನ ಉಧಮ್ ಪುರ್ ನಲ್ಲಿ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರನ ಜೀವಂತ ಸೆರೆ

ಜಮ್ಮುವಿನ ಉಧಮ್ ಪುರ್ ನಲ್ಲಿ ಬುಧವಾರ ಬೆಳಗ್ಗೆ ಬಿ ಎಸ್ ಎಫ್ ಯೋಧರ ಮೇಲೆ ದಾಳಿ ನಡೆಸಿದ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಉಗ್ರ ಉಸ್ಮಾನ್ ಪಾಕಿಸ್ತಾನದ ಪೈಸ್ಲಾಬಾದ್ ನವನು ಎಂದು ಪ್ರಾಧಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಮ್ಮುವಿನ...

16ನೇ ಕಾರ್ಗಿಲ್‌ ವಿಜಯ ದಿವಸ

16ನೇ ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಜು. 20 ರಂದು ಆರಂಭವಾದ ಕಾರ್ಗಿಲ್‌ ವಿಜಯ ದಿವಸದ ಕಾರ್ಯಕ್ರಮಗಳು ಭಾನುವಾರ ಸಂಪನ್ನಗೊಳ್ಳಲಿವೆ. ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ಸೂಚಿಸಿ ಮಾತನಾಡಿದ ಭಾರತೀಯ ಸೇನೆ ಮುಖ್ಯಸ್ಥ ಜ| ದಲ್ಬಿರ್‌ ಸಿಂಗ್‌ ಸುಹಾಗ್‌, ಮತ್ತೂಂದು...

ದೇಶದ ಅಭಿವೃದ್ಧಿಯೇ ಕೇಂದ್ರದ ಮೊದಲ ಆದ್ಯತೆ: ರಾಜನಾಥ್ ಸಿಂಗ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ಮತ್ತು ಸಂವಿಧಾನದ 370ನೇ ಪರಿಚ್ಚೇದ ರದ್ದು ಮಾಡುವುದಕ್ಕಿಂತ ಮುಖ್ಯವಾಗಿ ದೇಶದ ಅಭಿವೃದ್ಧಿ ಮಾಡುವುದೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಎನ್ ಡಿಎ ಸರ್ಕಾರ ಒಂದು ವರ್ಷ...

ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ: 6 ಯೋಧರ ಸಾವು

ಛತ್ತೀಸ್‌ ಗಢದಲ್ಲಿ ಅಟ್ಟಹಾಸ ಮುಂದುವರಿಸಿರುವ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡು ಹಾಗೂ ನೆಲಬಾಂಬ್‌ ಬಳಸಿ ಮತ್ತೆರಡು ದಾಳಿಗಳನ್ನು ನಡೆಸಿದ್ದಾರೆ. ಈ ಘಟನೆಗಳಲ್ಲಿ 6 ಯೋಧರು ಹತರಾಗಿ, 8 ಮಂದಿ ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ಶನಿವಾರದಿಂದ ಮಾವೋವಾದಿ ನಕ್ಸಲರು ನಡೆಸುತ್ತಿರುವ ನಾಲ್ಕನೇ...

ಪಂಜಾಬ್ ಗಡಿ ಪ್ರದೇಶದಲ್ಲಿ ಪಾಕ್ ದಾಳಿ: ಮೂವರು ಯೋಧರಿಗೆ ತೀವ್ರ ಗಾಯ

ಅಮೃತಸರದ ಚೆಕ್ ಪೋಸ್ಟ್ ಬಳಿ ಪಾಕಿಸ್ತಾನ ಗುಂಡುಹಾರಿಸಿದ ಪರಿಣಾಮ 3 ಬಿ.ಎಸ್.ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏ.10ರಂದು ತಡ ರಾತ್ರಿ ಈ ಘಟನೆ ನಡೆದಿದ್ದು, ಭಾರತದ ಯೋಧರು ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಯೋಧರು ಪ್ರಾಣಾಪಾಯದಿಂದ...

ನಕ್ಸಲ್ ದಾಳಿಗಿಂತ ಆತ್ಮಹತ್ಯೆ, ರೋಗಗಳಿಗೇ ಸಿ.ಆರ್.ಪಿ.ಎಫ್ ಯೋಧರು ಬಲಿ

ನಕ್ಸಲ್‌ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ ಕೇಂದ್ರೀಯ ಭದ್ರತಾ ಪಡೆ (ಸಿ.ಆರ್.ಪಿ.ಎಫ್) ಯೋಧರು ನಕ್ಸಲರ ಗುಂಡು, ಬಾಂಬ್‌ ದಾಳಿಗಿಂತ ಆತ್ಮಹತ್ಯೆ, ಕಾಯಿಲೆಗಳಿಗೇ ಹೆಚ್ಚು ಬಲಿಯಾಗುತ್ತಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕ ಕಾರ್ಯದೊತ್ತಡ ಹಾಗೂ ಕರ್ತವ್ಯ ಸ್ಥಳದಲ್ಲಿನ ಕೆಟ್ಟ ವಾತಾವರಣ ಸಹಿಸಲಾರದೆ 2012ರಿಂದ 2014ರವರೆಗೆ...

ರಾಮ ಮಂದಿರ ನಿರ್ಮಾಣ: ವಿಶ್ವಹಿಂದೂ ಪರಿಷತ್ ನಿಂದ ದೇಶಾದ್ಯಂತ ರಾಮಮಹೋತ್ಸವ ಆಯೋಜನೆ

'ಅಯೋಧ್ಯೆ'ಯಲ್ಲಿ ರಾಮ ಮಂದಿರ ನಿರ್ಮಿಸುವ ಸಂಬಂಧ ವಿಶ್ವಹಿಂದೂ ಪರಿಷತ್ ಸಂಘಟನೆ, ದೇಶಾದ್ಯಂತ ರಾಮ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಮಾರ್ಚ್ 21ಅಥವಾ 22ರಿಂದ ದೇಶಾದ್ಯಂತ ರಾಮ ಮಹೋತ್ಸವ ಪ್ರಾರಂಭವಾಗಲಿದ್ದು ಏಪ್ರಿಲ್ 1 ವರೆಗೆ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ನ...

ರಾಜ್ ಪಥ್ ಗೆ ರಾಷ್ಟ್ರಪತಿಗಳ ಆಗಮನ ಪರೇಡ್ ಕಾರ್ಯಕ್ರಮ ಪ್ರಾರಂಭ

ನವದೆಹಲಿಯಲ್ಲಿ ಐತಿಹಾಸಿಕ ಗಣಾರಾಜ್ಯೋತ್ಸವ ದಿನಾಚರಣೆಗೆ ಚಾಲನೆ ದೊರೆತಿದ್ದು, ರಾಜ್ ಪಥ್ ನಿಂದ ಪಥ ಸಂಚಲನ ಕಾರ್ಯಕ್ರಮ ಪ್ರಾರಂಭವಾಗಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಬ್ಬರು ಹುತಾತ್ಮ ಯೋಧರಾದ ಮುಕುಂದ್ ವರದರಾಜನ್ ಹಾಗೂ ನೀರಜ್ ಕುಮಾರ್ ಸಿಂಗ್ ಅವರಿಗೆ ಅಶೋಕ ಚಕ್ರ...

ಅಯೋಧ್ಯೆಯ ರಾಮ್ ಲಲ್ಲಾ ಮಂದಿರದಿಂದ ಯುಪಿ ಸರ್ಕಾರಕ್ಕೆ 300ಕೋಟಿ ರೂಪಾಯಿ ಆದಾಯ!

ಉತ್ತರ ಪ್ರದೇಶದ ಸರ್ಕಾರಕ್ಕೆ ರಾಮಭಕ್ತರಿಂದ ಬರೋಬ್ಬರಿ 300 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಅಯೋಧ್ಯೆಗೆ ಭೇಟಿ ನೀಡುವ ಭಕ್ತಾದಿಗಳಿಂದ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ಇಷ್ಟೊಂದು ಬೃಹತ್ ಮೊತ್ತದ ಹಣ ಜಮಾವಣೆಯಾಗಿದೆ. ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್...

ಇಂಡೋ-ಪಾಕ್‌ ಗಡಿ ಪ್ರದೇಶದಲ್ಲಿ ಹಫೀಜ್‌ ಸಯೀದ್‌

ಮುಂಬೈ ದಾಳಿಯ ರೂವಾರಿ, ಲಷ್ಕರ್‌ ಎ ತಯ್ಯಬಾ ಸಂಸ್ಥಾಪಕ ಹಫೀಜ್‌ ಸಯೀದ್‌ ಕಳೆದ ಶನಿವಾರ ಭಾರತ-ಪಾಕ್‌ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದ ವೇಳೆ ಜಮ್ಮು ಕಾಶ್ಮೀರದ ಸಾಂಬಾ ವಲಯದ ಆಚೆಗಿರುವ ಪಾಕಿಸ್ಥಾನೀ ರೇಂಜರ್‌ಗಳ ಗಡಿ ಹೊರ ಠಾಣೆಯಲ್ಲಿ ಕಾಣಿಸಿಕೊಂಡಿದ್ದ ಎಂಬ ಮಾಹತಿ...

ಪ್ರತಿಯೊಬ್ಬ ಭಾರತೀಯನ ಸಾವಿಗೆ 4 ಪಾಕಿಸ್ತಾನಿಗಳನ್ನು ಕೊಲ್ಲುತ್ತೇವೆ: ಸಾಧ್ವಿ

ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆಯ ಗುಂಡಿನ ದಾಳಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಸರಬರಾಜು ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಪ್ರತಿ ಭಾರತೀಯ ಯೋಧನ ಸಾವಿಗೆ ಭಾರತ ನಾಲ್ಕು ಪಾಕಿಸ್ತಾನಿಗಳನ್ನು ಕೊಲ್ಲಲಿದೆ ಎಂದು ಹೇಳುವ ಮೂಲಕ ಮತ್ತೆ ವಿವಾದ...

ಪಾಕ್‌ ದಾಳಿಗೆ ಭಾರತೀಯ ಯೋಧ ಬಲಿ

ಜಮ್ಮು-ಕಾಶ್ಮೀರದ ಸಾಂಬಾ ವಲಯದ ಗಡಿಯಲ್ಲಿ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಯೋಧನೊಬ್ಬ ಬಲಿಯಾಗಿದ್ದು, ಇನ್ನೊರ್ವ ಸೇನಾ ಯೋಧ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಎರಡು ಸೇನಾ ಪೋಸ್ಟ್‌ಗಳನ್ನು ಗುರಿಯಾಗಿರಿಸಿಕೊಂಡು ಪಾಕ್‌...

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 21 ಬಲಿ

ಶಾಂತ ರೀತಿಯಿಂದ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಳಿ ತಪ್ಪಿಸಲು ವ್ಯವಸ್ಥಿತ ರೀತಿಯಲ್ಲಿ ಅಖಾಡಕ್ಕೆ ಇಳಿದಿರುವ ಉಗ್ರರು, ಜಮ್ಮು- ಕಾಶ್ಮೀರದ ವಿವಿಧೆಡೆ ಶುಕ್ರವಾರ ಒಂದೇ ದಿನ ನಾಲ್ಕು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 11 ಭದ್ರತಾ ಸಿಬ್ಬಂದಿ, ಇಬ್ಬರು ನಾಗರಿಕರು ಸೇರಿ 21...

ಛತ್ತೀಸ್ ಘಡದಲ್ಲಿ ನಕ್ಸಲರಿಂದ 13 ಸಿ.ಆರ್.ಪಿ.ಎಫ್ ಯೋಧರ ಹತ್ಯೆ

'ಛತ್ತೀಸ್ ಘಡ'ದಲ್ಲಿ ನಕ್ಸಲರು ನಡೆಸಿರುವ ದಾಳಿಗೆ ಇಬ್ಬರು ಅಧಿಕಾರಿಗಳು ಸೇರಿದಂತೆ 13 ಮಂದಿ ಸಿ.ಆರ್.ಪಿ.ಎಫ್ ಯೋಧರು ಸಾವನ್ನಪ್ಪಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಡಿ.1ರಂದು ಸಂಜೆ ನಕ್ಸಲರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಸೇನಾ ಮೂಲಗಳ ಪ್ರಕಾರ ಈ ವರ್ಷದಲ್ಲಿ ನಕ್ಸಲರು...

ಸೇನಾ ಬಂಕರಲ್ಲಿ ಅಡಗಿದ್ದ ಉಗ್ರನ ಹತ್ಯೆ

ಸೈನಿಕರ ವೇಷ ಧರಿಸಿ, ಜಮ್ಮು-ಕಾಶ್ಮೀರದ ಅರ್ನಿಯಾ ವಲಯದಲ್ಲಿನ ಸೇನೆಯ ತಾತ್ಕಾಲಿಕ ಬಂಕರ್‌ನಲ್ಲಿ ಅಡಗಿ ಕುಳಿತು ಏಳು ಮಂದಿಯನ್ನು ಹತ್ಯೆಗೈದಿದ್ದ ನಾಲ್ವರು ಉಗ್ರರ ಪೈಕಿ ಕೊನೆಯವನನ್ನು ಕೊಲ್ಲುವಲ್ಲಿ ಯೋಧರು ಸಫ‌ಲರಾಗಿದ್ದಾರೆ. ಇದರ ನಡುವೆಯೇ ಉಗ್ರರಿಗೆ ಸಹಾಯ ಮಾಡಲೆಂದೋ, ಏನೋ ಇದೇ ಅರ್ನಿಯಾ ಗಡಿಯಲ್ಲಿ...

ಉಗ್ರರ ದಾಳಿಗೆ ಯೋಧರು ಸೇರಿ 6 ಜನ ಬಲಿ

ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಮುನ್ನಾದಿನ ಇಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಭಾರೀ ದಾಳಿ ನಡೆಸಿರುವ ಉಗ್ರರ ಗುಂಪೊಂದು, ಮೂವರು ಯೋಧರು ಸೇರಿದಂತೆ 6 ಜನರನ್ನು ಬಲಿ ಪಡೆದಿದೆ. ಈ ವೇಳೆ ಯೋಧರು ನಡೆಸಿದ...

ಜಮ್ಮು-ಕಾಶ್ಮೀರ ಗಡಿಯಲ್ಲಿ ನುಸುಳಿದ ಉಗ್ರರು: ಸೇನಾ ಸಿಬ್ಬಂದಿಯಿಂದ ಗುಂಡಿನ ದಾಳಿ

'ಜಮ್ಮು-ಕಾಶ್ಮೀರ'ದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ಗುಂಡಿನ ದಾಳಿ ನಡೆದಿದೆ. ಪ್ರತ್ಯೇಕವಾದಿ ಗೆರಿಲ್ಲಾಗಳು ಭಾರತದ ಗಡಿಯೊಳಕ್ಕೆ ಅತಿಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸ್ ಮೂಲಗಳ ಪ್ರಕಾರ, 3-4 ಜನರಿದ್ದ ಉಗ್ರರ...

ಮಾಛಿಲ್ ನಕಲಿ ಎನ್ ಕೌಂಟರ್ ಪ್ರಕರಣ: 7 ಯೋಧರಿಗೆ ಜೀವಾವಧಿ ಶಿಕ್ಷೆ

ಜಮ್ಮು-ಕಾಶ್ಮೀರದ ಕುಪ್ವಾರ ಬಳಿಯ ಮಾಛಿಲ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸೇನಾಧಿಕಾರಿಗಳು ಹಾಗೂ ನಾಲ್ವರು ಯೋಧರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2010ರ ಏಪ್ರಿಲ್ ನಲ್ಲಿ ಜಮ್ಮು-ಕಾಶ್ಮೀರದ ಉತ್ತರ-ಕಾಶ್ಮೀರದಲ್ಲಿನ ಬಳಿಯ ಮಾಛಿಲ್ ನಲ್ಲಿ ಮೂವರು ಯುವಕರನ್ನು ಭಾರತೀಯ ಸೇನೆ ಎನ್ ಕೌಂಟರ್...

ಸಿಯಾಚಿನ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಸಿಯಾಚಿನ್ ಗೆ ತೆರಳಲಿರುವ ಪ್ರಧಾನಿ ಮೋದಿ, ಯೋಧರನ್ನು ಭೇಟಿಯಾಗಲಿದ್ದಾರೆ. ಈಗಾಗಲೇ ನವದೆಹಲಿಯಿಂದ ಪ್ರಧಾನಿ ಮೋದಿ ಸಿಯಾಚಿನ್ ಗೆ ತೆರಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ...

ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ, ಶೀಘ್ರ ರಾಮಮಂದಿರ ನಿರ್ಮಾಣ ಮಾಡಲಿ: ಅಶೋಕ್ ಸಿಂಘಾಲ್

'ಅಯೋಧ್ಯೆ'ಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಮತ್ತೆ ಚರ್ಚೆಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು ಬಿಜೆಪಿ...

ಭಾರತ ತಮ್ಮ ಮೇಲೆ ನಡೆಸಿದ್ದು ಸಣ್ಣ ಪ್ರಮಾಣದ ಯುದ್ಧ: ಪಾಕ್ ರೇಂಜರ್ ತಾಹಿರ್ ಜಾವೇದ್

'ಭಾರತ', ಪಾಕಿಸ್ತಾನದ ಮೇಲೆ ನಡೆಸಿರುವ ಪ್ರತಿದಾಳಿಗೆ ಬೆಚ್ಚಿರುವ ಪಾಕಿಸ್ತಾನ, ಭಾರತ ತನ್ನ ಮೇಲೆ ನಡೆಸಿದ್ದು ಸಣ್ಣ ಪ್ರಮಾಣದ ಯುದ್ಧ ಎಂದು ಆರೋಪಿಸಿದೆ. ಸಿಯಾಲ್ಕೋಟ್ ಗಡಿ ಪ್ರದೇಶದಲ್ಲಿ ಭಾರತ ನಡೆಸಿರುವ ದಾಳಿಯನ್ನು ಸಣ್ಣ ಪ್ರಮಾಣದ ಯುದ್ಧವೆಂದು ಹೇಳಿರುವ ಡೈರೆಕ್ಟರ್ ಜನರಲ್ ಹಾಗೂ ರೇಂಜರ್ಸ್...

ಜಮು-ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರತೀಯ ಯೋಧರು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರು ಒಳನುಸುಳಲು ಯತ್ನಿಸುತ್ತಿದ್ದರು. ಈ ವೇಳೆ ಭಾರತೀಯ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಇಲ್ಲಿನ ಕುಪ್ವಾರಾ ಜಿಲ್ಲೆಯಲ್ಲಿ...

ಜಮ್ಮುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಹೋದ 9ಯೋಧರು

'ಜಮ್ಮು'ವಿನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ 9ಯೋಧರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಬಳಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ಪ್ರವಾಹದ ರಭಸಕ್ಕೆ ದೋಣಿ ಸಮೇತ ಯೋಧರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ...

ಗಡಿಯಲ್ಲಿ ಉಗ್ರರ ದಾಳಿ: ಭಾರತೀಯ ಯೋಧ ಬಲಿ

ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆಯಿಂದ ಒಂದೆಡೆ ಗುಂಡಿನ ದಾಳಿ ಮುಂದುವರೆದರೆ ಇನ್ನೊಂದೆಡೆ ಉಗ್ರರ ದಾಳಿ ಮುಂದುವರೆದಿದೆ. ಗಡಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಬಲಿಯಾಗಿದ್ದಾರೆ. ಜಮ್ಮುವಿನ ಕುಪ್ವಾರ ಪ್ರದೇಶದಲ್ಲಿನ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ನಡೆಸಿದ ಗುಂಡಿನ...

ಪಾಕ್ ನಿಂದ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ

ಜಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಜಮ್ಮುವಿನ ಅಂತರಾಷ್ಟ್ರೀಯ ಗಡಿ ಭಾಗದ ಆರ್.ಎಸ್.ಪುರ ಸೆಕ್ಟರ್ ಹಾಗೂ ಅರ್ನಿಯಾ ಪ್ರದೇಶಗಳಲ್ಲಿ 22 ಬಿಎಸ್ ಫ್...

ಕಾಶ್ಮೀರದ ಗಡಿಯಲ್ಲಿ ಎನ್ ಕೌಂಟರ್

ಜಮು-ಕಾಶ್ಮೀರದಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಕಾಶ್ಮೀರದ ಕುಪ್ವಾರ ಜಿಲ್ಲೆಯ ತಾಂಗ್ಧಾರ್ ಗಡಿನಿಯಂತ್ರಣ ರೇಖೆ ಬಳಿ ಉಗ್ರನೊಬ್ಬನನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ. ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿದ್ದ ವೇಳೆ ಇಲ್ಲಿನ ಧನ್ನಿ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಚಲನವಲನದ ಬಗ್ಗೆ ತಿಳಿದ ಸೇನಾ ಪಡೆ...

ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ನೆಲೆಗಳ ಮೇಲೆ ಷೆಲ್ ದಾಳಿ ನಡೆಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಇದು ಮೂರನೇ ದಾಳಿಯಾಗಿದೆ. ಬಿ.ಎಸ್.ಎಫ್ ಪಡೆಗಳ...

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಆರ್.ಎಸ್ ಪುರ ಸೆಕ್ಟರ್ ನಲ್ಲಿ ಏಳು ಜನ ಬಿ.ಎಸ್.ಎಫ್ ಯೋಧರ ಮೇಲೆ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಆ.16ರ ಮಧ್ಯರಾತ್ರಿಯಿಂದ ಗಡಿ ಪ್ರದೇಶದಲ್ಲಿ ಆರಂಭವಾದ ಗುಂಡಿನ ದಾಳಿ ಆ.17ರ...

ಜಮ್ಮು-ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ

ದೇಶಾದ್ಯಂತ 68ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದರೆ, ಅತ್ತ ಪಾಕಿಸ್ತಾನ ಮಾತ್ರ ತನ್ನ ಹಳೇ ಚಾಳಿ ಬಿಡುತ್ತಿಲ್ಲ, ಒಂದೆಡೆ ಗಡಿ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದರೆ, ಇನ್ನೊಂಡೆದೆ ಮತ್ತೆ ಜಮ್ಮು-ಕಾಶ್ಮೀರದ ವಿಷಯ ಪ್ರಸ್ತಾಪಿಸುತ್ತಿದೆ. ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಸಂಬಂಧ ಮುಂದುವರೆಸಲು ಬಯಸುತ್ತದೆ. ಆದರೆ...

ಪಾಕ್ ವಶದಲ್ಲಿದ್ದ ಭಾರತೀಯ ಯೋಧನ ಹಸ್ತಾಂತರ

ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗಿ ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕ ಭಾರತೀಯ ಯೋಧ ಸತ್ಯಶೀಲ್ ಯಾದವ್ ಅವರನ್ನು ಪಾಕಿಸ್ತಾನ ಸೇನೆ, ಭಾರತ ಸೇನೆಗೆ ಹಸ್ತಾಂತರಿಸಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಚೆಕ್ ಪೋಸ್ಟ್ ಗೆ ಬಿ.ಎಸ್.ಎಫ್ ಯೋಧ ಯಾದವ್ ಅವರನ್ನು ಕರೆತಂದ ಪಾಕ್ ಸೇನೆ,...

ಪಾಕ್ ಬಂಧನಕ್ಕೊಳಗಾಗಿದ್ದ ಬಿ.ಎಸ್.ಎಫ್ ಯೋಧ ಆ.8ರಂದು ಭಾರತಕ್ಕೆ ವಾಪಸ್

ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಬಿ.ಎಸ್.ಎಫ್ ಯೋಧ ಸತ್ಯಶೀಲ್ ಯಾದವ್ ಆ.8ರಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಪಾಕಿಸ್ತಾನ ಗಡಿ ಪ್ರವೇಶಿಸಿದ ಆರೋಪದಡಿ, ಬಂಧಿಸಲಾಗಿದ್ದ ಬಿ.ಎಸ್.ಎಫ್ ಯೋಧ ಸತ್ಯಶೀಲ್ ಅವರನ್ನು ಬಿಡುಗಡೆ ಮಾಡಿಸುವ ಹಿನ್ನೆಲೆಯಲ್ಲಿ ಆ.8ರಂದು ಪಾಕಿಸ್ತಾನ, ಭಾರತ ಗಡಿ ಭದ್ರತಾ ದಳ ಅಧಿಕಾರಿಗಳ ಧ್ವಜ ಸಭೆ ನಡೆಯಿತು....
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited