Untitled Document
Sign Up | Login    
Dynamic website and Portals
  

Related News

ಬಿಬಿಎಂಪಿ ನೂತನ ಮೇಯರ್ ಆಗಿ ಕಾಂಗ್ರೆಸ್ ನ ಸಂಪತ್ ರಾಜ್: ಉಪ ಮೇಯರ್ ಆಗಿ ಜೆಡಿಎಸ್ ನ ಪದ್ಮಾವತಿ ಆಯ್ಕೆ

ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ನೂತನ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆಯಾಗಿದ್ದಾರೆ. ಸಂಪತ್ ರಾಜ್ ಮೇಯರ್ ಆಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಜಯಂತಿ ಅಧಿಕೃತವಾಗಿ ಘೋಷಿಸಿದ್ದಾರೆ. ಬಿಬಿಎಂಪಿಯ 51ನೇ ಮೇಯರ್​ಆಗಿ ಸಂಪತ್​ ರಾಜ್​ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಪಾಲಿಕೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಗೆ ಜಯ...

ಬಿಬಿಎಂಪಿ ಚುನಾವಣೆಃ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ವೇದಿಕೆ ಸಜ್ಜು

ಬಹಳ ನಿರೀಕ್ಷೆ ಉಟ್ಟಿಸಿರುವ ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಚುನಾವಣೆ ಶುಕ್ರವಾರ ನಡೆಯಲಿದೆ. ಬೆಂಗಳೂರು ನಗರ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ನಡೆಯುವ ಈ ಚುನಾವಣೆಯಲ್ಲಿ, ಸದಸ್ಯರು ಕೈ ಎತ್ತಿ ಮತ ಚಲಾಯಿಸುವ ಮೂಲಕ ಮೇಯರ್, ಉಪ...

ಬಿಬಿಎಂಪಿ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಮೈತ್ರಿಕೂಟದ ತೆಕ್ಕೆಗೆ

ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ ಎನ್ ಮಂಜುನಾಥ ರೆಡ್ಡಿ ಬಹುಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಈ ಮೂಲಕ ಬಿಬಿಎಂಪಿ ಆಡಳಿತ ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿದೆ. ಬಿ ಎನ್ ಮಂಜುನಾಥ ರೆಡ್ಡಿ ಮಡಿವಾಳ ವಾರ್ಡ್...

ಬ್ರ್ಯಾಂಡ್ ಬೆಂಗಳೂರು ಖ್ಯಾತಿ ಮುಂದುವರಿಸುತ್ತೇವೆಃ ಸಿಎಂ ಸಿದ್ದರಾಮಯ್ಯ

ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಮಂಜುನಾಥ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಮೇಯರ್ ಆಗಿ ಆಯ್ಕೆ ಆದ ಬಿ ಎನ್ ಮಂಜುನಾಥ ರೆಡ್ಡಿ...

ಐದು ಭಾಗಗಳಾಗಿ ಬಿಬಿಎಂಪಿ ವಿಭಜನೆಗೆ ಸಮಿತಿ ಶಿಫಾರಸು

ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಕುರಿತು ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ ಎಸ್ ಪಾಟೀಲ್ ಸಮಿತಿ ಸೋಮವಾರ ಬಿಬಿಎಂಪಿಯನ್ನು ಐದು ಭಾಗಗಳಾಗಿ ವಿಭಜನೆ ಮಾಡಬೇಕೆಂಬ ಶಿಫಾರಸು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದೆ. ಸೋಮವಾರ ಸಲ್ಲಿಸಿದ ವರದಿಯಲ್ಲಿ ಬಿಬಿಎಂಪಿಯನ್ನು ಐದು...

2015ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ 91 ಸಾಧಕರು

ಪ್ರಸಕ್ತ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 91 ಮಂದಿ ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಏ.3ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮೇಯರ್ ಶಾಂತಕುಮಾರಿ, ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ಸಾಧನೆಗಳನ್ನು ಗುರುತಿಸಿ...

ಬಿಬಿಎಂಪಿ ಅಕ್ರಮ: ಮೇಯರ್,ಉಪಮೇಯರ್,ಆಯುಕ್ತರಿಗೆ ನೋಟಿಸ್

ಬಿಬಿಎಂಪಿ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರ ಮೇಯರ್, ಉಪ ಮೇಯರ್ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಬಿಬಿಎಂಪಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಟಾರಿಯಾ ನೀಡಿದ ತನಿಖಾ ವರದಿ ಅನುಸಾರ ಕ್ರಮ...

ಬಿಬಿಎಂಪಿ ಫೇಸ್ ಬುಕ್ ಖಾತೆಗೆ ಚಾಲನೆ ನೀಡಿದ ಮೇಯರ್ ಶಾಂತಕುಮಾರಿ

ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಅಧಿಕೃತ ಫೇಸ್ ಬುಕ್ ಖಾತೆಗೆ ಮೇಯರ್ ಶಾಂತಕುಮಾರಿ ಡಿ.22ರಂದು ಚಾಲನೆ ನೀಡಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಪಡಿಸುವ ಉದ್ದೇಶದಿಂದ ಫೇಸ್ ಬುಕ್ ಖಾತೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಬಿಬಿಎಂಪಿಯ ಫೇಸ್ ಬುಕ್ ಟೈಮ್ ಲೈನ್ ಮೇಲೆ...

ತೆರಿಗೆ ಪಾವತಿಸದ ಖಾಸಗಿ ಕಂಪನಿಗಳಿಗೆ ಮೇಯರ್ ಡೆಡ್ ಲೈನ್

'ತೆರಿಗೆ ಪಾವತಿ' ಮಾಡದೇ ಇರುವ ವಿವಿಧ ಖಾಸಗಿ ಕಂಪನಿಗಳಿಗೆ ಮೇಯರ್ ಶಾಂತಕುಮಾರಿ ಡೆಡ್ ಲೈನ್ ನೀಡಿದ್ದು 15 ದಿನಗಳಲ್ಲಿ ತೆರಿಗೆ ಪಾವತಿ ಮಾಡುವಂತೆ ಸೂಚಿಸಿದ್ದಾರೆ. ತೆರಿಗೆ ಪಾವತಿ ಮಾಡದೇ ಇರುವ ಬಾಗ್ಮನೆ ಡೆವಲಪರ್ಸ್ ಗೆ ದಿಢೀರ್ ಭೇಟಿ ನೀಡಿದ ಮೇಯರ್ ಶಾಂತಕುಮಾರಿ,...

ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸುವೆ: ಮೇಯರ್ ಎಚ್ಚರಿಕೆ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಮೇಯರ್ ಶಾಂತಕುಮಾರಿ, ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸುವುದಾಗಿ ಗುಡುಗಿದ್ದಾರೆ. ಭನ್ನೇರುಘಟ್ಟ ರಸ್ತೆಯಲ್ಲಿನ ರಾಜಕಾಲುವೆಗೆ ಗೀತಾಲಕ್ಷ್ಮಿ ಎಂಬ ಬಾಲಕಿ ಬಿದ್ದು ಎರಡು ದಿನಗಳಾದರೂ ಬಾಲಕಿ ಈ ವರೆಗೂ ಪತ್ತೆಯಾಗಿಲ್ಲ. ಪತ್ತೆಗಾಗಿ ನಡೆಸುತ್ತಿರುವ ಶೋಧಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಅ.7ರಂದು ಸಂಜೆ...

ಕಸದ ರಾಶಿ ಕಂಡು ಅಧಿಕಾರಿಗಳಿಗೆ ಮೇಯರ್ ತರಾಟೆ

ಕಳೆದ ಎರಡು ದಿನಗಳಿಂದ ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಮೇಯರ್ ಶಾಂತಕುಮಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಿಗ್ಗೆ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್, ಎಲ್ಲೆಲ್ಲೂ ಕಸದ ರಾಶಿಯೇ ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡು, ಕಸ...

ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾಗಿರುವ ಅವ್ಯವಸ್ಥೆಗೆ ಮೇಯರ್ ಶಾಂತಾಕುಮಾರಿ, ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ತುರ್ತು ಸಭೆ ಕರೆದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನಪ್ರತಿನಿಧಿಗಳು ತಲೆತಗ್ಗಿಸುವಂತಾಗಿದೆ. ಕೆಲಸ ಮಾಡಲು ಸಾಧ್ಯವಿಲ್ಲವೆಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು...

ಬಿಬಿಎಂಪಿ ನೌಕರರಿಂದ ಬೃಹತ್ ಪ್ರತಿಭಟನೆ:ಪಾಲಿಕೆ ವ್ಯಾಪ್ತಿಯ ಕೆಲಸಗಳಿಗೆ ಕತ್ತರಿ

'ಬಿಬಿಎಂಪಿ'ಯ ಕೇಂದ್ರ, ವಲಯವಾರು ಹಾಗೂ ವಾರ್ಡ್ ಮಟ್ಟದ ಕಚೇರಿಗಳ ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯ ಬಹಿಷ್ಕರಿಸಿ ಸೆ.22ರಂದು ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ಕಚೇರಿಯ ಬಾಗಿಲು ಮುಚ್ಚಿಸಿ ಅಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಿಂದ...

ಬನ್ನೇರುಘಟ್ಟ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವೇ ಆರಂಭ

ಬೆಂಗಳೂರಿನ ಬನ್ನೇರುಘಟ್ಟದ ಗೊಟ್ಟೆಗೆರೆಯಿಂದ ಮೀನಾಕ್ಷಿ ದೇವಾಲಯದವರೆಗಿನ ಸಂಚಾರ ದಟ್ಟಣೆ ತಗ್ಗಿಸಲು ಶೀಘ್ರವೇ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸುವಂತೆ ಬೃಹತ್ ರಸ್ತೆಗಳು ವಿಭಾಗದ ಅಧಿಕಾರಿಗಳಿಗೆ ಮೇಯರ್ ಶಾಂತಕುಮಾರಿ ಸೂಚನೆ ನೀಡಿದ್ದಾರೆ. ಉಪಮೇಯರ್ ಕೆ.ರಂಗಣ್ಣ ಅವರೊಂದಿಗೆ ತಪಾಸಣೆ ಕೈಗೊಂಡ ಮೇಯರ್ ಕಾಮಗಾರಿ ಆರಂಭಕ್ಕೆ ದಿನಾಂಕ...

ಬಿಬಿಎಂಪಿ ಮೇಯರ್ ಆಗಿ ಶಾಂತಕುಮಾರಿ ಆಯ್ಕೆ

ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಯ ಗೊಂದಲಗಳಿಗೆ ತೆರೆಬಿದ್ದಿದೆ. ಮೇಯರ್ ಆಗಿ ಶಾಂತಕುಮಾರಿ ಹಾಗೂ ಉಪಮೇಯರ್ ಆಗಿ ರಂಗಣ್ಣ ಆಯ್ಕೆಯಾಗಿದ್ದಾರೆ. ಶಾಂತಕುಮಾರಿ ಮೂಡಲಪಾಳ್ಯ ಕಾರ್ಪೋರೇಟರ್ ಆಗಿದ್ದು, ರಂಗಣ್ಣ ಕಾಮಾಕ್ಷಿ ಪಾಳ್ಯ ಕಾರ್ಪೋರೇಟರ್ ಆಗಿದ್ದಾರೆ. ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗಾಗಿ ತೀವ್ರ ಪೈಪೋಟಿ...

ಬಿಬಿಎಂಪಿ ಮೇಯರ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ

ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೆ.ಪಿ.ನಗರ ಕಾರ್ಪರೇಟರ್ ನಂಜುಂಡಪ್ಪ ಹಾಗೂ ರವೀಂದ್ರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಛೇರಿಯಲ್ಲಿ ಸಭೆ ಆರಂಭವಾಗಿದೆ. ಆರ್. ಅಶೋಕ್ ಅವರು ನಂಜುಂಡಪ್ಪ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ...

ಮೋದಿ ಮೋಡಿಗೊಳಗಾದ ಜಪಾನ್ ಜನತೆ

ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದಲ್ಲಿದ್ದು, ಜಪಾನ್ ಜನತೆ 'ಮೋದಿ ಮೋಡಿ'ಗೊಳಗಾಗಿದ್ದಾರೆ. ಪ್ರಧಾನಿ ಪ್ರವಾಸದ ವೇಳೆ ಜಪಾನ್ ನಾಗರಿಕರಿಂದಲೂ ಮೋದಿ ಜಪ(ಮೋದಿ ಪರ ಘೋಷಣೆ) ಕೇಳಿಬಂದಿದ್ದು ವಿಶೇಷವಾಗಿತ್ತು. ಭಾರತದ ಪ್ರಧಾನಿ ಭೇಟಿಗೆ ಜಪಾನ್ ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಮೋದಿ ಗೆ ಸಾಥ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited