Untitled Document
Sign Up | Login    
Dynamic website and Portals
  

Related News

ಮುಂಬೈ: ರೈಲ್ವೇ ನಿಲ್ದಾಣದ ಬಳಿ ಕಾಲ್ತುಳಿತ: 22 ಮಂದಿ ಸಾವು

ಮುಂಬೈನ ಎಲ್ಫಿನ್‍ಸ್ಟೋನ್ ರೈಲ್ವೇ ನಿಲ್ದಾಣದ ಬಳಿ ಕಾಲ್ತುಳಿತ ಉಂಟಾದ ಪರಿಣಾಮ 22 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಮುಂಬೈ ನಗರದಲ್ಲಿ ಭಾರಿ ಮಳೆಯಿಂದಾಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬೆಳಗ್ಗೆ 10.30ರ ವೇಳೆ ಪರೇಲ್...

ಮುಂಬೈ ನೌಕಾ ವಲಯದಲ್ಲಿ ಶಂಕಾಸ್ಪದ ವ್ಯಕ್ತಿಗಳ ಚಲನವಲನ: ತೀವ್ರ ಶೋಧ

ಮುಂಬೈನ ಕಡಲ ತೀರದ ಉರಾನ್ ನೌಕಾ ನೆಲೆ ವಲಯದಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ಕೆಲ ವ್ಯಕ್ತಿಗಳು ಶಂಕಾಸ್ಪದವಾಗಿ ಓಡಾಡುತ್ತಿದ್ದುದಾಗಿ ಶಾಲಾ ಮಕ್ಕಳು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಮುಂಬೈನಾಧ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದ್ದು, ಹೈ...

ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ: 14 ಶವಗಳ ಪತ್ತೆ

ಮುಂಬೈ-ಗೋವಾ ಹೆದ್ದಾರಿಯಲ್ಲಿನ ಬ್ರಿಟಿಷ್ ಕಾಲದಲ್ಲಿ ನಿರ್ವಿುಸಲಾಗಿದ್ದ ಹಳೇ ಸೇತುವೆ ಸಾವಿತ್ರಿ ನದಿಯ ಪ್ರವಾಹಕ್ಕೆ ಸಿಲುಕಿ ಕುಸಿದು ಕೊಚ್ಚಿ ಹೋದ ಬಸ್, ಕಾರು, ಜನರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಎನ್​ಡಿಆರ್​ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಪಡೆಯೊಂದಿಗೆ ಸ್ಥಳೀಯ ಈಜುಗಾರರು ಕೂಡಾ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ...

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಅಬು ಜುಂದಾಲ್ ಸೇರಿದಂತೆ 7 ಜನರಿಗೆ ಜೀವಾವಧಿ ಶಿಕ್ಷೆ

2006ರಲ್ಲಿ ಔರಂಗಾಬಾದ್​ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 26/11ಮುಂಬೈ ದಾಳಿಯ ಸೂತ್ರಧಾರ ಅಬು ಜುಂದಾಲ್ ಸೇರಿ 7 ಜನರಿಗೆ ಮೋಕಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಮೋಕಾ ವಿಶೇಷ ನ್ಯಾಯಾಲಯ ಕಳೆದ ಗುರುವಾರ ಅಬು ಜುಂದಾಲ್...

ಮುಂಬೈ ಶೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡ ಸೆನ್ಸೆಕ್ಸ್ ಸೂಚ್ಯಂಕ

ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು 328 ಅಂಕಗಳ ಏರಿಕೆಯನ್ನು ಕಂಡು 26,000 ಅಂಕಗಳ ಪ್ರಬಲ ಮಟ್ಟವನ್ನು ಪುನರ್‌ ಸಂಪಾದಿಸಿದೆ. ಇಂದಿನ ದಿನಾಂತ್ಯಕ್ಕೆ ಸೆನ್ಸೆಕ್ಸ್‌ 328.37 ಅಂಕಗಳ ಏರಿಕೆಯನ್ನು ಕಂಡು 26,007 ಅಂಕಗಳ ಮಟ್ಟದಲ್ಲಿ ಸ್ಥಿತವಾಗಿದೆ. ಆ ಮೂಲಕ ಅದು ಕಳೆದ...

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ: ಎಲ್ಲಾ ಅರೋಪಿಗಳೂ ದೋಷಮುಕ್ತ

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ 9 ಮಂದಿ ಆರೋಪಿಗಳನ್ನೂ ಮುಂಬೈ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಜಸ್ಟೀಸ್ ವಿ.ವಿ.ಪಾಟೀಲ್ ಪೀಠ, 2006ರ ಮಾಲೇಗಾಂವ್ ಸ್ಫೋಟ ಪ್ರಕರಣದ ಎಲ್ಲಾ 9 ಮಂದಿ ಯುವಕರನ್ನು ದೋಷಾರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿದೆ. ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ, ಪ್ರಕರಣವನ್ನು...

ಮುಂಬೈನಲ್ಲಿ ವಸತಿ ಸಮುಚ್ಛಯದಲ್ಲಿ ಬೆಂಕಿಃ 150ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ

ಮುಂಬೈನ ಭಿವಂಡಿ ಪ್ರದೇಶದಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇಲ್ಲಿ ಕಾಸಿಮ್ ಪುರದ ವಸತಿ ಸಮುಚ್ಛಯದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. 4 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು, ಕಟ್ಟಡದೊಳಗೆ 150ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ 6...

ಭಾರತೀಯ ಸೇನಾಧಿಕಾರಿಗಳನ್ನು ಗೂಢಾಚಾರಿಕೆಗೆ ನೇಮಿಸಲು ಐ ಎಸ್ ಐ ಸೂಚನೆ ನೀಡಿತ್ತುಃ ಹೆಡ್ಲಿ

ಮುಂಬೈ 26/11 ದಾಳಿಯ ನಂತರ ಮಹಾರಾಷ್ಟ್ರದ ಪುಣೆಯಲ್ಲಿನ ಸೇನಾ ನೆಲೆಯ ಸೂಕ್ಷ್ಮ ಪ್ರದೇಶಗಳ ಸಮೀಕ್ಷೆ ನಡೆಸಿರುವುದಾಗಿ ಮಾಫಿ ಸಾಕ್ಷಿಯಾಗಿರುವ ಪಾಕಿಸ್ತಾನ ಮೂಲದ ಅಮೆರಿಕ ಭಯೋತ್ಪಾದಕ ಡೇವಿಡ್ ಹೆಡ್ಲಿ ಶನಿವಾರ 6ನೇ ದಿನದ ವಿಶೇಷ ಟಾಡಾ ನ್ಯಾಯಾಲಯದ ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾನೆ. ವಿಚಾರಣೆಯ ಸಂದರ್ಭದಲ್ಲಿ...

ಉಗ್ರ ಡೇವಿಡ್ ಹೆಡ್ಲಿ ವಿಚಾರಣಾ ಸಂದರ್ಭದಲ್ಲಿ ಇನ್ನಷ್ಟು ಸತ್ಯ ಬಹಿರಂಗ

ಲಷ್ಕರ್ ಇ-ತೈಯ್ಬಾ ಉಗ್ರ ಡೇವಿಡ್ ಹೆಡ್ಲಿಯನ್ನು ಸೋಮವಾರ ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಗಿದ್ದು, 26/11 ಮುಂಬಯಿ ದಾಳಿಯ ಕುರಿತು ಹಲವು ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ. ಅಮೆರಿಕ ಜೈಲಿನಲ್ಲಿರುವ ಹೆಡ್ಲಿ ವಿಚಾರಣೆಯನ್ನು ಮುಂಬೈ ಕೋರ್ಟ್ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಲಾಗುತ್ತಿದೆ. ಡೇವಿಡ್ ಹೆಡ್ಲಿ ಹೇಳಿಕೆಯ ಪ್ರಮುಖ ಅಂಶಗಳು...

ಮುಂಬೈ ಸರಣಿ ರೈಲು ಸ್ಪೋಟಃ ಐವರಿಗೆ ಗಲ್ಲು, ಏಳು ಮಂದಿಗೆ ಜೀವಾವಧಿ ಶಿಕ್ಷೆ

2006ರಲ್ಲಿ ಸಂಭವಿಸಿದ ಮುಂಬೈ ಸರಣಿ ರೈಲು(7/11) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ದೋಷಿಗಳಲ್ಲಿ 5 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಉಳಿದ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈನ ವಿಶೇಷ ಮೋಕಾ ಕೋರ್ಟ್ ಬುಧವಾರ ಶಿಕ್ಷೆಯನ್ನು ಪ್ರಕಟಿಸಿದೆ. ರೈಲಿನೊಳಗೆ...

ದಾವೂದ್ ನೆಲೆ ಪತ್ತೆ: ಹೆದರಿದ ಪಾಕ್, ಪಾತಕಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ತನ್ನ್ ಪರಿವಾರದೊಂದಿಗೆ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಮಹತ್ವದ ಸಾಕ್ಷ್ಯಗಳನ್ನು ಭಾರತ ಬಹಿರಂಗಗೊಳಿಸಿರುವ ಹಿನ್ನಲೆಯೆಲ್ಲಿ ಭಯಗೊಂಡ ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ ಪಾತಕಿಯನ್ನು ಪರಿವಾರ ಸಮೇತ ಉತ್ತರ ಪಾಕಿಸ್ತಾನದ ಮುರ್ರೆ...

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲ್ ಬೆದರಿಕೆ

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲೆ ಬಂದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇ-ಮೇಲ್ ಅನ್ನು ಪರೀಕ್ಷಿಸಿ, ಕಳುಹಿಸಿದವರ ಮೂಲವನ್ನು ಇನ್ನೂ ಕಂಡು ಹಿಡಿಯಬೇಕಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ಸುತ್ತಮುತ್ತ ಕಟ್ಟೆಚ್ಚರ...

ಸಲ್ಮಾನ್ ಖಾನ್ ಮೆದುಳಿಲ್ಲದ ಮನುಷ್ಯ: ರಾಜ್ ಠಾಕ್ರೆ

ಸಲ್ಮಾನ್ ಖಾನ್ ಒಬ್ಬ ಮೆದುಳಿಲ್ಲದ ಮನುಷ್ಯ - ಹೀಗೆಂದು ಬಿರುದು ಕೊಟ್ಟವರು ಸಲ್ಮಾನ್ ನ ಹಳೆಯ ಸ್ನೇಹಿತ, ಎಂ.ಎನ್.ಎಸ್. ಪಕ್ಷದ ಮುಖಂಡ ರಾಜ್ ಠಾಕ್ರೆ. ಮುಂಬೈ ಸರಣಿ ಸ್ಪೋಟ ಸಂಚಿನ ಅಪರಾಧಿ ಯಾಕೂಬ್ ಮೆಮೋನ್ ಪರವಾಗಿ ಅವನ ಗಲ್ಲು...

ಮಹಾರಾಷ್ಟ್ರದಲ್ಲಿ 5ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಫಾಕ್ಸ್ ಕಾನ್ ಒಪ್ಪಂದ

ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಿಂದ ಭಾರತಕ್ಕೆ ಈಗಾಗಲೇ 20 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತದ ವಿದೇಶಿ ಬಂಡವಾಳ ಹೂಡಿಕೆಯ...

2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಒಪ್ಪಿಕೊಂಡ ನಿವೃತ್ತ ತನಿಖಾಧಿಕಾರಿ

2008ರಲ್ಲಿ ನಡೆದ ಮುಂಬೈ ದಾಳಿ ಸಂಚನ್ನು ಪಾಕಿಸ್ತಾನದ ನೆಲದಿಂದಲೇ ಯೋಜಿಸಲಾಗಿತ್ತು ಹಾಗೂ ದಾಳಿಯ ಕಾರ್ಯಾಚರಣೆಯನ್ನು ನಿಯಂತ್ರಿಸಲಾಗಿತ್ತು ಎಂಬ ಮಹತ್ವದ ಮಾಹಿತಿಯನ್ನು ಪಾಕಿಸ್ತಾನದ ಎಫ್.ಐ.ಎ. (ಫೆಡೆರಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ) ಯ ನಿವೃತ್ತ ಡಿ.ಜಿ. ತಾರೀಖ್ ಖೋಸಾ ಬಹಿರಂಗಗೊಳಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಪತ್ರಿಕೆ ಡಾನ್ ಗೆ...

ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಯಾಕುಬ್ ಮೆಮೂನ್​ಗೆ ಗಲ್ಲು ಶಿಕ್ಷೆ

1993ರ ಮುಂಬೈ ಸರಣಿ ಸ್ಪೋಟದ ರೋವಾರಿ ಯಾಕುಬ್ ಮೆಮೂನ್ ​ಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ವಿಫಲವಾದ ಕಾರಣ ಗುರುವಾರ ಆತನನ್ನು...

ಯಾಕೂಬ್ ಮೆಮೂನ್ ಗಲ್ಲು ಶಿಕ್ಷೆ ಬಹುತೇಕ ಖಚಿತ

ಗಲ್ಲು ಶಿಕ್ಷೆಗೆ ತಡೆ ಕೋರಿ 1993 ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಯಾಕೂಬ್ ಮೆಮೂನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಬುಧವಾರ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿದೆ. ಗಲ್ಲು ಶಿಕ್ಷೆ ಖಾಯಂಗೊಳಿಸಿ...

ಯಾಕೂಬ್ ಗಲ್ಲು ವಜಾ ಅರ್ಜಿ: ತೀರ್ಪು ಮುಂದಕ್ಕೆ

ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆಯನ್ನು ವಜಾಗೊಳಿಸಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಇಬ್ಬರು ನ್ಯಾಯಾಧೀಶರುಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಈಗ ಅರ್ಜಿ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. 1993 ರ ಮುಂಬೈ ಸರಣಿ ಸ್ಪೋಟದ ಸಂಚಿನಲ್ಲಿ ಭಾಗಿಯಾದ ಕಾರಣ ಗಲ್ಲು ಶಿಕ್ಷೆಗೆ ಗುರಿಯಾದ...

ಕ್ಷಮೆಯಾಚನೆಯೊಂದಿಗೆ ಯಾಕುಬ್ ಪರ ಸಲ್ಮಾನ್ ಖಾನ್ ಟ್ವೀಟ್ ವಾಪಾಸ್

ಮುಂಬೈ ಸರಣಿ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಯಾಕೂಬ್ ಮೆಮೊನ್ ಪರ ಶನಿವಾರ ರಾತ್ರೆ ಟ್ವೀಟ್ ಮಾಡಿದ್ದ ನಟ ಸಲ್ಮಾನ್ ಖಾನ್, ದೇಶ್ಯಾದಂತ ವ್ಯಾಪಕ ಟೀಕೆ ವ್ಯಕ್ತವಾದುದ್ದರಿಂದ ಭಾನುವಾರ ಸಂಜೆ ಕ್ಷಮೆಯಾಚಿಸಿ ಟ್ವೀಟ್ ವಾಪಸ್ ಪಡೆದಿದ್ದಾರೆ. ಶನಿವಾರ ರಾತ್ರಿ ಸಲ್ಮಾನ್ ಖಾನ್,...

ಭಾರತದ ನ್ಯಾಯಾಂಗದಲ್ಲಿ ಗೌರವವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಲಿ-ಸಾಕ್ಷಿ ಮಹಾರಾಜ್

'ಭಾರತದ ವ್ಯವಸ್ಥೆ ಮತ್ತು ನ್ಯಾಯಾಂಗಕ್ಕೆ ಗೌರವ ಕೊಡಲಾರದವರು ಪಾಕಿಸ್ತಾನಕ್ಕೆ ಹೋಗಬಹುದು, (ಅವರಿಗೆ) ದ್ವಾರ ಮುಕ್ತವಾಗಿದೆ'.. ಇದು ಗಲ್ಲು ಶಿಕ್ಷೆ ಎದುರಿಸುತ್ತಿರುವ ಯಾಕೂಬ್ ಮೆಮೋನ್ ಪರವಾಗಿ ಹೇಳಿಕೆ ನೀಡಿದ ಸಂಸದ ಅಸದುದ್ದಿನ್ ಓವೈಸ್ವಿ ಗೆ ಬಿಜೆಪಿಯ ಸಾಖ್ಶಿ ಮಹಾರಾಜ್ ನೀಡಿದ...

ಮುಂಬೈ ಬ್ಲಾಸ್ಟ್ ಕೇಸ್: ಗಲ್ಲು ಶಿಕ್ಷೆ ತಡೆಯಾಜ್ಞೆಗೆ ಮೆಮೋನ್ ಸುಪ್ರೀಂ ಮೊರೆ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಜು 30 ರಂದು ನಿಗದಿಯಾದ ತನ್ನ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾನೆ. ಯಾಕೂಬ್ ಮೆಮೋನ್ ವಕೀಲರು ಗುರುವಾರ ಸುಪ್ರೀಂ ಕೋರ್ಟ್ ಗೆ ಮನವಿ...

ಮುಂಬೈ ಬ್ಲಾಸ್ಟ್ ಕೇಸ್:ಮೆಮೋನ್ ಮರುಪರಿಶೀಲನಾ ಅರ್ಜಿ ವಜಾ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಮರುಪರಿಶೀಲನಾ (ಕ್ಯೂರೇಟಿವ್) ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಮಂಗಳವಾರ...

ಗ್ರೀಸ್ ಕರಿಛಾಯೆ: ಚೀನಾ ಶೇರು ಮಾರುಕಟ್ಟೆ ಕುಸಿತ, ನಡುಗಿದ ಮುಂಬೈ ಸೆನ್ಸೆಕ್ಸ್

ಹದಗೆಟ್ಟಿರುವ ಗ್ರೀಸ್ ಆರ್ಥಿಕ ಸ್ಥಿತಿ ಇತರ ದೇಶಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಚೀನಾದ ಪ್ರತಿಷ್ಠಿತ ಶಾಂಘೈ ಶೇರು ಮಾರುಕಟ್ಟೆ 7% ಕುಸಿದಿದ್ದು, ಭಾರತದಲ್ಲೂ ಇದರ ವ್ಯತಿರಿಕ್ತ ಪರಿಣಾಮ ಕಂದುಬರುತ್ತಿದೆ. ಗ್ರೀಸ್‌ನ ಭವಿಷ್ಯ ಭಯದ ಪರಿಣಾಮವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ...

ಅರಬ್ಬಿ ಸಮುದ್ರದಲ್ಲಿ ಸರಕು ಸಾಗಣೆ ಹಡಗು ಮುಳುಗಡೆ: 19 ಸಿಬ್ಬಂದಿಗಳ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ. ಐಎನ್ ಎಸ್ ಮುಂಬೈ ನೌಕೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈನಿಂದ 40 ನಾಟಿಕಲ್ ಮೈಲಿ ದೂರದಲ್ಲಿ ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಮುಳುಗಡೆಯಾದ ಘಟನೆ ನಡೆದಿದೆ. ಮುಂಬೈ ನೌಕಾನೆಲೆಗೆ...

ಮುಂಬೈನಲ್ಲಿ ಧಾರಾಕಾರ ಮಳೆ: ಜನ ಜೀವನ ಅಸ್ತವ್ಯಸ್ತ

ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ರೈಲು ನಿಲ್ದಾಣಗಳು, ತಗ್ಗುಪ್ರದೇಶಗಳು, ಜನನಿಬಿಡ ರಸ್ತೆಗಳು ಹಳ್ಳಗಳಂತಾಗಿದ್ದು, ಎಲ್ಲೆಂದರಲ್ಲಿ ನೀರು ತುಂಬಿಕೊಂಡಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾನಗರಿಯಲ್ಲಿ 283 ಮಿ.ಮೀನಷ್ಟು ಮಳೆಯಾಗಿದೆ....

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ, ರೈಲು ಸಂಚಾರ ಬಂದ್

ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಹಾನಗರಿ ಮುಂಬೈ ಜನಜೀವನ ಅಸ್ತವ್ಯಸ್ತವಾಗಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ರಸ್ತೆಗೆ ಚರಂಡಿ ನೀರೆಲ್ಲಾ ಹರಿದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಶುಕ್ರವಾರ...

ಮುಂಬೈ ಬಳಿ ಅಶೋಬಾ ಚಂಡಮಾರುತ: ಭಾರಿ ಮಳೆ ಸಾಧ್ಯತೆ

ಅಶೋಬಾ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಂಬೈನಿಂದ 570 ಕಿ.ಮೀ ದೂರದಲ್ಲಿ ಚಂಡಮಾರುತ ಕಾಣಿಸಿ ಕೊಂಡಿದ್ದು, ಇದು ದಿನ ಕಳೆದಂತೆ ಹೆಚ್ಚು ತೀವ್ರವಾಗುತ್ತಿದೆ. ಪರಿಣಾಮ ಈಗಾಗಲೇ ಮಂಗಳೂರಿನಲ್ಲಿ 8 ಸೆಂ.ಮೀ ಮಳೆಯಾಗಿದ್ದು, ಅದೇ ರೀತಿ ಕರಾವಳಿ ಭಾಗದಲ್ಲಿ...

ಮಾತುಕತೆ ಶುರುವಾಗಲು ಮೂರು ಷರತ್ತುಗಳಿಗೆ ಪಾಕ್ ಒಪ್ಪಬೇಕು: ಭಾರತ

ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳೊಡನೆ ಮಾತುಕತೆ ಶುರುವಾಗಬೇಕೆಂದರೆ ನಮ್ಮ ಮೂರು ಷರತ್ತುಗಳಿಗೆ ಒಪ್ಪಬೇಕು ಎಂದು ಭಾರತ, ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಜತೆಗಿನ ಸಂಬಂಧದ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಗೊಂದಲವಿಲ್ಲ. ನಮ್ಮಲ್ಲಿ ಪಾಕ್ ಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯಿದೆ ಎಂದಿರುವ ವಿದೇಶಾಂಗ ಸಚಿವೆ ಸುಷ್ಮಾ...

ಸಲ್ಮಾನ್ ಖಾನ್ ಹಿಟ್ ಆಂಡ್ ರನ್ ಪ್ರಕರಣ: ಇಂದು ತೀರ್ಪು

ನಟ ಸಲ್ಮಾನ್‌ ಖಾನ್‌ ಆರೋಪಿಯಾಗಿರುವ 2002ರ ಹಿಟ್‌ ಆಂಡ್‌ ರನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್‌ ನ್ಯಾಯಾಲಯ ಬುಧವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ದೋಷಿ ಎಂದು ಸಾಬೀತಾದರೆ 10 ವರ್ಷಗಳವರೆಗೂ ಜೈಲು ಶಿಕ್ಷೆಯನ್ನು...

ಹಿಟ್ ಆಂಡ್ ರನ್ ಪ್ರಕರಣ: ಸಲ್ಮಾನ್ ಖಾನ್ ದೋಷಿ

ನಟ ಸಲ್ಮಾನ್‌ ಖಾನ್‌ ವಿರುದ್ಧದ 2002ರ ಹಿಟ್‌ ಆಂಡ್‌ ರನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್‌ ನ್ಯಾಯಾಲಯ ಬುಧವಾರ ತನ್ನ ತೀರ್ಪನ್ನು ಪ್ರಕಟಿಸಿದ್ದು, ಸಲ್ಮಾನ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಸಲ್ಮಾನ್ ಖಾನ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣಕ್ಕೆ...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ತೆರಳುತ್ತಿದ್ದ 14 ಯುವಕರ ಬಂಧನ

ಪ್ರಮುಖ ಬೆಳವಣಿಗೆಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐ.ಎಸ್.ಐ.ಎಸ್)ಯನ್ನು ಸೇರಲು ತೆರಳುತ್ತಿದ್ದ 14 ಮಂದಿ ಯುವಕರನ್ನ ಹೈದ್ರಾಬಾದ್ ಪೊಲೀಸರು ತಡೆದಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ 14 ಮಂದಿ ಯುವಕರನ್ನು ಹೈದ್ರಾಬಾದ್ ನ ವಿಮಾನ ನಿಲ್ದಾಣದಲ್ಲಿ...

ಉಗ್ರರ ದಾಳಿ ಬಗ್ಗೆ ಎಚ್ಚರಿಕೆ: ಡಿಸಿಪಿಗಳ ಸಭೆ ಕರೆದ ದೆಹಲಿ ಪೊಲೀಸ್ ಆಯುಕ್ತ

ದೆಹಲಿಯಲ್ಲಿ ಉಗ್ರರ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಏ.28ರಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎ ಬಸ್ಸಿ ಅವರು ಎಲ್ಲಾ ಡಿಸಿಪಿಗಳ ಸಭೆ ಕರೆದಿದ್ದಾರೆ. ಜೈಶಾ ಉಗ್ರ ಸಂಘಟನೆಯಿಂದ ದೆಹಲಿಯಲ್ಲಿ ದಾಳಿ ನಡೆಯುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ...

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಗೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಅವರಿಗೆ ಇಸ್ಲಾಮಿಕ್ ಉಗ್ರ ಸಂಘಟನೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ ಬಂದಿದೆ. ಡಿ.ಎನ್.ಎ ಪತ್ರಿಕೆ ವರದಿ ಪ್ರಕಾರ 583847@gmail.com ಎಂಬ ಇ-ಮೇಲ್ ಐಡಿ ಮೂಲಕ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ರಘುರಾಮ್ ರಾಜನ್...

ಮುಂಬೈ ಮೇಲೆ ಮತ್ತೊಂದು ದಾಳಿಗೆ ಉಗ್ರರ ಸಂಚು

26/11ರ ಮುಂಬೈ ದಾಳಿ ಮಾದರಿಯಲ್ಲಿಯೇ ಭಯೋತ್ಪಾದರು ಮುಂಬೈ ಮೇಲೆ ಮತ್ತೊಮ್ಮೆ ಬಾರೀ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದೆ. 2008 ರ ಮುಂಬೈ ಉಗ್ರ ದಾಳಿಯ ರೂವಾರಿ ,ಲಷ್ಕರ್‌-ಎ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್‌‌ ಝಕಿ ಉರ್‌...

ಯಾವುದೇ ರಾಷ್ಟ್ರ ಉಗ್ರರಿಗೆ ಆಶ್ರಯ ನೀಡಬಾರದು: ಪ್ರಧಾನಿ ಮೋದಿ

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಭಾರತದ ತೀವ್ರ ವಿರೋಧದ ನಡುವೆಯೂ ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ...

26/11 ಮುಂಬೈ ದಾಳಿ ರೂವಾರಿ ಲಖ್ವಿ ಬಿಡುಗಡೆ

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಭಾರತದ ತೀವ್ರ ವಿರೋಧದ ನಡುವೆಯೂ ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಕೋರ್ಟ್ ಆದೇಶದಂತೆ ಹತ್ತು ಲಕ್ಷ ರೂಪಾಯಿಗಳ ಎರಡು ಬಾಂಡ್ ಅನ್ನು ಲಖ್ವಿ ನೀಡಿದ್ದು,...

ಮುಂಬೈ ಸರಣಿ ಸ್ಫೋಟ ಪ್ರಕರಣ: ಯಾಕೂಬ್‌ ಮೆಮೋನ್‌ ಗೆ ಗಲ್ಲು ಶಿಕ್ಷೆ

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ತನಗೆ ನೀಡಲಾಗಿರುವ ಮರಣ ದಂಡನೆಯ ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಯಾಕೂಬ್‌ ಅಬ್ದುಲ್‌ ರಝಾಕ್‌ ಮೆಮೋನ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ನಿಟ್ಟಿನಲ್ಲಿ ಮೆಮೋಮ್ ಗೆ ಯಾವುದೇ ಹೊತ್ತಿನಲ್ಲಿ...

ಉಗ್ರ ಅಜ್ಮಲ್ ಕಸಬ್ ಬಗ್ಗೆ ವಕೀಲ ಉಜ್ವಲ್ ನಿಕ್ಕಮ್ ಹೇಳಿದ್ದ ಸುಳ್ಳು ಬಹಿರಂಗ!

ಇತಿಹಾಸದ ಪುಟ ಸೇರಿರುವ ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ಬಿರಿಯಾನಿ ಕೇಳಿದ ಬಗ್ಗೆ ಸತ್ಯವೊಂದು ಹೊರಬಿದ್ದಿದೆ. ಜೈಪುರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹದ ಬಗ್ಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕ್ಕಮ್ ಅಜ್ಮಲ್ ಕಸಬ್ ಗೆ ಸಂಬಂಧಿಸಿದ...

ಸೈಫ್ ಅಲಿ ಖಾನ್ ಗೆ ನೀಡಲಾಗಿರುವ ಪದ್ಮ ಪ್ರಶಸ್ತಿ ಹಿಂಪಡೆಯುವ ಸಾಧ್ಯತೆ?

ನಟ ಸೈಫ್ ಅಲಿ ಖಾನ್ ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿದೆ. ನಟ ಸೈಫ್ ಅಲಿ ಖಾನ್‌ ಮುಂಬೈನ ಹೋಟೆಲ್‌ ಒಂದರಲ್ಲಿ ಗಲಾಟೆ ನಡೆಸಿದ ಪ್ರಕರಣದ ವರದಿಯನ್ನು ತ್ವರಿತವಾಗಿ ನೀಡುವಂತೆ...

ಲಖ್ವಿ ಬಿಡುಗಡೆ: ಪಾಕ್‌ ವೈಫ‌ಲ್ಯಕ್ಕೆ ಭಾರತ ಪ್ರತಿಭಟನೆ

ಮುಂಬೈ ದಾಳಿಯ ರೂವಾರಿ ಝಕೀ ಉರ್ ರೆಹಮಾನ್‌ ಲಖ್ವಿಯನ್ನು ಪಾಕ್‌ ಕೋರ್ಟಿನ ಆದೇಶದ ಪ್ರಕಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಂತೆಯೇ ಪಾಕ್‌ ಸರ್ಕಾರದ ವೈಫ‌ಲ್ಯವನ್ನು ಭಾರತ ಬಲವಾಗಿ ಪ್ರತಿಭಟಿಸಿದೆ. ಲಖ್ವಿಯು ಜೈಲಿನಿಂದ ಹೊರಗೆ ಬಾರದಂತೆ ನೋಡಿಕೊಳ್ಳುವುದು ಇಸ್ಲಾಮಾಬಾದ್‌...

ಭಾರತದ ಒತ್ತಡಕ್ಕೆ ಮಣಿದ ಪಾಕ್: ಲಕ್ವಿ ಬಂಧನ ಅವಧಿ ವಿಸ್ತರಣೆ

ಇಸ್ಲಾಮಾಬಾದ್‌ ಹೈಕೋರ್ಟ್‌ ನಿಂದಬಿಡುಗಡೆ ಆದೇಶ ಪಡೆದುಕೊಂಡಿದ್ದ 26/11ರ ಮುಂಬೈ ದಾಳಿ ಪ್ರಕರಣದ ರೂವಾರಿ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್ ಝಕಿ ಉರ್ ರೆಹಮಾನ್‌ ಲಖ್ವಿ ಬಂಧನ ಅವಧಿಯನ್ನು ಇನ್ನೊಂದು ತಿಂಗಳು ವಿಸ್ತರಿಸಲಾಗಿದೆ. ಲಖ್ವಿ ಬಿಡುಗಡೆಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಶುಕ್ರವಾರ ಆದೇಶಿಸಿತ್ತು. ಈ...

ಉಗ್ರ ಲಖ್ವಿ ಬಿಡುಗಡೆಗೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ

'ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್ ಉಗ್ರ ಝಾಕಿ-ಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆ ಮಾಡಿ, ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಪಾಕಿಸ್ತಾನದ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದು, ತಕ್ಷಣವೇ ಲಖ್ವಿಯನ್ನು ಬಿಡುಗಡೆ ಮಾಡುವಂತೆ ಇಸ್ಲಾಮಾಬಾದ್ ನ ಮುಖ್ಯ ನ್ಯಾಯಮೂರ್ತಿ...

ಆದರ್ಶ ಹೌಸಿಂಗ್ ಸೊಸೈಟಿ ಹಗರಣ: ಅಶೋಕ್ ಚೌಹಾಣ್ ಅರ್ಜಿ ವಜಾ

ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದ ಚಾರ್ಜ್ ಶೀಟ್‌ನಲ್ಲಿ ತಮ್ಮ ಹೆಸರು ಕೈಬಿಡುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್ ವಜಾಗೊಳಿಸಿದೆ. ಹಗರಣದಲ್ಲಿ ತಾವು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲದ ಕಾರಣ ಹಗರಣದಲ್ಲಿರುವ ತಮ್ಮ ಹೆಸರನ್ನು ಕೈಬಿಡಬೇಕು...

ಲಖ್ವಿಯನ್ನು ಭಾರತಕ್ಕೆ ಒಪ್ಪಿಸಿ: ಪಾಕಿಸ್ತಾನಕ್ಕೆ ಯುಎಸ್, ಯುಕೆ ಒತ್ತಡ

'ಪಾಕಿಸ್ತಾನ' ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಸಬೇಕಾದರೆ ಮೊದಲು ಮುಂಬೈ ದಾಳಿ ಉಗ್ರ ಝಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಾರತಕ್ಕೆ ಒಪ್ಪಿಸಲಿ ಎಂದು ಯುಎಸ್, ಯುಕೆ ಪಾಕಿಸ್ತಾನಕ್ಕೆ ಸಲಹೆ ನೀಡಿದೆ. ಲಖ್ವಿಯನ್ನು ಭಾರತಕ್ಕೆ ಒಪ್ಪಿಸಬೇಕೆಂದು ಎರಡು ರಾಷ್ಟ್ರಗಳು ಒತ್ತಾಯಿಸಿವೆ ಎಂದು ಲಖ್ವಿ ಜಾಮೀನು ಅರ್ಜಿ ವಿಚಾರಣೆ...

ದಾವುದ್‌ ಇಬ್ರಾಹಿಂ ಕರಾಚಿಗೆ ವಾಪಾಸ್‌

ಭೂಗತ ಪಾತಕಿ, 1993 ರ ಮುಂಬೈ ಸ್ಪೋಟದ ಮೋಸ್ಟ್‌ ವಾಂಟೆಡ್‌ ದಾವೂದ್‌ ಇಬ್ರಾಹಿಂ ಪಾಕಿಸ್ತಾನದ ಕರಾಚಿಗೆ ವಾಪಸ್ಸಾಗಿದ್ದಾನೆ ಎಂದು ವರದಿಯಾಗಿದೆ. ವರದಿಯಾದಂತೆ ಭದ್ರತಾ ಕಾರಣಗಳಿಗಾಗಿ ಅಫ್ಘಾನಿಸ್ತಾನ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಡಗಿಕೊಂಡಿದ್ದದಾವೂದ್‌ ಇಬ್ರಾಹಿಂ ನನ್ನು ಪಾಕಿಸ್ತಾನದ ಐಎಸ್‌ಐ ಕರಾಚಿಗೆ ಕರೆಸಿಕೊಂಡಿದೆ. ಈ ಹಿಂದೆ ದಾವೂದ್‌ನನ್ನು...

ಉಗ್ರ ಝಕಿ ಉರ್ ರೆಹಮಾನ್ ಲಖ್ವಿ ಬಂಧನ ಅವಧಿ ವಿಸ್ತರಣೆ

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕಿ ಉರ್ ರೆಹಮಾನ್ ಲಖ್ವಿ ಬಂಧನ ಅವಧಿಯನ್ನು ಪಾಕಿಸ್ತಾನ ಸರ್ಕಾರ ಒಂದು ತಿಂಗಳು ವಿಸ್ತರಣೆ ಮಾಡಿದೆ ಲಖ್ವಿ ಬಂಧನ ಅವಧಿಯನ್ನು ಕಳೆದ ವಾರ 10 ದಿನಗಳ ಕಾಲ ಮುಂದೂಡಲಾಗಿತ್ತು. ಇದೀಗ ಭಾರತದ ಒತ್ತಡ ಮುಂದುವರಿದ ಹಿನ್ನೆಲೆಯಲ್ಲಿ...

ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿಃ ಹಲವರು ಸಿಲುಕಿರುವ ಶಂಕೆ

ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಹಲವರು ಕಟ್ಟಡದೊಳಗೆ ಸಿಲುಕಿರುವ ಘಟನೆ ತಡರಾತ್ರಿ ನಡೆದಿದೆ. ಮುಂಬೈನ್ ಮಲಾಡ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ 42 ಅಂತಸ್ತಿನ ಕಟ್ಟಡದ 37ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡ ಪೂರ್ಣ ರೀತಿಯಲ್ಲಿ ಶಿಥಿಲವಾಗಿದೆ ಎಂದು ತಿಳಿದುಬಂದಿದೆ. ಕಟ್ಟಡದೊಳಗೆ ಹಲವು ಕಾರ್ಮಿಕರು...

ಮುಂಬೈ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಉಗ್ರರ ಬೆದರಿಕೆ ಸಂದೇಶ ಪತ್ತೆ

'ಮುಂಬೈನ ವಿಮಾನ ನಿಲ್ದಾಣ'ದಲ್ಲಿ ಮತ್ತೊಮ್ಮೆ ಉಗ್ರರ ಬೆದರಿಕೆ ಸಂದೇಶ ಪತ್ತೆಯಾಗಿದೆ. ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ರಾಷ್ಟ್ರ (ಇಸಿಸ್) ಸಂಘಟನೆ ಬರೆದ ಬೆದರಿಕೆ ಹಾಕಿದೆ. ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಈ ಬೆದರಿಕೆ ಸಂದೇಶ ಪತ್ತೆಯಾಗಿದೆ. ಈ ಹಿಂದೆಯೂ ಸಹ...

ಲಖ್ವಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ!

'ಮುಂಬೈ ದಾಳಿ'ಯ ಪ್ರಮುಖ ಆರೋಪಿ, ಲಷ್ಕರ್-ಎ-ತೊಯ್ಬ ಮುಖ್ಯಸ್ಥ ಝಾಕಿವುರ್ ರೆಹ್ಮಾನ್ ಲಖ್ವಿಗೆ ಪಾಕಿಸ್ತಾನದ ಸಿವಿಲ್ ನ್ಯಾಯಾಲಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಿದೆ. ಈ ಹಿಂದೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ಮೊದಲು ಲಖ್ವಿಗೆ ಜಾಮೀನು ನೀಡಿತ್ತು. ಆದರೆ ಪಾಕ್...

ಮುಂಬೈ ವಿಮಾನ ನಿಲ್ದಾಣದಲ್ಲಿ ಐ.ಎಸ್.ಐ.ಎಸ್ ದಾಳಿ ಎಚ್ಚರಿಕೆ ಸಂದೇಶ

'ವಿಧ್ವಂಸಕ ಕೃತ್ಯ' ನಡೆಸುವ ಬಗ್ಗೆ ಐ.ಎಸ್.ಐ.ಎಸ್ ಸಂಘಟನೆಯ ಎಚ್ಚರಿಕೆ ಸಂದೇಶ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ. ವಿಮಾನ ನಿಲ್ದಾಣದ ಗೋಡೆಯ ಮೇಲೆ ಐ.ಎಸ್.ಐ.ಎಸ್ ಉಗ್ರರ ಸಂದೇಶ ಕಾಣಿಸಿಕೊಂಡಿದ್ದು ಭದ್ರತಾ ಸಿಬ್ಬಂಧಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ...

ಭಾರತದ ಒತ್ತಡಕ್ಕೆ ಮಣಿದು ಮತ್ತೆ ನನ್ನನ್ನು ಬಂಧಿಸಲಾಗಿದೆ: ಲಖ್ವಿ

ಭಾರತದ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮತ್ತೆ ಬಂಧಿಸಲಾಗಿದೆ ಎಂದು ಮುಂಬೈ ದಾಳಿಯ ರೂವಾರಿ ಝಕೀವುರ್ ಲಖ್ವಿ ಹೇಳಿದ್ದಾನೆ. ಇನ್ನೇನು ಜೈಲಿನಿಂದ ಬಿಡುಗಡೆ ಆಗಬೇಕು ಎನ್ನುವಷ್ಟರಲ್ಲಿ ಮತ್ತೆ ಜೈಲು ಸೇರಿದ ಲಖ್ವಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ,...

ಮುಂಬೈನಲ್ಲಿ ಸಿಮಿ ಉಗ್ರರ ದಾಳಿ ಸಂಭವ

ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ಬಳಿಕ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮುಂಬೈ, ಪುಣೆ, ದೆಹಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್‌ ಸೇರಿದಂತೆ ದೇಶದಾದ್ಯಂತ ಹೈ ಆಲರ್ಟ್‌ ಘೋಷಿಸಲಾಗಿದೆ. ಬೆಂಗಳೂರು ದಾಳಿಯ ನಂತರ ಮುಂಬೈ ಅನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದಾರೆ. ಸಿಮಿ ಉಗ್ರ ಸಂಘಟನೆ ಮುಂಬೈ...

ಉಗ್ರ ಲಖ್ವಿಯನ್ನು ಮತ್ತೆ ಬಂಧಿಸಿದ ಪಾಕ್ ಸರ್ಕಾರ

'ಮುಂಬೈ ದಾಳಿ'ಯ ಉಗ್ರ ಝಕೀಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಮತ್ತೆ ಬಂಧಿಸಿದೆ. ಝಕೀಉರ್ ರೆಹಮಾನ್ ಲಖ್ವಿಯ ಬಂಧನವನ್ನು ಆತನ ಪರ ವಕೀಲರು ಖಚಿತಪಡಿಸಿದ್ದು, ಪಾಕ್ ಸರ್ಕಾರ ಮತ್ತೆ ಆತನನ್ನು ಬಂಧಿಸಿದೆ ಎಂದು ಹೇಳಿದ್ದಾರೆ. ಲಖ್ವಿ ಬಂಧನವನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ್...

ಪಿಕೆ ವಿರುದ್ಧ ಪ್ರತಿಭಟನೆ: ದೇಶದ ವಿವಿಧ ಚಿತ್ರ ಮಂದಿರಗಳ ಮೇಲೆ ದಾಳಿ

ಅಮೀರ್ ಖಾನ್ ನಟನೆಯ ಪಿಕೆ ಚಿತ್ರಕ್ಕೆ ರಾಜ್ಯವೂ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿದ್ದು, ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಪಿ.ಕೆ ಸಿನಿಮಾ ಪೋಸ್ಟರ್ ಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಕೆ ಸಿನಿಮಾದಲ್ಲಿ ಹಿಂದೂ ದೇವರುಗಳನ್ನು, ಧರ್ಮಗುರುಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದರಿಂದ ದೇಶಾದ್ಯಂತ...

ಉಗ್ರ ಲಖ್ವಿ ಬಂಧನ ವಜಾಗೊಳಿಸಿದ ಪಾಕ್ ಹೈಕೋರ್ಟ್

26/11ರ ಮುಂಬೈ ದಾಳಿಯ ರೂವಾರಿ ಝಕೀಉರ್ ರೆಹಮಾನ್ ಲಖ್ವಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಬಂಧಮುಕ್ತಗೊಳಿಸಿದೆ. ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟಿನ ನ್ಯಾಯಾಧೀಶ ಕೌಸರ್‌ ಅಬ್ಬಾಸ್‌ ಝೈದಿ ಡಿಸೆಂಬರ್‌ 18ರಂದು ಈತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಆದರೆ ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ...

ದಾವೂದ್ ನನ್ನು ಭಾರತಕ್ಕೆ ಒಪ್ಪಿಸಿ: ಪಾಕ್ ಗೆ ಕಿರಣ್ ರಿಜಿಜು ಆಗ್ರಹ

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡಲೇ ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಪಾಕಿಸ್ತಾನಕ್ಕೆ ಆಗ್ರಹಿಸಿದ್ದಾರೆ. ಭೂಗತ ಪಾತಕಿ, 1993 ಮುಂಬೈ ಸರಣಿ ಸ್ಫೋಟ ರೂವಾರಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ಕುರಿತು ಬಲವಾದ ಸಾಕ್ಷ್ಯಾಧಾರ ದೊರೆತ ಹಿನ್ನಲೆಯಲ್ಲಿ ಲಖನೌನಲ್ಲಿ...

ಕರಾಚಿಯಲ್ಲಿಯೇ ಇರುವ ದಾವೂದ್ ಇಬ್ರಾಹಿಂ: ದೂರವಾಣಿ ಸಂಭಾಷಣೆ ಲಭ್ಯ

ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಸ್ಪಷ್ಟಪಡಿಸಿದೆ. ಖಾಸಗಿ ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ ಈಗಲೂ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಪ್ರಬಲ ಸಾಕ್ಷ್ಯಾಧಾರ ದೊರೆತಿದ್ದು,...

ಮುಂಬೈ ದಾಳಿ ಉಗ್ರನಿಗೆ ಜಾಮೀನು ನೀಡಿರುವುದಕ್ಕೆ ಭಾರತ ಸರ್ಕಾರದಿಂದ ಆಕ್ಷೇಪ

'ಮುಂಬೈ ದಾಳಿ'ಯ ಆರೋಪಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಜಾಕೀರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನ ಕೋರ್ಟ್ ಜಾಮೀನು ಮಂಜೂರು ಮಾಡಿರುವುದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉಗ್ರ ಲಖ್ವಿಯನ್ನು ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಿರುವುದರಿಂದ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುವುದಾಗಿ ನೀಡಿದ್ದ ಹೇಳಿಕೆ...

ಜಾಮೀನಿಗೆ ಭಾರತದಿಂದ ಆಕ್ಷೇಪ: ಲಖ್ವಿಯನ್ನು ರಾವಲ್ಪಿಂಡಿ ಜೈಲಿಗೆ ಅಟ್ಟಿದ ಪಾಕ್ ಸರ್ಕಾರ

ಭಾರತ ಸರ್ಕಾರದ ತೀಕ್ಷ್ಣ ಆಕ್ಷೇಪ ಎದುರಿಸಿದ ಪಾಕಿಸ್ತಾನ, ಜಾಮೀನು ಪಡೆದಿದ್ದ 26/11 ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕೀರ್ ರೆಹಮಾನ್ ಲಖ್ವಿಯನ್ನು ಡಿ.19ರಂದು ಬಂಧಿಸಿದೆ. ಪಾಕಿಸ್ತಾನದ ಡಾನ್ ಅಂತರ್ಜಾಲ ಪತ್ರಿಕೆಯ ವರದಿ ಪ್ರಕಾರ ಪಾಕ್ ಸರ್ಕಾರ ಜಾಕೀರ್ ರೆಹಮಾನ್ ...

ಮುಂಬೈ ದಾಳಿ: ಉಗ್ರ ಜಾಕೀರ್ ರೆಹಮಾನ್ ಲಖ್ವಿಗೆ ಪಾಕ್ ಕೋರ್ಟ್ ನಿಂದ ಜಾಮೀನು

ಒಂದೆಡೆ ಮುಂಬೈ ದಾಳಿ ರುವಾರಿಗಳಾದ ಪಾಕ್ ಉಗ್ರರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಭಾರತ ಸರ್ಕಾರ ಒತ್ತಾಯಿಸುತ್ತಿದ್ದರೆ ಮತ್ತೊಂದೆಡೆ ಅದೇ ಪ್ರಕರಣದ ಆರೋಪಿಗಳು ಪಾಕಿಸ್ತಾನದ ಕೋರ್ಟ್ ನಿಂದ ಜಾಮೀನು ಪಡೆಯುತ್ತಿದ್ದಾರೆ! ಡಿ18ರಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್, ಮುಂಬೈ ದಾಳಿಯ ರುವಾರಿಗಳಲ್ಲೊಬ್ಬನಾದ ಲಷ್ಕರ್...

ಆಸ್ಟ್ರೇಲಿಯಾದಲ್ಲಿ ಕಫೆ ಮೇಲೆ ಶಂಕಿತ ಇಸೀಸ್ ಉಗ್ರರ ದಾಳಿ

'ಆಸ್ಟ್ರೇಲಿಯಾ'ದ ಸಿಡ್ನಿಯ ಒಪೆರಾ ಹೌಸ್ ಕಟ್ಟಡದಲ್ಲಿರುವ ಕೆಫೆ ಮೇಲೆ ಉಗ್ರರು ದಾಳಿ ನಡೆಸಿದ್ದು 50 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಗಿರಿಸಿಕೊಂಡಿದ್ದಾರೆ. ಈ ಪೈಕಿ 5 ನಾಗರಿಕರು ಯಾವುದೇ ಅಪಾಯವಿಲ್ಲದೇ ಉಗ್ರರಿಂದ ತಪ್ಪಿಸಿಕೊಂಡಿದ್ದಾರೆ. ಡಿ.15ರಂದು ಕೆಫೆ ಮೇಲೆ ದಾಳಿ ಮಾಡಿರುವವರು ಐ.ಎಸ್‌.ಐ.ಎಸ್ ಸಂಘಟನೆಗೆ...

ಉಗ್ರ ಹಫೀಜ್ ರ್ಯಾಲಿಗೆ ಅನುಮತಿ ನೀಡಿರುವ ಪಾಕ್ ಕ್ರಮಕ್ಕೆ ಭಾರತ ಸರ್ಕಾರ ಖಂಡನೆ

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯ್ಯದ್ ಹಮ್ಮಿಕೊಂಡಿರುವ ರ್ಯಾಲಿಗೆ ಅಲ್ಲಿನ ಸರ್ಕಾರ ಅನುಮತಿ ನೀಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು, ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಉಗ್ರ ಹಫೀಜ್ ಸಯ್ಯದ್ ರ್ಯಾಲಿಗೆ ಅನುಮತಿ ನೀಡುವ ಮೂಲಕ ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧ ಇರುವ ಅಭಿಪ್ರಾಯವನ್ನು ಪಾಕಿಸ್ತಾನ...

ಉಗ್ರ ಸಯ್ಯದ್ ಪತ್ರಿಕಾಗೋಷ್ಠಿಗೆ ಪಾಕ್ ಸರ್ಕಾರದಿಂದ ವಿಶೇಷ ರೈಲು

'ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯ್ಯದ್ ವಿಚಾರಗೋಷ್ಠಿಗೆ ಪಾಕಿಸ್ತಾನ ಸರ್ಕಾರವೇ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಲಾಹೋರ್‌ನಲ್ಲಿ ನಡೆಯಲಿರುವ ನಿಷೇಧಿತ ಜಮಾತ್ ಉದ್ ದಾವಾದ ಎರಡು ದಿನಗಳ ವಿಚಾರಗೋಷ್ಠಿಗೆ ಪಾಕಿಸ್ತಾನ ರೈಲ್ವೆಯು ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ. ಲಾಹೋರ್‌ನ ಮಿನಾರ್ ಐ-ಪಾಕಿಸ್ತಾನದ...

ಶರದ್ ಪವಾರ್ ತಲೆಗೆ ಪೆಟ್ಟು: ಆಸ್ಪತ್ರೆಗೆ ದಾಖಲು

ಮಾಜಿ ಕೇಂದ್ರ ಸಚಿವ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿಯಲ್ಲಿ ವಾಯುವಿಹಾರಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಶರದ್ ಪವಾರ್ ಅವರಿಗೆ ತೀವ್ರ ಗಾಯ ಉಂಟಾಗಿದ್ದು ಏರ್ ಅಂಬುಲೆನ್ಸ್ ಮೂಲಕ ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. 73 ವರ್ಷದ...

ಇರಾಕ್ ನಿಂದ ವಾಪಸ್ಸಾದ ಯುವಕನನ್ನು ಎನ್.ಐ.ಎ ಕೋರ್ಟ್ ಗೆ ಹಾಜರು ಪಡಿಸಲಿರುವ ಅಧಿಕಾರಿಗಳು

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಭಾರತಕ್ಕೆ ವಾಪಸ್ಸಾಗಿರುವ ಮುಂಬೈ ನ ಯುವಕ ಆರಿಫ್ ಮಜೀದ್ ನನ್ನು ಎನ್.ಐ.ಎ ಕೋರ್ಟ್ ಗೆ ನ.29ರಂದು ಹಾಜರು ಪಡಿಸಲಾಗುತ್ತದೆ. ನ.28ರಂದು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಮಜೀದ್ ನನ್ನು ಎನ್.ಐ.ಎ ತಂಡ ವಿಚಾರಣೆಗೆ ಒಳಪಡಿಸಿತ್ತು....

ಐ.ಎಸ್.ಐ.ಎಸ್ ಸೇರಿದ್ದ ಯುವಕ ಭಾರತಕ್ಕೆ ವಾಪಸ್:ಎನ್.ಐ.ಎಯಿಂದ ವಿಚಾರಣೆ ಆರಂಭ

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಸಾವಿಗೀಡಾಗಿದ್ದಾನೆ ಎಂದು ನಂಬಲಾಗಿದ್ದ ಮುಂಬೈ ನ ಯುವಕ ಆರಿಫ್ ಮಜೀದ್ ಭಾರತಕ್ಕೆ ವಾಪಸ್ಸಾಗಿದ್ದಾನೆ. ನ.28ರಂದು ಆತ ಮನೆಗೆ ಬಂದಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್,...

ಮುಂಬೈ ದಾಳಿ ರುವಾರಿ ಉಗ್ರ ಹಫೀಜ್ ಸಯ್ಯದ್ ರ್ಯಾಲಿಗೆ ಅನುಮತಿ ನೀಡಿದ ಪಾಕ್ ಸರ್ಕಾರ

ಒಂದೆಡೆ ಮುಂಬೈ ದಾಳಿಯ ಪ್ರಮುಖ ಅಪರಾಧಿ ಹಫೀಜ್ ಸಯ್ಯದ್ ಗೆ ಶಿಕ್ಷೆ ವಿಧಿಸಬೇಕೆಂದು ಭಾರತ ಪಾಕಿಸ್ತಾನಕ್ಕೆ ಒತ್ತಾಯಿಸುತ್ತಿದ್ದರೆ ಮತ್ತೊಂದೆಡೆ ಅದೇ ಹಫೀಜ್ ಸಯ್ಯದ್, ಆಯೋಜಿಸಲಾಗಿರುವ ರ್ಯಾಲಿಗೆ ಪಾಕ್ ಸರ್ಕಾರ ಅನುಮತಿ ನೀಡಿದೆ. ಹಫೀಜ್ ಸಯ್ಯದ್ ತಾನು ಆಯೋಜಿಸಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಪಾಕ್...

ಐ.ಎಸ್.ಐ.ಎಸ್ ಸೇರಲು ಇರಾಕ್ ಗೆ ತೆರಳಿದ್ದ ಯುವಕರು ವಾಪಸ್ ಭಾರತಕ್ಕೆ?

'ಐ.ಎಸ್.ಐ.ಎಸ್' ಉಗ್ರ ಸಂಘಟನೆ ಸೇರಿದ್ದಾರೆಂದು ಹೆಳಲಾಗಿದ್ದ ನಾಲ್ವರು ಭಾರತೀಯ ಯುವಕರು ಮತ್ತೆ ಭಾರತಕ್ಕೆ ಬರಲು ಸಿದ್ಧರಿದ್ದಾರೆಎಂಬ ಸುದ್ದಿ ಬಹಿರಂಗವಾಗಿದೆ. ಇರಾಕ್ ನ ಉಗ್ರ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದಾರೆಂದು ಹೇಳಲಾಗಿದ್ದ ಮುಂಬೈ ಮೂಲದ ಯುವಕರು ಭಾರತಕ್ಕೆ ವಾಪಸ್ಸಾಗಲು ಇಚ್ಛಿಸುತ್ತಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು...

ಮಹಾರಾಷ್ಟ್ರದಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್

'ಮಹಾರಾಷ್ಟ್ರ'ದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಜೆಪಿ, ತೆರೆ ಮರೆಯಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸುವ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಬಿಜೆಪಿಗೆ ಎನ್.ಸಿ.ಪಿ, ಶಿವಸೇನೆ ಬೆಂಬಲ ನೀಡಲು ಸಿದ್ಧವಿದ್ದರೂ ಏಕಾಂಗಿಯಾಗಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಹೈಕಮಾಂಡ್...

ಹಿರಿಯ ಪತ್ರಕರ್ತ ಎಂ.ವಿ ಕಾಮತ್ ನಿಧನ

ಪ್ರಸಾರ ಭಾರತಿ ಬೋರ್ಡ್ ನ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಎಂ.ವಿ ಕಾಮತ್(93 ) ನಿಧನರಾಗಿದ್ದಾರೆ. ಅ.9ರ ಬೆಳಿಗ್ಗೆ ಹೃದಯಾಘಾತದಿಂದ ಕಾಮತ್ ಮೃತಪಟ್ಟಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 7.30ಕ್ಕೆ ತೀವ್ರ ಹೃದಯಾಘಾತಕ್ಕೊಳಗಾದ...

ಅ.15ರಂದು ಮಹಾರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರೆಯಲಿದೆ-ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂಬ ವಿರೋಧಿಗಳ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ತಾವು ದೆಹಲಿಯಲ್ಲಿರುವವರೆಗೂ ಮಹಾರಾಷ್ಟ್ರವನ್ನು ವಿಭಜಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅ.7ರಂದು ಚುನಾವಣಾ ಪ್ರಚಾರ...

ಡೀಸೆಲ್ ಬೆಲೆ ನಿಯಂತ್ರಣ ರದ್ದುಗೊಳಿಸಲು ಸೂಕ್ತ ಸಮಯ: ಆರ್.ಬಿ.ಐ ಗವರ್ನರ್

'ಡೀಸೆಲ್ ಬೆಲೆ' ನಿಯಂತ್ರಣ ರದ್ದುಗೊಳಿಸಲು ಇದೇ ಸೂಕ್ತ ಸಮಯ ಎಂದು ಆರ್.ಬಿ.ಐ ಗವರ್ನರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತಿದ್ದು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಲು ಉತ್ತಮ ಅವಕಾಶ ದೊರೆತಿದೆ ಎಂದು ರಘುರಾಮ್ ರಾಜನ್...

ಉಗ್ರ ಹಫೀಜ್ ಸಯೀದ್ ಗೆ ಪಾಕ್ ಕ್ಲೀನ್ ಚಿಟ್

'ಮುಂಬೈ ದಾಳಿ'ಯ ರುವಾರಿ, ಉಗ್ರ, ಹಫೀಜ್ ಸಯೀದ್ ಒಬ್ಬ ಪಾಕ್ ಪ್ರಜೆ, ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಆತ ರಾಷ್ಟ್ರದ ಯಾವುದೇ ಭಾಗದಲ್ಲಿ ಓಡಾಡಿಕೊಂಡಿರಬಹುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಹಫೀಜ್ ಸಯೀದ್ ಓರ್ವ ಪಾಕಿಸ್ತಾನ ಪ್ರಜೆ, ಆತ ತನ್ನ...

ಜಿಹಾದಿ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದ ಮುಂಬೈ ಮೂಲದ ಯುವಕ ಸಾವನ್ನಪ್ಪಿರುವ ಶಂಕೆ

'ಇರಾಕ್‌'ನಲ್ಲಿನ ಸುನ್ನಿ ಜಿಹಾದಿ ಉಗ್ರರ ಸಂಘಟನೆಯಾದ ಐ.ಎಸ್‌.ಐ.ಎಸ್‌ (ಐಸಿಸ್‌) ಸೇರಿಕೊಂಡಿದ್ದಾರೆಂದು ಹೇಳಲಾಗಿದ್ದ ಮುಂಬೈ ನ ನಾಲ್ವರು ಮುಸ್ಲಿಂ ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಇರಾಕ್ ನ ಉಗ್ರ ಸಂಘಟನೆಯಿಂದ ಆರಿಫ್ ಮಜೀದ್‌ ಕುಟುಂಬದವರಿಗೆ...

ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ: 8ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

'ಮುಂಬೈ'ನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮುಂಬೈ ನಿಂದ ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಂದರ್ಭದಲ್ಲಿ ಇಂಡಿಗೋ6-E 176 ವಿಮಾನದ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ವಿಮಾನದಲ್ಲಿದ್ದ...

ಯಾಸೀನ್ ಭಟ್ಕಳ್ ಬಿಡುಗಡೆಗೆ ವಿಮಾನ ಹೈಜಾಕ್ ಮಾಡಲು ಐ.ಎಂ ಸಂಚು?

'ಮುಂಬೈ' ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ನಾಗರಿಕ ವಿಮಾನಯಾನ ಭದ್ರತಾ ಕಚೇರಿ ಸೂಚನೆ ನೀಡಿದೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆ, ವಿಮಾನ ಹೈಜಾಕ್ ಮಾಡುವ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಭದ್ರತೆ ದುಪ್ಪಟ್ಟುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited