Untitled Document
Sign Up | Login    
Dynamic website and Portals
  

Related News

ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಕರ್ನಾಟಕದಲ್ಲಿ ಎಂದಿನಂತೆ ನೈಋತ್ಯ ಮುಂಗಾರು ಇದೆ ಎಂಬ ಸಾಮಾನ್ಯ ಗ್ರಹಿಕೆಯನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ವಾಸ್ತವ ಚಿತ್ರಣವನ್ನು ಪರಿಚಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಸಕ್ತ ಸಾಲಿನ ಜೂನ್ 1 ರಿಂದ ಆಗಸ್ಟ್ 15 ರ ವರೆಗಿನ...

ಇಂದಿನಿಂದ ಸಂಸತ್ ನ ಮುಂಗಾರು ಅಧಿವೇಶನ: ಜಿಎಸ್‌ಟಿ ಮಸೂದೆ ಅಂಗೀಕಾರ ಸಾಧ್ಯತೆ

ಇಂದಿನಿಂದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ. ಕಾಶ್ಮೀರದಲ್ಲಿ ಉಂಟಾಗಿರುವ ಹಿಂಸಾಚಾರ, ಎನ್ ಎಸ್ ಜಿ ಸದಸ್ಯತ್ವ ಪಡೆಯುವಲ್ಲಿ ಕೇಂದ್ರದ ವೈಫಲ್ಯ, ಕೆಲವು ರಾಜ್ಯಗಳಲ್ಲಿನ ಪ್ರವಾಹದ ಬಗ್ಗೆ, ಕೃಷಿ ಸಮಸ್ಯೆಗಳು ಮತ್ತು ಭಯೋತ್ಪಾದನೆ,...

ಅಧಿವೇಶನದಲ್ಲಿ ರಚನಾತ್ಮಕ ಚರ್ಚೆ ನಡೆಸಲು ಎಲ್ಲಾ ಪಕ್ಷಗಳಿಗೆ ಪ್ರಧಾನಿ ಮನವಿ

ಮುಂಗಾರು ಅಧಿವೇಶನದ ವೇಳೆ ಸಂಸತ್ತಿನ ಎರಡೂ ಸದನಗಳಲ್ಲಿ ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ರಚನಾತ್ಮಕ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಪಕ್ಷಗಳಲ್ಲಿ ಮನವಿ ಮಾಡಿದ್ದಾರೆ. ಅಧಿವೇಶ ಆರಂಭಕ್ಕೂ ಮುನ್ನ ಸಂಸತ್ ಹೊರಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ನಾನು...

ಜಿಎಸ್​ಟಿ ಮಸೂದೆ ಕುರಿತು ಕೇಂದ್ರ ಸಚಿವರಿಂದ ಕಾಂಗ್ರೆಸ್ ನಾಯಕರ ಭೇಟಿ

ಸರಕು ಮತ್ತು ಸೇವಾತೆರಿಗೆ (ಜಿಎಸ್​ಟಿ) ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸುವ ಸಂಬಂಧ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಅನಂತ್ ​ಕುಮಾರ್ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಜತೆಗೆ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅರುಣ್ ಜೇಟ್ಲಿ,...

ಕೇರಳಕ್ಕೆ ನೈಋತ್ಯ ಮುಂಗಾರು ಮಾರುತ ಪ್ರವೇಶ: ಭಾರೀ ಮಳೆ

ನೈಋತ್ಯ ಮುಂಗಾರು ಮಾರುತ ಕೇರಳ ಪ್ರವೇಶಿದ್ದು, ತಮಿಳುನಾಡು ಮತ್ತು ಕೇರಳ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಕೇಂದ್ರ ಹವಾಮಾನ ಇಲಾಖೆ ಜೂನ್ 9ಕ್ಕೆ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶ ಮಾಡಲಿವೆ ಎಂದು...

ಜುಲೈ 4ರಿಂದ ಜುಲೈ 23ರವರೆಗೆ ಮುಂಗಾರು ಅಧಿವೇಶನ

ಜುಲೈ 4ರಿಂದ ಜುಲೈ 23ರವರೆಗೆ ವಿಧಾನಸಭೆ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 4ರಿಂದ ಜುಲೈ...

ಮೇ ಕೊನೆ ಅಥವಾ ಜೂನ್ ಆರಂಭದಲ್ಲಿ ಮುಂಗಾರು ಮಾರುತ ಪ್ರವೇಶ

ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ ಅಂತ್ಯ ಅಥವಾ ಜೂನ್‌ ಆರಂಭದಲ್ಲಿ ದೇಶವನ್ನು ಪ್ರವೇಶಿಸಲಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ. ನಾಲ್ಕು ದಿನಗಳ ವ್ಯತ್ಯಾಸದೊಂದಿಗೆ ಮೇ 31ರೊಳಗೆ ಮುಂಗಾರು ಮಾರುತಗಳು ಆಗಮಿಸಲಿವೆ. ಈ ಕುರಿತ...

ರಾಜ್ಯಾದ್ಯಂತ ವ್ಯಾಪಕ ಮಳೆಃ ಬರದಿಂದ ಕಂಗಾಲಾದ ಜನರಲ್ಲಿ ಮೂಡಿದ ಆಶಾಭಾವನೆ

ಕಳೆದ 40 ವರ್ಷಗಳಲ್ಲೇ ಭೀಕರ ಬರಗಾಲ ಎದುರಿಸುತ್ತಿರುವ ರಾಜ್ಯಕ್ಕೆ ಮತ್ತೆ ಮಳೆರಾಯನ ಆಗಮನವಾಗಿದ್ದು, ಬರದಿಂದ ಬಳಲಿ ಕಂಗಾಲಾಗಿದ್ದ ಜನತೆಯಲ್ಲಿ ಆಶಾಭಾವನೆ ಮೂಡಿದೆ. ರಾಜ್ಯಾದ್ಯಂತ ಬಹುತೇಕ ಭಾಗಗಳಲ್ಲಿ ಶನಿವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ಜನರಲ್ಲಿ ಸಂತಸ ಮೂಡಿಸಿದೆ. ಮಹಾರಾಷ್ಟ್ರದಿಂದ ಲಕ್ಷದ್ವೀಪದವರೆಗೆ ವಾಯುಭಾರ ಕುಸಿತದಿಂದ ಎಲ್ಲೆಡೆ ಮಳೆಯಾಗುತ್ತಿದೆ. ಈ...

ಸ್ಮೃತಿ ಇರಾನಿ ನೇತೃತ್ವದಲ್ಲಿ ಭಾನುವಾರ ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಸಭೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಭಾನುವಾರ, ಆ.23 ನಡೆಯಲಿರುವ ಬಿಜೆಪಿಯ 'ಧಿಕ್ಕಾರ ಸಭೆ'ಯ ನೇತೃತ್ವವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಹಿಸಲಿದ್ದಾರೆ. ಲೋಕಸಭಾ ಮುಂಗಾರು ಅಧಿವೇಶನವನ್ನು ನಿರಂತರವಾಗಿ ತಡೆಗಟ್ಟಿ ಕಲಾಪ ನಡೆಯಲು ಬಿಡದೆ ಅತ್ಯಂತ ಪ್ರಮುಖವಾದ ಸರಕು...

ಬೆಲೆ ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿ ಆಮದಿಗೆ ಕೇಂದ್ರ ಸರಕಾರ ನಿರ್ಧಾರ

ದಿನೇ ದಿನೇ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಮೋದಿ ಸರಕಾರ ಕೇಂದ್ರ ಸರಕಾರಿ ಸ್ವಾಮ್ಯದ ಎಂಎಂಟಿಸಿ ಗೆ ನಿರ್ದೇಶಿಸಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳಿ (ಎನ್​ಎಎಫ್​ಇಡಿ) 10 ಸಾವಿರ ಟನ್ ಈರುಳ್ಳಿಯನ್ನು ಆಮದು...

ಜಿ.ಎಸ್.ಟಿ ಮಸೂದೆಯನ್ನು ಪಾಸು ಮಾಡಿಯೇ ಮಾಡುತ್ತೇವೆ: ಪ್ರಕಾಶ್ ಜಾವ್ಡೇಕರ್

ಮುಂಗಾರು ಅಧಿವೇಶನ ಕಾಂಗ್ರೆಸ್ ಸದಸ್ಯರ ನಿರಂತರ ಪ್ರತಿಭಟನೆಯಿಂದಾಗಿ ಕಲಾಪ ನಡೆಸದೆ ನೀರುಪಾಲಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ್ ಸರಕಾರ, ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ನಿಶ್ಚಿತವಾಗಿ ಅನುಮೋದನೆ ಪಡೆದೇ ಪಡೆಯುತ್ತೇವೆ ಎಂದು ಹೇಳಿದೆ. ಗುರುವಾರ ಲೋಕಸಭೆ ಹಾಗೂ ರಾಜ್ಯಸಭೆ...

ಕಾಂಗ್ರೆಸ್ ಪ್ರತಿಭಟನೆಗೆ ಮುಂಗಾರು ಅಧಿವೇಶನ ನೀರುಪಾಲು: ಅನಿರ್ಧಿಷ್ಠಾವಧಿ ಮುಂದೂಡಿಕೆ

ಮುಂಗಾರು ಅಧಿವೇಶನ ಆರಂಭವಾದ ದಿನದಿಂದ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸಿದ ಕಾಂಗ್ರೆಸ್ ಸದಸ್ಯರು ಕೊನೆಗೂ ದೇಶದ ಪ್ರಗತಿಗೆ ಅವಶ್ಯಕವಾದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಂಗೀಕಾರವಾಗದಂತೆ ನೋಡಿಕೊಂಡರು. ಪ್ರಜಾಪ್ರಭುತ್ವದ ಹೆಸರಲ್ಲಿ ತೆರಿಗೆದಾರರ ನೂರಾರು ಕೋಟಿ ರೂ. ವ್ಯರ್ಥವಾದರೂ ಕ್ಯಾರೇ ಅನ್ನದ ಕಾಂಗ್ರೆಸ್...

ಪ್ರತಿಭಟನೆ ನಿಲ್ಲಿಸಿ, ಇಲ್ಲವಾದರೆ ನಿಮ್ಮ ಜೊತೆ ನಾವಿಲ್ಲ: ಕಾಂಗ್ರೆಸ್ಸಿಗೆ ಮುಲಾಯಂ

'ಪ್ರತಿಭಟನೆ ನಿಲ್ಲಿಸಿ, ಇಲ್ಲವಾದರೆ ನಿಮ್ಮ ಜೊತೆ ನಾವಿಲ್ಲ' - ಇದು ಕಾಂಗ್ರೆಸ್ ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೀಡಿದ ಎಚ್ಚರಿಕೆ. ಮುಂಗಾರು ಅಧಿವೇಶನ ಆರಂಬವಾದಂದಿನಿಂದ ಒಂದೇ ಒಂದು ದಿನ ಕಲಾಪ ನಡೆಸಲು ಬಿಡದೆ ನೂರಾರು ಕೋಟಿ ರೂ....

ಲಲಿತ್ ಮೋದಿಗೆ ಸಹಾಯ ಮಾಡಿದ್ದಕ್ಕೆ ದಾಖಲೆ ಇದ್ದಲ್ಲಿ ಕೊಡಿ: ಸುಷ್ಮಾ ಸ್ವರಾಜ್ ಸವಾಲು

ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ನಾನು ಯಾವುದೇ ಸಹಾಯ ಮಾಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಲಲಿತ್ ಮೋದಿಗೆ ಪ್ರವಾಸಿ ದಾಖಲೆ ಪತ್ರವನ್ನು ನೀಡಿ ಎಂದು ಇಂಗ್ಲೆಂಡ್ ಸರ್ಕಾರಕ್ಕೆ ಕೇಳಿದ ಯಾವುದೇ ಒಂದು...

ಕಾಂಗ್ರೆಸ್ ಟೀಕೆಗೆ ಬಿಜೆಪಿ ಸ್ಟಿಂಗ್ ಪ್ರತಿ ಅಸ್ತ್ರ

ಮುಂಗಾರು ಅಧಿವೇಶನದ ಮೊದಲ ಎರಡೂ ದಿನ ವ್ಯಾಪಂ ಮತ್ತು ಲಲಿತ್ ಗೇಟ್ ಹಗರಣಗಳ ವಿರುದ್ದ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಆರ್ಭಟ ತಗ್ಗಿಸಲು ಬಿಜೆಪಿ ಸ್ಟಿಂಗ್ ಅಸ್ತ್ರವನ್ನು ಬಳಸಿದೆ. ಮದ್ಯ ನೀತಿ ಬದಲಾಯಿಸಲು ಉತ್ತರಖಾಂಡ ಮುಖಮಂತ್ರಿ ಅವರ ಕಾರ್ಯದರ್ಶಿ ಅಪರಿಚಿತ ವ್ಯಕ್ತಿಯೊಂದಿಗೆ ಸಮಾಲೋಚನೆ...

ಮುಂಗಾರು ಅಧಿವೇಶನದ ಮೂರನೇ ದಿನವೂ ಪ್ರತಿಧ್ವನಿಸಿದ ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣ

ಸಂಸತ್ತಿನ ಉಭಯ ಸದನಗಳಲ್ಲೂ ಕಲಾಪಗಳನ್ನು ಗುರುವಾರ ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಲಲಿತ್ ಮೋದಿ ಪ್ರಕರಣ ಮತ್ತು ವ್ಯಾಪಂ ಹಗರಣ ಕುರಿತು ಪ್ರತಿಪಕ್ಷಗಳ ಕೋಲಾಹಲದ ಮಧ್ಯೆ ಕಲಾಪಗಳನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಯಿತು. ಮುಂಗಾರು ಅಧಿವೇಶನದ ಮೊದಲೆರಡು ದಿನಗಳೂ ಸಹ ವ್ಯರ್ಥವಾಗಿ, ಪ್ರತಿಪಕ್ಷಗಳ ಕೋಲಾಹಲದಲ್ಲಿ ಮುಂದೂಡಲ್ಪಟ್ಟಿತ್ತು. ರಾಹುಲ್ ಗಾಂಧಿ...

ಸಂಸತ್ ನಲ್ಲಿ ಲಲಿತ್ ಗೇಟ್, ವ್ಯಾಪಂ ಗದ್ದಲಃ ಶಿಸ್ತು ಕ್ರಮ ಬಗ್ಗೆ ಸ್ಪೀಕರ್ ಎಚ್ಚರಿಕೆ

ಸಂಸತ್ತಿನ ಮುಂಗಾರು ಅಧಿವೇಶನದ 2ನೇ ದಿನವಾದ ಬುಧವಾರವೂ ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣದ ಕುರಿತಂತೆ ಲೋಕಸಭೆ, ರಾಜ್ಯಸಭೆ ಸೇರಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು. ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಪ್ಪುಪಟ್ಟಿಯನ್ನು ಧರಿಸಿ ಆಗಮಿಸಿದ್ದರು. ಇದನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ...

ಮುಂಗಾರು ಅಧಿವೇಶನ ಪ್ರಾರಂಭಃ ರಾಜ್ಯಸಭೆಯಲ್ಲಿ ಲಲಿತ್ ಗೇಟ್ ವಿಷಯ ಪ್ರಸ್ತಾಪ

ಮಂಗಳವಾರದಿಂದ ಪ್ರಾರಂಭವಾದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಲಲಿತ್ ಗೇಟ್ ವಿಷಯವನ್ನು ಪ್ರಸ್ತಾಪಿಸಿದೆ. ಲಲಿತ್ ಗೇಟ್ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿರುವ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ, ಸುಷ್ಮಾ ಸ್ವರಾಜ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ...

ಮುಂಗಾರು ಅಧಿವೇಶನಕ್ಕೂ ಮೊದಲು ಮಿತ್ರಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ

ಮಂಗಳವಾರದಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನದಲ್ಲಿ ವ್ಯಾಪಂ ಮತ್ತು ಲಲಿತ್ ಮೋದಿ ಪ್ರಕರಣ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಸಾಧ್ಯತೆ ಇರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎನ್ ಡಿ ಎ ಮಿತ್ರ ಪಕ್ಷಗಳ ಸಭೆ ಕರೆದಿದ್ದಾರೆ....

ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ದವಿದೆ : ಪ್ರಧಾನಿ ನರೇಂದ್ರ ಮೋದಿ

ಸೋಮವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ದವಾಗಿದೆ, ಭೂಸ್ವಾಧೀನ ಮಸೂದೆಯನ್ನು ಪ್ರತಿಪಕ್ಷಗಳು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿ ಎಂದು ಆಗ್ರಹಿಸಿದರು. ಸಂಸತ್ತಿನ ಸಮಯ ಬಹಳ ಮಹತ್ವವನ್ನು ಹೊಂದಿದೆ, ಇದನ್ನು ಎಲ್ಲಾ ವಿಷಯಗಳನ್ನು ಚರ್ಚಿಸಲು...

ಸಂಸತ್ತಿನ ಮುಂಗಾರು ಅಧಿವೇಶನಃನಾಲ್ಕನೇ ಬಾರಿ ಭೂಸ್ವಾಧೀನ ಸುಗ್ರೀವಾಜ್ಞೆ ಸಾಧ್ಯತೆ

ಮಂಗಳವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ರಮವಾಗಿ ಸರ್ಕಾರವು ನಾಲ್ಕನೇ ಬಾರಿಗೆ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಗಳಿವೆ. ಭೂಸ್ವಾಧೀನ ಮಸೂದೆ ಬಗ್ಗೆ ಯಾವುದೇ ಸಹಮತ ಮೂಡುವ ಸಾಧ್ಯತೆಗಳು ಕಡಿಮೆ ಇರುವ ಕಾರಣ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ...

ಮುಂಗಾರು ಅಧಿವೇಶನ: ಅಮಿತ್ ಶಾ ಭೇಟಿ ಮಾಡಿದ ವಸುಂಧರಾ ರಾಜೇ

ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ಸಂಬಂಧ ವಿವಾದ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಭಾನುವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಭಾನುವಾರ ನಡೆದ ಸಭೆಯಲ್ಲಿ ಹಿರಿಯ ನಾಯಕರಾದ ಅರುಣ್...

ರಾಜ್ಯದಲ್ಲಿ ಇನ್ನೈದು ದಿನ ಭಾರೀ ಮಳೆಯಾಗುವ ಸಾಧ್ಯತೆ

ರಾಜ್ಯದ ಕರಾವಳಿ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿ ಭಾರಿ ಮಳೆಯಾದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಕರಾವಳಿ, ದಕ್ಷಿಣ ಒಳನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ...

ಮುಂಬೈ ಬಳಿ ಅಶೋಬಾ ಚಂಡಮಾರುತ: ಭಾರಿ ಮಳೆ ಸಾಧ್ಯತೆ

ಅಶೋಬಾ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಂಬೈನಿಂದ 570 ಕಿ.ಮೀ ದೂರದಲ್ಲಿ ಚಂಡಮಾರುತ ಕಾಣಿಸಿ ಕೊಂಡಿದ್ದು, ಇದು ದಿನ ಕಳೆದಂತೆ ಹೆಚ್ಚು ತೀವ್ರವಾಗುತ್ತಿದೆ. ಪರಿಣಾಮ ಈಗಾಗಲೇ ಮಂಗಳೂರಿನಲ್ಲಿ 8 ಸೆಂ.ಮೀ ಮಳೆಯಾಗಿದ್ದು, ಅದೇ ರೀತಿ ಕರಾವಳಿ ಭಾಗದಲ್ಲಿ...

ಮುಂಗಾರು ಮಳೆ ಕೊರತೆ: ಸವಾಲನ್ನು ಅವಕಾಶವಾಗಿ ಪರಿವರ್ತಿಸಿ- ಮೋದಿ ಸಲಹೆ

ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆಯಾಗಿ ಹೊಸ ಸವಾಲು ಎದುರಾಗುವುದು ಖಚಿತವಾದ ಹಿನ್ನೆಲೆಯಲ್ಲಿ, ಸವಾಲನ್ನು ಅವಕಾಶವಾಗಿ ಪರಿವರ್ತಿ ಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ...

ಕೇರಳಕ್ಕೆ ಮುಂಗಾರು ಪ್ರವೇಶ: ಇನ್ನಷ್ಟು ಪ್ರಬಲವಾಗುವ ಸಾಧ್ಯತೆ

4 ದಿನದ ವಿಳಂಬದ ಬಳಿಕ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಮುಂಗಾರು ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಪ್ರಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮುನ್ನುಗ್ಗಲು ಪೂರಕ ವಾತಾವರಣವಿದೆ. ಕರ್ನಾಟಕ, ತಮಿಳುನಾಡಿನ ಕೆಲ ಭಾಗ, ರಾಯಲ ಸೀಮೆ ಮತ್ತು ಆಂಧ್ರಪ್ರದೇಶದ ಕರಾವಳಿ,...

ಮುಂಗಾರು ಮಾರುತಗಳು ಮತ್ತೆ ವಿಳಂಬ: ಜೂ.3ಕ್ಕೆ ಕೇರಳಕ್ಕೆ ಪ್ರವೇಶ ಸಾಧ್ಯತೆ

ನೈಋತ್ಯ ಮುಂಗಾರು ಮಾರುತಗಳು ಶನಿವಾರವೇ ಕೇರಳ ಪ್ರವೇಶಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮುಂಗಾರು ತುಸು ವಿಳಂಬವಾಗಿದ್ದು, ಜೂ.1ರ ಸೋಮವಾರ ಅಥವಾ ಜೂನ್‌ 3ರ ಬುಧವಾರ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ಸಾಮಾನ್ಯವಾಗಿ ಜೂ.1ರಂದು ಕೇರಳ ಮೂಲಕ ದೇಶವನ್ನು...

ಈ ವರ್ಷ ಕಡಿಮೆ ಮುಂಗಾರು ಮಳೆ

ಕಳೆದ ಸಾಲಿನಲ್ಲಿ ಮುಂಗಾರಿನ ಮೇಲೆ ಪರಿಣಾಮ ಬೀರಿದ್ದ ಎಲ್ ನಿನೋ ಈ ಬಾರಿಯೂ ಮಾನ್ಸೂನ್‌ ಮೇಲೆ ಕರಾಳ ಛಾಯೆ ಬೀರಲಿದೆ. ಈ ವರ್ಷ ಸಾಮಾನ್ಯ ಸರಾಸರಿಯ ಶೇ.93ರಷ್ಟು ಮಾತ್ರವೇ ಮುಂಗಾರು ಮಳೆ ಸುರಿಯುವ ನಿರೀಕ್ಷೆ ಇದೆ. ಮಳೆ ಕಡಿಮೆಯ ಪ್ರಮಾಣ, ಈಶಾನ್ಯ...

ಒಂದು ವಾರ ಮೊದಲೇ ಮುಂಗಾರು ಆಗಮನ ನಿರೀಕ್ಷೆ

ಭಾರತದ ಮುಂಗಾರಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಕೇರಳಕ್ಕೆ ಈ ವರ್ಷ ಒಂದು ವಾರ ಮೊದಲೇ ಮುಂಗಾರು ಮಳೆ ಆರಂಭವಾಗಲಿದೆ. ಬಹುತೇಕ ಮೇ 24ರಿಂದ 27ರ ನಡುವೆ ಮುಂಗಾರು ಪ್ರವೇಶವಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಕೇರಳಕ್ಕೆ...

ಎಲ್‌ ನಿನೋ: ಈ ವರ್ಷವೂ ಮಳೆಯ ಮೇಲೆ ಪರಿಣಾಮ

ಕಳೆದ ಸಾಲಿನಲ್ಲಿ ಮುಂಗಾರು ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದ ’ಎಲ್‌ ನಿನೋ' ಪ್ರಭಾವ ಈ ಬಾರಿಯೂ ಸದ್ದು ಮಾಡತೊಡಗಿದೆ. ಈ ಬಾರಿ ’ಎಲ್‌ ನಿನೋ” ಪ್ರಭಾವ ಶೇ.50ರಷ್ಟು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಮೆರಿಕ ಹಾಗೂ ಆಸ್ಟ್ರೇಲಿಯಾಗಳು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited