Untitled Document
Sign Up | Login    
Dynamic website and Portals
  

Related News

ಕಾವೇರಿ ವಿವಾದ: ಹೈಕಮಾಂಡ್ ಗೆ ಸಿಎಂ ಮಾಹಿತಿ

ಕಾವೇರಿ ನದಿ ನೀರು ವಿವಾದದ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳು ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ...

ಸ್ಕಾರ್ಪೇನ್ ಜಲಾಂತರ್ಗಾಮಿ ನೌಕೆ ಮಾಹಿತಿ ಸೋರಿಕೆ: ತನಿಖೆಗೆ ಆದೇಶ

ಸ್ಕಾರ್ಪೇನ್ ಜಲಾಂತರ್ಗಾಮಿ ನೌಕೆಯ ಪ್ರಮುಖ ಮಾಹಿತಿಗಳು ಸೋರಿಕೆಯಾಗಿದ್ದು, ಭಾರತದ ಭದ್ರತೆಗೆ ಭಾರಿ ಪ್ರಮಾಣದ ಅಪಾಯದ ಭೀತಿ ಉಂಟಾಗಿದೆ. ಭಾರತೀಯ ನೌಕಾಪಡೆಗಾಗಿ ಆರು ಸ್ಕಾರ್ಪೇನ್ ದರ್ಜೆಯ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದ್ದ ಫ್ರೆಂಚ್ ಕಂಪನಿಯ ಅತಿ ಸೂಕ್ಷ್ಮ ರಹಸ್ಯ ದಾಖಲೆಗಳು ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಫ್ರಾನ್ಸ್ ಮೂಲದ...

ಆಗಸ್ಟ್ 14 ರ ಮಧ್ಯ ರಾತ್ರಿ ರನ್ ಫಾರ್ ಭಾರತ್

ಬಿಜೆಪಿ ಯುವಮೋರ್ಚಾ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ವತಿಯಿಂದ ಆ.14ರ ಮಧ್ಯರಾತ್ರಿ ‘ರನ್ ಫಾರ್ ಭಾರತ್’ ಸ್ವಾತಂತ್ರ್ಯ ಓಟವನ್ನು ಆಯೋಜಿಸಲಾಗಿದೆ. ಫ್ರೀಡಂ ಪಾರ್ಕ್​ನಲ್ಲಿ ರಾತ್ರಿ 9 ಗಂಟೆಯಿಂದ ದೇಶಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಮ್ ಬ್ಯಾಂಡ್ ತಂಡದಿಂದ ಫ್ಯೂಶನ್ ರಾಕ್...

ಆಧಾರ್ ಮಾಹಿತಿ ನೀಡದಿದ್ದಲ್ಲಿ ಎಲ್‌ಪಿಜಿ ಸಬ್ಸಿಡಿ ಸ್ಥಗಿತ

ಜೂನ್‌ 30 ರೊಳಗೆ ಆಧಾರ್‌ ಮಾಹಿತಿ ಸಲ್ಲಿಸುವಂತೆ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಈಗಾಗಲೇ ಗಡುವು ನೀಡಿತ್ತು. ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆಯನ್ನೂ ಮಾಡಲಾಗಿತ್ತು. ಅಲ್ಲಿಯವರೆಗೂ ಆಧಾರ್‌ ಮಾಹಿತಿ ನೀಡದಿದ್ದರೆ ಅಂದರೆ ಸೆಪ್ಟಂಬರ್ ಅಂತ್ಯದೊಳಗೆ ಗ್ರಾಹಕರು ಆಧಾರ್...

ಕೇಂದ್ರ-ರಾಜ್ಯ ಸರ್ಕಾರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು: ಪ್ರಧಾನಿ ಮೋದಿ

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನದೆದ ಅಂತರ್ ರಾಜ್ಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ,...

ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಮಹತ್ವದ ಹೆಜ್ಜೆಯಿಟ್ಟ ಪ್ರಧಾನಿ ಮೋದಿ

ಸ್ವಿಜರ್ಲೆಂಡ್ ನಲ್ಲಿ ಕಪ್ಪು ಹಣದ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಮೂಲಕ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಮೋದಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಸ್ವಿಜರ್ಲೆಂಡ್‌ನ‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ಬಯಲೆಗೆಳೆಯುವ ನಿಟ್ಟಿನಲ್ಲಿ ಸಹಕಾರ ವೃದ್ಧಿಸಲು ಉಭಯ...

ಯಕ್ಷಗಾನ ಮಾಹಿತಿಗಾಗಿ ಮೊಬೈಲ್ ಆಪ್!!!

ಹೌದು, ಇನ್ನೂ ಮುಂದೆ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿ ಇನ್ನೂ ಮುಂದೆ ನಿಮ್ಮ ಮೊಬೈಲ್ ನಲ್ಲಿ ಸಿಗಲಿದೆ. ಇದಕ್ಕಾಗಿಯೇ ರವಿ ಮಡೋಡಿ, ಆದಿತ್ಯ ಪ್ರಸಾದ ಮತ್ತು ರವೀಂದ್ರ ದೊಂಗಡೆ ಎಂಬ ಮೂವರು ಬೆಂಗಳೂರಿನ Software Enginners ಸೇರಿ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿಗಾಗಿ ಒಂದು...

ತೆರಿಗೆ ಕಳ್ಳರ ಪತ್ತೆಗೆ ಭಾರತ-ಅಮೆರಿಕಾ ಸಹಯೋಗ

ಕಡಲಾಚೆಗಿನ ತೆರಿಗೆ ವಂಚಕರ ಪತ್ತೆಗೆ ಮತ್ತು ತೆರಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅಮೆರಿಕಾ ಮತ್ತು ಭಾರತ ಪರಸ್ಪರ ಸಮ್ಮತಿ ಸೂಚಿಸಿವೆ. ಅಮೆರಿಕಾದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಅಮೆರಿಕಾದ ಖಜಾನೆ ಕಾರ್ಯದರ್ಶಿ ಜಾಕೋಬ್‌ ಲೇವ್‌ ಅವರ ನಡುವೆ ನಡೆದ 6 ನೇ...

ಆಧಾರ್ ಕಾರ್ಡ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

ಸರ್ಕಾರದ ಯಾವುದೇ ಜನಕಲ್ಯಾಣ ಯೋಜನೆಗಳಿಗೆ ಆಧಾರ್‌ ಕಾರ್ಡ್ ಅನ್ನು ಕಡ್ಡಾಯಗೊಳಿಸುವಂತಿಲ್ಲ ಮತ್ತು ಆಧಾರ್ ಕಾರ್ಡ್ ಹೊಂದಿರುವವರ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ನ್ಯಾಯಾಧೀಶ ಚೆಲಮೇಶ್ವರ ಅವರ ನೇತೃತ್ವದ ನ್ಯಾಯಪೀಠ ಕೆಲವು ಮಾರ್ಗಸೂಚಿಗಳನ್ನು ನೀಡಿ, ಕೇಂದ್ರ...

ದಾವೂದ್, ಹಫೀಜ್‌ ಸಯೀದ್, ಲಖ್ವಿ ವಿರುದ್ಧ ಕ್ರಮಕ್ಕೆ ಭಾರತದ ಒತ್ತಡ

ದೇಶದ ಮೋಸ್ಟ್‌ ವಾಂಟೆಡ್‌ ಉಗ್ರರಾದ ದಾವೂದ್‌ ಇಬ್ರಾಹಿಂ, ಜಮಾತ್‌ ಉದ್‌ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌, ಲಷ್ಕರ್‌ ಕಮಾಂಡರ್‌ ಝಕಿ ಉರ್‌ ರೆಹಮಾನ್‌ ಲಖ್ವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಭಾರತ ಮತ್ತೂಮ್ಮೆ ಒತ್ತಡ ಹೇರಲು ಮುಂದಾಗಿದೆ. ಈ ಸಂಬಂಧ...

ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಮೇಲೆ ನಿಗಾ ಇಡಲು ಆಪ್ ಸರ್ಕಾರ ಸೂಚನೆ

ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ತೀವ್ರ ನಿಗಾ ವಹಿಸಲು ಆಮ್ ಆದ್ಮಿ ಸರ್ಕಾರ ಮಾಹಿತಿ ಮತ್ತು ಪ್ರಸರಣ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ. ತಮ್ಮ ಪಕ್ಷದ ವರ್ಚಸ್ಸನ್ನು ಕುಗ್ಗಿಸಲು ಮಾಧ್ಯಮಗಳು ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ ಬೆನ್ನಲ್ಲೇ ಈ...

ಮೋದಿ ಸರ್ಕಾರ ಆರ್.ಟಿ.ಐ.ಯನ್ನು ದುರ್ಬಲಗೊಳಿಸುತ್ತಿದೆ: ಸೋನಿಯಾ ಗಾಂಧಿ

ಕೇಂದ್ರ ಎನ್‌.ಡಿ.ಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ(ಆರ್‌.ಟಿ.ಐ)ಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ನರೇಂದ್ರ ಮೋದಿ ಅವರು ಎಲ್ಲಾ ಅಧಿಕಾರ...

ಐಸಿಸ್ ಸೇರಿದ್ದ ಹೈದರಾಬಾದ್ ಯುವಕ ಸಿರಿಯಾದಲ್ಲಿ ಬಲಿ

ಐಸಿಸ್ ಉಗ್ರಗಾಮಿ ಸಂಘಟನೆ ಸೇರಿದ್ದ ಹೈದರಾಬಾದ್ ನ ಇಂಜಿನಿಯರಿಂಗ್ ವಿದ್ಯಾರ್ಥಿ, ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ಮಾಹಿತಿ ತಿಳಿಸಿವೆ. ಸಾವನ್ನಪ್ಪಿರುವ ವಿದ್ಯಾರ್ಥಿ 25ವರ್ಷದ ಹನೀಫ್ ವಾಸೀಂ ಎಂದು ತಿಳಿದುಬಂದಿದೆ. 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ....

ಒಬಾಮಾ ಭಾರತ ಭೇಟಿ ವಿಚಾರ: ಖರ್ಚು-ವೆಚ್ಚದ ವಿವರ ನೀಡಲು ಕೇಂದ್ರ ನಕಾರ

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ವಿವರ ನೀಡಿ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ...

2ಜಿ ಹಗರಣದಲ್ಲಿ ಮನಮೋಹನ್ ಸಿಂಗ್ ಪಾತ್ರವಿಲ್ಲ: ಸಿಬಿಐ

2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಏನು ಇಲ್ಲ ಎಂದು ವಿಶೇಷ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ನಡೆಯುತ್ತಿದ್ದು,...

ಅದಿರು ಲೂಟಿಯಾಗಿದ್ದು ಬಿಜೆಪಿ ಅವಧಿಯಲ್ಲಿ: ಸಿದ್ದರಾಮಯ್ಯ

ಅದಿರು ಲೂಟಿಯಾಗಿದ್ದು ನಮ್ಮ ಅವಧಿಯಲ್ಲಿ ಅಲ್ಲ, ಬಿಜೆಪಿ ಅವಧಿಯಲ್ಲಿ ಗಣಿ ಸಂಪತ್ತು ಲೂಟಿಯಾಗಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಪರಿಷತ್ ನ ಕೊನೆಯ ದಿನದ ಕಲಾಪದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿ ವಿಷಯದಲ್ಲಿ ರಾಜ್ಯ ಮರ್ಯಾದೆ...

ಪ್ರಧಾನಿ ಮೋದಿ, ಒಬಾಮಾ, ಪುಟಿನ್ ಖಾಸಗಿ ಮಾಹಿತಿ ಸೋರಿಕೆ

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿದಂತೆ ವಿಶ್ವದ 31 ಗಣ್ಯರ ಖಾಸಗಿ ಮಾಹಿತಿ ಏಷ್ಯನ್‌ ಕಪ್‌ ಫ‌ುಟ್ಬಾಲ್‌ ಟೂರ್ನಮೆಂಟ್‌ನ ಆಯೋಜಕರಿಗೆ ಸೋರಿಕೆಯಾದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ನವೆಂಬರ್...

ಭಾರತದ ಒಳನುಸುಳಲು ಗಡಿರೇಖೆ ಬಳಿ ಬೀಡುಬಿಟ್ಟ ಉಗ್ರರು

ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕಿರುವ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರರು ದೇಶದೊಳಗೆ ನುಗ್ಗಲು ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಬೀಡುಬಿಟ್ಟಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಗಡಿರೇಖೆಗೆ ಹೊಂದಿಕೊಂಡಿರುವ ಬಾಬಾಭಾಯಿ ಮಸ್ರೂರ್, ಅಭಿಯಲ್ ದೋಗ್ರಾ, ಚಾಪ್ರಾರ್, ಸುಕ್ಮಾಲ್ ಮತ್ತಿತರ ಕಡೆ 8...

ಸೋನಿಯಾ ಗಾಂಧಿ ವಿರುದ್ಧ ಹೆಚ್.ಆರ್.ಭಾರದ್ವಾಜ್‌ ವಾಗ್ದಾಳಿ

ಕರ್ನಾಟಕ ರಾಜ್ಯಪಾಲ ಹುದ್ದೆಯಿಂದ ನಿವೃತ್ತರಾದ ಬಳಿಕ ಮೌನಕ್ಕೆ ಶರಣಾಗಿದ್ದ ಹಂಸರಾಜ್‌ ಭಾರದ್ವಾಜ್‌ ಅವರು ದಿಢೀರನೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ನಾಯಕ ಪಿ.ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2ಜಿ ಸ್ಪೆಕ್ಟ್ರಂ ಹಂಚಿಕೆ ಪ್ರಕರಣದ ವಿಚಾರದಲ್ಲಿ ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ...

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ) ರದ್ದು: ಸುಪ್ರೀಂ ತೀರ್ಪು

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ) ನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ತರ ತೀರ್ಪು ನೀಡಿದೆ. ನ್ಯಾಯಾಧೀಶರಾದ ಜೆ.ಚೆಲಮೇಶ್ವರ್ ಮತ್ತು ರೋಹಿಂಗ್ಟನ್ ನಾರಿಮನ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ)ನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ. ಸೆಕ್ಷನ್ 66 ಎ...

ನಕಲಿ ಮತದಾರರ ಹೆಸರು ಸೇರ್ಪಡೆಗೆ ಬ್ರೇಕ್

ಇನ್ಮುಂದೆ ಆಧಾರ್ ಕಾರ್ಡ್ ನಂಬರ್ ಮತದಾರರ ಲಿಸ್ಟ್ ಗೆ ಸೇರ್ಪಡೆಯಾಗಲಿದೆ. ಇದರಿಂದಾಗಿ ನಕಲಿ ಮತದಾರರ ಸೇರ್ಪಡೆಗೆ ಕಡಿವಾಣ ಬೀಳಲಿದೆ. ಜೊತೆಗೆ ಜಗತ್ತಿನಲ್ಲಿಯೇ ಮಾಹಿತಿಯಾಧಾರಿತ ಬಯೋಮೆಟ್ರಿಕ್ ಹೊಂದಿರುವ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಎಚ್.ಎಸ್.ಬ್ರಹ್ಮ...

ರಾಹುಲ್‌ ಗಾಂಧಿ ಮನೆಯಲ್ಲಿ ಪೊಲೀಸ್‌ ಗೂಢಚರ್ಯೆ: ಕಾಂಗ್ರೆಸ್‌ ಕಿಡಿ

ರಜೆ ಮೇಲೆ ತೆರಳಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮನೆಗೆ ಹೋಗಿ ಅವರ ಬಣ್ಣ, ಎತ್ತರ, ವಯಸ್ಸು, ಧರಿಸುವ ಬಟ್ಟೆ, ತಂದೆ ಹೆಸರು, ಭೇಟಿ ನೀಡುವ ಸ್ಥಳಗಳ ಬಗ್ಗೆ ದೆಹಲಿ ಪೊಲೀಸ್‌ ಸಿಬ್ಬಂದಿ ಮಾಹಿತಿ ಕೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು...

ದೆಹಲಿ ಪೊಲೀಸರಿಂದ ರಾಹುಲ್‌ ಗಾಂಧಿ ಚಹರೆ ವಿವರ ಸಂಗ್ರಹ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗಾಗಿ ದೆಹಲಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ರಾಹುಲ್ ಗಾಂಧಿ ರಜೆ ಮೇಲೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಪದೇ ಪದೇ ಹೇಳುತ್ತಿದ್ದರು ಇದನ್ನು ಗಂಭೀರವಾಗಿ ಪರಿಗಣಿಸದ ದೆಹಲಿ ಪೊಲೀಸ್ ರಾಹುಲ್ ಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ರಾಜಕಾರಣದಿಂದ ಕೊಂಚ...

ಗೂಗಲ್ ನಿಂದ ಬಳಕೆದಾರರ ಮಾಹಿತಿ ಸೋರಿಕೆ

ವಿಶ್ವದ ಖ್ಯಾತ ಸರ್ಚ್ ಇಂಜಿನ್ ಗೂಗಲ್ 2,80,000 ಬಳಕೆದಾರರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡಿದೆ. ಬಳಕೆದಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಹಾಗೂ ಈ ಮೇಲ್ ವಿವರಗಳೂ ಸೋರಿಕೆಯಾಗಿವೆ ಎಂದು ಹೇಳಲಾಗಿದೆ. ಭದ್ರತಾ ಸಂಶೋಧಕರಿಗೆ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದು ತಡವಾಗಿ ಬೆಳಕಿಗೆ...

ಕಾರ್ಪೊರೇಟ್ ಬೇಹುಗಾರಿಕೆ ಹಗರಣ: ಮತ್ತೋರ್ವ ಆರೋಪಿ ಬಂಧನ

ಕಾರ್ಪೋರೇಟ್ ಬೇಹುಗಾರಿಕೆ ಮತ್ತು ರಹಸ್ಯ ಸರ್ಕಾರಿ ದಾಖಲೆಗಳ ಮಾಹಿತಿ ಸೋರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ಆಡಿಟ್ ವಿಭಾಗದ ನೌಕರನನ್ನು ಬಂಧಿಸಲಾಗಿದೆ. ದೆಹಲಿ ಕ್ರೈಮ್ ಬ್ರ್ಯಾಂಚ್ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಆರೋಪಿ ವಿರೇಂದರ್ ಎಂದು ತಿಳಿದುಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲಿಯಂ...

ಮಾಹಿತಿ ಸೋರಿಕೆ ಪ್ರಕರಣ: ಇದು 10,000 ಕೋಟಿಯ ಹಗರಣ

ಪೆಟ್ರೋಲಿಯಂ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂತನು ಸೈಕಿಯಾ ಎಂಬ ಪತ್ರಕರ್ತ ವಿಚಾರಣೆ ವೇಳೆ ತಾನು ಈ ಹಗರಣದಲ್ಲಿ ಭಾಗಿಯಾಗಿಲ್ಲ. ನನಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ ಏನಾಗಬೇಕಿದೆ? ನಾನು ಅಂಥಾ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ. ನಾನು...

ಭಾರತೀಯ ಕರಾವಳಿ ಪ್ರವೇಶಿಸಲು ಲಷ್ಕರ್-ಎ-ತೊಯಿಬಾ ಸಂಚು

ಲಷ್ಕರ್-ಎ-ತೊಯಿಬಾ ಉಗ್ರರು ಸಮುದ್ರ ಮಾರ್ಗದ ಮೂಲಕ ಭಾರತೀಯ ಕರಾವಳಿ ಪ್ರವೇಶಿಸಲು ಸಿದ್ಧತೆ ನಡೆಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರರು ಈ ಬಾರಿ ಭಾರತೀಯ ಯುದ್ಧನೌಕೆ ಸೇರಿದಂತೆ ನೌಕಾಪಡೆಯ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ದಾಳಿ...

ಕಪ್ಪು ಹಣ: ಮಾಹಿತಿದಾರನಿಗೆ ಕಮಿಷನ್‌ ನೀಡಲು ಕೇಂದ್ರದ ನಿರ್ಧಾರ

ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಕುರಿತು ಮಾಹಿತಿ ನೀಡಲು ಮುಂದೆ ಬಂದಿರುವ ವ್ಯಕ್ತಿಗೆ, ಆತ ನೀಡುವ ಮಾಹಿತಿ ಆಧರಿಸಿ ವಶಪಡಿಸಿಕೊಳ್ಳಲಾಗುವ ಕಪ್ಪು ಹಣದಲ್ಲಿ ಶೇ.5ರಷ್ಟು ಕಮೀಷನ್‌ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಪ್ಪು ಕುಳಗಳ ಪಟ್ಟಿಯನ್ನು ಕದ್ದು ಬಿಡುಗಡೆ...

ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ: ಮಹತ್ವದ ಮಾಹಿತಿ ಲಭ್ಯ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಚ್‌ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಕುರಿತು ವಿಶೇಷ ತನಿಖಾ ತಂಡಕ್ಕೆ...

ಎನ್ ಜಿಒಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತನೆ

ವಿದೇಶಿ ದೇಣಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ, ಉಗ್ರಗಾಮಿ ಚಟುವಟಿಕೆಗಳ ಜತೆಗೆ ಸಂಬಂಧ ಇಟ್ಟುಕೊಂಡಿರುವ ಹಾಗೂ ಮತಾಂತರ ಕಾರ್ಯದಲ್ಲಿ ನಿರತವಾಗಿರುವ ಆರೋಪ ಎದುರಿಸುತ್ತಿರುವ 188 ಎನ್ ಜಿಒಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇಂಥ ಎನ್ ಜಿಒಗಳ ಪಟ್ಟಿಯನ್ನು...

ಬೆಂಗಳೂರಿನಲ್ಲಿ ಶಂಕಿತ ಬೋಡೋ ಉಗ್ರನ ಬಂಧನ

ಬೆಂಗಳೂರಿನಲ್ಲಿ ಶಂಕಿತ ಬೋಡೋ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಗುಪ್ತಚರ ಇಲಾಖೆ ಮತ್ತು ಅಸ್ಸಾಂ ಪೊಲೀಸರು ನೀಡಿದ ಮಾಹಿತಿಯ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಕಾಟನ್‌ಪೇಟೆಯಲ್ಲಿ ಅಡಗಿದ್ದ ಶಂಕಿತ ಬೋಡೋ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತನು ನಾಗಾಲ್ಯಾಂಡ್ ಮೂಲದವನೆಂದು...

ಬಂಧಿತ ನಾಲ್ವರು ಶಂಕಿತ ಉಗ್ರರಿಂದ ಸ್ಫೋಟಕ ಮಾಹಿತಿ

ಬಂಧಿಸಲ್ಪಟ್ಟ ನಾಲ್ವರು ಶಂಕಿತ ಉಗ್ರರಿಂದ ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿದೆ. ಬಂಧಿಸಲ್ಪಟ್ಟ ಶಂಕಿತ ಉಗ್ರರನ್ನು ವಿಶೇಷ ತನಿಖಾ ತಂಡ ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ. ಪ್ರಮುಖ ಆರೋಪಿ ಅಫಕ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದವನಾಗಿದ್ದು, ಭಟ್ಕಳದಲ್ಲಿ ಪಿಎಫ್ ಐ ಅಧ್ಯಕ್ಷನಾಗಿದ್ದ. ಅಲ್ಲದೇ ಈತ...

ಜಾತಿ ಗಣತಿ: ಏಪ್ರಿಲ್ 11ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭ

ರಾಜ್ಯದ ಜನತೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಏಪ್ರಿಲ್ 11 ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭವಾಗುವುದರೊಂದಿಗೆ ಜಾತಿ ಗಣತಿಗೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮೀಕ್ಷೆ...

ಸ್ಫೋಟವಾದ ಹಡಗು ನಮ್ಮದಲ್ಲ: ಪಾಕಿಸ್ತಾನ

ಅರಬ್ಬಿ ಸಮುದ್ರದಲ್ಲಿ ಪತ್ತೆಯಾದ ಹಡಗುಗಳು ಪಾಕಿಸ್ತಾನದ ಹಡಗುಗಳಲ್ಲ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಮಾಹಿತಿ ರವಾನಿಸಿದೆ. ಕರಾಚಿಯಿಂದ ಯಾವುದೇ ಹಡಗು ಭಾರತದತ್ತ ಬಂದಿಲ್ಲ. ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಹಡಗುಗಳಲ್ಲ. ಕೇಟಿ ಬಂದರಿನಿಂದ...

ಮುಂಬೈನಲ್ಲಿ ಸಿಮಿ ಉಗ್ರರ ದಾಳಿ ಸಂಭವ

ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ಬಳಿಕ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮುಂಬೈ, ಪುಣೆ, ದೆಹಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್‌ ಸೇರಿದಂತೆ ದೇಶದಾದ್ಯಂತ ಹೈ ಆಲರ್ಟ್‌ ಘೋಷಿಸಲಾಗಿದೆ. ಬೆಂಗಳೂರು ದಾಳಿಯ ನಂತರ ಮುಂಬೈ ಅನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದಾರೆ. ಸಿಮಿ ಉಗ್ರ ಸಂಘಟನೆ ಮುಂಬೈ...

ಸ್ವಿಸ್ ಬ್ಯಾಂಕ್ ಗಿಂತ್ ಭಾರತದಲ್ಲೇ ಅತಿ ಹೆಚ್ಚು ಕಪ್ಪುಹಣ ಪತ್ತೆ

ಕಪ್ಪುಹಣ ಕುರಿತು ಇದೇ ಮೊದಲ ಬಾರಿಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ವು, ಇದುವರೆಗೆ 20,000 ಕೋಟಿ ರೂ. ನಷ್ಟು ಕಪ್ಪುಹಣವನ್ನು ಪತ್ತೆ ಮಾಡಿರುವುದಾಗಿ ಹೇಳಿದೆ. ವಿಶೇಷವೆಂದರೆ ಹೀಗೆ ಪತ್ತೆಯಾದ ಕಪ್ಪುಹಣದ ಪೈಕಿ ಸ್ವಿಸ್‌ ಬ್ಯಾಂಕ್‌ನಲ್ಲಿ ಇರುವುದು 4479...

ಅನಧಿಕೃತ ಶಾಲೆಗಳ ಮೇಲೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ

ರಾಜ್ಯದಾದ್ಯಂತ ಅನುಮತಿರಹಿತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳ ಮೇಲೆ ಸೂಕ್ತ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಎಂ.ಶ್ರೀನಿವಾಸ್ ಅವರು ಕೇಳಿದ ಪ್ರಶ್ನೆಗೆ ಉತ್ತರಸಿದ ಸಚಿವರು ಯಾವ...

ಕಪ್ಪುಹಣ: ಪ್ರಬಲ ಸಾಕ್ಷಿಯನ್ನು ನೀಡಿದರೆ ಮಾತ್ರ ಮಾಹಿತಿ

ಕಪ್ಪುಹಣ ಕುರಿತಂತೆ ಎಲ್ಲ ಭಾರತೀಯ ಖಾತೆದಾರರ ಮಾಹಿತಿ ನೀಡುವಂತೆ ಭಾರತದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, ಉಲ್ಟಾ ಹೊಡೆದಿರುವ ಸ್ವಿಟ್ಜರ್ಲೆಂಡ್ ಸರ್ಕಾರ ಆದಾಯ ತೆರಿಗೆ ಅಕ್ರಮದಲ್ಲಿ ಖಾತೆದಾರ ಪಾಲ್ಗೊಂಡಿರುವ ಕುರಿತು ಪ್ರಬಲ ಸಾಕ್ಷಿಯನ್ನು ನೀಡಿದರೆ ಮಾತ್ರ ಭಾರತಕ್ಕೆ ಮಾಹಿತಿ ನೀಡುತ್ತೇವೆ. ಇಲ್ಲವಾದರೆ ಈ ಬಗ್ಗೆ...

ಕಪ್ಪು ಹಣದ ಬಗ್ಗೆ ಭಾರತಕ್ಕೆ ಮಾಹಿತಿ ಇಲ್ಲ: ಹರ್ವ್ ಫಾಲ್ಸಿಯಾನಿ

ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಕುರಿತು ಭಾರತಕ್ಕೆ ಶೇ.1ರಷ್ಟೂ ಮಾಹಿತಿ ಇಲ್ಲ ಎಂದು ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿ ಬಿಡುಗಡೆ ಮಾಡಿದ ಖ್ಯಾತಿಯ ಹರ್ವ್ ಫಾಲ್ಸಿಯಾನಿ ಹೇಳಿದ್ದಾರೆ. ಫ್ರಾನ್ಸ್‌ನಲ್ಲಿ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿರುವ ಹರ್ವ್ ಫಾಲ್ಸಿಯಾನಿ, ಕಪ್ಪು ಹಣದ ಬಗ್ಗೆ ಭಾರತಕ್ಕೆ ಹೆಚ್ಚು...

ಕಪ್ಪುಹಣ ಖಾತೆದಾರರ 2ನೇಪಟ್ಟಿ ಸಲ್ಲಿಸಿದ ಕೇಂದ್ರ ಸರ್ಕಾರ

ವಿದೇಶದಲ್ಲಿ ಕಪ್ಪುಹಣ ಇಟ್ಟಿರುವ ಖಾತೆದಾರರ ಎರಡನೇ ಪಟ್ಟಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, 627 ಖಾತೆದರರ ಹೆಸರನ್ನು ಸಲ್ಲಿಕೆ ಮಾಡಿದೆ. ಕಪ್ಪುಹಣ ಇಟ್ಟಿರುವ ಎಲ್ಲಾ ಖಾತೆದಾರರ ಹೆಸರನ್ನು ಒಂದು ದಿನದಲ್ಲಿ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಹಿನ್ನಲೆಯಲ್ಲಿ ಕೇಂದ್ರ...

ಕಪ್ಪುಹಣದ ಬಗ್ಗೆ ಒಪ್ಪಿಕೊಂಡ 136 ಜನ

ವಿದೇಶಗಳಲ್ಲಿ ಕಪುಹಣ ಇಟ್ಟಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವ ಬೆನ್ನಲ್ಲೇ ವಿದೇಶಿ ತೆರಿಗೆಯಲ್ಲಿ ಖಾತೆ ಹೊಂದಿರುವುದನ್ನು ಸ್ಪಷ್ಟಪಡಿಸಿ 136 ಜನ ದಂಡ ಕಟ್ಟಲು ಮುಂದೆ ಬಂದಿದ್ದಾರೆ. ಎಚ್‌ಎಸ್‌ಬಿಸಿ ಬ್ಯಾಂಕಿನ ಸ್ವಿಜರ್ಲೆಂಡ್‌ನ‌ ಜಿನೇವಾ ಶಾಖೆಯಲ್ಲಿ ಖಾತೆ ಹೊಂದಿರುವ 628 ಭಾರತೀಯರು ಅಥವಾ...

ಕಪ್ಪುಹಣದ ಮಾಹಿತಿ ನೀಡಲು ಸ್ವಿಜರ್ಲೆಂಡ್ ಸಮ್ಮತಿ

ಕಪ್ಪುಹಣವಿಟ್ಟ ತನ್ನ ನಾಗರಿಕರ ಮಾಹಿತಿ ನೀಡುವಂತೆ ಭಾರತ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಮನವಿಗೆ ಸ್ವಿಜರ್ಲೆಂಡ್ ಸರ್ಕಾರ ಸಮ್ಮತಿ ಸೂಚಿಸಿದೆ. ಭಾರತೀಯ ಬ್ಯಾಂಕಿಂಗ್ ಮಾಹಿತಿಯನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ನೀಡುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಘೋಷಿಸಿದೆ. ಇದು ಸ್ವಿಸ್ ಬ್ಯಾಂಕ್ ಗಳಲ್ಲಿ ಇರುವ...

ಮಂಗಳನ ಅಂಗಳದಿಂದ ಫೋಟೋ ರವಾನೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆ ಮಾಡಿರುವ ಮಂಗಳಯಾನ ನೌಕೆ (ಮಾಮ್) ಮಂಗಳನ ಅಂಗಳದಿಂದ 5 ಫೋಟೋಗಳನ್ನು ರವಾನಿಸಿದೆ. ಇಸ್ರೋ ಉಡಾವಣೆ ಮಾಡಿರುವ ಮಾಮ್ ನೌಕೆ ಸೆ.24ರಂದು ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿದ್ದು, ಮಂಗಳನ ಗ್ರಹದಿಂದ ಕಲರ್ ಫೋಟೊ ಗಳನ್ನು ರವಾನಿಸಿದೆ. ಈ...

ದೇಶಾದ್ಯಂತ ಭಾರೀ ಮಳೆ ಸಂಭವ

ದೇಶಾದ್ಯಂತ ಮುಂದಿನ 48 ಗಂಟೆಗಳೊಳಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ನಾಲ್ಕು ದಿನಳವರೆಗೆ ಭಾರೀ ಮಳೆಯಾಗಲಿದ್ದು, ಸಮುದ್ರಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ನಿರ್ಬಂಧ ಹಾಕಬೇಕು ಹಾಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಅಂಡಮಾನ್ -...

ಪಾಕ್ ಮಹಿಳೆಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೆ: ವಾಯುಪಡೆ ನೌಕರ ಬಂಧನ

'ಪಂಜಾಬ್' ನ ಪಠಾಣ್ ಕೋಟ್ ನ ಭಾರತೀಯ ವಾಯುಪಡೆಯ ನೌಕರನನ್ನು ಬಂಧಿಸಲಾಗಿದೆ. ವಾಯುಪಡೆ ಕಾರ್ಯತಂತ್ರದ ಮಾಹಿತಿಯನ್ನು ಪಾಕಿಸ್ತಾನ ಮಹಿಳೆಯೊಂದಿಗೆ ಹಂಚಿಕೊಂಡಿರುವ ಆರೋಪದಡಿ ವಾಯುಪಡೆ ನೌಕರ ಸುನಿಲ್ ಕುಮಾರ್ ಬಂಧನಕ್ಕೊಳಗಾಗಿದ್ದಾನೆ. ಬಂಧಿತ ಆರೋಪಿ ಸುನಿಲ್ ಜೋಧ್ ಪುರ ಮೂಲದವನಾಗಿದ್ದು ಸ್ಥಳೀಯ ನ್ಯಾಯಾಲಯ ಆತನನ್ನು...

ವರ್ಷದಲ್ಲಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಹುದ್ದೆ ಭರ್ತಿ: ರವಿಶಂಕರ್ ಪ್ರಸಾದ್

ವರ್ಷದೊಳಗೆ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ ವರೆಗಿನ ಮಾಹಿತಿ ಪ್ರಕಾರ 4,382 ನ್ಯಾಯಾಂಗ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಇವುಗಳಲ್ಲಿ...

ವಂಚನೆ ಪ್ರಕರಣ: ಡಿ.ವಿ.ಎಸ್ ರಿಂದ ಮಾಹಿತಿ ಕೇಳಿದ ಅಮಿತ್ ಶಾ

ಕಾರ್ತಿಕ್ ವಿರುದ್ಧದ ನಟಿ ಮೈತ್ರೇಯ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಸದಾನಂದ ಗೌಡರಗೆ ಮಾಹಿತಿ ಕೇಳಿದ್ದಾರೆ. ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ನಟಿ ಮೈತ್ರೇಯಾ ಗೌಡ ಅವರಿಗೆ ವಂಚಿಸಿದ್ದಾರೆ...

ಇನ್ನು ಮುಂದೆ .ಇನ್ ಡೊಮೇನ್ ಹೆಸರಿನ ಬದಲು .ಭಾರತ್ ಡೊಮೇನ್ ಹೆಸರು ಪಡೆಯಲು ಅವಕಾಶ

ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ 8 ಭಾಷೆಗಳನ್ನೊಳಗೊಂಡ .ಭಾರತ್ ಡೊಮೇನ್ (.Bharat domain) ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದೇ ಪ್ರಥಮ ಬಾರಿಗೆ ದೇವನಾಗರಿ ಭಾಷೆಯಲ್ಲಿ .ಭಾರತ್(.Bharat) ಡೊಮೇನ್ ನ್ನು ಆರಂಭಿಸಲಾಗಿದೆ. ಭಾರತ ಸರ್ಕಾರ ಚಾಲನೆ ನೀಡಿರುವ .ಭಾರತ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited