Untitled Document
Sign Up | Login    
Dynamic website and Portals
  

Related News

ಫ್ರಾನ್ಸ್ ದಾಳಿ ಮಾದರಿಯಲ್ಲಿ ಪ್ರಧಾನಿ ಮೋದಿ ಹಾಗೂ ಕೆಲ ಗಣ್ಯರ ಮೇಲೆ ದಾಳಿಗೆ ಉಗ್ರರ ಸಂಚು

ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರ ಮೇಲೆ ಭಾರೀ ವಾಹನಗಳನ್ನು ಬಳಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿವೆ. ಫ್ರಾನ್ಸ್‌ನ ನೈಸ್‌ ನಗರ ದಲ್ಲಿ ಟ್ರಕ್‌ ಹಾಯಿಸಿ 84 ಜನರನ್ನು ಹತ್ಯೆಗೈದ ಮಾದರಿಯಲ್ಲೇ ಭಾರತದಲ್ಲೂ...

ಫ್ರಾನ್ಸ್ ನಲ್ಲಿ ಉಗ್ರರ ದಾಳಿ: 80ಕ್ಕೂ ಹೆಚ್ಚು ಜನರು ಸಾವು

ಫ್ರಾನ್ಸ್ ನಲ್ಲಿ ಬ್ಯಾಸ್ಟೀಲ್ ಡೇ ಆಚರಿಸುತ್ತಿರುವ ಸಂದರ್ಭದಲ್ಲಿ ಫ್ರಾನ್ಸ್​ನ ನೈಸ್ ನಗರದಲ್ಲಿ ಉಗ್ರರ ದಾಳಿ ನಡೆದಿದ್ದು, ಘಟನೆಯಲ್ಲಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ದಿನಾಚರಣೆ ಬ್ಯಾಸ್ಟೀಲ್ ಡೇ ಸಂಭ್ರಮಾಚರಣೆ ವೇಳೆ ನೀಸ್ ನಗರದ ಬೀಚ್ ರೆಸಾರ್ಟ್...

ಫ್ರಾನ್ಸ್ ನಲ್ಲಿ ಉಗ್ರರ ದಾಳಿ: ಪ್ರಧಾನಿ, ರಾಷ್ಟ್ರಪತಿ ಖಂಡನೆ

ಫ್ರಾನ್ಸ್​ನ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದಾರೆ, ಫ್ರೆಂಚ್ ಸಹೋದರ-ಸಹೋದರಿಯರ ಜತೆಗೆ ಭಾರತವಿದೆ ಎಂಬ ಭರವಸೆ ನೀಡಿದ್ದಾರೆ. ಫ್ರಾನ್ಸ್ ನ ರಾಷ್ಟ್ರೀಯ ದಿನಾಚರಣೆ ಬ್ಯಾಸ್ಟೀಲ್ ಡೇ ಆಚರಣೆ ಸಂದರ್ಭದಲ್ಲಿ ನಡೆದ ಉಗ್ರರ ದಾಳಿಯಿಂದ 80ಕ್ಕೂ ಅಧಿಕ...

36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳ ಸಹಿ

ಬಹು ನಿರೀಕ್ಷಿತ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳು ಸೋಮವಾರ ಸಹಿ ಹಾಕಿವೆ. ಸುಮಾರು 60,000 ಕೋಟಿ ರೂ. ವೆಚ್ಚದ ಈ ಮಹತ್ವದ ಅಂತರ-ಸರಕಾರೀ ಒಪ್ಪಂದ (Inter-Governmental Agreement -IGA) ಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದು,...

ಮಾನವೀಯತೆಯ ಶತ್ರುಗಳ ವಿರುದ್ಧ ಭಾರತ ಮತ್ತು ಫ್ರಾನ್ಸ್ ಒಗ್ಗಟ್ಟಿನ ಹೋರಾಟಃ ಪ್ರಧಾನಿ ನರೇಂದ್ರ ಮೋದಿ

ಭಾರತ ಮತ್ತು ಫ್ರಾನ್ಸ್ ಮಾನವೀಯತೆಯ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಜೊತೆಯಾಗಿ ನಿಲ್ಲುತ್ತವೆ ಎಂದು ಪ್ರಧಾನಿ ಮೋದಿ ಭಾನುವಾರ ಭಯೋತ್ಪಾದನೆಯ ವಿರುದ್ಧದ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ. ಭಾನುವಾರ ಚಂಡಿಗಢದಲ್ಲಿ ನಡೆದ ಭಾರತ-ಫ್ರಾನ್ಸ್ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್...

ಜಾಗತಿಕ ತಾಪದ ವಿರುದ್ಧ ಪ್ಯಾರಿಸ್ ನಲ್ಲಿ ಶೃಂಗಸಭೆ ಆರಂಭ

130 ಜನರನ್ನು ಬಲಿ ಪಡೆದ ಪ್ಯಾರಿಸ್‌ ಭಯೋತ್ಪಾದಕ ದಾಳಿಯ ಕರಿನೆರಳಿನಲ್ಲಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ 12 ದಿನಗಳ ವಿಶ್ವ ನಾಯಕರ ಜಾಗತಿಕ ತಾಪಮಾನದ ವಿರುದ್ಧದ ಶೃಂಗಸಭೆ ಸೋಮವಾರದಿಂದ ಆರಂಭವಾಗಿದೆ. ಈ ಮಹಾಸಭೆಗೆ ಸುಮಾರು 9 ಸಾವಿರ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಧಾನಿ ಮೋದಿ,...

ಪ್ಯಾರಿಸ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ 120ಕ್ಕೂ ಹೆಚ್ಚು ನಾಗರಿಕರು ಬಲಿ

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಶುಕ್ರವಾರ ಉಗ್ರರು ನಡೆಸಿದ ದಾಳಿಗೆ 120ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 'ಅಲ್ಲಾಹು ಅಕ್ಬರ್' ಎಂದು ಕೂಗುತ್ತಾ ಉಗ್ರರು ಅಮಾಯಕ ಜನರ ಮೇಲೆ ಗುಂಡಿನ ಮಳೆಗೈದರು ಮತ್ತು ಬಾಂಬ್ ದಾಳಿ ನಡೆಸಿದರು. ಫ್ರಾನ್ಸ್ ಮತ್ತು ಜರ್ಮನಿಗಳ ಮಧ್ಯೆ ಸೌಹಾರ್ಧ...

ಯು.ಎನ್ ನಲ್ಲಿ ಭಾರತಕ್ಕೆ ತುರ್ತಾಗಿ ಶಾಶ್ವತ ಸದಸ್ಯತ್ವ ನೀಡಬೇಕು: ಫ್ರಾನ್ಸ್

'ವಿಶ್ವಸಂಸ್ಥೆ' ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ಫ್ರಾನ್ಸ್ ಒತ್ತಾಯಿಸಿದೆ. ಬದಲಾಗಿರುವ ಜಗತ್ತಿನಲ್ಲಿ ತುರ್ತಾಗಿ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನ ನೀಡಬೇಕಿದೆ ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕಿದೆ ಎಂದು ಫ್ರಾನ್ಸ್ ಹೇಳಿದೆ. ಭಾರತದೊಂದಿಗೆ ಬ್ರೆಜಿಲ್ ಹಾಗೂ...

ಮೇಕ್‌ ಇನ್‌ ಇಂಡಿಯಾಗೆ ಸಹಕಾರ ನೀಡಲು ಫ್ರಾನ್ಸ್‌ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಫ್ರಾನ್ಸ್‌ ಪ್ರವಾಸವು ಫ‌ಲಪ್ರದವಾಗಿದ್ದು, ಫ್ರಾನ್ಸ್‌ ಸರ್ಕಾರ ಮತ್ತು ಅಲ್ಲಿನ ಕಂಪನಿಗಳು ಮೋದಿ ಅವರ ’ಮೇಕ್‌ ಇನ್‌ ಇಂಡಿಯಾ' ಯೋಜನೆಗೆ ಸಹಕಾರ ನೀಡಲು ಭರವಸೆ ವ್ಯಕ್ತಪಡಿಸಿವೆ. 'ಮೇಕ್‌ ಇಂಡಿಯಾ'ಗೆ ಬೆಂಬಲ ಘೋಷಿಸಿರುವ ಪ್ರಸಿದ್ಧ ವಿಮಾನ ಉತ್ಪಾದನಾ ಕಂಪನಿ...

ಯಾವುದೇ ರಾಷ್ಟ್ರ ಉಗ್ರರಿಗೆ ಆಶ್ರಯ ನೀಡಬಾರದು: ಪ್ರಧಾನಿ ಮೋದಿ

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಭಾರತದ ತೀವ್ರ ವಿರೋಧದ ನಡುವೆಯೂ ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ...

ರಫೆಲ್‌ ಯುದ್ಧ ವಿಮಾನ ಖರೀದಿಗೆ ಕೇಂದ್ರ ನಿರ್ಧಾರ: ಸ್ವಾಮಿ ಗರಂ

ಫ್ರಾನ್ಸ್‌ ನೊಂದಿಗೆ ರಫೆಲ್‌ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅವರದ್ದೇ ಪಕ್ಷದ ನಾಯಕ ಸುಬ್ರಮಣಿಯನ್‌ ಸ್ವಾಮಿ ತಿರುಗಿಬಿದ್ದಿದ್ದಾರೆ. ಈಗಾಗಲೇ ಲಿಬಿಯಾ ಮತ್ತು ಈಜಿಪ್ಟ್ನಲ್ಲಿ ರಫೆಲ್‌ ವಿಮಾನಗಳ ಕಳಪೆ ಗುಣಮಟ್ಟ ಸಾಬೀತಾಗಿದೆ. ಹಲವು ರಾಷ್ಟ್ರಗಳು, ರಫೆಲ್‌ ಯುದ್ಧ ವಿಮಾನ...

ವಿಶ್ವಸಂಸ್ಥೆ ಜಗತ್ತನ್ನು ಒಂದಾಗಿರಿಸಿದೆ: ಪ್ರಧಾನಿ ನರೇಂದ್ರ ಮೋದಿ

ಸಂಸ್ಕೃತಿ ಎನ್ನುವುದು ಜಗತ್ತನ್ನು ಒಗ್ಗೂಡಿಸಬೇಕೆ ಹೊರತು, ವಿಭಜಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಫ್ರಾನ್ಸ್ ಪ್ರವಾಸದಲ್ಲಿರುವ ಮೋದಿ, ಏ.10ರಂದು ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಮಾತನಾಡಿ, ಜಗತ್ತನ್ನು ವಿಶ್ವಸಂಸ್ಥೆ ಒಂದಾಗಿಸಿದೆ. ವಿಶ್ವಸಂಸ್ಥೆಯ ಮಹತ್ವವನ್ನು ಭಾರತ ಅರಿತಿದ್ದು ಅದರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಲಿದೆ...

ಪ್ರಧಾನಿ ನರೇಂದ್ರ ಮೋದಿ ತ್ರಿರಾಷ್ಟ್ರ ಪ್ರವಾಸ ಇಂದಿನಿಂದ ಆರಂಭ

ಪ್ರಧಾನಿ ನರೇಂದ್ರ ಮೋದಿ ಅವರ 9 ದಿನಗಳ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಪ್ರವಾಸವು ಏ.9ರಿಂದ ಆರಂಭವಾಗಲಿದೆ. ದೇಶದ ಮೂಲ ಸೌಕರ್ಯ, ಹೂಡಿಕೆ, ರಕ್ಷಣಾ ವಲಯಗಳ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರವಾಸಕ್ಕೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ ಫ್ರಾನ್ಸ್‌ ಗೆ ತೆರಳಲಿರುವ ಮೋದಿ, ಆರ್ಥಿಕತೆ,...

ಜರ್ಮನಿ, ಫ್ರಾನ್ಸ್‌, ಕೆನಡ ಪ್ರವಾಸ ಕೈಗೊಳ್ಳುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂಬರುವ ಜರ್ಮನಿ, ಫ್ರಾನ್ಸ್‌ ಮತ್ತು ಕೆನಡ ಭೇಟಿಯ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ. ಫ್ರಾನ್ಸ್‌ ನೊಂದಿಗೆ ಆರಂಭವಾಗುವ ತಮ್ಮ ತ್ರಿರಾಷ್ಟ್ರ ಭೇಟಿಯು ಭಾರತದ ಆರ್ಥಿಕ ವಿಷಯ ಸೂಚಿಯನ್ನು ಉದ್ದೇಶಿಸಿದೆ ಎಂದು ಮೋದಿ ಹೇಳಿದ್ದಾರೆ. ಫ್ರಾನ್ಸ್‌ನಲ್ಲಿ ಮೋದಿ, ಪ್ಯಾರಿಸ್‌ ಹೊರಗಡೆ...

ಜರ್ಮನ್ ವಿಂಗ್ಸ್ ವಿಮಾನ ದುರಂತ ಉದ್ದೇಶಪೂರ್ವಕ: ಬ್ಲಾಕ್ ಬಾಕ್ಸ್ ನಿಂದ ಬಹಿರಂಗ

ಎರಡು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್ ನ ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಜರುಗಿದ ವಿಮಾನ ದುರಂತ ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು ಎಂಬುದನ್ನು ಬ್ಲಾಕ್ ಬಾಕ್ಸ್ ಬಹಿರಂಗಮಾಡಿದೆ. ಸಹ-ಪೈಲಟ್ ಮತ್ತು ಮುಖ್ಯ ಪೈಲಟ್‍ಗ ಳ ನಡುವಿನ ಜಗಳದಲ್ಲಿ ಈ...

ಫ್ರಾನ್ಸ್ ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

'ದಕ್ಷಿಣ ಫ್ರಾನ್ಸ್' ಲ್ಲಿ ಪತನಕ್ಕೊಳಗಾದ ಜರ್ಮನಿಯ A320 ಡಿ AIRX ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಇದರಿಂದಾಗಿ ವಿಮಾನ ಪತನಕ್ಕೊಳಗಾದ ಕಾರಣ ತಿಳಿಯಲು ಸಹಾಯವಾಗಲಿದೆ. ಕಳೆದ 25 ವರ್ಷಗಳಿಂದ ಬಳಕೆಯಾಗುತ್ತಿದ್ದ ಈ ವಿಮಾನ ನಿಯಂತ್ರಣ ಕಳೆದುಕೊಳ್ಳತ್ತಲೇ ಪೈಲಟ್, ಸಹಾಯಕ್ಕಾಗಿ...

ದಕ್ಷಿಣ ಫ್ರಾನ್ಸ್ ನಲ್ಲಿ ವಿಮಾನ ಪತನ: 148 ಪ್ರಯಾಣಿಕರೂ ಸಾವು

'ದಕ್ಷಿಣ ಫ್ರಾನ್ಸ್' ನಲ್ಲಿ ವಿಮಾನ ಪತನವಾಗಿದ್ದು ವಿಮಾನದಲ್ಲಿದ್ದ ಎಲ್ಲಾ 148 ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ. ಪತನಗೊಂಡಿರುವ ವಿಮಾನ ಜರ್ಮನ್ ವಿಂಗ್ಸ್ ಏರ್ ವೇಸ್ ಗೆ ಸೇರಿದ್ದಾಗಿದೆ. 6 ಸಿಬ್ಬಂದಿಗಳು, 142 ಪ್ರಯಾಣಿಕರಿದ್ದ ಈ ವಿಮಾನ ಬಾರ್ಸಿಲೋನಾದಿಂದ ಡುಸೆಲ್ ಡೋರಫ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು...

ನಿನ್ನೆ ಚಾರ್ಲಿ ಹೆಬ್ಡೋ, ನಾಳೆ ದಿನಮಲಾರ್ : ತಮಿಳುನಾಡಿನ ಪತ್ರಿಕಾ ಕಚೇರಿಗೆ ಬೆದರಿಕೆ

'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದಂತೆಯೇ ದಾಳಿ ನಡೆಸುವುದಾಗಿ ತಮಿಳುನಾಡಿನ ಪತ್ರಿಕೆಗೆ ಬೆದರಿಕೆ ಪತ್ರ ಬಂದಿದೆ. ದಿನಮಲಾರ್ ಪತ್ರಿಕಾ ಕಚೇರಿಗೆ ಈ ಬೆದರಿಕೆ ಪತ್ರ ಬಂದಿದ್ದು, ನಿನ್ನೆ ಚಾರ್ಲಿ ಹೆಬ್ಡೋ ಪತ್ರಿಕೆ ದಾಳಿ ನಡೆದಿತ್ತು, ನಾಳೆ...

ಪತ್ರಿಕಾ ಕಛೇರಿ ಮೇಲೆ ಉಗ್ರರ ದಾಳಿ: ವಿಶ್ವಾದ್ಯಂತ ಖಂಡನೆ

ಪ್ಯಾರಿಸ್ ನ ಪತ್ರಿಕಾ ಕಛೇರಿ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ವಿಶ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಉಗ್ರರ ದಾಳಿ ಹಿನ್ನಲೆಯಲ್ಲಿ ಫ್ರಾನ್ಸ್ ನ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ. ಉಗ್ರರ ದುಷ್ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಮೆರಿಕ ಅಧ್ಯಕ್ಷ...

ಫ್ರಾನ್ಸ್ ಪತ್ರಿಕಾ ಕಚೇರಿ ಮೇಲೆ ಉಗ್ರರ ದಾಳಿ

'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು 12 ಜನ ಸಾವನ್ನಪ್ಪಿದ್ದಾರೆ. ಪ್ಯಾರೀಸ್ ನಲ್ಲಿರುವ ಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ದಾಳಿ ನಡೆದಿದೆ. ಐ.ಎಸ್.ಐ.ಎಸ್ ಉಗ್ರ ಅಲ್ ಬಗ್ದಾದಿಯ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಐ.ಎಸ್.ಐ.ಎಸ್ ಉಗ್ರರು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited