Untitled Document
Sign Up | Login    
Dynamic website and Portals
  

Related News

ಮಧ್ಯ ಪ್ರದೇಶದಲ್ಲಿ ಭಾರೀ ಮಳೆಗೆ ಕುಸಿದ ಮನೆ; 7 ಮಂದಿ ಸಾವು: ಸಿಎಂ ರಿಂದ ತುರ್ತು ಸಭೆ

ಕಳೆದ ಕೆಲದಿನಗಳಿಂದ ಮಧ್ಯಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ರಾಜ್ಯದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತುರ್ತುಸಭೆ ಕರೆದಿದ್ದಾರೆ. ಸಾಗರ್ ಜಿಲ್ಲೆಯ ಬನ್ನೆಘಾಟ್ ಪ್ರದೇಶದಲ್ಲಿ ಬೆಳಗ್ಗೆ ಭೋರ್ಗರೆಯುವ ನೀರು ಮನೆಗಳಿಗೆ...

ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ: 14 ಶವಗಳ ಪತ್ತೆ

ಮುಂಬೈ-ಗೋವಾ ಹೆದ್ದಾರಿಯಲ್ಲಿನ ಬ್ರಿಟಿಷ್ ಕಾಲದಲ್ಲಿ ನಿರ್ವಿುಸಲಾಗಿದ್ದ ಹಳೇ ಸೇತುವೆ ಸಾವಿತ್ರಿ ನದಿಯ ಪ್ರವಾಹಕ್ಕೆ ಸಿಲುಕಿ ಕುಸಿದು ಕೊಚ್ಚಿ ಹೋದ ಬಸ್, ಕಾರು, ಜನರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಎನ್​ಡಿಆರ್​ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಪಡೆಯೊಂದಿಗೆ ಸ್ಥಳೀಯ ಈಜುಗಾರರು ಕೂಡಾ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ...

ಮಧ್ಯಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹ: 35 ಮಂದಿ ಸಾವು, 9 ಜನರು ಕಣ್ಮರೆ

ಮಧ್ಯಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಈವರೆಗೆ 35 ಮಂದಿ ಸಾವನ್ನಪ್ಪಿದ್ದು, 9 ಮಂದಿ ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರೆಲ್ಲರೂ ಮಳೆ ನೀರಿನಲ್ಲಿ ಕೊಚ್ಚಿ ಕೊಂಡು...

ಚೆನೈ ಪ್ರವಾಹ ಪರಿಣಾಮಃ ಎಟಿಎಂ ,ಪೆಟ್ರೋಲ್ ಪಂಪ್ ಗಳಲ್ಲಿ ಉದ್ದದ ಸಾಲುಗಳು

ಪ್ರವಾಹದಿಂದಾಗಿ ನಲುಗಿರುವ ತಮಿಳುನಾಡು ರಾಜಧಾನಿ ಚೆನ್ನೈ ಶನಿವಾರ ಸಹಜ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿದೆ. ಭಾಗಶಃ ದೂರಸಂಪರ್ಕ ಮತ್ತು ರೈಲು ಸಂಚಾರ ಪ್ರಾರಂಭವಾಗಿದೆ. ಕೆಲವು ಪ್ರದೇಶಗಳಲ್ಲಿ, ರಸ್ತೆಯ ಮೇಲೆ ನೀರು ನಿಂತಿದ್ದರೂ, ವಾಹನಗಳು ಸಂಚರಿಸಬಹುದು. ತಮಿಳುನಾಡು ಸರ್ಕಾರದ ಪ್ರಕಾರ, ಧಾರಾಕಾರ ಸುರಿದ ಮಳೆಗೆ ಅಕ್ಟೋಬರ್...

ಮಹಾಮಳೆಗೆ ತತ್ತರಿಸಿದ ಚೆನ್ನೈಃ ಜನಜೀವನ ಅಸ್ತವ್ಯಸ್ತ

ಚೆನ್ನೈನಲ್ಲಿ ಮೂರು ದಿನದಿಂದ ಸುರಿದ ಮಳೆ ಗುರುವಾರ ತನ್ನ ಆರ್ಭಟ ಕಡಿಮೆ ಮಾಡಿದೆ. ಆದರೆ ಬುಧವಾರ ರಾತ್ರಿ ಚೆಂಬರಂಬಕ್ಕಂ ಕೆರೆಯಿಂದ ಹೆಚ್ಚು ನೀರು ಹೊರಬಂದಿದರಿಂದ ಹೊಸ ಸ್ಥಳಗಳು ಜಲಪ್ರವಾಹದಿಂದ ಸುತ್ತುವರೆದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯಿಂದ ಮಳೆ ಸುರಿಯದೇ ಇದ್ದರೂ, ಚೆಂಬರಂಬಕ್ಕಂ...

ಜಮ್ಮು ಕಾಶ್ಮೀರದ ಅಭಿವೃದ್ಧಿಗೆ 80,000 ಕೋಟಿ ರೂ. : ಪ್ರಧಾನಿ ಮೋದಿ ಘೋಷಣೆ

ಶನಿವಾರ ಶ್ರೀನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ. ಜಮ್ಮು ಕಾಶ್ಮೀರದ ಅಭಿವೃದ್ಧಿಗೆ 80,000 ಕೋಟಿ ರೂ. ಗಳನ್ನು ಘೋಷಿಸಿದ ಪ್ರಧಾನಿ ಮೋದಿ, ಜಮ್ಮು ಕಾಶ್ಮೀರವನ್ನು ಮತ್ತೊಮ್ಮೆ ಪ್ರವಾಸಿಗರ ಕನಸಿನ ತಾಣವನ್ನಾಗಿಸಲು ಬಯಸುತ್ತೇನೆ ಎಂದರು....

ಮೋದಿ ಮೋಡಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲು ಬಯಸುತ್ತದೆ!

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಶೈಲಿ ಬಗ್ಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಅವಕಾಶ ಒದಗಿದರೆ ಅದು ಭಾರತದೊಂದಿಗೆ ಪುನಃ ವಿಲೀನವಾಗುವುದಕ್ಕೆ ಬಯಸುತ್ತದೆ!. ಝೀನ್ಯೂಸ್ ಇಂಡಿಯಾ.ಕಾಂ ದಲ್ಲಿ ಪ್ರಕಟವಾದ ಸುದ್ಧಿಯೊಂದರ ಪ್ರಕಾರ, ಮೋದಿಯವರ ಆಡಳಿತ ಶೈಲಿಗೆ ಮಾರು ಹೋದ...

ಉತ್ತರಖಂಡದಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದ ಸರ್ಕಾರ

ಉತ್ತರಖಂಡದಲ್ಲಿ ಚಾರ್ ಧಾಮ್ ​ಯಾತ್ರೆಯ ಮಾರ್ಗ ಮತ್ತು ಇನ್ನು ಹಲವು ಪ್ರದೇಶಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಉತ್ತರಖಂಡ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ. ಪ್ರಾಣಹಾನಿ, ಆಸ್ತಿಹಾನಿ ತಡೆಗಟ್ಟಲು, ಯಾತ್ರಾರ್ಥಿಗಳ ರಕ್ಷಣೆಗೆ ಅಧಿಕಾರಿಗಳು ಜಾಗೂರುಕರಾಗಿರಬೇಕೆಂದು ಸರ್ಕಾರ ಸೂಚನೆ ನೀಡಿದೆ ಎಂದು...

ಉತ್ತರಾಖಂಡದಲ್ಲಿ ಮತ್ತೆ ಪ್ರವಾಹ: 200 ಕನ್ನಡಿಗರ ಸ್ಥಿತಿ ಅತಂತ್ರ

2013ರ ಜಲಪ್ರಳಯದ ಕರಾಳ ನೆನಪು ಮಾಸುವ ಮುನ್ನವೇ ಉತ್ತರಾಖಂಡಲ್ಲಿ ಮತ್ತೆ ಪ್ರವಾಹ ಮರುಕಳಿಸಿದೆ. 300ಕ್ಕೂ ಹೆಚ್ಚು ಕನ್ನಡಿಗರು ಉತ್ತರಾಖಂಡದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದ್ದು, ಈ ಪೈಕಿ ಸುಮಾರು 200 ಯಾತ್ರಿಗಳ ಸ್ಥಿತಿ ಅತಂತ್ರವಾಗಿದೆ. ಬೆಂಗಳೂರು, ತುಮಕೂರು, ಪಾವಗಡ, ಗೌರಿಬಿದನೂರು, ಮೈಸೂರು,...

ಪ್ರವಾಹ ಪೀಡಿತ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯುವ ಬಗ್ಗೆ ಐಬಿ ಎಚ್ಚರಿಕೆ

ಪ್ರವಾಹ ಪೀಡಿತ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಅಲ್-ಬದರ್ ಮತ್ತು ತೆಹ್ರೀಕ್-ಇ-ಜಿಹಾದ್ ಉಗ್ರ ಸಂಘಟನೆಗಳು ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದೆ. ಇದರ ಜೊತೆಯಲ್ಲೇ ಪಾಕಿಸ್ತಾನದಿಂದ ಉಗ್ರರು ಭಾರತದ ಗಡಿಯೊಳಗೆ...

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಪ್ರವಾಹದ ಮುನ್ಸೂಚನೆ

ಕಳೆದ ಎರಡು ದಿನಗಳಿಂದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಹವಾಮಾನ ಇಲಾಖೆ ಕಾಶ್ಮೀರದಲ್ಲಿ ಭಾರೀ ಪ್ರವಾಹದ ಎಚ್ಚರಿಕೆ ನೀಡಿದೆ. ಇಲಾಖೆಯ ವರದಿಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಮುಂದಿನ 6 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ...

ಚೀನಾದಿಂದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ

ಭಾರತದ ತೀವ್ರ ವಿರೋಧದ ನಡುವೆಯೂ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಿದ್ದು, ಅಣೆಕಟ್ಟು ಪೂರ್ಣಗೊಂಡಿದೆ ಎಂದು ಘೋಷಿಸಿದೆ. ಟಿಬೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಜಲವಿದ್ಯುತ್ ಅಣೆಕಟ್ಟು ಪೂರ್ಣಗೊಂಡಿದ್ದು, ಅಣೆಕಟ್ಟಿಗೆ ಯಾರ್ಲಾಂಗ್ ಜಂಗ್ಬೋ ಎಂದು ಹೆಸರಿಡಲಾಗಿದೆ. ಚೀನಾ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಭಾರತ ಮತ್ತು...

ಜಮ್ಮು-ಕಾಶ್ಮೀರ,ಜಾರ್ಖಂಡ್ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಮಾಡಲಿರುವ ಆಯೋಗ

'ಕೇಂದ್ರ ಚುನಾವಣಾ ಆಯೋಗ' ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಇಂದು ಚುನಾವಣಾ ದಿನಾಂಕ ಘೋಷಿಸಲಿದೆ. ಸಂಜೆ 4 ಗಂಟೆ ವೇಳೆಗೆ ಪತ್ರಿಕಾಗೋಷ್ಠಿ ಕರೆದಿರುವ ಚುನಾವಣಾ ಆಯೋಗ, ಉಭಯ ರಾಜ್ಯಗಳಿಗೂ ನಡೆಯಲಿರುವ ಚುನಾವಣೆಯ ದಿನಾಂಕವನ್ನು ಘೋಷಿಸಲಿದೆ. ಜನವರಿ 19ಕ್ಕೆ ಜಮ್ಮು-ಕಾಶ್ಮೀರ ವಿಧಾನಸಭೆ...

ಸಿಯಾಚಿನ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಸಿಯಾಚಿನ್ ಗೆ ತೆರಳಲಿರುವ ಪ್ರಧಾನಿ ಮೋದಿ, ಯೋಧರನ್ನು ಭೇಟಿಯಾಗಲಿದ್ದಾರೆ. ಈಗಾಗಲೇ ನವದೆಹಲಿಯಿಂದ ಪ್ರಧಾನಿ ಮೋದಿ ಸಿಯಾಚಿನ್ ಗೆ ತೆರಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ...

ಯೋಧರಲ್ಲಿ ಆತ್ಮಸ್ಥೈರ್ಯ ತುಂಬಿದ ಪ್ರಧಾನಿ ಮೋದಿ

ದೇಶದ ರಕ್ಷಣೆಗಾಗಿ ಸೈನಿಕರು ಹಗಲಿರುಳು ಶ್ರಮಿಸುತ್ತಾರೆ. ಸೈನಿಕರ ಆತ್ಮವಿಶ್ವಾಸಕ್ಕೆ ನಮಸ್ಕರಿಸುತ್ತೇನೆ. ದೇಶದ 125 ಕೋಟಿ ಜನರು ನಿಮ್ಮೊಂದಿಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಸಿಯಾಚಿನ್ ಗೆ ಭೆಟಿ ನೀಡಿದ ಪ್ರಧಾನಿ ಮೋದಿ ಮಿಲಿಟರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು....

ಕಾಶ್ಮೀರ ಪ್ರವಾಹ ಸಂತ್ರಸ್ತರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ಭೀಕರ ಪ್ರವಾಹದಿಂದ ತತ್ತರಿಸಿರುವ ಕಾಶ್ಮೀರದ ಸಂತ್ರಸ್ತರ ಜತೆ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಇದನ್ನು ಸ್ವತ: ಮೋದಿಯವರೇ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಅ.23ರಂದು ತಾವು ಶ್ರೀನಗರಕ್ಕೆ ತೆರಳುತ್ತಿದ್ದು, ಪ್ರವಾಹದಿಂದ ತೊಂದರೆಗೀಡಾದ ಅಲ್ಲಿನ ಸಹೋದರ-ಸಹೋದರಿಯರ ಜತೆ ದಿನವನ್ನು ಕಳೆಯುವುದಾಗಿ...

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗದಿಂದ ನಿರ್ಧಾರ ಪ್ರಕಟ ಸಾಧ್ಯತೆ

ಪ್ರವಾಹ ಪೀಡಿತ ಜಮ್ಮು-ಕಾಶ್ಮೀರಕ್ಕೆ ಅ.18 ಚುನಾವಣಾ ಅಧಿಕಾರಿಗಳು ಭೇಟಿ ನೀಡಲಿದ್ದು ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಜಮ್ಮು-ಕಾಶ್ಮೀರದ ಸರ್ಕಾರದ ಅವಧಿ ಮುಂದಿನ ಜನವರಿಗೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ ಒಳಗಾಗಿ ಚುನಾವಣೆ ನಡೆಸಲು ನಿರ್ಧರಿಸಿದೆ....

ಕಾಶ್ಮೀರದಲ್ಲಿ ಪ್ರವಾಹ ಹೆಚ್ಚಲು ಭಯೋತ್ಪಾದನೆಯೇ ಕಾರಣ-ಕೇಂದ್ರ ಸಚಿವ ಜಿತೇಂದ್ರ ಸಿಂಗ್

'ಜಮ್ಮು-ಕಾಶ್ಮೀರ'ದಲ್ಲಿ ಕಳೆದ 2 ದಶಕಗಳಿಂದ ಉಗ್ರವಾದ ಮಿತಿ ಮೀರಿದೆ. ಭಯೋತ್ಪಾದಕರು ನದಿ ತೀರದ ಪ್ರದೇಶಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಪರಿಣಾಮ ರಾಜ್ಯದಲ್ಲಿ ಪ್ರವಾಹ ಹೆಚ್ಚುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅ.14ರಂದು ಜಮ್ಮು ವಿಶ್ವವಿದ್ಯಾನಿಲಯ ಆಯೋಜಿಸಿದ್ದ...

ಬಿಜೆಪಿ ಯಾವುದೇ ಕೋಮಿನ ವಿರುದ್ಧ ಕಾರ್ಯ ನಿರ್ವಹಿಸುತ್ತಿಲ್ಲ-ಗಡ್ಕರಿ

ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಷ್ಟ್ರೀಯ ಹಿತದೃಷ್ಠಿಯಿಂದ ಅಭಿವೃದ್ಧಿ ಪರವಾಗಿ ಕೆಲಸ ನಿರ್ವಹಿಸಲಿದೆಯೇ ಹೊರತು ಯಾವುದೇ ನಿರ್ದಿಷ್ಠ ಕೋಮಿನ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅ.3ರಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ...

200ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಪಾಕ್ ಉಗ್ರರು ಗಡಿಯಲ್ಲಿ ಒಳ ನುಸುಳಲು ಸಜ್ಜು

200ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಉಗ್ರರು ಭಾರತದ ಗಡಿಯಲ್ಲಿ ಒಳ ನುಸುಳಲು ಸಂಚು ರೂಪಿಸಿದ್ದು, ಗಡಿ ಭಾಗದಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸೇನಾ ಮೂಲಗಳು ಹೊರಹಾಕಿವೆ. ಜಮ್ಮು-ಕಾಶ್ಮೀರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಲಾಭ ಪಡೆದಿರುವ ಉಗ್ರರು ಇದೇ ಸಮಯವನ್ನು ಉಪಯೋಗಿಸಿಕೊಂಡು...

ದೆಹಲಿ ರಾಜ್ಯಪಾಲರ ವಿರುದ್ಧ ಕೇಜ್ರಿವಾಲ್ ಆರೋಪ

'ಆಮ್ ಆದ್ಮಿ ಪಕ್ಷ'ದ ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿ ರಾಜ್ಯಪಾಲರ ಮೇಲೆ ಆರೋಪ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿರುವ ಜಮ್ಮು-ಕಾಶ್ಮೀರಕ್ಕೆ ಸಹಾಯ ಧನ ಕಳಿಸದಂತೆ ತಮ್ಮ ಪಕ್ಷ ಶಾಸಕರನ್ನು ದೆಹಲಿ ರಾಜ್ಯಪಾಲ ನಜೀಬ್ ಜಂಗ್ ತಡೆಯುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ....

ಜಮ್ಮು-ಕಾಶ್ಮೀರ: ಸೇನಾ ಪರಿಹಾರ ಕಾರ್ಯಕ್ಕೆ ಯಾಸಿನ್ ಮಲಿಕ್ ಅಡ್ಡಿ

ಜಮು-ಕಾಶ್ಮೀರ ಶತಮಾನದ ಪ್ರವಾಹ ಪರಿಸ್ಥಿತಿಯಿಂದ ನಲುಗಿ ಹೋಗಿದ್ದರೂ, ತಮ್ಮ ಸಣ್ಣತನದ ಮೂಲಕ ಪ್ರತ್ಯೇಕತಾವಾದಿ ಮುಖಂಡರು ಭಾರತೀಯ ಸೇನೆ ನಡೆಸುತ್ತಿರುವ ಪರಿಹಾರ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಪ್ರತ್ಯೇಕತಾವಾದಿ ನಾಯಕ, ಜಮು-ಕಾಶ್ಮೀರ ಮುಕ್ತಿ ರಂಗ (ಜೆಕೆ ಎಲ್ ಎಫ್) ಮುಖಂಡ ಯಾಸಿನ್ ಮಲಿಕ್, ತನ್ನ ಕೆಲ ಸಹವರ್ತಿಗಳೊಂದಿಗೆ...

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇಲ್ಲಿನ ಮಚ್ಚಿಲ್ ವಿಭಾಗದಲ್ಲಿ ಈ ಎನ್ ಕೌಂಟರ್ ನಡೆದಿದೆ. ಬೆಳಗಿನ ಜಾವ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ಉಗ್ರರು ಒಳ ನುಸುಳಲು ಯತ್ನಿಸಿದ್ದರು. ಈ ವೇಳೆ ಭಾರತೀಯ ಯೋಧರು...

ತಮ್ಮ ಹುಟ್ಟುಹಬ್ಬ ಆಚರಿಸದಂತೆ ಪ್ರಧಾನಿ ಮೋದಿ ಕರೆ

ಸೆ.17ರಂದು ತಮ್ಮ ಹುಟ್ಟುಹಬ್ಬ ಆಚರಿಸದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ವ್ಯಯಮಾಡುವ ಸಮಯವನ್ನು ಜಮ್ಮು-ಕಾಶ್ಮೀರದಲ್ಲಿನ ಪ್ರವಾಹ ಪೀಡಿತರ ನೆರವಿಗೆ ವಿನಿಯೋಗಿಸುವಂತೆ ಮನವಿ ಮಾಡಿದ್ದಾರೆ. ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರು 64ನೇ ವರ್ಷಕ್ಕೆಕಾಲಿಡಲಿದ್ದು,...

ಜಮ್ಮು-ಕಾಶ್ಮೀರ ಪ್ರವಾಹ: 2300ಗ್ರಾಮಗಳು ಜಲಾವೃತ

ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಹ ಪರಿಸ್ಥಿತಿಯಿಂದ ಕಾಶ್ಮೀರ ಭಾಗದ 12,00 ಗ್ರಾಮಗಳು ಜಲಾವೃತವಾಗಿದೆ. ಈ ಪೈಕಿ 400 ಹಳ್ಳಿಗಳು ಜಲಾವೃತವಾಗಿವೆ. ಜಮ್ಮು ಭಾಗದಲ್ಲಿ 1100ಹಳ್ಳಿಗಳಲ್ಲಿ ನೀರು ತುಂಬಿಕೊಂಡಿದ್ದರೆ, ಅದರಲ್ಲಿ 300 ಗ್ರಾಮಗಳು ಸಂಪೂರ್ಣವಾಗಿ ನೀರಿನೊಳಗೆ ಸೇರಿಕೊಂಡಿವೆ. ಜಮ್ಮು-ಕಾಶ್ಮೀರದಲ್ಲಿ ಒಟ್ಟು...

ಜಮ್ಮು-ಕಾಶ್ಮೀರದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 40 ಕನ್ನಡಿಗರ ರಕ್ಷಣೆ

'ಜಮ್ಮು-ಕಾಶ್ಮೀರ'ದಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 40 ಕನ್ನಡಿಗರನ್ನು ರಕ್ಷಿಸಲಾಗಿದ್ದು ದೆಹಲಿ ಭವನಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಕಣಿವೆ ರಾಜ್ಯದಲ್ಲಿ ಮಳೆ ನಿಂತಿದ್ದರೂ ಪ್ರವಾಹ ಸ್ಥಿತಿ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಪಡೆ ನಿರತವಾಗಿದೆ. ಪ್ರವಾಹದಲ್ಲಿ ರಾಜ್ಯದ 640 ಪ್ರವಾಸಿಗರು ಸಿಲುಕಿಕೊಂಡಿದ್ದು ಈಗಾಗಲೇ 200ಕ್ಕೂ...

ಜಮ್ಮು-ಕಾಶ್ಮೀರದಲ್ಲಿ ಮಳೆ ನಿಂತಲೂ ನಿಲ್ಲದ ಪ್ರವಾಹ ಸ್ಥಿತಿ

ಜಮ್ಮು-ಕಾಶ್ಮೀರದಲ್ಲಿ ಮಳೆ ನಿಂತಿದ್ದರೂ ಪ್ರವಾಹ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಸೇನಾ ಕಾರ್ಯಾಚರಣೆ ಮುಂದುವರೆದಿದೆ. ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೇನಾ ಸಿಬ್ಬಂದಿಗಳು, ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಪೂಂಚ್ ಜಿಲ್ಲೆಯಲ್ಲಿ ವಾಹನ ಸಂಚಾರ ಸುಗಮವಾಗಲು...

ಜಮು-ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರತೀಯ ಯೋಧರು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರು ಒಳನುಸುಳಲು ಯತ್ನಿಸುತ್ತಿದ್ದರು. ಈ ವೇಳೆ ಭಾರತೀಯ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಇಲ್ಲಿನ ಕುಪ್ವಾರಾ ಜಿಲ್ಲೆಯಲ್ಲಿ...

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಪ್ರವಾಹ: ಸಾವಿನ ಸಂಖ್ಯೆ 200ಕ್ಕೇರಿಕೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಭೀಕರ ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಲಕ್ಷಾಂತರ ಜನರು ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ರಾಜಧಾನಿ ಶ್ರೀನಗರ , ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ...

ಪಾಕ್ ನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಭಾರತ ಕಾರಣ: ಹಫೀಜ್ ಸಯೀದ್

'ಪಾಕಿಸ್ತಾನ'ದಲ್ಲಿ ಉಂಟಾಗಿರುವ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್, ಪಾಕಿಸ್ತಾನ ಎದುರಿಸುತ್ತಿರುವ ಪ್ರವಾಹಕ್ಕೆ ಭಾರತ ಕಾರಣ ಎಂದು ಹೇಳಿದ್ದಾನೆ. ಭಾರತ ಸರ್ಕಾರ ಯಾವುದೇ ಸೂಚನೆ ನೀಡದೇ ನದಿಗಳ ನೀರನ್ನು ಬಿಡುಗಡೆ ಮಾಡಿರುವುದರ ಪರಿಣಾಮ, ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದೆ ಎಂದು...

ಪಿ.ಒ.ಕೆ ಪ್ರವಾಹ ಸಂತ್ರಸ್ತರಿಗೆ ನೆರವು: ಮೋದಿಗೆ ಧನ್ಯವಾದ ತಿಳಿಸಿದ ಷರೀಫ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಿರುವುದಕ್ಕಾಗಿ ಪಾಕಿಸ್ತಾನ ಪ್ರಧಾನಿ, ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ಶಾಂತಿ ಮತ್ತು ಅಭಿವೃದ್ಧಿ ಭಾರತ-ಪಾಕಿಸ್ತಾನದ ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಪಾಕ್ ಪ್ರಧಾನಿ ನವಾಜ್...

ಜಮ್ಮು-ಕಾಶ್ಮೀರದಲ್ಲಿ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ: ಸಿಎಂ

ಜಮ್ಮು-ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕಾಗಿ ತೆರಳಿ, ಅಲ್ಲಿನ ಪ್ರಹಾವದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ವಿಶೇಷ ಅಧಿಕಾರಿಗಳನ್ನು ಕಳುಹಿಸುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ...

ಜಮ್ಮು-ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು

ಜಮ್ಮು-ಕಾಶ್ಮೀರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಬೆಂಗಳೂರಿನ 11 ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಚಿಕ್ಕಲಸಂದ್ರ ನಿವಾಸಿಗಳಾಗಿದ ಕೃಷ್ಣಮೂರ್ತಿ ಎಂಬುವವರ ಕುಟುಂಬ ಸದಸ್ಯರು ಜಮ್ಮು-ಕಾಶ್ಮೀರದಲ್ಲಿ ಪ್ರವಾಸ ಕೈಗೊಂಡಿದ್ದರು ಈ ವೇಳೆ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದ್ದು, ಒಂದೇಕುಟುಂಬಕ್ಕೆ ಸೇರದ 11...

ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಪ್ರವಾಹಕ್ಕೆ ಕಣಿವೆ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ವರುಣನ ಆರ್ಭಟಕ್ಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತಿದ್ದು, 200ಕ್ಕೂ ಹೆಚ್ಚು ಗ್ರಾಮಗಳು...

ಜಮ್ಮು-ಕಾಶ್ಮೀರ ಜನತೆ ಆತಂಕಪಡುವ ಅಗತ್ಯವಿಲ್ಲ: ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರದ ಜನತೆ ಆತಂಕಪಡುವ ಅಗತ್ಯವಿಲ್ಲ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತಿರುವ ಪ್ರವಾಹಕ್ಕೆ ಸಿಲುಕಿ ನೂರಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು...

ಜಮ್ಮು-ಕಾಶ್ಮೀರದಲ್ಲಿ ಮುಂದುವರಿದ ಪ್ರವಾಹ: 90ಕ್ಕೇರಿದ ಸಾವಿನ ಸಂಖ್ಯೆ

ಜಮ್ಮು-ಕಾಶ್ಮೀರದಲ್ಲಿ ಮಳೆಯ ಆರ್ಭಟದಿಂದಾಗಿ ಉಂಟಾಗಿರುವ ಪ್ರವಾಹ ಇನ್ನೂ ಮುಂದುವರೆದಿದ್ದು, ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕಳೆದ 6 ದಶಕಗಳಿಂದ ಕಂಡುಕೇಳರಿಯದಷ್ಟು ಪ್ರಮಾಣದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಒಂದೆಡೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ ಇನ್ನೊಂದೆಡೆ ಭೂಕುಸಿತವುಂಟಾಗುತ್ತಿದೆ. ರಾಜ್ಯ ಸರ್ಕಾರ...

ಜಮ್ಮುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಹೋದ 9ಯೋಧರು

'ಜಮ್ಮು'ವಿನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ 9ಯೋಧರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಬಳಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ಪ್ರವಾಹದ ರಭಸಕ್ಕೆ ದೋಣಿ ಸಮೇತ ಯೋಧರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ...

ಸಂಪುಟ ವಿಸ್ತರಣೆ ವಿಚಾರ: ಸೆ.3ಕ್ಕೆ ದೆಹಲಿಗೆ-ಸಿದ್ದರಾಮಯ್ಯ

ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸೆ.3ರಂದು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನರಚನೆ ಇಲ್ಲ, ಆದರೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಖಾಲಿಯಿರುವ ನಾಲ್ಕು ಸ್ಥಾನಗಳಿಗೆ ಭರ್ತಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ...

ಉತ್ತರಾಖಂಡದಲ್ಲಿ ಭಾರೀ ಮಳೆ: ಜನಜೀವನ ತತ್ತರ

ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 24 ಜನರು ಬಲಿಯಾಗಿದ್ದಾರೆ. ಕಳೆದ ವರ್ಷವಷ್ಟೇ ಭೀಕರ ಪ್ರವಾಹ ಹಿಮಾಲಯನ್ ಸುನಾಮಿಗೆ ಸಿಲುಕಿ ತತ್ತಗೊಂಡಿದ್ದ ಉತ್ತರಾಖಂಡದಲ್ಲಿ ಈ ವರ್ಷವೂ ವರಣುನ ಆರ್ಭಟ ಜೋರಾಗಿದೆ. ಕಳೆದರಡು...

ಪಾಕ್ ವಶದಲ್ಲಿದ್ದ ಭಾರತೀಯ ಯೋಧನ ಹಸ್ತಾಂತರ

ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗಿ ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕ ಭಾರತೀಯ ಯೋಧ ಸತ್ಯಶೀಲ್ ಯಾದವ್ ಅವರನ್ನು ಪಾಕಿಸ್ತಾನ ಸೇನೆ, ಭಾರತ ಸೇನೆಗೆ ಹಸ್ತಾಂತರಿಸಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಚೆಕ್ ಪೋಸ್ಟ್ ಗೆ ಬಿ.ಎಸ್.ಎಫ್ ಯೋಧ ಯಾದವ್ ಅವರನ್ನು ಕರೆತಂದ ಪಾಕ್ ಸೇನೆ,...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited