Untitled Document
Sign Up | Login    
Dynamic website and Portals
  

Related News

ನಿಮಗೆ ಸಹಾಯಬೇಕೆಂದರೆ ಹುರಿಯತ್ ನ್ನು ಕೇಳಿ: ಪಿಡಿಪಿ ನಾಯಕ ನಿಜಾಮುದ್ದೀನ್

ತಮ್ಮನ್ನು ಭೇಟಿಯಾದ ಪಾಕಿಸ್ತಾನ ಮೂಲದ ಕೆಲ ನಿರಾಶ್ರಿತ ಮಹಿಳೆಯರಿಗೆ, ಇಲ್ಲಿನ ಜನರಿಗೆ ಕನಿಕರವಿಲ್ಲ. ನೀವು ಏನು ಸಹಾಯ ಬೇಕೆಂದರೂ ಹುರಿಯತ್‌ ಕಾನ್ಫರೆನ್ಸ್‌ ಮುಖಂಡ ಮೀರ್‌ ವಾಯಿಜ್‌ ಉಮರ್ ಫಾರೂಖ್‌ ಅವರನ್ನು ಕೇಳಿ' ಎಂದು ಹೇಳುವ ಮೂಲಕ ಕಾಶ್ಮೀರದ ಆಡಳಿತಾರೂಢ ಪಿಡಿಪಿ ಪ್ರಧಾನ...

ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ : ಪಾಕ್ ನಿಲುವಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

'ಕಾಶ್ಮೀರಿ ಪಂಡಿತ'ರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಬಗ್ಗೆ ಪಾಕಿಸ್ತಾನದ ನಿಲುವನ್ನು ಭಾರತ ಸರ್ಕಾರ ಖಂಡಿಸಿದೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿದರೆ, ಜನಸಂಖ್ಯೆಯಲ್ಲಿ ವ್ಯತ್ಯಯವಾಗುವುದರಿಂದ ವಿಶ್ವಸಂಸ್ಥೆ ನಿರ್ಣಯಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ...

ಕೇಂದ್ರ ಸಚಿವ ಸಂಪುಟ ಪುನಾರನೆ: ನಿರೀಕ್ಷೆಯಂತೆ ಕೆಲಸ ಮಾಡದ ಸಚಿವರನ್ನು ಕೈಬಿಡುವ ಸಾಧ್ಯತೆ

'ಕೇಂದ್ರ ಬಜೆಟ್' ಅಧಿವೇಶನದ ಎರಡನೇ ಭಾಗ ಪ್ರಾರಂಭವಾಗುವುದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಎರಡನೇ ಹಂತದ ಸಚಿವ ಸಂಪುಟ ಪುನಾರಚನೆಯಲ್ಲಿ ಪಿಡಿಪಿ, ಶಿವಸೇನೆಯ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಂಡು, ಸರಿಯಾಗಿ ಕೆಲಸ ನಿರ್ವಹಿಸದೇ ಇರುವ ಹಾಲಿ ಸಚಿವರನ್ನು ಸಂಪುಟದಿಂದ...

ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಶಾಸಕರ ಹೊಡೆದಾಟ

ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಶಾಸಕರು ಒಬ್ಬರುಗೊಬ್ಬರು ಹೊಡೆದಾಡಿಕೊಂಡು, ನೂಕುನುಗ್ಗಾಟ ನಡೆಸಿ ಕೋಲಾಹಲ ನಡೆಸಿದ ಘಟನೆ ನಡೆದಿದೆ. ವಿಧಾನಸಭಾ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಒಬ್ಬರನ್ನೊಬ್ಬರು ತಳ್ಳಿದಾಗ ಕೋಲಾಹಲ ಏರ್ಪಟ್ಟಿತ್ತು. ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಸರ್ಕಾರದ...

ಜಮ್ಮು-ಕಾಶ್ಮೀರದಲ್ಲಿರುವುದು ಗರಿಷ್ಠ ಸರ್ಕಸ್ ಹಾಗೂ ಕನಿಷ್ಠ ಆಡಳಿತ: ಕಾಂಗ್ರೆಸ್

ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪದೇ ಪದೇ ವಿವಾದಗಳನ್ನು ಸೃಷ್ಟಿಸುತ್ತಿರುವ ಜಮ್ಮು-ಕಾಶ್ಮೀರ ಸಿ.ಎಂ ಮುಫ್ತಿ ಮೊಹಮದ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಮುಫ್ತಿ ಮೊಹಮದ್ ಅವರದ್ದು ಗರಿಷ್ಠ ಸರ್ಕಸ್ ಹಾಗೂ ಕನಿಷ್ಠ ಆಡಳಿತ ಎಂದು ವ್ಯಂಗ್ಯವಾಡಿದೆ. ಮುಫ್ತಿ ಆಡಳಿತದಿಂದ ರಾಜ್ಯದ ಜನತೆ ಅಸಮಾಧಾನಗೊಂಡಿದ್ದಾರೆ....

ಆಫ್ಸ್ಪಾ ಹಂತ ಹಂತವಾಗಿ ವಾಪಸ್‌: ಮುಫ್ತಿ ಮೊಹಮ್ಮದ್‌ ಸಯೀದ್‌

ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಆಫ್ಸ್ಪಾ) ಹಿಂತೆಗೆತಕ್ಕೆ ಮಿತ್ರಪಕ್ಷ ಬಿಜೆಪಿಯ ಪ್ರಬಲ ವಿರೋಧವಿದ್ದರೂ, ಹಂತಹಂತವಾಗಿ ಆಫ್ಸ್ಪಾ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯೀದ್‌ ಹೇಳಿಕೆ ನೀಡಿದ್ದಾರೆ. ಇದರಿಂದ ಪಿಡಿಪಿ ಹಾಗೂ ಬಿಜೆಪಿ ನಡುವೆ ಕಾಶ್ಮೀರದಲ್ಲಿ ಮತ್ತೂಂದು ಸುತ್ತಿನ ತಿಕ್ಕಾಟ ನಡೆಯುವ...

ಎ.ಎಫ್.ಎಸ್.ಪಿ.ಎ ಕಾಯ್ದೆ ಹಿಂಪಡೆಯಲು ಇದು ಸೂಕ್ತ ಸಮಯ ಅಲ್ಲ: ರಾಜನಾಥ್ ಸಿಂಗ್

ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಹಿಂಪಡೆಯಲು ಇದು ಸೂಕ್ತ ಸಮಯ ಅಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಕಳೆದ 2 ದಿನಗಳ ಹಿಂದೆ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ...

ಕಾಶ್ಮೀರ ವಿವಾದ ಬಗೆಹರಿಯದಿದ್ದರೆ ಪಿಡಿಪಿ ಜೊತೆ ಮೈತ್ರಿ ಖತಂ: ಅಮಿತ್ ಶಾ

ಜಮ್ಮು-ಕಾಶ್ಮೀರ ಸರ್ಕಾರ ಪ್ರತ್ಯೇಕತಾವಾದಿಗಳ ಪರವಾಗಿರುವುದು ಆಡಳಿತಾರೂಢ ಮೈತ್ರಿಪಕ್ಷವಾಗಿರುವ ಬಿಜೆಪಿಗೆ ತ್ರಿಶಂಕು ಸ್ಥಿತಿಯನ್ನು ತಂದೊಡ್ಡಿದ್ದು, ಇದೀಗ ಕಾಶ್ಮೀರ ವಿವಾದ ಬಗೆಹರಿಯದಿದ್ದರೆ ಕಣಿವೆ ರಾಜ್ಯದಲ್ಲಿ ಪಿಡಿಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ದೇಶದ ಹಿತಾಸಕ್ತಿ ವಿಚಾರದಲ್ಲಿ ಪಕ್ಷ...

ಸುಬ್ರಹ್ಮಣ್ಯನ್ ಸ್ವಾಮಿ ಹೇಳಿಕೆ ಘರ್ಷಣೆಗೆ ಕಾರಣವಾಗುತ್ತೆ: ಪಿಡಿಪಿ

ಸುಬ್ರಹ್ಮಣನ್ ಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಎರಡು ಸಮುದಾಯಗಳ ನಡುವೆ ಘರ್ಷಣೆಯನ್ನುಂಟು ಮಾಡುತ್ತದೆ ಎಂದು ಪಿಡಿಪಿ ಹೇಳಿದೆ. ಗುವಾಹಟಿಯಲ್ಲಿ ಹಾಜರಿದ್ದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಮಸೀದಿ ಎಂಬುದು ಧಾರ್ಮಿಕ ಸ್ಥಳವಲ್ಲ, ಇದೊಂದು ಕಟ್ಟಡವಷ್ಟೇ. ಈ ಕಟ್ಟಡ ಯಾವಾಗ ಬೇಕಾದರು ಕೆಡವಬಹುದು....

ಮಸರತ್ ಆಲಮ್ ಬಿಡುಗಡೆ ವಿಚಾರ: ಪಿಡಿಪಿಗೆ ಬಿಜೆಪಿ ಖಡಕ್ ಎಚ್ಚರಿಕೆ

ನಿಮ್ಮನ್ನು ನೀವು ತಿದ್ದಿಕೊಳ್ಳಿ, ಇಲ್ಲದಿದ್ದರೆ ನಾವು ಮೈತ್ರಿ ಸರಕಾರವನ್ನು ಕೊನೆಗೊಳಿಸುತ್ತೇವೆ ಎಂಬ ಖಡಕ್‌ ಸಂದೇಶವನ್ನು ಬಿಜೆಪಿಯು ಜಮ್ಮು-ಕಾಶ್ಮೀರ ಸರಕಾರದಲ್ಲಿನ ತನ್ನ ಮಿತ್ರ ಪಕ್ಷ ಪಿಡಿಪಿಗೆ ರವಾನಿಸಿದೆ. ಪ್ರತ್ಯೇಕತಾವಾದಿ ಮಸರತ್‌ ಆಲಂ ಬಿಡುಗಡೆಗೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದ, ಟೀಕೆ, ಖಂಡನೆ ಇತ್ಯಾದಿಗಳಿಂದ ಮುಜುಗರಕ್ಕೊಳಗಾಗಿರುವ ಬಿಜೆಪಿಗೆ,...

ಮಸರತ್ ಆಲಂ ಬಿಡುಗಡೆಗೆ ಸಂಸತ್ ನಲ್ಲಿ ತೀವ್ರ ವಿರೋಧ: ಪ್ರಧಾನಿ ಸ್ಪಷ್ಟನೆಗೆ ಒತ್ತಾಯ

ಮುಸ್ಲಿಂ ಲೀಗ್, ಕಾಶ್ಮೀರ ಪ್ರತ್ಯೇಕವಾದಿ ಮುಖಂಡ ಮಸರತ್ ಆಲಂ ಬಿಡುಗಡೆಗೆ ಸಂಸತ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದು, 120 ಜನರ ಸಾವಿಗೆ ಕಾರಣವಾಗಿರುವ ಪ್ರತ್ಯೇಕವಾದಿ ಮುಖಂಡ ಮಸರತ್ ಆಲಂ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ...

ಮತ್ತೋರ್ವ ಪ್ರತ್ಯೇಕವಾದಿ ಬಿಡುಗಡೆಗೆ ಜಮ್ಮು-ಕಾಶ್ಮೀರ ಸರ್ಕಾರ ಚಿಂತನೆ!

ಪ್ರತ್ಯೇಕವಾದಿ ನಾಯಕ ಮಸ್ರತ್ ಆಲಂ ನ್ನು ಬಿಡುಗಡೆ ಮಾಡಿದ ಬಳಿಕ ಜಮ್ಮು-ಕಾಶ್ಮೀರ ಸರ್ಕಾರ, ಆಶೀಕ್ ಹುಸೇನ್ ಫಾಕ್ತೂ ಎಂಬ ಮತ್ತೊಬ್ಬ ಪ್ರತ್ಯೇಕವಾದಿ ನಾಯಕನನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಮಸ್ರತ್ ಆಲಂ ಬಿಡುಗಡೆ ವಿಷಯ ಸಂಸತ್ ಕಲಾಪದಲ್ಲಿ ತೀವ್ರ...

ಅಫ್ಜಲ್‌ ಗುರು ಶವ ವಾಪಸ್‌ ಗೆ ಬಿಜೆಪಿಗೆ ಪಿಡಿಪಿ ಬೇಡಿಕೆ

ಅಧಿಕಾರಕ್ಕೆ ಬಂದ ಮೊದಲ ದಿನವೇ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲು ಪಾಕಿಸ್ಥಾನ ಉಗ್ರರು ಕಾರಣ ಎಂಬ ಹೇಳಿಕೆ ನೀಡಿ ಮಿತ್ರ ಪಕ್ಷ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದ್ದ ಪಿಡಿಪಿ ಎರಡನೇ ದಿನವೂ ಮತ್ತೂಂದು ಶಾಕ್‌ ನೀಡಿದೆ. ಸಂಸತ್‌...

ಅಫ್ಜಲ್ ಗುರು ಅವಶೇಷ ಕೇಳುವ ಹಕ್ಕು ಪಿಡಿಪಿಗಿಲ್ಲ: ಜಾವೆದ್ ಅಖ್ತರ್

ಪಿಡಿಪಿ ಶಾಸಕರಿಗೆ ಸಂಸತ್ ದಾಳಿ ಪ್ರಕರಣದ ರೂವಾರಿ ಉಗ್ರ ಅಫ್ಜಲ್ ಗುರುವಿನ ಅವಶೇಷ ಕೇಳುವ ಹಕ್ಕಿಲ್ಲ ಎಂದು ಖ್ಯಾತ ಸಾಹಿತಿ ಮತ್ತು ರಾಜ್ಯಸಭಾ ಶಾಸಕ ಜಾವೆದ್ ಅಖ್ತರ್ ಹೇಳಿದ್ದಾರೆ. ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯೀದ್ ಅವರ...

ಉಗ್ರರ ಹೊಗಳಿದ್ದ ಮುಫ್ತಿ ಮೊಹಮದ್ ಸಯೀದ್ ಹೇಳಿಕೆಯನ್ನು ಒಪ್ಪುವುದಿಲ್ಲ: ನರೇಂದ್ರ ಮೋದಿ

ಉಗ್ರರನ್ನು ಹೊಗಳಿ ಹೇಳಿಕೆ ನೀಡಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಹೇಳಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಮ್ಮ ಸರ್ಕಾರ ಭಯೋತ್ಪಾದನೆ, ಉಗ್ರವಾದವನ್ನು ಎಂದಿಗೂ ಸಹಿಸುವುದಿಲ್ಲ, ಅಂತೆಯೇ...

ಉಗ್ರ ಅಫ್ಜಲ್ ಗುರುಗೆ ಅನ್ಯಾಯ ಮಾಡಲಾಗಿದೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

2001ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಉಗ್ರ ಅಪ್ಜಲ್ ಗುರುಗೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಮಣಿಶಂಕರ್ ಅಯ್ಯರ್, ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಉಗ್ರ ಅಫ್ಜಲ್ ನನ್ನು...

ಉಗ್ರರನ್ನು ಹೊಗಳಿ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ: ಮುಫ್ತಿ ಮೊಹಮದ್ ಸಯೀದ್

ಉಗ್ರರನ್ನು ಹೊಗಳಿ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಸ್ಪಷ್ಟಪಡಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ನಡೆಯಲು ಭಾರತದ ಸಂವಿಧಾನ ಅವಕಾಶ ನೀಡಿದೆ. ಈ ವಿಷಯವನ್ನು ಪಾಕಿಸ್ತಾನವೂ ಅರ್ಥಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾನು ನೀಡಿದ್ದ ಹೇಳಿಕೆಗೆ ಈಗಲೂ...

ಜಮ್ಮು-ಕಾಶ್ಮೀರ ನೂತನ ಸಿಎಂ ಆಗಿ ಮುಫ್ತಿ ಮೊಹಮದ್ ಪ್ರಮಾಣವಚನ ಸ್ವೀಕಾರ

ಜಮ್ಮು-ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಬೆಳಗ್ಗೆ ಪಿಡಿಪಿಯ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯ್ಯದ್ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಕಾಶ್ಮೀರದಲ್ಲಿ...

ಜಮ್ಮು-ಕಾಶ್ಮೀರ: ಮುಫ್ತಿ ಸಂಪುಟದಲ್ಲಿ ಪಿಡಿಪಿ, ಬಿಜೆಪಿಗೆ ತಲಾ 12 ಸಚಿವ ಸ್ಥಾನ

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡು 2 ತಿಂಗಳ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಪಿಡಿಪಿ ನಾಯಕ ಮುಫ್ತಿ ಮಹಮ್ಮದ್‌ ಸಯೀದ್‌ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ...

ಜಮ್ಮು-ಕಾಶ್ಮೀರವನ್ನು ಶಾಂತಿಯ ದ್ವೀಪ ಮಾಡುವುದು ನಮ್ಮ ಕನಸು: ಮುಫ್ತಿ ಮೊಹಮದ್ ಸಯೀದ್

'ಜಮ್ಮು-ಕಾಶ್ಮೀರ'ದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಪಿಡಿಪಿ ಮುಖ್ಯಸ್ಥ ಮುಫ್ತಿ ಮೊಹಮದ್ ಸಯೀದ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಮೋದಿ ಅವರನ್ನು ಭೇಟಿ ಬಳಿಕ ಮಾತನಾಡಿದ ಮೊಹಮದ್ ಸಯೀದ್, 13 ವರ್ಷಗಳ ನಂತರ ನರೇಂದ್ರ ಮೋದಿ ಅವರನ್ನು ಭೇಟಿ...

ಮಾ.1ರಂದು ಜಮ್ಮು-ಕಾಶ್ಮೀರ ಸರ್ಕಾರ ರಚನೆ

370ನೇ ವಿಧಿ ಹಾಗೂ ಎಎಫ್ಎಸ್‌ಪಿಎ ಕುರಿತು ಬಿಜೆಪಿ-ಪಿಡಿಪಿ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಶಮನಗೊಂಡಿದ್ದು, ಮಾರ್ಚ್‌ 1ರಂದು ಪಿಡಿಪಿ ಮುಖ್ಯಸ್ಥ ಮುಫ್ತಿ ಮಹಮ್ಮದ್‌ ಸಯೀದ್‌ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮಂಗಳವಾರ...

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಪಿಡಿಪಿ ಮೈತ್ರಿ ಸರ್ಕಾರ ಖಚಿತಪಡಿಸಿದ ಅಮಿತ್ ಶಾ

'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗುವುದು ಖಚಿತವಾಗಿದ್ದು, ಶೀಘ್ರವೇ ಉತ್ತಮ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಫೆ.23ರಂದು ನವದೆಹಲಿಯಲ್ಲಿರುವ ಅಮಿತ್ ಶಾ ನಿವಾಸಕ್ಕೆ ಭೇಟಿ...

ಎನ್.ಡಿ.ಎ ಮೈತ್ರಿಕೂಟ ಸೇರಲು ಪಿಡಿಪಿಯಲ್ಲೇ ಭಿನ್ನಾಭಿಪ್ರಾಯ

'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ನಿರ್ಧಾರದ ಬೆನ್ನಲ್ಲೇ ಪಿಡಿಪಿ ಕೇಂದ್ರದಲ್ಲೂ ಎನ್.ಡಿ.ಎ ಮೈತ್ರಿಕೂಟ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಎನ್.ಡಿ.ಎ ಮೈತ್ರಿಕೂಟ ಸೇರುವ ಪಿಡಿಪಿ ಪಕ್ಷದ ಪ್ರಸ್ತಾವನೆಗೆ ಪಕ್ಷದಲ್ಲೇ ತೀವ್ರ ವಿರೋಧ...

ಜಮ್ಮು-ಕಾಶ್ಮೀರದಲ್ಲಿ ಶೀಘ್ರ ಸಮ್ಮಿಶ್ರ ಸರ್ಕಾರ

ಜಮ್ಮ-ಕಾಶ್ಮೀರದಲ್ಲಿ ಸರ್ಕಾರ ರಚನೆ ಡ್ರಾಮಾ ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಬಿಜೆಪಿ-ಪಿಡಿಪಿ ಮೈತ್ರಿಯ ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಈ ಬಗ್ಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಗೆ ಆರ್‌.ಎಸ್‌.ಎಸ್‌ ಯಾವುದೇ ಅಡ್ಡಿ ವ್ಯಕ್ತಪಡಿಸದಿದ್ದರೆ ಈ ವಾರದ ಅಂತ್ಯದಲ್ಲಿ...

ಎ.ಎಫ್.ಎಸ್.ಪಿ.ಎ ಕಾಯ್ದೆ ಸಡಿಲಕ್ಕೆ ಸೇನೆಯಿಂದ ತೀವ್ರ ವಿರೋಧ

'ಜಮ್ಮು-ಕಾಶ್ಮೀರ'ದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಪಿಡಿಪಿ ವಿಧಿಸಿರುವ ಷರತ್ತುಗಳಲ್ಲಿ ಒಂದಾದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎ.ಎಫ್.ಎಸ್.ಪಿ.ಎ) ರದ್ದತಿಗೆ ಭಾರತೀಯ ಸೇನೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಪಿಯೊಂದಿಗೆ ಮಾತುಕತೆ ನಡೆಸಲು ಬಿಜೆಪಿ ಸಿದ್ಧವಾಗಿರುವುದನ್ನು ಗಮನಿಸಿದ್ದ ಆರ್.ಎಸ್.ಎಸ್ ಸಹ ಪಕ್ಷದ ಕ್ರಮಕ್ಕೆ...

ಆರ್.ಎಸ್.ಎಸ್ ಅಸಮಾಧಾನ: ಅನಿಶ್ಚಿತತೆಯತ್ತ ಸಾಗುತ್ತಿರುವ ಪಿಡಿಪಿ-ಬಿಜೆಪಿ ಮೈತ್ರಿ

'ಜಮ್ಮು-ಕಾಶ್ಮೀರ'ದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಬಹುತೇಕ ಅನಿಶ್ಚಿತತೆಯತ್ತ ಸಾಗಿದೆ. ಸರ್ಕಾರ ರಚನೆ ಹಿನ್ನೆಲೆಯಲ್ಲಿ ಪಿಡಿಪಿ ಪಕ್ಷ ಬಿಜೆಪಿಯಿಂದ ಲಿಖಿತ ರೂಪದಲ್ಲಿ ಕೆಲವು ಭರವಸೆಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದೆ. ಪಿಡಿಪಿ ಪಕ್ಷದ ವಿಚಾರಗಳಿಗೆ ಬಿಜೆಪಿ ರಾಜಿಮಾಡಿಕೊಳ್ಳುವುದಕ್ಕೆ ಆರ್.ಎಸ್.ಎಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ...

ಪಿಡಿಪಿ ಷರತ್ತುಗಳಿಗೆ ಒಪ್ಪಿಗೆ: ಬಿಜೆಪಿ ವಿರುದ್ಧ ಆರ್.ಎಸ್.ಎಸ್ ಅಸಮಾಧಾನ

'ಜಮ್ಮು-ಕಾಶ್ಮೀರ'ದಲ್ಲಿ ಸರ್ಕಾರ ರಚನೆ ಕಸರತ್ತು ನಡೆಸುತ್ತಿರುವ ಬಿಜೆಪಿಯನ್ನು ಆರ್.ಎಸ್.ಎಸ್ ತರಾಟೆಗೆ ತೆಗೆದುಕೊಂಡಿದ್ದು ಸರ್ಕಾರ ರಚನೆಗಾಗಿ ಪಿಡಿಪಿಯೊಂದಿಗೆ ಕೆಲವು ವಿಷಯಗಳಲ್ಲಿ ರಾಜಿಮಾಡಿಕೊಂಡಿರುವುದನ್ನು ವಿರೋಧಿಸಿದೆ. ಏಕರೂಪ ನಾಗರಿಕ ಸಂಹಿತೆ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎ.ಎಫ್.ಎಸ್.ಪಿ.ಎ) ಹಾಗೂ ಆರ್ಟಿಕಲ್ 370 ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ...

ಜಮ್ಮು-ಕಾಶ್ಮೀರದಲ್ಲಿ ಫೆ.23ರಂದು ಹೊಸ ಸರ್ಕಾರ ರಚನೆ ಸಾಧ್ಯತೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಅನಿಶ್ಚಿತತಗೆ ಶೀಘ್ರವೇ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಫೆ.23ರಂದು ನೂತನ ಸರ್ಕಾರ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರ ರಚನೆಯತ್ತ ಬಿಜೆಪಿ-ಪಿಡಿಪಿ ಮೈತ್ರಿಕೂಟ ಮುಂದಾಗಿದ್ದು, ಈ ಸಂಬಂಧ ಚರ್ಚೆ ನಡೆಸಲು ಬಿಜೆಪಿ-ಪಿಡಿಪಿ ನಾಯಕರು ಮತ್ತೆ ಸಭೆ ಸೇರಲಿದ್ದಾರೆ. ಇಂದಿನ ಸಭೆಯಲ್ಲಿ ಬಿಜೆಪಿ...

ಜಮ್ಮು-ಕಾಶ್ಮೀರದಲ್ಲಿ 10 ದಿನದಲ್ಲಿ ಪಿಡಿಪಿ-ಬಿಜೆಪಿ ಸರ್ಕಾರ

ಜಮ್ಮು-ಕಾಶ್ಮೀರದಲ್ಲಿ ಇನ್ನು 10 ದಿನದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ವಿವಾದಾತ್ಮಕ ವಿಷಯಗಳಾದ ಸಂವಿಧಾನದ 370ನೇ ಪರಿಚ್ಛೇದ (ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಾಯ್ದೆ) ಮತ್ತು ಸಶಸ್ತ್ರ ಪಡೆಗಳ...

ಜಮ್ಮು-ಕಾಶ್ಮೀರ ಸರ್ಕಾರ: ಪಿಡಿಪಿಗೆ ಸಿಎಂ ಹುದ್ದೆ, ಬಿಜೆಪಿಗೆ ಡಿಸಿಎಂ ಹುದ್ದೆ

'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದ್ದು ಪಿಡಿಪಿಗೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ ಮುಖ್ಯಮಂತ್ರಿ ಸ್ಥಾನ ಪಿಡಿಪಿ ಪಾಲಾದರೆ, ಉಪಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ದೊರೆಯಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಬಿಜೆಪಿಯಲ್ಲಿ...

ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ, ಬಿಜೆಪಿ ಸರ್ಕಾರ ರಚನೆ ಸಾಧ್ಯತೆ

'ರಾಜ್ಯಪಾಲರ ಆಡಳಿತ' ಇರುವ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಬಿಜೆಪಿ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಜ.28ರಂದು ಪ್ರಕಟವಾದ ವರದಿಗಳ ಪ್ರಕಾರ, ಜನವರಿ ಅಂತ್ಯದ ವೇಳೆಗೆ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಸ್ಥಾನ ಹಂಚಿಕೆ ಬಗ್ಗೆ ಈಗಾಗಲೆ...

ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿ

ಚುನಾವಣೆ ಫಲಿತಾಂಶ ಅತಂತ್ರವಾಗಿ ಪಕ್ಷಗಳ ನಡುವೆ ಮೈತ್ರಿ ಸಾಧ್ಯವಾಗದ ಕಾರಣ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿದೆ. ಜಮ್ಮು-ಕಾಶ್ಮೀರದ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಹಾಗೂ ಸರ್ಕಾರ ರಚನೆಯಲ್ಲಿ ಪಕ್ಷಗಳು ವಿಫಲವಾದ ಕಾರಣ ರಾಜ್ಯಪಾಲ ಎನ್.ಎನ್...

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ: ಬಿಜೆಪಿ ಜತೆ ಚರ್ಚೆ ಇಲ್ಲ

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಜತೆಗೂಡಿ ಸರ್ಕಾರ ರಚಿಸುವ ಬಗ್ಗೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ದಿನಕ್ಕೊಂದು ಹೇಳಿಕೆ ನೀಡಲಾರಂಭಿಸಿದ್ದಾರೆ. ಜ.4ರಿಂದ ಅಧಿಕೃತವಾಗಿ ಸರ್ಕಾರ ರಚನೆ ಬಗ್ಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಈಗ ತಮ್ಮ ನಿಲುವು ಬದಲಾಯಿಸಿದ್ದು, ಅಂಥ ಯೋಚನೆಯೇ ಇಲ್ಲ....

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಪ್ರಸ್ತಾಪ: ಸಮಯ ಕೇಳಿದ ಬಿಜೆಪಿ

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿ ಅಂತಿಮ ನಿರ್ಧಾರವೊಂದಕ್ಕೆ ಬರಲು ಬಿಜೆಪಿ ಇನ್ನಷ್ಟು ದಿನಗಳ ಕಾಲಾವಕಾಶ ಕೋರಿದೆ. ರಾಜ್ಯಪಾಲರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದೆ. ಇತ್ತೀಚಿನ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಡಿಪಿಯು ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಬಿಜೆಪಿಯ ಕೆಲ ಷರತ್ತುಗಳಿಗೆ...

ಜಮ್ಮು-ಕಾಶ್ಮೀರ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಪ್ರತ್ಯೇಕವಾದಿಗಳ ಹಸ್ತಕ್ಷೇಪ!

'ಜಮ್ಮು-ಕಾಶ್ಮೀರ'ದ ರಾಜಕಾರಣದ ಇತಿಹಾಸದಲ್ಲೇ ಮೊದಲಿಗೆ ಪ್ರತ್ಯೇಕವಾದಿ ನಾಯಕ ಸರ್ಕಾರ ರಚನೆ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ. ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹುರಿಯತ್ ಕಾನ್ಫರೆನ್ಸ್ ನ ನಾಯಕ, ಅಬ್ದುಲ್ ಘನಿ ಭಟ್...

ಜಮ್ಮು-ಕಾಶ್ಮೀರಕ್ಕೆ ಸ್ಥಿರ ಸರ್ಕಾರ ನೀಡುವುದು ನಮ್ಮ ಆದ್ಯತೆ: ಬಿಜೆಪಿ

'ಜಮ್ಮು-ಕಾಶ್ಮೀರ'ದಲ್ಲಿ ಸ್ಥಿರ ಸರ್ಕಾರ ರಚಿಸಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಬಿಜೆಪಿ ಹೇಳಿದೆ. ಜ.1ರಂದು ರಾಜ್ಯಪಾಲ ಎನ್.ಎನ್ ವೋಹ್ರಾ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಜಮ್ಮು-ಕಾಶ್ಮೀರದಲ್ಲಿ ಸ್ಥಿರ ಸರ್ಕಾರ ಅಸ್ಥಿತ್ವಕ್ಕೆ ಬರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸರ್ಕಾರ...

ಜಮ್ಮು-ಕಾಶ್ಮೀರ: ಮೆಹಬೂಬ ಮುಫ್ತಿಯಿಂದ ರಾಜ್ಯಪಾಲರ ಭೇಟಿ

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಸಂಬಧಿಸಿದಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಡಿಪಿಯನ್ನು ಸರ್ಕಾರ ರಚನೆ ಸಂಬಂಧ ರಾಜ್ಯಪಾಲ ಎನ್.ಎನ್.ವೊಹ್ರಾ ಅವರು ಆಹ್ವಾನ ನೀಡಿದ್ದರು. ಈ ಹಿನ್ನಲೆಯಲ್ಲಿ ಮೆಹಬೂಬ...

ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆ

'ಜಮ್ಮು-ಕಾಶ್ಮೀರ'ದಲ್ಲಿ ಪಿಡಿಪಿ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಅತಂತ್ರ ಫಲಿತಾಂಶದಿಂದ ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಉಂಟಾಗಿತ್ತು. ಆದರೆ ಪಿಡಿಪಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿದುಬಂದಿದೆ. ರಾಜ್ಯಪಾಲರ ಭೇಟಿ ಮಾಡಿದ ಬಳಿಕ...

ಎನ್‌ಸಿ, ಕಾಂಗ್ರೆಸ್‌ ಜತೆ ಪಿಡಿಪಿ ಮೈತ್ರಿ ಒಲವು

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸುವ ಸಂಬಂಧ ತನ್ನ ಬದ್ಧ ವೈರಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಜತೆ ಪಿಡಿಪಿ 'ಮಹಾ ಮೈತ್ರಿ' ಮಾಡಿಕೊಳ್ಳುವ ಸಾಧ್ಯತೆ ಇದೆ. 87 ಸ್ಥಾನಗಳ ವಿಧಾನಸಭೆಯಲ್ಲಿ 28 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಡಿಪಿ, ಎರಡನೇ ಅತಿ ದೊಡ್ಡ...

ಜಮ್ಮು-ಕಾಶ್ಮೀರ: ಬಿಜೆಪಿಗೆ ಐದು ಷರತ್ತು ವಿಧಿಸಿದ ಪಿಡಿಪಿ

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಮತ್ತಷ್ಟು ಜಟಿಲಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡ್ತೇವೆ. ಆದರೆ ನಮ್ಮ ನಿಲುವುಗಳಲ್ಲಿ ಬದಲಿಲ್ಲ. ನಮ್ಮ ಐದು ಷರತ್ತುಗಳಿಗೆ ಬಿಜೆಪಿ ಒಪ್ಪಲೇಬೇಕು ಎಂದು ಪಿಡಿಪಿ ಖಡಕ್ ಸಂದೇಶ ರವಾನಿಸಿದೆ. ವಿಶೇಷವಾಗಿ ಸಂವಿಧಾನದ 370ನೇ ವಿಧಿಯ ಯಥಾಸ್ಥಿತಿ ಮತ್ತು ಸಶಸ್ತ್ರ...

ಜಮ್ಮು-ಕಾಶ್ಮೀರ: ಪಿಡಿಪಿ,ಬಿಜೆಪಿಗೆ ಮಾತುಕತೆಗೆ ಆಹ್ವಾನ ನೀಡಿದ ರಾಜ್ಯಪಾಲ ವೋಹ್ರಾ

ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಮುಂದುವರೆದ ಅನಿಶ್ಚಿತತೆಯ ಮಧ್ಯೆ, ಸರ್ಕಾರ ರಚನೆಯ ಬಗ್ಗೆ ಮಾತುಕತೆ ನಡೆಸಲು ರಾಜ್ಯಪಾಲ ಎನ್.ಎನ್.ವೋಹ್ರಾ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಕ್ರಮವಾಗಿ 28 ಮತ್ತು 25ಸ್ಥಾನಗಳನ್ನು ಗಳಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ...

ಜಮ್ಮು-ಕಾಶ್ಮೀರದಲ್ಲಿ ಎನ್.ಸಿ ಜೊತೆ ಮೈತ್ರಿಗೆ ಬಿಜೆಪಿ ಶಾಸಕರ ಸಲಹೆ

'ಜಮ್ಮು-ಕಾಶ್ಮೀರ'ದಲ್ಲಿ ಸರ್ಕಾರ ರಚನೆ ಕಸರತ್ತು ನಡೆಯುತ್ತಿದ್ದು, ಬಿಜೆಪಿ ಶಾಸಕರು ಎನ್.ಸಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಉತ್ತಮ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ. ಆದರೆ ನ್ಯಾಷನಲ್ ಕಾನ್ಫರೆನ್ಸ್ ಮಾತ್ರ ಸರ್ಕಾರ ರಚನೆ ಸಂಬಂಧ ಬಿಜೆಪಿಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದೆ....

ಜಮ್ಮು-ಕಾಶ್ಮೀರ ಸರ್ಕಾರ ರಚನೆ: ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಓಮರ್ ಅಬ್ದುಲ್ಲಾ

'ಜಮ್ಮು-ಕಾಶ್ಮೀರ'ದಲ್ಲಿ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಲು ಎನ್.ಸಿ ಮುಖಂಡ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಡಿ.25ರಂದು ನವದೆಹಲಿಗೆ ತೆರಳಿರುವ ಓಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ...

ಜಾರ್ಖಂಡ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ, ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ

'ಜಾರ್ಖಂಡ್' ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಪ್ರಕಟವಾಗಿದ್ದು ಜಾರ್ಖಂಡ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದ್ದು ಸರ್ಕಾರ ರಚಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಜಮ್ಮು-ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪಕ್ಷಕ್ಕೂ ಬಹುಮತ ದೊರೆತಿಲ್ಲ....

ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಬಗ್ಗೆ ಮುಕ್ತವಾಗಿರಲು ಮೋದಿ ಸೂಚನೆ

'ಜಮ್ಮು-ಕಾಶ್ಮೀರ' ವಿಧಾನಸಭಾ ಚುನಾವಣೆ ಫಲಿತಾಂಶ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಮೈತ್ರಿ ಬಗ್ಗೆ ಮುಕ್ತವಾಗಿರಲು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ. ಜಮ್ಮು-ಕಾಶ್ಮೀರದ 87 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದು ಯಾವುದೇ ಪಕ್ಷಕ್ಕೂ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಮೈತ್ರಿ...

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೇ ಅತಿ ಹೆಚ್ಚು ಶೇಕಡಾವಾರು ಮತ

'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿ ತನ್ನ ಮಿಷನ್-44 ಯೋಜನೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗದೇ ಇರಬಹುದು ಆದರೆ ಕೇಸರಿ ಪಡೆ ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಶೇಕಡವಾರು ಮತ ಪಡೆದಿರುವ ಪಕ್ಷವಾಗಿ ಹೊರಹೊಮ್ಮಿದೆ. ಡಿ.23ರಂದು ನಡೆದಿರುವ ಮತ ಎಣಿಕೆಯಲ್ಲಿ ಶೇಕಡಾವಾರು ಮತ ಬಿಜೆಪಿಗೆ ಹೆಚ್ಚು ದೊರೆತಿದ್ದು...

ಜಮ್ಮು-ಕಾಶ್ಮೀರ, ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಬಹಿರಂಗ

'ಜಮ್ಮು-ಕಾಶ್ಮೀರ' ಹಾಗೂ ಜಾರ್ಖಂಡ್ ನಲ್ಲಿ ಡಿ.20ರಂದು ಕೊನೆಯ ಹಂತದ ಮತದಾನ ಮುಕ್ತಾಯಗೊಂಡಿದ್ದು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಸಿ-ಓಟರ್ ಸಮೀಕ್ಷೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಜಾರ್ಖಂಡ್ ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸ್ಪಷ್ಟ ಬಹುಮತ ಗಳಿಸಲಿದೆ. ಸಿ-ವೋಟರ್ ಸಂಸ್ಥೆ ನಡೆಸಿದ ಚುನಾವಣೋತ್ತರ...

ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಮತದಾನ ಆರಂಭ

ಜಾರ್ಖಂಡ್‌ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಅತ್ಯಂತ ಕುತೂಹಲ ಕೆರಳಿಸಿರುವ ಈ ಚುನಾವಣೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಸೋನಿಯಾ ಗಾಂಧಿಯವರ ಕಾಂಗ್ರೆಸ್‌ ಮತ್ತು ಪ್ರಬಲ ಸ್ಥಳೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಎನ್ನಿಸಿಕೊಂಡಿದೆ. ಜಮ್ಮು- ಕಾಶ್ಮೀರದ ಕಾರ್ಗಿಲ್‌, ಲಡಾಖ್‌...

ಬಿಜೆಪಿ ಮಿಷನ್ 44+ ಗುರಿ ತಲುಪುವುದು ಹಗಲು ಕನಸು: ಓಮರ್ ಅಬ್ದುಲ್ಲಾ

'ಜಮ್ಮು-ಕಾಶ್ಮೀರ'ದಲ್ಲಿ ಮಿಷನ್ 44+' ಸಾಧಿಸಲು ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಓಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಬಿಜೆಪಿಯ ಮಿಷನ್ 44+ ಹಗಲು ಕನಸು ಎಂದು ಲೇವಡಿ ಮಾಡಿದ್ದಾರೆ. ಈ ಮೂಲಕ ಬಿಜೆಪಿ...

ಹಿಂದೂಗಳಿಗೆ ಸಿ.ಎಂ ಹುದ್ದೆ ನೀಡುವ ಬಿಜೆಪಿಗೆ ಮತ ನೀಡಬೇಡಿ:ಪಿಡಿಪಿ ನಾಯಕನ ಕರೆ

'ಜಮ್ಮು-ಕಾಶ್ಮೀರ'ದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿಗೆ ಮತ ನೀಡಿದರೆ ರಾಜ್ಯಕ್ಕೆ ಹಿಂದೂ ಮುಖ್ಯಮಂತ್ರಿ ಕೈಗೆ ಅಧಿಕಾರ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ನೀಡಬಾರದು ಎಂದು ಪಿಡಿಪಿ ಮುಖ್ಯಸ್ಥ ಪೀರ್ ಮನ್ಸೂರ್ ಹೇಳಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ...

ಭಾರತ ಸೂಪರ್ ಪವರ್ ಆಗಬೇಕಾದರೆ ಮೋದಿ ವಾಜಪೇಯಿ ಅವರನ್ನು ಅನುಸರಿಸಲಿ:ಪಿಡಿಪಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು-ಕಾಶ್ಮೀರದ ವಿಪಕ್ಷ ಪಿಡಿಪಿ ಮತ್ತೊಮ್ಮೆ ಉಪದೇಶ ನೀಡಿದೆ! ಭಾರತವನ್ನು ಸೂಪರ್ ಪವರ್ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿರುವ ಪಿಡಿಪಿ, ಭಾರತ ಸೂಪರ್ ಪವರ್ ಆಗಬೇಕಾದರೆ ಮೋದಿ ಅವರು ವಾಜಪೇಯಿ ಅವರ...

ಪಾಕ್ ನೊಂದಿಗೆ ಕೇಂದ್ರ ಸರ್ಕಾರ ದ್ವಿಪಕ್ಷೀಯ ಮಾತುಕತೆ ಮುಂದುವರೆಸಬೇಕು- ಮೆಹಬೂಬ ಮುಫ್ತಿ

'ರಕ್ಷಣಾ ಸಚಿವ'ರ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕೆಂದು ಜಮ್ಮು-ಕಾಶ್ಮೀರದ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆ.29ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಮಾಧ್ಯಮ ಸಮ್ಮೇಳನವದಲ್ಲಿ ಭಾಗವಹಿಸಿ ಮಾತನಾಡಿದ ಮೆಹಬೂಬ ಮುಫ್ತಿ, ಪಾಕಿಸ್ತಾನ ಹಾಗೂ ಭಾರತದ ನಡುವಿನ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited