Untitled Document
Sign Up | Login    
Dynamic website and Portals
  

Related News

ಸರ್ಕಾರದ ಆಡಳಿತಾವಧಿಯ ಲೆಕ್ಕ ಬಹಿರಂಗ ಪಡಿಸಿಃ ರಾಘವೇಶ್ವರ ಶ್ರೀ

2008ಕ್ಕಿಂತ ಮೊದಲು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಏನಾಗಿತ್ತು ಎಂಬುದು ಸಮಾಜಕ್ಕೆ ಗೊತ್ತಾಗಬೇಕು. 2008ರ ಬಳಿಕ ಇಲ್ಲಿವರೆಗೆ ಏನಾಗಿದೆ ಅನ್ನೋದನ್ನ ಇವತ್ತು ಐ.ಎಸ್.ಓ ಪ್ರಮಾಣ ಪತ್ರವೇ ಹೇಳ್ತಾ ಇದೆ. ಅಲ್ಲಿ ಏನಾಗ್ತಾ ಇದೆ, ಅಲ್ಲಿ ಆಡಳಿತ ಹೇಗಿದೆ ಅನ್ನೋದನ್ನ ಐ.ಎಸ್.ಓ ಪ್ರಮಾಣ...

ಕಾವೇರಿ ಜಲ ವಿವಾದ: ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಕಾವೇರಿ ಜಲ ವಿವಾದದ ಕಗ್ಗಂಟನ್ನು ಬಗೆಹರಿಸಲು ಕಾವೇರಿ ಪಾತ್ರದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಶೀಘ್ರವೇ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸ್ಥಿತಿಯ ಗಂಭೀರತೆಯ ಹಿನ್ನೆಲೆಯಲ್ಲಿ ಕೆಲವೇ ತಾಸುಗಳ ಸೂಚನೆಯಲ್ಲಿ ಸಭೆಯನ್ನು ಆಯೋಜಿಸಿ, ದೂರವಾಣಿ,...

ಮೊದಲ ಬಜೆಟ್ ಗೂ ಮುನ್ನ ಸಂಸತ್ ನಲ್ಲಿ ಶ್ವೇತಪತ್ರ ಮಂಡಿಸಲು ಯೋಚಿಸಿದ್ದೆವು: ಪ್ರಧಾನಿ ಮೋದಿ

ನಮ್ಮ ಸರ್ಕಾರ ಮೊದಲ ಬಜೆಟ್‌ ಮಂಡಿಸುವ ಮುನ್ನ, ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸುವ ಯೋಚನೆ ಮಾಡಿದ್ದೆವು. ಆದರೆ, ರಾಷ್ಟ್ರದ ಹಿತ ಅಥವಾ ರಾಜಕೀಯದಲ್ಲಿ ಯಾವುದಾದರೂ ಒಂದನ್ನು ನಾನು ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಖಾಸಗಿ...

ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಕರ್ನಾಟಕದಲ್ಲಿ ಎಂದಿನಂತೆ ನೈಋತ್ಯ ಮುಂಗಾರು ಇದೆ ಎಂಬ ಸಾಮಾನ್ಯ ಗ್ರಹಿಕೆಯನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ವಾಸ್ತವ ಚಿತ್ರಣವನ್ನು ಪರಿಚಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಸಕ್ತ ಸಾಲಿನ ಜೂನ್ 1 ರಿಂದ ಆಗಸ್ಟ್ 15 ರ ವರೆಗಿನ...

2017ರಿಂದ ಪ್ರತ್ಯೇಕ ರೈಲ್ವೆ ಬಜೆಟ್ ಗೆ ತೆರೆ

ಮುಂದಿನ ಆರ್ಥಿಕ ವರ್ಷದಿಂದ ಪ್ರತ್ಯೇಕ ರೈಲ್ವೆ ಮುಂಗಡ ಪತ್ರ ಮಂಡಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ 92 ವರ್ಷಗಳ ಇತಿಹಾಸವಿರುವ ಭಾರತದ ರೈಲ್ವೇ ಬಜೆಟ್​ಗೆ 2017ರಿಂದ ತೆರೆಬೀಳಲಿದೆ. ರೈಲ್ವೆ ಮುಂಗಡ ಪತ್ರವನ್ನು ಸಾಮಾನ್ಯ ಮುಂಗಡಪತ್ರದೊಂದಿಗೆ ಸೇರಿಸುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್...

ರಿಯೋ ಒಲಿಂಪಿಕ್ಸ್ ವರದಿಗೆ ತೆರಳಿದ್ದ ಪತ್ರಕರ್ತರ ಬಸ್ ಮೇಲೆ ದಾಳಿ

ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವರದಿ ಮಾಡಲು ತೆರಳಿರುವ ಪತ್ರಕರ್ತರ ಬಸ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಬಾಸ್ಕೇಟ್ ಬಾಲ್ ಕ್ರೀಡಾಂಗಣದಿಂದ ಒಲಿಂಪಿಕ್ ಪಾರ್ಕ್ ನತ್ತ 12 ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿದ್ದು ದಾಳಿಯಲ್ಲಿ ಮೂವರು ಪತ್ರಕರ್ತರು...

ವೈಚಾರಿಕ ಹಾಗೂ ಪ್ರಗತಿಪರ ಚಿಂತನೆವುಳ್ಳ ಪತ್ರಕರ್ತರ ಸಂಖ್ಯೆ ಹೆಚ್ಚಬೇಕು: ಸಿಎಂ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇರಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ 12 ಸರ್ಕಾರಿ...

ಮಗು ಹುಟ್ಟಿದ ಕೂಡಲೇ ಆಧಾರ್‌ ಕಾರ್ಡ್

ಮಗು ಹುಟ್ಟಿದ ಕೂಡಲೇ ಆಧಾರ್‌ಗೆ ಸೇರ್ಪಡೆಗೊಳಿಸುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಸರಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲುದ್ದೇಶಿಸಲಾಗಿದೆ ಎನ್ನಲಾಗಿದೆ. ಮಗು ಹುಟ್ಟಿದ ಕೂಡಲೇ 12 ಅಂಕಿಯ ಆಧಾರ್‌ ನಂಬರ್‌ ನೀಡುವ...

ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಶಶಾಂಕ್‌ ಮನೋಹರ್‌

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಶಶಾಂಕ್‌ ಮನೋಹರ್‌ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಹಸ್ಯ ಮತಪತ್ರಗಳ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ೫೩ ವರ್ಷದ ಶಶಾಂಕ್‌ ಮನೋಹರ್‌ ...

ಸತತ 5ನೇ ಬಾರಿಗೆ ಚಾಂಪಿಯನ್‌ಗಳಾದ ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳು

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಪ್ರಿಲ್ 11 ಹಾಗೂ 12 ರಂದು ನಡೆದ 'ನವಮಾಧ್ಯಮ' ಕುರಿತಾದ ಎರಡು ದಿನಗಳ ರಾಷ್ಟ್ರಮಟ್ಟದ ಸೆಮಿನಾರ್ ಹಾಗೂ ರಾಜ್ಯಮಟ್ಟದ 'ರೈನ್‌ಬೋ' ಮಾಧ್ಯಮೋತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು 5 ನೇ ಬಾರಿಗೆ ಸಮಗ್ರ...

ವೈಷ್ಣೋದೇವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾದಲ್ಲಿ ನಿರ್ಮಿಸಿರುವ ಶ್ರೀ ಮಾತಾ ವೈಷ್ಣೋದೇವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ವೈಷ್ಣೋದೇವಿ ದೇವಾಲಯವು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ 230 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಜಮ್ಮು-ಕಾಶ್ಮೀರದ...

ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಮರುಪರೀಕ್ಷೆ ಮಾರ್ಚ್ 31 ಕ್ಕೆ

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ವಿಷಯದ ಮರುಪರೀಕ್ಷೆ, ಮಾ. 29ರ ಬದಲು ಮಾ. 31ರಂದು ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಒತ್ತಾಯಕ್ಕೆ ಸರ್ಕಾರ ಮಣಿದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ವಿಧಾನ ಪರಿಷತ್‌ ಉಪಸಭಾಪತಿ...

ಆಳ್ವಾಸ್ ಮೀಡಿಯಾ ಬಝ್ಃ ಎಸ್.ಡಿ.ಎಂಗೆ ಸಮಗ್ರ ಪ್ರಶಸ್ತಿ

ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಆಳ್ವಾಸ್ ಮೀಡಿಯಾ ಬಝ್ - 2016ರ ರಾಷ್ಟ್ರೀಯ ಮಾಧ್ಯಮ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು 11 ಸ್ಪರ್ಧೆಗಳ ಪೈಕಿ 10 ಸ್ಪರ್ಧೆಗಳಲ್ಲಿ...

ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ

ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ. ಬ್ಯೂಟಿಫುಲ್ ಚಿತ್ರ ಈ ಹಿನ್ನೆಲೆಯಲ್ಲಿ ಕೊಂಚ ಮುಂದುವರಿದು ಪೂರ್ಣಪ್ರಮಾಣದ ಚಲನಚಿತ್ರವೊಂದರ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿರುವ ಅಷ್ಟೂ ಹಾಡುಗಳು ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ ಎಂದು ಉದ್ಯಮಿ ಪೂರಣ್ ವರ್ಮ ಹೇಳಿದರು....

ಆರ್ಥಿಕ ಸಮೀಕ್ಷೆ 2015 - 16: ಕೆಲವು ವರ್ಷಗಳಲ್ಲಿ ಭಾರತವು ಶೇಕಡಾ 8ರ ಬೆಳವಣಿಗೆಯನ್ನು ಸಾಧಿಸಲಿದೆ

ಏಪ್ರಿಲ್ 1ರಿಂದ ಆರಂಭವಾಗಲಿರುವ 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು ರಾಷ್ಟ್ರೀಯ ಜಿಡಿಪಿ ಶೇಕಡಾ 7ರಿಂದ 7.5ರಷ್ಟು ಬೆಳವಣಿಗೆಯಾಗಲಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯು ಹೇಳಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ 2016-17ರ...

ರೈಲ್ವೆ ಬಜೆಟ್ 2016:ಪ್ರಯಾಣ ದರ ಏರಿಕೆ ಇಲ್ಲ

ಗುರುವಾರ 2016 ರ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಕುಮಾರ್, ಪ್ರಯಾಣಿಕರ ಪ್ರಯಾಣ ದರವನ್ನು ಹೆಚ್ಚಿಸದೇ ತಮ್ಮ ಎರಡನೇ ರೈಲ್ವೆ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. 3 ಸೂಪರ್ ಫಾಸ್ಟ್ ರೈಲ್ ಅನ್ನು ಘೋಷಿಸಿದರು. ಅದರ...

ರೈಲಿನಡಿ ಸಿಲುಕಿ ನಾಲ್ಕು ಗ್ಯಾಂಗ್‌ಮನ್‌ಗಳ ಸಾವು

ಮುಂಬಯಿನ ಕುರ್ಲಾ ಮತ್ತು ವಿದ್ಯಾವಿಹಾರ್‌ ಸ್ಟೇಶನ್‌ಗಳ ನಡುವೆ ನಾಲ್ವರು ಗ್ಯಾಂಗ್‌ ಮನ್‌ ಗಳು ಲೋಕಲ್‌ ರೈಲಿಗೆ ಸಿಲುಕಿ ದಾರುಣವಾಗಿ ಮೃತ ಪಟ್ಟಿರುವ ಘಟನೆ ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ 6.15 ಮತ್ತು 6.30ರ ನಡುವೆ ಈ ದುರ್ಘಟನೆ ನಡೆದಿದೆ. ಛತ್ರಪತಿ ಶಿವಾಜಿ ಟರ್ಮಿನಸ್‌...

ಮೈಸೂರಿಗೆ ನಂ. 1 ಸ್ವಚ್ಛ ನಗರಿ ಪಟ್ಟ

ಸೋಮವಾರ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಷಣಾ ಸಮೀಕ್ಷೆಯ ಫಲಿತಾಂಶವನ್ನು ಘೋಷಿಸಿದ್ದು ಈ ಬಾರಿ ಕೂಡ, ಅರಮನೆ ನಗರಿ ಮೈಸೂರು ಸ್ವಚ್ಛ ನಗರಿ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. 73 ನಗರಗಳ ಪೈಕಿ, ಮೈಸೂರಿಗೆ ನಂ. 1 ಸ್ಥಾನ ದೊರೆಕಿದೆ. ಸಮೀಕ್ಷೆಯಲ್ಲಿ ಮೈಸೂರು ನಂಬರ್...

ಭಾರತದ ಸಂತ ಪರಂಪರೆಯ ಉಳಿವಿಗೆ ಸಹಸ್ರ ಸಂತ ಸಂಗಮ

ಮೊಟ್ಟಮೊದಲ ಬಾರಿಗೆ ಸಂತ ಪರಂಪರೆಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿರುವ 'ಸಹಸ್ರ ಸಂತ ಸಂಗಮ' ಶುಕ್ರವಾರ, ಫೆ. 5 ರಂದು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂತ ಸೇವಕ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದ ಎಲ್ಲೆಡೆಯಿಂದ ಮತ್ತು...

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟ

ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫೆ.13 ಮತ್ತು 20ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಳ್ಳದ ಕಾರಣ ಈ ಕ್ಷೇತ್ರಕ್ಕೆ ಚುನಾವಣೆ ನಡೆಯುವುದಿಲ್ಲ. ಬೀದರ್‌, ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲಾ ಪಂಚಾಯಿತಿ...

ಗೋಹತ್ಯಾ ನಿಷೇಧಃ ಪ್ರಧಾನಿ ಮೋದಿಗೆ ಐ ಎಸ್ ಐ ಎಸ್ ಕೊಲೆ ಬೆದರಿಕೆ ಪತ್ರ

ಐ ಎಸ್ ಐ ಎಸ್ ಹಸ್ತಾಕ್ಷರವಿದೆ ಎನ್ನಲಾದ ಅನಾಮಧೇಯ ಪತ್ರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಗೋವಾ ಪೊಲೀಸರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಭಯೋತ್ಪಾದಕ ನಿಗ್ರಹ ದಳಕ್ಕೆ...

ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ವಿಧಿವಶ

ಕನ್ನಡದ ಖ್ಯಾತ ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ(84) ಆವರು ಭಾನುವಾರ ಸಂಜೆ ಬೆಂಗಳೂರಿನ ಕೆ ಸಿ ಜನರಲ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ ಹಲವಾರು ದಿನಗಳಿಂದ ಆನಾರೋಗ್ಯದಿಂದ ಬಳಲುತಿದ್ದ ಗೀತಪ್ರಿಯ ಆವರನ್ನು ಬೆಂಗಳೂರಿನ ಕೆ ಸಿ ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ...

ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ವತಿಯಿಂದ ವಾರ್ಷಿಕ ಕ್ರೀಡಾಕೂಟ

ಮುಂಡಾಜೆಯ ಶತಾಬ್ದಿ ವಿದ್ಯಾಲಯ ಸಮಿತಿಯ ಆಡಳಿತಕ್ಕೊಳಪಟ್ಟ ಸರಸ್ವತಿ ಆಂಗ್ಲಮಾಧ್ಯಮ ಶಾಲೆ, ಮುಂಡಾಜೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ಭಿಡೆ ನಾರಾಯಣ ಭಟ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಉಜಿರೆ ಉದ್ಯಮಿ ಉಮೇಶ್ ಶೆಟ್ಟಿ ಪಥ ಸಂಚಲನ ಹಾಗೂ ಶತಾಬಿ ವಿದ್ಯಾಲಯ...

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಶನಿವಾರ ನ್ಯಾಯಾಲಯಕ್ಕೆ ಹಾಜರಾಗಲಿರುವ ಸೋನಿಯಾ, ರಾಹುಲ್‌ ಗಾಂಧಿ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಂಚನೆ ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಇತರ ಆರೋಪಿಗಳು ಶನಿವಾರ ಪಟಿಯಾಲ ಹೌಸ್‌ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಒಂದು ವೇಳೆ, ನ್ಯಾಯಾಲಯವೇನಾದರೂ ಬಂಧನಕ್ಕೆ ಆದೇಶಿಸಿದರೆ ಸೋನಿಯಾ, ರಾಹುಲ್‌...

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಜಾಮೀನು ಮಂಜೂರು

ಶನಿವಾರ ಪಟಿಯಾಲಾ ನ್ಯಾಯಾಲಯಕ್ಕೆ ಹಾಜರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನ್ಯಾಯಾಲಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಂಚನೆ ಮತ್ತು ದುರುಪಯೋಗ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. ಶ್ಯೂರಿಟಿ ಮತ್ತು ತಲಾ 50 ಸಾವಿರ ಬಾಂಡ್ ಆಧಾರದ ಮೇಲೆ...

ಅವರಿಗೆ ಏನು ಹೇಳಬೇಕೆನಿಸುತ್ತದೆಯೋ ಹೇಳಲಿಃ ಪ್ರಧಾನಿಗೆ ಸೋನಿಯಾ ಗಾಂಧಿ ತಿರುಗೇಟು

ಯಾರೊಬ್ಬರ ಮರ್ಜಿಗೆ ಅನುಗುಣವಾಗಿ ಪ್ರಜಾಪ್ರಭುತ್ವವನ್ನು ನಡೆಸಲಾಗದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಗುರುವಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರಿಗೆ ಏನು ಹೇಳಬೇಕೆಂದೆನಿಸುತ್ತದೆಯೋ ಹೇಳಲಿ ಎಂದು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್...

ನಾನು ಇಂದಿರಾ ಗಾಂಧಿ ಸೊಸೆ, ಯಾರಿಗೂ ಹೆದರುವುದಿಲ್ಲಃ ಸೋನಿಯಾ ಗಾಂಧಿ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಂಚನೆ ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಡಿಸೆಂಬರ್ 19ರಂದು ಮಧ್ಯಾಹ್ನ 3ಗಂಟೆಗೆ ಖುದ್ದು ಹಾಜರಾಗುವಂತೆ ದೆಹಲಿಯ ವಿಚಾರಣಾ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ. ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ...

ರಾಘವೇಶ್ವರ ಶ್ರೀಗಳ ವಿರುದ್ದದ ಷಡ್ಯಂತ್ರ ಖಂಡಿಸಿ ಕೋಲಾರದ ಮುಳುಬಾಗಿಲುವಿನಲ್ಲಿ ಹಿಂದೂ ಪರ ಸಂಘಟನೆಗಳಿಂದ ಸಭೆ

ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನಕಲಿ ಸಿ ಡಿ ಪ್ರಕರಣವನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರ ಮತ್ತು ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಮೇಲಿನ ಷಡ್ಯಂತ್ರವನ್ನು ವಿರೋಧಿಸಿ ಕೋಲಾರ ಜಿಲ್ಲೆಯ ಮುಳುಬಾಗಿಲುವಿನಲ್ಲಿ ಹಲವು ಹಿಂದೂ ಪರ ಸಂಘಟನೆಗಳಿಂದ, ತಾಲೂಕಿನ ತಹಶಿಲ್ದಾರರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿ,...

ವಿಧಾನಪರಿಷತ್ ನ 25 ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ

ವಿಧಾನಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.9 ಕಡೆಯ ದಿನವಾಗಿದೆ. ಡಿ.10ರಂದು ನಾಮಪತ್ರಗಳ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು ಡಿ.12 ಕೊನೆಯ ದಿನವಾಗಿದೆ ಎಂದು ಹೇಳಿದೆ....

ಟಿವಿ ಚಾನೆಲ್, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ: ಕೆ ಎಸ್ ಈಶ್ವರಪ್ಪ

ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ, ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಈಶ್ವರಪ್ಪ ಅವರು, ರಾಜ್ಯದಲ್ಲಿ ಟಿವಿ ಚಾನೆಲ್, ದಿನ ಪತ್ರಿಕೆಗಳನ್ನು ಬ್ಯಾನ್...

ಮಾಜಿ ಸಚಿವ, ಹಾಲಿ ಶಾಸಕ, ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ

ಮಾಜಿ ಸಚಿವ, ಹಾಲಿ ಶಾಸಕ, ಗುರುಪಾದಪ್ಪ ನಾಗಮಾರಪಲ್ಲಿ (75) ಅವರು ಮಂಗಳವಾರ ನಸುಕಿನ ವೇಳೆ ವಿಧಿವಶರಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತವಾದ ಬಳಿಕ ಗುರುಪಾಮಾದಪ್ಪ ಅವರನ್ನು ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ವಿಮಾನದಲ್ಲಿ ಬೀದರ್ ಗೆ ಪಾರ್ಥೀವ ಶರೀರವನ್ನು...

ನಿರ್ದೇಶಕ, ನಟ ಕೆ ಎಸ್ ​ಎಲ್ ಸ್ವಾಮಿ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಟ ಕೆ ಎಸ್‌ ಎಲ್‌ ಸ್ವಾಮಿ (77) ಆನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮಿಯವರನ್ನು ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ...

ಬಿಸಿಸಿಐ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ

ಶಶಾಂಕ್ ಮನೋಹರ್ ಭಾನುವಾರ ಬಿಸಿಸಿಐನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 58ರ ಶಶಾಂಕ್ ಮನೋಹರ್ ಎರಡನೇ ಬಾರಿಗೆ ಬಿಸಿಸಿಐ ನ ಅಧ್ಯಕ್ಷ ಹುದ್ದೆ ಅಲಂಕರಿಸಿದಂತಾಗಿದೆ. ಜಗಮೋಹನ್ ದಾಲ್ಮಿಯಾ ಅವರು ನಿಧನ ದಿಂದ ತೆರವಾಗಿದ್ದ ಬಿಸಿಸಿಐಯ ಅಧ್ಯಕ್ಷ ಹುದ್ದೆಗೆ ಭಾನುವಾರ ನಡೆದ ಭಾರತೀಯ ಕ್ರಿಕೆಟ್...

ಮಂಗಳೂರು-ಚನ್ನೈ ರೈಲು ಅಪಘಾತ: 35 ಪ್ರಯಾಣಿಕರಿಗೆ ಗಾಯ

ಮಧುರೈ ಸಮೀಪದ ವೃದ್ಧಾಚಲಂ ಬಳಿ ಚಲಿಸುತ್ತಿದ್ದ ಚೆನ್ನೈ-ಮಂಗಳೂರು ಎಕ್ಸ್​ಪ್ರೆಸ್ ರೈಲಿನ (16859) 5 ಬೋಗಿಗಳು ಹಳಿ ತಪ್ಪಿದ್ದರಿಂದ 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗುರುವಾರ ತಡರಾತ್ರಿ 2 ಗಂಟೆಯ ವೇಳೆಗೆ ಪುವನೂರು ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ. ರೈಲ್ವೆ ಅಧಿಕಾರಿಗಳು, ಅಗ್ನಿಶಾಮಕ ದಳ...

ಸರಳ ಜೀವಿ, ಗಾಂಧಿವಾದಿ ಅಣ್ಣಾ ಹಜಾರೆಗೆ Z+ ರಕ್ಷಣೆ

ಕಳೆದ 10 ದಿನಗಳಲ್ಲಿ ಎರಡನೇ ಬಾರಿ ಜೀವ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ 'Z+' ರಕ್ಷಣೆ ನೀಡಲಾಗಿದೆ. ಸರಳ ಜೀವನ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ವಿರುದ್ಧ ಹೋರಾಟ ಮುಂತಾದ ವಿಷಯಗಳನ್ನು ಎತ್ತಿಕೊಂಡು...

ಲೋಕಸಭಾ ಕಲಾಪಕ್ಕೆ ಅಡ್ಡಿ: 27 ಕಾಂಗ್ರೆಸ್ ಸಂಸದರ ಅಮಾನತು

ಮುಂಗಾರು ಅಧಿವೇಶನ ಆರಂಭವಾದಂದಿನಿಂದ ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ ಸಂಸದರ ವರ್ತನೆ ಇಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ತಾಳ್ಮೆಯನ್ನು ಕೆಡಿಸಿತು. ಲೋಕಸಭೆ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದೀರೆಂದು 27 ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಕಲಾಪಕ್ಕೆ ಭಿತ್ತಿಪತ್ರ ಮತ್ತು...

ಬಿಬಿಎಂಪಿ ಚುನಾವಣಾ ದಿನಾಂಕ ನಿಗದಿ : ಆಗಸ್ಟ್ 22 ಕ್ಕೆ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಗಸ್ಟ್ 22ರಂದು ಚುನಾವಣೆ ನಡೆಸುವುದಾಗಿ ಗುರುವಾರ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಘೋಷಿಸಿದೆ. ಜುಲೈ 28 ರಂದು ನಡೆಯಬೇಕಿದ್ದ ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ತಡೆ ಬಿದ್ದಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆಗಸ್ಟ್ ೨೨...

ರಾಜ್ಯದಲ್ಲಿ ಒಂದೇ ದಿನ ನಾಲ್ವರು ರೈತರ ಆತ್ಮಹತ್ಯೆ

ರೈತರ ಆತ್ಮಹತ್ಯೆ ಮುಂದುವರಿದಿದ್ದು, ಶುಕ್ರವಾರ ರಾಜದಲ್ಲಿ ಒಟ್ಟು 4 ರೈತರು ಅತ್ಮಹತ್ಯೆ ಮಾಡಿಕೊಡಿದ್ದಾರೆ. ಸಾಲಬಾಧೆ ತಾಳಲಾರದೆ, ಕೊಪ್ಪಳ ಜಿಲ್ಲೆಯ ಗಂಗಾವತಿ, ಚಿತ್ರದುರ್ಗ ಮತ್ತು ಮೈಸೂರು ಸೇರಿ ಒಟ್ಟು ನಾಲ್ವರು ರೈತರು ಅತ್ಮಹತ್ಯೆ ಮಾಡಿಕೊಡಿದ್ದಾರೆ. ಚಿತ್ರದುರ್ಗದಲ್ಲಿ ರೈತ 30 ವರ್ಷದ ರಂಗಪ್ಪ ಸಾಲ ತೀರಿಸಲಾಗದೆ...

ವಿಷಪೂರಿತ ಹಾಲು ಸೇವಿಸಿ 60 ಶಾಲಾ ಮಕ್ಕಳು ಅಸ್ವಸ್ಥ

ಬಾಗಲಕೋಟೆಯ ಇಳಕಲ್​ನ ಕಂಡ್ಗಲ್​ನಲ್ಲಿ 60 ಶಾಲಾ ಮಕ್ಕಳು ಬೆಳಗ್ಗೆ ಹಾಲು ಕುಡಿದ ನಂತರ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಇವರಲ್ಲಿ ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಸರಕಾರ ಕೊಡುವ ಹಾಲು ವಿಷಪೂರಿತವಾಗಿತ್ತು...

ಪತ್ರಿಕೆಗಳ ಮೌಲ್ಯ ಶಾಶ್ವತ: ಶ್ರೀ ಜಯಪ್ರಕಾಶ್ ಕುಕ್ಕೇಟಿ

ಆಧುನಿಕ ಯುಗದಲ್ಲಿ ಕ್ಷಣಮಾತ್ರದಲ್ಲಿ ದೂರದರ್ಶನ, ಇಂಟರ್‌ನೆಟ್ ಮೂಲಕ ಮಾಹಿತಿಯನ್ನು ತಿಳಿಯುತ್ತೇವೆ. ಆದರೆ ಪತ್ರಿಕೆಗಳ ಓದಿನ ಲಾಭವೇ ಬೇರೆ. ಅದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಈಗ ಶಾಲೆಗಳು ಅಂಕಗಳಿಕೆಗೆ ಮಾತ್ರ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿವೆ. ಆದರೆ ಸ್ನೇಹಶಾಲೆ ಎಲ್ಲಾ ಶಾಲೆಗಳಿಗಿಂತ ವಿಭಿನ್ನ. ಇಲ್ಲಿ ವಿದ್ಯಾರ್ಥಿಗಳಿಗೆ...

ಲೋಕಾಯುಕ್ತ ಲಂಚ ಪ್ರಕರಣ: ಸಿಬಿಐಗೆ ವಹಿಸುವ ಅಧಿಕಾರ ಸರ್ಕಾರಕ್ಕಿಲ್ಲ-ಸಿಎಂ

ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳೇ ಭಾಗಿಯಾಗಿರುವ ರು.1 ಕೋಟಿ ಲಂಚ ಆರೋಪದ ತನಿಖೆ ಮತ್ತೆ ಕಗ್ಗಂಟಾಗಿ ಪರಿಣಮಿಸಿದೆ. ಯಾರು ತನಿಖೆ ನಡೆಸಬೇಕೆಂಬುದನ್ನು ಸರ್ಕಾರವೇ ನಿರ್ಧರಿಸಲಿ ಎಂದು ಲೋಕಾಯುಕ್ತರು ಪತ್ರ ಬರೆದ ಬೆನ್ನಲ್ಲೇ, ಲೋಕಾಯುಕ್ತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ...

ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣ: ಸಿಸಿಬಿ ತನಿಖೆಗೆ ಹಿನ್ನಡೆ

ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತದಲ್ಲಿ ನಡೆದಿರುವ ಒಂದು ಕೋಟಿ ರೂ. ಹಣದ ಬೇಡಿಕೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ ಬೆನ್ನಲ್ಲೇ ಆ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‌ ರಾವ್‌ ಅವರಿಗೆ ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್‌ ಪತ್ರ ಬರೆದಿದ್ದಾರೆ. ಬೆಂಗಳೂರು...

ಬಿಬಿಎಂಪಿ ಚುನಾವಣಾ ದಿನಾಂಕ ಪ್ರಕಟ : ಗುರುವಾರದಿಂದಲೇ ನೀತಿ ಸಂಹಿತೆ ಜಾರಿ

ಬಿಬಿಎಂಪಿ ಚುನಾವಣಾ ದಿನಾಂಕ ಘೊಷಣೆಯಾಗಿದ್ದು, ಜುಲೈ 28ರಂದು ಚುನಾವಣೆ ನಡೆಯಲಿದ್ದು ಗುರುವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಗುರುವಾರ ಸುದ್ದಿಗೋಷ್ಠಿ ನಡೆದ ಸುದ್ದಿಗೋಷ್ಠಿಯಲ್ಲಿ, ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಬಿಬಿಎಂಪಿ ಚುನಾವಣಾ ವೇಳಾಪಟ್ಟಿಯನ್ನು ಘೊಷಣೆ ಮಾಡಿದರು. ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಚುನಾವಣೆಯ ಉಸ್ತುವಾರಿ...

ಮಧ್ಯಪ್ರದೇಶದಲ್ಲಿ ಪತ್ರಕರ್ತನ ಹತ್ಯೆ: ಮೂವರ ಬಂಧನ

ಉತ್ತರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಪತ್ರಕರ್ತ ಜೋಗಿಂದರ್ ಸಿಂಗ್‌ ರನ್ನು ಸಜೀವವಾಗಿ ಸುಟ್ಟ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತನ ಸಜೀವ ದಹನವು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಬಲಾಘಾಟ್ ಜಿಲ್ಲೆಯ ಕಟಾಂಗಿ ನಿವಾಸಿಯಾದ 44 ವರ್ಷದ ಸಂದೀಪ್ ಕೊತಾರಿ...

ಪತ್ರಕರ್ತನ ದಹನ ಪ್ರಕರಣ: ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್

ಶಹಜಹಾನ್ ಪುರ್ ಮೂಲದ ಪತ್ರಕರ್ತ ಜಗೇಂದ್ರ ಸಿಂಗ್ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪತ್ರಕರ್ತ ಸಿಂಗ್ ಹತ್ಯೆ ಪ್ರಕರಣದ ಬಗ್ಗೆ ಸಲ್ಲಿಸಿದ್ದ ಸಾರ್ವಜನಿಕ...

ಪತ್ರಕರ್ತನ ಹತ್ಯೆ ಪ್ರಕರಣ: ಪ್ರಕೃತಿ ಸಹಜವಾದ ಘಟನೆ ಎಂದ ಯುಪಿ ಸಚಿವ

ಪತ್ರಕರ್ತರೊಬ್ಬರನ್ನು ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ ಪ್ರಕರಣದ ವಿರುದ್ಧ ಉತ್ತರಪ್ರದೇಶ ಸೇರಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪ್ರಕೃತಿ ಸಹಜವಾದ ಘಟನೆಗಳನ್ನು ನಾವು ತಡೆಯಲಾಗದು ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಯುಪಿ ತೋಟಗಾರಿಕೆ ಇಲಾಖೆ ಸಚಿವ ಪರಸುನಾಥ...

ಜಿತೇಂದ್ರ ಸಿಂಗ್ ತೋಮರ್ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ

ನಕಲಿ ಕಾನೂನು ಮತ್ತು ಬಿಎಸ್ಸಿ ಪದವಿ ಪ್ರಮಾಣ ಪತ್ರ ಹೊಂದಿದ ಆರೋಪದ ಮೇಲೆ ಬಂಧಿತರಾಗಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಮತ್ತೆ ಎರಡು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ. ಜಿತೇಂದ್ರ ಸಿಂಗ್ ತೋಮರ್ ಅವರ 4 ದಿನಗಳ...

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮರು ಮೌಲ್ಯಮಾಪನ : 19ಕ್ಕೆ ಸಂಪೂರ್ಣ ಫಲಿತಾಂಶ

ಈಗಾಗಲೇ ಸಾವಿರಾರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಮರುಎಣಿಕೆಗೆ ಅರ್ಜಿ ಸಲ್ಲಿಸಿದ್ದು, ಜೂ.19ರೊಳಗೆ ಫಲಿತಾಂಶ ಹೊರಬೀಳಲಿದೆ ಎಂದು ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಜೂ.15ರಂದು, ದ್ವಿತೀಯ ಹಂತದಲ್ಲಿ ಜೂ.17 ಹಾಗೂ ಅಂತಿಮವಾಗಿ...

ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಬಂಧನ

ನಕಲಿ ಕಾನೂನು ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜಿತೇಂದ್ರ ಸಿಂಗ್ ತೋಮರ್ ಬಂಧನದ ಕುರಿತು ಆಪ್ ನಾಯಕ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ತೋಮರ್ ವಿರುದ್ಧ...

ಲಾಟರಿ ಹಗರಣ: ವರದಿ ನೀಡುವಂತೆ ಸರ್ಕಾರಕ್ಕೆ ಗವರ್ನರ್ ಪತ್ರ

ರಾಜ್ಯದಲ್ಲಿನ ಬಹುಕೋಟಿ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಪಟ್ಟಂತೆ ಈವರೆಗೆ ಕೈಗೊಂಡ ಕ್ರಮ ಸೇರಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಇಷ್ಟು ದೊಡ್ಡ ಹಗರಣ ನಡೆದಿದ್ದರೂ ರಾಜಭವನಕ್ಕೆ ಮಾಹಿತಿ...

ನಜೀಬ್ ಜಂಗ್ ಮೂಲಕ ಕೇಂದ್ರ ದೆಹಲಿ ಆಡಳಿತ ನಡೆಸಲು ಯತ್ನಿಸುತ್ತಿದೆ: ಕೇಜ್ರಿವಾಲ್

ದೆಹಲಿ ಸರ್ಕಾರದ ಮುಖ್ಯಕಾರ್ಯದರ್ಶಿ ನೇಮಕದ ಕುರಿತಂತೆ ಉಪರಾಜ್ಯಪಾಲ ನಜೀಬ್ ಜಂಗ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್...

42 ವರ್ಷಗಳಿಂದ ಕೋಮಾಲ್ಲಿದ್ದ ಅರುಣಾ ಶಾನಭಾಗ್ ನಿಧನ

ಕಳೆದ 42 ವರ್ಷಗಳ ಹಿಂದೆ ಅತ್ಯಾಚಾರ ಹಾಗೂ ಹಲ್ಲೆಗೊಳಗಾಗಿ ಕೋಮಾದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ನರ್ಸ್ ಅರುಣಾ ಶಾನಭಾಗ್ ಮುಂಬೈನ ಕೆಇಎಂ (ಕಿಂಗ್ ಎಡ್ವರ್ಡ್ ಮೆಮೋರಿಯಲ್)ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಖಚಿತಪಡಿದ್ದಾರೆ. ಕಳೆದ ಮೂರು ದಿನಗಳಿಂದ ಅರುಣಾ ಶಾನಭಾಗ್ ನಿಮೋನಿಯಾದಿಂದ...

ಅರುಣಾ ಶಾನಭಾಗ್ ಸ್ಥಿತಿ ಗಂಭೀರ: ಉಸಿರಾಟದ ತೊಂದರೆ

42 ವರ್ಷಗಳಿಂದ ಮುಂಬೈನ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅರೆಪ್ರಜ್ನಾವಸ್ಥೆಯಲ್ಲಿರುವ ನರ್ಸ್ ಅರುಣಾ ಶಾನಭಾಗ್ ಪರಿಸ್ಥಿತಿ ಗಂಭೀರವಾಗಿದ್ದು, ಸಧ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಅರುಣಾ ಶಾನಭಾಗ್ ನಿಮೋನಿಯಾದಿಂದ ಬಳಲುತ್ತಿದ್ದು, ಉಸಿರಾಡಲೂ ತೊಂದರೆ ಅನುಭವಿಸುತ್ತಿದ್ದಾರೆ. ಅರುಣಾ ಸ್ಥಿತಿ...

ಜನತಾಪರಿವಾರ ವಿಲೀನಕ್ಕೆ ಮತ್ತಷ್ಟು ವಿಳಂಬ

ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವೈಮನಸ್ಸುಗಳನ್ನು ಮರೆತು ಒಂದುಗೂಡಿದ್ದ ಜನತಾಪರಿವಾರ ವಿಲೀನಕ್ಕೆ ಮತ್ತೆ ವಿಘ್ನ ಎದುರಾಗಿದೆ. ಕಳೆದ ಏಪ್ರಿಲ್ 15ರಂದು ಎಸ್‌ಪಿ, ಆರ್‌.ಜೆ.ಡಿ, ಜೆಡಿಯು, ಐ.ಎಲ್‌.ಡಿ ಪಕ್ಷಗಳ ವಿಲೀನಕ್ಕೆ ಆಯಾ ಪಕ್ಷಗಳ ನಾಯಕರು ಸಮ್ಮತಿಸಿದ್ದರು. ಇದು ಮುಂದಿನ ಹೊಸ ರಾಜಕೀಯ...

ಗ್ರಾಮ ಪಂಚಾಯಿತಿ ಚುನಾವಣೆ: ಇಂದು ಅಧಿಸೂಚನೆ ಪ್ರಕಟ

ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ಮೇ 29ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಜಿಲ್ಲಾಧಿಕಾರಿಗಳು ಸೋಮವಾರ ಅಧಿಸೂಚನೆ ಹೊರಡಿಸಲಿದ್ದಾರೆ. ರಾಜ್ಯದ 30 ಜಿಲ್ಲೆಗಳ ಪೈಕಿ ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಮೇ 29ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು...

ಗ್ರಾಮ ಪಂಚಾಯ್ತಿ ಚುನಾವಣಾ ದಿನಾಂಕ ಘೋಷಣೆ

'ಗ್ರಾಮ ಪಂಚಾಯ್ತಿ ಚುನಾವಣೆ'ಗೆ ದಿನಾಂಕ ನಿಗದಿಯಾಗಿದ್ದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ.5ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ, ರಾಜ್ಯದ ಒಟ್ಟು 5844 ಗ್ರಾಮ ಪಂಚಾಯ್ತಿಗಳಿಗೆ ಮೇ 29 ಮತ್ತು ಜೂನ್ 2ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ...

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆಗೆ ಧರಾಶಾಯಿಯಾದ ಮರಗಳು: ವಾಹನ ಸಂಚಾರಕ್ಕೆ ಅಡ್ಡಿ

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಏ.30ರ ಸಂಜೆ ವೇಳೆ ಬೆಂಗಳೂರಿನ ಹಲವು ಪ್ರದೇಶಳಲ್ಲಿ ಮಳೆ ಸುರಿದಿದ್ದು, ಮಳೆಯ ಆರ್ಭಟಕ್ಕೆ ಬೃಹದಾಕಾರದ ಮರಗಳು ಧರೆಗುರುಳಿವೆ. ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ವಾಹನ...

ಆಮ್ ಆದ್ಮಿ ಪ್ರತಿಭಟನಾ ರ್ಯಾಲಿಯಲ್ಲಿ ರೈತನ ಸಾವು

'ಕೇಂದ್ರ ಸರ್ಕಾರ' ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿದ್ದ ರೈತನೋರ್ವ ಮೃತಪಟ್ಟಿದ್ದಾನೆ. ದೆಹಲಿಯಲ್ಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದೆ. ಈ ಪ್ರತಿಭಟನೆಯಲ್ಲಿ ನೂರಾರು...

ತುಂಗಾ ಡ್ಯಾಂ ಆಧುನೀಕರಣ ಪರಿಗಣನೆ: ಉಮಾ ಭಾರತಿ

ತುಂಗಾ ಅಣೆಕಟ್ಟೆ ಆಧುನೀಕರಣ ಯೋಜನೆಯ ಪ್ರಸ್ತಾವನೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಸಲಹಾ ಸಮಿತಿಯ ಮುಂಬರುವ ಸಭೆಯಲ್ಲಿ ಪರಿಗಣನೆಗೆ ಬರಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ. ಈ ಸಂಬಂಧ ಕರ್ನಾಟಕದ ರಾಜ್ಯಸಭಾ ಸದಸ್ಯರೂ ಆಗಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು...

ಪತ್ರಕರ್ತರನ್ನು ಪ್ರೆಸ್ಟಿಟ್ಯೂಟ್ ಎಂದ ಸಚಿವ ವಿ.ಕೆ.ಸಿಂಗ್‌ : ಮತ್ತೊಂದು ವಿವಾದ

ಪತ್ರಕರ್ತರನ್ನು ಪ್ರಾಸ್ಟಿಟ್ಯೂಟ್ಸ್‌ ಎಂಬರ್ಥ ಬರುವಂತೆ ಪ್ರೆಸ್‌ಟಿಟ್ಯೂಟ್ಸ್‌ ಎಂಬ ಪದವನ್ನು ಬಳಸಿ ವ್ಯಂಗ್ಯದಿಂದ ಕರೆದಿರುವ ಕೇಂದ್ರ ಸಚಿವ ಜನರಲ್‌ ವಿ.ಕೆ.ಸಿಂಗ್‌ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈ ಟೀಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ವಿ.ಕೆ.ಸಿಂಗ್‌ ಅವರ ದ್ವಂದ್ವಾರ್ಥ ಮತ್ತು ಧ್ವನ್ಯಾರ್ಥದ ಈ ಪದಬಳಕೆ ಖಂಡನೀಯವಾಗಿದ್ದು...

ನ್ಯಾಯಾಧೀಶರ ಸಮ್ಮೇಳನಕ್ಕೆ ಆಕ್ಷೇಪ: ಪ್ರಧಾನಿಗೆ ನ್ಯಾ.ಕುರಿಯನ್ ಜೋಸೆಫ್ ಪತ್ರ

ವಿವಾದದ ನಡುವೆಯೂ ಆರಂಭವಾಗಿರುವ ಮುಖ್ಯ ನ್ಯಾಯಾಧೀಶರ ಸಮ್ಮೇಳನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ನ್ಯಾ.ಕುರಿಯನ್ ಜೋಸೆಫ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಪ್ರಧಾನಿಯವರು ಶನಿವಾರ ಕರೆದಿರುವ...

ಇನ್ನು ಮುಂದೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ

ಮತಪತ್ರಗಳಲ್ಲಿ ಇನ್ನು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಜತೆ ಅವರ ಫೋಟೋ ಕೂಡ ಇರಲಿದೆ. ಮತದಾರರಿಗೆ ಕೇವಲ ಹೆಸರು ಹಾಗೂ ಚಿಹ್ನೆಯ ಆಧಾರದಲ್ಲಿ ಅಭ್ಯರ್ಥಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಒಂದೇ ಹೆಸರಿನ ಹಲ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ಕಾರಣ ಗೊಂದಲ ಉಂಟಾಗುತ್ತದೆ....

ಮೃತ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಮರಣೋತ್ತರ ಪರೀಕ್ಷೆ ಅಂತ್ಯ

ನಿಗೂಢವಾಗಿ ಮೃತಪಟ್ಟಿದ್ದ ವಾಣಿಜ್ಯ ತೆರಿಗೆ ಆಯುಕ್ತ ಡಿ.ಕೆ ರವಿ ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವಿಧಿವಿಜ್ನಾನ ಪ್ರಯೋಗಾಲಯದ ಡಾ.ವೆಂಕಟರಾಘವ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯಿಂದ ಡಿ.ಕೆ ರವಿ ಅವರದ್ದು ಆತ್ಮಹತ್ಯೆಯೋ ಅಥವಾ...

ದೆಹಲಿ ಪೊಲೀಸರಿಂದ ಶೀಘ್ರವೇ ಪಾಕ್‌ ಪತ್ರಕರ್ತೆ ಮೆಹರ್ ತರಾರ್ ತನಿಖೆ

ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಈಗಿನ್ನು ಪಾಕ್‌ ಪತ್ರಕರ್ತೆ ಮೆಹರ್ ತರಾರ್ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ. ಈ ಸಂಬಂಧ ಅಧಿಕೃತ ಪ್ರಕಟನೆಯೊಂದರಲ್ಲಿ ಸದ್ಯದಲ್ಲೇ ಹೊರಡಿಸಲಾಗುವುದು ಎಂದು ದೆಹಲಿ...

ಯೋಗೇಂದ್ರ ಯಾದವ್, ಭೂಷಣ್ ಉಚ್ಚಾಟನೆಗೆ ಆಪ್ ಶಾಸಕರ ಒತ್ತಾಯ

ಆಮ್ ಆದ್ಮಿ ಪಕ್ಷದ ಆಂತರಿಕ ಭಿನ್ನಮತ ಸದ್ಯಕ್ಕೆ ಇನ್ನಷ್ಟು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಎದುರಿಸುತ್ತಿರುವ ಯೋಗೇಂದ್ರ ಯಾದವ್, ಶಾಂತಿ ಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ದೆಹಲಿ ಆಪ್ ಶಾಸಕರು ಆಗ್ರಹಿಸಿದ್ದಾರೆ. ಇದೀಗ ಪಕ್ಷದ ಸೋಲು...

ಹೆಚ್ಚಿದ ಆಪ್ ಬಿಕ್ಕಟ್ಟು: ಪಕ್ಷಕ್ಕೆ ಅಂಜಲಿ ದಮಾನಿಯಾ ರಾಜೀನಾಮೆ

ಆಮ್‌ ಆದ್ಮಿ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸಧ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ, ಮಹಾರಾಷ್ಟ್ರದ ಹಿರಿಯ ಆಪ್ ನಾಯಕಿ ಅಂಜಲಿ ದಮಾನಿಯಾ ಆಪ್‌ ಗೆ ರಾಜೀನಾಮೆ ನೀಡಿದ್ದಾರೆ. ನಾನು ಈ ವರೆಗೂ ಅರವಿಂದ್ ಕೇಜ್ರಿವಾಲರನ್ನು ಬೆಂಬಲಿಸಿಕೊಂಡು ಬಂದಿರುವುದು ತತ್ವಗಳಿಗಾಗಿಯೇ ಹೊರತು ಕುದುರೆ ವ್ಯಾಪಾರಕ್ಕೆ ಅಲ್ಲ...

ಸಿಎಂ ಸಿದ್ದರಾಮಯ್ಯಗೆ ತೊಗಾಡಿಯಾ ಪತ್ರ

ಹಿಂದೂ ಸಮಾಜೋತ್ಸವ ದಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ದ ವಿಶ್ವ ಹಿಂದೂ ಪರಿಷತ್‌ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿರುವ ತೊಗಾಡಿಯಾ, ಮೈಸೂರಿನಲ್ಲಿ ನಾನು...

ದೇಶಾದ್ಯಂತ ಗೋಹತ್ಯೆ ನಿಷೇಧಕ್ಕೆ ಕೇಂದ್ರ ಚಿಂತನೆ

ಗುಜರಾತ್‌ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿ ಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ದೇಶಾದ್ಯಂತ ವಿಸ್ತರಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕುರಿತು ರಾಜ್ಯಗಳಿಗೆ ಸಲಹೆ ನೀಡಬಹುದೇ ಎಂದು ಪ್ರಧಾನಿ ಕಾರ್ಯಾಲಯವು...

ತಿಂಗಳಿಗೊಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ಕಡ್ಡಾಯ: ಸಿಎಂ ಪತ್ರ

ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳ ಬಗ್ಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳನಿರ್ಲಕ್ಷ್ಯದ ಬಗೆಗಿನ ದೂರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದು, ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಕೆಪಿಸಿಸಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಪತ್ರ ಬರೆದಿರುವ ಅವರು, ಈ...

ಅಕ್ರಮ ಆರೋಪ: ಸ್ವತಃ ತನಿಖೆಗೆ ಕೋರಿದ ನಾಗಾಲ್ಯಾಂಡ್ ಸಿಎಂ

ತಮ್ಮ ವಿರುದ್ಧ ಕೇಳಿ ಬಂದಿರುವ ಕಪ್ಪು ಹಣದ ಆರೋಪ ಕುರಿತಂತೆ ತನಿಖೆ ನಡೆಸಬೇಕು ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜಿಲಾಂಗ್ ಅವರೇ ಸ್ವತಃ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಜಿಲಾಂಗ್ ವಿರುದ್ಧ 80ಕೋಟಿ ರೂ. ಅವ್ಯವಹಾರದ ಆರೋಪ ಕೇಳಿ...

ಎಚ್‌1ಎನ್‌1 ರೋಗಿಗಳಿಗೆ ಮಹಾರಾಷ್ಟ್ರದಲ್ಲಿ ಉಚಿತ ಚಿಕಿತ್ಸೆ

ಎಚ್‌1ಎನ್‌1 ಹಂದಿ ಜ್ವರ ರೋಗಿಗಳಿಗೆ ಸರಕಾರದ ಖರ್ಚಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಈ ನಡುವೆ ಮುಂಬಯಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಎಚ್‌1ಎನ್‌1 ಹಂದಿ ಜ್ವರವು ಇನ್ನಷ್ಟು ಹೆಚ್ಚುವ ಭೀತಿ ಮೂಡಿಸಿದೆ. ರಾಜ್ಯಾದ್ಯಂತದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ...

ರೈತರ ಆತ್ಮಹತ್ಯೆ ಹೆಚ್ಚಳ: ಅಚ್ಚೇ ದಿನ್ ನ್ನು ಅಣಕಿಸಿದ ಇಂಡಿಯಾ ಟುಡೆ ವರದಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಶೇ.26ರಷ್ಟು ಹೆಚ್ಚಾಗಿದೆ ಎಂದು ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತೆಲಂಗಾಣ, ಜಾರ್ಖಂಡ್ ನಂತರದ ಸ್ಥಾನ...

ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ: ಎಲ್‌.ರಾಮದಾಸ್‌

ಆಮ್‌ ಆದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್‌ ಅವರನ್ನು ವಜಾಮಾಡಬೇಕು ಎಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ, ಪಕ್ಷದ ಆಂತರಿಕ ಲೋಕಪಾಲ ಅಡ್ಮಿರಲ್‌ ಎಲ್‌.ರಾಮದಾಸ್‌ ಅವರು ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಪತ್ರ ಬರೆದಿದ್ದಾರೆ. ಪಕ್ಷದ ಮುಖಂಡರಿಗೆ ಇ-ಮೇಲ್‌ ಮೂಲಕ...

ಸತೀಶ್ ಜಾರಕಿಹೊಳಿಗೆ ಹೆಚ್ಚುವರಿ ಖಾತೆ ನೀಡಲು ಸಿಎಂ ನಿರ್ಧಾರ

ಖಾತೆ ಬದಲಾವಣೆ ಬಯಸಿ ರಾಜೀನಾಮೆ ನೀಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಖಾತೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಸಿಎಂ ಅಧಿಕೃತವಾಗಿ ತಮ್ಮ ಕಚೇರಿಯಿಂದ ರಾಜಭವನಕ್ಕೆ ಪತ್ರ ರವಾನಿಸಲು ನಿರ್ಧರಿಸಿದ್ದು, ಈ ಸಂಬಂಧ ತಮ್ಮ...

ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ: ಅಬಕಾರಿ ಖಾತೆ ವಾಪಸ್

ಖಾತೆ ಬದಲಾವಣೆ ಬಯಸಿ ರಾಜೀನಾಮೆ ನೀಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾತೆ ಬದಲಾವಣೆ ಮಾಡಿದ್ದು, ಹಿಂದಿನ ಖಾತೆ ವಾಪಸ್ ಪಡೆದಿದ್ದಾರೆ. ಈ ಸಂಬಂಧ ತಮ್ಮ ಆಪ್ತರ ಜತೆ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಂಡ ಸಿಎಂ...

ಮಾಹಿತಿ ಸೋರಿಕೆ ಪ್ರಕರಣ: ಇದು 10,000 ಕೋಟಿಯ ಹಗರಣ

ಪೆಟ್ರೋಲಿಯಂ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂತನು ಸೈಕಿಯಾ ಎಂಬ ಪತ್ರಕರ್ತ ವಿಚಾರಣೆ ವೇಳೆ ತಾನು ಈ ಹಗರಣದಲ್ಲಿ ಭಾಗಿಯಾಗಿಲ್ಲ. ನನಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ ಏನಾಗಬೇಕಿದೆ? ನಾನು ಅಂಥಾ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ. ನಾನು...

ಕಿರಣ್ ಬೇಡಿಗಿಂತ ಸುಂದರವಾಗಿರುವ ಶಾಜಿಯಾ ಇಲ್ಮಿ ಸಿಎಂ ಅಭ್ಯರ್ಥಿಯಾಗಬೇಕಿತ್ತು :ಕಾಟ್ಜು

'ಪತ್ರಿಕಾ ಮಂಡಳಿ'ಯ ಮಾಜಿ ಅಧ್ಯಕ್ಷ ಮಾರ್ಕಾಂಡೇಯ ಕಾಟ್ಜು ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಸುಂದರವಾಗಿರುವ ಕತ್ರಿನಾ ಕೈಫ್ ಭಾರತದ ರಾಷ್ಟ್ರಪತಿಯಾಗಲಿ ಎಂದು ಹೇಳಿದ ನಂತರ ಈಗ ಕಿರಣ್ ಬೇಡಿ ಹಾಗೂ ಶಾಜಿಯಾ ಇಲ್ಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೆಹಲಿ...

ನಿನ್ನೆ ಚಾರ್ಲಿ ಹೆಬ್ಡೋ, ನಾಳೆ ದಿನಮಲಾರ್ : ತಮಿಳುನಾಡಿನ ಪತ್ರಿಕಾ ಕಚೇರಿಗೆ ಬೆದರಿಕೆ

'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದಂತೆಯೇ ದಾಳಿ ನಡೆಸುವುದಾಗಿ ತಮಿಳುನಾಡಿನ ಪತ್ರಿಕೆಗೆ ಬೆದರಿಕೆ ಪತ್ರ ಬಂದಿದೆ. ದಿನಮಲಾರ್ ಪತ್ರಿಕಾ ಕಚೇರಿಗೆ ಈ ಬೆದರಿಕೆ ಪತ್ರ ಬಂದಿದ್ದು, ನಿನ್ನೆ ಚಾರ್ಲಿ ಹೆಬ್ಡೋ ಪತ್ರಿಕೆ ದಾಳಿ ನಡೆದಿತ್ತು, ನಾಳೆ...

ಪದ್ಮ ಪ್ರಶಸ್ತಿ ಬೇಡವೆಂದ ರಾಮ್‌ ದೇವ್, ರವಿಶಂಕರ್ ಗುರೂಜಿ

ಯೋಗಗುರು ಬಾಬಾ ರಾಮ್‌ ದೇವ್ ಹಾಗೂ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ತಮಗೆ ಪದ್ಮ ಪ್ರಶಸ್ತಿ ಬೇಡ ಎಂದು ಹೇಳಿದ್ದಾರೆ. ಗಣರಾಜ್ಯೋತ್ಸವದಂದು ಘೋಷಣೆಯಾಗಲಿರುವ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ರಾಮ್‌ ದೇವ್ ಹಾಗೂ ರವಿಶಂಕರ್ ಗುರೂಜಿ ಹೆಸರು ಕೂಡ ಇದೆ ಎಂಬ...

ಫೆ.26ಕ್ಕೆ ರೈಲ್ವೆ, 28ಕ್ಕೆ ಕೇಂದ್ರ ಬಜೆಟ್‌ ಮಂಡನೆ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2015-16ರ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 28 ರಂದು ಮಂಡಿಸಲಿದ್ದಾರೆ. ಫೆ. 23ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಫೆ.26ರಂದು ರೈಲ್ವೆ ಮುಂಗಡಪತ್ರ ಮಂಡನೆಯಾಗಲಿದೆ. ಫೆ.27ರಂದು ಆರ್ಥಿಕ ಸಮೀಕ್ಷೆ ಮತ್ತು ಫೆ.28ರಂದು...

ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯುವೆ: ದಯಾನಿಧಿ ಮಾರನ್

ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ಸ್ಥಾಪನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ತ ಕಾರ್ಯದರ್ಶಿ ಸೇರಿದಂತೆ ಸಿಬಿಐ ಅಧಿಕಾರಿಗಳು ಮೂವರನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್, ಸಿಬಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ...

ಸ್ವಾತಂತ್ರ್ಯ ಹೋರಾಟಗಾರರನ್ನು ಕೇಸರಿಕರಣಗೊಳಿಸಬೇಡಿ: ಕಿರಣ್ ಬೇಡಿಗೆ ಆಪ್ ಸಲಹೆ

ಫೆ.7ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಲಾಲಾ ಲಜ್ಪತ್ ರಾಯ್ ಅವರ ಪುತ್ಥಳಿಗೆ ಕೇಸರಿ ಶಾಲುವನ್ನು ಹೊದಿಸಿದ್ದು ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. ಲಾಲಾ ಲಜ್ಪತ್ ರಾಯ್ ಅವರ ಪುತ್ಥಳಿಗೆ...

ಎಚ್‌ಎಎಲ್ ವಿಮಾನ ನಿಲ್ದಾಣ ಪುನಾರಂಭ ಸಾಧ್ಯತೆ

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಪುನಾರಂಭಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಖುದ್ದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು ನಾಗರಿಕ ವಿಮಾನ ಯಾನ ಖಾತೆ ಸಚಿವ ಅಶೋಕ ಪಶುಪತಿ ಗಜಪತಿ ರಾಜು ಅವರಿಗೆ ಪತ್ರ ಬರೆದಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣ ಬೆಂಗಳೂರು...

ಪತ್ರಿಕಾ ಕಛೇರಿ ದಾಳಿ: ವೀಡಿಯೋ ಸಂದೇಶದ ಮೂಲಕ ಮತ್ತಷ್ಟು ದಾಳಿಗೆ ಆದೇಶ

ಪ್ಯಾರಿಸ್‌ನಲ್ಲಿ ವಿವಾದಾತ್ಮಕ ಕಾರ್ಟೂನ್ ಪ್ರಕಟಿಸಿದ್ದಕ್ಕಾಗಿ ಪತ್ರಿಕಾ ಕಛೇರಿ ಚಾರ್ಲಿ ಹೆಬ್ಡೋ ಮೇಲೆ ದಾಳಿ ನಡೆಸಿದ ಮೂರು ಉಗ್ರರಲ್ಲಿ ಒಬ್ಬನಾದ ಉಗ್ರ ಅಮೆಡಿ ಕುಲಿಬಾಲಿಯನ್ನು ಹೋಲುವ ವ್ಯಕ್ತಿ ಕಳಿಸಿದ ವೀಡಿಯೋ ಸಂದೇಶವೊಂದು ಲಭ್ಯವಾಗಿದೆ. ಪ್ರಸ್ತುತ ವೀಡಿಯೋವನ್ನು ಆನ್‌ಲೈನ್ ಮೂಲಕ ಪ್ರಸಾರ ಮಾಡಲಾಗಿದ್ದು, ವೀಡಿಯೋದಲ್ಲಿ...

ಪತ್ರಿಕಾ ಕಛೇರಿ ಮೇಲೆ ದಾಳಿ: ಹೊಣೆ ಹೊತ್ತ ಅಲ್ ಖೈದಾ

ಪ್ಯಾರಿಸ್ ನ ಪತ್ರಿಕಾ ಕಛೇರಿ ಮೇಲೆ ನಡೆಸಿದ ದಾಳಿಯ ಹೊಣೆಯನ್ನು ಅಲ್ ಖೈದಾ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಫ್ರಾನ್ಸ್ ನಲ್ಲಿ ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಫ್ರಾನ್ಸ್ ಸೇನೆ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿದ್ದ ಇಬ್ಬರು...

ಸುನಂದಾ ಪುಷ್ಕರ್ ಸಾವು ಪ್ರಕರಣ: ದೆಹಲಿ ಪೊಲೀಸರಿಗೆ ತರೂರ್ ಪತ್ರ

ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣ ಕುರಿತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಸುನಂದಾ ಸಾವಿನ ಬಗ್ಗೆ ನನಗೆ ಹಲವು ಸಂದೇಹವಿದೆ. ಸುನಂದಾ ಪತಿಯಾಗಿ ಆಕೆಯ ಹತ್ಯೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ ಎಂದಿದ್ದಾರೆ. ಕೇವಲ...

ಸುನಂದಾ ಪುಷ್ಕರ್ ಸಾವು ಪ್ರಕರಣ:ಪಾಕಿಸ್ತಾನ ಪತ್ರಕರ್ತೆ ವಿಚಾರಣೆ ಸಾಧ್ಯತೆ

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪಾಕಿಸ್ತಾನ ಪತ್ರಕರ್ತೆ ಮೆಹರ್ ತರಾರ್ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಮೆಹರ್ ವಿಚಾರಣೆಗಾಗಿ ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿರುವ ದೆಹಲಿ ಪೊಲೀಸರು,...

ಪ್ಯಾರೀಸ್ ಉಗ್ರರಿಗೆ ಬಹುಮಾನ ಘೋಷಿಸಿದ್ದ ಖುರೇಷಿ ಬಂಧನ

'ಫ್ರಾನ್ಸ್' ರಾಜಧಾನಿ ಪ್ಯಾರೀಸ್ ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪತ್ರಕರ್ತರ ಹತ್ಯೆ ಮಾಡಿದ್ದ ಉಗ್ರರಿಗೆ 51 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದ ಬಿ.ಎಸ್‌.ಪಿ ನಾಯಕ ಯಾಕೂಬ್ ಖುರೇಷಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಪ್ಯಾರಿಸ್‌ನಲ್ಲಿ ಬುಧವಾರ...

ಪತ್ರಿಕಾ ಕಛೇರಿ ಮೇಲೆ ಉಗ್ರರ ದಾಳಿ: ವಿಶ್ವಾದ್ಯಂತ ಖಂಡನೆ

ಪ್ಯಾರಿಸ್ ನ ಪತ್ರಿಕಾ ಕಛೇರಿ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ವಿಶ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಉಗ್ರರ ದಾಳಿ ಹಿನ್ನಲೆಯಲ್ಲಿ ಫ್ರಾನ್ಸ್ ನ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ. ಉಗ್ರರ ದುಷ್ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಮೆರಿಕ ಅಧ್ಯಕ್ಷ...

ಪ್ಯಾರಿಸ್ ನ ಲಿಯಾನ್ ಬಳಿ ಸ್ಫೋಟ

ಫ್ರಾನ್ಸ್ ನ ಪ್ಯಾರಿಸ್ ನಗರದ ಲಿಯಾನ್ ಬಳಿ ಸ್ಫೋಟ ಸಂಭವಿಸಿದ್ದು, ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ಸಮಯದ ಹಿಂದಷ್ಟೇ ದಕ್ಷಿಣ ಪ್ಯಾರಿಸ್ ನಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆದ ಬೆನ್ನಲ್ಲೇ ಪ್ಯಾರಿಸ್ ನ ಮಸೀದಿ ಪಕ್ಕದಲ್ಲಿರುವ ಕಟ್ಟದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ...

ಪ್ಯಾರಿಸ್ ನಲ್ಲಿ ಮತ್ತೆ ಗುಂಡಿನ ದಾಳಿ

ಪ್ಯಾರಿಸ್ ನ ಪತ್ರಿಕಾ ಕಛೇರಿಯಲ್ಲಿ ಉಗ್ರರು ಅಟ್ಟಹಾಸ ಮೆರೆದು 12 ಜನರನ್ನು ಬಲಿಪಡೆದುಕೊಂಡಿರುವ ಬೆನ್ನಲ್ಲೇ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ದಕ್ಷಿಣ ಪ್ಯಾರಿಸ್ ಪ್ರಾಂತ್ಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ...

ಫ್ರಾನ್ಸ್ ಪತ್ರಿಕಾ ಕಚೇರಿ ಮೇಲೆ ಉಗ್ರರ ದಾಳಿ

'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು 12 ಜನ ಸಾವನ್ನಪ್ಪಿದ್ದಾರೆ. ಪ್ಯಾರೀಸ್ ನಲ್ಲಿರುವ ಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ದಾಳಿ ನಡೆದಿದೆ. ಐ.ಎಸ್.ಐ.ಎಸ್ ಉಗ್ರ ಅಲ್ ಬಗ್ದಾದಿಯ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಐ.ಎಸ್.ಐ.ಎಸ್ ಉಗ್ರರು...

ಗೌರವ ಡಾಕ್ಟರೇಟ್ ನಿರಾಕರಿಸಿದ ಉತ್ತರ ಪ್ರದೇಶ ಸಿ.ಎಂ ಅಖಿಲೇಶ್ ಯಾದವ್

'ಉತ್ತರ ಪ್ರದೇಶ' ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮಗೆ ನೀಡಲು ಉದ್ದೇಶಿಸಲಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದಾರೆ. ಉತ್ತರ ಪ್ರದೇಶ ತಾಂತ್ರಿಕ ವಿಶ್ವವಿದ್ಯಾನಿಲಯ (ಯುಟಿಪಿಯು) ಯುಟಿಪಿಯು ಜನವರಿ 12ರಂದು ನಡೆಯುವ ಘಟಿಕೋತ್ಸವದಲ್ಲಿ ಸಿ ಎಂ ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ಉದ್ದೇಶಿಸಿತ್ತು....

ಉರ್ದು ಭಾರತೀಯ ಭಾಷೆ : ಸಿದ್ದರಾಮಯ್ಯ

'ಉರ್ದು' ಭಾಷೆ ಕೇವಲ ಮುಸ್ಲಿಮರ ಭಾಷೆ ಅಲ್ಲ, ಅದು ಭಾರತೀಯ ಭಾಷೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜ.5ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಡೈಲಿ ಸಾಲಾರ್ ಉರ್ದು ಪತ್ರಿಕೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಉರ್ದು ಭಾರತೀಯ ಭಾಷೆ,...

ನೇಮಕಾತಿ ಪತ್ರ ಕಳಿಸಿದ್ದಕ್ಕೆ ಪಾಕ್ ಐ.ಎಸ್.ಐ ವಿರುದ್ಧ ದೂರು ದಾಖಲಿಸಿದರು!

ಇತ್ತೀಚೆಗಷ್ಟೆ ಪಾಕಿಸ್ತಾನದ ವಿರುದ್ಧ ಮೌಲ್ವಿಯೊಬ್ಬರು ತೀವ್ರ ವಾಗ್ದಾಳಿ ನಡೆಸಿ ಭಾರತ ಸರ್ಕಾರ ಪಾಕ್ ನಲ್ಲಿರುವ ಭಯೋತ್ಪಾದಕರ ನೆಲೆಯನ್ನು ಧ್ವಂಸಗೊಳಿಸಬೇಕೆಂದು ಹೇಳಿಕೆ ನೀಡಿದ್ದರು. ಇಂಥದ್ದೇ ಮತ್ತೊಂದು ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದಲ್ಲಿ ಇಸ್ಲಾಮಿಕ್ ಸಂಸ್ಥೆಯೊಂದನ್ನು ನಡೆಸುತ್ತಿರುವವರಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐ.ಎಸ್.ಐ...

ಕಲಬುರ್ಗಿಯಲ್ಲಿ ಶೂಟೌಟ್: ಯುವ ಕಾಂಗ್ರೆಸ್ ಮುಖಂಡನ ಹತ್ಯೆ

'ಕಲಬುರ್ಗಿ'ಯ ಚಿತ್ತಾಪುರ ತಾಲೂಕಿನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ತೀವ್ರಗಾಯಗೊಂಡಿದ್ದ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಶಬ್ಬೀರ್ ಸಾವನ್ನಪ್ಪಿದ್ದಾರೆ. ವಾಡಿ ತಾಲೂಕಿನ ಯುವ ಕಾಂಗ್ರೆಸ್ ಮುಖಂಡನ ಮಹಮ್ಮದ್ ಶಬ್ಬೀರ್, ಕೋರ್ಟ್ ಗೆ ಸಾಕ್ಷಿ ಹೇಳಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಆಕಾಶವಾಣಿ ಕೇಂದ್ರದ...

ನಾಲ್ಕು ತಿಂಗಳಾದರೂ ಕೋಮಾಸ್ಥಿತಿಯಿಂದ ಹೊರಬರದ ಜಸ್ವಂತ್ ಸಿಂಗ್

ತಲೆಗೆ ತೀವ್ರ ಪೆಟ್ಟಾಗಿದ್ದ ಪರಿಣಾಮ ಆಸ್ಪತ್ರೆಗೆ ಸೇರಿದ್ದ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ 4 ತಿಂಗಳಾದರೂ ಕೋಮಾ ಸ್ಥಿತಿಯಿಂದ ಹೊರಬಂದಿಲ್ಲ. ಲೋಕಸಭಾ ಚುನಾವಣೆಯಾದ ಕೆಲವೇ ತಿಂಗಳಲ್ಲಿ ಜಸ್ವಂತ್ ಸಿಂಗ್ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರ ಮಾಹಿತಿ...

ಏಷ್ಯಾದ ವರ್ಷದ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿಂಗಾಪುರ್ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪ್ರಧಾನಿ ಮೋದಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿವೃದ್ಧಿ ಕೇಂದ್ರಿತ ನಾಯಕ ಎಂಬ ಹೆಸರಿನಡಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ...

ಉಗ್ರ ಸಯ್ಯದ್ ಪತ್ರಿಕಾಗೋಷ್ಠಿಗೆ ಪಾಕ್ ಸರ್ಕಾರದಿಂದ ವಿಶೇಷ ರೈಲು

'ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯ್ಯದ್ ವಿಚಾರಗೋಷ್ಠಿಗೆ ಪಾಕಿಸ್ತಾನ ಸರ್ಕಾರವೇ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಲಾಹೋರ್‌ನಲ್ಲಿ ನಡೆಯಲಿರುವ ನಿಷೇಧಿತ ಜಮಾತ್ ಉದ್ ದಾವಾದ ಎರಡು ದಿನಗಳ ವಿಚಾರಗೋಷ್ಠಿಗೆ ಪಾಕಿಸ್ತಾನ ರೈಲ್ವೆಯು ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ. ಲಾಹೋರ್‌ನ ಮಿನಾರ್ ಐ-ಪಾಕಿಸ್ತಾನದ...

ಶರದ್ ಪವಾರ್ ತಲೆಗೆ ಪೆಟ್ಟು: ಆಸ್ಪತ್ರೆಗೆ ದಾಖಲು

ಮಾಜಿ ಕೇಂದ್ರ ಸಚಿವ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿಯಲ್ಲಿ ವಾಯುವಿಹಾರಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಶರದ್ ಪವಾರ್ ಅವರಿಗೆ ತೀವ್ರ ಗಾಯ ಉಂಟಾಗಿದ್ದು ಏರ್ ಅಂಬುಲೆನ್ಸ್ ಮೂಲಕ ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. 73 ವರ್ಷದ...

ವೇಗದ ಬೌನ್ಸರ್ ಗೆ ಬಲಿಯಾದ ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಫ್ ಹ್ಯೂಸ್

'ಶಫೀಲ್ಡ್ ಶೀಲ್ಡ್‌' ಗಾಗಿ ನಡೆಯುತ್ತಿದ್ದ ಪಂದ್ಯದ ವೇಳೆ ವೇಗದಲ್ಲಿ ಬಂದ ಬೌನ್ಸರ್ ಚೆಂಡು ತಲೆಗೆ ತಗುಲಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟಿಗ ಫಿಲಿಫ್ ಹ್ಯೂಸ್ ನ.27ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ನ.25ರಂದು ಹ್ಯೂಸ್...

ಸರ್ಕಾರದಿಂದ ಮಾಧ್ಯಮದ ಮೇಲೆ ದೌರ್ಜನ್ಯ: ಸಿ.ಎಂ ಭೇಟಿ ಮಾಡಲು ಮುಂದಾದ ಸಂಪಾದಕರು

ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್‌ಗಳ ಪ್ರಸಾರವನ್ನು ಕಳೆದ 17 ಗಂಟೆಗಳಿಂದ ಸ್ಧಗಿತಗೊಳಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾರ್ಯನಿರತ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ....

ಮಹಾಭಾರತದಲ್ಲಿ 'ಮುತ್ತಿನ'ಉಲ್ಲೇಖ:ಕಿಸ್ ಆಫ್ ಲವ್ ಆಯೋಜಕರ ಹೊಸ ಸಂಶೋಧನೆ

'ಕಿಸ್ ಆಫ್ ಲವ್' ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ವ ಭಾರತದ ಸಂಸ್ಕೃತಿಯಲ್ಲ ಎಂಬ ಹೇಳಿಕೆ ವ್ಯಾಪಕವಾಗಿ ಕೇಳುಬರುತ್ತಿರುವ ಬೆನ್ನಲ್ಲೇ ಆಂಧೋಲನದ ಆಯೋಜಕರು ಹೊಸ ಸಂಶೋಧನೆ ನಡೆಸಿದ್ದಾರೆ! ಮುತ್ತು ಕೊಡುವ ಪ್ರಕ್ರಿಯೆ ಆರಂಭವಾಗಿದ್ದೇ ಭಾರತದಲ್ಲಿ ಎಂಬುದು ಕಿಸ್ ಆಫ್ ಲವ್ ಆಯೋಜಕರ ಹೊಸ...

ಸರ್ಕಾರ ಇದೆ ಎಂಬುದನ್ನು ತೋರಿಸುತ್ತೇವೆ: ಸಚಿವ ಖಾದರ್

ಸರ್ಕಾರಿ ವೈದ್ಯರು ಹಾಗೂ ರಾಜ್ಯ ಸರ್ಕರದ ನಡುವಿನ ಜಟಾಪಟಿ ತಾರಕಕ್ಕೇರಿದೆ. ಒಂದೆಡೆ ವೈದ್ಯರು ಬೇಡಿಕೆ ಈಡೇರಿಕಾಗಿ ಸಮೂಹಿಕ ರಾಜೀನಾಮೆ ನೀಡಿದ್ದರೆ ಇನ್ನೊಂದೆಡೆ ಸರ್ಕಾರ ಇದೆ ಎಂಬುದನ್ನು ನಾವು ತೋರಿಸುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಸರ್ಕಾರಿ...

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಬದ್ಧ: ಜಯಚಂದ್ರ

ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನವೆಂಬರ್ ಕೊನೇಯ ವಾರ ಅಥವಾ ಡಿಸೆಂಬರ್ ಮೊದಲವಾರದಲ್ಲಿ ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಬೆಳಗಾವಿಯ ವಿಧಾನಮಂದಲ ಅಧಿವೇಶನದ ದಿನಾಂಕ ಅಂತಿಮ...

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈಗ ಪಾಕ್ ಅಧ್ಯಕ್ಷ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಅಧ್ಯಕ್ಷರಂತೆ! ಇಂತದ್ದೊಂದು ತಪ್ಪನ್ನು ಸ್ವತಃ ಪಾಕಿಸ್ತಾನದ ಅಧಿಕಾರಿಗಳೇ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನ ಆರ್ಥಿಕ ಸಂಸ್ಥೆ ಆಯೋಜಿಸಿರುವ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ...

ಸಿಬಿಐ ಕಪಾಳಮೋಕ್ಷ ಮಾಡಿ ಡಿ.ಕೆ.ಶಿಯನ್ನು ಜೈಲಿಗೆ ಕಳುಹಿಸಲಿದೆ: ಹಿರೇಮಠ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ, ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಕಪಾಳಮೋಕ್ಷ ಮಾಡಿ ಜೈಲಿಗೆ ಕಳುಹಿಸಲಿದೆ ಎಂದು ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರೇಮಠ, ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವ ಪರಿಸ್ಥಿತಿ ಬರಲಿದೆ...

2012-13 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ

ಜಾನಪದ ಅಕಾಡೆಮಿಯು 2012 ಮತ್ತು 2013ರ ಸಾಲಿನ ಜಾನಪದ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಗೆ ಇಬ್ಬರಂತೆ ಒಟ್ಟು 30 ಜಿಲ್ಲೆಗಳಿಂದ 60 ಮಂದಿ ಕಲಾವಿದರನ್ನು ಹಾಗೂ 4 ಮಂದಿ ವಿದ್ವಾಂಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ...

ಕಪ್ಪುಹಣ ಹೊಂದಿರುವವರ ಹೆಸರು ಬಹಿರಂಗಗೊಳಿಸಲ್ಲ: ಸುಪ್ರೀಂ ಗೆ ಕೇಂದ್ರ ಸರ್ಕಾರ

'ಕಪ್ಪುಹಣ' ವಾಪಸ್ ತರುವ ಸಂಬಂಧ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದೆ. ಕಪ್ಪುಹಣ ಹೊಂದಿರುವವರ ಬಗ್ಗೆ ಗೌಪ್ಯತೆ ಕಾಪಾಡುವುದು ಅನಿವಾರ್ಯವಾಗಿದ್ದು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ...

ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ವಿಶ್ವಸಂಸ್ಥೆ ನಕಾರ

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಕೋರಿದ್ದ ಮನವಿಯನ್ನು ವಿಶವಸಂಸ್ಥೆ ನಿರಕರಿಸಿದೆ. ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಕೋರಿತ್ತು. ಕಾಶ್ಮೀರ ವಿವಾದದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿರುವ ವಿಶವಸಂಸ್ಥೆ ವಿವಾದದ ಬಗ್ಗೆ ಪಾಕಿಸ್ತಾನ-ಭಾರತ ಎರಡೂ ದೇಶಗಳು...

ಭಾರತದ ಮೇಲೆ ಆರೋಪಮಾಡಿ ವಿಶ್ವಸ್ಥೆಗೆ ಪಾಕ್ ಪತ್ರ

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್ ಸೇನೆ ಪದೇ ಪದೆ ಕ್ಯಾತೆ ತೆಗೆಯುತ್ತಿದ್ದರೂ ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡು, ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡಿ, ಗುಂಡಿನ ದಾಳಿ ನಡೆದಿಸಿದೆ ಎಂದು ಪಾಕಿಸ್ತಾನ ವಿಶ್ವಸಸ್ಥೆಗೆ ಪತ್ರ ಬರೆದಿದೆ. ಕಳೆದ ಕೆಲವು ವಾರಗಳಿಂದ ಭಾರತ ಉದ್ದೇಶಪೂರ್ವಕವಾಗಿ ಅಪ್ರಚೋದಿತ...

ಸುನಂದಾ ಪುಷ್ಕರ್ ಮೃತ ದೇಹದಲ್ಲಿತ್ತು ವಿಷ: ವೈದ್ಯಕೀಯ ವರದಿ ಉಲ್ಲೇಖ

ಮಾಜಿ ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿಗೆ ಹೊಸ ತಿರುವು ದೊರೆತಿದೆ. ಸುನಂದಾ ಪುಷ್ಕರ್ ಅವರ ದೇಹದಲ್ಲಿ ವಿಷದ ಅಂಶ ಇತ್ತು, ಹಾಗೂ ಅವರ ಮೃತ ದೇಹದ ಮೇಲೆ ಸೂಜಿಯಿಂದ ಚುಚ್ಚಿದ ಗಾಯ ಕಂಡುಬಂದಿದೆ ಎಂದು...

ಎಂ.ವಿ ಕಾಮತ್ ನಿಧನಕ್ಕೆ ಮೋದಿ ಸಂತಾಪ

ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಎಂ.ವಿ ಕಾಮತ್ ಅವರ ನಿಧನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಜಗತ್ತಿಗೆ ತುಂಬಲಾರದ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ...

ಹೆಚ್.ಡಿ.ಕೆ-ಜಮೀರ್ ಅಹ್ಮದ್ ನಡುವೆ ಅಸಮಾಧಾನ

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಜಮೀರ್ ಅಹ್ಮದ್ ನಡುವಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಬಕ್ರೀದ್ ಆಚರಣೆಗೆ ಈದ್ಗಾ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿದ್ದೆ. ಉರ್ದು ಭಾಷೆಯಲ್ಲಿ ಪತ್ರ ಬರೆದು ಆಹ್ವಾನಿಸಿದ್ದೆ, ಪ್ರತಿ...

ನವೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ: ಸಿಎಂಗೆ ಸ್ಪೀಕರ್ ಪತ್ರ

ನವೆಂಬರ್ ತಿಂಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸೂಕ್ತ ದಿನಾಂಕ ನಿಗದಿಪಡಿಸುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಪ್ರತಿವರ್ಷ 60 ದಿನ ವಿಧಾನಮಂಡಲ ಅಧಿವೇಶನ ನಡೆಸಬೇಕು ಎಂಬ ನಿಯಮವಿದೆ....

ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪತ್ರ

ಕೆಪಿಸಿಸಿ ಕಚೇರಿಗೆ ಬಂದು ಕಾರ್ಯಕರ್ತರ ಅಹವಾಲು ಸ್ವೀಕರಿಸದ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ಎಲ್ಲಾ ಸಚಿವರು ಪ್ರತಿ ತಿಂಗಳು ಕೆಪಿಸಿಸಿ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸುವಂತೆ ಎಐಸಿಸಿ...

ಸಚಿವರಿಗೆ ಪ್ರಧಾನಿ ಮೋದಿ ತರಾಟೆ

ಜನರ ದೃಷ್ಟಿಯಲ್ಲಿ ತಾವು ಉತ್ತಮ ಕೆಲಸಗಳನ್ನು ಮಾಡುತ್ತಿರುವಂತೆ ತೋರಿಸಿಕೊಳ್ಳುವುದಕ್ಕಾಗಿ ಸಚಿವರೊಬ್ಬರು ತಮ್ಮ ನಿಕಟ ಪತ್ರಕರ್ತರಿಗೆ ದುಬಾರಿ ಉಡುಗೊರೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿದ್ದು, ಈ ಸಂಬಂಧ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಡುಗೊರೆ ನೀಡಿದ ಸಚಿವರಿಗೆ ಅವರು...

ಸಚಿವ ಸಂಪುಟ ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು: ಪರಮೇಶ್ವರ್

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಬೇಕೋ, ಅಥವಾ ಸಂಪುಟ ಪುನರಚನೆ ಮಾಡಬೇಕೋ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವೇಚನೆಗೆ ಬಿಟ್ಟದ್ದು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನರಚನೆ, ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಧಾರ ಕೈಗೊಳ್ಳುತ್ತಾರೆ...

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸಮಿತಿ ರಚನೆ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮನಮೋಹನ್ ಸರೀನ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಸಮಿತಿ ಗಡಿವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರಗಳ ವಿಲೇವಾರಿ ಮಾಡಲಿದೆ. ನಾಲ್ಕು ತಿಂಗಳಲ್ಲಿ ಪ್ರಮಾಣಪತ್ರಗಳ ಪರಾಮರ್ಶೆ ನಡೆಸುವಂತೆ...

ರಾಸಲೀಲೆ ಪ್ರಕರಣ: ನಿತ್ಯಾನಂದನ ಪುರುಷತ್ವ ಪರೀಕ್ಷೆ ಆರಂಭ

ನಿತ್ಯಾನಂದ ರಾಸಲೀಲೆ ಪ್ರಕರಣ ಹಾಗೂ ಲೈಗಿಂಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಪುರುಷತ್ವ ಪರೀಕ್ಷೆ ಆರಂಭವಾಗಿದೆ. ಸುಪ್ರೀಂ ಕೋರ್ಟ್ ಸೆ.3ರಂದು ನಿತ್ಯಾನಂದನ ಪುರುಷತ್ವ ಪರೀಕ್ಷೆಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ನಿತ್ಯಾನಂದನ ಪುರುಷ್ತ್ವ ಪರೀಕ್ಷೆ...

ದೆಹಲಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು: ರಾಷ್ಟ್ರಪತಿಗೆ ಪತ್ರ

ದೆಹಲಿಯಲ್ಲಿ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ದೆಹಲಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿ ಮತ್ತೆ ಕಸರತ್ತು ನಡೆಸಿದೆ. ಕೇಂದ್ರ ಗೃಹ ಇಲಾಖೆ ಹಾಗೂ ರಾಷ್ಟ್ರತಿಗಳಿಗೆ...

ಬಿಬಿಎಂಪಿ ಮೇಯರ್ ಆಗಿ ಶಾಂತಕುಮಾರಿ ಆಯ್ಕೆ

ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಯ ಗೊಂದಲಗಳಿಗೆ ತೆರೆಬಿದ್ದಿದೆ. ಮೇಯರ್ ಆಗಿ ಶಾಂತಕುಮಾರಿ ಹಾಗೂ ಉಪಮೇಯರ್ ಆಗಿ ರಂಗಣ್ಣ ಆಯ್ಕೆಯಾಗಿದ್ದಾರೆ. ಶಾಂತಕುಮಾರಿ ಮೂಡಲಪಾಳ್ಯ ಕಾರ್ಪೋರೇಟರ್ ಆಗಿದ್ದು, ರಂಗಣ್ಣ ಕಾಮಾಕ್ಷಿ ಪಾಳ್ಯ ಕಾರ್ಪೋರೇಟರ್ ಆಗಿದ್ದಾರೆ. ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗಾಗಿ ತೀವ್ರ ಪೈಪೋಟಿ...

ಐಸಿಸ್ ಉಗ್ರರನ್ನು ಮಟ್ಟಹಾಕುವುದಾಗಿ ಒಬಾಮ ಎಚ್ಚರಿಕೆ

ಅಮೆರಿಕದ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಕ್ರೋಶಗೊಂಡಿದ್ದು, ಐಸಿಸ್ ಉಗ್ರರ ಹುಟ್ಟಡಗಿಸುವುದಾಗಿ ಕಿಡಿಕಾರಿದ್ದಾರೆ. ಐಸಿಸ್ ಉಗ್ರರ ಮಟ್ಟಹಾಕಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಮಧ್ಯಪ್ರಾಚ್ಯದಲ್ಲಿ ಒಂದು ಶಕ್ತಿಯೇ ಅಲ್ಲ ಎನ್ನುವವರೆಗೂ ಅಮೆರಿಕ ಹೋರಾಟ ನಡೆಸಲಿದೆ...

ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ, ಬಿ.ಜಿ.ಎಸ್ ಆಸ್ಪತ್ರೆ ವೈದ್ಯರ ಸಾಧನೆ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೋರ್ವರ ಹೃದಯವನ್ನು ಬಿ.ಜಿ.ಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಜೀವಂತವಾಗಿ ಬೇರ್ಪಡಿಸಿದ್ದು ಚೆನ್ನೈ ಗೆ ರವಾನಿಸಿದ್ದಾರೆ. ಈ ಮೂಲಕ ವೈದ್ಯಕೀಯ ಲೋಕದ ಅಪರೂಪದ ಇತಿಹಾಸಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಸೆ.2ರಂದು ರಸ್ತೆ ಅಪಘಾತದಲ್ಲಿ...

'ಡಿಜಿಟಲ್ ಕ್ಲೌಡ್': ಎಲ್ಲರಿಗೂ ಬ್ಯಾಂಕ್ ಖಾತೆ ನಂತರ ಮೋದಿ ಸರ್ಕಾರದ ಹೊಸ ಯೋಜನೆ

ಇತ್ತೀಚೆಗಷ್ಟೇ ದೇಶದ ಎಲ್ಲಾ ನಾಗರಿಕರಿಗೂ ಬ್ಯಾಂಕ್ ಖಾತೆ ನೀಡುತ್ತಿರುವ ಜನ್-ಧನ್ ಯೋಜನೆ ನಂತರ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಂದು ಮಹತ್ವದ ಯೋಜನೆಗೆ ತಯಾರಿ ನಡೆಸಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸೈಬರ್ ಸ್ಪೇಸ್ ನೀಡುವುದು ಮೋದಿ ಅವರ ಹೊಸ ಯೋಜನೆಯ...

ಹಿಂದುತ್ವ ನಮ್ಮ ರಾಷ್ಟ್ರೀಯ ಗುರುತು, ನಾವು ಇತಿಹಾಸ ಮರೆಯಬಾರದು- ನಜ್ಮಾ ಹೆಫ್ತುಲ್ಲಾ

'ಭಾರತ' ಹಿಂದೂ ರಾಷ್ಟ್ರ ಎಂಬ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಭಾರತ ಹಿಂದೂ ರಾಷ್ಟ್ರ ಎಂಬುದನ್ನು ಒಪ್ಪಿದ್ದಾರೆ. ಹಿಂದೂಸ್ಥಾನ್ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮೋಹನ್ ಭಾಗವತ್ ಅವರ...

ಮೈಸೂರಿನಲ್ಲಿ ಹೊಟೇಲ್ ಸಿಬ್ಬಂದಿ ಸಜೀವ ದಹನಕ್ಕೆ ಯತ್ನ

ಹೊಟೇಲ್ ಸಿಬ್ಬಂದಿಯನ್ನು ಸಜೀವ ದಹನ ಮಾಡಲು ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ನಗರದ ಬಂಬೂ ಬಜಾರ್ ನಲ್ಲಿರುವ ಕೆಸಿನೋ ಪಾರ್ಕ್ ಹೊಟೇಲ್ ಸಿಬ್ಬಂದಿಗಳು ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು, ಕೊಠಡಿಗೆ ಬೆಂಕಿ ಹಚ್ಚಿ ಕೊಲೆ ಮಾಡುವ ಯತ್ನ ನಡೆಸಿದ್ದಾರೆ. ಈ ಘಟನೆಯಲ್ಲಿ...

ಸಾಹಿತಿ ಅನಂತ ಮೂರ್ತಿ ಆರೋಗ್ಯದಲ್ಲಿ ತೀವ್ರ ಏರುಪೇರು: ಐ.ಸಿ.ಯು ನಲ್ಲಿ ದಾಖಲು

'ಜ್ನಾನಪೀಠ' ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತ ಮೂರ್ತಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಂತ ಮೂರ್ತಿ ಅವರು ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ 2-3 ದಿನಗಳಿಂದ ಅನಂತ ಮೂರ್ತಿ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿರುವ...

ಸಾಹಿತಿ ಅನಂತ ಮೂರ್ತಿ ಆರೋಗ್ಯದಲ್ಲಿ ಚೇತರಿಕೆ

'ಕಿಡ್ನಿ ವೈಫಲ್ಯ'ದಿಂದ ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹೃದಯ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯು.ಆರ್.ಅನಂತ ಮೂರ್ತಿ ಅವರ ಆರೋಗ್ಯ ಆ.22ರಂದು ಗಂಭೀರವಾಗಿತ್ತು. ಜೊತೆಗೆ...

ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್ ಅನಂತ ಮೂರ್ತಿ ಇನ್ನಿಲ್ಲ

'ಜ್ಞಾನಪೀಠ' ಪ್ರಶಸ್ತಿ ಪುರಸ್ಕೃತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತ ಮೂರ್ತಿ ಅವರು ಆ.22ರಂದು ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಇಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದರಾದರೂ ಲಘು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited