Untitled Document
Sign Up | Login    
Dynamic website and Portals
  

Related News

ಕಾವೇರಿ ವಿವಾದ: ಸುಪ್ರೀಂ ನಲ್ಲಿ ವಿಚಾರಣೆ-ಬೆಂಗಳೂರಿನಲ್ಲಿ ನಿಷೇಧಾಜ್ಞೆ

ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭದ್ರತೆಗಾಗಿ 14 ಅರೆಸೇನಾ ಪಡೆಗಳನ್ನು ನಗರದಾದ್ಯಂತ ನಿಯೋಜಿಸಲಾಗಿದೆ. ಬಿಎಸ್‍ಎಫ್,...

ಕಾವೇರಿ ಗಲಭೆ: ಬೆಂಗಳೂರಿನಲ್ಲಿ 15 ಕಡೆ ಕರ್ಫ್ಯೂ ಜಾರಿ

ತಮಿಳುನಾಡಿಗೆ ಸೆ.20ರವರೆಗೆ ನಿತ್ಯ 12ಸಾವಿರ ಕ್ಯೂಸೆಕ್‌ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶ ಹೊತ್ತಿ...

ಕಾವೇರಿ ವಿವಾದ: ಬೆಂಗಳೂರು ಉದ್ವಿಗ್ನ; ನಿಷೇಧಾಜ್ಞೆ ಜಾರಿ

ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀ ಕೋರ್ಟ್ ಆದೇಶ ಖಂಡಿಸಿ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ.ರಾಜಧಾನಿ ಬೆಂಗಳೂರಿನಾದ್ಯಂತ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿರುವ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ತಮಿಳರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ...

ಕಾನೂನಿನ ಅನುಷ್ಠಾನ ಪರಿಣಾಮಕಾರಿಯಾಗಿರಲಿ: ಸಿಎಂಸಿದ್ದರಾಮಯ್ಯ

ಕಾನೂನು ಜಾರಿಗೆ ತರುವುದಕ್ಕಿಂತ ಮುಖ್ಯವಾಗಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಕಂದಾಯ ಭವನದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮದಡಿಯಲ್ಲಿ ನೂತನವಾಗಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ...

ಕಣಿವೆ ರಾಜ್ಯ ಕಾಶ್ಮೀರದ ಹಲವೆಡೆ ಕರ್ಫ್ಯೂ ತೆರವು

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ 52 ದಿನಗಳಿಂದ ಜಾರಿಯಲ್ಲಿದ್ದ ಕರ್ಫ್ಯೂ ತೆರವುಗೊಳಿಸಲಾಗಿದೆ. ಆದರೆ ಪುಲ್ವಾಮ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರ ಬುರ್ಹಾನ್ ವನಿ ಹತ್ಯೆ (ಜು.8)ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಹಿಂಸಾಚಾರ, ಗಲಭೆ ಹಿನ್ನಲೆಯಲ್ಲಿ...

ಗೋಹತ್ಯೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ 6 ತಿಂಗಳ ಗಡುವು ನೀಡಿದ ಹಿಮಾಚಲ ಪ್ರದೇಶ ಹೈಕೋರ್ಟ್

ಮುಂದಿನ ಆರು ತಿಂಗಳ ಒಳಗಾಗಿ ದೇಶಾದ್ಯಂತ ಗೋಹತ್ಯೆ ನಿಷೇಧಿಸಬೇಕು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ಗಡುವು ನೀಡಿದೆ. ರಾಜ್ಯದ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷದ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿರುವ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಗೋಹತ್ಯಾ...

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಕಾರ್ಯಾಚರಣೆಗೆ ಇಬ್ಬರು ಉಗ್ರರು ಬಲಿ

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳನ್ನು ಹತ್ಯೆಯಾಗಿದ್ದಾರೆ. ಪುಲ್ವಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರಗಾಮಿಗಳನ್ನು ಗುಂಡಿಟ್ಟು ಹತ್ಯೆಗೈದಿದೆ. ಇದೇ ವೆಳೆ ಸೊಪೋರ್​ನಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗೆ ಸೇರಿದ ಹಿಜ್ಬುಲ್...

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಎತ್ತಿಹಿಡಿದ ಕೋರ್ಟ್: ಗೋಮಾಂಸ ಆಮದು, ದಾಸ್ತಾನು ಅಕ್ರಮವಲ್ಲ

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ತಂದು ಮಾರಾಟಮಾಡುವುದು ಮತ್ತು ತಿನ್ನುವುದು ಅಕ್ರಮವಲ್ಲ ಎಂದು ತೀರ್ಪು ನೀಡಿದೆ. ಮಹಾರಾಷ್ಟ್ರದಲ್ಲಿ ಹೇರಲಾಗಿರುವ ಗೋಮಾಂಸ ಮೇಲಿನ ನಿಷೇಧಕ್ಕಿರುವ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ...

ಪಟಾಕಿ ನಿಷೇಧ ಕುರಿತು ಸರ್ವ ಪಕ್ಷಗಳ ಸಭೆ ಕರೆದ ಕೇರಳ ಸಿಎಂ

ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಪಟಾಕಿಯಿಂದ ಸಂಭವಿಸಿದ ಬೆಂಕಿ ದುರಂತದ ರಕ್ಷಣಾ ಕಾರ್ಯಗಳಿಗಾಗಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರ್ಕಾರ ರು. 20 ಕೋಟಿ ಘೋಷಿಸಿದೆ. ಮಾಧ್ಯಮದವರ ಜತೆ ಮಾತನಾಡಿದ ಚಾಂಡಿ ಇನ್ನು 13 ಮೃತದೇಹದ ಗುರುತು ಪತ್ತೆಯಾಗಲು ಬಾಕಿ ಇದೆ...

ದೇಶಾದ್ಯಂತ ಗೋಹತ್ಯೆಯನ್ನು ನಿಷೇಧಿಸಬೇಕುಃ ಯೋಗ ಗುರು ಬಾಬಾ ರಾಮ್ ದೇವ್

ದೇಶಾದ್ಯಂತ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. ಗೋಹತ್ಯೆ ನಿಷೇಧಿಸುವುದರಿಂದ, ಜನಾಂಗೀಯ ಘರ್ಷಣೆಗಳು ತಡೆಯಲು ಮತ್ತು ಕೋಮು ಸಾಮರಸ್ಯ ಬೆಳೆಸಲು ಸಹಾಯವಾಗುತ್ತದೆ ಎಂದು ಹೇಳಿದರು. ಹದಿನೆಂಟನೇ ಶತಮಾನದ ವರೆಗೂ ಭಾರತದಲ್ಲಿ ಗೋಹತ್ಯೆ ಇರಲಿಲ್ಲ. ಮೊಘಲ್‌ ದೊರೆ ಔರಂಗಜೇಬ್‌...

ಗೋಹತ್ಯಾ ನಿಷೇಧಃ ಪ್ರಧಾನಿ ಮೋದಿಗೆ ಐ ಎಸ್ ಐ ಎಸ್ ಕೊಲೆ ಬೆದರಿಕೆ ಪತ್ರ

ಐ ಎಸ್ ಐ ಎಸ್ ಹಸ್ತಾಕ್ಷರವಿದೆ ಎನ್ನಲಾದ ಅನಾಮಧೇಯ ಪತ್ರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಗೋವಾ ಪೊಲೀಸರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಭಯೋತ್ಪಾದಕ ನಿಗ್ರಹ ದಳಕ್ಕೆ...

ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸುಪ್ರೀಂ ಆಕ್ಷೇಪ

ಶಬರಿಮಲೈ ದೇವಸ್ಥಾನದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧವಿರುವ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ದೇವಸ್ಥಾನದ ಆಡಳಿತ ಮಂಡಳಿಯನ್ನು ಪ್ರಶ್ನಿಸಿದೆ. ಮಹಿಳಾ ವಕೀಲೆರೊಬ್ಬರು 10 ವರ್ಷಗಳ ಹಿಂದೆ ಮಹಿಳೆಯರಿಗೆ ಪ್ರವೇಶ ಇಲ್ಲದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ...

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲ್ ಬೆದರಿಕೆ

ಸುಪ್ರೀಂ ಕೋರ್ಟ್ ಸ್ಪೋಟಿಸುವುದಾಗಿ ಅನಾಮಧೇಯ ಇ-ಮೇಲೆ ಬಂದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇ-ಮೇಲ್ ಅನ್ನು ಪರೀಕ್ಷಿಸಿ, ಕಳುಹಿಸಿದವರ ಮೂಲವನ್ನು ಇನ್ನೂ ಕಂಡು ಹಿಡಿಯಬೇಕಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ಸುತ್ತಮುತ್ತ ಕಟ್ಟೆಚ್ಚರ...

ಬೆಂಗಳೂರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮನ : ಎರಡು ದಿನ ನಿಷೇಧಾಜ್ಞೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ 2 ದಿನಗಳ ಬೆಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ವಿಧಿಸಿ ನಗರ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಸೋಮವಾರ ಬೆಳಗ್ಗೆ 6 ರಿಂದ ಮಂಗಳವಾರ ರಾತ್ರಿ 12...

ಯೋಧರ ಹತ್ಯೆಗೈದ ಎನ್‌.ಎಸ್‌.ಸಿ.ಎನ್‌-ಕೆಗೆ ಮತ್ತೆ ನಿಷೇಧ

ಇತ್ತೀಚೆಗೆ ಮಣಿಪುರದಲ್ಲಿ 18 ಸೈನಿಕರ ಹತ್ಯೆ ನಡೆಸಿದ್ದ ನಾಗಾ ಉಗ್ರ ಸಂಘಟನೆ ’ನ್ಯಾಷನಲಿಸ್ಟ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್ ನಾಗಾಲ್ಯಾಂಡ್‌- ಖಪ್ಲಂಗ್‌ (ಎನ್‌.ಎಸ್‌.ಸಿ.ಎನ್‌-ಕೆ)' ಮೇಲೆ ಮತ್ತೆ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತೀಯ ಸೇನೆ ಮ್ಯಾನ್ಮಾರ್‌ ಗಡಿಗೆ ನುಗ್ಗಿ ಈಶಾನ್ಯ ನಾಗಾ ಬಂಡುಕೋರರನ್ನು...

ಮ್ಯಾಗಿ ನಿಷೇಧ ತಡೆ ತೆರವಿಗೆ ಬಾಂಬೆ ಹೈಕೋರ್ಟ್ ನಕಾರ

ಮ್ಯಾಗಿ ನ್ಯೂಡಲ್ಸ್ ಉತ್ಪನ್ನಗಳ ನಿಷೇಧಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ನೆಸ್ಲೆ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ತಕ್ಷಣದಲ್ಲಿ ನಿಷೇಧ ವಾಪಸ್ ಪಡೆಯಲು ಸಾಧ್ಯವಿಲ್ಲ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದರಿಂದಾಗಿ ನೆಸ್ಲೆಗೆ ಮತ್ತಷ್ಟು ಹಿನ್ನಡೆ ಉಂಟಾದಂತಾಗಿದೆ....

ಶಿಶು ಆಹಾರ ಮಾರಾಟ ನಿಷೇಧಕ್ಕೆ ಚಿಂತನೆ

ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೆ, ಫಾರ್ಮಾಸ್ಯುಟಿಕಲ್ ಸಂಸ್ಥೆಯೂ ಶಿಶು ಆಹಾರಗಳು ಮತ್ತು ಸಪ್ಲಿಮೆಂಟ್ ಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಮೆಡಿಕಲ್ ಸ್ಟೋರ್ ಗಳಲ್ಲಿ ಕೇವಲ ಔಷಧ, ಮಾತ್ರೆ, ಸಿರಪ್‍ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಇಲಾಖೆ...

ಭಾರತದ ಮ್ಯಾಗಿ ನೂಡಲ್ಸ್ ಗೆ ನೇಪಾಳ, ಸಿಂಗಾಪುರದಲ್ಲಿಯೂ ನಿಷೇಧ

ಮ್ಯಾಗಿಯಲ್ಲಿ ಅಪಾಯಕಾರಿ ಅಂಶಗಳಿವೆ ಎಂಬ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ತನ್ನ 9 ಬಗೆಯ ಉತ್ಪನ್ನಗಳ ಮಾರಾಟವನ್ನು ಭಾರತದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ನೆಸ್ಲೆ ಕಂಪನಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮ್ಯಾಗಿಗೆ ನಿಷೇಧ ಭೀತಿ ಎದುರಾಗಿದೆ. ನೇಪಾಳ ಸರ್ಕಾರ ಭಾರತದಿಂದ ಮ್ಯಾಗಿ ಆಮದು...

ಕರ್ನಾಟಕದಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ

ನೆಸ್ಲೆ ಸಂಸ್ಥೆಯ ವಿವಾದಿತ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಕಂಡುಬಂದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮ್ಯಾಗಿಯನ್ನು ತಾತ್ಕಾಲಿಕವಾಗಿ ನಿಷೇಧಗೊಳಿಸಲಾಗಿದೆ. ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯಗಳಿಗೆ ಸೂಚನೆ ನೀಡಿದ್ದ...

ಜಮ್ಮುವಿನಲ್ಲಿ ಭಿಂದ್ರನ್ ವಾಲೆ ಫೋಸ್ಟರ್ ತೆರವು:ಸಿಖ್ ಸಮುದಾಯದಿಂದ ತೀವ್ರ ಪ್ರತಿಭಟನೆ

ಪ್ರತ್ಯೇಕ ಖಲೀಸ್ತಾನ್ ನಾಯಕ, ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಫೋಸ್ಟರ್ ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ಸಿಖ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಮ್ಮು ಪಠಾಣ್ ಕೋಟ್ ಹೈವೇಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಜೂ.4ರಂದು ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ನಡೆಸಿದ...

ರಾಜ್ಯದಲ್ಲೂ ಮ್ಯಾಗಿ ನೂಡಲ್ಸ್ ಗೆ ನಿಷೇಧ

ಸುರಕ್ಷತಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ಕಾನೂನು ಸಮಸ್ಯೆಗೆ ಸಿಲುಕಿರುವ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್‌ ಅಪಾಯಕಾರಿ ಅಂಶಗಳನ್ನು ಹೊಂದಿದೆಯೇ ಎಂಬ ಬಗ್ಗೆ ಕರ್ನಾಟಕ ಸರ್ಕಾರವೂ ಪರೀಕ್ಷೆಗೆ ಮುಂದಾಗಿದ್ದು, ರಾಜ್ಯದಲ್ಲೂ ಮೂರು ದಿನಗಳ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಮ್ಯಾಗಿ ನೂಡಲ್‌ ಅಪಾಯಕಾರಿ ಮಟ್ಟದಲ್ಲಿ...

ದೆಹಲಿಯಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ

ನೆಸ್ಲೆ ಕಂಪನಿಯ ಅತ್ಯಂತ ಜನಪ್ರಿಯ ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು 15 ದಿನಗಳ ಕಾಲ ದೆಹಲಿ ಸರ್ಕಾರ ನಿಷೇಧಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಮ್ಯಾಗಿಯನ್ನು 15 ದಿನಗಳ ಕಾಲ ಮಾರಾಟ ಮಾಡದಂತೆ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿದೆ. ಮ್ಯಾಗಿ ನ್ಯೂಡಲ್ಸ್...

ಸ್ಮೃತಿ ಇರಾನಿ-ರಾಹುಲ್ ಗಾಂಧಿ ಟ್ವಿಟರ್ ವಾರ್

ಐಐಟಿ-ಮದ್ರಾಸಿನ ವಿದ್ಯಾರ್ಥಿ ಸಂಘಟನೆ ನಿಷೇಧ ವಿಚಾರ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್‌ ನಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದು, ’ಮೋದಿ...

ಐಐಟಿ ವಿದ್ಯಾರ್ಥಿ ಸಂಘಟನೆ ನಿಷೇಧ: ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ಆರೋಪದ ಹಿನ್ನೆಲೆಯಲ್ಲಿ ಮದ್ರಾಸ್ ಐಐಟಿ ಕಾಲೇಜು ವಿದ್ಯಾರ್ಥಿ ಸಂಘಟನೆ, 'ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್' ಅನ್ನು ನಿಷೇಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ...

ಪುತ್ರಜೀವಕ್ ಬೀಜ್ ಔಷಧ ಹೆಸರು ಬದಲಿಸಲು ರಾಮದೇವ್ ಗೆ ಮಧ್ಯಪ್ರದೇಶ ಸರ್ಕಾರ ಸಲಹೆ

'ಬಾಬಾ ರಾಮ್ ದೇವ್' ಅವರ ದಿವ್ಯ ಫಾರ್ಮಸಿಯ ಪುತ್ರ ಜೀವಕ್ ಬೀಜ್ ಔಷಧದ ಬಗ್ಗೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಪುತ್ರಜೀವಕ್ ಬೀಜ್ ಔಷಧಕ್ಕೆ ನಿಷೇಧ ವಿಧಿಸಿದೆ. ದಿವ್ಯ ಫಾರ್ಮಸಿ ಔಷಧಿಯ ಹೆಸರು ಬದಲಾವಣೆ ಮಾಡುವವರೆಗೆ ಪುತ್ರಜೀವಕ್ ಬೀಜ್ ಮೇಲಿನ...

ಬಯಲಿನಲ್ಲಿ ತ್ಯಾಜ್ಯವಸ್ತುಗಳನ್ನು ಸುಟ್ಟರೆ 5000ರೂ. ದಂಡ: ಎನ್.ಜಿ.ಟಿ ಮಹತ್ವದ ಆದೇಶ

ವಿಲೇವಾರಿ ಮಾಡದ ಕಸವನ್ನು ಅಥವಾ ಅನುಪಯುಕ್ತ ವಸ್ತುಗಳನ್ನು ರಸ್ತೆ ಬದಿಯಲ್ಲಿ ತಂದು ಸುಡುವುದನ್ನು ಸಮಾನ್ಯವಾಗಿ ಗಮನಿಸಿರುತ್ತೀರಿ.. ಇನ್ನು ಮುಂದೆ ಇಂತಹ ಕೆಲಸಗಳಿಗೆ ಕತ್ತರಿ ಬೀಳಲಿದೆ. ನಮ್ಮನ್ನು ಯಾರು ಕೇಳುತ್ತಾರೆ ಎಂದು ಮೊಂಡುತನದಿಂದ ಕಸವನ್ನು ರಸ್ತೆ ಬದಿಯಲ್ಲೇ ಸುಟ್ಟರೆ ಬರೋಬ್ಬರಿ 5000 ರೂಪಾಯಿ...

ದೇಸಿ ಗೋವುಗಳ ಬದಲು ಜರ್ಸಿ ಹಸು ವಧೆಗೆ ಪ್ರಸ್ತಾಪ

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಆದೇಶದಿಂದ ನಿರುದ್ಯೋಗಿಗಳಾಗಿರುವವರಿಗೆ ನೆರವಾಗುವ ಮತ್ತು ಗೋಮಾಂಸ ವ್ಯಾಪಾರ ಪ್ರೋತ್ಸಾಹಿಸುವ ಉದ್ದೇಶದಿಂದ ಅಖೀಲ ಭಾರತ ಮಿಲ್ಲಿ ಕೌನ್ಸಿಲ್‌, ಭಾರತೀಯ ಎತ್ತು ಹಾಗೂ ಹಸುಗಳ ವಧೆ ಬದಲು ವಿದೇಶದ ಜರ್ಸಿ ಹಸುಗಳ ವಧೆ ಉತ್ತೇಜಿಸುವ ಆಗ್ರಹ ಮುಂದಿಟ್ಟಿದೆ. ಭಾರತೀಯ ತಳಿ...

ಪಶ್ಚಿಮ ಘಟ್ಟ ಜನವಸತಿ ಪ್ರದೇಶ ಸೂಕ್ಷ್ಮ ವಲಯದಿಂದ ಹೊರಕ್ಕೆ

ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ|ಕಸ್ತೂರಿರಂಗನ್‌ ವರದಿಯ ಬಗ್ಗೆ ಕರಾವಳಿ ಹಾಗೂ ಮಲೆನಾಡು ಭಾಗದ ಜನರಲ್ಲಿದ್ದ ಆತಂಕ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಜನವಸತಿ ಗ್ರಾಮಗಳು, ಖಾಸಗಿ ಜಮೀನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡುವಂತೆ ಕೇಂದ್ರಕ್ಕೆ...

ಮತಾಂತರ ನಿಷೇಧ ಕಾಯ್ದೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯ: ಕಾನೂನು ಸಚಿವಾಲಯ

ಕೇಂದ್ರ ಸರ್ಕಾರ 'ಮತಾಂತರ ನಿಷೇಧ ಕಾಯ್ದೆ'ಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ ಹೇಳಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಲು ಸಾದ್ಯವಿಲ್ಲ ಎಂದು ಕಾನೂನು...

10 ವರ್ಷದಷ್ಟು ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಮಧ್ಯಂತರ ತಡೆ

'ದೆಹಲಿ'ಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನ ಹಸಿರು ಪೀಠ ತಡೆ ನೀಡಿದೆ. ದೆಹಲಿ ಸರ್ಕಾರಕ್ಕೆ 2 ವಾರಗಳ ಕಾಲ ಅವಕಾಶ ನೀಡಿರುವ ಕೋರ್ಟ್,10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ರಸ್ತೆಗಿಳಿಯದಂತೆ ಕ್ರಮ...

ದೇಶಾದ್ಯಂತ ಗೋಹತ್ಯೆ ನಿಷೇಧಕ್ಕೆ ಚಿಂತನೆ: ರಾಜ್‌ನಾಥ್ ಸಿಂಗ್

ದೇಶಾದ್ಯಂತ ಗೋಹತ್ಯೆ ನಿಷೇಧ ಕಾನೂನು ತರಲು ಎನ್‌.ಡಿ.ಎ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಗೋಹತ್ಯೆ ಮಾಡುವಂತಿಲ್ಲ. ಗೋಹತ್ಯೆ ನಿಷೇಧಕ್ಕಾಗಿ ನಾವು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಗಣತಿಯನ್ನು...

ಮತಾಂತರ, ಅದರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿ: ರಾಜನಾಥ್ ಸಿಂಗ್

ಅಲ್ಪಸಂಖ್ಯಾತರಿಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮತಾಂತರ ನಡೆಸುವುದನ್ನು ಪ್ರಶ್ನಿಸಿದ್ದು, ಈ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಮತಾಂತರ...

ಸಿಎಂ ಸಿದ್ದರಾಮಯ್ಯಗೆ ತೊಗಾಡಿಯಾ ಪತ್ರ

ಹಿಂದೂ ಸಮಾಜೋತ್ಸವ ದಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ದ ವಿಶ್ವ ಹಿಂದೂ ಪರಿಷತ್‌ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿರುವ ತೊಗಾಡಿಯಾ, ಮೈಸೂರಿನಲ್ಲಿ ನಾನು...

ನಿಷೇಧದಿಂದಲೇ ಇಂಡಿಯಾಸ್ ಡಾಟರ್ ಅತಿ ಹೆಚ್ಚು ಪ್ರಚಾರ ಪಡೆಯಿತು: ಲೆಸ್ಲಿ ಉಡ್ವಿನ್

'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಅತಿ ಹೆಚ್ಚು ವೀಕ್ಷಣೆಯಾಗಿರುವುದಕ್ಕೆ ಭಾರತ ಸರ್ಕಾರ ನಿಷೇಧ ಹೇರಿರುವುದೇ ಕಾರಣ ಎಂದು ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೆಸ್ಲಿ ಉಡ್ವಿನ್, ಸಾಕ್ಷ್ಯಚಿತ್ರದ...

ಜಾನುವಾರು ಹತ್ಯೆ ತಡೆಗಟ್ಟಲು ಹೊಸ ಕಾನೂನು ಬೇಕಿಲ್ಲ: ಟಿ.ಬಿ ಜಯಚಂದ್ರ

'ಜಾನುವಾರುಗಳ ಹತ್ಯೆ'ಯನ್ನು ತಡೆಗಟ್ಟಲು ಹೊಸ ಕಾನೂನು ರಚನೆ ಅಗತ್ಯ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ...

ದೇಶಾದ್ಯಂತ ಗೋಹತ್ಯೆ ನಿಷೇಧಕ್ಕೆ ಕೇಂದ್ರ ಚಿಂತನೆ

ಗುಜರಾತ್‌ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿ ಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ದೇಶಾದ್ಯಂತ ವಿಸ್ತರಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕುರಿತು ರಾಜ್ಯಗಳಿಗೆ ಸಲಹೆ ನೀಡಬಹುದೇ ಎಂದು ಪ್ರಧಾನಿ ಕಾರ್ಯಾಲಯವು...

ಉಡುಪಿಯಲ್ಲಿ ವಿರಾಟ್‌ ಹಿಂದೂ ಸಮಾಜೋತ್ಸವ

ಉಡುಪಿಯಲ್ಲಿ ಇಂದು ವಿರಾಟ್‌ ಹಿಂದೂ ಸಮಾಜೋತ್ಸವದ ನಡೆಯಲಿದೆ. ಸಮಾಜೋತ್ಸವದಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಬೇಕಾಗಿದ್ದ ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರ ಆಗಮನಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಅಪರಾಹ್ನ 2ಗಂಟೆಗೆ ಜೋಡುಕಟ್ಟೆಯಿಂದ ಬೃಹತ್‌ ಶೋಭಾಯಾತ್ರೆ ಆರಂಭಗೊಂಡು ಎಂಜಿಎಂ ಕ್ರೀಡಾಂಗಣದಲ್ಲಿ...

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಚರ್ಚೆಯನ್ನು ಸ್ವಾಗತಿಸಿದ ಜರ್ಮನ್ ರಾಯಭಾರಿ

'ಬಿಬಿಸಿ' ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಉಂಟಾಗಿರುವ ಚರ್ಚೆಯನ್ನು ಭಾರತದಲ್ಲಿರುವ ಜರ್ಮಿನಿಯ ರಾಯಭಾರಿ ಮೈಕೆಲ್ ಸ್ಟೀನರ್ ಸ್ವಾಗತಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೈಕೆಲ್ ಸ್ಟೀನರ್, ಡಿ.16ರ ಗ್ಯಾಂಗ್ ರೇಪ್ ಕುರಿತು ಬಿಬಿಸಿ...

ಪ್ರವೀಣ್‌ ತೊಗಾಡಿಯಾಗೆ ಮತ್ತೆ 3 ಕಡೆ ನಿಷೇಧ

ಕೋಮು ಪ್ರಚೋದಕ ಭಾಷಣದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವಕ್ಕೆ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾಗೆ ನಿಷೇಧ ಹೇರಿದ ಬೆನ್ನಲ್ಲೇ ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನಗಳಲ್ಲಿಯೂ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಉಡುಪಿಯಲ್ಲಿ ಮಾ. 9ರಂದು, ಹಾಸನ ಹಾಗೂ ಚಿಕ್ಕಮಗಳೂರಲ್ಲಿ...

ಶ್ರೀರಾಮಸೇನೆ ನಿಷೇಧದ ವಿರುದ್ಧ ಬಿಜೆಪಿ ಯಾಕೆ ಮಾತನಾಡ್ತಿಲ್ಲ: ಮುತಾಲಿಕ್ ಪ್ರಶ್ನೆ

ಬಿಜೆಪಿ ಮುಖಂಡರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ ಗೋವಾದಲ್ಲಿ ಶ್ರೀರಾಮಸೇನೆಯನ್ನು ನಿಷೇಧ ಹೇರಿದ್ದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಗೋವಾದಲ್ಲಿ ಡ್ರಗ್, ಸೆಕ್ಸ್ ಮಾಫಿಯಾ ಹೆಚ್ಚಿದೆ. ಈ ಬಗ್ಗೆ ಹೋರಾಟ ಮಾಡುತ್ತಿರುವ ನಮ್ಮ ಮೇಲೇಕೆ ನಿಷೇಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್...

ರೇಪಿಸ್ಟ್ ಸಂದರ್ಶನವುಳ್ಳ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿಷೇಧ: ರಾಜನಾಥ್ ಸಿಂಗ್

ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ಸಂದರ್ಶನ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಾಕ್ಷ್ಯಚಿತ್ರ ನಿರ್ಮಾಪಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮೇಲ್ಮನೆಯಲ್ಲಿ ಹೇಳಿಕೆ ನೀಡಿದ ಅವರು, ಸಾಕ್ಷ್ಯಚಿತ್ರ ನಿರ್ಮಾಪಕರು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ...

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ: ಹಂತಕರಿಗೆ 5 ವರ್ಷ ಜೈಲು

ಪರ-ವಿರೋಧದ ನಡುವೆಯೂ ಮಹಾರಾಷ್ಟ್ರ ಸರ್ಕಾರ ಕೊನೆಗೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಗೋಹತ್ಯೆ ಮಾಡುವವರು 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಮಹಾರಾಷ್ಟ್ರ ಜಾನುವಾರು ಸಂರಕ್ಷಣಾ ಕಾಯ್ದೆಯಡಿ ಈ ನಿಷೇಧವನ್ನು ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಇನ್ನು ಮುಂದೆ ಅಕ್ರಮವಾಗಿ ಜಾನುವಾರು...

ಮತಾಂತರ ನಿಷೇಧ ಕಾಯ್ದೆ ಸಮಾಜದ ಶಾಂತಿಗೆ ಭಂಗ: ದೆಹಲಿಯ ಆರ್ಚ್ ಬಿಷಪ್ ಜಾರ್ಜ್ ಕಾರ್ಡಿನಲ್

ದೇಶಾದ್ಯಂತ ಚರ್ಚೆಗೆ ಗುರಿಯಾಗಿರುವ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸಿರೊ ಮಲಬಾರ್ ಕ್ಯಾಥೊಲಿಕ್ ಚರ್ಚ್ ನ ಮುಖ್ಯಸ್ಥ ಜಾರ್ಜ್ ಕಾರ್ಡಿನಲ್ ಪ್ರತಿಕ್ರಿಯೆ ನೀಡಿದ್ದು, ಮತಾಂತರ ನಿಷೇಧ ಕಾಯ್ದೆ ವಿವಿಧ ಧರ್ಮಗಳ ನಡುವೆ ದ್ವೇಷ ಹರಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಧರ್ಮಗಳ ನಡುವೆ ದ್ವೇಷ...

ವಿಶ್ವ ಹಿಂದೂ ಪರಿಷತ್ ಸಮಾಜೋತ್ಸವದಲ್ಲಿ ತೊಗಾಡಿಯಾ ವಿಡಿಯೋ ಭಾಷಣ ಸಾಧ್ಯತೆ

ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರಿಗೆ ಬೆಂಗಳೂರು ನಗರ ಪ್ರವೇಶ ನಿಷೇಧಿಸಿರುವ ಹಿನ್ನೆಲೆಯಲ್ಲಿ ಫೆ.8ರಂದು ವಿರಾಟ ಹಿಂದು ಸಮಾಜೋತ್ಸವದಲ್ಲಿ ಅವರ ಧ್ವನಿ-ದೃಶ್ಯ ಮುದ್ರಿತ ಭಾಷಣ ಅಥವಾ ಬೇರೊಂದು ಭಾಗದಿಂದ ಮಾಡುವ ಭಾಷಣದ ನೇರ ಪ್ರಸಾರದ ವ್ಯವಸ್ಥೆ ಮಾಡುವ...

ತೊಗಾಡಿಗೆ ನಿಷೇಧ ವಿಚಾರ: ಸದನದಲ್ಲಿ ಮುಂದುವರೆದ ಬಿಜೆಪಿ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ನಿಷೇಧ ವಿಚಾರ ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಪ್ರತಿಭಟನೆಗೆ ಸಾಕ್ಷಿಯಾಯಿತು. ಈ ವೇಳೆ ತೊಗಾಡಿಯಾಗೆ ನಿಷೇಧ ಹಾಕಿರುವ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬೆಂಗಳೂರಿಗೆ ಬರದಂತೆ...

ಪ್ರವೀಣ್ ತೊಗಾಡಿಯಾಗೆ ನಿಷೇಧ: ಉಭಯ ಸದನಗಳಲ್ಲೂ ಆಡಳಿತ-ವಿಪಕ್ಷಗಳ ನಡುವೆ ವಾಕ್ಸಮರ

'ವಿಶ್ವಹಿಂದೂ ಪರಿಷತ್' ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾಗೆ ನಿಷೇಧ ಹೇರಿರುವ ವಿಷಯದ ಬಗ್ಗೆ ಉಭಯ ಸದನಗಳ ಕಲಾಪದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ಫೆ.4 ರಂದು ವಿಧಾನಸಭಾ ಕಲಾಪ ಪ್ರಾರಂಭವಾದ ಕೂಡಲೇ ಮಾಜಿ ಗೃಹ ಸಚಿವ ಆರ್.ಅಶೋಕ್, ಪ್ರವೀಣ್...

ತೊಗಾಡಿಯಾಗೆ ವಿಧಿಸಿರುವ ನಿಷೇಧ ವಾಪಸ್ ಪಡೆಯಬೇಕು: ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ

'ಪ್ರವೀಣ್ ತೊಗಾಡಿಯಾ'ಗೆ ನಿಷೇಧ ಹೇರಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ನಡೆದ ಬಿಜೆಪಿ ಶಾಸಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪಷ್ಟನೆ ನೀಡಿದ್ದಾರೆ. ಮುಸ್ಲಿಮರು ನಡೆಸುವ ಕಾರ್ಯಕ್ರಮಗಳಿಗೆ ಸಂಘಟನೆ ಮುಖ್ಯಸ್ಥರ ಆಗಮನಕ್ಕೆ ಅನುಮತಿ ನೀಡುವುದು, ಹಿಂದೂಗಳು ನಡೆಸುವ ಕಾರ್ಯಕ್ರಮದಲ್ಲಿ...

ಬೆಂಗಳೂರಿಗೆ ಬರದಂತೆ ತೊಗಾಡಿಯಾಗೆ ನಿಷೇಧ

ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವಿಣ್ ತೊಗಾಡಿಯಾಗೆ ಬೆಂಗಳೂರಿಗೆ ಬರದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಪ್ರಚೋದನಕಾರಿ ಭಾಷಣ ಆರೋಪ ಶಂಕೆ ಹಿನ್ನಲೆಯಲ್ಲಿ ಫೆ.5 ರಿಂದ 1೦ರ ವರೆಗೆ ತೊಗಾಡಿಯಾ ಬೆಂಗಳೂರು ನಗರಕ್ಕೆ ಬರದಂತೆ ನಿಷೇಧ ಹೇರಿ ನಗರ...

ಪ್ರವೀಣ್ ತೊಗಾಡಿಯಾಗೆ ನಿಷೇಧ ಪ್ರಜಾಪ್ರಭುತ್ವ ವಿರೋಧಿ: ಜಗದೀಶ್ ಶೆಟ್ಟರ್

ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಬೆಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿರುವುದನ್ನು ಸದನದಲ್ಲಿ ಪ್ರಶ್ನಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರವೀಣ್ ತೊಗಾಡಿಯಾ ಬೆಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿರುವುದು ಪ್ರಜಾಪ್ರಭುತ್ವ...

ವಿಮಾನ ಹಾರಾಟ ನಿಷೇಧ: ಅಮೆರಿಕ ಬೇಡಿಕೆಗೆ ಭಾರತ ಒಪ್ಪಿಗೆ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜ.26ರಂದು ರಾಜಪಥದ ಮೇಲೆ ವಿಮಾನ ಹಾರಾಟ ನಿಷೇಧಿಸಲು ಭಾರತ ಕೊನೆಗೂ ಒಪ್ಪಿದೆ. ಒಬಾಮ ಸುರಕ್ಷತೆಗಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ರಾಜಪಥದ ಮೇಲೆ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅಮೆರಿಕದ ಭದ್ರತಾ ಸಂಸ್ಥೆಗಳು...

ಬೆಂಗಳೂರಿನಲ್ಲಿ ಫ್ಲೆಕ್ಸ್, ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧಕ್ಕೆ ತೀರ್ಮಾನ

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಅಂತೆಯೇ, ರಾಜ್ಯವ್ಯಾಪೀ ಪ್ಲಾಸ್ಟಿಕ್ ಕೈಚೀಲಗಳನ್ನೂ ನಿಷೇಧಿಸುವ ನಿರ್ಧಾರವನ್ನೂ ಕೂಡಾ ಸರ್ಕಾರ ಕೈಗೊಂಡಿದೆ. ಪ್ಲಾಸ್ಟಿಕ್ ಕೈಚೀಲಗಳ ನಿಷೇಧ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮೊದಲಿಗೆ ಜಾರಿಗೆ ಬರಲಿದೆ. ಮುಖ್ಯಮಂತ್ರಿಯವರ...

ವಿಮಾನ ಹಾರಾಟ ನಿಷೇಧ: ಅಮೆರಿಕದ ಮನವಿ ತಿರಸ್ಕರಿಸಿದ ಭಾರತ

ಅಮರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಬೇಟಿ ಹಿನ್ನಲೆಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ. ಆದರೆ ಗಣರಾಜ್ಯೋತ್ಸವ ನಡೆಯಲಿರುವ ದೆಹಲಿಯ ರಾಜಪಥ್ ನ ಸುತ್ತಮುತ್ತ ಯಾವುದೇ ವಿಮಾನಗಳು ಹಾರಾಟ ನಡೆಸದಂತೆ ಒಬಾಮಾ ಭದ್ರತಾ ಪಡೆ ಮಾಡಿದ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಗಣರಾಜ್ಯೋತ್ಸವ...

ಏಕರೂಪ ನಾಗರಿಕ ಸಂಹಿತೆ ತನ್ನಿ: ತೊಗಾಡಿಯಾ

ತಮ್ಮ ಮೂರು ಪ್ರಮುಖ ಬೇಡಿಕೆಗಳಾದ - ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಮತ್ತು ಮತಾಂತರ ನಿಷೇಧ ಕಾಯ್ದೆ ಇವುಗಳಿಂದ ಹಿನ್ನಡೆಯುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಸಂಸ್ಥೆಯ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಮಠಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದ...

ಘರ್ ವಾಪಸಿ ಮತಾಂತರವಾಗುವುದಿಲ್ಲ: ಪ್ರವೀಣ್ ತೊಗಾಡಿಯಾ

ಅನ್ಯಧರ್ಮೀಯರನ್ನು ಮಾತೃಧರ್ಮಕ್ಕೆ ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ವಿ.ಹೆಚ್.ಪಿ ಮುಖಂಡ ಪ್ರವೀಣ್ ತೊಗಾಡಿಯಾ, ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ನಡೆದ ವಿ.ಹೆಚ್.ಪಿ ಸಭೆ ಬಳಿಕ ಮಾತನಾಡಿದ ತೊಗಾಡಿಯಾ, ನಾವು ಮತಾಂತರವನ್ನು ವಿರೋಧಿಸುತ್ತೇವೆ....

7,000 ಉಗ್ರರ ಬಂಧನಕ್ಕೆ ಪಾಕ್ ಆದೇಶ

ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟನ್ನು ಹೊಂದಿರುವ ಸುಮಾರು 7,000 ಮಂದಿ ಶಂಕಿತ ಉಗ್ರರನ್ನು ಬಂಧಿಸುವಂತೆ ಪಾಕಿಸ್ಥಾನ ಸರ್ಕಾರ ದೇಶದ ಎಲ್ಲಾ ನಾಲ್ಕು ಪ್ರಾಂತ್ಯಗಳ ಸರ್ಕಾರಗಳಿಗೆ ಆದೇಶ ನೀಡಿದೆ. ಸರಕಾರದ ಅಂಕಿ-ಅಂಶಗಳ ಪ್ರಕಾರ 6,777 ಶಂಕಿತ ಉಗ್ರರು ದೇಶಾದ್ಯಂತ ಕಾರ್ಯಾಚರಿಸುತ್ತಿದ್ದು ಇವರಲ್ಲಿ ಹೆಚ್ಚಿನ ಸಂಖ್ಯೆಯ...

ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವವರೆಗೂ ಮತಾಂತರ ನಿಲ್ಲುವುದಿಲ್ಲ:ಸುಷ್ಮಾ ಸ್ವರಾಜ್

ಕೇರಳದಲ್ಲಿ 58 ಕ್ರೈಸ್ತ ಧರ್ಮದವರು ಹಿಂದೂ ಧರ್ಮಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮತಾಂತರದ ವಿಷಯ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮರುಮತಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವವರೆಗೂ ಮತಾಂತರಗಳು...

ಹಿಂದೊಮ್ಮೆ ಇಡಿ ಪ್ರಪಂಚದಲ್ಲಿ ವಾಸಿಸುತ್ತಿದ್ದವರೆಲ್ಲಾ ಹಿಂದೂಗಳೇ: ಪ್ರವೀಣ್ ತೊಗಾಡಿಯಾ

ಒಂದು ಕಾಲದಲ್ಲಿ ಇಡೀ ಪ್ರಪಂಚದಲ್ಲಿ ವಾಸಿಸುತ್ತಿದ್ದವರೆಲ್ಲರೂ ಹಿಂದೂಗಳೆಂದು ವಿಶ್ವ ಹಿಂದೂ ಪರಿಷತ್ ನ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಡಿ.22ರಂದು ಮಧ್ಯಪ್ರದೇಶದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಪ್ರವೀಣ್ ತೊಗಾಡಿಯಾ, ಜಗತ್ತಿನಲ್ಲಿ ಎಲ್ಲೆಲ್ಲಿ ಮಾನವರು ವಾಸವಾಗಿದ್ದರೋ ಅವರೆಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು,...

ವಿಧಾನಸಭಾ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಕೋಲಾಹಲದ ನಡುವೆಯೇ ಕಲಾಪ ಅಂತ್ಯ

ಕಳೆದ 10 ದಿನಗಳಿಂದ ನಡೆಯುತ್ತಿದ್ದ ವಿಧಾನ ಮಂಡಲ ಅಧಿವೇಶನ ಡಿ.20ರಂದು ಮುಕ್ತಾಯಗೊಂಡಿದೆ. ವಿಧಾನಸಭಾ ಕಲಾಪವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ವಿಧಾನಸಭಾ ಕಲಾಪದ ಕೊನೆಯ ದಿನವೂ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ವಿಧಾಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಳಂಕಿತ...

ಮತಾಂತರ ನಿಷೇಧ ಕಾಯ್ದೆಗೆ ಸೆಕ್ಯುಲರ್ ಪಕ್ಷಗಳು ಬೆಂಬಲಿಸಲಿ: ಅಮಿತ್ ಶಾ

ಒತ್ತಾಯ ಪೂರ್ವಕ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಲವಂತದ ಮತಾಂತರಕ್ಕೆ ಬಿಜೆಪಿಯ ವಿರೋಧವಿದ್ದು, ನಿಜವಾದ ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಭಾರತದ ಎಲ್ಲಾ ಪಕ್ಷಗಳು ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ...

ಘರ್ ವಾಪಸಿ ಶಾಂತಿಗೆ ಮಾರಕ, ಮತಾಂತರ ನಿಷೇಧ ಕಾಯ್ದೆ ಮಾತ್ರ ಬೇಡ: ದೆಹಲಿ ಬಿಷಪ್

'ಆರ್.ಎಸ್.ಎಸ್' ನ ಘರ್ ವಾಪಸಿ ಬಗ್ಗೆ ದೆಹಲಿಯ ಪ್ರಧಾನ ಬಿಷಪ್ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶದಲ್ಲಿ ನಡೆದಿರುವ ಮಾತೃಧರ್ಮಕ್ಕೆ ವಾಪಸ್ಸಾಗುವ ಕಾರ್ಯಕ್ರಮ ಶಾಂತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯ ವಿರುದ್ಧವಾಗಿದೆ ಎಂದು ಬಿಷಪ್ ತಿಳಿಸಿದ್ದಾರೆ....

ಸದನದಲ್ಲಿ ಮೊಬೈಲ್ ನಿಷೇಧ: ಕಾಗೋಡು ತಿಮ್ಮಪ್ಪ ಘೋಷಣೆ

ಬಿಜೆಪಿ ಶಾಸಕ ಪ್ರಭು ಚೌಹಾಣ್‌ ಅವರು ಸದನದಲ್ಲಿ ಮೊಬೈಲ್‌ ವೀಕ್ಷಣೆ ಪ್ರಕರಣ ಮಾರ್ದನಿಸುತ್ತಿದ್ದಂತೆಯೇ, ವಿಧಾನಸಭೆಯಲ್ಲಿ ಶಾಸಕರಿಗೆ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ. ಈ ಹಿಂದೆ ನೀಲಿ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸದನ ಸಮಿತಿ ಮಾಡಿದ ಶಿಫಾರಸಿನ ಆಧಾರದ ಮೇಲೆ ತಕ್ಷಣದಿಂದಲೇ...

ಸದನದೊಳಗೆ ಯಾರು ಮೊಬೈಲ್ ತರುವುದು ಬೇಡ: ಸಿದ್ದರಾಮಯ್ಯ

ನಾಳೆಯಿಂದ ಸದನದೊಳಗೆ ಯಾರೂ ಮೊಬೈಲ್ ತರುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಸದನದಲ್ಲಿ ಶಾಸಕ ಪ್ರಭು ಚೌಹಾಣ್ ಮೊಬೈಲ್ ಫೋಟೊ ವೀಕ್ಷಣೆ ವಿಚಾರ ವಿಧಾನಪರಿಷತ್ತಿನಲ್ಲೂ ಪ್ರತಿಧ್ವನಿಸಿತು. ಉಭಯ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿ, ಧರಣಿ ಕೈಗೊಂಡಿದ್ದರು. ಸದನದಲ್ಲಿ ಮೊಬೈಲ್...

ಲೈಸೆನ್ಸ್‌ ಇಲ್ಲದ ವೆಬ್‌ ಆಧರಿತ ಟ್ಯಾಕ್ಸಿ ನಿಷೇಧ: ರಾಜನಾಥ್ ಸಿಂಗ್

ದೆಹಲಿಯಲ್ಲಿ 'ಉಬರ್‌' ಕಂಪನಿಗೆ ಸೇರಿದ ಕ್ಯಾಬ್‌ ಚಾಲಕ ಯುವತಿ ಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಪರಿಣಾಮ ಇದೀಗ ಇಡೀ ದೇಶದ ಮೇಲಾಗಿದೆ. ಪ್ರಕರಣ ನಡೆದ ಸ್ಥಳವಾದ ದೆಹಲಿ ಮಾತ್ರವಲ್ಲದೆ ಎಲ್ಲಾ ರಾಜ್ಯಗಳಲ್ಲೂ ಲೈಸೆನ್ಸ್‌ ಹೊಂದಿರದ ವೆಬ್‌ ಆಧರಿತ ಟ್ಯಾಕ್ಸಿ ಸೇವೆಗಳನ್ನು ರಾಜ್ಯ...

ಕ್ಯಾಬ್ ಸೇವೆ ನಿಷೇಧಿಸುವ ಅಗತ್ಯವಿಲ್ಲ: ನಿತಿನ್ ಗಡ್ಕರಿ

ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಖಾಸಗಿ ಕ್ಯಾಬ್ ಸಂಸ್ಥೆ ಯೂಬರ್‌ನ ಪರವಾನಗಿ ರದ್ದು ಮಾಡಿರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದ್ದು, ಕ್ಯಾಬ್ ಸೇವೆ ನಿಷೇಧಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಮಾಧ್ಯಮದವರೊಂಗಿಗೆ ಮಾತನಾಡಿದ ಗಡ್ಕರಿ,...

ಬಿಡಿ ಸಿಗರೇಟು ಮಾರಾಟ ನಿಷೇಧ ಸದ್ಯಕ್ಕಿಲ್ಲ

ಬಿಡಿ ಸಿಗರೇಟು ಮಾರಾಟಕ್ಕೆ ನಿಷೇಧ ಹೇರುವ ನಿರ್ಧಾರವನ್ನು ತಕ್ಷಣಕ್ಕೆ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬಿಡಿ ಸಿಗರೇಟು ನಿಷೇಧದಿಂದ ತಂಬಾಕು ಬೆಳೆಯುವ ರೈತರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರು ಹಾಗೂ ಸಂಸದರು ಆತಂಕ ವ್ಯಕ್ತಪಡಿಸಿದ...

ತಂಬಾಕು ಉತ್ಪನ್ನ ನಿಷೇಧ ಸೂಕ್ತ: ಸರ್ಕಾರಕ್ಕೆ ರಾಜ್ಯಪಾಲರ ಸಲಹೆ

ಮಾನವನ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಎಲ್ಲ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡುವುದು ಸೂಕ್ತ ಎಂದು ರಾಜ್ಯಪಾಲ ವಾಜುಭಾಯ್ ರೂಢಭಾಯ್ ವಾಲಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಗೆರಿಯಾಟ್ರಿಕ್ಸ್ ಮತ್ತು ಗೆರಾಂಟಾಲಜಿ ಕುರಿತು ಮೂರನೇ ವಿಶ್ವ ಕಾಂಗ್ರೆಸ್ ಹಾಗೂ ಮಹಿಳೆಯರು ಮತ್ತು...

ಕಂಬಳ ನಿಷೇಧ ಆದೇಶ ಕುರಿತು ಕಾನೂನು ತಜ್ನರೊಂದಿಗೆ ಚರ್ಚೆ: ಸಚಿವ ಜಯಚಂದ್ರ

'ಕಂಬಳ' ಕ್ರೀಡೆ ನಿಷೇಧ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಕಾನೂನು ತಜ್ನರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ. ಕಂಬಳ, ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಇದನ್ನು ನಿಷೇಧಿಸಿದರೆ ಸಾವಿರಾರು...

ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ ಸರಿತಾ ದೇವಿಗೆ ನಿಷೇಧ ಸಾಧ್ಯತೆ

ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ್ದ ಭಾರತದ ಬಾಕ್ಸರ್ ಸರಿತಾ ದೇವಿಯವರನ್ನು ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಧೆ(ಎಐಬಿಎ) ಗರಿಷ್ಠ ಶಿಕ್ಷೆ ಅಥವಾ ನಿಷೇಧ ಹೇರುವ ಸಾಧ್ಯತೆ ಇದೆ. ಸದ್ಯ ಎಐಬಿಎ ಸರಿತಾ ದೇವಿಯನ್ನು ತಾತ್ಕಾಲಿಕ ಅಮಾನತು ಮಾಡಿದ್ದು, ಅವರಿಗೆ...

ಶಿಂಧೆ ಪುತ್ರಿ ಪ್ರಣತಿ ಶಿಂಧೆಗೆ ಎಂಐಎಂ ನಿಂದ ನೊಟೀಸ್

'ಎಂಐಎಂ' ಪಕ್ಷದ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕಿ ಪ್ರಣತಿ ಶಿಂಧೆಗೆ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಂ.ಐ.ಎಂ) ನೊಟೀಸ್ ಜಾರಿ ಮಾಡಿದೆ. ಎಂಐಎಂ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಎಂಐಎಂ, ಪ್ರಣತಿ ಶಿಂಧೆ ಕೂಡಲೇ ಕ್ಷಮೆಯಾಚಿಸಬೇಕು, ಇಲ್ಲವಾದರೆ...

ಮಧ್ಯ ಮಾರಾಟ ನಿಷೇಧಿಸಿದ್ದ ಕೇರಳ ಸರ್ಕಾರದ ಕ್ರಮ ಎತ್ತಿ ಹಿಡಿದ ಹೈಕೋರ್ಟ್

'ಮಧ್ಯ ಮಾರಾಟ' ನಿಷೇಧಕ್ಕೆ ಆದೇಶ ಹೊರಡಿಸಿದ್ದ ಕೇರಳ ಸರ್ಕಾರದ ಕ್ರಮವನ್ನು ಕೇರಳ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ಕಾರಣ ಕೇರಳದಲ್ಲಿ ಅ.30ರಿಂದ ತ್ರಿಸ್ಟಾರ್ ಹೊಟೇಲ್ ಗಳಲ್ಲಿ ಮಧ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಲಿದ್ದು ಪಂಚತಾರಾ ಹೊಟೇಲ್...

ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣ ನಿಷೇಧಕ್ಕೆ ಸರ್ಕಾರದ ಚಿಂತನೆ

ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣಕ್ಕೆ ನಿಷೇಧ ಹೇರುವ ಬಗ್ಗೆ ರಾಜ್ಯ ಸರ್ಕಾರ, ಈ ತಿಂಗಳ ಕೊನೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ವಾಣಿಜ್ಯ ಚಿತ್ರಗಳ ಚಿತ್ರೀಕರಣದಿಂದ ಪಾರಂಪರಿಕ ತಾಣಾಗಳಿಗೆ ಹಾನಿಯುಂಟಾಗುತ್ತಿರುವ ಕಾರಣದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ....

ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ: ಪೊಲೀಸ್ ಬಿಗಿ ಬಂದೋಬಸ್ತ್

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೈಕೋರ್ಟ್ ಹಾಗೂ ಪರಪ್ಪನ ಅಗ್ರಹಾರ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೈಕೋರ್ಟ್ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಇಂದು ರಾತ್ರಿವರೆಗೂ...

ಶ್ರೀರಾಮಸೇನೆ ನಿಷೇಧಿಸಿದರೆ ರಕ್ತಪಾತವಾಗುತ್ತದೆ: ಮುತಾಲಿಕ್ ಎಚ್ಚರಿಕೆ

ಶ್ರೀರಾಮಸೇನೆ ಕಾನೂನು ಬದ್ಧ ಸಂಘಟನೆ, ನಿಷೇಧ ಮಾಡಿದರೆ ರಕ್ತಪಾತ ನಡೆಯುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆ ನಿಷೇಧ ಮಾಡಿದರೆ ರಕ್ತಪಾತ ನಡೆಯುತ್ತದೆ. ಇದಕ್ಕೆ ನಾನು ಹೊಣೆಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊಣೆಯೆಂದು ಗುಡುಗಿದರು. ನಾನು ಎಂದಿಗೂ ಭಾಷೆ,...

ಸರ್ಕಾರಿ ಚಾನಲ್ ಗೆ ಸಿಎಂ ಸಮ್ಮತಿ: ರೋಷನ್ ಬೇಗ್

ಸಂಸತ್ ಮಾದರಿಯಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಕಲಾಪಗಳ ನೇರ ಪ್ರಸಾರಕ್ಕೆ ಸರ್ಕಾರದಿಂದಲೇ ಪ್ರತ್ಯೇಕ ಟಿ.ವಿ ಚಾನಲ್ ಆರಂಭವಾಗುವುದು ಖಚಿತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎಂದು ವಾರ್ತಾ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,...

ಸಿಎಂ ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಸವಾಲು

ಸರ್ಕಾರದ ವತಿಯಿಂದ ಹಿಂದೂ ಪರ ಸಂಘಟನೆಗಳನ್ನು ನಿಷೇಧ ಮಾಡುವುದು ಸರಿಯಲ್ಲ, ತಾಕಿತ್ತಿದ್ದರೆ ಮುಸ್ಲೀಂ ಸಂಘಟನೆಗಳನ್ನು ನಿಷೇಧಿಸಲಿ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂ ಪರ ಸಂಘಟನೆಗಳನ್ನು ಕಾನೂನಿನ ಮೂಲಕ ಮಟ್ಟಹಾಕಲು ಮುಖ್ಯಮಂತ್ರಿ...

ಸಂಪುಟ ವಿಸ್ತರಣೆಗೆ ಆಸಕ್ತಿಯಿದೆ: ಸಿದ್ದರಾಮಯ್ಯ

ಸಚಿವ ಸಂಪುಟ ವಿಸ್ತರಣೆಗೆ ತಮಗೆ ಆಸಕ್ತಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತಣೆ ಕುರಿತು ತಮಗೆ ಆಸಕ್ತಿಯಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಂಪುಟ ಪುನರಚನೆ ಬಗ್ಗೆ ಅಭಿಪ್ರಾಯಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ...

ಶ್ರೀರಾಮಸೇನೆ ನಿಷೇಧ ವಿಚಾರ: ಸಿಎಂ ಭೇಟಿಗೆ ಮುತಾಲಿಕ್ ನಿರ್ಧಾರ

ಶ್ರೀರಾಮಸೇನೆಯನ್ನು ರಾಜ್ಯದಲ್ಲಿ ನಿಷೇಧ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಖುದ್ದು ಭೇಟಿಯಾಗಿ ಮಾತನಾಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸೆ.15ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುತ್ತೇನೆ ಎಂದರು. ಶ್ರೀರಾಮಸೇನೆಯ ಸಮಾಜಮುಖಿ ಕೆಲಸಗಳ ಬಗ್ಗೆ ಮುಖ್ಯಮಂತ್ರಿಗಳಿಗೆ...

ಶ್ರೀರಾಮ ಸೇನೆಗೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆದಿದೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳೆಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಸರ್ಕಾರ ಶ್ರೀರಾಮ ಸೇನೆ ಸಂಘಟನೆಗೆ ನಿಷೇಧ ಹೇರಿದೆ ಹಾಗೆಯೇ ರಾಜ್ಯದಲ್ಲೂ 'ಶ್ರೀರಾಮ ಸೇನೆ'ಯನ್ನು ನಿಷೇಧಿಸುವ ಬಗ್ಗೆ...

ಶ್ರೀರಾಮ ಸೇನೆಯನ್ನು ನಿಷೇಧಿಸಲು ಸಾಧ್ಯವಿಲ್ಲ: ಪ್ರಮೋದ್ ಮುತಾಲಿಕ್

ರಾಜ್ಯದಲ್ಲಿ ಶ್ರೀರಾಮ ಸೇನೆಯನ್ನು ನಿಷೇಧಿಸುವ ಬಗ್ಗೆ ಸಿ.ಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್, ರಾಜ್ಯ ಸರ್ಕಾರ ಶ್ರೀರಾಮ ಸೇನೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಿ.ಎಂ ಹೇಳಿಕೆ ಬಗ್ಗೆ ಬೆಂಗಳೂರು ವೇವ್ಸ್ ನೊಂದಿಗೆ...

ಲವ್ ಜಿಹಾದ್ ತಡೆಗೆ ಕ್ರಮ: ಸಾಂಸ್ಕೃತಿಕ ಉತ್ಸವದಲ್ಲಿ ಮುಸ್ಲಿಂ ಯುವಕರ ಪ್ರವೇಶಕ್ಕೆ ನಿಷೇಧ

'ಮಧ್ಯಪ್ರದೇಶ'ದಲ್ಲಿ ನಡೆಯಲಿರುವ ನವರಾತ್ರಿ ಸಾಂಸ್ಕೃತಿಕ ಉತ್ಸವಕ್ಕೆ ಮುಸ್ಲಿಂ ಪುರುಷರ ಪ್ರವೇಶವನ್ನು ನಿಷೇಧಿಸಬೇಕೆಂದು ಮಧ್ಯಪ್ರದೇಶದ ಶಾಸಕಿ ಉಶಾ ಠಾಕೂರ್ ಹೇಳಿದ್ದಾರೆ. ಅಕ್ಟೋಬರ್ ನಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ಗರ್ಬಾ ನೃತ್ಯ ಎಂಬ ಗುಜರಾತಿ ನೃತ್ಸ್ಯೋತ್ಸವ ಆಯೋಜಕರಿಗೆ ಬಿಜೆಪಿ ಶಾಸಕಿ ಉಷಾ...

ಗುಂಪು ಘರ್ಷಣೆ : ಬೆಳಗಾವಿಯಲ್ಲಿ ನಿಷೇಧಾಜ್ನೆ

'ಬೆಳಗಾವಿ'ಯಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದ್ದು ಜಿಲ್ಲೆಯಲ್ಲಿ ಸೆ.11ರಂದು ನಿಷೇಧಾಜ್ನೆ ಜಾರಿ ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ಬಡಿದಾಡಿಕೊಂಡಿದ್ದವು. ಈ ಘಟನೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರು ಇಂದು ಮಧ್ಯರಾತ್ರಿ 12 ಗಂಟೆಯವರೆಗೂ...

ಪಾರ್ಕ್ ಉದ್ಘಾಟನೆ ವಿಚಾರದಲ್ಲಿ ಉಭಯ ಪಕ್ಷಗಳ ಕಾದಾಟ: ನಿಷೇಧಾಜ್ನೆ ಜಾರಿ

ಹೈಟೆಕ್ ಉದ್ಯಾನವನ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಪರೇಟರ್ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಪಾರ್ಕ್ ಸುತ್ತ ನಿಷೇಧಾಜ್ನೆ ಜಾರಿಗೊಳಿಸಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ. ನಾಗರಬಾವಿಯಲ್ಲಿನ ಚಂದ್ರಗಿರಿ ಪಾರ್ಕ್ ಉದ್ಘಾಟನಾ ಸಮಾರಂಭವನ್ನು ಆ.31ರಂದು ಕಾರ್ಪರೇಟರ್ ಉಮೇಶ್...

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ: ಚೀನಾದಲ್ಲಿ ಬುರ್ಖಾ, ದಾಡಿಗೆ ನಿಷೇಧ

'ಚೀನಾ'ಕ್ಕೂ ಭಯೋತ್ಪಾದನೆಯ ಬಿಸಿ ತಟ್ಟಿದ್ದು, ರಂಜಾನ್ ಆಚರಣೆಯನ್ನು ನಿಷೇಧಿಸಿದ್ದ ಚೀನಾ, ಇದೀಗ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಹಾಗೂ ಮುಸ್ಲಿಮರು ದಾಡಿ ಬೆಳೆಸುವುದನ್ನು ನಿಷೇಧಿಸಿದೆ. ಚೀನಾದಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಬುರ್ಖಾ ನಿಷೇಧ ಮಾಡಲಾಗಿದೆ. ಬಸ್ ಹಾಗೂ ಇನ್ನಿತರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited