Untitled Document
Sign Up | Login    
Dynamic website and Portals
  

Related News

ಬಿಜೆಪಿ ಸರ್ಕಾರ ದಲಿತರಿಗಿರುವ ಮೀಸಲಾತಿಯನ್ನು ತೆಗೆಯುವುದಿಲ್ಲಃ ಪ್ರಧಾನಿ ನರೇಂದ್ರ ಮೋದಿ

ದಲಿತರಿಗೆ, ಬುಡಕಟ್ಟು ಜನಾಂಗದವರಿಗೆ ಒದಗಿಸಲಾಗಿರುವ ಮೀಸಲಾತಿಯ ಹಕ್ಕನ್ನು ದೇಶದಲ್ಲಿ ಯಾರು ಕೂಡಾ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ. ಪ್ರತಿಪಕ್ಷದವರು ಈ ರೀತಿ ಸುೞು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು. ಸೋಮವಾರ ಬಿ ಆರ್ ಅಂಬೇಡ್ಕರ್ ಅವರ ಸ್ಮಾರಕಕ್ಕಾಗಿ ನಡೆದ ಶಿಲಾನ್ಯಾಸ...

ರೋಹಿತ್ ಆತ್ಮಹತ್ಯೆ ದಲಿತ, ದಲಿತೇತರರ ವಿಚಾರವಲ್ಲಃ ಸಚಿವೆ ಸ್ಮೃತಿ ಇರಾನಿ

ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಕುರಿತು ಬುಧವಾರ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು, ರೋಹಿತ್ ಆತ್ಮಹತ್ಯೆ ದಲಿತ, ದಲಿತೇರರ ವಿಚಾರವಲ್ಲ. ಕೆಲವರಿಂದ ಈ ವಿಚಾರದಲ್ಲಿ ರಾಜಕೀಯ ಮಾಡುವ ಯತ್ನ...

ದಲಿತ ಉದ್ಯಮಿಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿಃ ನಮ್ಮ ಸರ್ಕಾರ ನಿಮ್ಮ ಸರ್ಕಾರ

ಮಂಗಳವಾರ ದೆಹಲಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯಮಿಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ನಮ್ಮ ಸರ್ಕಾರ ನಿಮ್ಮ ಸರ್ಕಾರ (ಆಪ್ ಕಿ ಸರ್ಕಾರ್),...

ಸಮಸ್ತ ಮುಕ್ರಿ ಸಮಾಜ ರಾಘವೇಶ್ವರ ಶ್ರೀಗಳ ಜೊತೆಗಿದೆ

ಸಮಸ್ತ ಮುಕ್ರಿ ಸಮಾಜ ರಾಘವೇಶ್ವರ ಶ್ರೀಗಳ ಜೊತೆಗಿದ್ದು ಒಗ್ಗಟ್ಟಿನಿಂದ ಷಡ್ಯಂತ್ರವನ್ನು ಎದುರಿಸಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಹಿಂದೂ ಮುಕ್ರಿ ಬೃಹತ್ ಸಮಾವೇಶ ದಲ್ಲಿಂದು ಘೋಷಿಸಲಾಯಿತು. ಕುಮಟಾದ ಹಂದಿಗೋಣ ದಲ್ಲಿಂದು ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಗೋಪೂಜೆ, ಹಾಗೂ ಸಮಾವೇಶವನ್ನು ಭಾರತೀಯ...

ದಲಿತರ ಓಲೈಕೆಗೆ ಕೈ, ಕಮಲ ಕಸರತ್ತು: ಅಂಬೇಡ್ಕರ್ ಜನ್ಮದಿನಕ್ಕೆ ವಿಷೇಷ ಕಾರ್ಯಕ್ರಮ

ಮಹತ್ವದ ಬಿಹಾರ ಹಾಗೂ ಉತ್ತರ ಭಾರತ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ದಲಿತರನ್ನು ಓಲೈಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಬಿಜೆಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದರೆ, ಸಂವಿಧಾನ ಶಿಲ್ಪಿ ಹುಟ್ಟುಹಬ್ಬದ ನೆನಪಲ್ಲಿ...

ಜಾತಿ ಗಣತಿ ಜಾತಿಗಳನ್ನು ಒಗ್ಗೂಡಿಸುವ ಸಾಮಾಜಿಕ ನ್ಯಾಯದ ಕೆಲಸ: ಸಿಎಂ

ಜಾತಿ ಜನಗಣತಿ ವಿರೋಧಿಸುವವರು ಕೊಳಕು ಮನಸ್ಸಿನ ಜಾತಿವಾದಿಗಳು. ವಾಸ್ತವವಾಗಿ ಜಾತಿ ಗಣತಿ ಎಂಬುದು ಜಾತಿಗಳನ್ನು ಒಟ್ಟುಗೂಡಿಸುವ ಸಾಮಾಜಿಕ ನ್ಯಾಯದ ಕೆಲಸವೇ ಹೊರತು ಜಾತಿ ಒಡೆಯುವ ಕೆಲಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಾತಿ...

ಸಿಎಂ ಸ್ಥಾನಕ್ಕೆ ಅದರದ್ದೇ ಆದ ಘನತೆಯಿದೆ: ಹೆಚ್.ಸಿ.ಮಹದೇವಪ್ಪ

ಮುಖ್ಯಮಂತ್ರಿ ಸ್ಥಾನಕ್ಕೆ ಅದರದೇ ಆದ ಘನತೆ ಇರುತ್ತದೆ. ಮುಖ್ಯಮಂತ್ರಿ ಸ್ಥಾನ ಸಂತೆಯಲ್ಲಿ ಬದನೆಕಾಯಿ ಕೊಂಡಂತಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಫಾಸಿಸ್ಟ್ ಮತ್ತು ಕ್ಯಾಸ್ಟಿಸ್ಟ್‌ ಗಳ ಕುತಂತ್ರದಿಂದ ದಲಿತ...

ದಿಗ್ವಿಜಯ್ ಸಿಂಗ್ ದಲಿತ ವಿರೋಧಿ: ದಲಿತ ಸಂಘಟನೆ ಮುಖಂಡರ ಆಕ್ರೋಶ

'ದಲಿತ'ರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಯಾರೂ ಮಾತನಾಡಬಾರದು ಎಂದು ನಿರ್ಬಂಧ ವಿಧಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ವಿರುದ್ಧ ದಲಿತ ಸಂಘಟನೆ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದಿಗ್ವಿಜಯ್ ಸಿಂಗ್ ದಲಿತ ವಿರೋಧಿ ಎಂದು ಆರೋಪಿಸಿದ್ದಾರೆ. ಫೆ.23ರಂದು ಖಾಸಗಿ...

ನನಗೂ ಸಿಎಂ ಆಗುವ ಅರ್ಹತೆಯಿದೆ: ಪರಮೇಶ್ವರ್

ನನಗೂ ರಾಜ್ಯದ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಚುನಾವಣೆಗೂ ಮುನ್ನ ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಆಗ್ರಹದ ವಿಚಾರವಾಗಿ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ...

ವಿಶ್ವಾಸಮತ ಯಾಚನೆ: ಬಿಹಾರ ಸಿ.ಎಂ ಮಾಂಝಿ ಗೆ ಬಿಜೆಪಿ ಬೆಂಬಲ ಸಾಧ್ಯತೆ

ಫೆ.20ರಂದು ಬಿಹಾರದ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಗೆ ಬೆಂಬಲ ನೀಡಲು ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ. ಜಿತನ್ ರಾಮ್ ಮಾಂಝಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೂ ಅಲ್ಲದೇ, ಸಿ.ಎಂ ಪದವಿಯಿಂದ ಪದಚ್ಯುತಿಗೊಳಿಸುವ ಮೂಲಕ ಮಹಾದಲಿತರಿಗೆ ಅಪಮಾನ...

ದಲಿತರನ್ನು ಸಿಎಂ ಮಾಡಲು ಹೈಕಮಾಂಡ್ ಮೇಲೆ ಒತ್ತಡಕ್ಕೆ ನಿರ್ಧಾರ

ರಾಜ್ಯದಲ್ಲಿ ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಲು ದಲಿತ ಮುಖಂಡರು ನಿರ್ಧರಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 15ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಸಭೆ ಸೇರಿದ್ದು,...

ದಲಿತರಿಗೆಸಿ.ಎಂ ಸ್ಥಾನ ನೀಡದ ಕಾಂಗ್ರೆಸ್ ಅಧಿಕಾರದಲ್ಲೇಕಿರಬೇಕು: ವೆಂಕಟೇಶ್ ಸ್ವಾಮಿ

'ದಲಿತ'ರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಷಯ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ದಲಿತರನ್ನು ಮುಖ್ಯಮಂತ್ರಿ ಮಾಡಲು ದಲಿತ ಸಂಘಟನೆಗಳು ಪಣತೊಟ್ಟಿವೆ. ಈ ಬಗ್ಗೆ ಖಾಸಗಿ ಹೊಟೇಲ್ ನಲ್ಲಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ...

ಸಿ.ಎಂ ಸಿದ್ದರಾಮಯ್ಯ ದಲಿತರ ಬಗ್ಗೆ ಕಾಳಜಿ ಹೊಂದಿದ್ದಾರೆ: ಮೀರಾ ಕುಮಾರ್

ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವುದರ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕಿ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರಿ ಪ್ರತಿಕ್ರಿಯಿಸಿದ್ದು ದಲಿತರನ್ನು ಮುಖ್ಯಮಂತ್ರಿ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ. ಫೆ.16ರಂದು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,...

2018ರ ಚುನಾವಣೆ ಸ್ಪರ್ಧಿಸುವೆ: ಸಿದ್ದರಾಮಯ್ಯ

ಚುನಾವಣಾ ರಾಜಕಾರಣದಿಂದ ಬೇಸತ್ತು ’ಇದು ನನ್ನ ಕಟ್ಟಕಡೆಯ ಹೋರಾಟ ಇನ್ನು ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಯೂ ಟರ್ನ್ ತೆಗೆದುಕೊಂಡಿದ್ದು, 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಹಠಾತ್‌ ನಿಲುವು...

ಬಿಜೆಪಿ ಆಡಳಿತದಲ್ಲಿದ್ದಿದ್ದರೆ ರಾಜ್ಯದ ಜನತೆ ಕೈಗೆ ತಟ್ಟೆ ಕೊಡುತ್ತಿದ್ದರು: ಖಾದರ್

ರಾಜ್ಯದಲ್ಲಿ ಇನ್ನೂ ಬಿಜೆಪಿ ಆಡಳಿತ ನಡೆಸುತ್ತಿದ್ದರೆ ಜನತೆಯ ಕೈಗೆ ತಟ್ಟೆಕೊಟ್ಟು ಭಿಕ್ಷೆ ಬೇಡಿಸುತ್ತಿದ್ದರು ಎಂದು ಬಾರೋಗ್ಯ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ತಾವು ಸೀರೆ, ಸೈಕಲ್ ಕೊಟ್ಟೆವು ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರು ಇನ್ನೂ...

ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ: ನಾಲ್ವರು ಉಗ್ರರ ಬಂಧನ-ಸಿಎಂ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಬಂಧಿತ ಉಗ್ರರ ತೀವ್ರ ವಿಚಾರಣೆ ನಡೆಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು. ಉಗ್ರರ ಬಗ್ಗೆ ಮೃದುಧೋರಣೆ ತಲೆಯುವ ಪ್ರಶ್ನೆಯೇ ಇಲ್ಲ...

ರಾವಣ,ಮಂಡೋದರಿ ದಲಿತರು: ಸುಬ್ರಮಣಿಯನ್‌ ಸ್ವಾಮಿ

ರಾಮಾಯಣದ ರಾವಣ ಮತ್ತು ಆತನ ಪತ್ನಿ ಮಂಡೋದರಿ ಉತ್ತರಪ್ರದೇಶ ಮೂಲದ ದಲಿತರು ಎನ್ನುವ ಮೂಲಕ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ವಿವಾದಕ್ಕೆ ಕಾರಣರಾಗಿದ್ದಾರೆ. ಬನಾರಸ್‌ ಹಿಂದು ವಿವಿಯಲ್ಲಿ ನಡೆದ 'ಐ ಆಂಡ್‌ ಮೈ ಇಂಡಿಯಾ' ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾವಣ ಘಾಜಿಯಾಬಾದ್‌...

ಬಿಹಾರದಲ್ಲಿ 40 ದಲಿತ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ

'ಘರ್ ವಾಪಸಿ' ಕಾರ್ಯಕ್ರಮ ನಡೆದಾಗಿನಿಂದಲೂ ದೇಶದಲ್ಲಿ ಮತಾಂತರ ರಾಜಾರೋಷವಾಗಿ ನಡೆಯುತ್ತಿದೆ. ಬಿಹಾರದ ಬೋಧ್ ಗಯಾದಲ್ಲಿ ಸುಮಾರು 40 ದಲಿತ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಡತನದಿಂದ ಹೊರಬರಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ದಲಿತ ಕುಟುಂಬಗಳು ತಿಳಿಸಿವೆ. ಮತಾಂತರ ಕುರಿತು ಬಿಹಾರಿ...

81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದಲಿಂಗಯ್ಯ ಅಧ್ಯಕ್ಷತೆ ಸಾಧ್ಯತೆ

'ಶ್ರವಣಬೆಳಗೊಳ'ದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದಲಿತ ಕವಿ ಸಿದ್ದಲಿಂಗಯ್ಯ ಆಯ್ಕೆಯಾಗುವ ಸಾಧ್ಯತೆ ಇದೆ. 2015ರ ಫೆಬ್ರವರಿ 1ರಿಂದ 3ವರೆಗೆ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಅವರನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲಾ ಕನ್ನಡ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited