Untitled Document
Sign Up | Login    
Dynamic website and Portals
  

Related News

ಜಾರ್ಖಂಡ್ ನಲ್ಲಿ ಕಾಲ್ತುಳಿತಕ್ಕೆ 11 ಸಾವು, ಸುಮಾರು 50 ಜನರಿಗೆ ಗಾಯ

ಸೋಮವಾರ ಬೆಳಗಿನ ಜಾವ+- ಜಾರ್ಖಂಡ್ ನ ಡಿಯೋಘರ್ ಪಟ್ಟಣದ ಬೈದ್ಯನಾಥ್ ಧಾಮ್ ದೇವಾಲಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು ಸುಮಾರು 50 ಜನರಿಗೆ ಗಾಯಗಳಾಗಿವೆ. ಯಾತ್ರಾರ್ಥಿಗಳು ದೇವಸ್ಥಾನದ ಹೊರಗೆ ಬಾಗಿಲು ತೆರೆಯಲು ಕಾಯುತ್ತಿದ್ದರು. ಯಾತ್ರಾರ್ಥಿಗಳಿಗೆ ದರ್ಶನಕ್ಕಾಗಿ ಬೆಳಗ್ಗೆ 4:30 ಕ್ಕೆ ಬಾಗಿಲು...

ಜಾರ್ಖಂಡ್ ನಲ್ಲಿ ಎನ್ ಕೌಂಟರ್: 12 ನಕ್ಸಲರು ಬಲಿ

ಪೊಲೀಸರ ಎನ್ ಕೌಂಟರ್ ಗೆ ಸುಮಾರು 12 ಮಂದಿ ನಕ್ಸಲೀಯರು ಬಲಿಯಾಗಿರುವ ಘಟನೆ ಜಾರ್ಖಂಡ್ ನ ಪಾಲಾಮೌ ಜಿಲ್ಲೆಯಲ್ಲಿ ನಡೆದಿದೆ. ರಾಂಚಿಯಿಂದ ಸುಮಾರು 140 ಕಿ ಮೀ ದೂರದ ಬಾಕೋರಿಯಾ ಗ್ರಾಮದಲ್ಲಿ ಮಂಗಳವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, 12...

ನಾಲ್ಕು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ, ಇಬ್ಬರ ವರ್ಗ

4 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಮತ್ತು ಇಬ್ಬರು ರಾಜ್ಯಪಾಲರನ್ನು ವರ್ಗ ಮಾಡಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಆದೇಶ ಹೊರಡಿಸಿದ್ದಾರೆ. ಹೊಸ ಆದೇಶದ ಅನ್ವಯ, ದ್ರೌಪದಿ ಮುರ್ಮು ಅವರನ್ನು ಜಾರ್ಖಂಡ್‌ ಗೆ, ತಥಾಗತ ರಾಯ್‌ ಅವರನ್ನು ತ್ರಿಪುರಾಕ್ಕೆ, ಜೆ.ಪಿ.ರಖೊವಾ ಅವರನ್ನು...

ರೈತರ ಆತ್ಮಹತ್ಯೆ ಹೆಚ್ಚಳ: ಅಚ್ಚೇ ದಿನ್ ನ್ನು ಅಣಕಿಸಿದ ಇಂಡಿಯಾ ಟುಡೆ ವರದಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಶೇ.26ರಷ್ಟು ಹೆಚ್ಚಾಗಿದೆ ಎಂದು ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತೆಲಂಗಾಣ, ಜಾರ್ಖಂಡ್ ನಂತರದ ಸ್ಥಾನ...

ಜಾರ್ಖಂಡ್‌ನ‌ಲ್ಲಿ 6 ಜೆವಿಎಂ ಶಾಸಕರು ಬಿಜೆಪಿಗೆ ಸೇರ್ಪಡೆ

ಸ್ಪಷ್ಟ ಬಹುಮತವಿರದೆ ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌ನ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿದ್ದ ಬಿಜೆಪಿ ಜಾರ್ಖಂಡ್‌ನ‌ಲ್ಲಿ ಆಪರೇಷನ್‌ ಕಮಲದ ಮೂಲಕ ಬಹುಮತ ಪಡೆದುಕೊಂಡಿದೆ. ಜಾರ್ಖಂಡ್‌ ವಿಕಾಸ್‌ ಮೋರ್ಚಾ(ಪ್ರಜಾತಾಂತ್ರಿಕ್‌ )ದ 6 ಮಂದಿ ಶಾಸಕರು ಆಡಳಿತ ಪಕ್ಷವಾದ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆಯಾಗುವ ಮುನ್ನ...

ಜಾರ್ಖಂಡ್‌: ನೂತನ ಸಿಎಂ ಆಗಿ ರಘುಬರ್ ದಾಸ್ ಪ್ರಮಾಣ ವಚನ

ಜಾರ್ಖಂಡ್‌ನಲ್ಲಿ ಪ್ರಪ್ರಥಮ ಬಾರಿಗೆ ಜನಾಂಗೇತರ ಮುಖ್ಯಮಂತ್ರಿಯಾಗಿ ಬಿಜೆಪಿಯ ರಘುಬರ್ ದಾಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಂಚಿ ನಗರದ ಫುಟ್ಪಾಲ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸೈಯದ್ ಅಹಮ್ಮದ್, ಜಾರ್ಖಂಡ್‌ನ 10ನೇ ಮುಖ್ಯಮಂತ್ರಿಯಾಗಿ ರಘುಬರ್ ದಾಸ್‌ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ ನಾಲ್ವರು...

ಜಾರ್ಖಂಡ್ ಬಂದ್ ಗೆ ಬುಡಕಟ್ಟು ಸಂಘಟನೆಗಳ ಕರೆ

'ಜಾರ್ಖಂಡ್’ ನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಸುಮಾರು 25ಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನಾ ನಿರತ ಬುಡಕಟ್ಟು ಸಂಘಟನೆಗಳು 2 ದಿನ ಜಾರ್ಖಂಡ್ ಬಂದ್ ಗೆ ಕರೆ ನೀಡಿದ್ದು, ಬಿಜೆಪಿ...

ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ರಘುಬರ್ ದಾಸ್ ಆಯ್ಕೆ ಬಹುತೇಕ ಖಚಿತ

'ಜಾರ್ಖಂಡ್' ನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ರಘುಬರ್ ದಾಸ್ ಆಯ್ಕೆ ಬಹುತೇಕ ಖಚಿತವಾಗಿದೆ. ಬಿಜೆಪಿ ಶಾಸಕಾಂಗ ನಾಯಕನನ್ನಾಗಿ ರಘುಬರ್ ದಾಸ್ ಆಯ್ಕೆ ನಿಚ್ಚಳವಾಗಿದ್ದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೇಯೂ ಹೊರಬೀಳಲಿದೆ. ಬಿಜೆಪಿಗೆ ಜಾರ್ಖಂಡ್...

ಜಾರ್ಖಂಡ್ ಮುಖ್ಯಮಂತ್ರಿಯಾಗಿ ರಘುಬರ್ ದಾಸ್ ನೇಮಕಕ್ಕೆ ನಿತೀಶ್ ಕುಮಾರ್ ಆಕ್ರೋಶ

'ಬಿಹಾರ'ದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾರ್ಖಂಡ್ ನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಕ್ರಮಕ್ಕೆ ನಿತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರದ ರಘುಬರ್ ದಾಸ್...

ದೆಹಲಿಯಲ್ಲಿ ಬಿಜೆಪಿಗೆ ಸೂಕ್ತ ನಾಯಕತ್ವ ಇಲ್ಲ: ಅರವಿಂದ್ ಕೇಜ್ರಿವಾಲ್

'ಜಮ್ಮು-ಕಾಶ್ಮೀರ', ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದೆಹಲಿ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿ ಬಿಜೆಪಿಯಲ್ಲಿ ಸೂಕ್ತ ನಾಯಕತ್ವ, ಅಜೆಂಡಾ ಇಲ್ಲ, ಬಿಜೆಪಿಯದ್ದು...

ಜಾರ್ಖಂಡ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ, ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ

'ಜಾರ್ಖಂಡ್' ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಪ್ರಕಟವಾಗಿದ್ದು ಜಾರ್ಖಂಡ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದ್ದು ಸರ್ಕಾರ ರಚಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಜಮ್ಮು-ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪಕ್ಷಕ್ಕೂ ಬಹುಮತ ದೊರೆತಿಲ್ಲ....

ಚುನಾವಣೆಗಳಲ್ಲಿ ಸೋತರೂ ಕಾಂಗ್ರೆಸ್ ಗೆ ಪುಟಿದೇಳುವ ಸಾಮರ್ಥ್ಯವಿದೆ:ಸಿದ್ದರಾಮಯ್ಯ

ಜಮ್ಮು-ಕಾಶ್ಮೀರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಎರಡೂ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯುಂಟಾಗಿರುವುದು ನಿಜ, ಆದರೆ ನಾವು ಪಕ್ಷವನ್ನು ಸಂಘಟಿಸಿ ಮತ್ತೊಮ್ಮೆ ಎಲ್ಲಾ ರಾಜ್ಯಗಳಲ್ಲೂ ಅಧಿಕಾಕ್ಕೆ ಬರಲಿದ್ದೇವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

ಜಮ್ಮು-ಕಾಶ್ಮೀರ, ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಬಹಿರಂಗ

'ಜಮ್ಮು-ಕಾಶ್ಮೀರ' ಹಾಗೂ ಜಾರ್ಖಂಡ್ ನಲ್ಲಿ ಡಿ.20ರಂದು ಕೊನೆಯ ಹಂತದ ಮತದಾನ ಮುಕ್ತಾಯಗೊಂಡಿದ್ದು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಸಿ-ಓಟರ್ ಸಮೀಕ್ಷೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಜಾರ್ಖಂಡ್ ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸ್ಪಷ್ಟ ಬಹುಮತ ಗಳಿಸಲಿದೆ. ಸಿ-ವೋಟರ್ ಸಂಸ್ಥೆ ನಡೆಸಿದ ಚುನಾವಣೋತ್ತರ...

ಬಿಜೆಪಿಗೆ ಮತ ನೀಡಿದರೆ ಭೂಮಿ ಕಿತ್ತುಕೊಂಡು ಕೈಗೆ ಪೊರಕೆ ನೀಡುತ್ತಾರೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೆ ದಿನ್ ಘೋಷ ವಾಕ್ಯದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಮೋದಿ ಭರವಸೆಯ ಒಳ್ಳೆಯ ದಿನಗಳು ಯಾವಗ ಬರಲಿವೆ ಎಂದು ಪ್ರಶ್ನಿಸಿದ್ದಾರೆ. ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ...

ಕಾಶ್ಮೀರ, ಜಾರ್ಖಂಡ್‌: 4ನೇ ಹಂತದ ಮತದಾನ

ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್‌ ವಿಧಾನಸಭೆಗೆ ನಡೆಯುತ್ತಿರುವ ಐದು ಹಂತದ ಚುನಾವಣೆಗಳ ಪೈಕಿ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ. ಜಮ್ಮು-ಕಾಶ್ಮೀರದಲ್ಲಿ 18 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಹಾಲಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್‌...

ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ನಲ್ಲಿ 3ನೇ ಹಂತದ ಮತದಾನ

ಜಮ್ಮು-ಕಾಶ್ಮೀರದ 16 ಕ್ಷೇತ್ರಗಳಲ್ಲಿ ಮತ್ತು ಜಾರ್ಖಂಡ್‌ನ‌ 17ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಶಾಂತಿಯುತವಾಗಿ ಬಿರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 4 ಗಂಟೆಯ ವರೆಗೆ ನಡೆಯಲಿದೆ. ಜಮ್ಮು-ಕಾಶ್ಮೀರದಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬರುತ್ತಿದ್ದು, ಹೆಚ್ಚಿನ ಮತಗಟ್ಟೆಗಳಲ್ಲಿ ಉದ್ದನೆಯ ಸಾಲುಗಳು...

ಬಿಜೆಪಿಗೆ ಮತ ನೀಡಿ, ಕೆಲಸಗಳನ್ನು ಪೂರ್ಣಗೊಳಿಸುವಂತೆ ಕಟ್ಟಾಜ್ಞೆ ಮಾಡಿ: ಮೋದಿ

ದೆಹಲಿಯಲ್ಲಿರುವ ತಮ್ಮ ನೇತೃತ್ವದ ಎನ್.ಡಿ.ಎ ಸರ್ಕಾರ ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡುವ ಸರ್ಕಾರ, ಕಳೆದ 6ತಿಂಗಳಿನಿಂದ ಎನ್.ಡಿ.ಎ ಸರ್ಕಾರ ಜನ್-ಧನ್ ಯೋಜನೆ ಸೇರಿದಂತೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಜಾರ್ಖಂಡ್‌ ನಲ್ಲಿ ಡಿ.9ರಂದು...

ಜಾರ್ಖಂಡ್ ನಲ್ಲಿ ಎನ್ ಕೌಂಟರ್: 5 ಖೈದಿಗಳ ಸಾವು

'ಜಾರ್ಖಂಡ್'ನ ಚೈಬಾಸಾ ಜೈಲಿನಲ್ಲಿ 5 ಖೈದಿಗಳನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಎನ್ ಕೌಂಟರ್ ಮೂಲಕ ಖೈದಿಗಳನ್ನು ಹತ್ಯೆ ಮಾಡಿದ್ದಾರೆ. ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದ್ದ ಖೈದಿಗಳ ವಿಚಾರಣೆ ಮುಗಿಸಿ ಕೋರ್ಟ್ ನಿಂದ ಜೈಲಿಗೆ ಕರೆ...

ಜಾರ್ಖಂಡ್ ನ ಗಣಿ ಇಲಾಖೆಯ ಅಧಿಕಾರಿಗಳು ನಾಪತ್ತೆ: ನಕ್ಸಲರು ಅಪಹರಿಸಿರುವ ಶಂಕೆ

ಜಾರ್ಖಂಡ್ ನ ಸಿಂಗಭೂಮ್ ಜಿಲ್ಲೆಯ ನಕ್ಸಲರು ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಸಿಂಗಭೂಮ್ ಜಿಲ್ಲೆಯ ಎಸ್.ಪಿ ನರೇಂದ್ರ ಕುಮಾರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಡಿ.4ರ ಸಂಜೆ ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಅಪಹರಣ ಮಾಡಿದ್ದಾರೆ...

ವಂಶಪಾರಂಪರ್ಯ ರಾಜಕಾರಣಕ್ಕೆ ತೆರೆಯೆಳೆಯಿರಿ: ಪ್ರಧಾನಿ ಮೋದಿ

ದೇಶದ ಜನತೆ ವಂಶಪಾರಂಪರ್ಯ ರಾಜಕಾರಣದಿಂದ ರೋಸಿ ಹೋಗಿದ್ದಾರೆ. ಆದ್ದರಿಂದ ಇಂಥಾ ರಾಜಕಾರಣಕ್ಕೆ ತೆರೆ ಎಳೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಾರ್ಖಂಡ್‌ನಲ್ಲಿ ಡಿಸೆಂಬರ್ 2ರಂದು ನಡೆಯಲಿರುವ ಎರಡನೇ ಹಂತದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಂಶಾಡಳಿತದಿಂದ...

ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಮತದಾನ ಆರಂಭ

ಜಾರ್ಖಂಡ್‌ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಅತ್ಯಂತ ಕುತೂಹಲ ಕೆರಳಿಸಿರುವ ಈ ಚುನಾವಣೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಸೋನಿಯಾ ಗಾಂಧಿಯವರ ಕಾಂಗ್ರೆಸ್‌ ಮತ್ತು ಪ್ರಬಲ ಸ್ಥಳೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಎನ್ನಿಸಿಕೊಂಡಿದೆ. ಜಮ್ಮು- ಕಾಶ್ಮೀರದ ಕಾರ್ಗಿಲ್‌, ಲಡಾಖ್‌...

ಜಾರ್ಖಂಡ್ ನ ಎ.ಜೆ.ಎಸ್.ಯುಮ್ ಎಲ್.ಜೆ.ಪಿ ಎನ್.ಡಿ.ಎ ಮೈತ್ರಿಕೂಟದಲ್ಲೇ ಉಳಿಯಲಿವೆ:ಬಿಜೆಪಿ

'ಜಾರ್ಖಂಡ್' ನ ಪ್ರಾದೇಶಿಕ ಪಕ್ಷಗಳಾದ ಆಲ್ ಜಾರ್ಕಂಡ್ ಸ್ಟೂಡೆಂಟ್ಸ್ ಯೂನಿಯನ್ಸ್(ಎ.ಜೆ.ಎಸ್.ಯು) ಹಾಗೂ ಲೋಕ ಜನಶಕ್ತಿ ಎನ್.ಡಿ.ಎ ಮಿತ್ರ ಪಕ್ಷಗಳಾಗಿ ಮುಂದುವರೆಯಲಿವೆ ಎಂದು ಬಿಜೆಪಿ ತಿಳಿಸಿದೆ. ನ.12ರಂದು ಜಾರ್ಖಂಡ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್,...

ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೊಮ್ಮೆ ಭಾರೀ ಇಳಿಕೆ

ವಾಹನ ಸವಾರರಿಗೆ ಮತ್ತೊಮ್ಮೆ ಸಂತಸದ ಸುದ್ದಿ! ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಭಾರೀ ಇಳಿಕೆಯಾಗಿದೆ. ಇಳಿಕೆಯಾಗಿರುವ ದರ ನಿರೀಕ್ಷೆಗೂ ಮೀರಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 2.41 ರೂ ಇಳಿಕೆಯಾಗಿದ್ದರೆ, ಡೀಸೆಲ್ ದರ 2.25 ರೂಪಾಯಿ ಇಳಿಕೆಯಾಗಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ...

ಪೆಟ್ರೋಲ್,ಡಿಸೇಲ್ ದರ ಮತ್ತೊಮ್ಮೆ ಇಳಿಕೆ ಸಾಧ್ಯತೆ

ಪೆಟ್ರೋಲ್, ಡಿಸೇಲ್ ದರ ಮತ್ತೊಮ್ಮೆ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರತೀ ಲೀಟರ್ ಪೆಟ್ರೋಲ್ ದರಕ್ಕೆ 1.5೦-2ರೂಪಾಯಿ, ಡಿಸೇಲ್ ದರದಲ್ಲಿ 1.25-1.50 ರೂಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿದಿರುವುದರಿಂದ ಭಾರತದಲ್ಲಿ ದರ ಇಳಿಕೆಯಾಗುತ್ತಿದ್ದು ಶುಕ್ರವಾರ ಮಧ್ಯರಾತ್ರಿಯಿಂದಲೇ...

ಜಾರ್ಖಂಡ್ ನಲ್ಲಿ ಸ್ವತಂತ್ರ ಸ್ಪರ್ಧೆಗೆ ಬಿಜೆಪಿ ನಿರ್ಧಾರ

ಜಾರ್ಖಂಡ್ ನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿಯಿಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಘುಬರ್ ದಾಸ್, ನಮ್ಮ...

ಜಮ್ಮು-ಕಾಶ್ಮೀರ,ಜಾರ್ಖಂಡ್ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಮಾಡಲಿರುವ ಆಯೋಗ

'ಕೇಂದ್ರ ಚುನಾವಣಾ ಆಯೋಗ' ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಇಂದು ಚುನಾವಣಾ ದಿನಾಂಕ ಘೋಷಿಸಲಿದೆ. ಸಂಜೆ 4 ಗಂಟೆ ವೇಳೆಗೆ ಪತ್ರಿಕಾಗೋಷ್ಠಿ ಕರೆದಿರುವ ಚುನಾವಣಾ ಆಯೋಗ, ಉಭಯ ರಾಜ್ಯಗಳಿಗೂ ನಡೆಯಲಿರುವ ಚುನಾವಣೆಯ ದಿನಾಂಕವನ್ನು ಘೋಷಿಸಲಿದೆ. ಜನವರಿ 19ಕ್ಕೆ ಜಮ್ಮು-ಕಾಶ್ಮೀರ ವಿಧಾನಸಭೆ...

ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್‌ ಚುನಾವಣಾ ದಿನಾಂಕ ಪ್ರಕಟ

ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್‌ ರಾಜ್ಯಗಳಲ್ಲಿ 5 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ವಿ.ಎಸ್.ಸಂಪತ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿ.ಎಸ್.ಸಂಪತ್, ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದರು. ಉಭಯ ರಾಜ್ಯಗಳಲ್ಲಿ ಇಂದಿನಿಂದಲೇ...

ದೇಶ ಮುಂದುವರೆಯುವುದೆಂದರೆ ರಾಜ್ಯಗಳು ಮುಂದುವರೆಯುವುದು- ಪ್ರಧಾನಿ ನರೇಂದ್ರ ಮೋದಿ

ದೇಶ ಮುಂದುವರಿಯುವುದೆಂದರೆ ರಾಜ್ಯಗಳು ಮುಂದುವರಿಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾರ್ಖಂಡ್ ನಲ್ಲಿ ವಿದ್ಯುತ್ ಗ್ರಿಡ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಭಾಗ ದುರ್ಬಲವಾಗಿರಬಾರದು, ಎಲ್ಲಾ ರಾಜ್ಯಗಳೂ ಅಭಿವೃದ್ಧಿ ಹೊಂದಬೇಕು, ಎಲ್ಲಾ ರಾಜ್ಯಗಳು ಅಭಿವೃದ್ಧಿ...

ಸರ್ಕಾರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದಲೇ ಗೇಲಿಗೊಳಗಾದ ಜಾರ್ಖಂಡ್ ಸಿ.ಎಂ

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೂ ವ್ಯಾಪಿಸಿದ್ದು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮುಖ್ಯಮಂತ್ರಿಗಳನ್ನು ಜನತೆ ಸಾರ್ವಜನಿಕವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಹರ್ಯಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಅಲ್ಲಿನ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌...

ವೇದಿಕೆ ಮೇಲಿಂದ ಕುಸಿದುಬಿದ್ದ ಜಾರ್ಖಂಡ್ ರಾಜ್ಯಪಾಲ

'ಸ್ವಾತಂತ್ರ್ಯ ದಿನಾಚರಣೆ' ಅಂಗವಾಗಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಜಾರ್ಖಂಡ್ ನ ರಾಜ್ಯಪಾಲರು ಅಸ್ವಸ್ಥರಾದ ಘಟನೆ ನಡೆದಿದೆ. ಧ್ವಜಾರೋಹಣ ನೆರವೇರಿಸಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥರಾಗಿ ಕುಸಿದುಬಿದ್ದ ರಾಜ್ಯಪಾಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯಪಾಲ ಸಯೀದ್ ಅಹಮದ್ ಅವರಿಗೆ ಯಾವುದೇ ಅಪಾಯವಿಲ್ಲ ಎಂದು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited