Untitled Document
Sign Up | Login    
Dynamic website and Portals
  

Related News

ಪ್ರಧಾನಿ ಮೋದಿ ನಿರ್ಧಾರಗಳು ಬುಲೆಟ್ ರೈಲಿನಷ್ಟು ವೇಗ ಮತ್ತು ವಿಶ್ವಾಸಾರ್ಹಃ ಜಪಾನ್ ಪ್ರಧಾನಿ ಶಿಂಜೋ ಅಬೆ

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಶನಿವಾರ ಬಿಜಿನೆಸ್ ಲೀಡರ್ಸ್ ಫೊರಮ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಸಿಂಜೋ ಅಬೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ...

ಭಾನುವಾರ ಕೌಲಲಾಂಪುರದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಮೂರು ದಿನಗಳ ಮಲೇಷ್ಯಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾನುವಾರ ಕೌಲಲಾಂಪುರದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಶನಿವಾರ ಪ್ರಧಾನಿ ಮೋದಿ ಅವರು ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದರು....

2024ರ ಒಲಂಪಿಕ್ಸ್ ಕ್ರೀಡಾಕೂಟ: ಆಥಿತ್ಯ ವಹಿಸಲು ಉತ್ಸುಕವಾಗಿರುವ ಮೋದಿ ಸರ್ಕಾರ

2024ರ ಒಲಂಪಿಕ್ಸ್ ಕ್ರೀಡಾಕೂಟದ ಆಥಿತ್ಯ ವಹಿಸಲು ಭಾರತ ಚಿಂತನೆ ನಡೆಸುತ್ತಿದೆ. 2024ರ ಒಲಂಪಿಕ್ಸ್ ಆಯೋಜನೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ, ಅಹಮದಾಬಾದ್ ನಲ್ಲಿ ಒಲಂಪಿಕ್ಸ್ ಕ್ರಿಡಾಕೂಟ ನಡೆಸಲು ಉತ್ಸುಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅಂತರರಾಷ್ಟ್ರೀಯ ಒಲಂಪಿಕ್‌ ಸಮಿತಿ...

ಶ್ರೀಲಂಕಾ ಸಂಸತ್‌ನಲ್ಲಿ ಮೋದಿ ಭಾಷಣ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಸಂಸತ್ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ವಿದೇಶಾಂಗ ಇಲಾಖೆ ಕಚೇರಿ ಮೂಲಗಳು ಮಾಹಿತಿ ನೀಡಿದೆ. ಮಾ.12ರಿಂದ 15ರ ಒಳಗಿನ ಅವಧಿಯಲ್ಲಿ ಪ್ರಧಾನಿ ಮೋದಿ ಭಾಷಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಲಿದೆ. ಶ್ರೀಲಂಕಾದ ಪ್ರಮುಖ ನಗರಗಳಾದ ಅನುರಾಧಪುರ, ಕ್ಯಾಂಡೀಸ್,...

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ: ಚೀನಾದಿಂದ ಬೆಂಬಲ

ಅಚ್ಚರಿಯ ಬೆಳವಣಿಗೆಯಲ್ಲಿ, ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯ ಸ್ಥಾನ ನೀಡಲು ಚೀನಾ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕಾದ ನಂತರ ಚೀನಾದ ಬೆಂಬಲ ಭಾರತಕ್ಕೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಸದ್ಯದಲ್ಲೇ ಚೀನಾ ಪ್ರವಾಸ ಕೈಗೊಳ್ಳಲಿದ್ದು ಇದಕ್ಕೂ ಮುನ್ನ ಚೀನಾ ಭಾರತಕ್ಕೆ...

ಜಗತ್ತಿನ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಪೈಕಿ ಭಾರತಕ್ಕೆ 2ನೇ ಸ್ಥಾನ

ಜಗತ್ತಿನ ಎರಡನೇ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಸ್ವಿಸ್ ನ ಸಾರ್ವಜನಿಕ ಸಂಪರ್ಕಗಳ ಸಂಸ್ಥೆ ಎಡೆಲ್ಮ್ಯಾನ್ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ವಿವಿಧ ದೇಶಗಳ ವ್ಯಾಪಾರ, ಮಾಧ್ಯಮ ಮತ್ತು ಸರಕಾರೇತರ ಸಂಸ್ಥೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ...

ಯುವಕರ ಸಂಖ್ಯೆ ಹೆಚ್ಚಿಸಲು ಹೆಚ್ಚೆಚ್ಚು ಮಕ್ಕಳನ್ನು ಹೆರಿ: ಚಂದ್ರಬಾಬುನಾಯ್ಡು

'ಆಂಧ್ರಪ್ರದೇಶ' ಹೆಚ್ಚು ಯುವಕರನ್ನು ಹೊಂದಲು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, , ಜಪಾನ್ ದೇಶದಲ್ಲಿ ಯುವಕರಿಗಿಂತ ಮುದುಕರ ಪ್ರಮಾಣವೇ ಹೆಚ್ಚಾಗುತ್ತಿರುವಂತೆಯೇ ಆಂಧ್ರಪ್ರದೇಶದಲ್ಲೂ ಯುವಕರಿಗಿಂತ...

ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ಹೇಳಿಕೆಗೆ ಚೀನಾ ಆಕ್ರೋಶ

ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ವಿದೇಶಾಂಗ ಸಚಿವರು ನೀಡಿದ್ದ ಹೇಳಿಕೆ ಬಗ್ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವರ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದೆ. ಭಾರತ ಪ್ರವಾಸ ಕೈಗೊಂಡಿದ್ದ ಜಪಾನ್ ವಿದೇಶಾಂಗ ಸಚಿವ ಫುಮಿಯೊ ಕಿಶಿದ, ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಹೇಳಿದ್ದರು....

ಜಗತ್ತಿನ 30 ಉತ್ತಮ ಆಡಳಿತಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ 2ನೇ ಸ್ಥಾನ

ಉತ್ತಮ ಆಡಳಿತ(ಪ್ರದರ್ಶನ) ನೀಡುತ್ತಿರುವ ವಿಶ್ವದ 30 ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಡೆಸಿರುವ ಸರ್ವೆಯ ಪ್ರಕಾರ ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಉತ್ತಮ ಆಡಳಿತ(ಪ್ರದರ್ಶನ) ನೀಡುವವರ...

ಜಾತ್ಯಾತಿತ ಭಾರತದಲ್ಲಿ ಭಗವದ್ಗೀತೆ ರಾಷ್ಟ್ರೀಯ ಗ್ರಂಥವಾಗಬಾರದು: ಕರುಣಾನಿಧಿ

'ಭಗವದ್ಗೀತೆ'ಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕೆಂಬ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರಸ್ತಾವನೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ಭಾರತದಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬಾರದು ಎಂದು ಕರುಣಾನಿಧಿ ಹೇಳಿದ್ದಾರೆ. ಸಂವಿಧಾನದಲ್ಲಿ ಭಾರತ...

2015ರ ವೈಬ್ರೆಂಟ್ ಗುಜರಾತ್ ಗೆ ಅಮೆರಿಕಾ ಸಹಭಾಗಿತ್ವ

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ವೈಂಬ್ರೆಟ್ ಗುಜರಾತ್ ಶೃಂಗಸಭೆಗೆ ಮತ್ತೊಂದು ರಾಷ್ಟ್ರದ ಸಹಭಾಗಿತ್ವ ದೊರೆತಿದೆ. 2015ರಿಂದ ಅಮೆರಿಕಾ ಕೂಡ ವೈಬ್ರೆಂಟ್ ಗುಜರಾತ್ ನಲ್ಲಿ ಸಹಭಾಗಿಯಾಗಲಿದೆ. ಸೆ.26ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಮೆರಿಕಾ...

ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ವಿಫ್ಟ್, ಡ್ಯಾಟ್ಸನ್ ಕಾರುಗಳು ಫೇಲ್

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಹಾಗೂ ನಿಸಾನ್ ಕಂಪನಿಯ ಡ್ಯಾಟ್ಸನ್ ಕಾರುಗಳು ಜಾಗತಿಕ ಎನ್.ಸಿ.ಎ.ಪಿ (ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್) ನಡೆಸಿದ ಅಪಘಾತ ಪರೀಕ್ಷೆ (ಕ್ರ್ಯಾಶ್ ಟೆಸ್ಟ್)ಯಲ್ಲಿ ಕಳಪೆ ಪ್ರದರ್ಶನ ನೀಡಿವೆ. ಎನ್.ಸಿ.ಎ.ಪಿ ನಡೆಸಿರುವ...

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಕರೆಗೆ 50 ರಾಷ್ಟ್ರಗಳ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಅವರು ಯು.ಎನ್.ಜಿ.ಎ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಗೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಜಪಾನ್, ಅಮೆರಿಕಾ, ಕೆನಡಾ, ಚೀನಾ ಸೇರಿದಂತೆ ವಿಶ್ವದ ಸುಮಾರು 50 ದೇಶಗಳು ಜೂ.21ರಂದು ವಿಶ್ವ ಯೋಗ...

ಭಾರತದಲ್ಲಿ ಹೈಸ್ಪೀಡ್ ಟ್ರೇನ್ ಗೆ ಚೀನಾ ಬಂಡವಾಳ ಹೂಡಿಕೆ ಸಾಧ್ಯತೆ

ಭಾರತದಲ್ಲಿ ಹೈಸ್ಪೀಡ್ ರೈಲು ಸಂಚಾರ, ಮೂಲಸೌಕರ್ಯಗಳ ಬಗ್ಗೆ ಚೀನಾ ಆಸಕ್ತಿ ಹೊಂದಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಆಗಮಿಸಿದ ವೇಳೆ ಬಂಡವಾಳ ಹೂಡುವ ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ. ಮುಂಬೈ-ಅಹಮದಾಬಾದ್ ನಡುವೆ ದೇಶದ ಮೊದಲ ಬುಲೆಟ್ ರೈಲು ಓಡಿಸಲು ಜಪಾನ್...

ಹೆಚ್.ಎಂ.ಟಿ ಗೀಗ ಕಂಪನಿ ಮುಚ್ಚೋ ಟೈಮ್!

ಒಂದು ಕಾಲದಲ್ಲಿ ದೇಶದ ಹೆಮ್ಮೆಯ ಗುರುತಾಗಿದ್ದ ಹೆಚ್.ಎಂ.ಟಿ ವಾಚ್ ಕಂಪನಿಗೆ ಬೀಗ ಜಡಿಯಲು ಸರ್ಕಾರ ನಿರ್ಧರಿಸಿದೆ. ಕಳೆದ 14 ವರ್ಷಗಳಿಂದ ನಿರಂತರ ನಷ್ಟ ಎದುರಿಸುತ್ತಿರುವ ಹೆಚ್.ಎಂ.ಟಿ ವಾಚಸ್ ಹಾಗೂ ಹೆಚ್.ಎಂ.ಟಿ ಚಿನಾರ್ ವಾಚಸ್ ಕಂಪನಿಯನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಬಂದ್ ಮಾಡಲಿದೆ. ಹೆಚ್.ಎಂ.ಟಿ...

ಜಪಾನ್ ಹೂಡಿಕೆದಾರರಿಗೆ ರೆಡ್ ಟೇಪ್ ಬದಲು ರೆಡ್ ಕಾರ್ಪೆಟ್ ಸ್ವಾಗತ: ಪ್ರಧಾನಿ ಮೋದಿ

ಜಪಾನ್ ಹೂಡಿಕೆದಾರರಿಗೆ ಭಾರತಕ್ಕಿಂತಲೂ ಶಾಂತಿಯುತ ದೇಶ ಮತ್ತೊಂದಿಲ್ಲ, ಜಪಾನ್ ಹೂಡಿಕೆದಾರರಿಗೆ ಭಾರತದಲ್ಲಿ ರೆಡ್ ಟೇಪ್ ಬದಲು ರೆಡ್ ಕಾರ್ಪೆಟ್ ಸ್ವಾಗತ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 4ನೇ ದಿನದ ಜಪಾನ್ ಪ್ರವಾಸದಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,...

ಅಹಿಂಸೆ ಭಾರತೀಯ ಸಮಾಜದ ಡಿ.ಎನ್.ಎ ನಲ್ಲಿ ಬೆರೆತಿದೆ- ನರೇಂದ್ರ ಮೋದಿ

ಭಾರತ ಎನ್.ಪಿ.ಟಿಗೆ ಸಹಿ ಹಾಕದೇ ಇರುವ ಬಗ್ಗೆ ಜಪಾನ್ ನಲ್ಲಿ ಸೆಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದು ಭಾರತೀಯ ಸಮಾಜದ ಡಿ.ಎನ್.ಎ ನಲ್ಲಿ ಬೆರೆತಿರುವ ಅಹಿಂಸೆಯ ತತ್ವ ಯಾವುದೇ ಅಂತರರಾಷ್ಟ್ರೀಯ ಒಪ್ಪಂದಕ್ಕಿಂತಲೂ ಮೇರುಮಟ್ಟದ್ದಾಗಿದೆ ಎಂದು...

ಜಪಾನ್ ವಿದ್ಯಾರ್ಥಿಗಳಿಗೆ ಭಾರತೀಯ ತತ್ವ ಬೋಧಿಸಿದ ಮೋದಿ !

ಜಪಾನ್ ನ 136 ವರ್ಷ ಹಳೆಯ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಪೌರಾಣಿಕ ಇತಿಹಾಸದ ಬಗ್ಗೆ ತಿಳಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಸೆ.2ರಂದು ಜಪಾನ್ ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಭಾರತೀಯ ತತ್ವಗಳಿಗೆ ಸಂಬಂಧಿಸಿದ ಬಗ್ಗೆ ಪಾಠ ಮಾಡಿದ್ದಾರೆ! ಭಾರತ ಅತ್ಯಂತ...

ಜಪಾನ್ ನಲ್ಲಿ ಪ್ರಧಾನಿ ಮೋದಿ ಭಾಷಣ: ಅಭಿವೃದ್ಧಿ ಮಂತ್ರ ಪಠಣ

ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವುದು ನಮ್ಮ ಕರ್ತವ್ಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಹೂಡುವಂತೆ ಜಪಾನ್ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. 5 ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇನ್ನೂ ಎರಡು ದಿನಗಳ ಕಾಲ ಜಪಾನ್ ನಲ್ಲಿರಲಿದ್ದಾರೆ. ಸೆ.1ರಂದು ಟೋಕಿಯೋದಲ್ಲಿ...

ಜಪಾನ್-ಭಾರತ ದ್ವಿಪಕ್ಷೀಯ ಸಂಬಂಧ ವಿಶ್ವದಲ್ಲೇ ಪ್ರಭಾವಶಾಲಿಯಾಗಲಿದೆ-ನರೇಂದ್ರ ಮೋದಿ

'ಜಪಾನ್-ಭಾರತ'ದ ದ್ವಿಪಕ್ಷೀಯ ಸಂಬಂಧ ವಿಶ್ವದಲ್ಲೇ ಪ್ರಭಾವಶಾಲಿ ಸಂಬಂಧವಾಗಲಿದೆ ಎಂದು ಜಪಾನ್ ರಾಜಧಾನಿ ಟೋಕಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು...

ಜಪಾನ್ ಶಾಲೆಯಲ್ಲಿ ಟೀಚರ್ ಮೋದಿ !

ಪ್ರಧಾನಿ ನರೇಂದ್ರ ಮೋದಿ ಜಪಾನ್ ನಲ್ಲಿ ಶಾಲಾ ಮಕ್ಕಳಿಗೆ ಪುರಾಣ ಪ್ರಸಿದ್ಧ ಶ್ರೀಕೃಷ್ಣನ ಕಥೆಯನ್ನು ನಿರೂಪಣೆ ಮಾಡಿದರು. ಜಪಾನ್ ನಲ್ಲಿ ಶಿಕ್ಷಣ ಕ್ಷೇತ್ರ ಕಾರ್ಯನಿರ್ವಹಿಸುವ ವಿಧಾನ ತಿಳಿದುಕೊಳ್ಳಲು ಉತ್ಸುಕರಾಗಿದ್ದ ನರೇಂದ್ರ ಮೋದಿ, ಜಪಾನ್ ಶಾಲೆಯೊಂದಕ್ಕೆ ಸೆ.1ರಂದು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ...

ಕಾಶಿ ಸ್ಮಾರ್ಟ್ ಸಿಟಿ ಒಪ್ಪಂದಕ್ಕೆ ಸಹಿ: ಸೆ.1ರಂದು ದ್ವಿಪಕ್ಷೀಯ ಮಾತುಕತೆ

ಜಪಾನ್ ಪ್ರವಾಸದಲಿರುವ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿಯನ್ನು ಜಪಾನ್ ನ ದೇಗುಲ ನಗರಿ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸ್ಮಾರ್ಟ್ ಸಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕ್ಯೋಟೋದ ಅನುಭವವನ್ನು ಬಳಸಿಕೊಂಡು ಭಾರತದ ಪುಣ್ಯ ಕ್ಷೇತ್ರವಾಗಿರುವ ವಾರಾಣಸಿಯನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಪ್ರಧಾನಿ...

ಮೋದಿ ಮೋಡಿಗೊಳಗಾದ ಜಪಾನ್ ಜನತೆ

ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದಲ್ಲಿದ್ದು, ಜಪಾನ್ ಜನತೆ 'ಮೋದಿ ಮೋಡಿ'ಗೊಳಗಾಗಿದ್ದಾರೆ. ಪ್ರಧಾನಿ ಪ್ರವಾಸದ ವೇಳೆ ಜಪಾನ್ ನಾಗರಿಕರಿಂದಲೂ ಮೋದಿ ಜಪ(ಮೋದಿ ಪರ ಘೋಷಣೆ) ಕೇಳಿಬಂದಿದ್ದು ವಿಶೇಷವಾಗಿತ್ತು. ಭಾರತದ ಪ್ರಧಾನಿ ಭೇಟಿಗೆ ಜಪಾನ್ ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಮೋದಿ ಗೆ ಸಾಥ್...

ಜಪಾನ್ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ

ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು 6ದಿನಗಳ ಜಪಾನ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ಜಪಾನ್ ಭೇಟಿ ಜಾಗತಿಕ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬೆಳಿಗ್ಗೆ 6ಗಂಟೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಮೋದಿ,...

ಜಪಾನಿ ಭಾಷೆಯಲ್ಲಿ ಮೋದಿ ಟ್ವೀಟ್ ಗೆ ಪುಳಕಿತರಾದ ಜಪಾನ್ ಜನತೆ

ಇತ್ತೀಚೆಗಷ್ಟೇ ನೇಪಾಳದ ಜನತೆ ಮೋದಿ ಮೋಡಿಗೆ ಒಳಗಾಗಿದ್ದರು. ಇದೀಗ ಜಪಾನ್ ಜನತೆ ಸರದಿ. ಆ.30ರಂದು ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಆರಂಭಿಸಲಿದ್ದಾರೆ. ಇದಕ್ಕೂ ಮುನ್ನ ಮೋದಿ ಜಪಾನ್ ಜನತೆ ಹೃದಯ ಗೆದ್ದಿದ್ದಾರೆ ಸಂಸತ್ ನಲ್ಲಿ ಭಾಷಣ ಮಾಡುವ ಮೂಲಕ ನೇಪಾಳೀಯರ ಹೃದಯ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited