Untitled Document
Sign Up | Login    
Dynamic website and Portals
  

Related News

ಜಿ-20ಶೃಂಗಸಭೆ: ಭ್ರಷ್ಟಾಚಾರ. ಕಪ್ಪುಹಣ, ತೆರಿಗೆ ವಂಚನೆ ಬಗ್ಗೆ ಪ್ರಧಾನಿ ಪ್ರಸ್ತಾಪ

ಭ್ರಷ್ಟಾಚಾರ, ಕಪ್ಪುಹಣ, ತೆರಿಗೆ ವಂಚನೆ ವಿರುದ್ಧ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಉತ್ತಮ ಅರ್ಥವ್ಯವಸ್ಥೆಯ ಆಡಳಿತ ನೀಡಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಚೀನಾದ ಹಂಗ್ ಝೌನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಠಿಣ ಅಂತರಾಷ್ಟ್ರೀಯ ನಿಯಮ...

ಭಾರತದ ಗಡಿ ಪ್ರದೇಶದಲ್ಲಿ ಚೀನಾ ಯುದ್ಧ ವಿಮಾನ ಫೈಟರ್ ಜೆಟ್

ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಚೀನಾ ಟಿಬೆಟ್ ನ ಪ್ರದೇಶದಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನ್ನು ನಿಯೋಜನೆ ಮಾಡಿರುವುದಾಗಿ ತಿಳಿದುಬಂದಿದೆ. ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಗಡಿಯಲ್ಲಿ ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸುವುದಾಗಿ ಭಾರತವು...

ಪ್ರಧಾನಿ ಮೋದಿ ನಾಲ್ಕುದಿನಗಳ ವಿಯೆಟ್ನಾಂ ಮತ್ತು ಚೀನಾ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ವಿಯೆಟ್ನಾಂ ಮತ್ತು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲಿಗೆ ವಿಯೆಟ್ನಾಂಗೆ ಭೇಟಿ ನೀಡಲಿರುವ ಪ್ರಧಾನಿ ಅಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ನಾಳೆ ಚೀನಾಗೆ ತೆರಳಲಿರುವ ಮೋದಿ, ಹಾಂಗ್ ಝೌನಲ್ಲಿ...

ಪಾಕ್ ಗೆ ನ್ಯೂಕ್ಲಿಯರ್ ರಿಯಾಕ್ಟರ್ ಮಾರಾಟ ಮಾಡಿದ ಚೀನಾ

ಪರಮಾಣು ಪೂರೈಕೆದಾರ ಸಮೂಹದ ನೀತಿ-ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಚೀನಾ ಪಾಕಿಸ್ಥಾನಕ್ಕೆ ಪರಮಾಣು ರಿಯಾಕ್ಟರ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಅಮೆರಿಕ ತಿಳಿಸಿದೆ. ಇತ್ತೀಚಿಗಿನ ವರ್ಷಗಳಲ್ಲಿ ಚೀನಾ ಅಂತಾರಾಷ್ಟ್ರೀಯ ನೀತಿ-ನಿಯಮಗಳನ್ನು ಸ್ವಷ್ಟ ಉಲ್ಲಂಘನೆಮಾಡಿ ತನ್ನ ರಫ್ತು ನಿಯಂತ್ರಣಗಳನ್ನು ಗಮನಾರ್ಹವಾಗಿ ಬಲಪಡಿಸಿಕೊಂಡಿದೆ. ಎನ್‌ಎಸ್‌ಜಿ ನಿಯಮ...

ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವಕ್ಕೆ ಚೀನಾ ವಿರೋಧ ಮುಂದುವರಿಕೆ

ಸಿಯೋಲ್​ನಲ್ಲಿ ನಡೆಯುತ್ತಿರುವ 48 ದೇಶಗಳ ಪರಮಾಣು ಸರಬರಾಜುದಾರರ ಸಮೂಹ (ಎನ್‌ಎಸ್‌ಜಿ) ಸೇರ್ಪಡೆಗೆ ಭಾರತ ಶತಾಯಗತಾಯ ಯತ್ನಿಸಿದ್ದರೂ ಚೀನಾ ವಿರೋಧ ಮುಂದುವರೆದಿದ್ದು, ಭಾರತಕ್ಕೆ ಸದಸ್ಯತ್ವ ನೀಡಿಕೆ ಕುರಿತ ಚರ್ಚೆ ಇಂದಿಗೆ ಮುಂದೂಡಲಾಗಿದೆ. ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಎನ್‌ಎಸ್‌ಜಿ ಸಭೆಗೆ ಪೂರಕವಾಗಿ ಭಾರತದ ವಿಚಾರದಲ್ಲಿ ಗುರುವಾರ...

ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ವಿಚಾರ: ಯಾವುದೇ ನಿರ್ಧಾರ ಕೈಗೊಳ್ಳದೇ ಸಭೆ ಮುಕ್ತಾಯ

ಸಿಯೋಲ್ ​ನಲ್ಲಿ ನಡೆದ ಪರಮಾಣು ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ಸಭೆಯು ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೇ ಮುಕ್ತಾಯಗೊಂಡಿದೆ. ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಅಂತಿಮ ದಿನವಾದ ಶುಕ್ರವಾರವೂ ಚೀನಾ ಸೇರಿದಂತೆ 10 ರಾಷ್ಟ್ರಗಳು ಭಾರತದ ಎನ್ ಎಸ್ ಜಿ...

ತಾಷ್ಕೆಂಟ್ ನಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್​ ಪಿಂಗ್ ಭೇಟಿ

ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆ(ಎನ್​ಎಸ್​ಜಿ) ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರವಹಿಸುವುದಾಗಿ ಹೇಳಿದೆ. ಈ ಮೂಲಕ ಭಾರತದ ಕನಸು ನನಸಾಗುವ ಕಾಲ ಸನ್ನಿಹತವಾಗಿದೆ. ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್​ ನಲ್ಲಿ ಇಂದು ಆರಂಭವಾಗುವ ಶಾಂಘೈ ಸಹಕಾರ ಸಂಘಟನೆಯ (ಎಸ್​ಸಿಒ) ಶೃಂಗಸಭೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ...

ಎನ್​ಎಸ್​ಜಿ ಸದಸ್ಯತ್ವಕ್ಕೆ ಭಾರತ ಸೇರ್ಪಡೆಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಯೆನ್ನಾ ಸಭೆ ವಿಫಲ

ಎನ್​ಎಸ್​ಜಿ ಸದಸ್ಯತ್ವಕ್ಕೆ ಭಾರತ ಸಲ್ಲಿಸಿರುವ ಅರ್ಜಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಯೆನ್ನಾದಲ್ಲಿ ನಡೆದ ಸಭೆ ವಿಫಲವಾಗಿದೆ. ಜೂನ್ 20ರಂದು ಸಿಯೋಲ್​ನಲ್ಲಿ ನಡೆಯಲಿರುವ 48 ರಾಷ್ಟ್ರಗಳ ಪರಮಾಣು ಕ್ಲಬ್ ಸಭೆ ಭಾರತದ ಅರ್ಜಿಯನ್ನು ಪರಿಶೀಲನೆಗೆ ಎತ್ತಿಕೊಳ್ಳುವ ನಿರೀಕ್ಷೆ ಇದೆ. ಪರಮಾಣು ಪೂರೈಕೆದಾರರ ಒಕ್ಕೂಟ ಸದಸ್ಯತ್ವಕ್ಕೆ...

ಭಾರತ-ಚೀನಾ ವಿವಾದಗಳನ್ನು ಕೌಶಲ ಹಾಗೂ ವಿವೇಚನೆಯಿಂದ ಬಗೆಹರಿಸಿಕೊಳ್ಳಬೇಕು: ಪ್ರಣಬ್ ಮುಖರ್ಜಿ

ಭಾರತ-ಚೀನಾ ನಡುವಿನ ಬಾಂಧವ್ಯ ವೃದ್ಧಿಗಾಗಿ 8 ಸೂತ್ರಗಳನ್ನು ಪಟ್ಟಿ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಭಯ ದೇಶಗಳ ಗಡಿ ವಿವಾದ ಸೇರಿದಂತೆ ಹಲವು ಸವಾಲುಗಳನ್ನು ರಾಜಕೀಯ ಕೌಶಲ ಹಾಗೂ ವಿವೇಚನೆಯಿಂದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಬೀಜಿಂಗ್ ನ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ...

ಚೀನಾ ಸಬ್ ಮರೀನ್ ಗಳ ಮೇಲೆ ಭಾರತ ನಿಗಾ

ಭಾರತದ ಜಲಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ಆತಂಕ ಸೃಷ್ಟಿಸುತ್ತಿರುವ ಚೀನಾ ಅತಿಕ್ರಮಣ ನೀತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಿಂದು ಮಹಾಸಾಗರದಲ್ಲಿ ಚೀನಾ ಪ್ರಭುತ್ವ ತಡೆಯಲು ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಅಮೆರಿಕದೊಂದಿಗೆ ರಕ್ಷಣಾ ಒಪ್ಪಂದವೊಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದ್ದು, ಇದು ಜಾರಿಗೆ...

ಕಾಶ್ಮೀರದ ಗಡಿ ನಿಯಂತ್ರಣದಾಚಿಗಿನ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಚೀನಾಗೆ ಭಾರತ ಸ್ಪಷ್ಟನೆ

ಗಡಿ ನಿಯಂತ್ರಣ ರೇಖೆಯಾಚೆಗೆ ನಡೆಸಲಾಗುತ್ತಿರುವ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತೆ ಭಾರತ, ಚೀನಾಗೆ ಸ್ಪಷ್ಟವಾಗಿ ಹೇಳಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯಾಚೆ, ಚೀನಾ ರಸ್ತೆಗಳು, ಸೇತುವೆಗಳು ಮತ್ತು ಜಲ ವಿದ್ಯುತ್‌ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕಾರ್ಯಗತಗೊಳಿಸುತ್ತಿದೆ ಎಂಬ ವರದಿಗಳನ್ನು...

ಚೀನಾವನ್ನು ಭಾರತದ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ: ಒಬಾಮಗೆ ಸಂಸದ ಎಲಿಯಟ್ ಏಂಜಲ್ ಸಲಹೆ

ಚೀನಾವನ್ನು ಭಾರತದ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಹೌಸ್ ಫಾರಿನ್ ಅಫೇರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ನ್ಯೂಯಾರ್ಕ್ ನ ಅಮೆರಿಕ ಸಂಸದ ಎಲಿಯಟ್ ಏಂಜಲ್ ಹೇಳಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಚೀನಾವನ್ನು ನಿಯಂತ್ರಿಸಲು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಿ ಎಂದು...

ಉಗ್ರ ಮಸೂದ್ ಅಜರ್ ವಿವಾದ: ಚೀನಾ ನಿಲುವಿಗೆ ಸುಷ್ಮಾ ಸ್ವರಾಜ್ ತೀವ್ರ ಆಕ್ಷೇಪ

ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್ ಕೋಟ್ ದಾಳಿಯ ಸೂತ್ರಧಾರ ಮಸೂದ್ ಅಜರ್ ನೇತೃತ್ವದ ಜೆಇಎಂ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆಯಲ್ಲಿ ಭಾರತ ನಡೆಸಿದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತೀವ್ರ...

ಕ್ಷಿಪ್ರ ವೈರಿ ದಾಳಿ ಎದುರಿಸಲು ಶತ್ರುಜೀತ್ ಸಮರಾಭ್ಯಾಸದಲ್ಲಿ ಭಾರತೀಯ ಸೇನೆ

ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಜತೆ ಸದಾ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಸವಾಲೊಡ್ಡಲು ಭಾರತೀಯ ಸೇನೆಯ ಸುಮಾರು 3 ಸಾವಿರಕ್ಕೂ ಅಧಿಕ ಯೋಧರು ‘ಶತ್ರುಜೀತ್’ ಎಂಬ ಹೆಸರಿನಲ್ಲಿ ಸಮರಾಭ್ಯಾಸ ಆರಂಭಿಸಿದ್ದಾರೆ ಎಂದು ರಕ್ಷಣಾ ಇಲಾಖೆಯ...

ಭಾನುವಾರ ಕೌಲಲಾಂಪುರದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಮೂರು ದಿನಗಳ ಮಲೇಷ್ಯಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾನುವಾರ ಕೌಲಲಾಂಪುರದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಶನಿವಾರ ಪ್ರಧಾನಿ ಮೋದಿ ಅವರು ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದರು....

ಇಂಡಿಯಾ ಐ ಎನ್ ಸಿ ಜೊತೆ ಪ್ರಧಾನಿ ಮೋದಿ ಮಾತುಕತೆ

ಜಾಗತಿಕ ಆರ್ಥಿಕ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಭಾರತ ಹೇಗೆ ನಿರ್ವಹಿಸಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಂಡಿಯಾ ಐ ಎನ್ ಸಿ ಯ ಸಭೆ ಕರೆದಿದ್ದರು. ಜೊತೆಗೆ ಚೀನಾದ ಮಾರುಕಟ್ಟೆ ಮತ್ತು ಅಭಿವೃದ್ಧಿ ಸಮಸ್ಯೆಗಳಿಂದ ಭಾರತದ ಮುಂದಿರುವ...

ಬೆಲೆ ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿ ಆಮದಿಗೆ ಕೇಂದ್ರ ಸರಕಾರ ನಿರ್ಧಾರ

ದಿನೇ ದಿನೇ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಮೋದಿ ಸರಕಾರ ಕೇಂದ್ರ ಸರಕಾರಿ ಸ್ವಾಮ್ಯದ ಎಂಎಂಟಿಸಿ ಗೆ ನಿರ್ದೇಶಿಸಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳಿ (ಎನ್​ಎಎಫ್​ಇಡಿ) 10 ಸಾವಿರ ಟನ್ ಈರುಳ್ಳಿಯನ್ನು ಆಮದು...

ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್

ಇಸ್ರೋದ ವಾಣಿಜ್ಯ ಉಡಾವಣಾ ಸಾಮರ್ಥ್ಯ ರುಜುವಾತಾದ ಎರಡು ದಿನದ ನಂತರ ಭಾನುವಾರ ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ವೆಬ್‌ಸೈಟ್ ನ ಮುಖಪುಟ ಮಾತ್ರ ವಿರೂಪಗೊಂಡಿದ್ದು, ಉಳಿದ ಪುಟಗಳು ಹಾಗೇ ಇದ್ದವು. ಹ್ಯಾಕದ ಮುಖಪುಟ ಸುಮಾರು...

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಸದಸ್ಯತ್ವ ಪಡೆಯುವ ಅಂಚಿನಲ್ಲಿದೆ: ಪುಟಿನ್

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಸದಸ್ಯತ್ವ ಪಡೆಯುವ ಅಂಚಿನಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ಬುಧವಾರ ರಷ್ಯಾದ ಉಫಾ ತಲುಪಿದ ಪ್ರಧಾನಿ ನರೇಂದ್ರ ಮೋದಿ,...

ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ: ಮನೋಹರ್ ಪರಿಕ್ಕರ್

'ನಾನು ಭಾರತದ ರಕ್ಷಣಾ ಮಂತ್ರಿ. ನನಗೆ ನನ್ನ ಕರ್ತವ್ಯದ ಬಗ್ಗೆ ಚೆನ್ನಾಗಿ ಅರಿವಿದೆ ಹಾಗೂ, ಭಾರತ ತನ್ನನ್ನು ತಾನು ರಕ್ಷಿಸಿಕೊೞುವ ಸಾಮರ್ಥ್ಯ ಹೊಂದಿದೆ ಎಂದು ನಿಮಗೆ ಹೇಳಬಯಸುತ್ತೇನೆ'. ಇದು ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸುದ್ದಿಗಾರರಿಗೆ ಹೇಳಿದ ಮಾತು....

ಗ್ರೀಸ್ ಕರಿಛಾಯೆ: ಚೀನಾ ಶೇರು ಮಾರುಕಟ್ಟೆ ಕುಸಿತ, ನಡುಗಿದ ಮುಂಬೈ ಸೆನ್ಸೆಕ್ಸ್

ಹದಗೆಟ್ಟಿರುವ ಗ್ರೀಸ್ ಆರ್ಥಿಕ ಸ್ಥಿತಿ ಇತರ ದೇಶಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಚೀನಾದ ಪ್ರತಿಷ್ಠಿತ ಶಾಂಘೈ ಶೇರು ಮಾರುಕಟ್ಟೆ 7% ಕುಸಿದಿದ್ದು, ಭಾರತದಲ್ಲೂ ಇದರ ವ್ಯತಿರಿಕ್ತ ಪರಿಣಾಮ ಕಂದುಬರುತ್ತಿದೆ. ಗ್ರೀಸ್‌ನ ಭವಿಷ್ಯ ಭಯದ ಪರಿಣಾಮವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ...

ರಷ್ಯಾ ಮತ್ತು 5 ಮಧ್ಯ ಏಷಿಯಾ ದೇಶಗಳಿಗೆ ಪ್ರಧಾನಿ ಮೋದಿ ಪ್ರವಾಸ ಆರಂಭ

ಪ್ರಧಾನಿ ನರೇಂದ್ರ ಮೋದಿಯವರು 8 ದಿನಗಳ 5 ಮಧ್ಯ ಏಷಿಯಾ ರಾಷ್ಟ್ರಗಳು ಮತ್ತು ರಷ್ಯಾ ಪ್ರವಾಸಕ್ಕಾಗಿ ಇಂದು ದೆಹಲಿಯಿಂದ ತೆರಳಿದರು. ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation) ಶೃಂಗಸಭೆಗಳಲ್ಲಿ ಭಾಗವಹಿಸುವ ಕಾರ್ಯಕ್ರಮಗಳೂ ಅಲ್ಲದೆ ಪ್ರಧಾನಿ ಮೋದಿ ತಾವು ಭೇಟಿ ನೀಡುವ...

ಭಾರತದಿಂದ ಗೋಮಾಂಸ ಖರೀದಿಗೆ ಚೀನಾ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದೆಡೆ ದೇಶಾದ್ಯಂತ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಚೀನಾಗೆ ಗೋಮಾಂಸ ರಫ್ತು ಮಾಡಲು ಹರಸಾಹಸ ಪಡುತ್ತಿದೆ ಎನ್ನಲಾಗುತ್ತಿದೆ. ಭಾರತದಿಂದ ರಫ್ತಾಗುವ ಗೊಮಾಂಸವನ್ನು ಸ್ವೀಕರಿಸಲು ಚೀನಾ ಮುಂದಾಗಿದೆ. ಈ ಬಗೆಗಿನ ಒಪ್ಪಂದಕ್ಕೆ ಸಹಿ...

ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ: ವಿಶ್ವ ಬ್ಯಾಂಕ್

ಭಾರತ ತನ್ನ ಆರ್ಥಿಕಾಭಿವೃದ್ಧಿ ಪ್ರಗತಿಯನ್ನು ಶೇ.7.5ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವ ಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ತಿಳಿಸಿದ್ದಾರೆ. ಪ್ರಸ್ತುತ ಚೀನಾ ದೇಶದ ಆರ್ಥಿಕ ಪ್ರಗತಿ ಶೇ.7.1ರಷ್ಟಿದೆ. ಭಾರತದಲ್ಲಿನ ಪ್ರಸಕ್ತ ಆರ್ಥಿಕ...

ಗಡಿ ವಿಚಾರ: ಚೀನಾದಿಂದ ಹೊಸ ಕ್ಯಾತೆ

ಭಾರತ ಮತ್ತು ಚೀನಾ ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಗಡಿಯಲ್ಲಿ ಉಭಯ ದೇಶಗಳು ನೀತಿ ಸಂಹಿತೆಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ಚೀನಾ ಹೊಸ ಕ್ಯಾತೆ ತೆಗೆದಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಲ್ಎಸಿ(ನೈಜ ಗಡಿ ನಿಯಂತ್ರಣ...

ಚೀನಾದಲ್ಲಿ ಭೀಕರ ಪ್ರಯಾಣಿಕ ಹಡಗು ದುರಂತ : 400 ಮಂದಿ ಜಲಸಮಾಧಿ

ಭೀಕರ ಮಳೆ, ಬಿರುಗಾಳಿ ಹೊಡೆತಕ್ಕೆ ಸಿಲುಕಿದ ಚೀನಾದ ಪ್ರಯಾಣಿಕರ ಹಡಗು ಮುಳುಗಿ 400ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರುವ ಘಟನೆ ಚೀನಾದ ದಕ್ಷಿಣ ಹುಬೈ ಪ್ರಾಂತ್ಯದ ಯಾಂಗ್ ಝೆ ನದಿಯಲ್ಲಿ ನಡೆದಿದೆ. ಈಸ್ಟರ್ನ್ ಸ್ಟಾರ್ ಎಂಬ ಚೀನಾ ಹಡಗು 458 ಮಂದಿಯನ್ನು ನಾಜಿಂಗ್ ನಗರದಿಂದ...

ಭಾರತ-ಚೀನಾ ಸಂಬಂಧ ವೃದ್ಧಿಯಾಗಬೇಕೆಂದರೆ ಗಡಿ ಸಮಸ್ಯೆ ಬಗೆಹರಿಯಬೇಕು: ದೋವೆಲ್

ಭಾರತ-ಚೀನಾ ಸಂಬಂಧ ವೃದ್ಧಿಸಬೇಕಾದರೆ ಮೊದಲು ಗಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ವಿಷಯಗಳು ಸೂಕ್ಷ್ಮವಾಗಿದ್ದು ಅವುಗಳನ್ನು ಪರಿಹರಿಸಲು ಸನ್ನದ್ಧವಾಗಬೇಕಿದೆ ಎಂದು ಹೇಳಿದರು. ನವದೆಹಲಿಯಲ್ಲಿ ಗಡಿ ಭದ್ರತಾ ಪಡೆಯಿಂದ ಮಾಜಿ ಪೊಲೀಸ್ ಅಧಿಕಾರಿ...

ಚೀನಾದಲ್ಲಿ ಮೋದಿ ಭಾಷಣ ವಿಚಾರ: ಕಾಂಗ್ರೆಸ್ ವಾಗ್ದಾಳಿ

ಭಾರತದಲ್ಲಿ ನನ್ನ ಸರ್ಕಾರ ಬರುವುದಕ್ಕೂ ಮುನ್ನ, ವಿದೇಶದಲ್ಲಿನ ಭಾರತೀಯರು, ತಾವು ಭಾರತೀಯರಾಗಿದ್ದಕ್ಕೆ ನಾಚಿಕೆ ಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾದ ಶಾಂಘೈನಲ್ಲಿ ನೀಡಿದ ಹೇಳಿಕೆ ಅಂತರ್ಜಾಲ ಲೋಕದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಮೋದಿ ವಿರುದ್ಧ ಹರಿಹಾಯ್ದಿದೆ. ಸಾಮಾಜಿಕ...

ಚೀನಾ ಎದುರಿಗೆ ಅಪ್ಪಿಕೊಳ್ಳುತ್ತೆ, ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತೆ:ಶಿವಸೇನೆ

ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿರುವುದಕ್ಕೆ ಎನ್.ಡಿ.ಎ ಮೈತ್ರಿಕೂಟದ ಶಿವಸೇನೆ ಅಸಮಾಧಾನವ್ಯಕ್ತಪಡಿಸಿದ್ದು, ಚೀನಾ ಎದುರಿಗೆ ಅಪ್ಪಿಕೊಳ್ಳುತ್ತೆ, ಆದರೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತೆ. ಇದು ಚೀನಾದ ನೀತಿ ಎಂದು ಕಿಡಿಕಾರಿದೆ. ಚೀನಾದ ನಡವಳಿಕೆ ಈಗಾಗಲೇ ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ...

ಚೀನಾ ಪ್ರವಾಸ ಯಶಸ್ವಿ: ಮಂಗೋಲಿಯಾಕ್ಕೆ ತೆರಳಿದ ಪ್ರಧಾನಿ ಮೋದಿ

ಮೂರು ದಿನಗಳ ಯಶಸ್ವೀ ಚೀನಾ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗೋಲಿಯಾಕ್ಕೆ 2 ದಿನಗಳ ಭೇಟಿಗಾಗಿ ಆಗಮಿಸಿದರು. ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಮಂಗೋಲಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನೀಟ್ಟಿನಲ್ಲಿ ಐತಿಹಾಸಿಕ ಭೇಟಿ ಸಾಕಷ್ಟು ಮಹತ್ವ...

ಚೀನಾದಲ್ಲಿ ಸಿಇಒಗಳ ಸಭೆ: ಮೇಕ್ ಇನ್ ಇಂಡಿಯಾದಲ್ಲಿ ಕೈಜೋಡಿಸುವಂತೆ ಮೋದಿ ಕರೆ

ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶಾಂಘೈನಲ್ಲಿ ಚೀನಾದ ಪ್ರತಿಷ್ಠಿತ 20ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಸಭೆ ನಡೆಸಿದ್ದಾರೆ. ಸಿಇಒಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದ್ದಾರೆ. ನಿಜಕ್ಕೂ ಇದೊಂದು ಐತಿಹಾಸಿಕ ಸಭೆಯಾಗಿದ್ದು, ಹೊಸ ಹೊಸ...

ಚೀನಾದಲ್ಲಿ ಮೋದಿ: 22 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೂರನೇ ಹಾಗೂ ಕಡೆಯ ದಿನವಾದ ಶನಿವಾರ ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ 21 ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿಲಾಗಿದೆ. ಭಾರತ-ಚೀನಾ ವ್ಯವಹಾರ ವೇದಿಕೆಯನ್ನು...

ನನ್ನಿಂದ ದೇಶಕ್ಕೆ ನಷ್ಟವಾಗದಂತೆ ಆಶೀರ್ವದಿಸಿ: ಪ್ರಧಾನಿ ಮೋದಿ

ನನ್ನಿಂದ ಯಾವುದೇ ತಪ್ಪಾಗದಂತೆ, ದೇಶಕ್ಕೆ ನಷ್ಟವಾಗದಂತೆ ನಿಮ್ಮ ಎರಡು ಕೈಗಳನ್ನು ಮೇಲಕ್ಕೆತ್ತಿ ನನಗೆ ಆಶೀರ್ವಾದ ಮಾಡಿ....ಇದು ಚೀನಾದ ಶಾಂಘೈನಲ್ಲಿ ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪರಿ. ಮೊದಲು ನೀವು ಭಾರತೀಯರು ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದೀರಿ. ಆದರೆ ಈಗ ನಾವು ಭಾರತೀಯರು...

ಚೀನಾದಲ್ಲಿ ಮೋದಿ: 10ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಚೀನಾ 10 ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಬೀಜಿಂಗ್ ನಲ್ಲಿರುವ ಗ್ರೇಟ್ ಹಾಲ್ ಆಫ್ ಪೀಪಲ್ ನ ಸೌತ್ ಚೇಂಬರ್...

ಭಾರತ ಆರ್ಥಿಕ ಕ್ರಾಂತಿಯ ಮುಂಚೂಣಿಯಲ್ಲಿದೆ: ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ಮೋದಿ

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಬೀಜಿಂಗ್ ನ ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತ, ನಿಮ್ಮಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿವೆ. ಅಷ್ಟೇ ಅಲ್ಲ, ಚೀನಾದಲ್ಲಿ ಆರ್ಥಿಕ ಪವಾಡ ನಡೆಸಿ ಉಳಿದ ದೇಶಗಳಿಗೂ ಮಾದರಿಯಾಗಿದ್ದೀರಿ....

ನಾಥು ಲಾ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಹೊಸ ಮಾರ್ಗ ಜೂನ್ ನಿಂದ ಲಭ್ಯ: ಮೋದಿ

'ನಾಥು ಲಾ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಎರಡನೇ ಮಾರ್ಗ ಜೂನ್ ತಿಂಗಳಿನಿಂದ ಭಾರತೀಯ ಯಾತ್ರಿಗಳಿಗೆ ಲಭ್ಯವಾಗಲಿದೆ. ನಾನು ಚೀನಾವನ್ನು ಇದಕ್ಕಾಗಿ ಅಭಿನಂದಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಈ...

ಇಂದಿನಿಂದ ಪ್ರಧಾನಿ ಮೋದಿ ಚೀನಾ ಪ್ರವಾಸ :ಹೆಚ್ಚಿದ ನಿರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಗುರುವಾರ ಚೀನಾ ಭೇಟಿಯೊಂದಿಗೆ ಆರಂಭವಾಗಲಿದೆ. ಮೋದಲಿಗೆ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರ ತವರೂರಾಗಿರುವ ಐತಿಹಾಸಿಕ ನಗರಿ ಕ್ಸಿಯಾನ್‌ ಗೆ ನೇರವಾಗಿ...

ಚೀನಾದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ: ಟೆರ್ರಾಕೋಟಾ ಮ್ಯೂಸಿಯಂಗೆ ಭೇಟಿ

ಇಂದಿನಿಂದ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಕ್ಸಿಯಾನ್ ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಚೀನಾದ ಸಾಂಪ್ರದಾಯಿಕ ಡ್ರ್ಯಾಗನ್ ನೃತ್ಯದ ಮೂಲಕ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಬಳಿಕ ಚೀನಾ...

ಚೀನಾ ಪ್ರವಾಸ ಭಾರತಕ್ಕೆ ಮಹತ್ವಪೂರ್ಣವಾಗಿದೆ: ಪ್ರಧಾನಿ ಮೋದಿ

ಚೀನಾ ಪ್ರವಾಸ ಭಾರತಕ್ಕೆ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಪ್ರವಾಸದಿಂದ ಉಭಯ ದೇಶಗಳ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಮೂರು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ಚೀನಾ ಭೇಟಿಗೂ ಮೊದಲು ಅಲ್ಲಿನ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ...

ಚೀನಾ ಜಾಲತಾಣ ಸಿನಾ ವೈಬೋ ದಲ್ಲಿ ಖಾತೆ ತೆರೆದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮುಂದಿನವಾರ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಚೀನಾದ ಸಾಮಾಜಿಕ ಜಾಲತಾಣ 'ಸಿನಾ ವೈಬೋ'ದಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಈ ಮೂಲಕ 50 ಕೋಟಿ ಬಳಕೆದಾರರನ್ನು ಹೊಂದಿರುವ ಚೀನಾದ ಈ ಜನಪ್ರಿಯ ಜಾಲತಾಣದಲ್ಲಿ ಸದಸ್ಯತ್ವ ಪಡೆದ ಮೊದಲ ಭಾರತೀಯರಾಗಿದ್ದಾರೆ....

ಮೇ 14ರಿಂದ ಪ್ರಧಾನಿ ಮೋದಿ ತ್ರಿರಾಷ್ಟ್ರಗಳ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14ರಿಂದ 19ರ ತನಕ ಚೀನಾ, ಮಂಗೋಲಿಯಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 14ರಿಂದ 16 ರವರೆಗೂ ಚೀನಾದಲ್ಲಿರುವ ಮೋದಿ, ಮೊದಲಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರ ತವರೂರಾದ ಕ್ಸಿಯಾನ್‌...

ಪಿಒಕೆ ಬಳಿ ಇರುವ ತನ್ನ ಗಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿರುವ ಚೀನಾ

'ಚೀನಾ',ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಪ್ರದೇಶದಲ್ಲಿರುವ ತನ್ನ ಗಡಿ ಭಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. ಚೀನಾದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಸ್ಥಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವ ನಗರ ಪಾಕ್...

ಅರುಣಾಚಲಪ್ರದೇಶದ ಬಗೆಗಿರುವ ವಿವಾದವನ್ನು ತಳ್ಳಿಹಾಕಲು ಸಾಧ್ಯವಿಲ್ಲ: ಚೀನಾ

'ಅರುಣಾಚಲಪ್ರದೇಶ' ತನ್ನದೇ ಭಾಗ ಎಂದು ವಾದಿಸುತ್ತಿದ್ದ ಚೀನಾ ಇದೀಗ ತನ್ನ ವರಸೆಯನ್ನು ಬದಲಿಸಿದ್ದು ಅರುಣಾಚಲ ಪ್ರದೇಶದ ವಿಚಾರವಾಗಿ ಭಾರತದೊಂದಿಗೆ ವಿವಾದ ಇರುವುದು ನಿರಾಕರಿಸಲಾಗದ ವಾಸ್ತವ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯವನ್ನೇ ಪುನರುಚ್ಚರಿಸಿರುವ ಚೀನಾ, ಅರುಣಾಚಲ ಪ್ರದೇಶದ ವಿವಾದವನ್ನು...

ಚೀನಾದಲ್ಲಿ ಪುನರಾವರ್ತನೆಯಾಗಲಿದೆ ಮ್ಯಾಡಿಸನ್ ಸ್ಕ್ವೇರ್ ಮಾದರಿಯ ಮೋದಿ ಮೋಡಿ

ಕಳೆದ ವರ್ಷ ಅಮೆರಿಕಾದ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ನಡೆದ ಮೋದಿ ಮೋಡಿ, ಕಮ್ಯುನಿಷ್ಟ್ ರಾಷ್ಟ್ರ ಚೀನಾದಲ್ಲೂ ಪುನರಾವರ್ತನೆಯಾಗಲಿದೆ. ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅಲ್ಲಿನ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ...

ಬಿಜೆಪಿ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿರುವ ರಾಜಕೀಯ ಪಕ್ಷ

'ಸದಸ್ಯತ್ವ ನೋಂದಣಿ' ಅಭಿಯಾನವನ್ನು ಯಶಸ್ವಿಗೊಳಿಸಿರುವ ಬಿಜೆಪಿ, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರೆಗೂ 8.6ಕೋಟಿ ಸದಸ್ಯತ್ವ ಹೊಂದಿದ್ದ ಚೀನಾದ ಕಮ್ಯುನಿಷ್ಟ್ ಪಕ್ಷ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿತ್ತು. ಇದೀಗ 8.8 ಕೋಟಿ ಸದಸ್ಯತ್ವ...

ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತ ಉಜ್ವಲ ತಾಣ : ಐಎಂಎಫ್ ಮುಖಸ್ಥೆ ಕ್ರಿಸ್ಟೀನ್

ಭಾರತ ಪ್ರವಾಸ ಕೈಗೊಂಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್, ಭಾರತವನ್ನು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿರುವ ಉಜ್ವಲ ತಾಣವೆಂದು ಬಣ್ಣಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಮಾತನಾಡಿದ ಕ್ರಿಸ್ಟೀನ್ ಲಾಗರ್ಡ್, ಭಾರತದ ಆರ್ಥಿಕತೆ ಶೇ.7ಕ್ಕಿಂತಲೂ ಹೆಚ್ಚಿದ್ದು, ಮುಂದಿನ...

ಅರುಣ್ ಶೌರಿ ಅಥವಾ ಯಶ್ವಂತ್ ಸಿನ್ಹಾ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗುವ ಸಾಧ್ಯತೆ

ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅಥವಾ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಬ್ರಿಕ್ಸ್ ಬ್ಯಾಂಕ್ ಗೆ ಮೊದಲ ಅಧ್ಯಕ್ಷರನ್ನು ನೇಮಿಸಿರುವ ಅಧಿಕಾರ ಭಾರತಕ್ಕೆಇದ್ದು, ಬ್ಯಾಂಕ್ ನ ಕೇಂದ್ರ...

ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ: ಚೀನಾದಿಂದ ತೀವ್ರ ಆಕ್ಷೇಪ

'ಚೀನಾ' ಪ್ರವಾಸ ಕೈಗೊಳ್ಳುವ ಕೆಲವೇ ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದು ಚೀನಾ ಆಕ್ರೋಶಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದೇ ಹೇಳುತ್ತಿದ್ದು, ಅರುಣಾಚಲದಿಂದ ದೆಹಲಿಗೆ ರೈಲ್ವೇ ಸಂಪರ್ಕ ಉದ್ಘಾಟನೆ ಮಾಡಿದ ಕೇಂದ್ರ...

ನೌಕಾ ಪಡೆ ಬಲವರ್ಧನೆಃ ಪ್ರಾಜೆಕ್ಟ್ 17ಎಗೆ ಮೋದಿ ಸರ್ಕಾರ ಒಪ್ಪಿಗೆ

2012ರಿಂದಲೂ ಸಂಸತ್ತಿನ ಒಪ್ಪಿಗೆಗಾಗಿ ಕಾದಿದ್ದ `ಪ್ರಾಜೆಕ್ಟ್ 17ಎ'ಗೆ ನರೇಂದ್ರ ಮೋದಿ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಮೂಲಕ ಅತ್ಯಾಧುನಿಕ 7 ಸಮರ ನೌಕೆ ನಿರ್ಮಾಣಕ್ಕೆ ರಹದಾರಿ ದೊರೆತಂತಾಗಿದೆ. ಯೋಜನೆಯಂತೆ ರೂ.50 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೌಕೆಗಳು ದೇಶದ ನೌಕಾಪಡೆಯನ್ನು ಚೀನಾಗಿಂತಲೂ...

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ: ಚೀನಾದಿಂದ ಬೆಂಬಲ

ಅಚ್ಚರಿಯ ಬೆಳವಣಿಗೆಯಲ್ಲಿ, ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯ ಸ್ಥಾನ ನೀಡಲು ಚೀನಾ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕಾದ ನಂತರ ಚೀನಾದ ಬೆಂಬಲ ಭಾರತಕ್ಕೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಸದ್ಯದಲ್ಲೇ ಚೀನಾ ಪ್ರವಾಸ ಕೈಗೊಳ್ಳಲಿದ್ದು ಇದಕ್ಕೂ ಮುನ್ನ ಚೀನಾ ಭಾರತಕ್ಕೆ...

ಯು.ಎನ್ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಭಾರತಕ್ಕೆಸಿಗುವುದಕ್ಕೆ ಪಾಕ್ ಅಡ್ಡಗಾಲು

'ವಿಶ್ವಸಂಸ್ಥೆ' ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವುದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತಕ್ಕೆ ಖಾಯಂ ಸ್ಥಾನ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದ ಬಗ್ಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮರೊಂದಿಗೆ ದೂರವಾಣಿ...

ಅರುಣಾಚಲ ಪ್ರದೇಶ ಗಡಿ ವಿವಾದ ಬಗೆಹರಿಯದಿದ್ದರೆ, ಒಪ್ಪಂದ ಅಸಾಧ್ಯ: ಚೀನಾ

ಅರುಣಾಚಲ ಪ್ರದೇಶದ ಗಡಿ ವಿವಾದ ಬಗೆಹರಿಯದಿದ್ದರೆ ದ್ವಿಪಕ್ಷೀಯ ಮಾತುಕತೆಗಳು ಯಶಸ್ವಿಯಾಗುವುದಿಲ್ಲ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ. ಚೀನಾ ಹಾಗೂ ಭಾರತ ನಡುವೆ ಏರ್ಪಟ್ಟಿರುವ ಒಪ್ಪಂದಗಳನ್ನು ಅನುಷ್ಠಾನ ಹಾಗೂ ಪರಸ್ಫರ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಫೆ.2...

ಪಾಕಿಸ್ತಾನದಲ್ಲಿ 6 ನ್ಯೂಕ್ಲಿಯರ್ ರಿಯಾಕ್ಟರ್ ನಿರ್ಮಿಸುತ್ತಿರುವುದನ್ನು ಒಪ್ಪಿದ ಚೀನಾ

ಪಾಕಿಸ್ತಾನದಲ್ಲಿ 6 ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ನಿರ್ಮಿಸುತ್ತಿರುವುದಾಗಿ ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನಾ ಸ್ಪಷ್ಟಪಡಿಸಿದೆ. ಚೀನಾದ ಎನ್.ಡಿ.ಆರ್.ಸಿಯ ಮುಖ್ಯಸ್ಥರು ಚೀನಾ ಪಾಕಿಸ್ತಾನಕ್ಕೆ ಪರಮಾಣು ಸಹಕಾರ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ನಡುವಿನ ಪರಮಾಣು ಒಪ್ಪಂದಕ್ಕೆ ನ್ಯೂಕ್ಲಿಯರ್ ಸಪ್ಲೆಯರ್ಸ್ ಗ್ರೂಪ್( ಎನ್.ಎಸ್.ಜಿ)...

ಗಡಿ ನಿರ್ವಹಣೆ ಬಗ್ಗೆ ಹೊಸ ನೀತಿ ಸಂಹಿತೆ ಕುರಿತು ಭಾರತ-ಚೀನಾ ಮಾತುಕತೆ

'ಗಡಿ ನಿರ್ವಹಣೆ' ಬಗ್ಗೆ ಹೊಸ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಸಾಧ್ಯತೆಗಳ ಬಗ್ಗೆ ಚೀನಾ ಹಾಗೂ ಭಾರತದ ನಡುವೆ ಮಾತುಕತೆ ನಡೆದಿದೆ. ಚೀನಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹಾಗೂ ಚೀನಾದ ರಾಜ್ಯ ಕೌನ್ಸಿಲರ್ ಯಾಂಗ್ ಜಿಚಿ ಈ ಬಗ್ಗೆ...

ಭಾರತ-ಅಮೆರಿಕಾ ಸಂಬಂಧ ವೃದ್ಧಿಯಿಂದ ಚೀನಾಗೆ ಭಯಬೇಡ: ಒಬಾಮ

'ಅಮೆರಿಕ' ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ಬಗ್ಗೆ ಚೀನಾ ಪ್ರತಿಕ್ರಿಯೆಗಳಿಗೆ ಉತ್ತರಿಸಿರುವ ಬರಾಕ್ ಒಬಾಮ, ಚೀನಾಗೆ ಅಭಯ ನೀಡಿದ್ದಾರೆ. ಭಾರತ ಹಾಗೂ ಅಮೆರಿಕದ ಸೌಹಾರ್ದಯುತ ಸಂಬಂಧದಿಂದ ಚೀನಾ ಹೆದರುವ ಅವಶ್ಯಕತೆ ಇಲ್ಲ ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ. ಸಿ.ಎನ್.ಎನ್ ವಾಹಿನಿಯಲ್ಲಿ ಪ್ರಕಟವಾದ...

ಶೇ.50ರಷ್ಟು ವೇಗವಾಗಿ ಬೆಳೆಯುತ್ತಿದೆ ಭಾರತದ ಜಿಡಿಪಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕೆಲ ಪ್ರಮುಖ ನಿರ್ಧಾರಗಳಿಂದಾಗಿ 2013-14ನೇ ಸಾಲಿನಲ್ಲಿ ದೇಶದ ಆರ್ಥಿಕತೆ(ಜಿಡಿಪಿ) ಶೇ.50ರಷ್ಟು ವೇಗವಾಗಿ ಬೆಳವಣಿಗೆ ಕಂಡಿದೆ. ಪ್ರಧಾನಿ ಮೋದಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳಿಂದಾಗಿಯೇ ದೇಶದ ಆರ್ಥಿಕತೆ ಕಳೆದ ವರ್ಷಕ್ಕಿಂತಲೂ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಯುಪಿಎ...

ಭಾರತ-ಚೀನಾ ವಿವಾದ ಇತ್ಯರ್ಥಕ್ಕೆ ಪ್ರಾಮಾಣಿಕ ಯತ್ನಃ ರಾಜನಾಥ್ ಸಿಂಗ್

ಗಡಿ ವಿವಾದ ಸೇರಿದಂತೆ ಚೀನಾದೊಂದಿಗಿನ ಎಲ್ಲಾ ತಕರಾರುಗಳನ್ನೂ ಬಗೆಹರಿಸಲು ಭಾರತ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದು ಮಾತುಕತೆಗೆ ಚೀನಾ ಮುಂದಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ. ಗಡಿ ಸುರಕ್ಷಾ ಪಡೆಯಾಗಿರುವ ಐಟಿಬಿಪಿಯ ಬೆಟಾಲಿಯನ್‌ ಕ್ಯಾಂಪ್‌ ನ್ನು ಉದ್ಘಾಟಿಸಿ ಮಾತನಾಡಿದ...

ಮಾನಸ ಸರೋವರಕ್ಕೆ ಪ್ರಧಾನಿ ಮೋದಿ ಯಾತ್ರೆ ಕೈಗೊಳ್ಳುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೊದಿ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರು ಪ್ರಧಾನಿ ಮೋದಿ ಅವರು ಕೈಗೊಳ್ಳಲಿರುವ ಮಾನಸ ಸರೋವರ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಯೋಜನೆಯ ಪ್ರಕಾರವೇ ನಡೆದರೆ...

ಅಮೆರಿಕಾಗೆ ಭಾರತ ಬೆಸ್ಟ್ ಫ್ರೆಂಡಾದರೆ ಚೀನಾಕ್ಕೆ ಪಾಕಿಸ್ತಾನವೇ ಕ್ಲೋಸ್ ಫ್ರೆಂಡ್!

'ಅಮೆರಿಕ'ದ ಅಧ್ಯಕ್ಷ ಬರಾಕ್ ಒಬಾಮ ಅಮೆರಿಕಕ್ಕೆ ಭಾರತ ಬೆಸ್ಟ್ ಫ್ರೆಂಡ್ ಎಂದು ಘೋಷಿಸಿದ್ದರೆ, ಇತ್ತ ಭಾರತ-ಅಮೆರಿಕದ ನಡುವೆ ನಡೆದ ಅಣು ಒಪ್ಪಂದ ಮತ್ತು ದಕ್ಢಿಣ ಚೀನಾ ಸಮುದ್ರದ ವಿಚಾರದಲ್ಲಿ ಉಭಯ ದೇಶಗಳ ಮಾತುಕತೆ ಬಗ್ಗೆ ಕ್ಯಾತೆ ತೆಗೆದಿರುವ ಚೀನಾ, ಈಗ ಪಾಕಿಸ್ತಾನವನ್ನು...

ಭಾರತ-ಅಮೆರಿಕ ಸಂಬಂಧ ಕೇವಲ ತೋರಿಕೆಗಷ್ಟೇ: ಚೀನಾ ಪತ್ರಿಕೆ ಲೇವಡಿ

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ತೋರಿಕೆಯಾಗಿದ್ದು, ಅದರಲ್ಲಿ ಹುರುಳಿಲ್ಲ ಎಂದು ಚೀನಾದ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ಲೇವಡಿ ಮಾಡಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಭೇಟಿ ಎರಡು ದೇಶಗಳ ನಡುವಿನ ಹುಸಿ ಸಂಬಂಧದ ಸಂಕೇತವಾಗಿದೆ ಎಂದು ಅದು ವ್ಯಂಗ್ಯವಾಡಿದೆ. ಭಾರತ...

ಜಗತ್ತಿನ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಪೈಕಿ ಭಾರತಕ್ಕೆ 2ನೇ ಸ್ಥಾನ

ಜಗತ್ತಿನ ಎರಡನೇ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಸ್ವಿಸ್ ನ ಸಾರ್ವಜನಿಕ ಸಂಪರ್ಕಗಳ ಸಂಸ್ಥೆ ಎಡೆಲ್ಮ್ಯಾನ್ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ವಿವಿಧ ದೇಶಗಳ ವ್ಯಾಪಾರ, ಮಾಧ್ಯಮ ಮತ್ತು ಸರಕಾರೇತರ ಸಂಸ್ಥೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ...

2016ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿರುವ ಭಾರತದ ಆರ್ಥಿಕ ಬೆಳವಣಿಗೆ

ಭಾರತದ ಆರ್ಥಿಕ ಬೆಳವಣಿಗೆ ದರ 2016ರ ವೇಳೆಗೆ ಚೀನಾದ ಯೋಜಿತ ಬೆಳವಣಿಗೆ ದರವನ್ನೂ ದಾಟಿ ಬೆಳೆಯಲಿದೆ ಎಂದು ಐಎಂಎಫ್ ಹೇಳಿದೆ. ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ.6.3ರಷ್ಟಿದ್ದು, 2016ರ ವೇಳೆಗೆ ಶೇ.6.5ರಷ್ಟು ಏರಿಕೆಯಾಗಲಿದೆ. ಇದು ಚೀನಾದ ಯೋಜಿತ ಬೆಳವಣಿಗೆ ದರಕ್ಕಿಂತಲೂ ಹೆಚ್ಚು...

ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ಹೇಳಿಕೆಗೆ ಚೀನಾ ಆಕ್ರೋಶ

ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ವಿದೇಶಾಂಗ ಸಚಿವರು ನೀಡಿದ್ದ ಹೇಳಿಕೆ ಬಗ್ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವರ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದೆ. ಭಾರತ ಪ್ರವಾಸ ಕೈಗೊಂಡಿದ್ದ ಜಪಾನ್ ವಿದೇಶಾಂಗ ಸಚಿವ ಫುಮಿಯೊ ಕಿಶಿದ, ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಹೇಳಿದ್ದರು....

ಜಗತ್ತಿನ 30 ಉತ್ತಮ ಆಡಳಿತಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ 2ನೇ ಸ್ಥಾನ

ಉತ್ತಮ ಆಡಳಿತ(ಪ್ರದರ್ಶನ) ನೀಡುತ್ತಿರುವ ವಿಶ್ವದ 30 ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಡೆಸಿರುವ ಸರ್ವೆಯ ಪ್ರಕಾರ ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಉತ್ತಮ ಆಡಳಿತ(ಪ್ರದರ್ಶನ) ನೀಡುವವರ...

ವಿದೇಶದಲ್ಲಿ ಕಪ್ಪು ಹಣ ಇಡುವ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನ

'ಕಪ್ಪು ಹಣ'ದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಚಿಂತಕರ ತಂಡವೊಂದು ಭಾರತದ ಕಪ್ಪು ಹಣದ ಬಗ್ಗೆ ಕುತೂಹಲಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ. ವಿದೇಶಗಳಲ್ಲಿ ಕಪ್ಪು ಹಣ ಇಡುವ ದೇಶಗಳ ಪೈಕಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಅಂತಾರಾಷ್ಟ್ರೀಯ...

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೇ ಸೇರಬೇಕು: ಚೀನಾ

ಭಾರತದ ಪ್ರದೇಶದಲ್ಲಿರುವ ವಿವಾದಿತ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಪಾಕಿಸ್ತಾನಕ್ಕೆ ಸೇರಬೇಕೆಂದು ಚೀನಾ ವಿವಾದಾತ್ಮಕ ನಿಲುವು ಪ್ರಕಟಿಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ(ಪಿಒಕೆ) ಅಂದರೆ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಭಾರತಕ್ಕೆ ಸೇರಿರೋದೇ ಅಲ್ಲ. ಅದು ಪಾಕಿಸ್ತಾನದ್ದೇ ಸ್ಥಿರಾಸ್ತಿ ಎಂಬ ಚೀನಾದ ಉದ್ಧಟತನದ ಹೇಳಿಕೆಗೆ ಈಗ ಭಾರತದಾದ್ಯಂತ ಉಗ್ರ...

ಮೋದಿಯಿಂದ ಪ್ರಭಾವಿತನಾಗಿರುವೆ: ಅಲಿಬಾಬಾ ಇ-ಕಾಮರ್ಸ್ ಸಂಸ್ಥೆ ಸ್ಥಾಪಕ ಜ್ಯಾಕ್ ಮಾ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳಿಂದ ಪ್ರೇರಿತರಾಗಿರುವುದಾಗಿ ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾ ದ ಸ್ಥಾಪಕ ಜ್ಯಾಕ್ ಮಾ ಹೇಳಿದ್ದಾರೆ. ಭಾರತದ ವ್ಯಾಪಾರ ಸಂಸ್ಥೆ ಎಫ್.ಐ.ಸಿ.ಸಿ.ಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜ್ಯಾಕ್ ಮಾ, ಭಾರತದಲ್ಲಿ ಉದ್ಯಮ ಪ್ರಾರಂಭಿಸುವ ಬಗ್ಗೆ...

ಚೀನಾಗೆ ಪ್ರಧಾನಿ ಮೋದಿ ಟಾಂಗ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು 66ನೇ ಗಣರಾಜ್ಯೋತ್ಸವಕ್ಕೆ ಆಮಂತ್ರಿಸುವ ಮೂಲಕ ಜಗತ್ತೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಇದರ ಹಿಂದೆ ಅತಿ ದೊಡ್ಡ ತಂತ್ರಗಾರಿಕೆ ಅಡಗಿದೆ. ಬಲಿಷ್ಠ ಸೇನೆ ಮುಂದಿಟ್ಟುಕೊಂಡು ಏಷ್ಯಾದಲ್ಲಿ ಚೀನಾ ನಡೆಸುತ್ತಿರುವ ಹೊಸ ವ್ಯೂಹಾತ್ಮಕ ಆಟಕ್ಕೆ...

ಭಾರತ-ಚೀನಾ ಗಡಿ ವಿವಾದ ಬಗೆಹರಿಸಲು ಕ್ರಮ: ವಿಶೇಷ ಪ್ರತಿನಿಧಿಯಾಗಿ ಅಜಿತ್ ದೋವೆಲ್ ನೇಮಕ

'ರಾಷ್ಟ್ರೀಯ ಭದ್ರತಾ ಸಲಹೆಗಾರ' ಅಜಿತ್ ದೋವೆಲ್ ಗೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಜವಾಬ್ದಾರಿ ವಹಿಸಿದೆ. ಭಾರತ-ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಜಿತ್ ದೋವೆಲ್ ಅವರನ್ನು ನ.24ರಂದು ಕೇಂದ್ರ ಸರ್ಕಾರ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ. ಉಭಯ ರಾಷ್ಟ್ರಗಳ ನಡುವೆ ಗಡಿ...

ಚೀನಾದಿಂದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ

ಭಾರತದ ತೀವ್ರ ವಿರೋಧದ ನಡುವೆಯೂ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಿದ್ದು, ಅಣೆಕಟ್ಟು ಪೂರ್ಣಗೊಂಡಿದೆ ಎಂದು ಘೋಷಿಸಿದೆ. ಟಿಬೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಜಲವಿದ್ಯುತ್ ಅಣೆಕಟ್ಟು ಪೂರ್ಣಗೊಂಡಿದ್ದು, ಅಣೆಕಟ್ಟಿಗೆ ಯಾರ್ಲಾಂಗ್ ಜಂಗ್ಬೋ ಎಂದು ಹೆಸರಿಡಲಾಗಿದೆ. ಚೀನಾ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಭಾರತ ಮತ್ತು...

ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ವಾಯುನೆಲೆ ಸ್ಥಾಪನೆ

ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬ ಅನುಮಾನಕ್ಕೆ ಈಗ ಮತ್ತಷ್ಟು ಪುರಾವೆಗಳು ಲಭಿಸಿವೆ. ವಿವಾದಿತ ದ್ವೀಪವಾದ ಸ್ಪ್ರಾಟಿಯಲ್ಲಿ ವಾಯುನೆಲೆಯನ್ನು ಸ್ಥಾಪಿಸುತ್ತಿರುವ ಸ್ಯಾಟಲೈಟ್ ಚಿತ್ರವನ್ನು ಅಮೆರಿಕ ಬಿಡುಗಡೆ ಮಾಡಿದೆ. ಇದು ಖನಿಜಭರಿತ ದ್ವೀಪವಾಗಿದ್ದು, ತೈವಾನ್, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಮತ್ತು...

ಚೀನಾ ಸೈನಿಕರ ಅತಿಕ್ರಮಣ ನೀತಿ ದ್ವಿಪಕ್ಷೀಯ ಸಂಬಂಧಕ್ಕೆ ಒಳ್ಳೆಯದಲ್ಲ: ರಾಜನಾಥ್ ಸಿಂಗ್

'ಲಡಾಕ್' ನಲ್ಲಿರುವ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಟ್ವಿಟರ್ ಮೂಲಕ ಚೀನಾ ವಿರುದ್ಧ ಗುಡುಗಿರುವ ರಾಜನಾಥ್ ಸಿಂಗ್, ಭಾರತದ ಗಡಿ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದೂ ಅಲ್ಲದೇ ಭಾರತದ ಗಡಿ...

ಭಾರತದೊಳಗೆ ಚೀನಾ ರಸ್ತೆ ನಿರ್ಮಿಸಿದರೆ ಧ್ವಂಸ ಮಾಡುತ್ತೇವೆ: ರಾಜನಾಥ್ ಸಿಂಗ್

ಭಾರತದ ಗಡಿಯೊಳಗೆ ರಸ್ತೆಗಳನ್ನು ನಿರ್ಮಿಸದಂತೆ ಚೀನಾಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಒಂದು ವೇಳೆ ಚೀನಾ ಭಾರತದ ಗಡಿಯೊಳಗೆ ರಸ್ತೆ ನಿರ್ಮಿಸಿದರೆ ಅದನ್ನು ಧ್ವಂಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ....

ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನಿಕರಿಗೆ ಚೀನಾ ತರಬೇತಿ

ಪದೇ ಪದೇ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವ ಪಾಕಿಸ್ತಾನ ಸೈನಿಕರಿಗೆ ಚೀನಾ ನೆರವು ನೀಡುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೈನಿಕರಿಗೆ ಚೀನಾ ತರಬೇತಿ ನೀಡುತ್ತಿದ್ದು, ಭಾರತದ ಮೇಲೆ ದಾಳಿ ನಡೆಸಲು ಸಹಾಯ ಮಾಡುತ್ತಿರುವುದು ಖಾತ್ರಿಯಾಗಿದೆ. ರಜೌರಿ...

ಗುಂಡಿನ ದಾಳಿ ನಿಲ್ಲುವವರೆಗೆ ಪಾಕ್ ನೊಂದಿಗೆ ಮಾತುಕತೆ ಇಲ್ಲ: ಕೇಂದ್ರ ಸಚಿವ ವಿ.ಕೆ ಸಿಂಗ್

'ಜಮ್ಮು-ಕಾಶ್ಮೀರ'ದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ನಿಲ್ಲುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ಹೇಳಿದ್ದಾರೆ. ಗಡಿಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ, ತನ್ನೊಂದಿಗೆ ಭಾರತ ದ್ವಿಪಕ್ಷೀಯ ಮಾತುಕತೆ...

ಗಡಿ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಹಕ್ಕು: ಚೀನಾಕ್ಕೆ ಭಾರತದ ತಿರುಗೇಟು

'ಈಶಾನ್ಯ ರಾಜ್ಯ'ದ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದೆಂದು ತಾಕೀತು ಮಾಡಿದ್ದ ಚೀನಾಕ್ಕೆ ಭಾರತ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಾನು ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ತಿರುಗೇಟು ನೀಡಿದೆ. ಚೀನಾ ಎಚ್ಚರಿಕೆ ಬಗ್ಗೆ ನವದೆಹಲಿಯಲ್ಲಿ ನ.1ರಂದು...

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಕರೆಗೆ 50 ರಾಷ್ಟ್ರಗಳ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಅವರು ಯು.ಎನ್.ಜಿ.ಎ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಗೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಜಪಾನ್, ಅಮೆರಿಕಾ, ಕೆನಡಾ, ಚೀನಾ ಸೇರಿದಂತೆ ವಿಶ್ವದ ಸುಮಾರು 50 ದೇಶಗಳು ಜೂ.21ರಂದು ವಿಶ್ವ ಯೋಗ...

ಗಡಿಯಲ್ಲಿ ಬಾರ್ಡರ್ ಪೋಸ್ಟ್ ಗಳನ್ನು ನಿರ್ಮಿಸದಿರಲು ಭಾರತಕ್ಕೆ ಚೀನಾ ಎಚ್ಚರಿಕೆ

'ಅರುಣಾಚಲ ಪ್ರದೇಶ'ದಲ್ಲಿ 54 ಹೊಸ ಬಾರ್ಡರ್ ಪೋಸ್ಟ್ ಗಳನ್ನು ನಿರ್ಮಿಸುವ ಭಾರತ ಸರ್ಕಾರದ ಘೋಷಣೆಗೆ ಕೆಂಡಾಮಂಡಲವಾಗಿರುವ ಚೀನಾ, ಗಡಿ ವಿವಾದವನ್ನು ಉಲ್ಬಣವಾಗುವ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಎಚ್ಚರಿಕೆ ನೀಡಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ನಿಲುವು ಸ್ಪಷ್ಟವಾಗಿದೆ. ವಿವಾದವನ್ನು ಮಾತುಕತೆ...

ಗಡಿ ವಿಚಾರದಲ್ಲಿ ಚೀನಾದೊಂದಿಗೆ ರಾಜಿ ಅಸಾಧ್ಯ: ಅಜಿತ್ ದೋವಲ್

'ಚೀನಾ'ದೊಂದಿಗೆ ಭಾರತ ಉತ್ತಮ ಸಂಬಂಧ ಮುಂದುವರೆಸಲು ಇಚ್ಚಿಸುತ್ತದೆ. ಆದರೆ ಪ್ರಾದೇಶಿಕ ಸಾರ್ವಭೌಮತ್ವದ ಬಗ್ಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ಪಷ್ಟಪಡಿಸಿದ್ದಾರೆ. ಅ.21ರಂದು ನಡೆದ ಮ್ಯುನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ದೋವಲ್,...

ಅರುಣಾಚಲ ಪ್ರದೇಶದಲ್ಲಿ ಭಾರತ ರಸ್ತೆ ನಿರ್ಮಾಣಕ್ಕೆ ಚೀನಾ ವಿರೋಧ

ಚೀನಾದ ಗಡಿಗೆ ಹೊಂದಿಕೊಂಡಂತಿರುವ ಅರುಣಾಚಲ ಪ್ರದೇಶದ ಮ್ಯಾಕ್ ಮೋಹನ್ ಗಡಿರೇಖೆ ಬಳಿ ರಸ್ತೆ ನಿರ್ಮಾಣದ ಭಾರತಸರ್ಕಾರದ ಪ್ರಸ್ತಾಪಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗಡಿಯಲ್ಲಿನ ಶಾಂತಿ ಕದಡುವ ಯತ್ನಕ್ಕೆ ಭಾರತ ಕೈಹಾಕದೇ ಇರುವುದು ಒಳಿತು ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ. ಅರುಣಾಚಲ ಪ್ರದೇಶದ...

ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗಗಳು-ಸುಷ್ಮಾ ಸ್ವರಾಜ್

'ಅರುಣಾಚಲ ಪ್ರದೇಶ' ಹಾಗೂ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗಗಳು, ಈ ವಿಷಯವನ್ನು ಉನ್ನತ ಮಟ್ಟದ ಸಭೆಯಲ್ಲಿ ಚೀನಾಕ್ಕೆ ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಭಾರತದ ಪ್ರದೇಶಗಳನ್ನೂ ಹೊಂದಿರುವ ವಿವಾದಿತ ಚೀನಾದ ನಕ್ಷೆ ಅಲ್ಲಿನ ಮಿಲಿಟರಿ...

ಭಾರತಕ್ಕೆ ಎಚ್ಚರಿಕೆ ನೀಡುವ ಅಗತ್ಯವಿಲ್ಲ: ಚೀನಾಗೆ ರಾಜನಾಥ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ

'ಅರುಣಾಚಲ ಪ್ರದೇಶ'ದಲ್ಲಿ 2000 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ನಿರ್ಮಾಣದ ಭಾರತ ಸರ್ಕಾರದ ಪ್ರಸ್ತಾಪಕ್ಕೆ ಚೀನಾ ವ್ಯಕ್ತಪಡಿಸಿರುವ ವಿರೋಧಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಯಾರೂ ಎಚ್ಚರಿಕೆ ನೀಡುವ ಹಾಗಿಲ್ಲ ಹಾಗೂ ಭಾರತವನ್ನು ಹೆದರಿಸಲು...

ಪ್ರಧಾನಿಗೆ ದೇಶದ ಭದ್ರತೆಗಿಂತ ಚುನಾವಣಾ ಪ್ರಚಾರವೇ ಹೆಚ್ಚಾಗಿದೆ- ಖರ್ಗೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ದೇಶಗಳು ಭಾರತದ ಮೇಲೆ ನಿರಂತರವಾಗಿ ಅತಿಕ್ರಮಣ ಮಾಡುತ್ತಿದ್ದರೂ ಪ್ರಧಾನಿ ಸುಮ್ಮನಿದ್ದಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ...

ಪ್ರಾದೇಶಿಕ ಯುದ್ಧಕ್ಕೆ ಸಿದ್ಧರಾಗಿ: ಸೇನೆಗೆ ಚೀನಾ ಅಧ್ಯಕ್ಷರ ಕರೆ

ಪ್ರಾದೆಷಿಕ ಯುದ್ಧವೊಂದನ್ನು ಗೆಲ್ಲಲು ತಯಾರಾಗಿರಿ ಎಂದು ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದು, ಈ ಕರೆ ಚೀನಾದ ನೆರೆ ರಾಷ್ಟ್ರ ಭಾರತ ಹಾಗೂ ವಿಶ್ವದ ಇತರ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ. ಒಂದೆಡೆ ಚೀನಾ ಪಡೆಗಳು ಭಾರತದ ಗಡಿಯಲ್ಲಿ ಬೀಡು...

ಗಡಿಯಲ್ಲಿ ಚೀನಾ ಸೇನೆಯಿಂದ ಮತ್ತೆ ಕ್ಯಾತೆ

ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮತ್ತೆ ತನ್ನ ಕ್ಯಾತೆ ಮುಂದುವರೆಸಿದೆ. ಲಡಾಕ್ ನ ಚುಮಾರ್ ಪ್ರಾಂತ್ಯದಲ್ಲಿ ಚೀನಾ ಸೈನಿಕರು ಟೆಂಟ್ ಹಾಕಿದ್ದಾರೆ. ಈ ಮೂಲಕ ಚುಮಾರ್ ಪ್ರಾಂತ್ಯದಲ್ಲಿ ಚೀನಾ ಗಡಿ ತಂಟೆ ಮುಂದುವರೆದಿದೆ. ಭಾರತೀಯ ಸೇನೆಯ ಎಚ್ಚರಿಕೆ ನಡುವೆಯೂ 100 ಚೀನಾ ಸೈನಿಕರು...

ಭಾರತದ ಗಡಿಯಲ್ಲಿ ಬೀಡುಬಿಟ್ಟ ಚೀನಾ ಸೈನಿಕರು ಅಧ್ಯಕ್ಷರ ಆದೇಶವನ್ನೇ ಪಾಲಿಸುತ್ತಿಲ್ಲ!

ಭಾರತದ ಗಡಿಯಲ್ಲಿ ಬೀಡು ಬಿಟ್ಟಿರುವ ಚೀನಾ ಸೈನಿಕರಿಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ಪಾಲಿಸುವಂತೆ ಚೀನಾ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ. ಕಳೆದ 5 ದಿನಗಳಿಂದ ಭಾರತದ ಗಡಿ ಲಡಾಕ್ ನ ಚುಮುರ್ ಪ್ರಾಂತ್ಯದಲ್ಲಿ ಬೀಡು ಬಿಟ್ಟುರುವ ಚೀನಾ ಸೈನಿಕರು...

ಭಾರತಕ್ಕೆ ಭಾರತವೇ ಮಾದರಿ: ಪ್ರಧಾನಿ ಮೋದಿ

ಶತಮಾನಗಳ ಇತಿಹಾಸವಿರುವ ಭಾರತ ಎಂದಿಗೂ ಚೀನಾ ರಾಷ್ಟ್ರವಾಗಲು ಬಯಸುವುದಿಲ್ಲ. ನಮಗೆ ನಾವೇ ಮಾದರಿ ಹೊರತು ಅನ್ಯ ರಾಷ್ಟ್ರ ಎಂದಿಗೂ ಮಾದರಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಎಂದೂ ಚೀನಾ...

ದ್ವಿಪಕ್ಷೀಯ ಮಾತುಕತೆ ಬೆನ್ನಲ್ಲೇ ಚೀನಾ ಸೈನಿಕರು ಗಡಿ ಬಿಟ್ಟು ಓಡುವಂತೆ ಮೋದಿ ಮಾಡಿದ್ದೇನು?

ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್-ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಗಿಯುತ್ತಿದ್ದಂತೆಯೇ ಇತ್ತ ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಜಮಾವಣೆಯಾಗಿದ್ದ ಚೀನಾ ಸೈನಿಕರು ಭಾರತದಿಂದ ಕಾಲ್ಕಿತ್ತ ಘಟನೆ ದೇಶದ ಗಮನ ಸೆಳೆದಿದೆ. ಚೀನಾ ಹಾಗೂ ಭಾರತ ನಡುವಿನ...

ಭಾರತದ ಗಡಿಯಲ್ಲಿ ಚೀನಾ ಪಡೆಯಿಂದ ಮತ್ತೆ ಕ್ಯಾತೆ

ಒಂದೆಡೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದರೆ, ಇನ್ನೊಂದೆಡೆ ಭಾರತದ ಗಡಿಯಲ್ಲಿ ಚೀನಾ ಪಡೆ ಮತ್ತೆ ಕ್ಯಾತೆ ತೆಗೆದಿದೆ. ಲಡಾಕ್ ಗಡಿಯಲ್ಲಿ ಬೆಳ್ಳಂ ಬೆಳಿಗ್ಗೆಯೇ ಚೀನಾ ಪಡೆ ಭಾರತದ ಗಡಿಯೊಳಗೆ ಒಳ ನುಸುಳಿದೆ. ಈ ನಿಟ್ಟಿನಲ್ಲಿ ಉಭಯ...

ರಾಷ್ಟ್ರಪತಿ ಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ

ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಈ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಸದಸ್ಯರು ಉಪಸ್ಥಿತರಿದ್ದರು. ರಾಷ್ಟ್ರಪತಿ ಭೇಟಿ ಬಳಿಕ...

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ: 12 ಒಪ್ಪಂದಗಳಿಗೆ ಸಹಿ

ಭಾರತ-ಚೀನಾ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಮುಕ್ತಾಯವಾಗಿದೆ. ಉಭಯ ದೇಶಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಮ್ಮುಖದಲ್ಲಿ ಒಟ್ಟು 12 ಮಹತ್ವದ ಒಪ್ಪಂದಗಳಿಗೆ ಸಹಿಹಾಕಿವೆ. ನವದೆಹಲಿಯ ಹೈದ್ರಾಬಾದ್ ಹೌಸ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಚೀನಾದಿಂದ ಗಡಿ ಅತಿಕ್ರಮಣ: ಚೀನಾ ಭಾಷೆಯಲ್ಲೇ ಉತ್ತರಿಸುವಂತೆ ಮೋದಿಗೆ ಎಸ್.ಪಿ ಒತ್ತಾಯ

ದ್ವಿಪಕ್ಷೀಯ ಮಾತುಕತೆ ನಡುವೆಯೇ ಗಡಿ ಭಾಗದಲ್ಲಿ ಆಕ್ರಮಣ ಮಾಡುವ ಚೀನಾ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಮಾಜವಾದಿ ಪಕ್ಷದ ನಾಯಕರು ಎಚ್ಚರಿಸಿದ್ದಾರೆ. ಸೆ.18ರಂದು ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿರುವ...

ಟಿಬೆಟ್ ಸಮಸ್ಯೆ ಭಾರತದ ಸಮಸ್ಯೆಯೂ ಹೌದು: ದಲೈಲಾಮ

'ಟಿಬೇಟ್' ಸಮಸ್ಯೆ ಭಾರತದ ಸಮಸ್ಯೆ ಕೂಡ ಆಗಿದೆ ಎಂದು ಟಿಬೇಟ್ ಧರ್ಮ ಗುರು ದಲೈಲಾಮ ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದಲೈಲಾಮ, ಟಿಬೇಟ್...

ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ: ಮಹತ್ವದ ಮೂರು ಒಪ್ಪಂದಗಳಿಗೆ ಸಹಿ

ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಹಮದಾಬಾದ್ ನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಪತ್ನಿ ಹಾಗೂ ಸರ್ಕಾರದ ಇತರ ಅಧಿಕರಿಗಳೊಂದಿಗೆ ಆಗಮಿಸಿದ ಜಿನ್ ಪಿಂಗ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೋಟೆಲ್ ಗೆ ತರಳಲಿರುವ...

ಭಾರತದಲ್ಲಿ ಹೈಸ್ಪೀಡ್ ಟ್ರೇನ್ ಗೆ ಚೀನಾ ಬಂಡವಾಳ ಹೂಡಿಕೆ ಸಾಧ್ಯತೆ

ಭಾರತದಲ್ಲಿ ಹೈಸ್ಪೀಡ್ ರೈಲು ಸಂಚಾರ, ಮೂಲಸೌಕರ್ಯಗಳ ಬಗ್ಗೆ ಚೀನಾ ಆಸಕ್ತಿ ಹೊಂದಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಆಗಮಿಸಿದ ವೇಳೆ ಬಂಡವಾಳ ಹೂಡುವ ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ. ಮುಂಬೈ-ಅಹಮದಾಬಾದ್ ನಡುವೆ ದೇಶದ ಮೊದಲ ಬುಲೆಟ್ ರೈಲು ಓಡಿಸಲು ಜಪಾನ್...

ಒಂದೇ ಭಾರತ ನೀತಿಯನ್ನು ಚೀನಾ ಒಪ್ಪಿಕೊಳ್ಳಲಿ: ಸುಷ್ಮಾ ಸ್ವರಾಜ್

ಒಂದೇ ಚೀನಾ ನೀತಿಯನ್ನು ಭಾರತ ಒಪ್ಪಿಕೊಳ್ಳಬೇಕದರೆ, ಚೀನಾ ಕೂಡ ಒಂದೇ ಭಾರತ ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಗೂ ಮೊದಲೇ ಭಾರತ ದ್ವಿಪಕ್ಷೀಯ ಮಾತುಕತೆ...

ಗಡಿಯಲ್ಲಿ ಭಾರತದ ಸೈನಿಕರೊಂದಿಗೆ ಚೀನಾ ಸೈನಿಕರ ವಾಗ್ವಾದ

ಗಡಿಯಲ್ಲಿ ಸದಾ ಕ್ಯತೆತೆಗೆಯುವ ಚೀನಾ ಸೈನಿಕರು, ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶಕ್ಕೆ ಬಂದು ಭಾರತೀಯ ಸೈನಿಕರ ಜತೆ ವಾಗ್ವಾದ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಚೀನಾ ಸೇನೆಯ ಕ್ಯಾತೆ ನಡುವೆಯೂ ತಾಳ್ಮೆ ಕಳೆದುಕೊಳ್ಳದ ಭಾರತೀಯ...

ಚೀನಾ ಅತಿಕ್ರಮಣಕ್ಕೆ ಪ್ರತಿತಂತ್ರ: ಗಡಿ ಭಾಗದಲ್ಲಿ ಆಕಾಶ್ ಕ್ಷಿಪಣಿ ನಿಯೋಜನೆ

'ಭಾರತ-ಚೀನಾ ಗಡಿ' ಭಾಗದಲ್ಲಿ ಭೂಮಿಯಿಂದ ಆಕಾಶಕ್ಕೆ ಜಿಗಿಯುವ( surface-to-air) ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಲುವ ಮೂಲಕ ಚೀನಾ ಅತಿಕ್ರಮಣವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಭಾರತದ ಈಶಾನ್ಯ ಭಾಗಗಳಲ್ಲಿ ಆಕಾಶ್ ಕ್ಷಿಪಣಿಗಳೊಂದಿಗೆ ವಾಯುದಳದ ಹೊಸ ಸ್ಕ್ವಾಡ್ರನ್...

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ: ಚೀನಾದಲ್ಲಿ ಬುರ್ಖಾ, ದಾಡಿಗೆ ನಿಷೇಧ

'ಚೀನಾ'ಕ್ಕೂ ಭಯೋತ್ಪಾದನೆಯ ಬಿಸಿ ತಟ್ಟಿದ್ದು, ರಂಜಾನ್ ಆಚರಣೆಯನ್ನು ನಿಷೇಧಿಸಿದ್ದ ಚೀನಾ, ಇದೀಗ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಹಾಗೂ ಮುಸ್ಲಿಮರು ದಾಡಿ ಬೆಳೆಸುವುದನ್ನು ನಿಷೇಧಿಸಿದೆ. ಚೀನಾದಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಬುರ್ಖಾ ನಿಷೇಧ ಮಾಡಲಾಗಿದೆ. ಬಸ್ ಹಾಗೂ ಇನ್ನಿತರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited