Untitled Document
Sign Up | Login    
Dynamic website and Portals
  

Related News

ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು-ಪತನ ನಿಶ್ಚಿತ: ರಾಘವೇಶ್ವರಶ್ರೀ

ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು – ಪತನ ನಿಶ್ಚಿತ, ದೇವರಾಜ ಇಂದ್ರ ದೇವಗುರು ಬೃಹಸ್ಪತಿಯನ್ನು ಅಗೌರವದಿಂದ ಕಂಡದ್ದರಿಂದ ದಾನವರ ಜೊತೆ ನಡೆದ ಯುದ್ಧದಲ್ಲಿ ಸೋತು ಸರ್ವಪತನ ಹೊಂದಿದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ...

ಕೃತ್ರಿಮ ಗರ್ಭಧಾರಣೆ ಮನುಷ್ಯತ್ವಕ್ಕೆ ವಿರುದ್ಧ: ರಾಘವೇಶ್ವರಶ್ರೀ

ಗೋವುಗಳಿಗೆ ಕೃತ್ರಿಮ ಗರ್ಭಧಾರಣೆ ಮಾಡುವುದು ಧಾರ್ಮಿಕತೆಗೆ ವಿರುದ್ಧ ಹೌದೋ ಅಲ್ಲವೋ ಅನ್ನುವುದಕ್ಕಿಂತ ಅದು ಮನುಷ್ಯತ್ವಕ್ಕೆ ವಿರುದ್ಧವಾಗಿದೆ. ತನ್ನಂತೆ ಪರರು ಎಂದು ಭಾವಿಸುವ ನಾವು ಗೋವುಗಳಿಗೆ ಮಾಡಿದಂತೆ, ಎಲ್ಲಾ ಮನುಷ್ಯರಿಗೆ ಕೃತ್ರಿಮ ಗರ್ಭಧಾರಣೆ ಮಾಡಲು ಒಪ್ಪುತ್ತೇವೆಯೇ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ...

ಗೋವು ಸಂಚರಿಸುವ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ: ರಾಘವೇಶ್ವರ ಶ್ರೀ

ಅಮೃತವನ್ನು ಕೊಡುವ ಗೋವಿಗೆ ನಾವು ಪ್ಲಾಸ್ಟಿಕ್ ರೂಪದ ವಿಷವನ್ನು ಕೊಡಬಾರದು, ಮಾನವರಿಗೆ ಮಾತ್ರ ಬದುಕುವ ಹಕ್ಕಿದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ...

ಅಮೃತಮಹಲ್ ತಳಿಯ ಸಂರಕ್ಷಣೆಗೆ ಶ್ರೀರಾಮಚಂದ್ರಾಪುರಮಠ ಸಿದ್ಧಃ ರಾಘವೇಶ್ವರ ಶ್ರೀ

ಅಮೃತಮಹಲ್ ತಳಿಯ ಸಂರಕ್ಷಣೆಯ ಜವಾಬ್ದಾರಿಯನ್ನು ಶ್ರೀ ರಾಮಚಂದ್ರಾಪುರ ಮಠವು ವಹಿಸಿಕೊಳ್ಳಲು ಸಿದ್ದವಿದೆ. ಇದು ಸರ್ಕಾರಕ್ಕೆ ನಮ್ಮ ಆಗ್ರಹವಾಗಿದ್ದು, ಸರ್ಕಾರದಿಂದ ಭೂಮಿ ಅಥವಾ ಹಣದ ನಿರೀಕ್ಷೆ ನಮಗಿಲ್ಲ. ಅಳಿಯುತ್ತಿರುವ ಅಮೂಲ್ಯ ಅಮೃತಮಹಲ್ ತಳಿಯ ಸಂರಕ್ಷಣೆಯಷ್ಟೇ ಶ್ರೀಮಠದ ಕಾಳಜಿ ಆಗಿದೆ ಎಂದು ಶ್ರೀ ರಾಮಚಂದ್ರಾಪುರ...

ಗೋಸೇವೆ ವನವಾಸಿಗಳನ್ನು ರಾಜಭವನ ವಾಸಿಗಳನ್ನಾಗಿಸುತ್ತದೆ: ರಾಘವೇಶ್ವರ ಶ್ರೀ

ನಪುಂಸಕನಾಗಿ ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನ ಗೋರಕ್ಷಣೆಗಾಗಿ, ಅಜ್ಞಾತವಾಸದ ಭಯವನ್ನೂ ಲೆಕ್ಕಿಸದೇ ತನ್ನ ನೈಜರೂಪವನ್ನು ತೋರಿಸಿ ಮಹಾಸೈನ್ಯವನ್ನು ಏಕಾಂಗಿಯಾಗಿ ಎದುರಿಸಿ ಗೋ ಪ್ರೇಮವನ್ನು ಮೆರೆದ, ಇದು ನಮ್ಮೆಲ್ಲರಿಗೆ ಪರಮಾದರ್ಶ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ...

ಬೆಂಗಳೂರಿನ ಶ್ರೀ ರಾಮಚಂದ್ರಾಪುರ ಮಠದಲ್ಲಿ ವಿಶಿಷ್ಟ ಗೋ-ಗಣಪತಿ

ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಗೋಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಸಂಪನ್ನವಾಗಲಿದ್ದು, ವಿಶಿಷ್ಟವಾದ ‘ಗೋ-ಗಣಪತಿ’ಯ ಉಪಾಸನೆ ನಡೆಯಲಿದೆ. ಸಂಪೂರ್ಣ ಗೋಮಯದಿಂದ ತಯಾರಿಸಲಾದ, ಗೋವಿನೊಂದಿಗಿರುವ ಗಣಪತಿಯನ್ನು ಗಣೇಶ ಚತುರ್ಥಿಯಂದು...

ಗೋವನ್ನು ಜೀವನದೊಂದಿಗೆ ಜೋಡಿಸಿ, ಮೃತ್ಯುವಿನೊಂದಿಗಲ್ಲ: ರಾಘವೇಶ್ವರಭಾರತೀಶ್ರೀ

ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ. ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ...

ಗೋಸಂರಕ್ಷಣೆಯಲ್ಲಿ ಸರ್ಕಾರವೇ ತೊಡಗಿಕೊಳ್ಳಬೇಕುಃ ರಾಘವೇಶ್ವರ ಶ್ರೀ

ಗೋರಕ್ಷಕರಿಗೆ ನಮ್ಮ ಬೆಂಬಲವಿದೆ, ಗೋರಕ್ಷಣೆಯನ್ನು ನಾವು ಬೆಂಬಲಿಸುತ್ತೇವೆ ಆದರೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆಗೆ ನಮ್ಮ ಸಹಮತವಿಲ್ಲ. ಸರ್ಕಾರಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ, ಗೋರಕ್ಷಕರಿಗೆ ಕೆಲಸವೇ ಇರುವುದಿಲ್ಲ. ಭಯೋತ್ಪಾದನಾ ನಿಗ್ರಹದಳ, ನಕ್ಸಲ್ ನಿಗ್ರಹ ದಳ ಇದ್ದಂತೆ ಅಮೂಲ್ಯವಾದ ಗೋಮಾತೆಯ ರಕ್ಷಣೆಗೂ ಒಂದು...

ಗೋವಿನಿಂದಾಗಿ ಭಾರತ ವಿಶ್ವದಲ್ಲಿ ಗುರುತಿಸುವಂತಾಗಲಿ: ರಾಘವೇಶ್ವರಭಾರತೀಶ್ರೀ

ರಕ್ತ ನೋವಿನಿಂದ ಬರುವಂತದ್ದಾಗಿದ್ದು, ಹಾಲು ಪ್ರೀತಿಯಿಂದ ಬರುವಂತದ್ದಾಗಿದೆ. ಗೋವಿನಿಂದ ಬಂದ ಆಹಾರವನ್ನು ಸೇವಿಸಬೇಕು, ಹೊರತಾಗಿ ಗೋವನ್ನೇ ಸೇವಿಸಬಾರದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವೀಗನಿಸಮಂನಲ್ಲಿ ಗೋವಿನ...

ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ: ರಾಘವೇಶ್ವರಶ್ರೀ

ನಮ್ಮ ದೇಶದಲ್ಲಿ ಗೋವಿಗಾಗಿ ಪ್ರಾಣಕೊಟ್ಟವರು ಇದ್ದಾರೆ, ನಾವು ದೇಶೀ ಗೋವಿನ ಹಾಲು ಕುಡಿಯುವ ಸಂಕಲ್ಪ ಮಾಡುವುದರ ಮೂಲಕ ಗೋವನ್ನು ಉಳಿಸಿಕೊಳ್ಳೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದು...

ಹಾಲಿಗೆ ಹಾಲೇ ಪರ್ಯಾಯ, ಹಾಲಾಹಲವಲ್ಲ: ರಾಘವೇಶ್ವರಭಾರತೀಶ್ರೀ

ಹಾಲಿಗೆ ಹಾಲೇ ಪರ್ಯಾಯ, ಹೊರತು ಹಾಲಾಹಲವಲ್ಲ. ಸಂಕರ ತಳಿಯ ಹಸು 20 ಲೀಟರ್ ಕೊಡುತ್ತದೆ. ಆದರೆ, ಅದು ಆರೋಗ್ಯಕ್ಕೆ ಪೂರಕವಲ್ಲ. 20 ಲೀಟರ್ ವಿಷವನ್ನು ಕುಡಿಯುವುದಕ್ಕಿಂತ 2 ಲೀಟರ್ ಅಮೃತಸದೃಶವಾದ ದೇಶೀಯ ಹಾಲಿನಲ್ಲಿ ಸಂತೃಪ್ತಿ ಪಡುವುದೇ ಜಾಣತನ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ...

ಖಡ್ಗಕ್ಕೆ ಆಗದಿರುವುದನ್ನು ಕರುಣೆ ಮಾಡಬಲ್ಲದು ಗೋಕಥಾದಲ್ಲಿ: ರಾಘವೇಶ್ವರ ಶ್ರೀ

ಖಡ್ಗಕ್ಕೆ ಆಗದಿರುವುದನ್ನು ಕರುಣೆ ಮಾಡಬಲ್ಲದು, ಸತ್ಯ ಹೇಳುವುದನ್ನೊಂದು ಕಲಿತರೆ, ಮತ್ತೆಲ್ಲಾ ಗುಣಗಳೂ ತಾನಾಗಿಯೇ ಬಂದು ಸೇರುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು. ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀ ರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಪುಣ್ಯಕೋಟಿಯ ಕಥೆಯನ್ನು ನಿರೂಪಿಸಿದ...

ಎಲ್ಲೇ ಇರು, ಏನೇ ಆಗಿರು, ಗೋಪ್ರೇಮಿ ಆಗಿರು: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ

ಅಪೇಕ್ಷೆಯೇ ವ್ಯವಸ್ಥೆಯ ತಾಯಿಯಾಗಿದ್ದು, ನಾವೆಲ್ಲರೂ ಶುದ್ಧವಾದ ಹಾಲನ್ನು ಮಾತ್ರ ಕುಡಿಯುವ ಸಂಕಲ್ಪ ಮಾಡಿ, ಹಾಲಿನ ರೂಪದಲ್ಲಿರುವ ಹಾಲಾಹಲವನ್ನು ತಿರಸ್ಕರಿಸುವ ಸಂಘಟಿತ ಪ್ರಯತ್ನ ಮಾಡಿದರೆ ಖಂಡಿತವಾಗಿ ಗೋ ಆಂದೋಲನವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ...

ಗೋವಿನ ಹೃದಯಾಕ್ರಂದನವನ್ನು ಅರ್ಥಮಾಡಿಕೊಳ್ಳದಿದ್ದರೆ ಸರ್ವನಾಶ ನಿಶ್ಚಿತ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ

ಗೋವು ಕೇಳಿದ್ದನ್ನೆಲ್ಲಾ ಕೊಡುತ್ತದೆ. ಪುರಾಣದಲ್ಲಿ ಹೇಳಲಾದ ಕಾಮಧೇನು ಹೇಗೆ ಬೇಡಿದ್ದನ್ನೆಲ್ಲಾ ನೀಡುತ್ತದೆಯೋ, ಹಾಗೆಯೇ ದೇಶೀಯ ಗೋವುಗಳು ಕೂಡ ಎಲ್ಲವನ್ನು ನೀಡುತ್ತದೆ. ಆರೋಗ್ಯಕ್ಕೆ, ಸಂಪತ್ತಿಗೆ, ಪುಣ್ಯ ಸಂಪಾಧನೆಗೆ ಗೋವು ಮೂಲವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ...

ಸೃಷ್ಠಿಸುವ ಶಕ್ತಿ ಇಲ್ಲದವರಿಗೆ ನಾಶಮಾಡುವ ಹಕ್ಕಿಲ್ಲ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಸೃಷ್ಠಿಸುವ ಶಕ್ತಿ ಇಲ್ಲದವರಿಗೆ ನಾಶಮಾಡುವ ಹಕ್ಕಿಲ್ಲ, ಸೃಷ್ಟಿಯ ಅದ್ಭುತವಾದ ಗೋವಿನ ಹಾಲು, ಗೋಮೂತ್ರ ಹಾಗೂ ಗೋಮಯಾದಿಗಳನ್ನು ಬಳಸಬೇಕು ಹೊರತು ಮಾಂಸಕ್ಕಾಗಿ ಗೋಹತ್ಯೆ ಮಾಡಿ, ಗೋಕುಲವನ್ನೇ ವಿನಾಶಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ...

ಸುತನೊಬ್ಬನನ್ನು ಸಂತ ಅಥವಾ ಸೈನಿಕನನ್ನಾಗಿಸಿ: ರಾಘವೇಶ್ವರ ಶ್ರೀ ಕರೆ

ಸಂತರು ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ನಿಶ್ಶಬ್ದದ ಆಂದೋಲನ ನಡೆಸಿ, ದೇಶ ಪ್ರೇಮವನ್ನು ತೋರುತ್ತಾರೆ. ಸೈನಿಕರು ಹೋರಾಡಿ ದೇಶ ಪ್ರೇಮ ಮೆರೆಯುತ್ತಾರೆ. ಆದುದರಿಂದ ದೇಶಕ್ಕಾಗಿ ಪ್ರತಿ ಮನೆಯಲ್ಲಿ ಜನಿಸಿದ ಒಬ್ಬನನ್ನು ಸಂತ ಅಥವಾ ಸೈನಿಕನನ್ನಾಗಿಸಿ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ...

ಮಾನವ ಜನ್ಮದಲ್ಲಿ ತಾಯಿ ಶ್ರೇಷ್ಠ, ಜೀವಿಗಳಲ್ಲಿ ಗೋವು ಶ್ರೇಷ್ಠ: ರಾಘವೇಶ್ವರ ಶ್ರೀ

ಮಾತು ಬಾರದ ಗೋಮಾತೆ ಪರಮ ಕಾರುಣ್ಯೆ. ತನ್ನ ಕರುಳ ಕುಡಿಯ ಕೊಂದವನನ್ನು ರಕ್ಷಿಸುವ ಶತ್ರುವತ್ಸಲೆ. ಮಾನವ ಜನ್ಮದಲ್ಲಿ ತಾಯಿ ಶ್ರೇಷ್ಠ, ಜೀವಿಗಳಲ್ಲಿ ಗೋವು ಶ್ರೇಷ್ಠ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ವ್ಯಾಖ್ಯಾನಿಸಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರು ಶಾಖೆ...

ಗೋವನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಬೇಡಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಒಮ್ಮೆ ಪರೀಕ್ಷೆ ಆಗಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆ ಆದವರಿಗೆ, ಮತ್ತದೇ ಪರೀಕ್ಷೆ ಮಾಡುವುದರಲ್ಲಿ ಅರ್ಥವಿರುವುದಿಲ್ಲ. ಜಗತ್ತು ಗೋಮಾತೆಯನ್ನು ಪದೇ ಪದೇ ಪರೀಕ್ಷಿಸುತ್ತಿದೆ. ಗೋಮಾತೆ ಪ್ರತಿ ಪರೀಕ್ಷೆಯಲ್ಲಿ ಚಿನ್ನದ ಅಂಕ ಪಡೆದು ತೇರ್ಗಡೆ ಆಗಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿದೆ. ಆದರೆ ಇವತ್ತು...

ಗೋವು ಪ್ರೇರಕ ಶಕ್ತಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಕಣ್ಣಿಗೆ ಕಾಣುವಂತಹ, ಕೈಗೆ ಸಿಗುವಂತಹ, ಹೊಟ್ಟೆ ತುಂಬಿಸುವಂತಹ ಭೌತಿಕವಾದ ಅದೆಷ್ಟೋ ಸುವಸ್ತ್ತುಗಳನ್ನುಗೋಮಾತೆ ಕೊಡುತ್ತಾಳೆ. ಜೊತೆಗೆ ಅಭೌತಿಕವಾಗಿ ಕೂಡಾ ಹಲವನ್ನು ಕೊಡುತ್ತಾಳೆ ಗೋಮಾತೆ. ಅದರಲ್ಲೊಂದು ಮುಖ್ಯವಾದುದು 'ಪ್ರೇರಣೆ' ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ...

ಯಾವುದು ನಿನಗೆ ಹಿಂಸೆಯೋ ಅದನ್ನು ಬೇರೆಯವರಿಗೆ ಮಾಡಬೇಡ: ರಾಘವೇಶ್ವರ ಶ್ರೀ

ಸರ್ವ ಕಾಲ, ಸರ್ವ ದೇಶ, ಸರ್ವ ಸಮಯ, ಸರ್ವ ಜನಾಂಗಗಳಲ್ಲಿಯೂ ಸಲ್ಲುವಂತಹ ನಿಯಮಗಳು ಇರುತ್ತವೆ, ಅವುಗಳಲ್ಲಿ ಒಂದು 'ಯಾವುದು ನಿನಗೆ ಹಿಂಸೆಯೋ ಅದನ್ನು ಬೇರೆಯವರಿಗೆ ಮಾಡಬೇಡ'. ಈ ನಿಯಮವನ್ನು ಎಲ್ಲರೂ ಪಾಲಿಸಲಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು....

ಆಂಗ್ಲತ್ವ ಭಾರತ ಬಿಟ್ಟು ತೊಲಗಲಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ

ಬಾಗಿದವನು ಭಗವಂತನಾಗುವನು ಎಂಬುದು ಹನುಮಂತ ಕೊಟ್ಟ ಸಂದೇಶ. ಸೇವಕತ್ವದ ಆಳಕ್ಕೆ ಇಳಿದರೆ, ವ್ಯಕ್ತಿಯ ವ್ಯಕ್ತಿತ್ವ ಆಗಸದೆತ್ತರಕ್ಕೆ ಏರುತ್ತದೆ ಎಂಬುದನ್ನು ಹನುಮಂತ ಮಾಡಿ ತೋರಿಸಿದ್ದಾನೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ಬೆಂಗಳೂರಿನ...

ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ: ರಾಘವೇಶ್ವರಶ್ರೀ

ರಾಜಾ ರಾಷ್ಟ್ರಗತಂ ಪಾಪಂ.. ಎಂಬಂತೆ ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪ ರಾಜನಿಗೂ ತಟ್ಟುತ್ತದೆ. ಗೋಪಾಲಕ ಮಾಡಿದ ಗೋಹತ್ಯೆಯ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ...

ಗೋವಿಗೂ ಬದುಕುವ ಹಕ್ಕಿದೆ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ

ನೂರಾರು ಜೀವಿಗಳಿಗೆ ಒಳಿತೆಸಗುವ ಈ ಪ್ರಪಂಚದಲ್ಲಿ ಬದುಕುವ ಹಕ್ಕು ನಮ್ಮೆಲ್ಲರಿಗಿಂತ ಜಾಸ್ತಿ ಗೋವಿಗೆ ಇದೆ. ಅಂತಹ ಪರೋಪಕಾರಿ ಜೀವಿಯ ಜೀವಕ್ಕೆ ಕೈ ಹಾಕಬಾರದು ಎಂದು ಶ್ರೀ ರಾಮಚಂದ್ರಾಪುರದ ಮಠಾಧೀಶರಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ...

ಗೋ-ಹತ್ಯೆ ಸಂಪೂರ್ಣವಾಗಿ ನಿಂತಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ: ರಾಘವೇಶ್ವರಶ್ರೀ

ಈ ದೇಶ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಷ್ಟು ಮಹತ್ವ ಕೊಟ್ಟಿತ್ತೊ ಅಷ್ಟೇ ಮಹತ್ವವನ್ನು ಗೋ-ರಕ್ಷಣಾ ಅಭಿಯಾನಕ್ಕೆ ಕೊಡಬೇಕು. ಈಗ ನಡೆಯುತ್ತಿರುವುದು ನಿಜವಾದ ಸ್ವಾತಂತ್ರ್ಯ ಸಂಗ್ರಾಮ, ಗೋ-ಹತ್ಯೆ ಸಂಪೂರ್ಣವಾಗಿ ನಿಂತಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ. ದೇಶ ಭಾರತವಾಗಬೇಕಾದರೆ ಗೋ-ಹಿಂಸೆ ನಿಲ್ಲಬೇಕು, ಅಲ್ಲಿಯವರೆಗೂ...

ಭಾರತ ಗೋಮೂತ್ರ ರಫ್ತು ಮಾಡಿ ಕೀರ್ತಿಶಾಲಿಯಾಗಲಿ: ರಾಘವೇಶ್ವರ ಶ್ರೀ

ಪ್ರಪಂಚದ ಶ್ರೇಷ್ಠವಾದ ಗೋವಂಶ ಭಾರತೀಯ ಗೋವಂಶ. ಗೋವು ಅಂದರೆ ಭಾರತ. ಪ್ರಪಂಚ ಗೋವಿನ ಲಾಭವನ್ನು ಪಡೆಯಬೇಕು. 'ಗಾವೋ ವಿಶ್ವಸ್ಯ ಮಾತರಃ', ಗೋವು ವಿಶ್ವಜನನಿ, ವಿಶ್ವಮಾತೆ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ವಿಶ್ಲೇಷಿಸಿದರು. ಗೋವಿನ ಉತ್ಪನ್ನಗಳು ಪ್ರಪಂಚಕ್ಕೆ ಲಭ್ಯವಾಗಬೇಕು. ಭಾರತ...

ಗೋವು ಸೃಷ್ಟಿಯ ಮುಖ್ಯಾಂಗ: ರಾಘವೇಶ್ವರ ಶ್ರೀ

ಮಾನವನ ಪ್ರಾಣ ಹೊರಟುಹೋದರೆ ಉಳಿದ ಅಂಗಾಂಗಗಳು ನಿಷ್ಕ್ರಿಯವಾಗುತ್ತವೆ. ಹಾಗೆಯೇ ಗೋವಿನ ಹತ್ಯೆ ಸರ್ವನಾಶಕ್ಕೆ ಕಾರಣವಾಗುತ್ತದೆ. ಗೋವು ಸೃಷ್ಟಿಯ ಅಂಗ, ಉತ್ತಮಾಂಗ ಮಾತ್ರವಲ್ಲ ಮುಖ್ಯಾಂಗ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ವಿಶ್ಲೇಷಿಸಿದರು. ಮರದಲ್ಲಿ ಕುಳಿತು ಕೊಡಲಿಯಿಂದ ಬುಡವನ್ನು ಕಡಿದು ಸಂಭವಿಸಬಹುದಾದ...

ಪರೀಕ್ಷೆಯಿಂದ ಅಂತಸತ್ವ ಹೊರಬರುತ್ತದೆ: ರಾಘವೇಶ್ವರ ಶ್ರೀ

ಪೂಜಿಸಬೇಕಾದ್ದನ್ನು ಪೂಜಿಸದಿದ್ದರೆ, ಗೌರವ ಸಲ್ಲಿಸಬೇಕಾದ್ದಲ್ಲಿ ಗೌರವ ಸಲ್ಲಿಸದೇ ಇದ್ದರೆ ಅನರ್ಥ ನಿಶ್ಚಿತ, ಕಾಮಧೇನುವನ್ನು ಅನಾಧರಿಸಿದ ದಿಲೀಪ ಪರಿತಪಿಸುವಂತಾಯಿತು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದ ಪರಿಸರದಲ್ಲಿ ನಡೆದ 'ಗೋಕಥೆ'ಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು,...

ಗೋವನ್ನು ಹಣದ ಲೆಕ್ಕದಲ್ಲಿ ಅಳೆಯಬೇಡಿ: ರಾಘವೇಶ್ವರ ಶ್ರೀ

ಗೋವನ್ನು ಹಣದಲೆಕ್ಕದಲ್ಲಿ ಅಳೆಯಬೇಡಿ, ಗೋವುಗಳನ್ನು ದೇಶ ಪೂಜಿಸಿದರೆ, ಭಾರತ ದೇಶವು ತನ್ನ ವೈಭವವನ್ನು ಮರಳಿ ಪಡೆಯಲು ಸಾಧ್ಯ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ,...

ಗೋವಿಗೆ ಸ್ವಾತಂತ್ರ ಸಿಗುವವರೆಗೂ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ: ರಾಘವೇಶ್ವರ ಶ್ರೀ

ಗೋವು ಚಿನ್ನ, ಗೋವಿನೊಂದಿಗಿನ ಬದುಕು ಚೆನ್ನ, ಗೋರಕ್ಷಣೆಯಾದರೆ ರಾಷ್ಟ್ರದಲ್ಲಿ ಚಿನ್ನದ ಯುಗ ಆರಂಭವಾಗುತ್ತದೆ. ಗೋವಿಗೆ ಸ್ವಾತಂತ್ರ ಸಿಗುವವರೆಗೂ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಮಹತ್ತರವಾದ ಅರ್ಥವಿಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ...

ಗೋವನ್ನು ಜೀವನದೊಂದಿಗೆ ಜೋಡಿಸಿ, ಮರಣದೊಂದಿಗಲ್ಲ: ರಾಘವೇಶ್ವರ ಶ್ರೀ

ಸಂತರು ಪೂಜ್ಯರು, ಗೋಮಾತೆ ಪೂಜ್ಯರಿಗೂ ಪೂಜ್ಯಳು. ಗೋವಿನ ತ್ಯಾಜ್ಯವೂ ಸರ್ವಮಾನ್ಯವಾದುದು. ಆದರೆ ಇಂದು ಗೋಹತ್ಯೆ ಮಾತ್ರವಲ್ಲ, ಗೋಕ್ಷೀರದ ಹತ್ಯೆಯೂ ನಡೆಯುತ್ತಿದೆ, ರಾಸಾಯನಿಕ ಬಳಸಿ ಹಾಲಿನಲ್ಲಿರುವ ಗುಣಗಳನ್ನು ಕೊಲ್ಲಲಾಗುತ್ತಿದ್ದು, ಹಾಲು ಎಂಬ ಹೆಸರಿನಲ್ಲಿ ಬಿಳಿದ್ರವವನ್ನು ಮಾರಲಾಗುತ್ತಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ...

ಬಾಹುಬಲಕ್ಕಿಂತ ಭಾವಬಲ ದೊಡ್ಡದು: ರಾಘವೇಶ್ವರ ಶ್ರೀ

ಮಹರ್ಷಿ ವಶಿಷ್ಠರಲ್ಲಿಗೇ ಸಾಕ್ಷಾತ್ ರಾಜನೇ ಬಂದು ಗೋವನ್ನು ಕೇಳಿದರೂ ಪ್ರಯತ್ನಪೂರ್ವಕವಾಗಿ ಗೋವನ್ನು ರಕ್ಷಿಸಿಕೊಂಡರು, ಆದರೆ ಇಂದು ಕಟುಕರು ಕೊಡುವ ಪುಡಿಗಾಸಿಗೆ ಗೋವನ್ನು ಕಸಾಯಿಕಾನೆಗೆ ತಳ್ಳುತ್ತಿರುವುದು ವಿಷಾಧನೀಯ. ಜಗತ್ತು ಗೋವನ್ನು ಆಶ್ರಯಿಸಿದ್ದು, ಗೋವಿಲ್ಲದ ಬದುಕು ದುರ್ಬರ, ಹಾಗಾಗಿ ಕಲ್ಪವೃಕ್ಷವಾದ ಕಾಮಧೇನುವಿನ ಮೇಲೆ...

ಸಂತರ ಬಾಯಲ್ಲಿ ಗೋವು ನಲಿಯಬೇಕು: ರಾಘವೇಶ್ವರ ಶ್ರೀ

ಮೊದಲು ಸಂತರ ಬಾಯಲ್ಲಿ ಗೋವು ನಲಿಯಬೇಕು, ಸಂತರ ನಾಲಿಗೆಯಲ್ಲಿ ಗೋವು ನಲಿದಾಡಿದರೆ, ಗೋವು ನಾಡಿನಲ್ಲಿ ನಲಿದಾಡುವಂತಾಗುತ್ತದೆ ಎಂದು 'ಒಡಲು' ಸಭಾಂಗಣದ 'ಮಡಿಲು' ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ...

ಗೋಸೇವೆಗೆ ಮಹಾಫಲವಿದೆ: ರಾಘವೇಶ್ವರ ಶ್ರೀ

ಗೋಸೇವೆಗೆ ಮಹಾಫಲವಿದೆ. ದಿಲೀಪ ಚಕ್ರವರ್ತಿ ಬ್ರಹ್ಮರ್ಷಿ ವಾಷಿಷ್ಠರ ಆಶ್ರಮದ ನಂದಿನಿ ಗೋವಿನ ಸೇವೆ ಮಾಡಿದ ಫಲವಾಗಿ ರಘು ಚಕ್ರವರ್ತಿಯಂತ ಕೀರ್ತಿಶಾಲಿಯಾದ ಪುತ್ರರತ್ನವನ್ನು ಪಡೆದ. ಹಾಗಾಗಿ ಗೋಸೇವೆ ಮಾಡಿದವ ಶ್ರೇಯಸ್ಸನ್ನು ಪಡೆಯುತ್ತಾನೆ ಎಂದು 'ಒಡಲು' ಸಭಾಂಗಣದ 'ಮಡಿಲು' ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀ ರಾಮಚಂದ್ರಾಪುರ...

ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು :ರಾಘವೇಶ್ವರ ಶ್ರೀ

ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು. ಹನುಮಂತ ರಾಮ ಚರಣದೆಡೆಗೆ ಬಾಗಿ ರಾಮ ಸೇವಕ ರೂಪದಲ್ಲಿ ಸ್ವಾಮಿಯಾದನು ಎಂದು 'ಒಡಲು' ಸಭಾಂಗಣದ 'ಮಡಿಲು' ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಹೇಳಿದರು. ಶ್ರೀ...

ಗೋವಿನ ಕುರಿತಾದ ಅನ್ವೇಷಣೆಗಳಾಗಲಿ: ವಿಜ್ಞಾನಿಗಳಿಗೆ ರಾಘವೇಶ್ವರ ಶ್ರೀಗಳ ಕರೆ

ಜಗನ್ಮಾತೆಯಾದ ಗೋವು ಜಗತ್ತನ್ನು ರಕ್ಷಿಸುತ್ತದೆ, ಸಂತರು ಗೋಸಂರಕ್ಷಣೆಗೆ ಮುಂದಾಗಬೇಕು ಎಂದು ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವಭಾರತೀ ಸ್ವಾಮೀಜಿಯವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಕರೆ ನೀಡಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ಶ್ರೀಪರಿವಾರದ ಸರ್ವಸೇವೆಯನ್ನು ಸ್ವೀಕರಿಸಿ...

ಒಳಿತಿನ ಪ್ರವಾಹ ಕೆಡುಕನ್ನು ಕೊಚ್ಚಿಕೊಂಡು ಹೋಗುತ್ತದೆ : ರಾಘವೇಶ್ವರ ಶ್ರೀ

ಚಾತುರ್ಮಾಸ್ಯವೆಂದರೆ ಗುರುವಿಗೆ ವ್ರತ, ಶಿಷ್ಯರಿಗೆ ಹಬ್ಬ. ಅದು ಆನಂದ, ಅರಿವಿಗೆ ಪ್ರೇರಣೆ. ಶ್ರೀ ರಾಮಚಂದ್ರಾಪುರ ಮಠದಲ್ಲಿ ಪ್ರತಿ ವರ್ಷವೂ ಒಂದು ಧ್ಯೇಯವನ್ನಿಟ್ಟುಕೊಂಡು ಚಾತುರ್ಮಾಸ್ಯವನ್ನು ಆಚರಿಸಲಾಗುತ್ತದೆ. ಮಠ, ಗುರು, ಗೋವು ಸಮಾಜಕ್ಕೆ ಶುಭವನ್ನು ನೀಡುವತ್ತ ಲಕ್ಷ್ಯ ಹರಿಸುತ್ತದೆ. ಆಧ್ಯಾತ್ಮಿಕ ಧಾರ್ಮಿಕವಾದ ಚಾತುರ್ಮಾಸ್ಯಕ್ಕೆ...

ಜು.19ಕ್ಕೆ ರಾಘವೇಶ್ವರ ಶ್ರೀಗಳಿಂದ ಗೋಚಾತುರ್ಮಾಸ್ಯ ವ್ರತಾರಂಭ

ರಾಮಚಂದ್ರಾಪುರ ಮಠದ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರ 23ನೇ ಚಾತುರ್ಮಾಸ್ಯ ವ್ರತಾಚರಣೆಯು ಜು.19ರಿಂದ ಎರಡು ತಿಂಗಳ ಕಾಲ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ. ಜುಲೈ 19ರಿಂದ ಸೆಪ್ಟೆಂಬರ್ 16ರ ವರೆಗೆ 60 ದಿನಗಳ ಕಾಲ ಚಾತುರ್ಮಾಸ...

ರಾಘವೇಶ್ವರ ಶ್ರೀಗಳಿಂದ ಗೋಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಲೋಕಾರ್ಪಣೆ

ಪ್ರತಿಯೊಂದು ಕಾರ್ಯಕ್ರಮವನ್ನೂ ವಿಶಿಷ್ಟವಾಗಿ ಆಚರಿಸುವ ಶ್ರೀ ರಾಮಚಂದ್ರಾಪುರ ಮಠ, ಈ ವರ್ಷದ ದುರ್ಮುಖ ನಾಮ ಸಂವತ್ಸರದ ಚಾತುರ್ಮಾಸ್ಯವನ್ನು ಜೀವಲೋಕದ ಹಿತಕ್ಕಾಗಿ ಗೋಚಾತುರ್ಮಾಸ್ಯವನ್ನಾಗಿ ಆಚರಿಸಲು ನಿರ್ಧರಿಸಿದೆ. ಗೋಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ...

ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ಪುನಾರಚನೆ

ಗಿರಿನಗರದ ಶ್ರೀ ರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶಾಸನತಂತ್ರ ವ್ಯವಸ್ಥೆ- ರಾಮರಾಜ್ಯ ಹಾಗೂ ಮಹಾಮಂಡಲದ ಪುನಾರಚನೆ ಸಂಪನ್ನವಾಯಿತು. ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು, ಶ್ರೀಮಠದ ಸಮಾಜಮುಖೀ ಕಾರ್ಯಗಳನ್ನು ನಿರ್ವಹಿಸಲು ಕೆಲಸದ...

'ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್' ಸೇರಿದ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಪ್ರಕಾಶನ

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಭಾರತೀಪ್ರಕಾಶನವು ಪ್ರಕಟಿಸಿದ 'ಗುರುಗ್ರಂಥಮಾಲಿಕೆ' ಲಿಮ್ಕಾ ದಾಖಲೆ ನಿರ್ಮಿಸಿದೆ. 60 ದಿನಗಳ ಕಾಲ ದಿನಕ್ಕೊಂದರಂತೆ 60 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ್ದನ್ನು ಪುರಸ್ಕರಿಸಿ 'ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್' ಇದೊಂದು ದಾಖಲೆಯ ಕಾರ್ಯವೆಂದು ಪ್ರಶಂಸಿಸಿದೆ. ( Link : ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited