Untitled Document
Sign Up | Login    
Dynamic website and Portals
  

Related News

ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು-ಪತನ ನಿಶ್ಚಿತ: ರಾಘವೇಶ್ವರಶ್ರೀ

ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು – ಪತನ ನಿಶ್ಚಿತ, ದೇವರಾಜ ಇಂದ್ರ ದೇವಗುರು ಬೃಹಸ್ಪತಿಯನ್ನು ಅಗೌರವದಿಂದ ಕಂಡದ್ದರಿಂದ ದಾನವರ ಜೊತೆ ನಡೆದ ಯುದ್ಧದಲ್ಲಿ ಸೋತು ಸರ್ವಪತನ ಹೊಂದಿದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ...

ಕೃತ್ರಿಮ ಗರ್ಭಧಾರಣೆ ಮನುಷ್ಯತ್ವಕ್ಕೆ ವಿರುದ್ಧ: ರಾಘವೇಶ್ವರಶ್ರೀ

ಗೋವುಗಳಿಗೆ ಕೃತ್ರಿಮ ಗರ್ಭಧಾರಣೆ ಮಾಡುವುದು ಧಾರ್ಮಿಕತೆಗೆ ವಿರುದ್ಧ ಹೌದೋ ಅಲ್ಲವೋ ಅನ್ನುವುದಕ್ಕಿಂತ ಅದು ಮನುಷ್ಯತ್ವಕ್ಕೆ ವಿರುದ್ಧವಾಗಿದೆ. ತನ್ನಂತೆ ಪರರು ಎಂದು ಭಾವಿಸುವ ನಾವು ಗೋವುಗಳಿಗೆ ಮಾಡಿದಂತೆ, ಎಲ್ಲಾ ಮನುಷ್ಯರಿಗೆ ಕೃತ್ರಿಮ ಗರ್ಭಧಾರಣೆ ಮಾಡಲು ಒಪ್ಪುತ್ತೇವೆಯೇ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ...

ಗೋವು ಸಂಚರಿಸುವ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ: ರಾಘವೇಶ್ವರ ಶ್ರೀ

ಅಮೃತವನ್ನು ಕೊಡುವ ಗೋವಿಗೆ ನಾವು ಪ್ಲಾಸ್ಟಿಕ್ ರೂಪದ ವಿಷವನ್ನು ಕೊಡಬಾರದು, ಮಾನವರಿಗೆ ಮಾತ್ರ ಬದುಕುವ ಹಕ್ಕಿದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ...

ಗೋಸೇವೆ ವನವಾಸಿಗಳನ್ನು ರಾಜಭವನ ವಾಸಿಗಳನ್ನಾಗಿಸುತ್ತದೆ: ರಾಘವೇಶ್ವರ ಶ್ರೀ

ನಪುಂಸಕನಾಗಿ ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನ ಗೋರಕ್ಷಣೆಗಾಗಿ, ಅಜ್ಞಾತವಾಸದ ಭಯವನ್ನೂ ಲೆಕ್ಕಿಸದೇ ತನ್ನ ನೈಜರೂಪವನ್ನು ತೋರಿಸಿ ಮಹಾಸೈನ್ಯವನ್ನು ಏಕಾಂಗಿಯಾಗಿ ಎದುರಿಸಿ ಗೋ ಪ್ರೇಮವನ್ನು ಮೆರೆದ, ಇದು ನಮ್ಮೆಲ್ಲರಿಗೆ ಪರಮಾದರ್ಶ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ...

ಗೋವನ್ನು ಜೀವನದೊಂದಿಗೆ ಜೋಡಿಸಿ, ಮೃತ್ಯುವಿನೊಂದಿಗಲ್ಲ: ರಾಘವೇಶ್ವರಭಾರತೀಶ್ರೀ

ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ. ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ...

ಗೋವಿನಿಂದಾಗಿ ಭಾರತ ವಿಶ್ವದಲ್ಲಿ ಗುರುತಿಸುವಂತಾಗಲಿ: ರಾಘವೇಶ್ವರಭಾರತೀಶ್ರೀ

ರಕ್ತ ನೋವಿನಿಂದ ಬರುವಂತದ್ದಾಗಿದ್ದು, ಹಾಲು ಪ್ರೀತಿಯಿಂದ ಬರುವಂತದ್ದಾಗಿದೆ. ಗೋವಿನಿಂದ ಬಂದ ಆಹಾರವನ್ನು ಸೇವಿಸಬೇಕು, ಹೊರತಾಗಿ ಗೋವನ್ನೇ ಸೇವಿಸಬಾರದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವೀಗನಿಸಮಂನಲ್ಲಿ ಗೋವಿನ...

ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ: ರಾಘವೇಶ್ವರಶ್ರೀ

ನಮ್ಮ ದೇಶದಲ್ಲಿ ಗೋವಿಗಾಗಿ ಪ್ರಾಣಕೊಟ್ಟವರು ಇದ್ದಾರೆ, ನಾವು ದೇಶೀ ಗೋವಿನ ಹಾಲು ಕುಡಿಯುವ ಸಂಕಲ್ಪ ಮಾಡುವುದರ ಮೂಲಕ ಗೋವನ್ನು ಉಳಿಸಿಕೊಳ್ಳೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದು...

ಹಾಲಿಗೆ ಹಾಲೇ ಪರ್ಯಾಯ, ಹಾಲಾಹಲವಲ್ಲ: ರಾಘವೇಶ್ವರಭಾರತೀಶ್ರೀ

ಹಾಲಿಗೆ ಹಾಲೇ ಪರ್ಯಾಯ, ಹೊರತು ಹಾಲಾಹಲವಲ್ಲ. ಸಂಕರ ತಳಿಯ ಹಸು 20 ಲೀಟರ್ ಕೊಡುತ್ತದೆ. ಆದರೆ, ಅದು ಆರೋಗ್ಯಕ್ಕೆ ಪೂರಕವಲ್ಲ. 20 ಲೀಟರ್ ವಿಷವನ್ನು ಕುಡಿಯುವುದಕ್ಕಿಂತ 2 ಲೀಟರ್ ಅಮೃತಸದೃಶವಾದ ದೇಶೀಯ ಹಾಲಿನಲ್ಲಿ ಸಂತೃಪ್ತಿ ಪಡುವುದೇ ಜಾಣತನ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ...

ಎಲ್ಲೇ ಇರು, ಏನೇ ಆಗಿರು, ಗೋಪ್ರೇಮಿ ಆಗಿರು: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ

ಅಪೇಕ್ಷೆಯೇ ವ್ಯವಸ್ಥೆಯ ತಾಯಿಯಾಗಿದ್ದು, ನಾವೆಲ್ಲರೂ ಶುದ್ಧವಾದ ಹಾಲನ್ನು ಮಾತ್ರ ಕುಡಿಯುವ ಸಂಕಲ್ಪ ಮಾಡಿ, ಹಾಲಿನ ರೂಪದಲ್ಲಿರುವ ಹಾಲಾಹಲವನ್ನು ತಿರಸ್ಕರಿಸುವ ಸಂಘಟಿತ ಪ್ರಯತ್ನ ಮಾಡಿದರೆ ಖಂಡಿತವಾಗಿ ಗೋ ಆಂದೋಲನವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ...

ಗೋವಿನ ಹೃದಯಾಕ್ರಂದನವನ್ನು ಅರ್ಥಮಾಡಿಕೊಳ್ಳದಿದ್ದರೆ ಸರ್ವನಾಶ ನಿಶ್ಚಿತ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ

ಗೋವು ಕೇಳಿದ್ದನ್ನೆಲ್ಲಾ ಕೊಡುತ್ತದೆ. ಪುರಾಣದಲ್ಲಿ ಹೇಳಲಾದ ಕಾಮಧೇನು ಹೇಗೆ ಬೇಡಿದ್ದನ್ನೆಲ್ಲಾ ನೀಡುತ್ತದೆಯೋ, ಹಾಗೆಯೇ ದೇಶೀಯ ಗೋವುಗಳು ಕೂಡ ಎಲ್ಲವನ್ನು ನೀಡುತ್ತದೆ. ಆರೋಗ್ಯಕ್ಕೆ, ಸಂಪತ್ತಿಗೆ, ಪುಣ್ಯ ಸಂಪಾಧನೆಗೆ ಗೋವು ಮೂಲವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ...

ಸೃಷ್ಠಿಸುವ ಶಕ್ತಿ ಇಲ್ಲದವರಿಗೆ ನಾಶಮಾಡುವ ಹಕ್ಕಿಲ್ಲ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಸೃಷ್ಠಿಸುವ ಶಕ್ತಿ ಇಲ್ಲದವರಿಗೆ ನಾಶಮಾಡುವ ಹಕ್ಕಿಲ್ಲ, ಸೃಷ್ಟಿಯ ಅದ್ಭುತವಾದ ಗೋವಿನ ಹಾಲು, ಗೋಮೂತ್ರ ಹಾಗೂ ಗೋಮಯಾದಿಗಳನ್ನು ಬಳಸಬೇಕು ಹೊರತು ಮಾಂಸಕ್ಕಾಗಿ ಗೋಹತ್ಯೆ ಮಾಡಿ, ಗೋಕುಲವನ್ನೇ ವಿನಾಶಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ...

ಗೋವನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಬೇಡಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಒಮ್ಮೆ ಪರೀಕ್ಷೆ ಆಗಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆ ಆದವರಿಗೆ, ಮತ್ತದೇ ಪರೀಕ್ಷೆ ಮಾಡುವುದರಲ್ಲಿ ಅರ್ಥವಿರುವುದಿಲ್ಲ. ಜಗತ್ತು ಗೋಮಾತೆಯನ್ನು ಪದೇ ಪದೇ ಪರೀಕ್ಷಿಸುತ್ತಿದೆ. ಗೋಮಾತೆ ಪ್ರತಿ ಪರೀಕ್ಷೆಯಲ್ಲಿ ಚಿನ್ನದ ಅಂಕ ಪಡೆದು ತೇರ್ಗಡೆ ಆಗಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿದೆ. ಆದರೆ ಇವತ್ತು...

ಗೋವು ಪ್ರೇರಕ ಶಕ್ತಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಕಣ್ಣಿಗೆ ಕಾಣುವಂತಹ, ಕೈಗೆ ಸಿಗುವಂತಹ, ಹೊಟ್ಟೆ ತುಂಬಿಸುವಂತಹ ಭೌತಿಕವಾದ ಅದೆಷ್ಟೋ ಸುವಸ್ತ್ತುಗಳನ್ನುಗೋಮಾತೆ ಕೊಡುತ್ತಾಳೆ. ಜೊತೆಗೆ ಅಭೌತಿಕವಾಗಿ ಕೂಡಾ ಹಲವನ್ನು ಕೊಡುತ್ತಾಳೆ ಗೋಮಾತೆ. ಅದರಲ್ಲೊಂದು ಮುಖ್ಯವಾದುದು 'ಪ್ರೇರಣೆ' ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ...

ಯಾವುದು ನಿನಗೆ ಹಿಂಸೆಯೋ ಅದನ್ನು ಬೇರೆಯವರಿಗೆ ಮಾಡಬೇಡ: ರಾಘವೇಶ್ವರ ಶ್ರೀ

ಸರ್ವ ಕಾಲ, ಸರ್ವ ದೇಶ, ಸರ್ವ ಸಮಯ, ಸರ್ವ ಜನಾಂಗಗಳಲ್ಲಿಯೂ ಸಲ್ಲುವಂತಹ ನಿಯಮಗಳು ಇರುತ್ತವೆ, ಅವುಗಳಲ್ಲಿ ಒಂದು 'ಯಾವುದು ನಿನಗೆ ಹಿಂಸೆಯೋ ಅದನ್ನು ಬೇರೆಯವರಿಗೆ ಮಾಡಬೇಡ'. ಈ ನಿಯಮವನ್ನು ಎಲ್ಲರೂ ಪಾಲಿಸಲಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು....

ಗೋ-ಹತ್ಯೆ ಸಂಪೂರ್ಣವಾಗಿ ನಿಂತಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ: ರಾಘವೇಶ್ವರಶ್ರೀ

ಈ ದೇಶ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಷ್ಟು ಮಹತ್ವ ಕೊಟ್ಟಿತ್ತೊ ಅಷ್ಟೇ ಮಹತ್ವವನ್ನು ಗೋ-ರಕ್ಷಣಾ ಅಭಿಯಾನಕ್ಕೆ ಕೊಡಬೇಕು. ಈಗ ನಡೆಯುತ್ತಿರುವುದು ನಿಜವಾದ ಸ್ವಾತಂತ್ರ್ಯ ಸಂಗ್ರಾಮ, ಗೋ-ಹತ್ಯೆ ಸಂಪೂರ್ಣವಾಗಿ ನಿಂತಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ. ದೇಶ ಭಾರತವಾಗಬೇಕಾದರೆ ಗೋ-ಹಿಂಸೆ ನಿಲ್ಲಬೇಕು, ಅಲ್ಲಿಯವರೆಗೂ...

ಗೋವನ್ನು ಜೀವನದೊಂದಿಗೆ ಜೋಡಿಸಿ, ಮರಣದೊಂದಿಗಲ್ಲ: ರಾಘವೇಶ್ವರ ಶ್ರೀ

ಸಂತರು ಪೂಜ್ಯರು, ಗೋಮಾತೆ ಪೂಜ್ಯರಿಗೂ ಪೂಜ್ಯಳು. ಗೋವಿನ ತ್ಯಾಜ್ಯವೂ ಸರ್ವಮಾನ್ಯವಾದುದು. ಆದರೆ ಇಂದು ಗೋಹತ್ಯೆ ಮಾತ್ರವಲ್ಲ, ಗೋಕ್ಷೀರದ ಹತ್ಯೆಯೂ ನಡೆಯುತ್ತಿದೆ, ರಾಸಾಯನಿಕ ಬಳಸಿ ಹಾಲಿನಲ್ಲಿರುವ ಗುಣಗಳನ್ನು ಕೊಲ್ಲಲಾಗುತ್ತಿದ್ದು, ಹಾಲು ಎಂಬ ಹೆಸರಿನಲ್ಲಿ ಬಿಳಿದ್ರವವನ್ನು ಮಾರಲಾಗುತ್ತಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ...

ರಾಘವೇಶ್ವರ ಶ್ರೀಗಳಿಂದ ಗೋಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಲೋಕಾರ್ಪಣೆ

ಪ್ರತಿಯೊಂದು ಕಾರ್ಯಕ್ರಮವನ್ನೂ ವಿಶಿಷ್ಟವಾಗಿ ಆಚರಿಸುವ ಶ್ರೀ ರಾಮಚಂದ್ರಾಪುರ ಮಠ, ಈ ವರ್ಷದ ದುರ್ಮುಖ ನಾಮ ಸಂವತ್ಸರದ ಚಾತುರ್ಮಾಸ್ಯವನ್ನು ಜೀವಲೋಕದ ಹಿತಕ್ಕಾಗಿ ಗೋಚಾತುರ್ಮಾಸ್ಯವನ್ನಾಗಿ ಆಚರಿಸಲು ನಿರ್ಧರಿಸಿದೆ. ಗೋಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited