Untitled Document
Sign Up | Login    
Dynamic website and Portals
  

Related News

ಪ್ರಧಾನಿ ಹುಟ್ಟಹಬ್ಬದ ಸಂಭ್ರಮಕ್ಕೆ 3,750 ಕೆ ಜಿ ತೂಕದ ಕೇಕ್

ಇಂದು ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಹುಟ್ಟುಹಬ್ಬ. ಈ ಸಂಭ್ರಮವನ್ನು ದೇಶಾದ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಈ ದಿನವನ್ನು ಇನ್ನಷ್ಟು ವಿಶಿಷ್ಟಗೊಳಿಸಲು ಗುಜರಾತ್ ನ ಸೂರತ್ ನಲ್ಲಿ 3,750 ಕೆ ಜಿ ತೂಕದ ಅತಿ ದೊಡ್ಡ ಕೇಕ್ ತಯಾರಿಸಲಾಗಿದೆ. ಈ ಕೇಕ್...

ಗುಜರಾತ್ ಸಿಎಂ ಆಗಿ ವಿಜಯ್ ರೂಪಾಣಿ ಪ್ರಮಾಣ ವಚನ

ಆನಂದಿ ಬೆನ್ ರಿಂದ ತೆರವಾದ ಗುಜರಾತ್ ಸಿಎಂ ಸ್ಥಾನಕ್ಕೆ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗಾಂಧಿನಗರದ ಮಹತ್ಮಾ ಮಂದಿರದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ...

ಗುಜರಾತ್ ನ ನೂತನ ಸಿಎಂ ಆಗಿ ವಿಜಯ್ ರೂಪಾನಿ ಆಯ್ಕೆ

ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆಯ್ಕೆಯಾಗಿದ್ದು, ನಿತಿನ್ ಪಟೇಲ್​ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ರೂಪಾನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡ ಲಾಯಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ವೀಕ್ಷಕರಾಗಿ...

ವಿಜಯ್ ರೂಪಾನಿಯಿಂದ ರಾಜ್ಯಪಾಲರ ಭೇಟಿ: ನಾಳೆ ಪ್ರಮಾಣ ವಚನ ಸ್ವೀಕಾರ

ಗುಜರಾತ್ ನ ನಿಯೋಜಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ರಾಜ್ಯಪಾಲ ಒ.ಪಿ.ಕೊಹ್ಲಿ ಅವರನ್ನು ಭೇಟಿ ಮಾಡಿದ್ದು, ನೂತನ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್ ರೂಪಾನಿ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆರೋಗ್ಯ ಸಚಿವ ನಿತಿನ್ ಪಟೇಲ್ ಸಾಥ್...

ನಿತಿನ್ ಪಟೇಲ್ ಗುಜರಾತ್ ನೂತನ ಸಿಎಂ ಆಗುವ ಸಾಧ್ಯತೆ

ಆನಂದಿಬೆನ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇಂದು ನೂತನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ವೇಳೆ ಅಧಿಕೃತ ಘೋಷಣೆ ಹೊರಬೀಳಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಈಗಾಗಲೇ ಗುಜರಾತ್ ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷದ ಮುಖಂಡರೊಂದಿಗೆ...

ಗುಜರಾತ್ ಸಿಎಂ ಆನಂದಿಬೆನ್ ರಾಜೀನಾಮೆ

ಗುಜರಾತ್ ನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಕ್ಕಿನ ಮಹಿಳೆ ಖ್ಯಾತಿಯ ಆನಂದಿಬೆನ್ ಪಟೇಲ್ ಅವಧಿ ಪೂರ್ಣಗೊಳ್ಳುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ. ನವೆಂಬರ್ ತಿಂಗಳಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ತೆರವುಗೊಳಿಸಿ ಎಂದು ಆನಂದಿಬೆನ್ ಪಕ್ಷದ ನಾಯಕರಿಗೆ...

ಮಧ್ಯ ಮತ್ತು ಉತ್ತರ ಭಾರತದಲ್ಲಿ ಅತ್ಯಧಿಕ ಉಷ್ಣಾಂಶ

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಗೂ ಮಧ್ಯಭಾರತದಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಿದ್ದು, ಬಿಸಿ ಗಾಳಿ ಬೀಸಲಾರಂಭಿಸಿದೆ. ವಿವಿಧ ರಾಜ್ಯಗಳಲ್ಲಿ 50 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ, ನವದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ತಾಪಮಾನ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ರೆಡ್...

ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹ: ಹಿಂಸಾಚಾರಕ್ಕಿಳಿದ ಪ್ರತಿಭಟನೆ

ಹಾರ್ದಿಕ್ ಪಟೇಲ್ ಬಂಧನದ ನಂತರ ತಣ್ಣಗಾಗಿದ್ದ ಪಟೇಲ್ ಸಮುದಾಯದ ಮೀಸಲಾತಿ ಪ್ರತಿಭಟನೆ ಗುಜರಾತ್ ನಲ್ಲಿ ಮತ್ತೆ ಭುಗಿಲೆದ್ದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪಟೇಲ್ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಈ ಹಿಂದೆ ನಡೆಸಲಾಗಿದ್ದ ಪ್ರತಿಭಟನೆ ವೇಳೆ ಹಾರ್ದಿಕ್ ಪಟೇಲ್ ಹಾಗೂ ಇನ್ನಿತರೆ ನಾಯಕರನ್ನು ಪೊಲೀಸರು...

ಇಶ್ರತ್ ಜಹಾನ್ ಆತ್ಮಹತ್ಯಾ ಬಾಂಬರ್ಃ ಉಗ್ರ ಹೆಡ್ಲಿ

ಮುಂಬ್ರಾ ನಿವಾಸಿ ಇಶ್ರತ್ ಜಹಾನ್ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್ ಆಗಿದ್ದಳು ಎಂದು ಉಗ್ರ ಡೇವಿಡ್ ಹೆಡ್ಲಿ ಹೇಳಿದ್ದಾನೆ. ಗುರುವಾರ ನಡೆದ ವಿಚಾರಣೆಯ ವೇಳೆ ಹೆಡ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಯುಎಸ್ ನಿಂದ ವಿಡಿಯೋ ಕಾನ್ಫರೆನ್ಸ್...

ಅಮಿತಾಬ್ ಬಚ್ಚನ್ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ

ನಟ, ಗುಜರಾತ್ ಪ್ರವಾಸೋದ್ಯಮದ ರಾಯಭಾರಿ ಅಮಿತಾಬ್ ಬಚ್ಚನ್, ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ ಇದೆ. ನಟ ಅಮೀರ್ ಖಾನ್ ಒಪ್ಪಂದ ಮುಗಿದ ಹಿನ್ನಲೆಯಲ್ಲಿ ಅಮಿತಾಬ್ ಬಚ್ಚನ್ ಅನ್ನು ಮೋದಿ ಸರ್ಕಾರ ನೂತನ ರಾಯಭಾರಿಯಾಗಿ ಆಯ್ಕೆ ಮಾಡುವ ಸಾಧ್ಯತೆ...

ನಾವು ಹಿಂದಿ ಭಾಷೆಯನ್ನು ಮರೆತೆರೆ ದೇಶಕ್ಕೆ ನಷ್ಟಃ ಪ್ರಧಾನಿ ನರೇಂದ್ರ ಮೋದಿ

ಹಿಂದಿ ಪ್ರಚಾರ ಮತ್ತು ಉತ್ಕೃಷ್ಟಗೊಳಿಸಲು ಪ್ರಯತ್ನಗಳು ಅಗತ್ಯ ಎಂದು ಗುರುವಾರ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ದಿನಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಇಂಗ್ಲೀಷ್ ಮತ್ತು ಚೈನೀಸ್ ಭಾಷೆಯಷ್ಟೇ ಪ್ರಭಾವಿ ಭಾಷೆಯಾಗಿರುತ್ತದೆ ಎಂದರು. ನಾವು ಹಿಂದಿ ಭಾಷೆಯನ್ನು ಮರೆತರೆ ದೇಶಕ್ಕೆ ನಷ್ಟ ಎಂದ...

ಗುಜರಾತ್‌ ನಲ್ಲಿ ದೇಶದ ಮೊದಲ ಸ್ಮಾರ್ಟ್‌ ಸಿಟಿ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 100 ಸ್ಮಾರ್ಟ್‌ ಸಿಟಿ ಯೋಜನೆಯನ್ವಯ ದೇಶದ ಮೊದಲ ಸ್ಮಾರ್ಟ್‌ ಸಿಟಿಯೊಂದು ಮೋದಿ ತವರು ರಾಜ್ಯ ಗುಜರಾತ್‌ ನಲ್ಲಿ ತಲೆಯೆತ್ತುತ್ತಿದೆ. ಸಾಬರಮತಿ ನದಿ ದಂಡೆಯ ಗಾಂಧಿನಗರದ ಹೊರವಲಯದಲ್ಲಿ ಇದು ತಲೆಯೆತ್ತುತ್ತಿದ್ದು, ಮುಂದಿನ ಸ್ಮಾರ್ಟ್‌ ಸಿಟಿಗಳಿಗೆ ಮಾದರಿಯೆನ್ನಿಸಿಕೊಳ್ಳುತ್ತದೆ ಎಂದು...

ಗುಜರಾತ್‌ ನಲ್ಲಿ ಹಿಂದೂ ವಸತಿ ಪ್ರದೇಶ ತೊರೆಯಲು ಮುಸ್ಲಿಮರಿಗೆ ಒತ್ತಡ

ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‌ ನಲ್ಲಿ ಹಿಂದೂ ಬಹುಸಂಖ್ಯಾತರು ವಾಸಿಸಿಕೊಂಡಿರುವ ಪ್ರದೇಶಗಳಲ್ಲಿ ಮುಸ್ಲಿಮರು ತಮ್ಮ ಆಸ್ತಿಪಾಸ್ತಿ, ಮನೆಗಳನ್ನು ಮಾರಿ ಗುಳೇ ಹೋಗುವಂತೆ ಆರ್.ಎಸ್‌.ಎಸ್‌, ವಿಶ್ವ ಹಿಂದೂ ಪರಿಷತ್‌ ಒತ್ತಡ ತಂತ್ರ ಹೇರುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ರದ್ದಿ ವಸ್ತುಗಳ...

ಚೀನಾದಲ್ಲಿ ಪುನರಾವರ್ತನೆಯಾಗಲಿದೆ ಮ್ಯಾಡಿಸನ್ ಸ್ಕ್ವೇರ್ ಮಾದರಿಯ ಮೋದಿ ಮೋಡಿ

ಕಳೆದ ವರ್ಷ ಅಮೆರಿಕಾದ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ನಡೆದ ಮೋದಿ ಮೋಡಿ, ಕಮ್ಯುನಿಷ್ಟ್ ರಾಷ್ಟ್ರ ಚೀನಾದಲ್ಲೂ ಪುನರಾವರ್ತನೆಯಾಗಲಿದೆ. ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅಲ್ಲಿನ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ...

2024ರ ಒಲಂಪಿಕ್ಸ್ ಕ್ರೀಡಾಕೂಟ: ಆಥಿತ್ಯ ವಹಿಸಲು ಉತ್ಸುಕವಾಗಿರುವ ಮೋದಿ ಸರ್ಕಾರ

2024ರ ಒಲಂಪಿಕ್ಸ್ ಕ್ರೀಡಾಕೂಟದ ಆಥಿತ್ಯ ವಹಿಸಲು ಭಾರತ ಚಿಂತನೆ ನಡೆಸುತ್ತಿದೆ. 2024ರ ಒಲಂಪಿಕ್ಸ್ ಆಯೋಜನೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ, ಅಹಮದಾಬಾದ್ ನಲ್ಲಿ ಒಲಂಪಿಕ್ಸ್ ಕ್ರಿಡಾಕೂಟ ನಡೆಸಲು ಉತ್ಸುಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅಂತರರಾಷ್ಟ್ರೀಯ ಒಲಂಪಿಕ್‌ ಸಮಿತಿ...

ಅಮೆರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ ನಡೆಸಿದ್ದ ಅಧಿಕಾರಿ ವಿರುದ್ಧ ಚಾರ್ಜ್ ಶೀಟ್

'ಅಲಬಾಮಾ'ದಲ್ಲಿ ಭಾರತೀಯ ಪ್ರಜೆಯ ಮೇಲೆ ಹಲ್ಲೆ ನಡೆಸಿದ್ದ ಅಮೆರಿಕಾ ಪೊಲೀಸ್ ಅಧಿಕಾರಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದ್ದು, ಭಾರತೀಯ ನಾಗರಿಕನ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ. ಎರಿಕ್ ಸ್ಲೋನ್ ಪಾರ್ಕರ್ ಎಂಬ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕಾಗಿ...

ಅಮೆರಿಕಾದಲ್ಲಿ ಭಾರತ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ

'ಗುಜರಾತ್' ಮೂಲದ ವ್ಯಕ್ತಿಯೊಬ್ಬರ ಮೇಲೆ ಅಮೆರಿಕಾ ಪೊಲೀಸರು ಹಲ್ಲೆ ನಡೆಸಿದ್ದರು. ಈ ಬೆನ್ನಲ್ಲೇ ಇಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಅಮೆರಿಕಾದಲ್ಲಿರುವ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಸಿಖ್ ಸಮುದಾಯದ ಯುವಕನನ್ನು ಅಮೆರಿಕಾದ ವಿದ್ಯಾರ್ಥಿಗಳು ಭಯೋತ್ಪಾದಕ ಎಂದು ಭಾವಿಸಿ ಆತನ...

ಗುಜರಾತ್ ಸರ್ಕಾರಿ ನೌಕರರಿಗೆ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಗೆ ಅವಕಾಶ

ಛತ್ತೀಸ್ ಗಡ ಸರ್ಕಾರ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದೆ. ಇದೀಗ ಗುಜರಾತ್ ಸರ್ಕಾರ ಕೂಡ ಇಂಥದ್ದೇ ನಿರ್ಧಾರಕ್ಕೆ ಮುಂದಾಗಿದೆ. ಈ ವಿಚಾರದಲ್ಲಿ ಛತ್ತೀಸ್ ಗಡಕ್ಕಿಂತ ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿರುವ ಗುಜರಾತ್ ಸರ್ಕಾರ ಆರ್ ಎಸ್...

ಮೋದಿ ಸೂಟ್ ಗೆ ಭಾರಿ ಬೇಡಿಕೆ: 2.9 ಕೋಟಿ ತಲುಪಿದ ಬಿಡ್ಡಿಂಗ್

ಹರಾಜಿಗೆ ಹಾಕಲಾಗಿರುವ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸೂಟ್‌ ನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹರಾಜು ಪ್ರಕ್ರಿಯೆಯ 2ನೇ ದಿನವಾದ ಫೆ.20ರಂದು ಸೂಟ್ ನ ಬೆಲೆ ಬರೊಬ್ಬರಿ 2.9 ಕೋಟಿಯಷ್ಟಾಗಿದೆ. ಫೆ.20ರಂದು ಬೆಳಿಗ್ಗೆ ಸೂಟ್ ನ ಬೆಲೆ...

ನಿಧಿ ದುರುಪಯೋಗ: ಆರೋಪಿ ತೀಸ್ತಾ ಸೆಟಲ್ವಾಡ್ ರನ್ನು ಬಂಧಿಸದಂತೆ ಸುಪ್ರೀಂ ಆದೇಶ

'ಗುಜರಾತ್' ಗಲಭೆ ಸಂತ್ರಸ್ತರ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಸೆಟಲ್ವಾಡ್, ಆಕೆಯ ಪತಿ ಜಾವೇದ್ ಆನಂದ್ ಸೇರಿದಂತೆ ಇತರ ಆರೋಪಿಗಳ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್...

ಹರಾಜಿಗಿದೆ ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ತೊಟ್ಟ ಸೂಟ್

'ಗಣರಾಜ್ಯೋತ್ಸವ'ದಂದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಸೂಟ್ ಈಗ ಒಂದು ಉತ್ತಮ ಕೆಲಸಕ್ಕೆ ಸಹಾಯಕಾರಿಯಾಗಲಿದೆ. ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ತಮ್ಮದೇ ಹೆಸರುಳ್ಳ ಸೂಟ್ ನ್ನು ಧರಿಸಿದ್ದರು. ಈಗ ಆ ಸೂಟ್ ನ್ನು ಹರಾಜಿಡಲಾಗಿದ್ದು, ಅದರಿಂದ ಬರುವ ಹಣವನ್ನು...

ಭಾರತೀಯನ ಮೇಲೆ ಹಲ್ಲೆ ನಡೆಸಿದ್ದ ಯು.ಎಸ್ ಪೊಲೀಸ್ ಬಂಧನ: ಬಹಿರಂಗವಾದ ಹಲ್ಲೆ ವಿಡಿಯೋ

'ಅಮೆರಿಕಾ'ದಲ್ಲಿ ಗುಜರಾತ್‌ ಮೂಲದ ಸುರೇಶ್‌ ಭಾಯ್ ಪಟೇಲ್‌ ರನ್ನು ಹೊಡೆದು ಕೆಳಗೆ ತಳ್ಳಿರುವ ವಿಡಿಯೋ ದೃಷ್ಯ ದೊರೆತಿದ್ದು, ಹಲ್ಲೆ ನಡೆಸಿದ್ದ ಇಬ್ಬರು ಪೊಲೀಸ್‌ ಸಿಬಂದಿಗಳ ಪೈಕಿ ಒಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ ಬಿ ಐ) ಕೈಗೆತ್ತಿಕೊಂಡಿದೆ....

ನಿಧಿ ದುರುಪಯೋಗ ಆರೋಪಕ್ಕೆ ರಾಜಕೀಯ ಬಣ್ಣ ನೀಡಬೇಡಿ: ಸೆಟಲ್ವಾಡ್ ಗೆ ಸುಪ್ರೀಂ ಎಚ್ಚರಿಕೆ

ತಮ್ಮ ವಿರುದ್ಧ ಕೇಳಿಬಂದಿರುವ ನಿಧಿ ದುರ್ಬಳಕೆ ಆರೋಪಕ್ಕೆ ರಾಜಕೀಯ ಬಣ್ಣ ನೀಡಲು ಯತ್ನಿಸಿರುವ ತೀಸ್ತಾ ಸೆಟಲ್ವಾಡ್ ಅವರನ್ನು ಸುಪ್ರೀಂ ಕೋರ್ಟ್ ತಾರಾಟೆಗೆ ತೆಗೆದುಕೊಂಡಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ನೀಡದಂತೆ ಎಚ್ಚರಿಸಿದೆ. ಇದೇ ವೇಳೆ ತೀಸ್ತಾ ಸೆಟಲ್ವಾಡ್ ಬಂಧನಕ್ಕೆ ಫೆ.19ರ ವರೆಗೂ ಸುಪ್ರೀಂ...

ನಿಧಿ ದುರುಪಯೋಗ ಪ್ರಕರಣ: ತೀಸ್ತಾ ಸೆಟಲ್ವಾಡ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಅವರ ಪತಿ ಜಾವೇದ್ ಆನಂದ್ ಹಾಗು ಇತರರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಗುಜರಾತ್ ಹೈಕೋರ್ಟ್ ನಲ್ಲಿ ವಜಾಗೊಂಡಿದೆ. ಗುಲ್ಬರ್ಗ್ ಸೊಸೈಟಿ ನಿಧಿ ದುರುಪಯೋಗ ಪ್ರಕರಣದಲ್ಲಿ ಆರೋಪಿಯಾಗಿರುವ ತೀಸ್ತಾ ಸೆಟಲ್ವಾಡ್, ಸೇರಿದಂತೆ ಇನ್ನೂ ಹಲವರು ಪ್ರಕರಣದಲ್ಲಿ...

ಮೋದಿ ಮಂದಿರದ ಉದ್ಘಾಟನೆ ರದ್ದು

ಅಭಿಮಾನಿಗಳು ತಮ್ಮ ಮಂದಿರ ನಿರ್ಮಿಸಿದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ ನಂತರ 'ಮೋದಿ ಮಂದಿರ'ದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಗುಜರಾತ್‌ನ ರಾಜ್‌ ಕೋಟ್ ಸಮೀಪದ ಕೊಟಾರಿಯಾ ಗ್ರಾಮದಲ್ಲಿ ತಮ್ಮ ಅಭಿಮಾನಿಗಳು ಮಂದಿರ ನಿರ್ಮಿಸಿದ್ದಾರೆ ಎಂಬ ಸುದ್ದಿಯ ಬಗ್ಗೆ...

ನಮ್ಮದು ಹಿಂದೂ ವಿರೋಧಿ ಸರ್ಕಾರವಲ್ಲ : ಕೆ.ಜೆ. ಜಾರ್ಜ್

ನಮ್ಮ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬಹುತೇಕ ಹಿಂದೂಗಳೇ ಸರ್ಕಾರದಲ್ಲಿದ್ದಾರೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ವಿಶ್ವಹಿಂದೂ ಪರಿಷತ್ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪ್ರವೀಣ್ ತೊಗಾಡಿಯಾಗೆ ನಿರ್ಬಂಧ ವಿಧಿಸಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ...

ವಿದೇಶಿ ಬಂಡವಾಳ ಹೂಡಿಕೆ ಇಂದಿನ ಅಗತ್ಯ: ಪ್ರಧಾನಿ ಮೋದಿ

ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಅರ್ಥ ವ್ಯವಸ್ಥೆಗೆ ಪೂರಕವಾಗಿ ವಿದೇಶಿ ಬಂಡವಾಳ ಹೂಡಿಕೆ ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಪ್ರತಿಪಾದಿಸಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ಇಂದು ಆಯೋಜಿಸಿರುವ ವಿಶ್ವ ಬಂಡವಾಳ ಹೂಡಿಕೆದಾರರ ವೈಬ್ರೆಂಟ್ ಗುಜರಾತ್ 7ನೇ ಸಮಾವೇಶದಲ್ಲಿ ಮಾತನಾಡಿದ ಮೋದಿ,...

ಕಾಂಗ್ರೆಸ್ಸಿಗರು ಚುನಾವಣೆ ಎದುರಿಸುವುದು ಭಾರತದಲ್ಲೋ ಪಾಕಿಸ್ತಾನದಲ್ಲೋ?: ಅಮಿತ್ ಶಾ

ಗುಜರಾತ್ ನ ಕರಾವಳಿ ಪ್ರದೇಶದಲ್ಲಿ ಸ್ಫೋಟಗೊಂಡಿರುವ ಹಡಗಿನ ಬಗ್ಗೆ ತಮ್ಮದೇ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಚುನಾವಣೆ ಎದುರಿಸುತ್ತಿರುವುದು ಭಾರತದಲ್ಲೋ ಅಥವಾ ಪಾಕಿಸ್ತಾನದಲ್ಲೋ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಒಡಿಶಾಗೆ...

ಸ್ಫೋಟವಾದ ಹಡಗು ನಮ್ಮದಲ್ಲ: ಪಾಕಿಸ್ತಾನ

ಅರಬ್ಬಿ ಸಮುದ್ರದಲ್ಲಿ ಪತ್ತೆಯಾದ ಹಡಗುಗಳು ಪಾಕಿಸ್ತಾನದ ಹಡಗುಗಳಲ್ಲ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಮಾಹಿತಿ ರವಾನಿಸಿದೆ. ಕರಾಚಿಯಿಂದ ಯಾವುದೇ ಹಡಗು ಭಾರತದತ್ತ ಬಂದಿಲ್ಲ. ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಹಡಗುಗಳಲ್ಲ. ಕೇಟಿ ಬಂದರಿನಿಂದ...

ಗುಜರಾತ್ ಕರಾವಳಿಯಲ್ಲಿ ಉಗ್ರರಿದ್ದ ಪಾಕ್ ಹಡಗು ಸ್ಪೋಟ

ಪಾಕಿಸ್ತಾನದ ಉಗ್ರರಿಂದ ನಡೆಯಬಹುದಾಗಿದ್ದ ವಿಧ್ವಂಸಕ ಕೃತ್ಯವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಮುಂಬೈ ದಾಳಿ ಮಾದರಿಯಲ್ಲೇ ವಿಧ್ವಂಸಕ ಕೃತ್ಯ ನಡೆಸಲು ಹೊಸ ವರ್ಷಾಚರಣೆಯಂದು ಜಲ ಮಾರ್ಗದ ಮೂಲಕ ಭಾರತ ಪ್ರವೇಶಿಸಲು ಮುಂದಾಗಿದ್ದ ಪಾಕಿಸ್ತಾನದ ಉಗ್ರರ ಸಂಚನ್ನು ಸೇನೆ ಭೇದಿಸಿದೆ. ಡಿಸೆಂಬರ್ 31ರಂದು ಪಾಕಿಸ್ತಾನದ...

ಭಾರತೀಯರು ನನ್ನ ಗುರುಗಳು : ದಲೈಲಾಮ

ಭಾರತೀಯರು ನನ್ನ ಗುರುಗಳು ಎಂದು ಟಿಬೇಟ್ ನ ಧರ್ಮಗುರು ದಲೈಲಾಮ ಹೇಳಿದ್ದಾರೆ. ಭಾರತ ಭವ್ಯ ಪರಂಪರೆಯ ನಾಡಾಗಿದ್ದು ಭಾರತೀಯರು ಪ್ರಾಚೀನತೆಯಲ್ಲಿ ನನ್ನ ಗುರುಗಳೆಂದು ದಲೈಲಾಮ ಹೇಳಿಕೆ ನೀಡಿದ್ದಾರೆ. ಜ.1ರಂದು ಗುಜರಾತ್ ಗೆ ಭೇಟಿ ನೀಡಿ ಮಾತನಾಡಿದ ದಲೈಲಾಮ, ನನ್ನ ಮನಸ್ಸಲ್ಲಿ ನಳಂದಾದಲ್ಲಿನ...

ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಗೆ ಕ್ಲೀನ್ ಚಿಟ್

ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೆ ಸಿ.ಬಿ.ಐ ಕ್ಲೀನ್ ಚಿಟ್ ನೀಡಿದೆ. ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಕ್ ಎನ್ ಕೌಂಟರ್ ಪ್ರಕರಣವನ್ನು ನಕಲಿ ಎಂದು ಆರೋಪಿಸಿ, ಇದರಲ್ಲಿ ಅಮಿತ್ ಶಾ...

ಗುಜರಾತ್ ನಲ್ಲಿಯೂ ಘರ್ ವಾಪಸಿ ಮೂಲಕ 225 ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ವಾಪಸ್

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಮೂಲಕ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ವಿಶ್ವಹಿಂದೂ ಪರಿಷತ್, ಈಗ ಪ್ರಧಾನಿ ಮೋದಿ ರಾಜ್ಯವಾದ ಗುಜರಾತ್ ನಲ್ಲೂ 225 ಬುಡಕಟ್ಟು ಕ್ರಿಶ್ಚಿಯನ್ ರನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ ಎಂದು ಹೇಳಿದೆ. ಬುಡಕಟ್ಟು ಕ್ರಿಶ್ಚಿಯನ್...

ತಾಲೀಬಾನ್ ಉಗ್ರರ ಗುಂಪಿನಿಂದ ಪ್ರಧಾನಿ ಮೋದಿಗೆ ಜೀವ ಬೆದರಿಕೆ

ಪಾಕಿಸ್ತಾನದ ತಾಲೀಬಾನ್ ಸಂಘಟನೆಯಿಂದ ಪ್ರತ್ಯೇಕಗೊಂಡಿರುವ ಜಮತ್ ಉಲ್ ಅಹ್ರಾರ್ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ವಾಘಾ ಗಡಿ ಭಾಗದಲ್ಲಿ ನಡೆದ ಸ್ಫೋಟದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಟ್ವಿಟರ್...

2015ರ ವೈಬ್ರೆಂಟ್ ಗುಜರಾತ್ ಗೆ ಅಮೆರಿಕಾ ಸಹಭಾಗಿತ್ವ

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ವೈಂಬ್ರೆಟ್ ಗುಜರಾತ್ ಶೃಂಗಸಭೆಗೆ ಮತ್ತೊಂದು ರಾಷ್ಟ್ರದ ಸಹಭಾಗಿತ್ವ ದೊರೆತಿದೆ. 2015ರಿಂದ ಅಮೆರಿಕಾ ಕೂಡ ವೈಬ್ರೆಂಟ್ ಗುಜರಾತ್ ನಲ್ಲಿ ಸಹಭಾಗಿಯಾಗಲಿದೆ. ಸೆ.26ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಮೆರಿಕಾ...

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

'ಬಿಜೆಪಿ' ರಾಷ್ಟ್ರೀಯ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನ.1ರಂದು ಚಾಲನೆ ನೀಡಿದೆ. ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಖುದ್ದು ಸದಸ್ಯತ್ವ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ದೇಶಕ್ಕಾಗಿ ದುಡಿಯುವ ಪಕ್ಷದ ಸದಸ್ಯತ್ವ ಪಡೆಯಲು...

ಪಟೇಲರ ಜನ್ಮದಿನವನ್ನು ರಾಷ್ಟ್ರೀಯ ಏಕ್ತಾ ದಿನವನ್ನಾಗಿ ಆಚರಿಸಲು ಕೇಂದ್ರದ ನಿರ್ಧಾರ

ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ 139ನೇ ಜನ್ಮದಿನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಏಕ್ತಾ ದಿನವನ್ನಾಗಿ(ಯೂನಿಟಿ ಡೇ)ಆಚರಿಸಲು ನಿರ್ಧರಿಸಿದೆ. ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ಅ.31ರಂದು ದೇಶಾದ್ಯಂತ ರನ್ ಫಾರ್ ಯೂನಿಟಿ,...

ಗೋದ್ರಾ ಸಂತ್ರಸ್ತರಂತೆ ಸುಮ್ಮನಿರಲ್ಲಃ ಬಿಲಾವಲ್ ಭುಟ್ಟೋ

ಗುಜರಾತ್ ಸಂತ್ರಸ್ತರಂತೆ ಪಾಕಿಸ್ತಾನ ಸುಮ್ಮನೆ ಕೂರುವುದಿಲ್ಲ, ಪ್ರತಿಕಾರ ತೀರಿಸಿಕೊಳ್ಳಬಲ್ಲದು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ. ಕೆಲದಿನಗಳ ಹಿಂದಷ್ಟೇ, ಪಾಕಿಸ್ತಾನದ ಇತರ ಪ್ರಾಂತ್ಯಗಳಂತೆಯೇ ಕಾಶ್ಮೀರ ಕೂಡ ಪಾಕಿಸ್ತಾನದ್ದೇ ಆಗಿದೆ. ನಾನು ಭಾರತದ ವಶದಲ್ಲಿರುವ...

ಗುಜರಾತ್ ಕರಾವಳಿ ಭಾಗದಲ್ಲಿ ಪಾಕ್ ಮೀನುಗಾರರ ಬಂಧನ

'ಗುಜರಾತ್' ನ ಜಾಮ್ ನಗರ್ ಕರಾವಳಿ ಭಾಗದಲ್ಲಿ ಪಾಕಿಸ್ತಾನ ಮೂಲದ 6 ಮೀನುಗಾರರನ್ನು ಕರಾವಳಿ ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ. ಅತಿಕ್ರಮಣ ಪ್ರವೇಶ ಮಾಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಮೀನುಗಾರರನ್ನು ಬಂಧಿಸಲಾಗಿದ್ದು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೀನುಗಾರರನ್ನು ಅ.6ರಂದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ...

ಪ್ರಧಾನಿ ಮೋದಿಯವರಿಗೆ ನ್ಯೂಯಾರ್ಕ್ ನ್ಯಾಯಾಲಯದಿಂದ ಸಮನ್ಸ್ ಜಾರಿ

2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 13 ವರ್ಷಗಳ ಬಳಿಕ ಅಮೆರಿಕಾಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ಪಾತ್ರದ ಬಗ್ಗೆ ನ್ಯೂಯಾರ್ಕ್...

ಉಪಚುನಾವಣೆ ಫಲಿತಾಂಶ: ಶಿವಸೇನೆಯಿಂದ ಬಿಜೆಪಿಗೆ ನೀತಿ ಪಾಠ

ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ನಲ್ಲಿ ನಡೆದ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ದೊರೆತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಡಿ.ಎ ಮೈತ್ರಿ ಪಕ್ಷ ಶಿವಸೇನೆ,ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು ಎಂದು ಎಚ್ಚರಿಸಿದೆ. ಮುಂಬೈ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಸನಿಹದಲ್ಲೇ...

ಆಧಾರ್ ಕಾರ್ಡ್ ಪಡೆದ ಪವನ ಸುತ ಹನುಮ!

ಆಧಾರ್ ಕಾರ್ಡ್ ನ್ಯೂನತೆಗಳ ಬಗ್ಗೆ ಈ ಹಿಂದೆ ಹಲವು ಆರೋಪಗಳನ್ನು ಕೇಳಿದ್ದೀವಿ, ಗುಜರಾತ್ ನಲ್ಲಿ ನಾಯಿಗೂ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ ಸಕಲ ಸೃಷ್ಠಿಗೂ ಆಧಾರವಾಗಿರುವ ದೇವರಿಗೇ ನಮ್ಮ ಘನ ಸರ್ಕಾರ ಆಧಾರ್ ಕಾರ್ಡ್ ನೀಡಿದೆ. ಅಂದಹಾಗೆ ಆಧಾರ್...

ಜಪಾನಿ ಭಾಷೆಯಲ್ಲಿ ಮೋದಿ ಟ್ವೀಟ್ ಗೆ ಪುಳಕಿತರಾದ ಜಪಾನ್ ಜನತೆ

ಇತ್ತೀಚೆಗಷ್ಟೇ ನೇಪಾಳದ ಜನತೆ ಮೋದಿ ಮೋಡಿಗೆ ಒಳಗಾಗಿದ್ದರು. ಇದೀಗ ಜಪಾನ್ ಜನತೆ ಸರದಿ. ಆ.30ರಂದು ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಆರಂಭಿಸಲಿದ್ದಾರೆ. ಇದಕ್ಕೂ ಮುನ್ನ ಮೋದಿ ಜಪಾನ್ ಜನತೆ ಹೃದಯ ಗೆದ್ದಿದ್ದಾರೆ ಸಂಸತ್ ನಲ್ಲಿ ಭಾಷಣ ಮಾಡುವ ಮೂಲಕ ನೇಪಾಳೀಯರ ಹೃದಯ...

ದೇಶ ಮುಂದುವರೆಯುವುದೆಂದರೆ ರಾಜ್ಯಗಳು ಮುಂದುವರೆಯುವುದು- ಪ್ರಧಾನಿ ನರೇಂದ್ರ ಮೋದಿ

ದೇಶ ಮುಂದುವರಿಯುವುದೆಂದರೆ ರಾಜ್ಯಗಳು ಮುಂದುವರಿಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾರ್ಖಂಡ್ ನಲ್ಲಿ ವಿದ್ಯುತ್ ಗ್ರಿಡ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಭಾಗ ದುರ್ಬಲವಾಗಿರಬಾರದು, ಎಲ್ಲಾ ರಾಜ್ಯಗಳೂ ಅಭಿವೃದ್ಧಿ ಹೊಂದಬೇಕು, ಎಲ್ಲಾ ರಾಜ್ಯಗಳು ಅಭಿವೃದ್ಧಿ...

ರತನ್ ಟಾಟಾ ಹೇಳಿಕೆ ವಿರುದ್ಧ ಪ.ಬಂಗಾಳ ಸಚಿವ ಆಕ್ರೋಶ

ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿರುವ ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಬುದ್ದಿ ಸ್ಥಿಮಿತದಲ್ಲಿಲ್ಲ ಎಂದು ಪಶ್ಚಿಮ ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರ ಹೇಳಿದ್ದಾರೆ. ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರತನ್ ಟಾಟಾ ಪಶ್ಚಿಮ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited