Untitled Document
Sign Up | Login    
Dynamic website and Portals
  

Related News

ಯುದ್ಧ ವಿಮಾನಗಳಿಗೆ ಇಂಧನ ಪೂರೈಸಲು 6 ವಿನಾಗಳ ಖರೀದಿಗೆ ಚಿಂತನೆ

ಯುದ್ಧ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವ 6 ವಿಮಾನಗಳ ಖರೀದಿಗೆ ಕೇಂದ್ರ ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಫ್ಲೈಟ್ ರಿಫ್ಯೂಯೆಲಿಂಗ್ ಏರ್​ಕ್ರಾಫ್ಟ್ (ಎಫ್​ಆರ್​ಎ) ಮೂಲಕ ಬಾಂಬರ್ ಮತ್ತು ಯುದ್ಧ ವಿಮಾನಗಳಿಗೆ ಯುದ್ಧದ ಸಂದರ್ಭಗಳಲ್ಲಿ ತ್ವರಿತವಾಗಿ ಇಂಧನ ಪೂರೈಕೆ ಮಾಡುವ ಸಲುವಾಗಿ...

ಕಂಪ್ಯೂಟರ್ ಖರೀದಿ ಹಗರಣ: ದೆಹಲಿ ಸಿಎಂ ಪ್ರಧಾನ ಕಾರ್ಯದರ್ಶಿ ಬಂಧನ

50 ಕೋಟಿ ರೂಪಾಯಿ ಕಂಪ್ಯೂಟರ್ ಖರೀದಿ ಹಗರಣದಲ್ಲಿ ನಡೆದ ಭ್ರಷ್ಟಾಚಾರ ಆರೋಪದಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ನಾಲ್ವರನ್ನು ಸಿಬಿಐ ಬಂಧಿಸಿದೆ. ಹಗರಣದ ಪ್ರಮುಖ ರಾಜೇಂದ್ರ ಕುಮಾರ್ ಎಂದು ಸಿಬಿಐ ಮೂಲಗಳು ತಿಳಿಸಿದ್ದು, ಕುಮಾರ್...

ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣ: ಪ್ರಭಾವೀ ವ್ಯಕ್ತಿ ಭಾಗಿ -ಮನೋಹರ್ ಪಾರೀಕರ್‌

ಅಗಸ್ಟಾ ವೆಸ್ಟ್‌ ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಒಬ್ಬ ಅತ್ಯಂತ ಪ್ರಭಾವೀ ವ್ಯಕ್ತಿ ಶಾಮೀಲಾಗಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಸಂಸತ್ತಿನಲ್ಲಿ ಹೇಳುವ ಮೂಲಕ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಹೇಳದೇ ನಿಗೂಢತೆಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಅಗಸ್ಟಾ ಹಗರಣದಲ್ಲಿ ಯಾರು ಶಾಮೀಲಾಗಿದ್ದಾರೆ...

ಸೋನಿಯಾ ಗಾಂಧಿ ಆಗಸ್ಟಾ ವೆಸ್ಟ್ ಲ್ಯಾಂಡ್ ಲಂಚದ ಹಣವನ್ನು ಜಿನಿವಾದ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆಃ ಸ್ವಾಮಿ

ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಪಡೆದ ಲಂಚದ ಹಣವನ್ನು ಸೋನಿಯಾ ಗಾಂಧಿ ಎಲ್ಲಿಟ್ಟಿದ್ದಾರೆಂಬುದು ತಮಗೆ ಗೊತ್ತು ಎನ್ನುವುದರ ಮೂಲಕ ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ ಮತ್ತೊಂದು ಮಹತ್ವದ ವಿಷಯ ಬಹಿರಂಗಗೊಳಿಸಿದ್ದಾರೆ. ಲಂಚದ ಹಣವನ್ನು ಸೋನಿಯಾ ಗಾಂಧಿ ಅವರು ಜಿನೆವಾದ...

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಆರೋಪ ತಳ್ಳಿಹಾಕಿದ ಸೋನಿಯಾ ಗಾಂಧಿ

ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಪಟ್ಟಂತೆ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ, ಮುಚ್ಚಿಡುವುದಿಲ್ಲ. ಯಾವುದಕ್ಕೂ ಹೆದರುವುದೂ ಇಲ್ಲಾ ಎಂದು ಕಾಂಗೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ನನ್ನ ವಿರುದ್ಧ ಆರೋಪಿಸುತ್ತಿವೆ. ನಾನು...

36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳ ಸಹಿ

ಬಹು ನಿರೀಕ್ಷಿತ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳು ಸೋಮವಾರ ಸಹಿ ಹಾಕಿವೆ. ಸುಮಾರು 60,000 ಕೋಟಿ ರೂ. ವೆಚ್ಚದ ಈ ಮಹತ್ವದ ಅಂತರ-ಸರಕಾರೀ ಒಪ್ಪಂದ (Inter-Governmental Agreement -IGA) ಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದು,...

ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ: ಆರ್.ಬಿ.ಐ

ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವುದಿದ್ದರೆ ಇನ್ನು ಮುಂದೆ ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಎಲ್ಲಾ ರೀತಿಯ ಗ್ರಾಹಕ ವಸ್ತು ಖರೀದಿಗಳಿಗೆಲ್ಲೂ ಕಾಂಟ್ಯಾಕ್ಟ್ ಲೆಸ್ (contactless)...

ರೈಲ್ವೆ ಜನರಲ್‌ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ

ರೈಲ್ವೆ ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲೇ ನಿಂತು ಇನ್ನು ಮುಂದೆ ಟಿಕೆಟ್‌ ಖರೀದಿಸಬೇಕು ಎಂದೇನಿಲ್ಲ. ಅನ್‌ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ ಗಳನ್ನು ಇನ್ನು ಮೊಬೈಲ್‌ ಆಪ್‌ ಮೂಲಕವೇ ಖರೀದಿಸಬಹುದು. ತಿಂಗಳ ಪಾಸನ್ನೂ ಇದೇ ರೀತಿ ಖರೀದಿ ಮಾಡಬಹುದು. ಈ ವಿನೂತನ ಸೇವೆಗೆ...

ರಫೆಲ್‌ ಯುದ್ಧ ವಿಮಾನ ಖರೀದಿಗೆ ಕೇಂದ್ರ ನಿರ್ಧಾರ: ಸ್ವಾಮಿ ಗರಂ

ಫ್ರಾನ್ಸ್‌ ನೊಂದಿಗೆ ರಫೆಲ್‌ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅವರದ್ದೇ ಪಕ್ಷದ ನಾಯಕ ಸುಬ್ರಮಣಿಯನ್‌ ಸ್ವಾಮಿ ತಿರುಗಿಬಿದ್ದಿದ್ದಾರೆ. ಈಗಾಗಲೇ ಲಿಬಿಯಾ ಮತ್ತು ಈಜಿಪ್ಟ್ನಲ್ಲಿ ರಫೆಲ್‌ ವಿಮಾನಗಳ ಕಳಪೆ ಗುಣಮಟ್ಟ ಸಾಬೀತಾಗಿದೆ. ಹಲವು ರಾಷ್ಟ್ರಗಳು, ರಫೆಲ್‌ ಯುದ್ಧ ವಿಮಾನ...

ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿದ್ದ ಆಮ್ ಮಾಜಿ ಶಾಸಕನಿಗೆ ಬೆದರಿಕೆ ಕರೆ!

'ಆಮ್ ಆದ್ಮಿ ಪಕ್ಷ'ದ ಅಭಿಮಾನಿಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಪ್ ನ ಮಾಜಿ ಶಾಸಕ ರಾಜೇಶ್ ಗರ್ಗ್ ಆರೋಪಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ ಆರೋಪ ಹೊರಿಸಿದ್ದ ಹಿನ್ನೆಲೆಯಲ್ಲಿ ತಮಗೆ...

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಡಿ.ಕೆ.ಶಿವಕುಮಾರ್

ಈ ಬಾರಿಯ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್ ಅನುಸರಿಸುವ ಅವಶ್ಯಕತೆ ಬರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ 300 ರಿಂದ 500 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗುವ ಅಂದಾಜಿದ್ದು, ಈ ಬೇಡಿಕೆ ಪೂರೈಸಲು ಅಗತ್ಯ ವ್ಯವಸ್ಥೆ...

ವಿದ್ಯುತ್ ಮೀಟರ್ ಖರೀದಿ ಪ್ರಕರಣ: ಪರಿಷತ್ ನಲ್ಲಿ ಬಿಜೆಪಿ ಪ್ರತಿಭಟನೆ

ವಿದ್ಯುತ್ ಮೀಟರ್ ಖರೀದಿಯಲ್ಲಿ 180 ಕೋಟಿ ಅವ್ಯವಹಾರ ಪ್ರಕರಣ ವಿಧಾನಪರಿಷತ್ ನಲ್ಲಿ ಅತ್ತೆ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರ ಪ್ರತಿಭಟನೆಗೆ ಸಾಕ್ಷಿಯಾಯಿತು. ವಿದ್ಯುತ್ ಮೀಟರ್ ಖರೀದಿಯಲ್ಲಿ ಅವ್ಯವಹರ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರ ರೂಪಿಸಿದ್ದು, ವಿಧಾನ ಪರಿಷತ್ ಕಲಾಪ...

ವಿಧಾನಪರಿಷತ್ ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ವಾಗ್ವಾದ

ವಿಧಾನಪರಿಷತ್ ನಲ್ಲಿ ಆಡಳಿತ, ವಿಪಕ್ಷಗಳ ನಡುವೆ ವಾಗ್ವಾದ ಆರಂಭವಾಗಿದೆ. ವಿದ್ಯುತ್ ಮೀಟರ್ ಖರೀದಿ ಸಬಂಧ ಉಭಯ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯಿತು. ಸಿಂಗಲ್ ಫೇಸ್ ಎಲೆಕ್ಟ್ರೋ ಮೀಟರ್ ಖರೀದಿಯಲ್ಲಿ 180 ಕೋಟಿ ಅವ್ಯಹಾರ ನಡೆದಿದೆ. ಸ್ವತ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ...

ಬಸ್ ಖರೀದಿ ಅವ್ಯವಹಾರ ತನಿಖೆ : ರಾಮಲಿಂಗಾರೆಡ್ಡಿ

ಬಸ್ ಖರೀದಿ ಅವ್ಯವಹಾರ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾ ನಿಯಂತ್ರಿತ ಮಾರ್ಕೊಫೋಲೊ ಬಸ್‌ನ ತಾಂತ್ರಿಕ ಕಾರಣಗಳಿಂದ ನಷ್ಟವಾಗುತ್ತಿದೆ. ಈ ಬಸ್‌ಗಳನ್ನು ಸ್ಥಗಿತಗೊಳಿಸುವ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ...

ಮೆಕ್ಕೆ ಜೋಳ ಖರೀದಿ : ದೆಹಲಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ಒತ್ತಾಯ

ಕನಿಷ್ಠ ಬೆಂಬಲ ಯೋಜನೆಯಡಿ ಮೆಕ್ಕೆ ಜೋಳವನ್ನು ಖರೀದಿಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಲು ದೆಹಲಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಕುರಿತಂತೆ ನಿಯಮ...

ಅನ್ಯ ರಾಷ್ಟ್ರಗಳು ದಾಳಿ ನಡೆಸಲು ಭಯ ಪಡುವಂತಹ ಭಾರತ ನಿರ್ಮಿಸುತ್ತೇವೆ: ಪರೀಕ್ಕರ್

ಭಾರತ ಎಂದಿಗೂ ಆಕ್ರಮಣಕಾರಿ ನಿಲುವು ತಳೆಯಲು ಬಯಸುವುದಿಲ್ಲ ಆದರೆ ಯಾವುದೇ ರಾಷ್ಟ್ರಗಳು ನಮ್ಮ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಬಾರದು ಅಂತಹ ಭಾರತವನ್ನು ನಿರ್ಮಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಹೇಳಿದ್ದಾರೆ. ನವದೆಹಲಿಯ ವಾಯುಪಡೆ ಕೇಂದ್ರದಲ್ಲಿ ಮಾತನಾಡಿದ ರಕ್ಷಣಾ ಸಚಿವರು,...

814 ಫಿರಂಗಿ ಖರೀದಿಗೆ ಸಮ್ಮತಿ

1986ರಲ್ಲಿ ಬೋಫೋರ್ಸ್ ಫಿರಂಗಿ ಖರೀದಿ ಹಗರಣ ಬೆಳಕಿಗೆ ಬಂದ ಬಳಿಕ ಒಂದೇ ಒಂದು ಫಿರಂಗಿಯನ್ನೂ ಖರೀದಿಸದಿದ್ದ ಭಾರತ, 28 ವರ್ಷಗಳ ಬಳಿಕ ಮತ್ತೆ ಆ ರೀತಿಯ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ. ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ...

ಡಿ.ಕೆ.ಶಿವಕುಮಾರ್ ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿದ್ದಾರೆ: ಜೋಷಿ

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲದಿದ್ದರೂ ಲೋಡ್ ಶೆಡ್ದಿಂಗ್ ಜಾರಿ ಮಾಡಲು ಹೊರಟಿರುವ ಇಂಧನ ಸಚಿವ ಡಿ.ಕೆ.ಶಿವಕುಮರ್ ಕೃತಕ ವಿದ್ಯುತ್ ಅಭಾವ ಸೃಷ್ಟಿಸಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮತನಾಡಿದ ಅವರು, ರಾಜ್ಯದಲ್ಲಿ ಜಲಾಶಯಗಳು ಭರ್ತಿಯಾಗಿವೆ....

ಮಹದೇವ್ ಪ್ರಸಾದ್ ವಿರುದ್ಧ ಚಾರ್ಜ್ ಶೀಟ್

ಅಕ್ರಮ ಸೈಟ್ ಪಡೆದ ಆರೋಪ ಹಿನ್ನಲೆಯಲ್ಲಿ ಸಕ್ಕರೆ ಹಾಗೂ ಸಹಕಾರ ಸಚಿವ ಮಹದೇವ್ ಪ್ರಸಾದ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಖಾಸಗಿ ದೂರಿನ ಅನ್ವಯ ಸಚಿವ ಮಹದೇವ್ ಪ್ರಸಾದ್ ವಿರುದ್ಧ ಲೋಕಾಯುಕ್ತ ಪೊಲೀಸರು ಚಾಮರಾಜನಗರ ಸೆಷನ್ ಕೋರ್ಟ್ ಗೆ ಚಾರ್ಜ್ ಶೀಟ್...

ಯುರೋಪ್ ಮೂಲದ ಪ್ಯೂಜಿಯೋತ್ ಸ್ಕೂಟರ್ ಕಂಪನಿ ಖರೀದಿಸಲಿರುವ ಮಹೀಂದ್ರಾ

ಯುಟಿಲಿಟಿ ವಾಹನಗಳ ದಿಗ್ಗಜ ಮಹೀಂದ್ರಾ ಹಾಗೂ ಮಹೀಂದ್ರಾ ಯುರೋಪ್ ಮೂಲದ ಪಿಎಸ್ಎ ಪ್ಯೂಜಿಯೋತ್ ಸಿಟ್ರೊಯೆನ್ ನ ಸ್ಕೂಟರ್ ಕಂಪನಿಯನ್ನು ಖರೀದಿ ಮಾಡಲಿದೆ. ಈ ಸಂಬಂಧ ಉಭಯ ಕಂಪನಿಗಳ ನಡುವೆ ಅಂತಿಮ ಹಂತದ ಮಾತುಕತೆ ನಡೆದಿದೆ. ಮಹೀಂದ್ರಾ ಕಂಪನಿ ಪಿಎಸ್ಎ ಪ್ಯೂಜಿಯೋತ್ ಕಂಪನಿಯ...

ಆಪ್ ನ ದೆಹಲಿ ಶಾಸಕರ ಖರೀದಿ ಆರೋಪ ತಳ್ಳಿಹಾಕಿದ ಬಿಜೆಪಿ

'ದೆಹಲಿ'ಯಲ್ಲಿ ಸರ್ಕಾರ ರಚನೆಗೆ ಕಸರತ್ತು ನಡೆಸಿರುವ ಬಿಜೆಪಿ ಆಪ್ ಪಕ್ಷದ ಶಾಸಕರನ್ನು ಖರೀದಿಸುತ್ತಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಆಮ್ ಆದ್ಮಿ ಪಕ್ಷದ ಶಾಸಕರಿಗೆ ಬಿಜೆಪಿ ಆಮಿಷವೊಡ್ಡುತ್ತಿರುವ ವಿಡಿಯೋ ಒಂದನ್ನು ಆಪ್ ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಸರ್ಕಾರ ರಚನೆಗೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited