Untitled Document
Sign Up | Login    
Dynamic website and Portals
  

Related News

ವರ್ಷಕ್ಕೆ 60 ದಿನ ಸದನದ ಕಲಾಪ: ಕೆ. ಬಿ. ಕೋಳಿವಾಡ

ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿನಿತ್ಯ ನಾಲ್ಕು ಗಂಟೆಗಳ ಕಾಲ ಕಡ್ಡಾಯವಾಗಿ ಸದನದ ಕಾರ್ಯಕಲಾಪಗಳು ನಡೆಯಬೇಕು ಎಂದು ವಿಧಾನಮಂಡಲ ನಿಯಮಾವಳಿ ತಿದ್ದುಪತಿ ಜಂಟಿ ಸಮಿತಿಯ ಅಧ್ಯಕ್ಷ ಹಾಗೂ ವಿಧಾನಸಭೆಯ ಅಧ್ಯಕ್ಷರೂ ಆದ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ. ವಿಧಾನಮಂಡಲ ನಿಯಮಾವಳಿ ತಿದ್ದುಪಡಿ ಜಂಟಿ ಸದನ ಸಮಿತಿಯ ಮೊದಲ...

ರೂಲ್ಸ್ ಕಮಿಟಿ ರಚನೆ: ಸದನಗಳಲ್ಲಿ ಗದ್ದಲ, ಧರಣಿಗಳಿಗೆ ಬ್ರೇಕ್

ಇನ್ನುಮುಂದೆ ವಿಧಾನಮಂದಲದ ಉಭಯ ಸದನಗಳ ಕಲಾಪದ ವೆಳೆ ಗದ್ದಲೆ, ಕೋಲಾಹಲ, ಧರಣಿ ನಡೆಸುವುದಕ್ಕೆ ಬ್ರೇಕ್ ಬೀಳಲಿದೆ. ಸುಗಮ ಕಲಾಪಕ್ಕಾಗಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ವಿಧಾನಸಭೆ ಸ್ಪೀಕರ್ ಕೋಳಿವಾಡ ನೇತೃತ್ವದಲ್ಲಿ ರೂಲ್ಸ್ ಕಮಿಟಿ ರಚನೆಯಾಗಿದೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್....

ಕೆಲವರಿಗೆ ವಯಸ್ಸು ಮಾತ್ರ ಹೆಚ್ಚುತ್ತದೆ, ಬುದ್ಧಿ ಬೆಳೆಯುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನ ಮಂತ್ರಿಗಳಾದ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಸಂಸತ್ತಿನ ಕಾರ್ಯ ಕಲಾಪಗಳು ಶಾಂತಿಯುತವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಸಲು ಅವಕಾಶ ಮಾಡಿ ಕೊಡಿ ಎಂದು ಹೇಳಿದರು. ನಾವು ಸಂಸತ್ತಿನ...

ಸದನದಲ್ಲಿ ವಾಚ್ ಗದ್ದಲ

ವಿಧಾನಸಭೆಯ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಇಡೀ ಕಲಾಪ ವಾಚ್ ಗದ್ದಲದಲ್ಲಿ ಮುಳುಗಿತ್ತು. ಎರಡೂ ಸದನಗಳಲ್ಲಿ ಪ್ರತಿಪಕ್ಷವಾದ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್‌ ಪ್ರಕರಣದ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಮುಂದಾದರೆ, ಕಾಂಗ್ರೆಸ್‌ ಸದಸ್ಯರು ಇದಕ್ಕೆ ಪ್ರತಿರೋಧವೊಡ್ಡಿದ್ದರಿಂದ...

ದುಬಾರಿ ವಾಚ್ ಈಗ ಸರ್ಕಾರದ ಸ್ವತ್ತು

ತೀವ್ರ ವಿವಾದಕ್ಕೀಡಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿವಾದ ಅಂತ್ಯದತ್ತ ಸಾಗಿದೆ. ಹಲವಾರು ದಿನಗಳಿಂದ ಬಾರೀ ವಿವಾದಕ್ಕೆ ಕಾರಣವಾದ ವಾಚ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸರ್ಕಾರದ ವಶಕ್ಕೆ ಒಪ್ಪಿಸುವ ಮೂಲಕ ಹಲವಾರು ದಿನಗಳಿಂದ ನಡೆದಿದ ವಾಗ್ವಾದಕ್ಕೆ ಅಂತ್ಯ...

ಅವರಿಗೆ ಏನು ಹೇಳಬೇಕೆನಿಸುತ್ತದೆಯೋ ಹೇಳಲಿಃ ಪ್ರಧಾನಿಗೆ ಸೋನಿಯಾ ಗಾಂಧಿ ತಿರುಗೇಟು

ಯಾರೊಬ್ಬರ ಮರ್ಜಿಗೆ ಅನುಗುಣವಾಗಿ ಪ್ರಜಾಪ್ರಭುತ್ವವನ್ನು ನಡೆಸಲಾಗದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಗುರುವಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರಿಗೆ ಏನು ಹೇಳಬೇಕೆಂದೆನಿಸುತ್ತದೆಯೋ ಹೇಳಲಿ ಎಂದು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್...

ಬಿಜೆಪಿ ಶಾಸಕ ಆರ್‌ ಜಗದೀಶ್‌ ನಿಧನ

ಬಿಜೆಪಿ ಶಾಸಕರಾದ ಆರ್‌ ಜಗದೀಶ್‌ ಅವರು ಹೃದಯಾಘಾತದಿಂದ ಸೋಮವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 58 ವಯಸ್ಸಿನ ಜಗದೀಶ್ ಅವರು ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕರಾಗಿದ್ದರು. ಜಗದೀಶ್‌ ಆವರು ಸೋಮವಾರದಂದು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಹಾಜರಿದ್ದರು. ಮಧ್ಯಾಹ್ನದ...

ಟಿವಿ ಚಾನೆಲ್, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ: ಕೆ ಎಸ್ ಈಶ್ವರಪ್ಪ

ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ, ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಈಶ್ವರಪ್ಪ ಅವರು, ರಾಜ್ಯದಲ್ಲಿ ಟಿವಿ ಚಾನೆಲ್, ದಿನ ಪತ್ರಿಕೆಗಳನ್ನು ಬ್ಯಾನ್...

ಕಾಂಗ್ರೆಸ್ ಒಂದು ಕುಟುಂಬವನ್ನು, ಬಿಜೆಪಿ ರಾಷ್ಟ್ರವನ್ನು ಉಳಿಸಲು ಬಯಸುತ್ತದೆ: ಪ್ರಧಾನಿ ಮೋದಿ

ನಿರಂತರ ಪ್ರತಿಭಟನೆ ನಡೆಸಿ ಮೂರು ವಾರಗಳ ಸಂಸತ್ ಕಲಾಪಕ್ಕೆ ಆಡ್ಡಿ ಮಾಡಿದ ಕಾಂಗ್ರೆಸ್, ತನ್ನ ನಾಯಕರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೇಲೆ ಮಾಡಿದ ದಾಳಿಗೆ ಪ್ರತಿಸ್ಪರ್ಧೆ ಕೊಟ್ಟಂತೆ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಒಂದು ಕುಟುಂಬವನ್ನು ಉಳಿಸಲು ಬಯಸುತ್ತದೆ,...

ಗಾಂಧಿ ಕುಟುಂಬದ ಹೊರಗಿನವರು ದೇಶ ನಡೆಸುವುದು ಸೋನಿಯಾ-ರಾಹುಲ್ ಗೆ ಸಹ್ಯವಾಗುತ್ತಿಲ್ಲ-ಜೇಟ್ಲಿ

2014ರ ಚುನಾವಣಾ ಸೋಲನ್ನು ಅರಗಿಸಿಕೊಳ್ಳಲು ಗಾಂಧಿ ಪರಿವಾರಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೇಶದ ಪ್ರಗತಿಗೆ ಅವರು ತಡೆಯೊಡ್ಡುತ್ತಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸೋನಿಯಾ-ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲಿ ಮಹತ್ವದ ಜಿ.ಎಸ್.ಟಿ...

ಪ್ರತಿಭಟನೆ ನಿಲ್ಲಿಸಿ, ಇಲ್ಲವಾದರೆ ನಿಮ್ಮ ಜೊತೆ ನಾವಿಲ್ಲ: ಕಾಂಗ್ರೆಸ್ಸಿಗೆ ಮುಲಾಯಂ

'ಪ್ರತಿಭಟನೆ ನಿಲ್ಲಿಸಿ, ಇಲ್ಲವಾದರೆ ನಿಮ್ಮ ಜೊತೆ ನಾವಿಲ್ಲ' - ಇದು ಕಾಂಗ್ರೆಸ್ ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೀಡಿದ ಎಚ್ಚರಿಕೆ. ಮುಂಗಾರು ಅಧಿವೇಶನ ಆರಂಬವಾದಂದಿನಿಂದ ಒಂದೇ ಒಂದು ದಿನ ಕಲಾಪ ನಡೆಸಲು ಬಿಡದೆ ನೂರಾರು ಕೋಟಿ ರೂ....

ಮನ್ ಕಿ ಬಾತ್ ಚಾಂಪಿಯನ್ ಮೌನ ವೃತ ತಾಳಿದ್ದಾರೆ - ಸೋನಿಯಾ ಗಾಂಧಿ

ವಿವಾದದ ಸುಳಿಯಲ್ಲಿ ಸಿಲುಕಿರುವ ಬಿಜೆಪಿ ಮುಖಂಡರ ರಾಜೀನಾಮೆಯವರೆಗೆ ಕಾಂಗ್ರೆಸ್ ಸಂಸತ್ತಿನಲ್ಲಿ ತನ್ನ ಪ್ರತಿಭಟನೆ ಮುಂದುವರಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುಧ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ,...

ಬಿಜೆಪಿಯವರು ಸುಳ್ಳಿನ ಸರದಾರರುಃ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ನ ಅಂಕಿ ಅಂಶದ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡುತ್ತಿರುವ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ರೊಚ್ಚಿಗೆದ್ದ ಘಟನೆ ನಡೆಯಿತು. ಕೇಂದ್ರದಿಂದ 4,690 ಕೋಟಿ ರೂಪಾಯಿ ಕೊರತೆಯಾಗಿದೆ ಎಂದು ಸಿದ್ದರಾಮಯ್ಯ...

ಕೆನಡಾದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಕೈಗೊಂಡಿದ್ದ ಕೆನಡಾ ಪ್ರವಾಸದಲ್ಲಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಟೋರಂಟೋದಲ್ಲಿ ಭಾಷಣ ಮಾಡುವಾಗ ಯುಪಿಎ ಸರ್ಕಾರ ಮಾಡಿರುವ ಕೊಳೆಯನ್ನು ನಾವು ತೊಳೆಯಲಿದ್ದೇವೆ...

ಪ್ರಶ್ನೋತ್ತರ ಕಲಾಪ ರದ್ದುಗೊಳಿಸಿ ನೆಟ್ ನ್ಯೂಟ್ರಲಿಟಿ ಬಗ್ಗೆ ಚರ್ಚೆ ನಡೆಸಿ: ರಾಹುಲ್

'ಸಂಸತ್ ಅಧಿವೇಶನ'ದ ಪ್ರಶ್ನೋತ್ತರ ಕಲಾಪವನ್ನು ರದ್ದುಗೊಳಿಸಿ ನೆಟ್ ನ್ಯೂಟ್ರಲಿಟಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ನೆಟ್ ನ್ಯೂಟ್ರಲಿಟಿ ಬಗ್ಗೆ ಇಂದಿನ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ, ಇದಕ್ಕಾಗಿ ಪ್ರಶ್ನೋತ್ತರ ಕಲಾಪವನ್ನು...

ಬಿಬಿಎಂಪಿ ವಿಭಜನೆಗೆ ಪರಿಷತ್ ನಲ್ಲಿ ಅಡ್ಡಿ

ಬಿಬಿಎಂಪಿಯನ್ನು ಮೂರು ವಿಭಾಗಗಳನ್ನಾಗಿ ವಿಭಜಿಸುವ ನಿರ್ಧಾರ ಕೈಗೊಂಡಿರುವ ರಾಜ್ಯ ಸರಕಾರ, ಪ್ರತಿಪಕ್ಷ ವಿರೋಧವನ್ನು ಲೆಕ್ಕಿಸದೇ ಇದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ವಿಧಾನಸಭೆಯ ಅಂಗೀಕಾರ ಪಡೆದಿದೆ. ಆದರೂ, ಬಿಬಿಎಂಪಿ ವಿಭಜನೆ, ಚುನಾವಣೆ ಘೋಷಣೆ ಕುರಿತ ಗೊಂದಲ ಮುಂದುವರಿದಿದೆ. ಈ ಮಧ್ಯೆ, ಚುನಾವಣೆ ದಿನಾಂಕ ಪ್ರಕಟಿಸಲು ಏ.20ರ...

ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲು ಹೊಸ ನೀತಿ: ಸಿದ್ದರಾಮಯ್ಯ

ಬೆಂಗಳೂರನ್ನು ಕಾಡುತ್ತಿರುವ ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕಲು ಜಾಹೀರಾತು ನೀತಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾ.26ರ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ಜಾಹೀರಾತು ಮಾಹಿಫಾ ಬಗ್ಗೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೆಂಗಳೂರಿನಲ್ಲಿ ದೊಡ್ಡ ಜಾಹೀರಾತು...

ಏ.5ಕ್ಕೆ ಭೂ ಸುಗ್ರೀವಾಜ್ಞೆ ಅವಧಿ ಅಂತ್ಯ

ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಎನ್‌ ಡಿಎ ಸರ್ಕಾರದ ಭೂ ಸ್ವಾಧೀನ ಮಸೂಧೆ ಸುಗ್ರೀವಾಜ್ಞೆ ಅವಧಿ ಇದೇ ಏ.5ರಂದು ತನ್ನಿಂದ ತಾನಾಗಿಯೇ ರದ್ದುಗೊಳ್ಳಲಿದೆ. ಈ ಸುಗ್ರೀವಾಜ್ಞೆ ಘೋಷಿಸಿ, ಏ.5ಕ್ಕೆ ಆರು ತಿಂಗಳು ಪೂರ್ಣವಾಗಲಿದ್ದು, ಬಜೆಟ್‌ ಅಧಿವೇಶನದಲ್ಲಿ ಒಳಗೆ ಸದನದಲ್ಲಿ...

ಹಂದಿಜ್ವರದ ವಿಚಾರ ಬಿಟ್ಟು ಎಚ್1ಎನ್1 ಬಗ್ಗೆ ಚರ್ಚಿಸಿ ಎಂದ ಡಿ.ಹೆಚ್.ಶಂಕರಮೂರ್ತಿ

ಹಂದಿಜ್ವರದ ವಿಚಾರ ಬಿಟ್ಟು ಎಚ್1ಎನ್1 ಬಗ್ಗೆ ಚರ್ಚಿಸಿ. ಬೇರೆ ವಿಷಯ ಮಾತನಾಡಿ ಚರ್ಚೆಯನ್ನು ಬೇರೆಡೆ ಸೆಳೆಯಬಾರದು ಎಂದು ಹೇಳುವ ಮೂಲಕ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಅಜ್ನಾನ ಪ್ರದರ್ಶಿಸಿದ ಘಟನೆ ನಡೆಯಿತು. ವಿಧಾನಪರಿಷತ್ ನಲ್ಲಿನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿಯ ವಿಮಲಾ ಗೌಡ, ರಘುನಾಥ್...

ಕ್ಷಮೆ ಯಾಚಿಸುವಂತೆ ವೆಂಕಯ್ಯ ನಾಯ್ಡುಗೆ ವಿಪಕ್ಷಗಳ ಆಗ್ರಹ

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕ್ಷಮೆಯಾಚಿಸುವಂತೆ ವಿರೋಧಪಕ್ಷಗಳು ಪಟ್ಟು ಹಿಡಿದಿದ್ದು, ಕ್ಷಮೆ ಯಾಚಿಸದೇ ಇದ್ದರೆ ರೈಲ್ವೆ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿವೆ. ವಿರೋಧ ಪಕ್ಷಗಳು ಸದನ ಹಾಳುಮಾಡುವ ಮನಸ್ಥಿತಿಯನ್ನು ಹೊಂದಿವೆ ಎಂದು ವೆಂಕಯ್ಯ ನಾಯ್ಡು...

ಮತಾಂತರದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷ್ಯ ವಹಿಸಿದೆ: ಕಾಂಗ್ರೆಸ್

'ಮತಾಂತರ'ದ ವಿಷಯ ಉತ್ತರ ಪ್ರದೇಶದ ವಿಧಾನಸಭೆಯಲ್ಲೂ ಚರ್ಚೆಗೆ ಬಂದಿದೆ. ಫೆ.23ರ ವಿಧಾನಸಭಾ ಕಲಾಪದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉತ್ತರ ಪ್ರದೇಶ ಸರ್ಕಾರ ಮತಾಂತರವನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದೆ. ಕಳೆದ ವರ್ಷದ ಕೊನೆ 5 ತಿಂಗಳಲ್ಲಿ...

ಬಜೆಟ್ ಅಧಿವೇಶನ: ದೇಶದ ಜನತೆಗೆ ಹಲವು ನಿರೀಕ್ಷೆಗಳಿವೆ- ಪ್ರಧಾನಿ ಮೋದಿ

ದೇಶದ ಜನತೆ ಹಲವು ನಿರೀಕ್ಷೆಗಳೊಂದಿಗೆ ಬಜೆಟ್ ಅಧಿವೇಶನವನ್ನು ಎದುರು ನೋಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡಿ, ಪಕ್ಷಬೇಧ ಮರೆತು ಎಲ್ಲರೂ...

ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ: ಸದನ ಕಲಾಪ ಕದನವಾಗುವ ಸಾಧ್ಯತೆ

ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಿವೆ. ಈ ನಿಟ್ಟಿನಲ್ಲಿ ಇಂದಿನಿಂದ ಆರಂಭವಾಗುವ ವಿಧಾನಮಂಡಲದ ಕಲಾಪ ರಂಗೇರುವ ಸಾಧ್ಯತೆ ದಟ್ಟವಾಗಿದೆ. ಅರ್ಕಾವತಿ ಪ್ರಕರಣದಲ್ಲಿ ಚರ್ಚೆಗೆ ಅವಕಾಶ ಪಡೆದು, ಸರ್ಕಾರದ...

ಬಿಡಿಎ ಕಲೆಕ್ಷನ್ ಸೆಂಟರ್ ಆಗಿದೆ: ಚೆಲುವರಾಯಸ್ವಾಮಿ

ಬಿಡಿಎ ಸೈಟ್ ಹಂಚಿಕೆ ವಿಚಾರ ವಿಧಾನಸಭೆ ಕಲಾಪದಲ್ಲಿ ಚರ್ಚೆಗೆ ಕಾರಣವಾಯಿತು. ಬಿಡಿಎ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಶಾಸಕ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ವಿಧಾಸಭಾ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ಚಲುವರಾಯಸ್ವಾಮಿ, ಸೈಟ್ ಗಳನ್ನು ಮಾರಾಟ ಆಡುವುದು ಬಿಡಿಎ ಕೆಲಸ. ಆದರೆ ಬಿಡಿಎ...

ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭ

ಈ ವರ್ಷದ ಮೊದಲ ವಿಧಾನಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ಇಂದು ಚಾಲನೆ ದೊರೆಯಲಿದೆ. ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಲಿರುವ ಜಂಟಿ ಸದನಗಳ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಉಭಯ ಸದನಗಳ ಸದ್ಯಗಳನ್ನುದ್ದೇಶಿಸಿ ಹಿಂದಿಯಲ್ಲಿ ಭಾಷಣ...

ಫೆ.2ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ

ವಿಧಾನಮಂಡಲದ ಉಭಯ ಸದನಗಳ 2015ನೇ ಸಾಲಿನ ಅಧಿವೇಶನಫೆ.2ರಿಂದ ಆರಂಭವಾಗಲಿದೆ. ಒಟ್ಟು 10 ದಿನಗಳ ಕಾಲ ಅಂದರೆ ಫೆ. 13ರವರೆಗೆ ನಡೆಯುವ ಅಧಿವೇಶನದ ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ....

ಸಂಸತ್ ಕಲಾಪ ವ್ಯರ್ಥಮಾಡಬೇಡಿ ವಿಪಕ್ಷಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚನೆ

ಅನಾವಶ್ಯಕ ಕಾರಣಗಳನ್ನು ಮುಂದಿಟ್ಟುಕೊಂಡು ಸಂಸತ್ ಕಲಾಪವನ್ನು ವ್ಯರ್ಥ ಮಾಡದಿರುವಂತೆ ವಿರೋಧ ಪಕ್ಷಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚನೆ ನೀಡಿದ್ದಾರೆ. ಐಐಟಿ, ಎನ್.ಐ.ಟಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಕಳೆದ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಕೋಲಾಹಲದಿಂದ ಸಂಸತ್ ಅಧಿವೇಶನ ವ್ಯರ್ಥವಾಗಿದ್ದರ...

ಭಾರತ ಹಿಂದೂ ರಾಷ್ಟ್ರವೆಂಬ ಭಾಗವತ್ ಹೇಳಿಕೆಗೆ ಸಂಸತ್ ನಲ್ಲಿ ಪ್ರತಿಭಟನೆ

ಡಿ.22ರ ಸಂಸತ್ ಕಲಾಪದಲ್ಲಿ ವಿರೋಧ ಪಕ್ಷಗಳು ಕೋಲಾಹಲವೆಬ್ಬಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಗಿದೆ. ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಮರುಮತಾಂತರವನ್ನು ಸಮರ್ಥಿಸಿ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ವಿರೋಧಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್, ತೃಣ ಮೂಲ...

ವಿಧಾನಸಭಾ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಕೋಲಾಹಲದ ನಡುವೆಯೇ ಕಲಾಪ ಅಂತ್ಯ

ಕಳೆದ 10 ದಿನಗಳಿಂದ ನಡೆಯುತ್ತಿದ್ದ ವಿಧಾನ ಮಂಡಲ ಅಧಿವೇಶನ ಡಿ.20ರಂದು ಮುಕ್ತಾಯಗೊಂಡಿದೆ. ವಿಧಾನಸಭಾ ಕಲಾಪವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ವಿಧಾನಸಭಾ ಕಲಾಪದ ಕೊನೆಯ ದಿನವೂ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ವಿಧಾಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಳಂಕಿತ...

ರಾಮ ಮಂದಿರ ನಿರ್ಮಾಣವಾಗಬೇಕೆಂದ ಯುಪಿ ರಾಜ್ಯಪಾಲರ ವಿರುದ್ಧ ವಿಪಕ್ಷಗಳ ಆಕ್ರೋಶ

ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಹೇಳಿಕೆ ನೀಡಿದ್ದ ರಾಜ್ಯಪಾಲ ರಾಮ್ ನಾಯ್ಕ್ ವಿರುದ್ಧ ಸಂಸತ್ ನಲ್ಲಿ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಡಿ.12ರ ಸಂಸತ್ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ರಾಮ್ ನಾಯ್ಕ್ ವಿರುದ್ಧ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳು, ರಾಮಮಂದಿರ ನಿರ್ಮಾಣವಾಗಬೇಕೆಂದು ಹೇಳಿಕೆ...

ಸದನದಲ್ಲಿ ಫೋಟೊ ವೀಕ್ಷಿಸಿದ ಪ್ರಕರಣ: ಕಲಾಪ ಮುಂದೂಡಿಕೆ

ಬಿಜೆಪಿ ಶಾಸಕ ಪ್ರಭು ಚೌಹಾಣ್ ಮೊಬೈಲ್‌ನಲ್ಲಿ ಫೋಟೊ ವೀಕ್ಷಿಸಿದ ಪ್ರಕರಣ ಸದನದಲ್ಲಿ ಮಾರ್ಧನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಕದನಕ್ಕೆ ಕಾರಣವಾಗಿ, ಕೋಲಾಹಲ ಉಂಟಾದ ಪರಿಣಾಮ ಸದನವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಕಲಾಪ ಪ್ರಾರಂಭವಾಗುತ್ತಿದ್ದಂತೆ...

ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪ್ರತಿಧ್ವನಿ: ಕಲಾಪ ಮುಂದೂಡಿಕೆ

ವಿಧಾನಮಂಡಲ ಅಧಿವೇಶ ಆರಂಭವಾದ ಮೊದಲನ್ ದಿನವೇ ರಾಜ್ಯ ಸರ್ಕಾರ ವಿಪಕ್ಷಗಳ ಪ್ರತಿಭಟನೆ ಎದುರಿಸಬೇಕಾಯಿತು. ಸದನದಲ್ಲಿ ಗದ್ದಲ-ಕೋಲಾಲ ಆರಂಭವಾಗಿ ಕಲಾಪವನ್ನು ಮುಂದೂಡಲಾಯಿತು. ಕಬ್ಬು ಬೆಳೆಗಾರರ ಸಮಸ್ಯೆ, ಕಳಂಕಿತ ಸಚಿವರ ರಾಜೀನಾಮೆಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿದ ಪ್ರತಿಪಕ್ಷ ಬಿಜೆಪಿ ಪ್ರಸ್ತಾಪಿಸಿದ ವಿಷಯ...

ಅಧಿಕಾರ ದುರಾಸೆಗೆ ಬಿಜೆಪಿ ಪ್ರತಿಭಟನೆ : ಕೆ.ಜೆ.ಜಾರ್ಜ್

ಅಧಿಕಾರದ ದುರಾಸೆಯಿಂದ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ. ಸುವರ್ಣಸೌಧದಲ್ಲಿ 10 ದಿನಗಳ ಕಾಲ ಕಲಾಪ ನಡೆಯಲಿದ್ದು, ಬಿಜೆಪಿ ಪಕ್ಷ ಮತ್ತು ರೈತರು ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ...

ಸಾಧ್ವಿ ನಿರಂಜನ್ ಜ್ಯೋತಿ ಹೇಳಿಕೆಗೆ ಖಂಡನೆ: ಸಂಸತ್ ಕಲಾಪ ಮುಂದೂಡಿಕೆ

ದೆಹಲಿ ಸರ್ಕಾರ ರಚನೆ ಕುರಿತಂತೆ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಹೇಳಿಕೆ ಕುರಿತಾದ ಗೊಂದಲ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಪ್ರತಿಧ್ವನಿಸಿದ್ದು, ಯಾವುದೇ ಕಲಾಪವೂ ನಡೆಯಲಿಲ್ಲ. ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಸಚಿವೆ ರಾಜೀನಾಮೆ ನೀಡಬೇಕು ಎಂಬುದು...

ಡಿ.10 ರಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

ಡಿಸೆಂಬರ್ 10ರಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್, ಭಾರತಕ್ಕೆ ಆಗಮಿಸುವುದರ ಬಗ್ಗೆ ವಿದೇಶಾಂಗ ಸಚಿವಾಲಯ ಖಚಿತ ಪಡಿಸಿದೆ. ಡಿಸೆಂಬರ್ 10 ಮತ್ತು 11 ರಂದು 15ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನಕ್ಕೆ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ...

ವಿವಾದಗಳಾನ್ನು ಬಿಟ್ಟು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ: ಪ್ರಧಾನಿ ಮೋದಿ

ವಿವಾದಗಳನ್ನು ಬಿಟ್ಟು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯ ವಿಪಕ್ಷ ಸದಸ್ಯರಿಗೆ ಮನವಿ ಮಾಡಿದ್ದಾರೆ. ಸಾಧ್ವಿ ನಿರಂಜನ ಜ್ಯೋತಿ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ಡಿ.5ರಂದೂ ಸಂಸತ್ ನ ಉಭಯ ಕಲಾಪದಲ್ಲೂ ವಿಪಕ್ಷ ಸದಸ್ಯರು...

ಸಾಧ್ವಿ ನಿರಂಜನ ಜ್ಯೋತಿ ಹೇಳಿಕೆ ಅಸಂಬಂದ್ಧ: ಪ್ರಧಾನಿ ಮೋದಿ

ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ಹೇಳಿಕೆ ಅಸಂಬದ್ಧವಾದದ್ದು, ಇನ್ನು ಮುಂದೆ ಈ ರೀತಿ ನಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಾಧ್ವಿ ನಿರಂಜನ್ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆ ರಾಜ್ಯಸಭೆಯಲ್ಲಿ ಮಾರ್ದನಿಸಿತು. ವಿಪಕ್ಷ...

ಕೇಂದ್ರ ಸರ್ವ ಪಕ್ಷಗಳ ಸಭೆ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ರಾಜೀವ್‌ ಪ್ರತಾಪ್‌ ರೂಢಿ ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದ ಬಗ್ಗೆ ಚರ್ಚಿಸುವ ಸಲುವಾಗಿ ಭಾನುವಾರ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಸಂಸತ್‌ನ ಸುಗಮ ಕಾರ್ಯ ಕಲಾಪಗಳು ನಡೆಯುವ ಸಲುವಾಗಿ ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited