Untitled Document
Sign Up | Login    
Dynamic website and Portals
  

Related News

ಉತ್ತರಾಖಂಡದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ ಛಮೋಲಿ ಹಾಗೂ ಪಿಥೋರ್ ಘಡದಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದಾಗಿ ಈ ವರೆಗೂ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 25ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು...

ಉತ್ತರಾಖಂಡದಲ್ಲಿ ಬಹುಮತ ಗಳಿಸುವಲ್ಲಿ ಹರೀಶ್ ರಾವತ್ ಯಶಸ್ವಿ

ದೇಶಾದ್ಯಂತ ಕುತೂಹಲ ಮೂಡಿಸಿದ್ದ ಉತ್ತರಾಖಂಡ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹರೀಶ್ ರಾವತ್ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತಗಳಿಸಿದೆ ಎಂದು ಸುಪ್ರೀಂ ಕೋರ್ಟ್ ಅಧಿಕೃತವಾಗಿ ಘೋಷಿಸಿದೆ. ಈ ಹಿನ್ನಲೆಯಲ್ಲಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯುವುದಾಗಿ...

ಉತ್ತರಾಖಂಡದಲ್ಲಿ ವಿಶ್ವಾಸಮತ ಯಾಚನೆ ಮುಕ್ತಾಯ: ಫಲಿತಾಂಶ ಮೇ 11 ರಂದು ಘೋಷಣೆ

ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮುಕ್ತಾಯಗೊಂಡಿದ್ದು, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದೆ, ಫಲಿತಾಂಶವನ್ನು ಮೇ 11ರಂದು ನ್ಯಾಯಾಲಯ ಘೋಷಿಸಲಿದೆ. ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಹರೀಶ್ ರಾವತ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾವತ್ ಪರ 34 ಹಾಗೂ...

ಉತ್ತರಾಖಂಡ ವಿಧಾನಸಭೆಗೆ ಮೇ 10ರಂದು ವಿಶ್ವಾಸಮತ ಸಾಬೀತಿಗೆ ಸುಪ್ರೀಂ ಸೂಚನೆ

ಮೇ 10ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಉತ್ತರಾಖಂಡದಲ್ಲಿ ಸದ್ಯ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದು ,ಕೇಂದ್ರ ಸರಕಾರದ ಒಪ್ಪಿಗೆ ಪಡೆದು ಸುಪ್ರೀಂ ಕೋರ್ಟ್‌ ಮೇ 10 ರಂದು ಬೆಳಗ್ಗೆ 10 ರಿಂದ 1 ಗಂಟೆಯ ಒಳಗೆ...

ಉತ್ತರಾಖಂಡದಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ: ಕೇಂದ್ರ ಗೃಹ ಸಚಿವ

ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಲೋಕಸಭೆಯ ಶೂನ್ಯ ವೇಳೆಯಲ್ಲಿ ತೃಣಮೂಲಕ ಕಾಂಗ್ರೆಸ್ ನ ಸೌಗತ್ ರಾಯ್, ಬಿಜೆಪಿಯ ಜಗದಂಬಿಕಾ ಪಾಲ್ ಹಾಗೂ ಇತರೆ ಸದಸ್ಯರು ಉತ್ತರಾಖಂಡದ ಕಾಡ್ಗಿಚ್ಚಿನ ವಿಷಯ ಪ್ರಸ್ತಾಪಿಸಿದರು.ಇದಕ್ಕೆ...

ಉತ್ತರಾಖಂಡದಲ್ಲಿ ಕಾಡ್ಗಿಚ್ಚು: ನಿಯಂತ್ರಿಸದಿದ್ದಲ್ಲಿ ಇಡೀ ಉತ್ತರ ಭಾರತ ವ್ಯಾಪಿಸುವ ಅಪಾಯ

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ವ್ಯಾಪ್ತಿಯಲ್ಲಿ ಹಬ್ಬಿರುವ ಭೀಕರ ಕಾಡ್ಗಿಚ್ಚು ಕೇವಲ 24 ಗಂಟೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ನಿಯಂತ್ರಿಸದೇ ಹೋದಲ್ಲಿ ಇಡೀ ಉತ್ತರ ಭಾರತಕ್ಕೆ ವ್ಯಾಪಿಸುವ ಸಾಧ್ಯತೆಯಿದೆ ಎಂದು ಇಸ್ರೋ ಎಚ್ಚರಿಕೆ ನೀಡಿದೆ. ಇಸ್ರೋ ಬಿಡುಗಡೆ ಮಾಡಿರುವ ಸ್ಯಾಟಲೈಟ್ ಚಿತ್ರಗಳು ನೀಡಿರುವ ಮಾಹಿತಿಯಂತೆ...

ಸಂಸತ್ ನ ಬಜೆಟ್ ಅಧಿವೇಶನ

ಸಂಸತ್ ​ನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಏ.25ರಿಂದ ಆರಂಭವಾಗಲಿದ್ದು, ಸರಕು ಹಾಗೂ ಸೇವಾ ತೆರಿಗೆ(ಜಿ.ಎಸ್.ಟಿ) ಮಸೂದೆ ಸೇರಿ ಕೇಂದ್ರ ಸರ್ಕಾರದ ಹಲವು ಮಹತ್ವದ ಮಸೂದೆಗಳ ಅಂಗೀಕಾರ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸರ್ಕಾರ ಮಹತ್ವದ ಜಿ.ಎಸ್‌.ಟಿ ಸೇರಿದಂತೆ 13 ಮಸೂದೆಗಳನ್ನು...

ಸಂಸತ್ ಅಧಿವೇಶನ ಹಿನ್ನಲೆ: ಸರ್ವಪಕ್ಷಗಳ ಸಭೆ

ಏ.೨೫ರಿಂದ ಪ್ರಾರಂಭವಾಗುತ್ತಿರುವ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ವಪಕ್ಷಗಳ ಸಭೆ ಕರೆದಿದ್ದು, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆ. ಉತ್ತರಾಖಂಡ್ ದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು...

ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರಿಕೆ, ಹೈಕೋರ್ಟ್ ಆದೇಶಕ್ಕೆ ತಡೆ

ಉತ್ತರಾಖಂಡ್ ದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಉತ್ತರಾಖಂಡ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನೈನಿತಾಲ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಏಪ್ರಿಲ್...

ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ವಜಾ

ಉತ್ತರಾಖಂಡ್ ನಲ್ಲಿ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿ ನೈನಿತಾಲ್ ಹೈಕೋರ್ಟ್ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕುರಿತು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ನ್ಯಾಯಾಲಯ, ಒಂದು...

ಉತ್ತರಾಖಂಡ್: ವಿಶ್ವಾಸಮತಕ್ಕೆ ತಡೆ

ಉತ್ತರಾಖಂಡ್ ದಲ್ಲಿನ ರಾಷ್ಟ್ರಪತಿ ಆಡಳಿತಕ್ಕೆ ತಡೆ ನೀಡಿ, ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಬಹುಮತ ಸಾಬೀತಿಪಡಿಸಲು ಅವಕಾಶ ನೀಡಿದ್ದ ಉತ್ತರಾಖಂಡ್ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದೆ. ಮಾರ್ಚ್‌ 31ರಂದು ನಡೆಯಬೇಕಿದ್ದ ಉತ್ತರಾಖಂಡ ವಿಧಾನಸಭೆಯ ವಿಶ್ವಾಸಮತ...

ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ತಡೆ

ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ನೈನಿತಾಲ್ ಹೈಕೋರ್ಟ್ ತಡೆ ನೀಡಿದ್ದು, ಮಾರ್ಚ್ 31ರಂದು ಉತ್ತರಾಖಂಡ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದಾಗಿ ಮುಖ್ಯಮಂತ್ರಿ ಹರೀಶ್ ರಾವತ್ ನಿರಾಳರಾದಂತಾಗಿದೆ. ಮಾರ್ಚ್ 31ರಂದು ಬೆಳಗ್ಗೆ 11ಗಂಟೆಗೆ ಬಹುಮತ ಸಾಬೀತು ಪಡಿಸುವಂತೆ...

ಗೋಹತ್ಯೆ ಮಾಡುವವರಿಗೆ ಭಾರತದಲ್ಲಿ ವಾಸಿಸಲು ಹಕ್ಕಿಲ್ಲಃ ಉತ್ತರಾಖಂಡ್ ಮುಖ್ಯಮಂತ್ರಿ

ಗೋಹತ್ಯೆ ಮಾಡುವವರು ದೇಶದ ದೊಡ್ಡ ಶತೃಗಳು ಎಂದು ಹೇಳಿದ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅಂಥವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿಲ್ಲ ಎಂದಿದ್ದಾರೆ. ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿಯ ಈ ಹೇಳಿಕೆ ಕಾಂಗ್ರೆಸ್ ಗೆ ಇರಿಸು ಮುರಿಸು ತರುವುದು ಖಚಿತ. ಗುರುವಾರ...

ಉತ್ತರಾಖಂಡದಲ್ಲಿ ಮತ್ತೆ ಪ್ರವಾಹ: 200 ಕನ್ನಡಿಗರ ಸ್ಥಿತಿ ಅತಂತ್ರ

2013ರ ಜಲಪ್ರಳಯದ ಕರಾಳ ನೆನಪು ಮಾಸುವ ಮುನ್ನವೇ ಉತ್ತರಾಖಂಡಲ್ಲಿ ಮತ್ತೆ ಪ್ರವಾಹ ಮರುಕಳಿಸಿದೆ. 300ಕ್ಕೂ ಹೆಚ್ಚು ಕನ್ನಡಿಗರು ಉತ್ತರಾಖಂಡದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದ್ದು, ಈ ಪೈಕಿ ಸುಮಾರು 200 ಯಾತ್ರಿಗಳ ಸ್ಥಿತಿ ಅತಂತ್ರವಾಗಿದೆ. ಬೆಂಗಳೂರು, ತುಮಕೂರು, ಪಾವಗಡ, ಗೌರಿಬಿದನೂರು, ಮೈಸೂರು,...

ದೇಶದ ಹಲವೆಡೆ ಅಕಾಲಿಕ ಮಳೆ

ಚಳಿಗಾಲ ಕಳೆದು, ಇನ್ನೂ ಬೇಸಿಗೆಯ ಬಿಸಲು ಆರಂಭವಾಗುತ್ತಿರುವ ಬೆನ್ನಲ್ಲೇ, ದೇಶದ ಹಲವು ಭಾಗಗಳಲ್ಲಿ ಭಾನುವಾರ ಮಳೆಯಾಗಿದೆ. ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಕಾಲಿಕ ಮಳೆಯಿಂದಾಗಿ ಚಳಿ...

ರಾಹುಲ್ ಗಾಂಧಿ ಭಾರತದಲ್ಲಿಲ್ಲ: ರಾಹುಲ್ ಕಚೇರಿ ಸಿಬ್ಬಂದಿ ಸ್ಪಷ್ಟನೆ

'ಎಐಸಿಸಿ'ಯಿಂದ ರಜೆ ಪಡೆದಿದ್ದ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿಲ್ಲ, ಭಾರತದಲ್ಲೇ ಇದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಜಗದೀಶ್ ಶರ್ಮಾ ಅವರ ಮಾಹಿತಿಯನ್ನು ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗಳು ಅಲ್ಲಗಳೆದಿದ್ದಾರೆ. ಸಂಸತ್ ಅಧಿವೇಶನ, ಪಕ್ಷದ ಕೆಲಸಗಳಿಂದ ರಾಹುಲ್ ಗಾಂಧಿ ರಜೆ ಪಡೆದಿರುವ...

ಕಾಂಗ್ರೆಸ್ ವಿರುದ್ಧ ವಿಜಯ್ ಬಹುಗುಣ ಬಂಡಾಯ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಅಸಮಾಧಾನಗೊಂಡು ಹಿರಿಯ ನಾಯಕಿ ಜಯಂತಿ ನಟರಾಜನ್‌ ಪಕ್ಷಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಪಕ್ಷದ ವಿರುದ್ಧ ರ್ಯಾಲಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ತಾವು ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರದಿದ್ದರೆ, ರಾಜ್ಯ...

ಉತ್ತರಾಖಂಡ ರಾಜ್ಯಪಾಲ ಅಜೀಜ್‌ ಖುರೇಷಿ ವರ್ಗಾವಣೆ

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಪಾಲರ ವರ್ಗಾವಣೆ ಮತ್ತು ರಾಜೀನಾಮೆ ಸರಣಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಉತ್ತರಾಖಂಡ ರಾಜ್ಯಪಾಲ ಅಜೀಜ್‌ ಖುರೇಷಿ ಅವರನ್ನು ವರ್ಗಾವಣೆ ಮಾಡಲಾಗಿದೆ. 'ಖುರೇಷಿ ಅವರನ್ನು ವರ್ಗ ಮಾಡಲಾಗಿದೆ ಮತ್ತು ಮಿಜೋರಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ' ಎಂದು...

ಉತ್ತರಾಖಂಡ್ ನಲ್ಲಿ ಶಾಲಾ ಆವರಣದಲ್ಲಿ ಬಾಂಬ್ ಸ್ಫೋಟ: ಬಾಲಕ ಸಾವು

ಉತ್ತರಾಖಂಡ್ ನ ರೂರ್ಕಿ ಪ್ರದೇಶದಲ್ಲಿನ ದಾವ್ ಕಾಲೇಜು ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಾಲೆಯ ಪಕ್ಕದಲ್ಲಿದ್ದ ಕಸದ ತೊಟ್ಟಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 6ನೇ ತರಗತಿಯ ಬಾಲಕ ಸ್ಫೋಟಕ್ಕೆ ಬಲಿಯಾಗಿದ್ದಾನೆ. ಮೃತ ಬಾಲಕ, ಶಾಲೆಯ ಪಕ್ಕದ ಕಸದ ತೊಟ್ಟಿಯಲ್ಲಿದ್ದ...

ಅಜೀಜ್ ಖುರೇಷಿ ರಾಜೀನಾಮೆಗೆ ಒತ್ತಡಹಾಕಿಲ್ಲ: ರಾಜನಾಥ್ ಸಿಂಗ್

ರಾಜ್ಯಪಾಲರ ಹುದ್ದೆ ತ್ಯಜಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಉತ್ತಾರಖಂಡ ರಾಜ್ಯಪಾಲ ಅಜೀಜ್ ಖುರೇಷಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಖುರೇಷಿಯವರಿಗೆ ಪದಚ್ಯುತಗೊಳಿಸುವ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿದ್ದಾರೆ. ಕೇಂದ್ರ...

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಉತ್ತರಾಖಂಡ ರಾಜ್ಯಪಾಲ ಅಜೀಜ್ ಖುರೇಶಿ ಅವರನ್ನು ಪದಚ್ಯುತಗೊಳಿಸಿರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಮಾಡಿದೆ. ರಾಜ್ಯಪಾಲರ ಹುದ್ದೆಯಿಂದ ಪದಚ್ಯುತಗೊಳಿಸಿರುವುದನ್ನು ಪ್ರಶ್ನಿಸಿ ಅಜೀಜ್ ಖುರೇಶಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪದಚ್ಯುತಿಗೊಳಿಸಿರುವ ಸಂಬಂಧ 6 ವಾರಗಳಲ್ಲಿ...

ಉತ್ತರಾಖಂಡದಲ್ಲಿ ಭಾರೀ ಮಳೆ: ಜನಜೀವನ ತತ್ತರ

ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 24 ಜನರು ಬಲಿಯಾಗಿದ್ದಾರೆ. ಕಳೆದ ವರ್ಷವಷ್ಟೇ ಭೀಕರ ಪ್ರವಾಹ ಹಿಮಾಲಯನ್ ಸುನಾಮಿಗೆ ಸಿಲುಕಿ ತತ್ತಗೊಂಡಿದ್ದ ಉತ್ತರಾಖಂಡದಲ್ಲಿ ಈ ವರ್ಷವೂ ವರಣುನ ಆರ್ಭಟ ಜೋರಾಗಿದೆ. ಕಳೆದರಡು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited