Untitled Document
Sign Up | Login    
Dynamic website and Portals
  

Related News

ಜು.31ರಂದು ಧಾರವಾಡದಲ್ಲಿ ಐಐಟಿಗೆ ಚಾಲನೆ

ರಾಜ್ಯದ ಮೊದಲ ಐಐಟಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಜು.31ರಂದು ಧಾರವಾಡದಲ್ಲಿ ಚಾಲನೆ ನೀಡಲಿದ್ದಾರೆ. ಧಾರವಾಡ ಹೈಕೋರ್ಟ್‌ ಸಮೀಪದಲ್ಲಿರುವ ವಾಲಿ¾ ಕಟ್ಟಡದಲ್ಲಿ ತಾತ್ಕಾಲಿಕ ಕ್ಯಾಂಪಸ್‌ ಕಾರ್ಯನಿರ್ವಹಿಸಲಿದೆ. ಆರಂಭದಲ್ಲಿ ಕಂಪ್ಯೂಟರ್‌ ವಿಜ್ಞಾನ, ಮೆಕಾನಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಷಯಗಳ ಅಧ್ಯಯನ ಈ ಕ್ಯಾಂಪಸ್‌ನಲ್ಲಿ...

ಕಾರವಾರ: ಸೀಬರ್ಡ್ ನೌಕಾನೆಲೆಯ 2 ಹಂತದ ಕಾಮಗಾರಿ ಆರಂಭ

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ಸೀಬರ್ಡ್ ನೌಕಾನೆಲೆಯ 2 ಹಂತದ ಕಾಮಗಾರಿ ಆರಂಭವಾಗಿದ್ದು, ಅಮೆರಿಕದ ಪ್ರತಿಷ್ಠಿತ ಏಕಾಮ್ (ಎಇಸಿಒಎಂ) ಸಂಸ್ಥೆ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಈ ನೌಕೆನೆಲೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ಏಷ್ಯಾಖಂಡದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಕೀರ್ತಿಗೆ...

ಪಂಚರಾಜ್ಯಗಳ ಮತ ಎಣಿಕೆ ಆರಂಭ

ಪಂಚರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪುದುಚೇರಿ ವಿಧಾನಸಭಾ ಚುನಾವಣೆ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಮಧ್ಯಾಹ್ನ 12ರ ವೇಳೆಗೆ ಸ್ಪಷ್ಟ ಚಿತ್ರಣ ದೊರಕಲಿದೆ. ರಾಜಕೀಯ ಪಕ್ಷಗಳ ಅಸ್ತಿತ್ವ ಹಾಗೂ ಹಣೆಬರಹ ನಿರ್ಧರಿಸಲಿರುವ ಈ ಫಲಿತಾಂಶ ಪ್ರಾದೇಶಿಕ...

ಬಿಹಾರ್ ವಿಧಾನಸಭೆ ಚುನಾವಣೆಃ ಮೊದಲ ಹಂತದ ಮತದಾನ ಪ್ರಾರಂಭ

ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಸೋಮವಾರ ಬೆಳಗ್ಗೆ 49 ಕ್ಷೇತ್ರಗಳಲ್ಲಿ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಸುಮಾರು 1.35 ಕೋಟಿ ಮಂದಿ ಮತದಾರರು 49 ಮಂದಿ ಶಾಸಕರನ್ನು ಆಯ್ಕೆ ಮಾಡಲಿದ್ದು ಕಣದಲ್ಲಿ 583 ಅಭ್ಯರ್ಥಿಗಳ ಪೈಕಿ 54 ಮಂದಿ ಮಹಿಳೆಯರು. ಬೆಳಗ್ಗೆ 9...

ಗ್ರಾಮ ಪಂಚಾಯ್ತಿ ಚುನಾವಣೆ: 2ನೇ ಹಂತದ ಮತದಾನ ಆರಂಭ

ಗ್ರಾಮ ಪಂಚಾಯ್ತಿ ಚುನಾವಣೆಯ ಎರಡನೇ ಹಂತದ ಮತದಾನ ಬೆಳಗ್ಗೆ 7ರಿಂದ ಆರಂಭವಾಗಿದ್ದು, ಸಂಜೆ 5 ಗಂಟೆಯ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುತ್ತದೆ. ಪಂಚಾಯ್ತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯಗೊಳಿಸಿದ ಬಳಿಕ ನಡೆಯುತ್ತಿರುವ ಪ್ರಥಮ...

ಪಿಯುಸಿ ತರಗತಿಗಳು ಆರಂಭ: ಪಠ್ಯಕ್ರಮದ ಬಗ್ಗೆ ಇನ್ನೂ ಬಗೆಹರಿಯದ ಗೊಂದಲ

ಪಿಯುಸಿ ತರಗತಿಗಳು ಆರಂಭವಾಗಿದ್ದರೂ ಪಠ್ಯಕ್ರಮದ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಾಜ್ಯಾದ್ಯಂತ 2015-16ನೇ ಸಾಲಿನ ದ್ವಿತೀಯ ಪಿಯು ಜೂ.1ರಿಂದ ಹಾಗೂ ಪ್ರಥಮ ಪಿಯು ತರಗತಿಗಳು ಜೂ.15ರಿಂದ ಆರಂಭವಾಗಲಿವೆ. ಆದರೆ ವಿಜ್ನಾನ ವಿಭಾಗದ ವಿದ್ಯಾರ್ಥಿಗಳಿಗೆ ಯಾವ ಪಠ್ಯಕ್ರಮ ಅಳವಡಿಸಬೇಕೆಂಬ ಬಗ್ಗೆ ಪದವಿ ಪೂರ್ವ...

ಇಂದಿನಿಂದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಆರಂಭ

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಸೋಮವಾರ ಆರಂಭವಾಗಿದೆ. ಪ್ರಸಕ್ತ ಸಾಲಿಗೆ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 3,038 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ರಾಜ್ಯದ 13,693 ಪ್ರೌಢ ಶಾಲೆಗಳ 4,52,634 ಬಾಲಕರು ಮತ್ತು 4,03,804 ಬಾಲಕಿಯರು ಸೇರಿ ಒಟ್ಟು 8,56,638 ವಿದ್ಯಾರ್ಥಿಗಳು...

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಮಾ.12ರ ಗುರುವಾರದಿಂದ 27ರವರೆಗೆ ರಾಜ್ಯಾದ್ಯಂತ 1017 ಕೇಂದ್ರಗಳಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ 6,10,939 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಗುರುವಾರ ಮೊದಲ ದಿನ ವಿಜ್ಞಾನ (ರಸಾಯನಶಾಸ್ತ್ರ) ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ನಡೆಯಲಿದೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತೀ...

ದೆಹಲಿ ವಿಧಾನಸಭಾ ಚುನಾವಣೆ: ಮತ ಎಣಿಕೆ ಆರಂಭ

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಗದ್ದುಗೆಗಾಗಿ ಫೆಬ್ರವರಿ 7ರಂದು ನಡೆದಿದ್ದ ಚುನಾವಣೆಯ ಫ‌ಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫ‌ಲಿತಾಂಶ ಹೊರಬೀಳಲಿದೆ. ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದ...

ದೆಹಲಿ ವಿಧಾನಸಭಾ ಚುನಾವಣೆ: ಮತದಾನ ಆರಂಭ

ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಒಟ್ಟು 1,33,14,215 ಮತದಾರರು ಸುಮಾರು 673 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಕೊರೆಯುವ ಚಳಿಯ ವಾತಾವರಣವಿದ್ದರೂ ರಾಷ್ಟ್ರ ರಾಜಧಾನಿಯ ಹಲವೆಡೆಗಳಲ್ಲಿ ಮತದಾರರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿಯ 70 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ....

ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿ ಕಛೇರಿಯಲ್ಲಿ ಅವರನ್ನು ಅದ್ದೂರಿಯಾಗಿ ಬರ ಮಾಡಿಕೊಂಡ ರಾಜ್ಯ ಬಿಜೆಪಿ ನಾಯಕರು, ನಾದಸ್ವರ ಮೂಲಕ ಪೂರ್ಣಕುಂಭ ಸ್ವಾಗತಕೋರಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮೊದಲ ಬಾರಿಗೆ...

ಕಾಶ್ಮೀರ, ಜಾರ್ಖಂಡ್‌: 4ನೇ ಹಂತದ ಮತದಾನ

ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್‌ ವಿಧಾನಸಭೆಗೆ ನಡೆಯುತ್ತಿರುವ ಐದು ಹಂತದ ಚುನಾವಣೆಗಳ ಪೈಕಿ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ. ಜಮ್ಮು-ಕಾಶ್ಮೀರದಲ್ಲಿ 18 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಹಾಲಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್‌...

ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಮತದಾನ ಆರಂಭ

ಜಾರ್ಖಂಡ್‌ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಅತ್ಯಂತ ಕುತೂಹಲ ಕೆರಳಿಸಿರುವ ಈ ಚುನಾವಣೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಸೋನಿಯಾ ಗಾಂಧಿಯವರ ಕಾಂಗ್ರೆಸ್‌ ಮತ್ತು ಪ್ರಬಲ ಸ್ಥಳೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಎನ್ನಿಸಿಕೊಂಡಿದೆ. ಜಮ್ಮು- ಕಾಶ್ಮೀರದ ಕಾರ್ಗಿಲ್‌, ಲಡಾಖ್‌...

ಮಹಾರಾಷ್ಟ್ರ, ಹರ್ಯಾಣದಲ್ಲಿ ಮತದಾನ ಆರಂಭ

ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಉಭಯ ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಅ.19ರಂದು ಫಲಿತಾಂಶ ಹೊರಬೀಳಲಿದೆ. ಉಭಯ ರಾಜ್ಯಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸರತಿ ಸಾಲಿನಲ್ಲಿ ಬಂದು ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ...

ಉಪಚುನಾವಣೆ: ಮತದಾನ ಆರಂಭ

ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆಯಿಂದ ತೆರವಾಗಿರುವ ಗುಜರಾತ್ ನ ವಡೋದರಾ ಸೇರಿದಂತೆ 3 ಲೋಕಸಭಾ ಹಾಗೂ 33 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಸೆ.16ರಂದು ಫಲಿತಾಂಶ ಹೊರಬೀಳಲಿದೆ. ಕಳೆದ...

ರಾಸಲೀಲೆ ಪ್ರಕರಣ: ನಿತ್ಯಾನಂದನ ಪುರುಷತ್ವ ಪರೀಕ್ಷೆ ಆರಂಭ

ನಿತ್ಯಾನಂದ ರಾಸಲೀಲೆ ಪ್ರಕರಣ ಹಾಗೂ ಲೈಗಿಂಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಪುರುಷತ್ವ ಪರೀಕ್ಷೆ ಆರಂಭವಾಗಿದೆ. ಸುಪ್ರೀಂ ಕೋರ್ಟ್ ಸೆ.3ರಂದು ನಿತ್ಯಾನಂದನ ಪುರುಷತ್ವ ಪರೀಕ್ಷೆಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ನಿತ್ಯಾನಂದನ ಪುರುಷ್ತ್ವ ಪರೀಕ್ಷೆ...

ಶುಲ್ಕ ಇಳಿಸುವಂತೆ ಕೇಬಲ್ ಆಪರೇಟರ್ ಗಳಿಗೆ 2ತಿಂಗಳ ಗಡುವು

ಮಾಸಿಕ ಶುಲ್ಕ ಇಳಿಸಲು ಕೇಬಲ್ ಟಿವಿ ಆಪರೇಟರ್ ಗಳಿಗೆ ವಾರ್ತಾ ಸಚಿವ ರೋಷನ್ ಬೇಗ್ 2 ತಿಂಗಳ ಗಡುವು ನೀಡಿದ್ದಾರೆ. ಒಂದು ವೇಳೆ ಎರಡು ತಿಂಗಳಲ್ಲಿ ಮಾಸಿಕ ಶುಲ್ಕ ಇಳಿಸದಿದ್ದರೆ ಸರ್ಕಾರದಿಂದಲೇ ಕೇಬಲ್ ನೆಟ್ ವರ್ಕ್ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಶುಲ್ಕ ಇಳಿಕೆಗೆ...

ಉಪಚುನಾವಣೆ ಮತ ಎಣಿಕೆ ಆರಂಭ

ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವಿನ ತೀವ್ರ ರಾಜಕೀಯ ಜಿದ್ದಾಜಿದ್ದಿನ ನಡುವೆ ನಡೆದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ. ಶಿಕಾರಿಪುರ, ಬಳ್ಳಾಗ್ರಾಮಾಂತರ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಬಳ್ಳಾರಿಯಲ್ಲಿ...

ಉಪಚುನಾವಣೆ ಮತದಾನ ಆರಂಭ

ಬಳ್ಳಾರಿ ಗ್ರಾಮೀಣ, ಚಿಕ್ಕೋಡಿ-ಸದಲಗಾ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಮತದಾನ ಆರಂಭವಾಗಿದೆ. ಬೆಳಿಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಕ್ಷೇತ್ರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂರೂ ಕ್ಷೇತ್ರಗಳನ್ನು ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited