Untitled Document
Sign Up | Login    
Dynamic website and Portals
  

Related News

ಇಸ್ರೋದಿಂದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಗುರುವಾರ ಸಂಜೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್...

ಧೋನಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಪತ್ರಿಕೆಯ ಮುಖಪುಟದಲ್ಲಿ ವಿಷ್ಣುವಿನ ಹಾಗೆ ಕಾಣಿಸಿಕೊಂಡ ಕುರಿತು ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಆಂಧ್ರಪ್ರದೇಶದ ಅನಂತಪುರಂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಫೆಬ್ರುವರಿ 25ರಂದು ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ 2013ರ ಏಪ್ರಿಲ್...

ಬಿಸಿಲಿನ ಝಳದೊಂದಿಗೆ ಹೆಚ್ಚಿದ ಅಲ್ಟ್ರಾವಯಲೆಟ್‌

ಬಿಸಿಲಿನ ಝಳ ತಾಳಲಾರದೆ ದೇಶದಲ್ಲಿ ಸಾವಿರಾರು ಮಂದಿ ಸಾವನ್ನಪ್ಪುತ್ತಿರುವುದಕ್ಕೆ ಅಪಾಯಕಾರಿ ಅತಿನೇರಳೆ ಕಿರಣ (ಅಲ್ಟ್ರಾವಯಲೆಟ್‌)ದ ಪಾತ್ರವೂ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಒಂದು ನಿರ್ದಿಷ್ಟ ಸಮಯ ಹಾಗೂ ನಿರ್ದಿಷ್ಟ ತಾಣದಲ್ಲಿ ಬೀಳುವ ಸೂರ್ಯನ ಕಿರಣಗಳ ಸಾಮರ್ಥ್ಯ ಅಳೆಯಲು ಅಲ್ಟ್ರಾವಯಲೆಟ್‌ ಇಂಡೆಕ್ಸ್‌ ಅಥವಾ...

ಬಿಸಿಲ ಝಳ ಹೆಚ್ಚಳ: ರೆಡ್ ಬಾಕ್ಸ್ ಅಲರ್ಟ್ ಘೋಷಣೆ

ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ, 4 ರಾಜ್ಯಗಳಲ್ಲಿ ರೆಡ್‌ ಬಾಕ್ಸ್‌ ಅಲರ್ಟ್‌ ಘೋಷಿಸಿದೆ. ಈ ಮೂಲಕ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಭಾರೀ ಬಿಸಿಲಿಗೆ ಕಳೆದ 15 ದಿನಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು...

ತಮಿಳುನಾಡಿನಲ್ಲಿ ಕೇರಳದ ಪ್ರಮುಖ ಮಾವೋವಾದಿ ನಾಯಕರ ಬಂಧನ

ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಕೇರಳದ ಪ್ರಮುಖ ಮಾವೋವಾದಿ ನಾಯಕ ರೂಪೇಶ್ ಹಾಗೂ ಆತನ ಪತ್ನಿ ಶ್ಯಾನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು ಪೊಲೀಸರು ಹಾಗೂ ಕೇರಳದ ಮಾವೋವಾದಿ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ರೂಪೇಶ್ ಹಾಗೂ ಆತನ ಪತ್ನಿಯೊಂದಿಗೆ...

9,000 ಎನ್.ಜಿ.ಒಗಳ ಪರವಾನಗಿ ರದ್ದು

ವಾರ್ಷಿಕ ಆದಾಯದ ಬಗ್ಗೆ ಲೆಕ್ಕಪತ್ರಗಳನ್ನು ಸಲ್ಲಿಸದ ಎನ್.ಜಿ.ಒ ಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು 9,000 ಎನ್.ಜಿ.ಒ ಗಳ ಪರವಾನಗಿ ರದ್ದುಗೊಂಡಿದೆ. ತೆರಿಗೆ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ವಾರ್ಷಿಕ ಆದಾಯದ ಬಗ್ಗೆ ಮಾಹಿತಿಯನ್ನು ನೀಡದೇ...

ಆಂಧ್ರದ ಚಿತ್ತೂರಿನಲ್ಲಿ ಭಾರೀ ಎನ್ ಕೌಂಟರ್: 20 ಸ್ಮಗ್ಲರ್ ಗಳ ಹತ್ಯೆ

ಆಂದ್ರಪ್ರದೇಶದ ಇತ್ತೂರು ಜಿಲ್ಲೆಯಲ್ಲಿ ಭಾರೀ ಎನ್ ಕೌಂಟರ್ ನಡೆದಿದೆ. ರಕ್ತಚಂದನ ಕಳ್ಳಸಾಗಣೆ ಮಾಡುತ್ತಿದ್ದ 20 ಸ್ಮಗ್ಲರ್ ಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಚಿತ್ತೂರು ಜಿಲ್ಲೆಯ ಚಂದ್ರಗಿರಿಮಂಡಲ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಸ್ಪೆಷಲ್ ಟಾಸ್ಕ್ ಫೋರ್ಸ್ 20 ಸ್ಮಗ್ಲರ್ ಗಳನ್ನು...

ಆಂಧ್ರಪ್ರದೇಶದಲ್ಲಿ ಎನ್ ಕೌಂಟರ್ ಪ್ರಕರಣ: ತಮಿಳುನಾಡು ಆಕ್ರೋಶ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಪೊಲೀಸರು ನಡೆಸಿರುವ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ರಕ್ತ ಚಂದನ ಮರಗಳನ್ನು ಕದಿಯುತ್ತಿದ್ದ ತಮಿಳುನಾಡು ಮೂಲದ 150 ಮಂದಿಯ ಪೈಕಿ 20 ಮಂದಿ...

ತೆರಿಗೆ ನಿಯಮ ಅನುಸರಿಸದ 1142 ಎನ್.ಜಿ.ಒಗಳ ಪರವಾನಗಿ ರದ್ದು

'ವಾರ್ಷಿಕ ಆದಾಯ'ದ ಬಗ್ಗೆ ಮಾಹಿತಿ ನೀಡದೇ ವಿದೇಶಿ ದೇಣಿಗೆ ಪಡೆಯುತ್ತಿರುವ 1142 ಎನ್.ಜಿ.ಒ ಗಳು ಹಾಗೂ ಆಂಧ್ರಪ್ರದೇಶದ ಸಂಘ-ಸಂಸ್ಥೆಗಳ ಪರವಾನಗಿಯನ್ನು ಕೇಂದ್ರ ಗೃಹ ಇಲಾಖೆ ರದ್ದುಪಡಿಸಿದೆ. ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿರುವ ಪರಿಣಾಮ, ಒಸಾಮಿಯಾ ವಿಶ್ವವಿದ್ಯಾನಿಲಯ, ಹೈದ್ರಾಬಾದ್ ವಿಶ್ವವಿದ್ಯಾನಿಲಯ, ವಿಶಾಖಪಟ್ಟಣದಲ್ಲಿರುವ...

ಯುವಕರ ಸಂಖ್ಯೆ ಹೆಚ್ಚಿಸಲು ಹೆಚ್ಚೆಚ್ಚು ಮಕ್ಕಳನ್ನು ಹೆರಿ: ಚಂದ್ರಬಾಬುನಾಯ್ಡು

'ಆಂಧ್ರಪ್ರದೇಶ' ಹೆಚ್ಚು ಯುವಕರನ್ನು ಹೊಂದಲು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, , ಜಪಾನ್ ದೇಶದಲ್ಲಿ ಯುವಕರಿಗಿಂತ ಮುದುಕರ ಪ್ರಮಾಣವೇ ಹೆಚ್ಚಾಗುತ್ತಿರುವಂತೆಯೇ ಆಂಧ್ರಪ್ರದೇಶದಲ್ಲೂ ಯುವಕರಿಗಿಂತ...

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: 22ಕ್ಕೂ ಹೆಚ್ಚು ಸಾವು

'ಆಂಧ್ರಪ್ರದೇಶ'ದ ಅನಂತಪುರ ಜಿಲ್ಲೆಯಲ್ಲಿ ಜ.7ರಂದು ಸರ್ಕಾರಿ ಬಸ್ ಅಪಘಾತ ಸಂಭವಿಸಿದ್ದು 22 ಜನರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 60ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರ್ಕಾರಿ ಬಸ್ ಅನಂತಪುರ ಜಿಲ್ಲೆಯ ಮಡಕಶಿರ ಪ್ರದೇಶದಿಂದ ಪೆನುಕೊಂಡಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕಂದಕಕ್ಕೆ ಉರುಳಿ...

ಬಿಡಿ ಸಿಗರೇಟು ಮಾರಾಟ ನಿಷೇಧ ಸದ್ಯಕ್ಕಿಲ್ಲ

ಬಿಡಿ ಸಿಗರೇಟು ಮಾರಾಟಕ್ಕೆ ನಿಷೇಧ ಹೇರುವ ನಿರ್ಧಾರವನ್ನು ತಕ್ಷಣಕ್ಕೆ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬಿಡಿ ಸಿಗರೇಟು ನಿಷೇಧದಿಂದ ತಂಬಾಕು ಬೆಳೆಯುವ ರೈತರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರು ಹಾಗೂ ಸಂಸದರು ಆತಂಕ ವ್ಯಕ್ತಪಡಿಸಿದ...

ದೀಪಾವಳಿ ಹಿನ್ನೆಲೆ: ಆರ್.ಟಿ.ಒ ಅಧಿಕಾರಿಗಳಿಂದ ಖಾಸಗಿ ವೋಲ್ವೋ ಬಸ್ ತಪಾಸಣೆ

'ದೀಪಾವಳಿ' ಹಬ್ಬದ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ರಾಜ್ಯಾದ್ಯಂತ ದೀಪಾವಳಿಗೆ ತಯಾರಿ ನಡೆಯುತ್ತಿದ್ದು ಖಾಸಗಿ ಬಸ್ ಗಳಲ್ಲಿ ಪಟಾಕಿ ಸಾಗಣೆ ಭರದಿಂದ ಸಾಗಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ ಗಳು ಬೆಂಕಿ ಅವಘಡಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವೋಲ್ವೊ ಬಸ್...

ಹುಡ್ ಹುಡ್ ಚಂಡಮಾರುತ: ಆಂಧ್ರಕ್ಕೆ ನೆರವು ನೀಡಲು ಸಿದ್ದರಾಮಯ್ಯ ಸಮ್ಮತಿ

ಹುಡ್ ಹುಡ್ ಚಂಡಮಾರುತದ ಅಬ್ಬರದಿಂದ ತತ್ತರಿಸಿರುವ ಆಂಧ್ರಪ್ರದೇಶಕ್ಕೆ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮಾಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಹುಡ್ ಹುಡ್ ಚಂಡ ಮಾರುತದಿಂದ ಉಂಟಾದ ಹಾನಿಯನ್ನು ಕೂಡಲೇ ಸಾಮಾನ್ಯ...

ಹುಡ್ ಹುಡ್ ಚಂಡಮಾರುತ: ಆಂಧ್ರಕ್ಕೆ ತುರ್ತು ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಹುಡ್ ಹುಡ್ ಚಂಡಮಾರುತದಿಂದ ತತ್ತರಗೊಂಡಿದ್ದ ಆಂಧ್ರಪ್ರದೆಶಕ್ಕೆ 1 ಸಾವಿರ ಕೋಟಿ ತುರ್ತು ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶಾದ್ಯಂತ ಆತಂಕ ಸೃಷ್ಟಿಸುವ ಮೂಲಕ ಆಂಧ್ರಪ್ರದೇಶಕ್ಕೆ ಅಬ್ಬರಿಸಿದ್ದ ಹುಡ್ ಹುಡ್ ಹುಡ್ ಚಂಡಮಾರುತ ಅಪಾರ ನಷ್ಟ ಉಂಟುಮಾಡಿತ್ತು. ಚಂಡಮಾರುತ ಪೀಡಿತ ವಿಶಾಖಪಟ್ಟಣಂಗೆ ಭೇಟಿ...

ಆಂಧ್ರಪ್ರದೇಶ, ಒಡಿಶಾದಲ್ಲಿ ಹುಡ್ ಹುಡ್ ಚಂಡಮಾರುತದ ಅಬ್ಬರ

ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯಲ್ಲಿ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದ್ದು, ಈಗಾಗಲೇ ತನ್ನ ಅವಾಂತರ ಆರಂಭಿಸಿದೆ. ಉಭಯ ರಾಜ್ಯಗಳಲ್ಲೂ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದೆ. ಆಂಧ್ರದ ವಿಶಾಖಪಟ್ಟಂ ಗೆ ಮಧ್ಯಾಹ್ನದ ಹೊತ್ತಿಗೆ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ಆಂಧ್ರದಿಂದ 70...

ಆಂಧ್ರದಲ್ಲಿ ಚಂಡಮಾರುತ: ರಕ್ಷಣಾ ತಂಡಗಳು ಸಜ್ಜು

ಆಂಧ್ರಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಹಿನ್ನಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದ್ದು, ರಸ್ತೆಗಳಲ್ಲಿ ವಿದ್ಯುತ್ ಕಂಭಗಳು, ಬೃಹದಾಕಾರದ ಮರಗಳು ದರಾಶಾಹಿಯಾಗಿವೆ. ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ತಂಡಗಳು ಸನ್ನದ್ಧವಾಗಿ ನಿಂತಿವೆ. ಹುಡ್ ಹುಡ್ ಚಂಡಮಾರುತ ವಿಶಾಖ ಪಟ್ಟಣಂ ಕರಾವಿಳಿಯಿಂದ ಕೇವಲ 40 ಕಿ.ಮೀ...

ಆಂಧ್ರದಲ್ಲಿ ಹುಡ್ ಹುಡ್ ಅಬ್ಬರಕ್ಕೆ ಮೂರು ಸಾವು

ಆಂಧ್ರಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಚಂಡಮಾರುತ ತನ್ನ ಅಬ್ಬರವನ್ನು ಆರಂಭಿಸಿದ್ದು, ಈವರೆಗೆ ಮೂವರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿ ಭಾಗದಲ್ಲಿ ಹುಡ್ ಹುಡ್ ಚಂಡಮಾರುತದ ತೀವ್ರತೆ ಹೆಚ್ಚಿದ್ದು, ಗಂಟೆಗೆ 190 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ....

ಲೋಡ್ ಶೆಡ್ಡಿಂಗ್ ಜಾರಿಗೆ ನಿರ್ಧಾರ: ಡಿ.ಕೆ.ಶಿವಕುಮಾರ್

ರಾಜ್ಯದ ಜನೆತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದೆ. ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಈಗಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಗೆ ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಶೇ.25ರಷ್ಟು ವಿದ್ಯುತ್...

ಆಂಧ್ರಕ್ಕೆ ಅಪ್ಪಳಿಸಲಿದೆ ಹುಡ್ ಹುಡ್ ಚಂಡಮಾರುತ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹುಡ್ ಹುಡ್ ಚಂಡಮಾರುತ ದೇಶದ ಪೂರ್ವ ಕರಾವಳಿಗೆ ಹತ್ತಿರವಾಗುತ್ತಿದ್ದು, ಆಂದ್ರಪ್ರದೇಶದ ಕರಾವಳಿ ಮೂಲಕ ಹಾದುಹೋಗಲಿದೆ. ಆಂಧ್ರದ ವಿಶಾಖಪಟ್ಟಣಂ ಸಮೀಪದ ಕರಾವಳಿ ಮೇಲೆ ಹುಡ್ ಹುಡ್ ಚಂಡಮಾರುತ ತೀವ್ರ ಸ್ವರೂಪದಲ್ಲಿ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.12ರ...

ಬಕ್ರಿದ್ ಅಂಗವಾಗಿ ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ: ಆಂಧ್ರ ಪೊಲೀಸರ ಎಚ್ಚರಿಕೆ

'ಬಕ್ರಿದ್' ಅಂಗವಾಗಿ ಗೋಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಮ್ ಬಾಂಧವರ ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಎಮ್ಮೆ ಮತ್ತು ಕರುಗಳನ್ನು ಮಾರಾಟ ಮಾಡುವುದು 1977ರ ಆಂಧ್ರಪ್ರದೇಶ ಗೋಹತ್ಯಾ ನಿಷೇಧ, ಪ್ರಾಣಿ ಸಂರಕ್ಷಣಾ ಕಾಯ್ದೆ...

ನರೇಂದ್ರ ಮೋದಿ ಪ್ಯಾಸಿಸ್ಟ್: ಕೆಸಿಆರ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಒಬ್ಬ ಪ್ಯಾಸಿಸ್ಟ್ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾಮಾನ್ಯ ರಾಜಧಾನಿಯಾಗಿರುವ ಹೈದ್ರಾಬಾದ್ ನ ಕಾನೂನು ಸುವ್ಯವಸ್ಥೆ ವಿಶೇಷ ಹೊಣೆಗಾರಿಕೆಯನ್ನು ರಾಜ್ಯಪಾಲ ನರಸಿಂಹನ್ ಅವರಿಗೆ ವಹಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯು...

ರಾಷ್ಟ್ರವಿರೋಧಿ ಹೇಳಿಕೆ: ತೆಲಂಗಾಣ ಸಿ.ಎಂ ಕೆ.ಸಿ.ಆರ್ ಪುತ್ರಿ ವಿರುದ್ಧ ಪ್ರಕರಣ ದಾಖಲು

'ರಾಷ್ಟ್ರ ವಿರೋಧಿ ಹೇಳಿಕೆ' ನೀಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರಿ, ಸಂಸದೆ ಕವಿತಾ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ವಾತಂತ್ರ್ಯಾನಂತರ ಹೈದ್ರಾಬಾದನ್ನು ಬಲವಂತವಾಗಿ ಭಾರತದೊಂದೊಗೆ ವಿಲೀನ ಮಾಡಲಾಗಿದೆ ಎಂದು ಚಂದ್ರಶೇಖರ ರಾವ್ ಪುತ್ರಿ ಕವಿತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಷ್ಟೇ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited