Untitled Document
Sign Up | Login    
Dynamic website and Portals
  

Related News

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂರನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂರನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಆರ್. ವಿ ದೇಶಪಾಂಡೆ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗಳ ಚಾಲನಾ...

ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ನಿರ್ವಹಣೆಗೆ ತಜ್ಞರ ಸಮಿತಿ ನೇಮಕಕ್ಕೆ ಸೂಚನೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳನ್ನು ನಿರ್ವಹಿಸಲು ಇತಿಹಾಸದ ಹಿನ್ನೆಲೆಯುಳ್ಳ ತಜ್ಞರ ಸಮಿತಿ ನೇಮಕ ಮಾಡಿ, ತಜ್ಞರ ಸಲಹೆ ಪಡೆದು ಮುಂದಿನ ಒಂದು ತಿಂಗಳೊಳಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ...

ರಾಜ್ಯದಲ್ಲಿ 20,000 ನವೋದ್ಯಮ ಆರಂಭಿಸುವ ಗುರಿ: ಸಚಿವ ಪ್ರಿಯಾಂಕ ಖರ್ಗೆ

ರಾಜ್ಯದಲ್ಲಿ 20,000 ಸ್ಟಾರ್ಟ್ ಅಪ್(ನವೋದ್ಯಮ) ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಟಾರ್ಟ್ ಅಪ್ (ನವೋದ್ಯಮ) ನೀತಿ 2015-20...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶುಕ್ರವಾರ ಬಜೆಟ್ ಮಂಡನೆ

ಮುಖ್ಯಮಂತ್ರಿಯಾಗಿ ನಾಲ್ಕನೆಯ ಹಾಗೂ ಒಟ್ಟಾರೆ 11ನೇ ಬಾರಿಗೆ ಮುಂಗಡ ಪತ್ರವನ್ನು ಶುಕ್ರವಾರ ಬೆಳಗ್ಗೆ 11.30ಕ್ಕೆ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕಳೆದ ನಾಲ್ಕು ಬಾರಿ ಅಹಿಂದ, ಕೃಷಿ, ಗ್ರಾಮೀಣ ಭಾಗಗಳಿಗಿದ್ದ ಆದ್ಯತೆಯನ್ನು ತುಸು ಬದಲಾಯಿಸಿ ಅಭಿವೃದ್ಧಿ ಕಡೆ...

ಪ್ರತಿ ಅಧಿವೇಶನದ ಒಂದು ದಿನ ಮಹಿಳೆಯರಿಗಾಗಿ ಮೀಸಲಿಡುವ ಕುರಿತು ಸಮಾಲೋಚನೆ ನಡೆಸುವುದಾಗಿ ಸಿಎಂ ಭರವಸೆ

ಮಹಿಳಾ ಅಭಿವೃದ್ಧಿಗೆ ಸಂಬಂಧಪಟ್ಟ ಅನುದಾನದ ಬಗ್ಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಮಂಡಿಸುವ ಕುರಿತು, ಪ್ರತಿ ವಿಧಾನಮಂಡಲ ಅಧಿವೇಶನದಲ್ಲೂ ಲಿಂಗ ತಾರತಮ್ಯದ ಕುರಿತು ಪ್ರತ್ಯೇಕವಾಗಿ ಚರ್ಚಿಸಲು ಒಂದು ದಿನ ಅವಕಾಶ ಮಾಡಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮಹಿಳಾ...

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅದ್ದೂರಿಯ ಲಕ್ಷದೀಪೋತ್ಸವ

ಹಣತೆ ತನಗಾಗಿ ಬೆಳಕು ನೀಡುವುದಿಲ್ಲ. ಜಗತ್ತಿನ ಕತ್ತಲನ್ನು ಹೊಡೆದೊಡಿಸಲು ಬೆಳಗುತ್ತದೆ. ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಇನ್ನೊಬ್ಬರಿಗೆ ಬೆಳಕಾಗುವ ಕಾರ್ಯ ನಡೆದಿದೆ. ಸಮಾಜದ ಹಿತಕ್ಕಾಗಿ ಕ್ಷೇತ್ರದ ವತಿಯಿಂದ ಉತ್ತಮ ಕಾರ್ಯಗಳು ನಡೆಯುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ...

ವೇಗವಾಗಿ ಅಭಿವೃದ್ಧಿ ಹೊಂದಲು ಆಫ್ರಿಕಾದ ಮೇಲೆ ಭಾರತದ ಕಣ್ಣುಃ ಅರುಣ್ ಜೇಟ್ಲಿ

ಭಾರತ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯಲು ಬಯಸುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದಾರೆ. ಆಫ್ರಿಕಾದಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಹೊಸ ಅವಕಾಶಗಳ ಮೇಲೆ ಭಾರತ ಕಣ್ಣಿಟ್ಟಿದೆ. ಭಾರತ ಇಂದು ಅತೀ ವೇಗವಾಗಿ ಅಭಿವೃದ್ಧಿ ಹೊಂದಲು ಬಯಸುತ್ತದೆ. ನಾವು...

ಶ್ಯಾಮ ಪ್ರಸಾದ್‌ ಮುಖರ್ಜಿ ರುರ್ಬನ್‌ ಮಿಷನ್‌ಗೆ ಸಂಪುಟ ಸಮ್ಮತಿ

ಸ್ಮಾರ್ಟ್‌ ಸಿಟಿ ಯೋಜನೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ ಇದೀಗ ಹಳ್ಳಿಗಳನ್ನೂ ಸ್ಮಾರ್ಟ್ ಮಾಡಲು ಹೊಸ ಯೋಜನೆ ಜಾರಿಗೊಳಿಸಲು ಮುಂದಾಗಿದೆ. 300 ಗ್ರಾಮಗಳನ್ನು 2019-20ರ ವೇಳೆಗೆ ಸ್ಮಾರ್ಟ್‌ ವಿಲೇಜ್‌ ಆಗಿ ಅಭಿವೃದ್ಧಿಪಡಿಸುವ ಯೋಜನೆಗೆ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ....

ಬ್ರ್ಯಾಂಡ್ ಬೆಂಗಳೂರು ಖ್ಯಾತಿ ಮುಂದುವರಿಸುತ್ತೇವೆಃ ಸಿಎಂ ಸಿದ್ದರಾಮಯ್ಯ

ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಮಂಜುನಾಥ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಮೇಯರ್ ಆಗಿ ಆಯ್ಕೆ ಆದ ಬಿ ಎನ್ ಮಂಜುನಾಥ ರೆಡ್ಡಿ...

ಭಾರತದಲ್ಲಿ 1 ಟ್ರಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶವಿದೆ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಯುಎಇ ನ ಪ್ರಮುಖ ವ್ಯಾಪಾರಸ್ಥರಿಗೆ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಗ್ರಹಿಸಿ, ಭಾರತದಲ್ಲಿ ಪ್ರಸ್ತುತ 1 ಟ್ರಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶವಿದೆ ಎಂದು ತಿಳಿಸಿದರು. ಇಂಗಾಲ ಶೂನ್ಯ ನಗರ, ಮಸ್ದಾರ್ ನಲ್ಲಿ ಹೂಡಿಕೆದಾರರ...

ರಾಜ್ಯಗಳ ವಿಕಾಸವಾಗದೆ ದೇಶದ ಅಭಿವೃದ್ಧಿ ಅಸಾಧ್ಯ: ಬಿಹಾರದಲ್ಲಿ ಪ್ರಧಾನಿ ಮೋದಿ

ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಪಟ್ನಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ಮೋದಿ ಐಐಟಿ ಯನ್ನು ಉದ್ಘಾಟಿಸಿದರು. ಅಲ್ಲದೆ, ಪ್ರಧಾನಿ ಮೋದಿಯವರು ಮೆಡಿಕಲ್ ಇಲೆಕ್ಟ್ರಾನಿಕ್ಸ್ ಗೆ ಇನ್ಕ್ಯುಬೇಷನ್ ಸೆಂಟರ್ ಹಾಗೂ ಜಗದೀಶ್ಪುರ-ಹಾಲ್ಡಿಯಾ...

ಬಿಹಾರದ ಅಭಿವೃದ್ಧಿ ಕುಂಠಿತವಾಗಲು ನಿತೀಶ್ ಕುಮಾರ್ ದ್ವೇಷ ರಾಜಕೀಯ ಕಾರಣ: ಮೋದಿ

ಬಿಹಾರದ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಬಿಹಾರದ ಅಭಿವೃದ್ಧಿ ಕುಂಠಿತವಾಗಲು ನಿತಿಶ್ ಅವರ ದ್ವೇಷ ರಾಜಕಿಯವೇ ಕಾರಣ, ನನ್ನ ಮೇಲಿನ ಹಗೆಯಿಂದ ಬಿಹಾರದ ಪ್ರಗತಿಯಾಗಲು ನಿತಿಶ್ ಬಿಡಲಿಲ್ಲ ಎಂದು ಅವರು...

ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ: ವಿಶ್ವ ಬ್ಯಾಂಕ್

ಭಾರತ ತನ್ನ ಆರ್ಥಿಕಾಭಿವೃದ್ಧಿ ಪ್ರಗತಿಯನ್ನು ಶೇ.7.5ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವ ಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ತಿಳಿಸಿದ್ದಾರೆ. ಪ್ರಸ್ತುತ ಚೀನಾ ದೇಶದ ಆರ್ಥಿಕ ಪ್ರಗತಿ ಶೇ.7.1ರಷ್ಟಿದೆ. ಭಾರತದಲ್ಲಿನ ಪ್ರಸಕ್ತ ಆರ್ಥಿಕ...

ದೇಶದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ: ಪ್ರಧಾನಿ ಮೋದಿ

ನಮ್ಮ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಕೆಲಸಮಾಡುತ್ತಿದೆ. ಜನತೆ ನಮ್ಮ ಮೇಲಿರಿಸಿದ್ದ ವಿಶ್ವಾಸ ಎಳ್ಳಷ್ಟೂ ಕಡಿಮೆಯಾಗಿಲ್ಲ ,ನಮ್ಮ ಸರ್ಕಾರಕ್ಕೆ ಜನ ಫುಲ್ ಮಾರ್ಕ್ಸ್ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಆಕಾಶವಾಣಿಯಲ್ಲಿ 8 ನೇ ಬಾರಿಗೆ ಮನ್‌ ಕಿ...

ದೇಶದ ಅಭಿವೃದ್ಧಿಯೇ ಕೇಂದ್ರದ ಮೊದಲ ಆದ್ಯತೆ: ರಾಜನಾಥ್ ಸಿಂಗ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ಮತ್ತು ಸಂವಿಧಾನದ 370ನೇ ಪರಿಚ್ಚೇದ ರದ್ದು ಮಾಡುವುದಕ್ಕಿಂತ ಮುಖ್ಯವಾಗಿ ದೇಶದ ಅಭಿವೃದ್ಧಿ ಮಾಡುವುದೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಎನ್ ಡಿಎ ಸರ್ಕಾರ ಒಂದು ವರ್ಷ...

ಮೋದಿ ಸರಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ: ಸಚಿವ ಅರುಣ್ ಜೇಟ್ಲಿ

ಕೇಂದ್ರದಲ್ಲಿ ಮೋದಿ ಸರಕಾರ ಮೇ 26ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸರಕಾರದ ಸಾಧನೆಗಳನ್ನು ಮತ್ತು ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೇಟ್ಲಿ, ಹೊಸ ದೃಷ್ಟಿಕೋನದಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಾವು ಭ್ರಷ್ಟಾಚಾರ ಮುಕ್ತ...

ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ 7 ಒಪ್ಪಂದಗಳಿಗೆ ಸಹಿ

ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ 7 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತದ ಅಭಿವೃದ್ಧಿಯಲ್ಲಿ ಕೊರಿಯಾ ಪಾತ್ರ ಮಹತ್ವದ್ದು . ಕೊರಿಯಾ ಅಭಿವೃದ್ದಿಯಿಂದ ಪ್ರಭಾವಿತನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗೆಯುನ್ ಹೈ ಅವರನ್ನು...

ಏಷ್ಯಾ ಒಕ್ಕೂಟ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು: ಪ್ರಧಾನಿ ಮೋದಿ

ವಿಶ್ವ ಸಂಸ್ಥೆಯೂ ಒಳಗೊಂಡಂತೆ ಏಷ್ಯಾ ಖಂಡದ ರಾಷ್ಟ್ರಗಳು ವಿಶ್ವದ ವಿವಿಧ ಸಂಸ್ಥೆಗಳ ಸುಧಾರಣೆಗೆ ಹಾಗೂ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಏಷ್ಯಾ, ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬೇಕಾದರೆ, ಕೇವಲ ಪ್ರಾದೇಶಿಕ ತುಣುಕುಗಳಾಗಿ ಕೆಲಸ ಮಾಡಿದರಷ್ಟೇ ಸಾಧ್ಯವಿಲ್ಲ...

ಏಷ್ಯಾ ರಾಷ್ಟ್ರಗಳಿಗೆ ಕೊರಿಯಾ ಅಭಿವೃದ್ಧಿ ಮಹತ್ವದ್ದು: ಪ್ರಧಾನಿ ಮೋದಿ

ಚೀನಾ, ಮಂಗೋಲಿಯಾ ಪ್ರವಾಸದ ಬಳಿಕ ಈಗ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಏಷ್ಯಾ ರಾಷ್ಟ್ರಗಳಿಗೆ ಕೊರಿಯಾ ಅಭಿವೃದ್ಧಿ ಮಹತ್ವದ್ದು. ಕೊರಿಯಾ ಅಭಿವೃದ್ಧಿಯಿಂದ ಪ್ರಭಾವಿತನಾಗಿದ್ದೇನೆ ಎಂದು ತಿಳಿಸಿದ್ದಾರೆ. ಸಿಯೋಲ್ ನಲ್ಲಿ ಮಾತನಾಡಿದ ಅವರು, ಗುಜರಾತ್ ಸಿಎಂ ಆಗಿದ್ದಾಗ 2007ರಲ್ಲಿ ದಕ್ಷಿಣ...

ಪ್ರಧಾನಿ ಮೋದಿ ಮಂಗೋಲಿಯಾ ಭೇಟಿ: 1 ಬಿಲಿಯನ್ ಡಾಲರ್ ನೆರವು ಘೋಷಣೆ

ಚೀನಾ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರದಿಂದ ಮಂಗೋಲಿಯಾ ಪ್ರವಾಸ ಕೈಗೊಂಡಿದ್ದು ಅಲ್ಲಿನ ಅಭಿವೃದ್ಧಿಗೆ ಸಂಪೂರ್ಣ ನೆರವು ಘೋಷಿಸಿದ್ದಾರೆ. ಮಂಗೋಲಿಯಾದ ರಾಜಧಾನಿ ಉಲಾನ್ ಬಟರ್ ನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ ಗಂದಾನ್ ತೆಗ್‌ಚಿನ್‌ಲೆಂಗ್ ಬೌದ್ಧಧಾಮಕ್ಕೆ ಭೇಟಿ ನೀಡಿದ್ದಾರೆ....

ದೇಶದ ಸಮಗ್ರ ಅಭಿವೃದ್ದಿಗೆ 'ಟೀಮ್‌ ಇಂಡಿಯಾ' ಸ್ಪೂರ್ತಿ ಅಗತ್ಯ: ಪ್ರಧಾನಿ ಮೋದಿ

ಭಾರತವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು 'ಟೀಮ್‌ ಇಂಡಿಯಾ' ಸ್ಪೂರ್ತಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯಶೀಲವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಬರ್‍ನಾಪುರದಲ್ಲಿ 16,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತದ ಉಕ್ಕು ಪ್ರಾಧಿಕಾರದ ನವೀನ...

ಬಿಜೆಪಿ ವಿರುದ್ಧ ಹಿರಿಯ ನಾಯಕ ಅರುಣ್ ಶೌರಿ ವಾಗ್ದಾಳಿ

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಬಿಜೆಪಿ ಸಿದ್ಧಾಂತವಾದಿ ಯಾಗಿದ್ದ ಮಾಜಿ ಸಚಿವ ಅರುಣ್‌ ಶೌರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 10 ಲಕ್ಷ ರೂ. ಸೂಟು ಬೂಟುಗಳನ್ನು ಧರಿಸಿ ಗಾಂಧೀಜಿ ಅವರ ಸರಳತೆಯ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ....

ಕೇಂದ್ರ ಸರ್ಕಾರದಿಂದ ಭಾರತ ಮಾಲಾ ರಸ್ತೆ ನಿರ್ಮಾಣ

ಸುವರ್ಣ ಚತುಷ್ಪಥ ಯೋಜನೆ ಮೂಲಕ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶದ ನಾಲ್ಕೂ ದಿಕ್ಕುಗಳನ್ನು ರಸ್ತೆ ಸಂಪರ್ಕದ ಮೂಲಕ ಬೆಸೆದರು. ಇದೀಗ ’ಭಾರತ ಮಾಲಾ' ಎಂಬ ಹೆಸರಿನ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ...

ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಕ್ಕೆ ಅಫ್ಘಾನಿಸ್ಥಾನ-ಭಾರತ ನಿರ್ಧಾರ

'ಅಫ್ಘಾನಿಸ್ಥಾನ' ಅಧ್ಯಕ್ಷ ಅಶ್ರಫ್ ಘನಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದಾರೆ. ಮೋದಿ ಅವರೊಂದಿಗೆ ಅಪ್ಘಾನಿಸ್ಥಾನ ಅಧ್ಯಕ್ಷರು ಮಹತ್ವದ ...

ಪಿಒಕೆ ಬಳಿ ಇರುವ ತನ್ನ ಗಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿರುವ ಚೀನಾ

'ಚೀನಾ',ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಪ್ರದೇಶದಲ್ಲಿರುವ ತನ್ನ ಗಡಿ ಭಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. ಚೀನಾದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಸ್ಥಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವ ನಗರ ಪಾಕ್...

ಕೇಂದ್ರ ಸರ್ಕಾರ ರೈತ ಪರವಾಗಿದೆ, ಜನರಿಗೆ ತಪ್ಪು ಮಾಹಿತಿಯನ್ನು ನೀಡಬೇಡಿ: ಪ್ರಧಾನಿ

ಭೂಸ್ವಾಧೀನ ಕಾಯ್ದೆ ವಿರೋಧಿಸಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ಯಾವಾಗಲೂ ಬಡವರಿಗಾಗಿ ಕೆಲಸ ಮಾಡಲಿದೆ. ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ತಪ್ಪು...

ಯುರೇನಿಯಂ ಖರೀದಿ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ

42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರ ಕೆನಡಾ ಪ್ರವಾಸ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೆನಡಾಗೆ ಆಗಮಿಸಿ ಯುರೇನಿಯಂ ಖರೀದಿ ಸೇರಿದಂತೆ 13 ಒಪ್ಪಂದ ಮಾಡಿಕೊಂಡಿದ್ದಾರೆ. ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ...

ಅಂಬಾನಿಗೊಂದು ಕಾನೂನು, ಸಾಮಾನ್ಯನಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ: ಮೋದಿ

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುವುದಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದ್ದು, ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ನೀಡಿದ್ದು, ತಮ್ಮ ಸರ್ಕಾರ ಜನಸಾಮಾನ್ಯರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಸರ್ಕಾರ ಕಾರ್ಪೊರೇಟ್...

ಏ.9ರೊಳಗೆ ಕೇಂದ್ರ ಸಚಿವ ಸಂಪುಟ ಪುನಾರಚನೆ: ರಾಮ್ ಮಾಧವ್ ಗೆ ಸ್ಥಾನ ಸಾಧ್ಯತೆ

ಏ.9ರೊಳಗೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಕಳೆದ 10 ತಿಂಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ಸಂಪುಟ ಎರಡನೇ ಪುನಾರಚನೆಯಾಗಲಿದೆ. ಬಿಹಾರದಲ್ಲಿ ಸಧ್ಯದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಹಾರದ ಬಿಜೆಪಿ ಮುಖಂಡ ಹಾಗೂ ಪಿಡಿಪಿ, ಶಿವಸೇನೆಯ ನಾಯಕರಿಗೆ...

ಕಲ್ಲಿದ್ದಲನ್ನು ವಜ್ರಗಳನ್ನಾಗಿ ಪರಿವರ್ತಿಸಿದ್ದೇವೆ: ಪ್ರಧಾನಿ ಮೋದಿ

ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕಲ್ಲಿದ್ದಲನ್ನು ತಮ್ಮ ನೇತೃತ್ವದ ಸರ್ಕಾರ ವಜ್ರವನ್ನಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒರಿಸ್ಸಾದಲ್ಲಿ ಏ.1ರಂದು ರೂರ್ಕೆಲಾ ಉಕ್ಕು ಸ್ಥಾವರ ಉದ್ಘಾಟನೆ ಮಾಡಿ ಮಾತನಾಡಿದ ಮೋದಿ, ಕಲ್ಲಿದ್ದಲು ಈ ವರೆಗೂ ಸಮಸ್ಯೆಯಾಗಿ ಉಳಿದಿತ್ತು. ಆದರೆ...

ರಸ್ತೆ ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕಕ್ಕೆ ಹೆಚ್ಚು ಯೋಜನೆ ಮಂಜೂರು: ನಿತಿನ್ ಗಡ್ಕರಿ

'ರಸ್ತೆ ಅಭಿವೃದ್ಧಿ' ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತರ ರಾಜ್ಯಗಳಿಗಿಂತಲೂ ಸುಮಾರು ನಾಲ್ಕು ಪಟ್ಟು ಹೆಚ್ಚು ಯೋಜನೆಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಿಕೊಟ್ಟಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮಾ.31ರಂದು ಬೆಂಗಳೂರಿನಲ್ಲಿ ರಸ್ತೆ...

ಶ್ರೀಮಂತರು ಎಲ್.ಪಿ.ಜಿ ಸಬ್ಸಿಡಿ ತೆಗೆದುಕೊಳ್ಳದಂತೆ ಪ್ರಧಾನಿ ಮೋದಿ ಮನವಿ

ಉಳ್ಳವರು-ಉತ್ತಮ ಜೀವನ ನಡೆಸುತ್ತಿರುವವರು ಎಲ್.ಪಿ.ಜಿ ಸಬ್ಸಿಡಿ ತೆಗೆದುಕೊಳ್ಳುವುದನ್ನು ಕೈಬಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದು 2೦22ರ ವೇಳೆಗೆ ಇಂಧನ ಆಮದನ್ನು ಶೇಕಡಾ 1೦ ರಷ್ಟು ಕಡಿತಗೊಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಸದ್ಯದ 27 ಲಕ್ಷ ಜನರ ಮನೆಗಳಿಗೆ ಎಲ್.ಪಿ.ಜಿ...

ಬಿಬಿಎಂಪಿ ಬಜೆಟ್ ಮಂಡನೆ: ಹೊಸ ಯೋಜನೆಗಳ ಪ್ರಕಟ ಇಲ್ಲ

ಯಾವುದೆ ಹೊಸ ಯೋಜನೆಗಳನ್ನು ಪ್ರಕಟಿಸದೆ 6729.62 ಕೋಟಿ ರೂ. ವೆಚ್ಚದ ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಆನಂದ್ ಪಾಲಿಕೆ ಸಭೆಯಲ್ಲಿಂದು ಮಂಡಿಸಿದರು. 17.17 ಕೋಟಿ ಆರಂಭಿಕ ಶಿಲ್ಕು ಇದರ ಜತೆಗೆ 6712...

ಅವಳಿ ತೆರಿಗೆ ನಿವಾರಣಾ ಒಪ್ಪಂದಕ್ಕೆ ಮಾರೀಷಸ್-ಭಾರತ ಸಹಿ

ಪ್ರಧಾನಿ ನರೇಂದ್ರ ಮೋದಿ ಮಾರೀಷಸ್ ಪ್ರವಾಸದಲ್ಲಿ, ಅವಳಿ ತೆರಿಗೆ ನಿವಾರಣಾ ಒಪ್ಪಂದ(ಡಿಟಿಎಎ)ಕ್ಕೆ ಸಹಿಹಾಕಿದ್ದಾರೆ. ಮಾರೀಷಸ್ ಪ್ರಧಾನಿ ಸರ್ ಅನ್ ರೂಡ್ ಜುಗ್ನಾಥ್ ಅವರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ಹಣಕಾಸಿನ ನೆರವು...

ಅಭಿವೃದ್ಧಿ ಯೋಜನೆಗಳಿಗೆ ಒಣಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸೂಕ್ತ: ಬಿ.ಎಸ್.ವೈ

'ಕೇಂದ್ರ ಸರ್ಕಾರ'ದ ಭೂಸ್ವಾಧೀನ ಕಾಯ್ದೆಗೆ ಆಗತ್ಯವಿದ್ದಲ್ಲಿ ತಿದ್ದುಪಡಿ ತರಲಾಗುವುದು ಎಂದು ಸಂಸದ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, ಅಭಿವೃದ್ಧಿ ಕೆಲಸಗಳಿಗೆ ಫಲವತ್ತಾದ ಭೂಮಿಗಿಂತಲೂ ಒಣಭೂಮಿಯನ್ನು ಪಡೆಯಬೇಕು, ಅಭಿವೃದ್ಧಿಯೂ ಸಾಧ್ಯವಾಗಬೇಕು ಅಂತೆಯೇ ರೈತರಿಗೂ ಅನ್ಯಾಯವಾಗಬಾರದು ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಭೂಮಿ...

ಅಕ್ರಮ-ಸಕ್ರಮ ಯೋಜನೆ: ಮಾ.23ರಿಂದ ರಾಜ್ಯಾದ್ಯಂತ ಜಾರಿ

ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ನಿರ್ಮಾಣ ಮತ್ತು ಅಭಿವೃದ್ಧಿಗಳನ್ನು ಅಧಿಕೃತಗೊಳಿಸುವ ಅಕ್ರಮ-ಸಕ್ರಮ ಯೋಜನೆ ಕೊನೆಗೂ ಜಾರಿಗೆ ಬಂದಿದೆ. ಅಕ್ರಮ-ಸಕ್ರಮ ಯೋಜನೆ ಕುರಿತಂತೆ ರಾಜ್ಯ ಸರ್ಕಾರ ಫೆ.27ರಂದು ಅಧಿಸೂಚನೆ ಹೊರಡಿಸಿದ್ದು, ಇದೀಗ ನಿಯಮಾವಳಿಗಳನ್ನು ರಚಿಸಲಾಗಿದೆ. ಮಾ.23ರಿಂದ ಅರ್ಜಿ...

2015-16ನೇ ಸಾಲಿನ ಕೇಂದ್ರ ಬಜೆಟ್

ಕೇಂದ್ರ ಎನ್.ಡಿ.ಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದರು. ದೇಶದ ಬಡತನ ನಿರ್ಮೂಲನೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ದೇಶದ ಆರ್ಥಿಕ ವಾತಾವರಣಕ್ಕೆ ಅನುಕೂಲಕರವಾದ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9...

ಬಜೆಟ್ ಗೆ ಪ್ರಧಾನಿ ಮೋದಿ ಮೆಚ್ಚುಗೆ

ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಸ್ಪಷ್ಟ ದೃಷ್ಟಿಕೋನ, ಪ್ರಗತಿಪರ, ಸಕಾರಾತ್ಮಕ ಮತ್ತು ಅಭಿವೃದ್ಧಿಶೀಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಜೆಟ್ ಮಂಡನೆಯ ನಂತರ ಪ್ರತಿಕ್ರಿಯೆ ನೀಡಿರುವ ಅವರು, ಯುವಕರು, ರೈತರು, ಬಡವರು, ಮಧ್ಯಮ ವರ್ಗ, ಸಾಮಾನ್ಯ ನಾಗರಿಕರನ್ನು...

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸರ್ಕಾರದ ಮೂಲಭೂತ ಆದ್ಯತೆ: ರಾಷ್ಟ್ರಪತಿ

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಜೆಟ್ ಅಧಿವೇಶನ ಸುಗಮವಾಗಿ ಸಾಗುವ ವಿಶ್ವಾಸವಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸರ್ಕಾರದ ಗುರಿಯಾಗಿದ್ದು, ಆರ್ಥಿಕ ಬೆಳವಣಿಗೆ ಸಾಧಿಸಲು ಸರ್ಕಾರದಿಂದ ಹೊಸ ಹೆಜ್ಜೆ ಇಡಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ....

ಸ್ಟೆಮ್ ಸೆಲ್ ಪತ್ತೆ ಹಾಗೂ ಅಭಿವೃದ್ಧಿಗೆ ಮೋದಿ ಶ್ಲಾಘನೆ

ಸ್ಟೆಮ್ ಸೆಲ್ ಪತ್ತೆ ಹಾಗೂ ಅಭಿವೃದ್ಧಿಯ ಬಗ್ಗೆ ನಗರದ ಜಿಕೆವಿಕೆ ಆವರಣದಲ್ಲಿರುವ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರದಲ್ಲಿ ನಡೆದಿರುವ ಸಂಶೋಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕೇಂದ್ರಕ್ಕೆ ಭೇಟಿ ಕೊಟ್ಟ ಅವರು, ಕಾಂಡಕೋಶ(ಸ್ಟೆಮ್ ಸೆಲ್) ಸಂಶೋಧನೆಯ ಕುರಿತು ಮಾಹಿತಿ...

ತುಮಕೂರಿನ ಕೈಗಾರಿಕಾ ಪ್ರದೇಶದಲ್ಲಿ ಹೆಚ್.ಎ.ಎಲ್ ನ ಹೆಲಿಕಾಫ್ಟರ್ ಉತ್ಪಾದನಾ ಘಟಕ

ತುಮಕೂರಿನ ಕೈಗಾರಿಕಾ ಪ್ರದೇಶದಲ್ಲಿ 610 ಎಕರೆ ವಿಸ್ತೀರ್ಣದಲ್ಲಿ ದೇಶೀಯ ನಿರ್ಮಿತ ಹೆಲಿಕಾಫ್ಟರ್ ಉತ್ಪಾದನಾ ಘಟಕ ಪ್ರಾರಂಭಿಸಲು ಹೆಚ್.ಎ.ಎಲ್ ನಿರ್ಧರಿಸಿದೆ. ಇದಕ್ಕಾಗಿ ರಾಜ್ಯಸರ್ಕಾರ 610 ಎಕರೆ ಜಾಗ ಮಂಜೂರು ಮಾಡಿದೆ. ತುಮಕೂರಿನ ಘಟಕದಲ್ಲಿ ವಾರ್ಷಿಕ 60 ಹೆಲಿಕಾಪ್ಟರ್‌ ‌ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು...

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 100 ಕೋಟಿ ಅನುದಾನಕ್ಕೆ ಮನವಿ

ತಮಿಳುನಾಡಿನಲ್ಲಿ ಕನ್ನಡ ಹೆಚ್ಚು ಮಾತನಾಡುವ ಕೆಲವು ಪ್ರದೇಶಗಳ ಶಾಲೆಗಳನ್ನು ತಮಿಳು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯಬೇಕು ಎಂದು ಒತ್ತಡ ಹೇರಿರುವುದು ಗಮನಕ್ಕೆ ಬಂದಿದ್ದು, ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯ ರಿಟ್ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ...

ಭಾವುಕರಾದ ಕಿರಣ್ ಬೇಡಿ

ಮಾಜಿ ಐಪಿಎಸ್ ಅಧಿಕಾರಿ, ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಚುನಾವಣಾ ರ್ಯಾಲಿ ವೇಳೆ ಜನರೆದುರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಜನರ ಪ್ರೀತಿ ಕಂಡು ಭಾವುಕರಾದ ಬೇಡಿ ಕಣ್ಣೀರಿಟ್ಟರು. ಜನರ ಪ್ರೀತಿ...

ಅಭಿವೃದ್ಧಿ ಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ: ಸೋನಿಯಾ ಗಾಂಧಿ

ದೆಹಲಿಯಲ್ಲಿ ಅಭಿವೃದ್ಧಿ ವಾತಾವರಣೆ ನಿರ್ಮಾಣವಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತನ್ನಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. ಫೆ.7ರಂದು ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ ಮತ್ತು ಎಎಪಿ ಪಕ್ಷಗಳು...

ಹಿಂದುತ್ವ , ಮತಾಂತರ ವಿವಾದ: ಎನ್ ಡಿ ಎ ಭವಿಷ್ಯಕ್ಕೆ ಮಾರಕ-ಕುಶ್ವಾಹಾ

ಕೇಂದ್ರ ಸರ್ಕಾರ ಎದುರಿಸುತ್ತಿರುವ ಹಿಂದುತ್ವ ವಿವಾದ ಮತ್ತು ಮತಾಂತರ ವಿವಾದಗಳು ಎನ್.ಡಿ.ಎ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಅಭಿಪ್ರಾಯಪಟ್ಟಿದ್ದಾರೆ. ಮತಾಂತರದ ಬಗ್ಗೆ ಯಾವುದೇ ಕಾನೂನು ಇರಲಿ, ನಾನದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ಕುಶ್ವಾಹಾ, ಇಂಥಾ ವಿಚಾರಗಳು ಸರ್ಕಾರವನ್ನು ಅಭಿವೃದ್ಧಿ...

ಘರ್ ವಾಪಸಿ ಮತಾಂತರವಾಗುವುದಿಲ್ಲ: ಪ್ರವೀಣ್ ತೊಗಾಡಿಯಾ

ಅನ್ಯಧರ್ಮೀಯರನ್ನು ಮಾತೃಧರ್ಮಕ್ಕೆ ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ವಿ.ಹೆಚ್.ಪಿ ಮುಖಂಡ ಪ್ರವೀಣ್ ತೊಗಾಡಿಯಾ, ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ನಡೆದ ವಿ.ಹೆಚ್.ಪಿ ಸಭೆ ಬಳಿಕ ಮಾತನಾಡಿದ ತೊಗಾಡಿಯಾ, ನಾವು ಮತಾಂತರವನ್ನು ವಿರೋಧಿಸುತ್ತೇವೆ....

ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ: ರಾಜನಾಥ್ ಸಿಂಗ್

ದೆಹಲಿಯಲ್ಲೀಗ ಬಿಜೆಪಿ ಅಲೆ ಇದ್ದು, ಮುಂದಿನ ಸರ್ಕಾರವನ್ನು ಬಿಜೆಪಿಯೇ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಶಾನ್ಯ ದೆಹಲಿಯ ಬರಾಲಾ ಪ್ರದೇಶದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೆಹಯಲ್ಲಿ ಈ ಬಾರಿ ಬಿಜೆಪಿ ಸಂಪೂರ್ಣ...

ಶಿಕ್ಷಣ ವ್ಯವಸ್ಥೆ ಕೇವಲ ರೋಬೋಟ್ ಸೃಷ್ಠಿಗೆ ಮಾತ್ರ ಸೀಮಿತವಾಗಬಾರದು: ಮೋದಿ

'ಶಿಕ್ಷಣ ವ್ಯವಸ್ಥೆ' ವಿಶ್ವಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿ.25ರಂದು ಹಿಂದೂ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ವ್ಯವಸ್ಥೆ ಎಂಬುದು ರೋಬೋಟ್ ಗಳನ್ನು ಉತ್ಪಾದನೆ ಮಾಡಲು ಮಾತ್ರ ಸೀಮಿತವಾಗಬಾರದು, ರೋಬೋಟ್...

ಬಿಜೆಪಿಗೆ ಮತ ನೀಡಿದರೆ ಭೂಮಿ ಕಿತ್ತುಕೊಂಡು ಕೈಗೆ ಪೊರಕೆ ನೀಡುತ್ತಾರೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೆ ದಿನ್ ಘೋಷ ವಾಕ್ಯದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಮೋದಿ ಭರವಸೆಯ ಒಳ್ಳೆಯ ದಿನಗಳು ಯಾವಗ ಬರಲಿವೆ ಎಂದು ಪ್ರಶ್ನಿಸಿದ್ದಾರೆ. ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ...

ಭಾರತಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ: 20 ಒಪ್ಪಂದಗಳಿಗೆ ಸಹಿ ಸಾಧ್ಯತೆ

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಡರಾತ್ರಿ ಭಾರತಕ್ಕೆ ಆಗಮಿಸಿದ್ದು, ಡಿ.11ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಲಿದ್ದಾರೆ. ಒಂದು ದಿನದ ಮಟ್ಟಿಗೆ ದೆಹಲಿಗೆ ಭೇಟಿ ನೀಡಿರುವ ಪುಟಿನ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ...

ಸಿದ್ದರಾಮಯ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ: ಬಿ.ಎಸ್.ವೈ

ಸಿದ್ಧರಾಮಯ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಇದರ ವಿರುದ್ಧ ಮುಂದಿನ ಐದಾರು ತಿಂಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸುವರ್ಣವಿಧಾನಸೌಧ ಸಮೀಪದ ಕೊಂಡಸಕೊಪ್ಪ ಗ್ರಾಮದಲ್ಲಿ ಬಿಜೆಪಿ ಏರ್ಪಡಿಸಿದ್ದ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಗೂ ಭ್ರಷ್ಟ ಸಚಿವರನ್ನು...

ಏಷ್ಯಾದ ವರ್ಷದ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿಂಗಾಪುರ್ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪ್ರಧಾನಿ ಮೋದಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿವೃದ್ಧಿ ಕೇಂದ್ರಿತ ನಾಯಕ ಎಂಬ ಹೆಸರಿನಡಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ...

ಮೋದಿ ಅಭಿವೃದ್ಧಿ ಮಾದರಿಗೆ ಒಬಾಮ ಶ್ಲಾಘನೆ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮ್ಯಾನ್ ಆಫ್ ಆಕ್ಷನ್(man of action) ಎಂದು ಬಣ್ಣಿಸಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಮತ್ತೊಮ್ಮೆ ಮೋದಿ ಅವರನ್ನು ಹೊಗಳಿದ್ದಾರೆ. ಅಮೆರಿಕಾದ ಆರ್ಥಿಕತೆ ಬಗ್ಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ...

ಪ್ರಧಾನಿ ಮೋದಿ ವಿದೇಶ ಪ್ರವಾಸ ಅಭಿವೃದ್ಧಿಗೆ ಸಹಕಾರ: ಸುಷ್ಮಾ ಸ್ವರಾಜ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದಿಂದ ಭಾರತದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆ ಕಲಾಪದ ವೇಳೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಮೋದಿ ವಿದೇಶದಲ್ಲಿ ನೆಲೆಸಿರುವ ಭಾರತೀಯ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು....

ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ ಅಗತ್ಯ: ಪ್ರಧಾನಿ ಮೋದಿ ಕರೆ

ಭಯೋತ್ಪಾದನೆ ವಿರುದ್ಧ ಸಾಘಿಕ ಹೋರಾಟ ಅಗತ್ಯ. ಇಡೀ ವಿಶ್ವ ಭಯೋತ್ಪಾದನೆಯಿಂದ ಮುಕ್ತವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನೇಪಾಳದಲ್ಲಿ ನಡೆಯುತ್ತಿರುವ 18ನೇ ಸಾರ್ಕ್ (South Asian Association for Regional Co-operation) ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಅವರು, ನಾನು...

ನೆರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧಕ್ಕೆ ಆದ್ಯತೆ: ಪ್ರಧಾನಿ ಮೋದಿ

ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿ ಅಭಿವೃದ್ಧಿ ಸಾಧಿಸುವುದೇ ತಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಾರಂಭವಾಗಲಿರುವ ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ. ಇದರಿಂದ...

ಜಮ್ಮು-ಕಾಶ್ಮೀರದ ಅಭಿವೃದ್ಧಿ ಮಂತ್ರ ಪಠಿಸಿದ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರದ ನಿರಾಶ್ರಿತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇಲ್ಲಿನ ಕಿಶ್ ತ್ವಾರ್ ನಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮಂತ್ರವನ್ನು ಪಠಿಸಿದರು. ನಾನ್ಯಾಕೆ ಜಮ್ಮು ಕಾಶ್ಮೀರವನ್ನು ಅಷ್ಟೊಂದು ಇಷ್ಟಪಡುತ್ತಿದ್ದೇನೆ ಎಂದು...

ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಿಜೆಪಿಗೆ ಮಾತ್ರ ಸಾಧ್ಯ: ಅಮಿತ್ ಶಾ

ಭಾರತದೊಂದಿಗೆ ಜಮ್ಮು-ಕಾಶ್ಮೀರವನ್ನು ಒಗ್ಗೂಡಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ನ.20ರಂದು ಜಮ್ಮು-ಕಾಶ್ಮೀರದಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು 2014ರ ವಿಧಾನಸಭಾ ಚುನಾವಣೆ ಮಹತ್ವವಾಗಿದೆ ಎಂದು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ...

ಚುನಾವಣೆ ಸಂದರ್ಭದಲ್ಲಿ 370ನೇ ವಿಧಿ ಬಗ್ಗೆ ಚರ್ಚೆ ಅಗತ್ಯವಿಲ್ಲ: ರಾಜನಾಥ್ ಸಿಂಗ್

'ಜಮ್ಮು-ಕಾಶ್ಮೀರ'ಕ್ಕೆ ವಿಶೇಷ ಸ್ಥಾನ ನೀಡುವ ಸಂವಿಧಾನದ 370ನೇ ವಿಧಿ ರಾಷ್ಟ್ರೀಯ ವಿಚಾರವಾಗಿದ್ದು, ಇದನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನ.25ರಿಂದ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನ.19ರಂದು ಜಮ್ಮು-ಕಾಶ್ಮೀರಕ್ಕೆ...

ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ 6 ಬಂದರು ಅಭಿವೃದ್ಧಿ: ಬಾಬುರಾವ್ ಚಿಂಚನಸೂರ

ರಾಜ್ಯದಲ್ಲಿರುವ 12 ಬಂದರುಗಳ ಪೈಕಿ 6 ಬಂದರುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜವಳಿ ಹಾಗೂ ಬಂದರು ಸಚಿವ ಬಾಬುರಾವ್ ಚಿಂಚನಸೂರ ತಿಳಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿ ಭಾಗದ ಬೇಲಿಕೇರಿ, ಮಂಕಿ ಬಂದರು,...

ದತ್ತುಪಡೆದ ಗ್ರಾಮಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

ಹಾಲಿ ರಾಜ್ಯ ಸಭಾ ಸದಸ್ಯ, ಕ್ರಿಕೆಟ್ ದೇವರು ಸಚಿನ್‌ ತೆಂಡುಲ್ಕರ್‌ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ಪಡೆದಿರುವ ಆಂಧ್ರಪ್ರದೇಶದ ನೆಲ್ಲೂರಿನ ಪುಟ್ಟಮರಾಜ ಕಂಡ್ರಿಗ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸವಲತ್ತುಗಳಿಂದ ವಂಚಿತವಾಗಿರುವ ಕುಗ್ರಾಮವಾಗಿರುವ ಪುಟ್ಟಮರಾಜು ಕಂಡ್ರಿಗ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸುವುದಾಗಿ ಸಚಿನ್‌...

ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ದೇಶೀಯವಾಗಿ ನಿರ್ಮಿಸಲಾಗಿರುವ ಅಣ್ವಸ್ತ್ರ ವಾಹಕ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಅತ್ಯಾಧುನಿಕ ವಿನೂತನ ತಂತ್ರಜ್ನಾನ ಹೊಂದಿರುವ ಸರ್ಫೇಸ್ ಟು ಸರ್ಫೇಸ್ ಪೃಥ್ವಿ -2 ಕ್ಷಿಪಣಿ, 500ರಿಂದ 1,000 ಕಿಲೋ ತೂಕದ ಅಣ್ವಸ್ತ್ರಗಳನ್ನು ಒಯ್ಯಬಲ್ಲದು. 350 ಕಿ.ಮೀ.ಗಳ ದೂರ ವ್ಯಾಪ್ತಿಯನ್ನು ಕ್ರಮಿಸುವ...

ಜಯಪುರ ಗ್ರಾಮಸ್ಥರು ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ: ಪ್ರಧಾನಿ ಮೋದಿ

'ವಾರಾಣಸಿ'ಯಲ್ಲಿ ನೇಕಾರರಿಗಾಗಿ ಮಾರುಕಟ್ಟೆ ಕೇಂದ್ರ ಸ್ಥಾಪನೆ ಮಾಡಲು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಜಯಪುರ ಗ್ರಾಮ ದತ್ತು ತೆಗೆದುಕೊಂಡಿದ್ದಾರೆ. ದತ್ತು ಪಡೆದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಾರಾಣಸಿಯಲ್ಲಿ ನಾನು ಮೊದಲಿಗೆ...

ಗಡಿ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಹಕ್ಕು: ಚೀನಾಕ್ಕೆ ಭಾರತದ ತಿರುಗೇಟು

'ಈಶಾನ್ಯ ರಾಜ್ಯ'ದ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದೆಂದು ತಾಕೀತು ಮಾಡಿದ್ದ ಚೀನಾಕ್ಕೆ ಭಾರತ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಾನು ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ತಿರುಗೇಟು ನೀಡಿದೆ. ಚೀನಾ ಎಚ್ಚರಿಕೆ ಬಗ್ಗೆ ನವದೆಹಲಿಯಲ್ಲಿ ನ.1ರಂದು...

ಶಿವಮೊಗ್ಗ, ಹಾಸನ ಪಶುವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ

ಶಿವಮೊಗ್ಗ ಹಾಗೂ ಹಾಸನದ ಸರ್ಕಾರಿ ಪಶುವೈದ್ಯಕೀಯ ಕಾಲೇಜುಗಳಿಗೆ ಭಾರತೀಯ ಪಶುವೈದ್ಯಕೀಯ ಪರಿಷತ್ತು ಮಾನ್ಯತೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅವರು, ಈ ವಿಷಯ ತಿಳಿಸಿದ್ದು, ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ...

ಹೊಸ ಕೈಗಾರಿಕಾ ನೀತಿ ಬಿಡುಗಡೆ

ಒಟ್ಟು 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ಜತೆಗೆ ಸುಮಾರು 15 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ ಬಿಡುಗಡೆಗೊಳಿಸಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಈ ನೂತನ ನೀತಿಯು...

ಕಾರ್ಮಿಕರಿಗಾಗಿ ಶ್ರಮೇವ ಜಯತೆ ಯೋಜನೆ: ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ದೇಶದ ಕಾರ್ಮಿಕರ ಅಭಿವೃದ್ಧಿಗಾಗಿ ನೂತನ ಯೋಜನೆ ಜಾರಿಗೆ ತಂದಿದ್ದು, ಶ್ರಮೇವ ಜಯತೆ ಯೋಜನೆಗೆ ಚಾಲನೆ ನೀಡಿದ್ದಾರೆ. ನವದೆಹಲಿಯ ವಿಜ್ನಾನ ಭವನದಲ್ಲಿ ಶ್ರಮೇವ ಜಯತೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ ನಾವು...

ಆದರ್ಶ ಗ್ರಾಮ ಯೋಜನೆ ಚಾಲನೆಗೆ ಕ್ಷಣಗಣನೆ

ಮಹತ್ವಾಕಾಂಕ್ಷಿ ಸಂಸದ ಆದರ್ಶ ಗ್ರಾಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಅ.15ರಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಈ ಕುರಿತು ಘೋಷಣೆ ಮಾಡಿದ್ದರು. ಪ್ರತಿಯೊಬ್ಬ ಸಂಸದರು 2016ರ ವೇಳೆಗೆ ಒಂದು ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಬೇಕು....

ಆದರ್ಶ ಗ್ರಾಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಸಂಸದ ಆದರ್ಶ ಗ್ರಾಮ ಯೋಜನೆ ದೇಶದ ಬಡವರು, ರೈತರಿಗಾಗಿ ಜಾರಿಗೊಳಿಸಲಾಗಿದೆ. ಎಲ್ಲಾ ರಾಜ್ಯಗಳೂ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನವದೆಹಲಿಯ ವಿಜ್ನಾನ ಭವನದಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ...

ಬಳ್ಳಾರಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಬಳ್ಳಾರಿ ಜಿಲ್ಲಾ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 850 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಅಭಿದ್ಧಿಗಾಗಿ 850 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿರುವುದಾಗಿ ತಿಳಿಸಿದರು. ಸಭೆಯಲ್ಲಿ 9 ಸಚಿವರು ಭಾಗಿಯಾಗಿದ್ದರು....

ಕರ್ನಾಟಕಕ್ಕೂ ವಿಶೇಷ ಪ್ಯಾಕೇಜ್ ಘೋಷಿಸಿ: ಪಿಎಂಗೆ ಸಿಎಂ ಮನವಿ

ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ತುಮಕೂರಿನಲ್ಲಿ ಫುಡ್ ಪಾರ್ಕ್ ಉದ್ಘಾಟನೆ ವೇಳೆ ಮಾತನಾಡಿದ ಅವರು, ಆಂಧ್ರ ವಿಭಜನೆಯಾದಾಗ...

ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವುದು ಜನ್ಮ ಸಿದ್ಧ ಹಕ್ಕು: ಕತ್ತಿ ಸಮರ್ಥನೆ

ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಮಾಜಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡುವ ಮೂಲಕ ಪ್ರತ್ಯೇಕ ರಾಜದ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ, ಅಚಲನಾಗಿದ್ದೇನೆ. ಇದರಿಂದ ನನ್ನ ಶಾಸಕ...

ದೇಸಿ ಗೋ ತಳಿಗಳ ಅಭಿವೃದ್ಧಿಗೆ 50 ಕೋಟಿ ರೂ ವೆಚ್ಚದಲ್ಲಿ ಕೇಂದ್ರ ಸ್ಥಾಪನೆ

ಒಂದೆಡೆ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗೋಹತ್ಯೆ ನಡೆಯುತ್ತಿದ್ದರೆ ದೇಸಿ ಗೋತಳಿ ಅಭಿವೃದ್ಧಿಗೆ ರಾಷ್ಟ್ರೀಯ ಗೋಕುಲ್ ಮಿಷನ್ ಘೋಷಿಸಿರುವ ಕೇಂದ್ರ ಸರ್ಕಾರ ಒಂದು ಹೆಜ್ಜೆಮುಂದಿರಿಸಿದ್ದು ದೇಸಿ ಗೋತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 2 ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕೆ ರಾಷ್ಟ್ರೀಯ ಕಾಮಧೇನು ತಳಿ...

ದೇಶ ಮುಂದುವರೆಯುವುದೆಂದರೆ ರಾಜ್ಯಗಳು ಮುಂದುವರೆಯುವುದು- ಪ್ರಧಾನಿ ನರೇಂದ್ರ ಮೋದಿ

ದೇಶ ಮುಂದುವರಿಯುವುದೆಂದರೆ ರಾಜ್ಯಗಳು ಮುಂದುವರಿಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾರ್ಖಂಡ್ ನಲ್ಲಿ ವಿದ್ಯುತ್ ಗ್ರಿಡ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಭಾಗ ದುರ್ಬಲವಾಗಿರಬಾರದು, ಎಲ್ಲಾ ರಾಜ್ಯಗಳೂ ಅಭಿವೃದ್ಧಿ ಹೊಂದಬೇಕು, ಎಲ್ಲಾ ರಾಜ್ಯಗಳು ಅಭಿವೃದ್ಧಿ...

ಬಳ್ಳಾರಿಯಲ್ಲಿ ಸಚಿವ ಸಂಪುಟ ಸಭೆ: ಡಿ.ಕೆ.ಶಿವಕುಮಾರ್

ಜನರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಬಳ್ಳಾರಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಭಾಗದ ಜನರು ಬಹುದಿನಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಚಿವ ಸಂಪುಟ...

ದಕ್ಷಿಣಕನ್ನಡ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಘೋಷಿಸಲು ರಮಾನಾಥ ರೈ ಕರೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭತ್ತವನ್ನು ಬಿಟ್ಟು ಉಳಿದಂತೆ ಹೆಚ್ಚಿಗೆ ಅಡಿಕೆ ಹಾಗೂ ತೆಂಗು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇದರಿಂದ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಪರಿಗಣಿಸಬೇಕಾಗಿ ಸರಕಾರವನ್ನು ಕೋರುವುದಾಗಿ ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ತೋಟಗಾರಿಕೆ...

ಇಲಾಖೆಗಳ ಹೆಸರು ಬದಲಾವಣೆಗೆ ಕೇಂದ್ರ ನಿರ್ಧಾರ

ಸರ್ಕಾರದ ಮುಂದಿರುವ ಸಾವಾಲುಗಳು ಹಾಗೂ ಅಗತ್ಯತೆಗಳನ್ನು ಗುರುತಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ಪ್ರಮುಖ ಸಚಿವಾಲಯಗಳ ಹೆಸರು ಬದಲಿಸಿ ಅದಕ್ಕೆ ಹೊಸ ರೂಪ ನೀಡಲು ನಿರ್ಧರಿಸಿದೆ. ಜತೆಗೆ ಪರಸ್ಪರ ಸಾಮ್ಯವಿರುವ ಸಚಿವಾಲಯಗಳನ್ನು ಒಂದೇ ಸೂರಿನಡಿಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited