Untitled Document
Sign Up | Login    
Dynamic website and Portals
  

Related News

ಐರನ್ ಲೇಡಿ, ಐರೋಮ್ ಶರ್ಮಿಳಾರ ಉಪವಾಸ ಸತ್ಯಾಗ್ರಹ ಅಂತ್ಯ

ಸೇನಾಪಡೆಗಳ ದೌರ್ಜನ್ಯದ ವಿರುದ್ಧ ಬರೋಬ್ಬರಿ 16 ವರ್ಷಗಳಿಂದ ಸುದೀರ್ಘವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹದ ಹೋರಾಟ ನಡೆಸುತ್ತಿದ್ದ ಐರನ್ ಲೇಡಿ, ಐರೋಮ್ ಶರ್ಮಿಳಾ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಶರ್ಮಿಳಾ,...

ಢಾಕಾದಲ್ಲಿ ಉಗ್ರರ ವಿರುದ್ಧದ ಕಮಾಂಡೋ ಕಾರ್ಯಾಚರಣೆ ಅಂತ್ಯ

ಢಾಕಾದ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡವರನ್ನು ವಿಮೋಚನೆಗೊಳಿಸುವಲ್ಲಿ ಬಾಂಗ್ಲಾ ಭದ್ರತಾ ಪಡೆ ಯಶಸ್ವಿಯಾಗಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಶಸ್ತ್ರಸಜ್ಜಿತ ಬಂದೂಕುಧಾರಿ ಐಸಿಸ್ ಉಗ್ರರು ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ 20ಕ್ಕೂ ಹೆಚ್ಚು ವಿದೇಶಿಗರನ್ನು...

ಜೂನ್ 17ರಂದು ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ

ಚಿತ್ರಗಳನ್ನು ಸೆನ್ಸಾರ್‌ ಮಾಡಲು ಸಿಬಿಎಫ್ ಸಿ ಗೆ ಅವಕಾಶವಿಲ್ಲ. ಸಿನಿಮಾಟೋಗ್ರಾಫಿ ಕಾಯ್ದೆಯಲ್ಲಿ ಸೆನ್ಸಾರ್‌ ಎಂಬ ಪದವೇ ಇಲ್ಲ' ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 'ಉಡ್ತಾ ಪಂಜಾಬ್‌' ಸಿನಿಮಾದಿಂದ ಪಂಜಾಬ್‌ ಹೆಸರನ್ನು ಕೈಬಿಡಬೇಕು, 89 ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು...

ಸಕಲ ಮಿಲಿಟರಿ ಗೌರವದೊಂದಿಗೆ ಹುತಾತ್ಮ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಕರ್ನಲ್ ಸಂತೋಷ್ ಮಹದಿಕ್ ಅಂತ್ಯಕ್ರಿಯೆ ನಡೆಯಿತು. ಮಂಗಳವಾರ ಎನ್ಕೌಂಟರ್ ನಲ್ಲಿ ಮೃತಪಟ್ಟ 39 ವರ್ಷದ ಕರ್ನಲ್ ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತು ಉನ್ನತ ಸೈನ್ಯಾಧಿಕಾರಿಗಳು ಭಾಗವಹಿಸಿದ್ದರು. ಸುತ್ತಮುತ್ತಲಿನ ನೂರಾರು ಜನರು ಹುತಾತ್ಮ...

ಮಾಜಿ ಸಚಿವ, ಹಾಲಿ ಶಾಸಕ, ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ

ಮಾಜಿ ಸಚಿವ, ಹಾಲಿ ಶಾಸಕ, ಗುರುಪಾದಪ್ಪ ನಾಗಮಾರಪಲ್ಲಿ (75) ಅವರು ಮಂಗಳವಾರ ನಸುಕಿನ ವೇಳೆ ವಿಧಿವಶರಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತವಾದ ಬಳಿಕ ಗುರುಪಾಮಾದಪ್ಪ ಅವರನ್ನು ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ವಿಮಾನದಲ್ಲಿ ಬೀದರ್ ಗೆ ಪಾರ್ಥೀವ ಶರೀರವನ್ನು...

ಡಾ. ಎಪಿಜೆ ಅಬ್ದುಲ್ ಕಲಾಂ ಪಾರ್ಥಿವ ಶರೀರ ರಾಮೇಶ್ವರಂಗೆ

ಸೋಮವಾರ ನಿಧರಾದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ದೆಹಲಿಯಿಂದ ತಮಿಳುನಾಡಿನ ರಾಮೇಶ್ವರಂಗೆ ಬುಧವಾರ ತರಲಾಗುತ್ತಿದೆ. ಈ ವಿಶೇಷ ವಿಮಾನ ಮಧುರೈ ತಲುಪಲಿದ್ದು, ಮಧುರೈ ಇಂದ ಹೆಲಿಕ್ಯಾಪ್ಟರ್ ನಲ್ಲಿ ರಾಮೇಶ್ವರಂ ಗೆ...

ಪಂಜಾಬ್ ನಲ್ಲಿ ಉಗ್ರರ ದಾಳಿ ಅಂತ್ಯ: 3 ಉಗ್ರರು ಸೇರಿದಂತೆ ಒಟ್ಟು 11 ಸಾವು

ಭಾರತ-ಪಾಕಿಸ್ತಾನ ಗಡಿಯಂಚಿನಲ್ಲಿರುವ, ಪಂಜಾಬ್ ರಾಜ್ಯದ ಗುರುದಾಸ್ ಪುರದಲ್ಲಿ ಪಾಕಿಸ್ತಾನಿ ಉಗ್ರರ ದಾಳಿ ಅಂತ್ಯಗೊಂಡಿದೆ. ಪೊಲೀಸ್ ಠಾಣೆಯಲ್ಲಿ ಅಡಗಿದ್ದ ಎಲ್ಲಾ ಮೂವರು ಉಗ್ರರನ್ನು ಪೊಲೀಸರು ಹತಗೊಳಿಸಿದ್ದಾರೆ ಮತ್ತು ಕಾರ್ಯಾಚರಣೆ ಅಂತ್ಯಗೊಂದಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಒಟ್ಟು 11 ಜನರು ಸಾವನ್ನಪ್ಪಿದ್ದು, ಅದರಲ್ಲಿ 5...

ದೆಹಲಿಯಲ್ಲಿ ಆಪ್-ಬಿಜೆಪಿ ಕಸದ ಹೆಸರಲ್ಲಿ ರಾಜಕೀಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕೊಳೆತು ನಾರುತ್ತಿರುವ ಕಸ ಇನ್ನೂ ವಿಲೇವಾರಿಯಾಗಬಹುದು ಎಂದು ಜನರು ನಿಟ್ಟುಸಿರುಬಿಡುತ್ತಿರುವಾಗಲೇ, ಕಸದ ಹೆಸರಿನಲ್ಲಿ ಆಪ್ ಮತ್ತು ಬಿಜೆಪಿ ನಡುವೆ ಭರ್ಜರಿ ರಾಜಕೀಯ ಆರಂಭವಾಗಿದೆ. ಉಪಮುಖ್ಯಮಂತ್ರಿ ಮನೀಶ್‌...

ಯೆಮೆನ್‌ ನಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ

ಯುದ್ಧಪೀಡಿತ ಯೆಮೆನ್‌ ನ ರಾಜಧಾನಿ ಸನಾದಿಂದ 630 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಕೊನೆಯ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇದರೊಂದಿಗೆ ಯೆಮೆನ್‌ ನಲ್ಲಿ ವೈಮಾನಿಕ ರಕ್ಷಣಾ ಕಾರ್ಯಚರಣೆಯನ್ನು ಅಂತ್ಯಗೊಳಿಸಲಾಗಿದೆ. ಇದುವರೆಗೆ ಯೆಮೆನ್‌ ನಲ್ಲಿ 5600 ಜನರನ್ನು ರಾಹತ್‌ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ....

ಯಮೆನ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ :ವಿ.ಕೆ.ಸಿಂಗ್ ಗೆ ಅದ್ದೂರಿ ಸ್ವಾಗತ

ಯುದ್ಧ ಪೀಡಿತ ಯಮೆನ್‌ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ನಾಗರಿಕರನ್ನು ರಕ್ಷಿಸಿ ಅವರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತ ಸರ್ಕಾರ ಆರಂಭಿಸಿದ್ದ "ಆಪರೇಷನ್‌ ರಾಹತ್‌' ಅಂತ್ಯಗೊಂಡಿದೆ. ಆಪರೇಷನ್‌ ರಾಹತ್‌ ಹೆಸರಿನಲ್ಲಿ ಆರಂಭಗೊಂಡಿದ್ದ ಬೃಹತ್‌ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 5,600 ಜನರನ್ನು ಸಂಘರ್ಷ ಪೀಡಿತ...

ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್‌ ಯು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ

ಸ್ವಾಯತ್ತ ಸಿಂಗಾಪುರದ ಮೊದಲ ಪ್ರಧಾನಿ ಲೀ ಕ್ವಾನ್‌ ಯು ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಮಾ.29ರಂದು ಲೀ ಕ್ವಾನ್ ಯು ಅವರ ಅಂತ್ಯಕ್ರಿಯೆ ನಡೆಯಲಿದ್ದು ಮೋದಿ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ನ್ಯುಮೋನಿಯಾದಿಂದ ಬಳಸುತ್ತಿದ್ದ ಲೀ ಕ್ವಾನ್ ಯು, ಮಾ.23ರಂದು...

ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮಹಾರಾಷ್ಟ್ರದಲ್ಲಿ 25 ವರ್ಷಗಳ ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಅಂತ್ಯಗೊಂಡ ಬೆನ್ನಲ್ಲೇ ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕರು ಮಹಾರಾಷ್ಟ್ರದ ವೈರಿಗಳು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಬಿಜೆಪಿ-ಶಿವಸೇನೆಯ ಸುದೀರ್ಘ ಮೈತ್ರಿ ಮುಂದುವರೆಯಬೇಕು ಎಂಬುದು ಮೈತ್ರಿಕೂಟದ ಇತರ...

ಬಿಜೆಪಿ-ಶಿವಸೇನೆ ಮಹಾ ಮೈತ್ರಿ ಅಂತ್ಯ

ಮಹಾರಾಷ್ಟ್ರದಲ್ಲಿ ಕಳೆದ 25ವರ್ಷಗಳಿಂದ ಅಭಾದಿತವಾಗಿ ಮುಂದುವರೆದುಕೊಂಡು ಬಂದಿದ್ದ ಬಿಜೆಪಿ-ಶಿವಸೇನೆ ಮೈತ್ರಿ ಬಹುತೇಕ ಅಂತ್ಯವಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ಕ್ಷಣಗಳವರೆಗೂ ನಡೆದ ಉಭಯ ಪಕ್ಷಗಳ ನಡುವಿನ ಮಾತುಕತೆ...

ಕಲಾಗ್ರಾಮದಲ್ಲಿ ಯು.ಆರ್ ಅನಂತ ಮೂರ್ತಿ ಅಂತ್ಯಕ್ರಿಯೆ

'ಜ್ನಾನಪೀಠ' ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಜ್ನಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಅನಂತ ಮೂರ್ತಿ ಅವರ ಕುಟುಂಬಸ್ಥರು ಮತ್ತು ಅವರ...

ಅಗಲಿದ ಸಾಹಿತಿ ಅನಂತ ಮೂರ್ತಿ ಪಂಚಭೂತಗಳಲ್ಲಿ ಲೀನ

ಆ.22ರಂದು ನಿಧನರಾಗಿದ್ದ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್ ಅನಂತ ಮೂರ್ತಿ ಅವರ ಅಂತ್ಯಕ್ರಿಯೆಯನ್ನು ಜ್ನಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಸೂರ್ಯ ನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ ವೇದಘೋಗಳನ್ನು ಪಠಿಸುವ ಮೂಲಕ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited