Untitled Document
Sign Up | Login    
Dynamic website and Portals
  
November 8, 2016

ಏಳು ರಾಜ್ಯಗಳಲ್ಲಿ ಸಂಚರಿಸುವ ಮಂಗಲ ಗೋಯಾತ್ರೆ ಇಂದಿನಿಂದ ಆರಂಭ

ಪತ್ರಿಕಾಗೋಷ್ಠಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಪತ್ರಿಕಾಗೋಷ್ಠಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು

ಬೆಂಗಳೂರು : ಸ್ವಾತಂತ್ರ್ಯ ಸೇನಾನಿ ಮಂಗಲ ಪಾಂಡೆಯ ಸ್ಪೂರ್ತಿಯೊಂದಿಗೆ ಏಳು ರಾಜ್ಯಗಳಲ್ಲಿ ಸಂಚರಿಸುವ ಮಂಗಲ ಗೋಯಾತ್ರೆ ಮಂಗಳವಾರ ಆರಂಭವಾಗಲಿದ್ದು, ಗೋಯಾತ್ರೆಗೆ ಪೂರಕವಾಗಿ ಅಮೃತಪಥ ಹಾಗೂ ಅಮೃತಗರ್ಭ ಆಂದೋಲನವನ್ನು ನಾಡಿನಾದ್ಯಂತ ಕೈಗೊಳ್ಳಲಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.

ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠ ಶ್ರೀ ರಾಮಾಶ್ರಮದಲ್ಲಿ ನಡೆದ ರುಮೆನೊಟಮಿ (ಗೋವಿನ ಹೊಟ್ಟೆಯಿಂದ ಪ್ಲ್ಲಾಸ್ಟಿಕ್ ಹೊರ ತೆಗೆಯುವ ಶಸ್ತ್ರಚಿಕಿತ್ಸೆ) ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅಮೃತಪಥ ಆಂದೋಲನವು ಗೋವು ಸಂಚರಿಸುವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಹಾಗೂ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯವಾದರೆ, ಅಮೃತಗರ್ಭವು ಪ್ಲಾಸ್ಟಿಕ್ ತಿಂದು ಪ್ರಾಣಾಪಾಯದಲ್ಲಿರುವ ಗೋವುಗಳನ್ನು ರುಮೆನೊಟಮಿ ಶಸ್ತ್ರಚಿಕಿತ್ಸೆಯ ಮೂಲಕ ಪ್ಲಾಸ್ಟಿಕ್ ಹೊರತೆಗೆದು ರಕ್ಷಿಸುವ ಆಂದೋಲನವಾಗಿದೆ ಎಂದರು .


ಗೋರಕ್ಷಣೆ ಎಂದರೆ ಕೇವಲ ಕಸಾಯಿಕಾನೆಗೆ ಹೊಗುವ ಗೋವುಗಳನ್ನು ರಕ್ಷಿಸುವುದು ಮಾತ್ರವಾಗಿರದೇ, ತಳಿ ಸಂರಕ್ಷಣೆ, ಪ್ಲಾಸ್ಟಿಕ್ ನಿಂದ ಗೋವನ್ನು ರಕ್ಷಿಸುವುದು ಇತ್ಯಾದಿಗಳು ಕೂಡ ಗೋರಕ್ಷಣೆಯ ಭಾಗವೇ ಆಗಿದೆ. ಜನಜಾಗೃತಿಯನ್ನು ಮೂಡಿಸುವ ದಿಶೆಯಲ್ಲಿ ಈಗಾಗಲೇ ಗೋಪರಿವರವನ್ನು ರಾಜ್ಯಾದ್ಯಂತ ಸಂಘಟಿಸಲಾಗಿದ್ದು, ಗೋಪ್ರೇಮಿಗಳ ಮೂಲಕ ಗೋವುಗಳಿಗೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲು ಯೋಜಿಸಲಾಗಿದೆ. ಪರಿಸರವನ್ನು ಸ್ವಚ್ಛವಾಗಿಸುವ ಹೊಣೆ ಸರ್ಕಾರದ್ದಾಗಿದ್ದು, ಗೋವುಗಳಿಗೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲು ಕೈಜೋಡಿಸುವಂತೆ ವ್ಯವಸ್ಥೆಯ ಮೇಲೆ ಒತ್ತಡ ಹೇರ‍ಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಡಾ. ಯತಿರಾಜು, ಡೀನ್ ವೆಟರ್ನರಿ ಕಾಲೇಜು ಮತ್ತು ಅಧ್ಯಕ್ಷ ಐಬಿಎ ಕರ್ನಾಟಕ ಹಾಗೂ ಡಾ. ಎನ್ ಬಿ ಶ್ರೀಧರ್, ಫಾರ್ಮಾಕಾಲಜಿ ಪ್ರೊಫೆಸರ್ ಮತ್ತು ಕಾರ್ಯದರ್ಶಿ ಐಬಿಎ ಕರ್ನಾಟಕ ಇವರುಗಳು ಭಾಗವಹಿಸಿ ರುಮೆನೊಟಮಿ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿ, ಶ್ರೀ ರಾಮಚಂದ್ರಾಪುರ ಮಠದ ಈ ಆಂದೋಲನಕ್ಕೆ ಐಬಿಎ ಕರ್ನಾಟಕದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಮಂಗಲ ಗೋಯಾತ್ರೆ - ಶುಭಾರಂಭ :

ಸಪ್ತರಾಜ್ಯಗಳಲ್ಲಿ ಸಂಚರಿಸುವ ಮಂಗಲ ಗೋಯಾತ್ರೆ ನವೆಂಬರ್ 8 ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನ ರಾಜರಾಜೇಶ್ವರೀ ನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂತರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ 1008 ಗೋ ಪೂಜೆಯನ್ನು ಆಯೋಜಿಸಲಾಗಿದ್ದು, ಸಾವಿರಾರು ಸಂಖ್ಯೆಯ ಗೋಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.

 

 

Share this page : 
 

Readers' Comments (6)

shawn joseph08-09-2019:10:51:22 pm

student may face lot of difficulties while doing their essay, project or dissertation so we are here to help you and understand you and give you the best a href="https://realacademics.co.uk/essay-help.php">uk essay writers with cheapest cost and rate.

shawn08-09-2019:10:52:44 pm

https://realacademics.co.uk/essay-help.php

Coursework Project Help Service20-07-2018:03:51:28 pm

John Arnold Is An Academic Writer Of The Dissertation-Guidance. Who Writes Quality Academic Papers For Students To Help Them In Accomplishing Their Goals. Buy Coursework Assignment Help

Ivey case study analysis20-07-2018:01:05:32 pm

Well Thanks For Posting Such An Outstanding Idea. I Like This Blog & I Like The Topic And Thinking Of Making It Right. Ivey case study analysis

dom18-04-2018:10:57:53 am

There were very nearly one thousand religious communities in medieval France, of which 251 were Cistercian convents and 412 were Benedictine monasteries, alongside more than 700 ... wines, lager, natural product schnaps, of ascetic starting point, patrimony handed down by the priests and nuns of the Middle Ages, imparted to and created by individuals today.
uk essay writing

acheter04-05-2018:01:18:28 pm

Buy cialis no prescription is there a generic for viagra acheter sur interne .

Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
 • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
 • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited