Untitled Document
Sign Up | Login    
Dynamic website and Portals
  
September 2, 2016

ಪ್ರಧಾನಿ ಮೋದಿ ನಾಲ್ಕುದಿನಗಳ ವಿಯೆಟ್ನಾಂ ಮತ್ತು ಚೀನಾ ಪ್ರವಾಸ

Narendra Modi (File Pic) Narendra Modi (File Pic)

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ವಿಯೆಟ್ನಾಂ ಮತ್ತು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲಿಗೆ ವಿಯೆಟ್ನಾಂಗೆ ಭೇಟಿ ನೀಡಲಿರುವ ಪ್ರಧಾನಿ ಅಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ನಾಳೆ ಚೀನಾಗೆ ತೆರಳಲಿರುವ ಮೋದಿ, ಹಾಂಗ್ ಝೌನಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ವಿಶ್ವ ಆರ್ಥಿಕ ಬೆಳವಣಿಗೆಗೆ ಸಮರ್ಥನೀಯ ಸ್ಥಿರವಾದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸವಾಲುಗಳ ಕುರಿತು ಚರ್ಚೆ ನಡೆಸಲಿದೆ. ವಿಶ್ವ ನಾಯಕರೊಂದಿಗೆ ಎಲ್ಲಾ ಸವಾಲುಗಳು ಮತ್ತು ಅಂತಾರಾಷ್ಟ್ರೀಯ ಬದ್ಧತೆಗೆ ಒತ್ತು ನೀಡಲು ಭಾರತ ಶೃಂಗಸಭೆಯಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ವಿಯೆಟ್ನಾಂ ಜೊತೆಗೆ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದ್ದು, ಉಭಯ ದೇಶಗಳ ಸಹಭಾಗಿತ್ವ ಏಷ್ಯಾ ಮತ್ತು ಇತರ ದೇಶಗಳಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಜೆ ನಾನು ವಿಯೆಟ್ನಾಂನ ಹನೊಯ್ ಗೆ ಭೇಟಿ ನೀಡಲಿದ್ದು, ಈ ಭೇಟಿ ತುಂಬಾ ಮುಖ್ಯವಾಗಲಿದೆ. ವಿಯೆಟ್ನಾಂ ಜೊತೆಗೆ ಭಾರತ ತುಂಬಾ ಗಟ್ಟಿಯಾದ ಆರ್ಥಿಕ ಸಂಬಂಧವನ್ನು ಬಯಸುತ್ತದೆ. ಇದರಿಂದ ಎರಡೂ ದೇಶಗಳ ನಾಗರಿಕರಿಗೆ ಸಹಕಾರಿಯಾಗಲಿದೆ. ಎರಡೂ ದೇಶಗಳ ನಾಗರಿಕರ ಮಧ್ಯೆ ಸಂಬಂಧ ಬೆಸೆಯುವುದು ನನ್ನ ಭೇಟಿಯ ಉದ್ದೇಶ ಎಂದು ಮೋದಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited