ನವದೆಹಲಿ : ರಿಯೋ ಒಲಿಂಪಿಕ್ಸ್ ಒಂದು ವಾರ ಬಾಕಿ ಇರುವ ಹಿನ್ನೆಲೆ ಕ್ರೀಡಾಪುಟುಗಳಿಗೆ ಸ್ಫೂರ್ತಿ, ಪ್ರೋತ್ಸಾಹ ನೀಡಲು ರನ್ ಫಾರ್ ರಿಯೋ ಓಟಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ರನ್ ಫಾರ್ ರಿಯೋಗೆ ಚಾಲನೆ ನೀದಲಾಗಿದ್ದು, ಧ್ಯಾನಚಂದ್ ಸ್ಟೇಡಿಯಂನಿಂದ ದೆಹಲಿಯ ನೆಹರೂ ಸ್ಟೇಡಿಯಂವರೆಗೂ ಈ ಓಟ ಸಾಗಲಿದ್ದು ಸುಮಾರು 20 ಸಾವಿರ ಮಕ್ಕಳು ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, 2020ರಲ್ಲಿ ಟೋಕಿಯಾದಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಹೆಚ್ಚು ಭಾರತೀಯ ಕ್ರೀಡಾಪಟುಗಳು ಭಾಗಿಯಾಗಬೇಕು. ಪ್ರತಿ ಜಿಲ್ಲೆಯಲ್ಲಿ ಓರ್ವ ಅಥ್ಲೇಟಿಕ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕು ಎಂದರು.
ಕ್ರೀಡಾ ಕ್ಷೇತ್ರ ಪ್ರೋತ್ಸಾಹಕ್ಕಾಗಿ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಹಣ ಮೀಸಲಿಡಲಾಗುವುದು ಎಂದರು. ಮುಂಬರುವ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿರುವ ಕ್ರೀಡಾಪುಟಗಳು ಹೆಚ್ಚು ಪದಕ ಗೆಲ್ಲಬೇಕು. ಒಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ವಿಶ್ವದ ಹೃದಯ ಗೆಲ್ಲಲ್ಲಿ ಎಂದು ಹಾರೈಸಿದರು.