Untitled Document
Sign Up | Login    
Dynamic website and Portals
  
July 28, 2016

ಜುಲೈ 29ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ

ಚೆನ್ನೈ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಜತೆಗಿನ ಸಂಧಾನ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್​ಗಳ ಸಂಯುಕ್ತ ವೇದಿಕೆ (ಯುಎಫ್​ಬಿಯು) ಜುಲೈ 29ರಂದು ಮುಷ್ಕರ ನಡೆಸಲು ನಿರ್ಧರಿಸಿದೆ.

ಭಾರತೀಯ ಬ್ಯಾಂಕ್​ಗಳ ಸಂಘ (ಐಬಿಎ) ಮತ್ತು ಕೇಂದ್ರ ಸರ್ಕಾರದ ಜತೆ ನಡೆದ ಮಾತುಕತೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಯುಎಫ್​ಬಿಯು ಪ್ರತಿಭಟನೆಗೆ ಕರೆ ನೀಡಿದೆ. ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವುದನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಮಂಡಳಿ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಖಚಿತ ಪಡಿಸಿದ್ದಾರೆ.

ಮುಖ್ಯ ಕಾರ್ವಿುಕ ಆಯುಕ್ತರ ಸಮ್ಮುಖದಲ್ಲಿ ದೆಹಲಿಯ ಕಾರ್ವಿುಕ ಸಚಿವಾಲಯದಲ್ಲಿ ಸಂಧಾನ ಮಾತುಕತೆ ಏರ್ಪಟ್ಟಿತ್ತು. ಈ ಸಭೆಯಲ್ಲಿಯೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಇದ್ದ ಹಿನ್ನೆಲೆಯಲ್ಲಿ ಇದೀಗ ಮುಷ್ಕರಕ್ಕೆ ಮುಂದಾಗಿದೆ. ಸಭೆಯಲ್ಲಿ ಎಐಬಿಇಎ, ಎಐಬಿಒಸಿ, ಎನ್​ಸಿಬಿಇ, ಎಐಬಿಒಎ, ಬಿಇಎಫ್​ಐ, ಐಎನ್​ವಿಇಎಫ್, ಐಎನ್​ಬಿಒಸಿ, ಎನ್​ಒಬಿಡಬ್ಲ್ಯು, ಎನ್​ಒಬಿಒ ಸಂಸ್ಥೆಗಳು ಪಾಲ್ಗೊಂಡಿದ್ದವು ಎಂದು ವೆಂಕಟಾಚಲಂ ತಿಳಿಸಿದ್ದಾರೆ.

ಮುಷ್ಕರದ ಹಿನ್ನಲೆಯಲ್ಲಿ ಜುಲೈ 29ರಂದು ಬ್ಯಾಂಕ್ ಗಳು ಬಂದ್ ಇರಲಿದೆ. ಸಾರ್ವಜನಿಕ ವಲಯ ಬ್ಯಾಂಕ್​ಗಳ 10ಲಕ್ಷದಷ್ಟು ನೌಕರರು, ಹಳೆ ತಲೆಮಾರಿನ ಖಾಸಗಿ ಬ್ಯಾಂಕ್​ಗಳು ಮತ್ತು ವಿದೇಶಿ ಬ್ಯಾಂಕ್​ಗಳ ಒಟ್ಟು 80,000 ಶಾಖೆಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

 

 

Share this page : 
 

Readers' Comments (1)

IDN Poker20-10-2019:10:50:06 pm

Kronospoker Situs Judi Online, IDN Poker, IDN Poker Mobile, Agen Poker Terpercaya Indonesia untuk permainan Poker Online, Domino Qiu Qiu, Cemeqq, Capsa Susun dan Super10

Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
 • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
 • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
 • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
 • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited