Untitled Document
Sign Up | Login    
Dynamic website and Portals
  
July 24, 2016

ಸೆ.30ರೊಳಗೆ ಆದಾಯ ತೆರಿಗೆ ಘೋಷಿಸಿ: ಪ್ರಧಾನಿ ಸೂಚನೆ

ನವದೆಹಲಿ : ಅಘೋಷಿತ ಆಸ್ತಿ ಮತ್ತು ಆದಾಯಗಳನ್ನು ಘೋಷಣೆ ಮಾಡದ ತೆರಿಗೆ ಕಳ್ಳರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಖಡಕ್ ಸೂಚನೆ ನೀಡಿದ್ದಾರೆ. ಸೆ.30ರೊಳಗೆ ಆದಾಯ ತೆರಿಗೆ ಘೋಷಿಸಿ ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಆಭರಣ ವ್ಯಾಪಾರಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೀಯಲ್ ಎಸ್ಟೇಟ್ ಮತ್ತು ಜ್ಯುವೆಲ್ಲರಿ ಉದ್ಯಮ ಸೇರಿದಂತೆ ಇತರೆ ಕಡೆ ಇರುವ ರಹಸ್ಯ ಸಂಪತ್ತನ್ನು ಬಹಿರಂಗಪಡಿ. ತೆರಿಗೆ ಘೋಷಣೆಯ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ತೆರಿಗೆ ವಂಚಿಸಿದ್ದಕ್ಕಾಗಿ ಈಗಾಗಲೇ ಹಲವರು ಜೈಲುಸೇರಿದ್ದಾರೆ. ಸೆಪ್ಟೆಂಬರ್ 30ರೊಳಗೆ ಏಕಗವಾಕ್ಷಿ ಮೂಲಕ ತೆರಿಗೆ ಕಟ್ಟಿ ಅದನ್ನು ಸಕ್ರಮ ಮಾಡಿಕೊಳ್ಳದಿದ್ದರೆ ಸರ್ಕಾರ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆದಾಯ ಘೋಷಣೆ ಯೋಜನೆಯಡಿ ತಮ್ಮ ಅಘೋಶಿತ ಸಂಪತ್ತನ್ನು ಘೋಷಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಜೂನ್ 1ರಿಂದ ಸೆಪ್ಟೆಂಬರ್ 30ರವೆರೆಗೆ ಅವಕಾಶ ನೀಡಿದೆ. ಇದಾದ ಬಳಿಕ ಶೇ.45ರಷ್ಟು ತೆರಿಗೆ ಮತ್ತು ದಂಡ ಪಾವತಿಸಬೇಕಾಗುತ್ತೆದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited