Untitled Document
Sign Up | Login    
Dynamic website and Portals
  
July 14, 2016

ಆಪರೇಷನ್ ಸಂಕಟ ಮೋಚನ್ ಗೆ ಚಾಲನೆ

ಆಪರೇಷನ್ ಸಂಕಟ ಮೋಚನ್ ಗೆ ಚಾಲನೆ

ನವದೆಹಲಿ : ದಕ್ಷಿಣ ಸೂಡಾನ್ ನಲ್ಲಿ ಸಿಲುಕಿಯರ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆಪರೇಷನ್ ಸಂಕಟ ಮೋಚನ್ ಕಾರ್ಯಾಚರಣೆಗೆ ಚಾಲನೆ ನೀಡಿದೆ.

ಆಫ್ರಿಕಾದ ಯುದ್ಧಗ್ರಸ್ಥ ದಕ್ಷಿಣ ಸೂಡಾನ್​ ನಲ್ಲಿ ಸಿಲುಕಿರುವ ನೂರಾರು ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರಕಾರ್ಯಾಚರಣೆ ಆರಂಭಿಸಿದ್ದು, ಸಚಿವ ವಿ.ಕೆ.ಸಿಂಗ್ ನೇತೃತ್ವದಲ್ಲಿ 2 ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ವಿಮಾನಗಳು ಸೂಡಾನ್​ ಗೆ ಪ್ರಯಾಣ ಬೆಳೆಸಿವೆ.

ನವದೆಹಲಿಯಿಂದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಮರ್ ಸಿನ್ಹಾ ನೇತೃತ್ವದಲ್ಲಿ ಭಾರತೀಯ ಅಧಿಕಾರಿಗಳ ತಂಡ ದಕ್ಷಿಣ ಸೂಡಾನ್​ನ ಜುಬಾಗೆ ಪ್ರಯಾಣ ಬೆಳೆಸಿದೆ.

ದಕ್ಷಿಣ ಸೂಡಾನ್​ನಲ್ಲಿ ಸುಮಾರು 500 ಭಾರತೀಯರಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗುವುದು. ಭಾರತೀಯ ವಿಮಾನಗಳು ಜುಬಾಗೆ ಗುರುವಾರ ಬೆಳಗ್ಗೆ 11 ಗಂಟೆ (ಸ್ಥಳೀಯ ಕಾಲಮಾನ) ತಲುಪಲಿದ್ದು, ಭಾರತೀಯ ನಾಗರಿಕರನ್ನು ಭಾರತಕ್ಕೆ ವಾಪಸ್ಸು ಕರೆತರಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ದಕ್ಷಿಣ ಸೂಡಾನ್​ನಲ್ಲಿ ಆಂತರಿಕ ಗಲಭೆ ಉಂಟಾಗಿದ್ದು, ಈ ವರೆಗೆ ನೂರಾರು ಜನರು ಗಲಭೆಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿಯರು ದೇಶ ತೊರೆಯುತ್ತಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited