ಕಾಶ್ಮೀರ : ಉಗ್ರ ಬುರ್ಹಾನ್ ವಾನಿ ಹತ್ಯೆ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕಾಶ್ಮೀರಿ ಯುವಕರ ಗುಂಪೊಂದು 70 ಪೊಲೀಸ್ ಗನ್ ಗಳನ್ನು ಲೂಟಿ ಮಾಡಿದೆ.
ಇಲ್ಲಿನ ಕುಲ್ ಗಾಂ ನಲ್ಲಿನ ದಮ್ಹಾಲ್ ಹಾಂಜಿ ಪೋರಾ ಪೊಲೀಸ್ ಠಾಣೆಗೆ ನುಗ್ಗಿದ ಕಾಶ್ಮೀರಿ ಯುವಕರ ಗುಂಪೊಂದು ಸುಮಾರು 70ರಷ್ಟು ಸೆಮಿ ಆಟೋಮ್ಯಾಟಿಕ್ ಮತ್ತು ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನು ಲೂಟಿಗೈದಿದ್ದಾರೆ.
ಈ ಶಸ್ತ್ರಾಸ್ತ್ರಗಳು ಉಗ್ರರ ಕೈಸೇರಲಿದ್ದು ಭದ್ರತಾ ಪಡೆಗಳ ವಿರುದ್ಧವೇ ಬಳಸಲ್ಪಡುವ ಸಾಧ್ಯತೆಗಳಿವೆ. ಈನಿಟ್ಟಿನಲ್ಲಿ ಗನ್ ಗಳನ್ನು ಹೊತ್ತೈದ ಯುವಕರಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಇನ್ನು ಇಂತಹುದೇ ಮತ್ತಷ್ಟು ಘಟನೆಗಳು ಟ್ರಾಲ್ ಮತ್ತು ಕರಲ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಭವಿಸಿದ್ದು, ಉದ್ರಿಕ್ತರ ಗುಂಪುಗಳು ಸೈನಿಕರಿಂದ ಶಸ್ತ್ರಾಸ್ತ್ರ ಕಸಿಯುವ ಪ್ರಯತ್ನ ಮಾಡಿವೆ.