Untitled Document
Sign Up | Login    
Dynamic website and Portals
  
July 10, 2016

ಭಾರತ-ತಾಂಜಾನಿಯಾ ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ-ತಾಂಜಾನಿಯಾ ಮಹತ್ವದ ಒಪ್ಪಂದಗಳಿಗೆ ಸಹಿ

ತಾಂಜಾನಿಯಾ : ತಾಂಜಾನಿಯಾದ ಝುಂಝಿಬಾರ್​ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಸೇರಿದಂತೆ ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ತಾಂಜಾನಿಯಾ ಸಹಿಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರ ಸಮ್ಮುಖದಲ್ಲಿ ವಿವಿಧ ಒಪ್ಪಂದಗಳಿಗೆ ಸಹಿಮಾಡಿಕೊಳ್ಳಲಾಯಿತು.

ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಝಾಂಝಿಬಾರ್ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 920 ಲಕ್ಷ ಡಾಲರ್​ಗಳನ್ನು ಭಾರತದಿಂದ ಸಾಲವನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ, ಔಷಧ ಮತ್ತು ಔಷಧೋಪಕರಣ ಪೂರೈಕೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಆದ್ಯತೆಯ ವಿಚಾರಗಳಲ್ಲಿ ತಾಂಜಾನಿಯ ಸರ್ಕಾರದ ಜೊತೆಗೆ ಸಹಕರಿಸಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ಸಾಗರಯಾನ ಕ್ಷೇತ್ರದಲ್ಲಿ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಉಭಯದೇಶಗಳು ಊಪಿಗೆ ಸೂಚಿಸಿವೆ. ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರದಿಂದ ದುಡಿಯಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ತಾಂಜಾನಿಯಾದ 17 ನಗರಗಳಿಗೆ ನೀರು ಪೂರೈಕೆ ಕಾರ್ಯಗಳಲ್ಲೂ ನೆರವಾಗುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಇದಕ್ಕಾಗಿ ರಿಯಾಯ್ತಿ ದರದಲ್ಲಿ 5000 ಲಕ್ಷ ಡಾಲರ್ ಹೆಚ್ಚುವರಿ ಸಾಲ ಒದಗಿಸುವ ಬಗ್ಗೆ ಪರಿಶೀಲಿಸಲೂ ಭಾರತ ಬಯಸಿದೆ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited