Untitled Document
Sign Up | Login    
Dynamic website and Portals
  
July 10, 2016

ತಾಂಜಾನಿಯಾದ ಸಾಂಪ್ರದಾಯಿಕ ನಗಾರಿ ಭಾರಿಸಿದ ಪ್ರಧಾನಿ ಮೋದಿ

ತಾಂಜಾನಿಯಾದ ಸಾಂಪ್ರದಾಯಿಕ ನಗಾರಿ ಭಾರಿಸಿದ ಪ್ರಧಾನಿ ಮೋದಿ

ತಾಂಜಾನಿಯಾ : ಆಫ್ರಿಕದ ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಡ ರಾತ್ರಿ ತಾಂಜಾನಿಯಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ನಿಡಲಾಗಿದೆ.

ಈ ವೇಳೆ ತಾಂಜಾನಿಯ ಅಧ್ಯಕ್ಷ ಡಾ. ಜಾನ್ ಮಗುಫುಲಿ ಅವರನ್ನು ಮೋದಿ ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ಮಗುಫುಲಿ ಅವರು ಮೋದಿ ಅವರಿಗೆ ತಾಂಜಾನಿಯದ ಸಾಂಪ್ರದಾಯಿಕ ನಗಾರಿಯನ್ನು ಭಾರಿಸಿ ತೋರಿಸಿದರು. ತಕ್ಷಣವೇ ಮೋದಿ ಅವರೂ ತಾಂಜಾನಿಯ ಅಧ್ಯಕ್ಷರ ಜೊತೆಗೆ ನಗಾರಿ ಭಾರಿಸಿದರು.

ಇದಕ್ಕೆ ಮುನ್ನ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಪ್ರಧಾನಿಯವರತ್ತ ಭಾರತ ಮತ್ತ ತಾಂಜಾನಿಯ ಧ್ವಜಗಳನ್ನು ಪ್ರದರ್ಶಿಸಿದರು.

ತಾಂಜಾನಿಯದಲ್ಲಿ ಮೋದಿ ಅವರು ಅಧ್ಯಕ್ಷ ಜಾನ್ ಪೊಂಬೆ ಜೋಸೆಫ್ ಮಗುಫುಲಿ ಜೊತೆಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ತಮ್ಮ ಗ್ರಾಮಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತಯಾರಿ, ಅಳವಡಿಕೆ, ದುರಸ್ತಿ, ನಿರ್ವಹಣೆಗೆ ಭಾರತ ಸರ್ಕಾರದಿಂದ ತರಬೇತಿ ಪಡೆದ ಆಫ್ರಿಕದ ಮಹಿಳಾ ಸೌರ ಎಂಜಿನಿಯರ್​ಗಳ ಗುಂಪು ‘ಸೋಲಾರ್ ಮಾಮಸ್’ ಅವರ ಜೊತೆಗೂ ಮೋದಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited