ಮೊಜಾಂಬಿಕ್ : ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಆಫ್ರಿಕಾ ಪ್ರವಾಸ ಆರಂಭಗೊಂಡಿದ್ದು, ಆಪ್ರಿಕಾದ ಮೊಜಾಂಬಿಕ್ ದೇಶದ ರಾಜಧಾನಿ ಮಾಪುಟೋ ನಗರ ತಲುಪಿದ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.
ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿ ನರೇಂದ್ರ ಮೋದಿ ಆಫ್ರಿಕಾ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದು, ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಪ್ರವಾಸದ ವೇಳೆ ಆಹಾರ ಭದ್ರತೆ, ಇಂಧನ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದ ಏರ್ಪಡುವ ನಿರೀಕ್ಷೆಗಳಿದ್ದು, ಮೊಜಾಂಬಿಕ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಮತ್ತು ಕೀನ್ಯಾಗಳಿಗೆ ಭೇಟಿ ನೀಡಲಿರುವ ಮೋದಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪ್ರವಾಸಕ್ಕೂ ಮೊದಲು ಮಾತನಾಡಿರುವ ಪ್ರಧಾನಿ ಮೋದಿ ಭಾರತ-ಆಫ್ರಿಕಾ ನಡುವಿನ ಬಾಂಧವ್ಯ ವೃದ್ಧಿಗೆ ಇದು ನೆರವಾಗಲಿದೆ. ಸಾಗರೋತ್ತರ ಭದ್ರತೆ, ವಹಿವಾಟು, ಹೂಡಿಕೆ, ಕೃಷಿ ಹಾಗೂ ಆಹಾರ ಭದ್ರತೆ ವಿಚಾರದಲ್ಲಿ ಆಫ್ರಿಕಾ ರಾಷ್ಟ್ರಗಳು ಮತ್ತು ಭಾರತದ ಸಹಕಾರ ವೃದ್ಧಿಸಲಿದೆ ಎಂದು ತಿಳಿಸಿದ್ದಾರೆ.