ನವದೆಹಲಿ : 50 ಕೋಟಿ ರೂಪಾಯಿ ಕಂಪ್ಯೂಟರ್ ಖರೀದಿ ಹಗರಣದಲ್ಲಿ ನಡೆದ ಭ್ರಷ್ಟಾಚಾರ ಆರೋಪದಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ನಾಲ್ವರನ್ನು ಸಿಬಿಐ ಬಂಧಿಸಿದೆ.
ಹಗರಣದ ಪ್ರಮುಖ ರಾಜೇಂದ್ರ ಕುಮಾರ್ ಎಂದು ಸಿಬಿಐ ಮೂಲಗಳು ತಿಳಿಸಿದ್ದು, ಕುಮಾರ್ ಸೇರಿದಂತೆ 5 ಮಂದಿಯನ್ನು ಇಂದು ಪಟಿಯಾಲಾ ಕೋರ್ಟ್ ಗೆ ಹಾಜರುಪಡಿಸುವುದಾಗಿ ಸಿಬಿಐ ಹೇಳಿದೆ.
ಅಲ್ಲದೇ ಯಾವುದೇ ಟೆಂಡರ್ ಇಲ್ಲದೇ ಬೇನಾಮಿ ಕಂಪನಿಗಳಿಗೆ ಕೆಲಸದ ಗುತ್ತಿಗೆಯನ್ನು ಈ ಅಧಿಕಾರಿ ನೀಡಿದ್ದು, ಇದರಿಂದ ದೆಹಲಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ರಾಜೇಂದ್ರ ಕುಮಾರ್ ವಿರುದ್ಧದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಿಬಿಐ ಅಧಿಕಾರಿಗಳು ದೆಹಲಿ ಸೆಕ್ರೆಟರಿಯೇಟ್ ಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಇದು ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.