Untitled Document
Sign Up | Login    
Dynamic website and Portals
  
July 3, 2016

ಅಮರನಾಥ ದರ್ಶನ ಪಡೆದ ರಾಜನಾಥ್ ಸಿಂಗ್

ಕಾಶ್ಮೀರ : ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಎನ್.ಎನ್.ವೋಹ್ರಾ ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ಗುಹೆಗೆ ಭೇಟಿ ನೀಡಿ ಪವಿತ್ರ ಶಿವಲಿಂಗದ ದರ್ಶನ ಪಡೆದರು.

ಜೂನ್ 30ರಿಂದ 48 ದಿನಗಳ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಿದ್ದು, ರಾಜನಾಥ್ ಸಿಂಗ್ ಮತ್ತು ವೋಹ್ರಾ ‘ಪ್ರಥಮ ಪೂಜೆ’ಯ ವೇಳೆಗೆ ಗುಹೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಉಗ್ರರ ಭೀತಿ ಹಿನ್ನಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಮರನಾಥ ಯಾತ್ರೆ ಯಶಸ್ವಿಯಾಗಿಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿರುವ ರಾಜನಾಥ್ ಸಿಂಗ್, ಅಮರನಾಥ ಗುಹೆಗೆ ಭೇಟಿ ನೀಡಿದ್ದಾರೆ. ರಾಜನಾಥ್ ಸಿಂಗ್ 2015ರಲ್ಲಿ ಸಹ ಪ್ರಥಮ ಪೂಜೆಯ ವೇಳೆಗೆ ಗುಹೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.

ರಾಜನಾಥ್ ಸಿಂಗ್ ಉನ್ನತ ಮಟ್ಟದ ಸಭೆ ನಡೆಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಯಾತ್ರೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಅಮರನಾಥ ಯಾತ್ರೆ ಶ್ರಾವಣ ಪೂರ್ಣಿಮೆ ಮತ್ತು ರಕ್ಷಾ ಬಂಧನ ಹಬ್ಬದ ದಿನ ಆಗಸ್ಟ್ 18 ರಂದು ಮುಕ್ತಾಯವಾಗಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited