ನವದೆಹಲಿ : ಸ್ಮಾರ್ಟ್ ಸಿಟಿ ಪಟ್ಟಿಗೆ ಬೆಂಗಳೂರು ಸೇರಿದಂತೆ 9 ನಗರಗಳನ್ನು ಸೇರ್ಪಡೆಗೊಳಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.
9 ನಗರಗಳು ಹೊಸದಾಗಿ ಸೇರ್ಪಡೆಯಾಗುವ ಮೂಲಕ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಂಡಿರುವ ನಗರಗಳ ಸಂಖ್ಯೆ 100 ರಿಂದ 109 ಕ್ಕೆ ಏರಿಕೆಯಾಗಲಿದೆ.
ಈ ಮೂಲಕ ಬೆಂಗಳೂರು, ಅಮರಾವತಿ, ಇಟಾನಗರ, ಗ್ಯಾಗ್ಟೋಕ್, ಪಟನಾ, ತಿರುವನಂತಪುರಂ ಸೇರಿದಂತೆ 9 ನಗರಗಳು ಮುಂದಿನ ಹಂತದಲ್ಲಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಲು ಪೈಪೋಟಿ ನಡೆಸಲಿವೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಜಮ್ಮು ಮತ್ತು ಶ್ರೀನಗರ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಿಂದ ಮೀರತ್ ಅಥವಾ ರಾಯ್ ಬರೇಲಿ ಪಟ್ಟಿಗೆ ಸೇರ್ಪಡೆಯಾಗಲಿದೆ.