Untitled Document
Sign Up | Login    
Dynamic website and Portals
  
June 28, 2016

ಪ್ಯಾಂಪೋರ್ ದಾಳಿ ಮಾದರಿಯಲ್ಲಿ ಉಗ್ರರಿಂದ ಮತ್ತೊಂದು ದಾಳಿಗೆ ಸಿದ್ಧತೆ

ನವದೆಹಲಿ : ಕಳೆದ ಮೂರುದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರಪ್ಯಾಂಪೋರ್ ನಲ್ಲಿ ದಾಳಿ ನಡೆಸಿ 8 ಯೋಧರ ಧಾರುಣ ಸಾವಿಗೆ ಕಾರಣವಾದ ಲಷ್ಕರ್ ಉಗ್ರ ಸಂಘಟನೆ ಮತ್ತೊಂದು ಅಂತದ್ದೇ ದಾಳಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಹೊಸ ಕಾರ್ಯಾಚರಣೆಯ ಕಮಾಂಡರ್‌ ಮಜೀದ್‌ ಝರ್ಗಾರ್‌ ಎಂಬಾತ ಹೊಸ ಫಿದಾಯೀನ್‌ (ಆತ್ಮಾಹುತಿ) ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ. ದಾಳಿಗೆ ಸೂಕ್ತವೆನಿಸುವ ಸಮಯಕ್ಕಾಗಿ ಕಾದು ಕುಳಿತಿರುವ ಉಗ್ರರು ಯಾವ ಕ್ಷಣದಲ್ಲಾದರೂ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದೆ.

ಲಷ್ಕರ್‌ನ ಫಿದಾಯೀನ್‌ ದಾಳಿಕೋರರು ಸಿಆರ್‌ಪಿಎಫ್ ಜವಾನರ ಮೇಲೆ ಪ್ಯಾಂಪೋರ್ ಮಾದರಿಯಲ್ಲಿ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಮತ್ತು ಭದ್ರತಾ ಪಡೆಗಳು ಹಾಗೂ ಪೊಲೀಸ್‌ ಪಡೆಗಳು ಪರಸ್ಪರರೊಳಗೆ ಉತ್ತಮ ಹೊಂದಾಣಿಕೆ, ಸಂಪರ್ಕ, ಸಂವಹನವನ್ನು ಹೊಂದುವಂತೆ ಗೃಹ ಸಚಿವಾಲಯವು ಕಟ್ಟೆಚ್ಚರದ ಸಂದೇಶ ರವಾನಿಸಿದೆ.

ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಅನುಮಾನಾಸ್ಪದ ಪ್ರದೇಶಗಳಲ್ಲಿ ಶೋಧ ನಡೆಸುವಂತೆ ಸೂಚನೆ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited