Untitled Document
Sign Up | Login    
Dynamic website and Portals
  
June 24, 2016

ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ವಿಚಾರ: ಯಾವುದೇ ನಿರ್ಧಾರ ಕೈಗೊಳ್ಳದೇ ಸಭೆ ಮುಕ್ತಾಯ

ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ವಿಚಾರ: ಯಾವುದೇ ನಿರ್ಧಾರ ಕೈಗೊಳ್ಳದೇ ಸಭೆ ಮುಕ್ತಾಯ

ಸಿಯೋಲ್ : ಸಿಯೋಲ್ ​ನಲ್ಲಿ ನಡೆದ ಪರಮಾಣು ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ಸಭೆಯು ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೇ ಮುಕ್ತಾಯಗೊಂಡಿದೆ.

ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಅಂತಿಮ ದಿನವಾದ ಶುಕ್ರವಾರವೂ ಚೀನಾ ಸೇರಿದಂತೆ 10 ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ ಪರಿಣಾಮವಾಗಿ ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಸಿಯೋಲ್ ಅಧಿವೇಶನ ಕೂಡ ವಿಫಲವಾಗಿದೆ.

ಸಭೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದ (ಎನ್​ಪಿಟಿಗೆ) ಸಹಿ ಹಾಕದ ಹೊರತು ಭಾರತ ಮತ್ತು ಪಾಕಿಸ್ತಾನಕ್ಕೆ ಸದಸ್ಯತ್ವ ನೀಡಬಾರದೆಂದು ಚೀನಾ ಪಟ್ಟು ಹಿಡಿಯಿತು. ಚೀನಾ ಜತೆಗೆ ಬ್ರೆಜಿಲ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಐರ್ಲೆಂಡ್, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ದೇಶಗಳು ಕೂಡ ತೀವ್ರವಿರೋಧ ವ್ಯಕ್ತಪಡಿಸುತ್ತಿವೆ.

ತಾಷ್ಕೆಂಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾದ ವೇಳೆ ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ನೀಡುವ ಕುರಿತು ಮೃಧು ಧೋರಣೆ ತಳೆದಿದ್ದ ಚೀನಾ, ಬಳಿಕ ತನ್ನ ಹಳೆ ಪಟ್ಟನ್ನೇ ಮುಂದುವರೆಸಿತು.

ಚೀನಾದ ವಿದೇಶಾಂಗ ಸಚಿವಾಲಯದ ಶಸ್ತ್ರಾಸ್ತ್ರ ನಿಯಂತ್ರಣ ವಿಭಾಗದ ಮಹಾ ನಿರ್ದೇಶಕರೂ ಆಗಿರುವ ರಾಯಭಾರಿ ವಾಂಗ್ ಖುನ್ ಅವರು ‘ಎನ್​ಎಸ್​ಜಿ ಸಭೆಯು ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರವನ್ನು ಚರ್ಚಿಸುವುದಿಲ್ಲ. ಅಣ್ವಸ್ತ್ರ ಪ್ರಸರಣ ಒಪ್ಪಂದಕ್ಕೆ (ಎನ್​ಪಿಟಿ) ಸಹಿಹಾಕದ ರಾಷ್ಟ್ರಗಳನ್ನು ಎನ್​ಎಸ್​ಜಿಗೆ ಸೇರ್ಪಡೆ ಮಾಡುವ ಬಗ್ಗೆ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ’ ಎಂದು ಹೇಳಿಕೆ ನೀಡಿದರು.

48 ಸದಸ್ಯ ರಾಷ್ಟ್ರದ ಒಟ್ಟು 300 ಪ್ರತಿನಿಧಿಗಳು ಶುಕ್ರವಾರ ಸಿಯೋಲ್ ನಡೆದ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಒಟ್ಟು 48 ರಾಷ್ಟ್ರಗಳ ಪರಮಾಣು ಪೂರೈಕೆದಾರರ ಒಕ್ಕೂಟದಲ್ಲಿ ಭಾರತದ ಎನ್ ಎಸ್ ಜಿ ಸೇರ್ಪಡೆ ವಿಚಾರಕ್ಕೆ ಅಮೆರಿಕ ಸೇರಿದಂತೆ 38 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದ್ದು, ಚೀನಾ ಸೇರಿದಂತೆ 10 ರಾಷ್ಟ್ರಗಳು ಮಾತ್ರ ವಿರೋಧ ವ್ಯಕ್ತಪಡಿಸಿವೆ.

ಈ ಪೈಕಿ ಬ್ರೆಜಿಲ್ ಮತ್ತು ಆಸ್ಟ್ರೇಲಿಯಾ ಭಾರತಕ್ಕೆ ಸದಸ್ಯತ್ವ ನೀಡುವುದರಲ್ಲಿ ತಮ್ಮ ವಿರೋಧವಿಲ್ಲ, ಆದರೆ ನಿಯಮಾನುಸಾರವೇ ಸದಸ್ಯತ್ವ ಸೇರ್ಪಡೆಯಾಗಬೇಕು ಎಂದು ಹೇಳಿದೆ. ಒಟ್ಟಿನಲ್ಲಿ ಸಿಯೋಲ್​ನಲ್ಲಿ ನಡೆದ ಎನ್​ಎಸ್​ಜಿ ಸಭೆ ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ತೀರ್ಮಾನವನ್ನೂ ತೆಗೆದುಕೊಳ್ಳದೆಯೇ ಮುಕ್ತಾಯಗೊಂಡಂತಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited