Untitled Document
Sign Up | Login    
Dynamic website and Portals
  
June 24, 2016

ಸ್ಮಾರ್ಟ್ ಸಿಟಿ ಯೋಜನೆ: ಜೂನ್‌ 25ರಂದು ಪ್ರಧಾನಿ ಮೋದಿ ಚಾಲನೆ

ನವದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಯೋಜನೆಯ 20 ನಗರಗಳಲ್ಲಿನ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 25ರಂದು ಮಹಾರಾಷ್ಟ್ರದ ಪುಣೆಯಲ್ಲಿ ಚಾಲನೆ ನೀಡಲಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆ ಘೋಷಣೆಯಾದ 1ನೇ ವರ್ಷಾಚರಣೆ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪುಣೆಯ ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಪುಣೆಯಲ್ಲಿ ಮೋದಿ ಏಕಕಾಲಕ್ಕೆ14 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಬೆಳಗಾವಿ, ಗುಜರಾತಿನ ಅಹಮದಾಬಾದ್, ಒಡಿಶಾದ ಭುವನೇಶ್ವರ, ಮಧ್ಯಪ್ರದೇಶದ ಜಬಲ್​ಪುರ, ಆಂಧ್ರಪ್ರದೇಶದ ಕಾಕಿನಾಡ, ಕೇರಳದ ಕೊಚ್ಚಿ ಮತ್ತು ರಾಜಸ್ಥಾನದ ಜೈಪುರ ಸೇರಿದಂತೆ ಒಟ್ಟು 19 ನಗರಗಳಲ್ಲಿ 69 ಯೋಜನೆಗೆಳಿಗೆ ಚಾಲನೆ ಸಿಗಲಿದೆ. ಸ್ಮಾರ್ಟ್ ಸಿಟಿಯ ಮೊದಲ ಹಂತದಲ್ಲಿ 1,770 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ಸಿಗಲಿದೆ.

ಮೊದಲ ಹಂತದಲ್ಲಿ ಚಾಲನೆ ನೀಡುತ್ತಿರುವ ಕಾಮಗಾರಿಗಳ ಪೈಕಿ ಸ್ವತ್ಛ ಭಾರತ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಕಾಮಗಾರಿ, ಸ್ವತ್ಛ ಕುಡಿಯುವ ನೀರು ಸರಬರಾಜು, ಕೊಳಚೆ ನೀರು ಶುದ್ಧೀಕರಣ, ನಗರಗಳ ಹಸಿರೀಕರಣ, ನಗರಪ್ರದೇಶಗಳಲ್ಲಿ ಬಡವರಿಗೆ ಮನೆ ನಿರ್ಮಾಣ ಮೊದಲಾದವು ಒಳಗೊಂಡಿದೆ.

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ‘ಮೇಕ್ ಯುವರ್ ಸಿಟಿ ಸ್ಮಾರ್ಟ್ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಈ ಸ್ಪರ್ಧೆಯಲ್ಲಿ ಜನರು ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ತಮ್ಮ ಸಲಹೆ, ವಿನ್ಯಾಸಗಳನ್ನು ಸಚಿವಾಲಯಕ್ಕೆ ಕಳುಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 10 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited