Untitled Document
Sign Up | Login    
Dynamic website and Portals
  
June 23, 2016

ಒಲಿಂಪಿಕ್ಸ್‌ ಜ್ಯೋತಿಯಾತ್ರೆ ಕಾರ್ಯಕ್ರಮ: ಗುಂಡೇಟಿಗೆ ಬಲಿಯಾದ ಚಿರತೆ

ಒಲಿಂಪಿಕ್ಸ್‌ ಜ್ಯೋತಿಯಾತ್ರೆ ಕಾರ್ಯಕ್ರಮ: ಗುಂಡೇಟಿಗೆ ಬಲಿಯಾದ ಚಿರತೆ

ಬ್ರೆಜಿಲ್ : ರಿಯೊ ಒಲಿಪಿಂಕ್ಸ್ ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್‌ ನಲ್ಲಿ ನಡೆದ ಒಲಿಂಪಿಕ್ಸ್‌ ಜ್ಯೋತಿಯಾತ್ರೆ ಕಾರ್ಯಕ್ರಮದಲ್ಲಿ ಚಿರತೆಯೊಂದನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಒಲಿಂಪಿಕ್ಸ್ ಕ್ರೀಡಾಕೂಟದ ನಿಮಿತ್ತ ಬ್ರೆಜಿಲ್ ನ ಮನಾಸ್ ನಲ್ಲಿ ಒಲಿಂಪಿಕ್ಸ್ ಜ್ಯೋತಿ ಪ್ರದರ್ಶನ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮದ ಆಯೋಜಕರು ಮತ್ತು ಸಂಘಟಕರು ಕಾರ್ಯಕ್ರಮವನ್ನು ವಿಶೇಷಗೊಳಿಸುವ ನಿಟ್ಟಿನಲ್ಲಿ ಕ್ರೀಡಾಕೂಟದ ಲಾಂಛನವಾಗಿರುವ ಗಿಂಗಾ (ಚಿರತೆ)ವನ್ನು ಪ್ರದರ್ಶಿಸಲು ಜೀವಂತ ಚಿರತೆಯನ್ನು ತಂದಿದ್ದರು.

ಒಲಿಂಪಿಕ್ಸ್‌ ಜ್ಯೋತಿ ಬೆಳಗುವ ವೇಳೆ ಬೆಂಕಿ ಕಂಡು ಗಾಬರಿಗೊಂಡ ಚಿರತೆ ತಪ್ಪಿಸಿಕೊಂಡು ಅಲ್ಲೇ ಬಳಿಯಿದ್ದ ಸೈನಿಕನತ್ತ ನೆಗೆಯಿತು. ಆದ್ದರಿಂದ ಸೈನಿಕ ಚಿರತೆಯತ್ತ ಒಂದು ಗುಂಡು ಹಾರಿಸಿದ್ದಾನೆ. ಚಿರತೆ ಪ್ರಾಣ ಬಿಟ್ಟಿದೆ.

ಘಟನೆ ಬಳಿಕ ಕಾರ್ಯಕ್ರಮದ ಸಂಘಟಕರು ಹೇಳಿಕೆಯೊಂದನ್ನು ನೀಡಿದ್ದು, ಇನ್ನೆಂದೂ ನಮ್ಮಿಂದ ಇಂತಹ ತಪ್ಪು ಆಗುವುದಿಲ್ಲ. ನಾವು ಜೀವಂತ ಚಿರತೆಯನ್ನು ತಂದಿಟ್ಟುಕೊಳ್ಳಲು ಅನುಮತಿಯನ್ನೇ ನೀಡಬಾರದಿತ್ತು. ನಮ್ಮ ನಂಬಿಕೆ ಮತ್ತು ಮೌಲ್ಯಗಳು ಇಲ್ಲಿ ನಾಶವಾಗಿವೆ ಎಂದು ಕ್ಷಮೆಯಾಚಿಸಿದೆ.

„ಈ ಘಟನೆಗೆ ಪ್ರಾಣಿ ದಯಾ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಯಕ್ರಮದಲ್ಲಿ ಚಿರತೆಯನ್ನು ಇಟ್ಟುಕೊಳ್ಳಲು ನಮ್ಮ ಅನುಮತಿಯನ್ನುಪಡೆದಿರಲಿಲ್ಲ. ಚಿರತೆಯಂತಹ ಪ್ರಾಣಿಗಳನ್ನು ಅನಗತ್ಯವಾಗಿ ಹಿಂಸಿಸಲಾಗಿದೆ. ನಮ್ಮ ಶಕ್ತಿಯನ್ನು ತೋರಿಸಲು ಪ್ರಾಣಿಗಳನ್ನೇಕೆ ಸರಪಳಿಯಲ್ಲಿ ಬಿಗಿಯ ಬೇಕು ಎಂದು ಕಿಡಿಕಾರಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited