ಕಾಶ್ಮೀರ : ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ನನ್ನು ಬಂಧಿಸಿದ್ದಾರೆ.
ಇಲ್ಲಿನ ಸೋಗಮ್ ಪ್ರಾಂತ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಬು ಉಕಾಶ್ ಉರ್ಫ್ ಹಂಜುಲ್ಲಾ ಎಂಬಾತನನ್ನು ಬಿಎಸ್ಎಫ್ ಪಡೆ ಬಂಧಿಸಿ, ವಿಚಾರಣೆಗೊಳಪಡಿಸಿವೆ.
ಪಾಕಿಸ್ತಾನ ಮೂಲದ ಅಬು ಉಕಾಶ್ ಉತ್ತರ ಕಾಶ್ಮೀರ ಭಾಗದಲ್ಲಿ ಹಲವು ವರ್ಷಗಳಿಂದ ಸಂಘಟನೆಯನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಬು ಬಾಕರ್ ಎಂಬ ಮತ್ತೊಬ್ಬ ಉಗ್ರ ಇದೇ ಪ್ರದೇಶದಲ್ಲಿ ಅವಿತುಕೊಂಡಿದ್ದಾನೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಗಡಿ ಭದ್ರತಾ ಪಡೆ ಸೋಗಮ್ ಕಾಡಿನಲ್ಲಿ ಶೋಧಕಾರ್ಯ ಆರಂಭಿಸಿದೆ.