Untitled Document
Sign Up | Login    
Dynamic website and Portals
  
June 21, 2016

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಚಾಲನೆ

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಚಾಲನೆ

ಚಂಡೀಗಢ : 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಚಂಡೀಗಢದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಯೋಗ ದಿನದ ಮುಂದಾಳತ್ವವನ್ನು ಭಾರತವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಯೋಗ ಪರಲೋಕದ ವಿಜ್ಞಾನವಲ್ಲ ಇಹಲೋಕದ ಜ್ಞಾನ ಎಂದು ಅಭಿಪ್ರಾಯ ಪಟ್ಟ ಮೋದಿ, ಯೋಗಕ್ಕೆ ಬಡವ ಶ್ರೀಮಂತವೆಂಬ ಭೇದ-ಭಾವವಿಲ್ಲ. ಯೋಗವನ್ನು ಸಾಮಾನ್ಯರಲ್ಲಿ ಸಾಮಾನ್ಯರೂ ಕೂಡ ಮಾಡಬಹುದಾಗಿದೆ ಎಂದು ಹೇಳಿದರು.

ಈ ವಿಶಿಷ್ಠ ಯೋಗ ಕಾರ್ಯಕ್ರಮದಿಂದ ಇಡೀ ದೇಶದ ಜನತೆ ಒಂದಾಗಿದ್ದೇವೆ. ಸಕಲ ರೋಗಕ್ಕೂ ದಿವ್ಯ ಜೌಷಧವಾದ ಯೋಗವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯ ಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಯೋಗದಲ್ಲಿ ಸಾಧನೆ ಮಾಡಿದವರನ್ನು ಗುರಿತಿಸಿ ಗೌರವಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಲಾ ಒಬ್ಬರು ಯೋಗಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಅಧಿಕವಾಗುತ್ತದೆ. ಇವರು ಯೋಗಕ್ಕೆ ಮೊರೆ ಹೋದರೆ ಮಧುಮೇಹ ಗುಣಮುಖವಾಗಲಿದೆ ಎಂದು ತಿಳಿಸಿದರು. ನಂತರ 30ಸಾವಿರ ಜನರ ಸಮ್ಮುಖದಲ್ಲಿ ಸ್ವತಃ ಪ್ರಧಾನಿ ಮೋದಿಯವರು ಯೋಗ ಮಾಡಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Event

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ:  ಸ್ವಚ್ಚತಾ ಅಭಿಯಾನ
  • ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ: ಸ್ವಚ್ಚತಾ ಅಭಿಯಾನ
  • 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.
  • ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • 70ನೇ ಸ್ವಾತಂತ್ರ್ಯದಿನಾಚರಣೆ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited