Untitled Document
Sign Up | Login    
Dynamic website and Portals
  
June 20, 2016

ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಅವಮಾನ: ಓಂ ಚಿಹ್ನೆಯಿರುವ ಶೂಗಳ ಮಾರಾಟ

ಸಿಂಧ್ : ಪಾಕಿಸ್ತಾನದಲ್ಲಿ ಹಿಂದೂ ಧರ್ಮಿಯರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ. ಇಲ್ಲಿನ ಸಿಂದ್‌ ಪ್ರಾಂತ್ಯದಲ್ಲೀ ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆ ಇರುವ ಶೂ ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆಯಲ್ಲದೇ ಪಾಕಿಸ್ತಾನದಲ್ಲಿನ ಹಿಂದೂಗಳ ನೋವಿಗೂ ಕಾರಣವಾಗಿದೆ.

ಸಿಂಧ್‌ ಪ್ರಾಂತ್ಯದಲ್ಲಿನ ಚಪ್ಪಲಿ ಅಂಗಡಿಗಳಲ್ಲಿ 'ಓಂ' ಚಿಹ್ನೆ ಇರುವ ಶೂಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಹಿಂದೂಗಳು ತಮ್ಮ ಧರ್ಮ ನಿಂದನೆ ಮಾಡಲಾಗುತ್ತಿದೆ ಎಂದು ಹಿಂದೂ ಪರಿಷತ್‌ ಗಮನಕ್ಕೆ ತಂದಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಪರಿಷತ್‌ ಪ್ರಧಾನ ಪೋಷಕ ರಮೇಶ್‌ ಕುಮಾರ್‌, ಈದ್‌ ಉಲ್‌ ಅಝಾ ಸಂದರ್ಭದಲ್ಲಿ ಹಿಂದೂಗಳ ಪವಿತ್ರ ಓಂ ಧಾರ್ಮಿಕ ಚಿಹ್ನೆ ಇರುವ ಶೂಗಳನ್ನು ಸಿಂಧ್‌ ಪ್ರಾಂತ್ಯದ ತಾಂಡೋ ಆದಮ್‌ ಖಾನ್‌ ಪ್ರದೇಶದಲ್ಲಿನ ಪಾದರಕ್ಷೆ ಮಾರಾಟಗಾರರು ಮಾರುತ್ತಿರುವುದು ಅತ್ಯಂತ ದುರದೃಷ್ಟಕರ, ಈ ಮೂಲಕ ಹಿಂದೂ ಬಾಂಧವರನ್ನು ಅವಮಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕ್ ನಲ್ಲಿ ಇಸ್ಲಾಮ್‌ಗೆ ಸಂಬಂಧಿಸಿದಂತೆ ಧರ್ಮ ನಿಂದನೆಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅಲ್ಪಸಂಖ್ಯಾತ, ಅನ್ಯ ಧರ್ಮೀಯರಿಗೆ ಸಂಬಂಧಿಸಿದಂತೆ ಎಸಗಲಾಗುವ ಧರ್ಮನಿಂದನೆಗೆ ಯಾವ ಶಿಕ್ಷೆಯನ್ನೂ ನೀಡಲಾಗುತ್ತಿಲ್ಲ, ಬದಲಾಗಿ ಯಾವ ಕ್ರಮಗಳನ್ನೂ ಕೈಗೊಳ್ಳುವಲ್ಲಿ ಗಮನ ಹರಿಸುತ್ತಿಲ್ಲ ಎಂಬುದು ವಿಪರ್ಯಾಸ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited