ವಾಷಿಂಗ್ಟನ್ : ಎನ್ಎಸ್ಜಿ ಸದಸ್ಯತ್ವ ಪಡೆಯಲು ಭಾರತಕ್ಕೆ ಬೆಂಬಲ ನೀಡುವಂತೆ ಎನ್ಎಸ್ಜಿ ಸದಸ್ಯ ರಾಷ್ಟ್ರಗಳಿಗೆ ಅಮೆರಿಕ ಮನವಿ ಮಾಡಿದೆ.
ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ದೊರೆತರೆ ಭಾರತ-ಪಾಕಿಸ್ತಾನದ ನಡುವಿನ ಅಣ್ವಸ್ತ್ರ ಸಮತೋಲನಕ್ಕೆ ಧಕ್ಕೆಯಾಗಲಿದೆ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸೌಹಾರ್ದಯುವ ವಾತಾವರಣವನ್ನು ಕದಡಲಿದೆ ಎಂದು ಚೀನಾ ತಿಳಿಸಿತ್ತು. ಚೀನಾ ಹೇಳಿಕೆಯ ನಂತರ ಅಮೆರಿಕ ಭಾರತಕ್ಕೆ ಬೆಂಬಲ ನೀಡುವಂತೆ ಹೇಳುವ ಮೂಲಕ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಎನ್ಎಸ್ಜಿ ಸದಸ್ಯತ್ವಕ್ಕಾಗಿ ಭಾರತ ಸಲ್ಲಿಸಿರುವ ಅರ್ಜಿಯನ್ನು ಬೆಂಬಲಿಸುವಂತೆ ಅಮೆರಿಕ ಮನವಿ ಮಾಡಿದ್ದು, ಭಾರತ ಎನ್ಎಸ್ಜಿ ಸೇರ್ಪಡೆಯಾಗಲು ಅಮೆರಿಕ ಸದಾ ಬೆಂಬಲಿಸುತ್ತದೆ ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ನ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.