ವಿಯೆನ್ನಾ : ಎನ್ಎಸ್ಜಿ ಸದಸ್ಯತ್ವಕ್ಕೆ ಭಾರತ ಸಲ್ಲಿಸಿರುವ ಅರ್ಜಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಯೆನ್ನಾದಲ್ಲಿ ನಡೆದ ಸಭೆ ವಿಫಲವಾಗಿದೆ.
ಜೂನ್ 20ರಂದು ಸಿಯೋಲ್ನಲ್ಲಿ ನಡೆಯಲಿರುವ 48 ರಾಷ್ಟ್ರಗಳ ಪರಮಾಣು ಕ್ಲಬ್ ಸಭೆ ಭಾರತದ ಅರ್ಜಿಯನ್ನು ಪರಿಶೀಲನೆಗೆ ಎತ್ತಿಕೊಳ್ಳುವ ನಿರೀಕ್ಷೆ ಇದೆ.
ಪರಮಾಣು ಪೂರೈಕೆದಾರರ ಒಕ್ಕೂಟ ಸದಸ್ಯತ್ವಕ್ಕೆ ಭಾರತ ಸೇರ್ಪಡೆಗೆ ಅಮೆರಿಕ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಹಲವಾರು ವಿರೋಧಿ ರಾಷ್ಟ್ರಗಳು ರಾಜಿ ಯತ್ನಕ್ಕೆ ಒಲವು ವ್ಯಕ್ತಪಡಿಸಿದ್ದವು. 48 ದೇಶಗಳ ಸದಸ್ಯತ್ವ ಹೊಂದಿರುವ ಎನ್ಎಸ್ಜಿ ಒಕ್ಕೂಟ್ಟಕ್ಕೆ ಭಾರತವನ್ನು ಸೇರ್ಪಡೆ ಗೊಳಿಸಲು ಆರು ದೇಶಗಳು ವಿರೋಧ ವ್ಯಕ್ತಪಡಿಸುತ್ತಿದ್ದವು. ಈ ಪೈಕಿ ಚೀನಾ ಮತ್ತು ಪಾಕಿಸ್ತಾನ ದೇಶಗಳು ಮುಂಚೂಣಿಯಲ್ಲಿದ್ದವು. ನ್ಯೂಜಿಲೆಂಡ್, ಐರ್ಲೆಂಡ್, ಟರ್ಕಿ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರಿಯಾ ಕೂಡ ವಿರೋಧಿಸುತ್ತಿದ್ದವು. ಆದರೆ ಈಗ ಕ್ರಮೇಣ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಟರ್ಕಿ ತಮ್ಮ ನಿಲುವನ್ನು ಸಡಿಲಿಸಿದ್ದು, ಭಾರತದ ಸಂಧಾನದ ಫಲವಾಗಿ ಈ ದೇಶಗಳು ತಮ್ಮ ನಿಲುವು ಬದಲಿಸಿವೆ ಎಂದು ಹೇಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಭಾರತಕ್ಕೆ ಎನ್ಎಸ್ಜಿಗೆ ಸೇರ್ಪಡೆ ಸಾಧ್ಯತೆಯನ್ನು ಹೆಚ್ಚಿಸಿದೆ. ಜೂನ್ 24ರಂದು ಸಿಯೋಲ್ ನಲ್ಲಿ ಎನ್ ಎಸ್ ಜಿ ಸಮಗ್ರ ಸದಸ್ಯರ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.